ಪ್ರಚಲಿತ

ವಿಜ್ಞಾನಿಗಳಿಗೂ ಸವಾಲಾಗಿದೆ ಚಿದಂಬರಂ ದೇವಾಲಯ… ಈ ನಟರಾಜನ ವಿಗ್ರಹದಲ್ಲಿದೆ ಜಗತ್ತಿನ ಸೃಷ್ಟಿಯ ರಹಸ್ಯ!

ಭಾರತದಲ್ಲಿರುವ ಅದೆಷ್ಟೋ ದೇವಾಲಯಗಳ ರಹಸ್ಯಕ್ಕೆ ವಿಜ್ಞಾನಿಗಳ ತಲೆಕೆಡಿಸಿದೆ. ಇಲ್ಲಿರುವ ಪ್ರತೀ ದೇವಾಲಯದ ಹಿಂದೆಯೂ ರಹಸ್ಯ ಅಡಗಿರುವುದಂತೂ ಸತ್ಯ… ಶಿವನ ಐದು ಪ್ರಸಿದ್ಧ ಕ್ಷೇತ್ರಗಳಲ್ಲಿ ಚಿದಂಬರಂ ದೇವಾಲಯವೂ ಒಂದು. ಇಲ್ಲಿರುವ ನಟರಾಜ ವಿಗ್ರಹವು ಪ್ರಪಂಚದಲ್ಲೇ ಪ್ರಖ್ಯಾತಿಯನ್ನು ಹೊಂದಿದೆ. ಅಮೆರಿಕಾದ ಖಗೊಳ ವಿಜ್ಞಾನಿ ಕಾಲ್ಸ್ ಸಗಾನ್ ನಿರೂಪಣೆ ಮಾಡಿದ ಕಾಸ್ಮೋಸ್ ಅನ್ನೋ ಸೈನ್ಸ್ ಸೀರಿಯಲ್‍ನಲ್ಲಿ ಈ ದೇವಾಲಯದ ಬಗ್ಗೆ ಉಲ್ಲೇಖವಿದೆ. ಅಲ್ಲದೆ ಇದು ವಿಶ್ವದ ಅಯಸ್ಕಾಂತೀಯ ಕ್ಷೇತ್ರವೂ ಹೌದು.. ಅಲ್ಲದೆ ಈ ನಟರಾಜ ಮೂರ್ತಿಯ ಮೂಲಕ ಸೃಷ್ಟಿಯ ಮೂಲಗಳನ್ನು ನಮ್ಮ ಪೂರ್ವಜರು ಜಗತ್ತಿಗೆ ಹೇಳಿದ್ದಾರೆ ಎನ್ನುವ ಮಾಹಿತಿಯ ಮೂಲಕ ಅಮೆರಿಕಾದ ವಿಜ್ಞಾನಿ ಸಂಶೋಧನೆಯನ್ನು ಮುಂದುವರಿಸಿದ್ದಾರೆ. ಜೆನಿವಾದ ಸೆಂಟರ್ ಫರ್ ಪೋರ್ಟಿಕಲ್ ಫಿಸಿಕ್ಸ್ ಸಂಸ್ಥೆ ಭಾರತದಿಂದ ಎರಡು ನಟರಾಜ ವಿಗ್ರಹಗಳನ್ನು ತೆಗೆದುಕೊಂಡು ಹೋಗಿದೆ. ನಂತರ ಆಟಮ್ ಹಾಗೂ ಮಾಲಿಕ್ಯುಲ್ಸ್ ಬಗ್ಗೆ ಸಂಶೋಧನೆಯನ್ನು ನಡೆಸಲಿದೆ.

ಅವರ ಪ್ರಕಾರ ಆಟಮ್ ಎನರ್ಜಿಯ ಸೂಕ್ಷ್ಮ ಕಣಗಳು ನಟರಾಜನ ವಿಗ್ರಹದ ಭಂಗಿಯಲ್ಲಿರುತ್ತವಂತೆ. ಹಾಗಾಗಿ ನಟರಾಜನ ವಿಗ್ರಹ ಕೇವಲ ಶಿವನ ನಟನೆಯ ಭಂಗಿ ಮಾತ್ರವಲ್ಲ ಬದಲಾಗಿ ಅದ್ಭುತ ವಿಜ್ಞಾನದ ರಹಸ್ಯವೂ ಅಡಗಿದೆ. 1972ರಲ್ಲಿ ಫ್ರಿಟ್ಜ್‍ಆಫ್ ಕಾಪ್ರಾ ಎಂಬ ವಿಜ್ಞಾನಿ ಸಂಶೋಧನ ಗ್ರಂಥದಲ್ಲಿ ದಾಖಲಿಸಿರುವುದೇನೆಂದರೆ ಆಟಮ್ ಸುತ್ತ ತಿರುಗುವ ಎಲೆಕ್ಟ್ರಾನ್ ಪ್ರೋಟಾನ್ ಬಿಡುಗಡೆ ಮಾಡುವ ಶಕ್ತಿಯನ್ನು ಪ್ರಿಟ್ಜ್‍ಆಫ್ ಕಾಪ್ರಾ ನಟರಾಜನ ವಿಗ್ರಹದ ತಾಂಡವ ಭಂಗಿ ಇದೆಯಲ್ಲಾ ಅದರ ಜೊತೆ ಹೋಲಿಕೆ ಮಾಡುತ್ತಾನೆ. ಅದನ್ನು ದಿ ಟ್ಯಾಗೋ ಆಫ್ ಫಿಸಿಕ್ಸ್ ಪುಸ್ತಕದಲ್ಲಿ ದಾಖಲಿಸುತ್ತಾನೆ. ಈ ಎಲ್ಲಾ ರಹಸ್ಯ ಅಡಗಿರುವುದು ಬಿದಂಬರಂ ದೇವಾಲಯದಲ್ಲಿ… ಚಿದ್ ಎಂದರೆ ಚೈತನ್ಯ ಅಂಬರ ಎಂದರೆ ಆಕಾಶ ಎಂಬ ಅರ್ಥ ಬರುತ್ತದೆ. ಅರಿವಿನ ಆಕಾಶ ಎಂದು ಎನ್ನಬಹುದು… ಈ ದೇವಾಲಯದಲ್ಲಿ ತನ್ನ ಹೆಜ್ಚೆ ಹೆಜ್ಚೆಗೂ ಅಚ್ಚರಿಯನ್ನು ಸೃಷ್ಟಿ ಮಾಡುವಂತಹ ರಹಸ್ಯ ಇದರಲ್ಲಿ ಅಡಗಿಕೊಂಡಿದೆ. ಈ ಮಂದಿರದ ವಾಸ್ತುಕಲೆಯೂ ಬಹಳ ವಿಚಿತ್ರವಾಗಿದೆ. ಮಂದಿರದಲ್ಲಿ 64 ಕಲಾ ಪ್ರಕಾರಗಳನ್ನು ಪ್ರತಿನಿಧಿಸುವ ಕಿರಣಗಳು, ಮನುಷ್ಯನ ಹೃದಯದ ಬಡಿತ, ನಾಡಿ (72)ಗಳು ಮತ್ತು ಒಂದು ದಿನದಲ್ಲಿ ಮಾನವ ತೆಗೆದುಗೊಳ್ಳುವ ಶ್ವಾಸ (21,600) ದ ಲೆಕ್ಕಗಳನ್ನು ಪ್ರತಿನಿಧಿಸುವಂತೆ ಗೋಪುರಕ್ಕೆ ಮೊಳೆಗಳನ್ನು ಹೊಡೆಯಲಾಗಿದೆ. ನವ ಶಕ್ತಿಗಳನ್ನು ಪ್ರತಿನಿಧಿಸಲು ಗೋಪುರದ ಮೇಲೆ ಒಂಭತ್ತು ಕಲಶಗಳನ್ನು ಇಡಲಾಗಿದೆ.

ಪ್ರತಿ ಹಂಚಿನ ಮೇಲೂ ಶಿವಾಯ ನಮಃ ಎಂದು ಬರೆಯಲಾಗಿದೆ. ಇವೆಲ್ಲವನ್ನೂ ಸೂಕ್ಷವಾಗಿ ಅವಲೋಕಿಸಿದಾಗ ಈ ಮಂದಿರಕ್ಕೂ ಮನುಷ್ಯನ ಶರೀರಕ್ಕೂ ಭೂಮಿ ಮತ್ತು ಆಕಾಶಗಳ ಶಕ್ತಿಗೂ ಯಾವುದೋ ಸಂಬಂಧ ಇದೆ ಎಂದು ಅನಿಸುವುದು. ಗರ್ಭಗುಡಿಯ 28 ಕಂಬಗಳೂ 28 ಆಗಮ ಶಾಸ್ತ್ರದ ಪ್ರತೀಕ… ಮೇಲ್ಚಾವಣಿಗೆ 64*64 ಕಂಬಗಳು ಆಧಾರವಾಗಿದೆ. ಇದು ವಿಶ್ವದ 64 ವಿದ್ಯೆಗಳನ್ನು ಪ್ರತಿನಿಧಿಸುತ್ತದೆ. ಇಲ್ಲಿ ನಟರಾಜ ನೃತ್ಯ ಮಾಡುತ್ತಿದ್ದ ಎಂದು ಹೇಳುತ್ತಿದ್ದ ವೇದಿಕೆಗೆ 5 ಮೆಟ್ಟಿಗಳಿದ್ದು ಮಂಚಭೂತಗಳನ್ನು ಸಂಕೇತಿಸುವುದಲ್ಲದೆ ಮನುಷ್ಯನ ಪಂಚೇಂದ್ರಿಯಗಳನ್ನೂ ಹೇಳುತ್ತವೆ. ಹಿಂದಿನ ಕಾಲದ ಜನರು ದೇವತೆಗಳ ಪವಾಡಗಳಲ್ಲಿ ಹೆಚ್ಚು ನಂಬಿಕೆ ಇಟ್ಟಿದ್ದರಿಂದ ಇಂತಹ ಅತಿ ಮಹತ್ವದ ಜಾಗಗಳಲ್ಲಿ ಮಂದಿರಗಳನ್ನು ಕಟ್ಟಿದ್ದಿರಬಹುದು. ಪುರಾಣಗಳಲ್ಲಿ ವಿಷ್ಣುವಿನ ನಾಭಿಯನ್ನು ನಮ್ಮ ಆಕಾಶಗಂಗೆಯ ಕೇಂದ್ರ ಬಿಂದು ಎನ್ನಲಾಗಿದೆ. ಬ್ರಹ್ಮನು ವಿಷ್ಣು ನಾಭಿಯಿಂದ ಜನಿಸಿ ಪ್ರಪಂಚದಲ್ಲಿ ಸೃಷ್ಟಿ ಕಾರ್ಯವನ್ನು ನೆರವೇರಿಸಿದನು ಎಂದು ಪುರಾಣಗಳು ಉಲ್ಲೇಖಿಸುತ್ತವೆ. ಕೈಲಾಸ ಪರ್ವತ ಭೂಮಿಯ “ಅಕ್ಷ ಮುಂಡಿಯ” ಮೇಲಿದೆ ಮತ್ತು ಇಲ್ಲಿ ಶಿವನ ವಾಸವಿದೆ ಎಂದು ಇಂದಿಗೂ ನಂಬಲಾಗಿದೆ. ಈ ಎಲ್ಲಾ ನಂಬಿಕೆಗಳ ಹಿಂದೆ ವೈಜ್ಞಾನಿಕವಾದ ಕಾರಣಗಳು ಇದ್ದೆ ಇವೆ. ಚಿಂದಬರಂ ಮಂದಿರವನ್ನು ಆಕಾಶ ತತ್ವವನ್ನು ಪ್ರತಿನಿಧಿಸುತ್ತಾ ವಿದ್ಯುತ್ಕಾಂತೀಯ ಕೇಂದ್ರ ಬಿಂದುವಿನಲ್ಲಿ ನಿರ್ಮಿಸಿರುವುದರ ಹಿಂದೆ ಯಾವುದೋ ಬಲವಾದ ಕಾರಣ ಇರಬಹುದು. ವಿಜ್ಞಾನವನ್ನು ದೇವಾಲಯಗಳ ಮೂಲಕ ನಮ್ಮ ಪೂರ್ವಜರು ಜನರಿಗೆ ಸಲಭವಾಗಿ ಅರ್ಥವಾಗುವ ರೂಪದಲ್ಲಿ ವಿವರಿಸಿದ್ದಾರೆ.

source: yotube media master

-ಪವಿತ್ರ

Tags

Related Articles

FOR DAILY ALERTS
Close