ಪ್ರಚಲಿತ

ವಿದೇಶಿ ವಿಮಾನವೊಂದು ಭಾರತಕ್ಕೆ ಬಂದು ನೂರಾರು ಎ.ಕೆ 47 ಮತ್ತು ಲಕ್ಷಾಂತರ ಬುಲೆಟ್‍ಗಳನ್ನು ಧರೆಗುರುಳಿಸಿ ಹೋಗಿದ್ದೇಕೆ?

1995 ರ ಡಿಸೆಂಬರ್ 17 ರ ರಾತ್ರಿಯಂದು ಪಶ್ಚಿಮ ಬಂಗಾಳದಲ್ಲಿ ವಿದೇಶಿ ವಿಮಾನದಿಂದ ಅನಧಿಕೃತ ಶಸ್ತ್ರಾಸ್ತ್ರಗಳನ್ನು ಇಳಿಸಲಾಗಿತ್ತು!! ಈ ಸಂದರ್ಭದಲ್ಲಿ ನೂರು ಎಕೆ-47, ಹೆಚ್ಚಿನ ಸಂಖ್ಯೆಯ ಇತರ ಬಂದೂಕುಗಳು ಮತ್ತು ಒಂದು ದಶಲಕ್ಷದಷ್ಟು ಗುಂಡುಗಳನ್ನು ಭಾರತದ ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯ ಆಂಟೋನೊವ್ ಆನ್-26 ವಿಮಾನದಿಂದ ಧರೆಗೆಸೆಯಲಾಯಿತು!! ಲಾಟ್ವಿಯನ್ ಆಂಟೊನೊವ್ ಆನ್ -26 ವಿಮಾನವು ಭಾರಿ ಸಂಗ್ರಹದ ಶಸ್ತ್ರಾಸ್ತ್ರವನ್ನು 1995 ರ ಡಿಸೆಂಬರ್ 17 ರ ರಾತ್ರಿ ಜುಲ್ಡಾ, ಘತಂಗ, ಬೇಲಾಮು, ಮಾರಮು ಗ್ರಾಮಗಳ ದೊಡ್ಡ ಪ್ರದೇಶದ ಮೇಲೆ ಶಸ್ತ್ರಾಸ್ತ್ರಗಳನ್ನು ಧರೆಗೆಸೆಯಲಾಯಿತು!! ಇದಾದ, ಕೆಲವು ದಿನಗಳ ನಂತರ ವಿಮಾನವು ಭಾರತೀಯ ವಾಯುಪ್ರದೇಶವನ್ನು ಪುನಃ ಪ್ರವೇಶಿಸಿದ್ದು, ಈ ಸಮಯದಲ್ಲಿ, ಇದನ್ನು ಭಾರತೀಯ ಏರ್ ಫೆÇೀರ್ಸ್ ಮಿಗ್ -21 ತಡೆಹಿಡಿದು, ಬಲವಂತವಾಗಿ ಕೆಳಗಿಳಿಸಿತು!!

ಈ ಸಂದರ್ಭದಲ್ಲಿ ವಿಮಾನದ ಸಿಬ್ಬಂದಿಗಳಾಗಿದ್ದ ಐದು ಮಂದಿ ಲ್ಯಾಟ್ವಿಯನ್ ಪ್ರಜೆಗಳನ್ನು, ಬ್ರಿಟಿಷ್ ಪ್ರಜೆ ಮತ್ತು ಮಾಜಿ ವಿಶೇಷ ವಾಯು ಸೇವಾ ಕಾರ್ಯಕರ್ತರಾಗಿದ್ದ ಪೀಟರ್ ಬ್ಲೀಚ್ ಶಸ್ತ್ರಾಸ್ತ್ರ ವ್ಯವಹಾರದಲ್ಲಿ ತೊಡಗಿದ್ದು, ಭಾರತೀಯ ಏರ್ ಫೆÇೀರ್ಸ್ ಮಿಗ್ -21 ಈ ವಿಮಾನವನ್ನು ಪ್ರತಿಬಂಧಿಸಿದ್ದಲ್ಲದೇ, ಎರಡನೇ ಬಾರಿಗೆ ಬಲವಂತವಾಗಿ ಇಳಿಸಿ, ವಿಮಾನದಲ್ಲಿದ್ದ ಎಲ್ಲ ಸಿಬ್ಬಂದಿಗಳನ್ನು ಬಂಧಿಸಲಾಯಿತು. ಆದರೆ ಇದರಲ್ಲಿದ್ದ ಮುಖ್ಯ ಆರೋಪಿಯಾಗಿದ್ದ ಡ್ಯಾನಿಷ್ ನಾಗರಿಕ ನೀಲ್ಸ್ ಹೋಲ್ಕ್ ಅಲಿಯಾಸ್ ಕಿಮ್ ಡೇವಿ ತಪ್ಪಿಸಿಕೊಂಡ!!

ಮುಖ್ಯ ಆರೋಪಿಯಾಗಿದ್ದ ಕಿಮ್ ಡೇವಿ, ತಪ್ಪಿಸಿಕೊಂಡು ಡೆನ್ಮಾರ್ಕ್ ಸೇರಿದ್ದು, ಪಶ್ಚಿಮ ಬಂಗಾಳದಲ್ಲಿ ಕಮ್ಯುನಿಸ್ಟ್ ಸರಕಾರವನ್ನು ಉರುಳಿಸಲು ರೋ (ಭಾರತದ ಗುಪ್ತಚರ ಘಟಕ) ಮತ್ತು ಮಿ5 (ಬ್ರಿಟಿಷ್ ಗುಪ್ತಚರ ಘಟಕ) ಜೊತೆಯಲ್ಲಿದ್ದ ಭಾರತೀಯ ಕಾಂಗ್ರೆಸ್ ಸರ್ಕಾರದ ಪಿತೂರಿಯಾಗಿದೆ ಎಂದು ಹೇಳಿದ್ದರು!! ಡೇವಿಯ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ ಕಮ್ಯುನಿಸ್ಟ್ ಸರಕಾರಕ್ಕೆ ವಿರುದ್ಧವಾದ ಜನರು ರೆಡ್ ರೇಜಿಂನ್ನು ಹೊಡೆದುರುಳಿಸಲು ಅವರಿಗೆ ಗನ್ ಮತ್ತು ಇತರ ಸಾಮಗ್ರಿಗಳನ್ನು ನೀಡಬೇಕಾಗಿತ್ತು. ಈ ಸಂದರ್ಭದಲ್ಲಿ ಡೇವಿ ಅವರು ತಮ್ಮ ಸುರಕ್ಷತೆಯ ಬಗ್ಗೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದಾಗ, ಶಸ್ತ್ರಾಸ್ತ್ರಗಳನ್ನು ಯಶಸ್ವಿಯಾಗಿ ಧರೆಗಿಳಿಸಿದ ನಂತರ ಡೆನ್ಮಾರ್ಕ್‍ಗೆ ಹಿಂದಿರುಗುವವರೆಗೆ ಕೇಂದ್ರ ಸರಕಾರವೇ ಸುರಕ್ಷತೆ ನೀಡುವಲ್ಲಿ ಭರವಸೆ ನೀಡಿತ್ತು!! ಇದನ್ನು ಭಾರತದ ಪ್ರಧಾನಿ ಪಿ. ವಿ. ನರಸಿಂಹ ರಾವ್ ಅವರ ಸಹಯೋಗದೊಂದಿಗೆ ಎಂ.ಪಿ ಪಪ್ಪು ಯಾದವ್ ಅವರು ಭಾರತದಿಂದ ಸುರಕ್ಷಿತವಾಗಿ ಡೆನ್ಮಾರ್ಕ್‍ಗೆ ಕಳುಹಿಸುತ್ತೇವೆ ಎಂದು ಹೇಳಿರುವ ಬಗ್ಗೆ ಡೇವಿ ಹೇಳಿದ್ದಾರೆ.
ಆದರೆ, ಸ್ವತಂತ್ರವಾಗಿ ನಡೆಸಿದ ತನಿಖೆಗಳನ್ನು ಪತ್ರಕರ್ತರು ಬಿಡುಗಡೆ ಮಾಡಿದ್ದು, ಆನಂದ ಮಾರ್ಗ ಎಂಬ ಧಾರ್ಮಿಕ ಸಂಘಟನೆಯು ಶಸ್ತ್ರಾಸ್ತ್ರಗಳನ್ನು ಉದ್ದೇಶಿತವಾಗಿಯೇ ಸ್ವೀಕರಿಸಿರುವ ಬಗ್ಗೆ ಬಹಿರಂಗಪಡಿಸಿತ್ತು. ಆದರೆ ಅಕ್ರಮವಾಗಿ ಇಂತಹ ದೊಡ್ಡ ಶಸ್ತ್ರಾಸ್ತ್ರಗಳನ್ನು ಸ್ವಾಧೀನಪಡಿಸಿಕೊಳ್ಳುವ ಸಂಘಟನೆಯ ಉದ್ದೇಶವನ್ನು ಮಾತ್ರ ಇಲ್ಲಿಯವರೆಗೂ ತಿಳಿದುಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ಈ ಬಗ್ಗೆ 1997 ರಲ್ಲಿ, ನ್ಯಾಯಾಲಯವು ತೀರ್ಪು ನೀಡಿದ್ದು, ಅದು ನಿಜಕ್ಕೂ ಕೈದಿಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ನ್ಯಾಯಲಯವು ಈ ತೀರ್ಪನ್ನು ಆನಂದಾ ಮಾರ್ಗದ ಪ್ರಧಾನ ಕಾರ್ಯಾಲಯದ ಛಾಯಾಚಿತ್ರ, ನಕ್ಷೆ, ಹಾಗೂ ಇತರ ಸಣ್ಣಪುಟ್ಟ ಸಾಕ್ಷ್ಯಾಧಾರಗಳ ಮೇಲೆ ತೀರ್ಪು ನೀಡಿತ್ತು!!ಆದಾಗ್ಯೂ, ಇಂತಹ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಸ್ವಾಧೀನಪಡಿಸಿಕೊಳ್ಳುವ ಧಾರ್ಮಿಕ ಸಂಘಟನೆಯ ಉದ್ದೇಶ ಮಾತ್ರ ಇನ್ನೂ ರಹಸ್ಯವಾಗಿ ಮುಚ್ಚಿಹೋಗಿದೆ, ಇನ್ನು ಇದರ ಮುಖ್ಯ ಕಿಂಗ್ ಪಿನ್ ಇರುವುದು ಮಾತ್ರ ಡೆನ್ಮಾರ್ಕ್‍ನಲ್ಲಿ, ಎನ್ನುವುದು ವಿಪರ್ಯಾಸ!!

ಈ ಬಗ್ಗೆ ನಿನ್ನೆ, ವೈಬ್ರಾಂತ್ ಗುಜರಾತ್ ಶೃಂಗಸಭೆಯಲ್ಲಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವೈಯಕ್ತಿಕವಾಗಿ ಡ್ಯಾನಿಷ್ ಸಚಿವ ಲಾರ್ಸ್ ಕ್ರಿಸ್ಚಿಯನ್ ಲಿಲ್ಹೋಲ್ಟ್ರನ್ನು ಕಿಮ್ ಡೇವಿ ಅವರನ್ನು ವಶಕ್ಕೆ ತೆಗೆದುಕೊಂಡು ಈ ವಿಚಾರದ ಬಗ್ಗೆ ತ್ವರಿತಗೊಳಿಸಬೇಕೆಂದು ಮತ್ತು ಇದರಿಂದಾಗಿ ಪುರುಲಿಯಾ ಆರ್ಮ್ಸ್ ಡ್ರಾಪ್ ಕೇಸ್ ಬಗ್ಗೆ ಇರುವ ನಿಗೂಢತೆಯನ್ನು ಅಂತಿಮಗೊಳಿಸುವುದಾಗಿ ಕೇಳಿದರು!!

ವಿಪರ್ಯಾಸ ಎಂದರೆ, ಈ ಹಿಂದೆ ಇದರ ವಿಚಾರಣೆ ನಡೆಸಿದಾಗ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಆಳ್ವಿಕೆಯಲ್ಲಿದ್ದು, ಆ ಸಂದರ್ಭದಲ್ಲಿ ಡೆನ್ಮಾರ್ಕ್ನಿಂದ ಆತನನ್ನು ರವಾನಿಸಿದ್ದಲ್ಲದೇ, ಈ ವಿಚಾರವನ್ನೇ ಸಂಪೂರ್ಣವಾಗಿ ನಿರ್ಲಕ್ಷಿಸಿರುವುದನ್ನು ಕಂಡರೇ ಇದರ ಹಿಂದಿರುವ ಕಾರಣಗಳನ್ನು ಮಾತ್ರ ಚೆನ್ನಾಗಿ ಊಹಿಸಬಹುದಾಗಿದೆ!!

source:

– ಅಲೋಖಾ

Tags

Related Articles

Close