ಪ್ರಚಲಿತ

ವಿಧಾನಸೌಧದಲ್ಲಿ ಕೆತ್ತಿರುವ ‘ಸರಕಾರೀ ಕೆಲಸ ದೇವರ ಕೆಲಸ’ ಎಂಬ ಘೋಷವಾಕ್ಯಕ್ಕೆ ಪ್ರೇರಣೆ ಒಬ್ಬ ಜೈಲು ಕೈದಿ ಎಂದರೆ ನಂಬುತ್ತೀರಾ?!

ಕರ್ನಾಟಕದಲ್ಲೀಗ ವಿಧಾನಸೌಧದ ವಜ್ರಮಹೋತ್ಸವದ ಸಡಗರ!! ಪ್ರತಿಯೊಬ್ಬ ಕನ್ನಡಿಗನ ಹೆಮ್ಮೆಯಾದ ವಿಧಾನಸೌಧಕ್ಕೆ ಜೀವ ತುಂಬಿದ್ದವರು ಕರ್ನಾಟಕ ಕಂಡ ಅದ್ಭುತ ರಾಜಕಾರಣಿ ಕೆಂಗಲ್ ಹನುಮಂತಯ್ಯ! ಆ ವ್ಯಕ್ತಿತ್ವ ಅನುಸರಿಸಿದಂತಹ ಆದರ್ಶ ಹಾಗೂ ಸಿದ್ಧಾಂತಗಳಿದೆಯಲ್ಲವಾ?! ಬಹುಷಃ ಸ್ವಾತಂತ್ರ್ಯಾಪೂರ್ವದ ಕರ್ನಾಟಕದ ತಳಹದಿಯನ್ನು ಭಧ್ರಗೊಳಿಸುವಲ್ಲಿ ಯಶಸ್ವಿಯಾಗಿದೆ!

ವಿಧಾನಸೌಧವೆಂಬ ಅದ್ಭುತ!

ಅವತ್ತು ಕರ್ನಾಟಕಕ್ಕೊಂದು ಅವಶ್ಯಕತೆ ಇತ್ತು! ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲೇ ಬೇಕಾದ ಅನಿವಾರ್ಯತೆಯೂ ಇತ್ತು! ಸ್ವಾತಂತ್ರ್ಯ ಸಿಕ್ಕು ಮೂರು ವರುಷಗಳ ನಂತರ, ಕರ್ನಾಟಕದ ಎರಡನೇ ಮುಖ್ಯ ಮಂತ್ರಿಯಾದ ಕೆಂಗಲ್ ಹನುಮಂತಯ್ಯ ಶಾಶ್ವತವಾಗಿ ರಾಜಕಾರಣಿಗಳಿಗೊಂದು ನ್ಯಾಯಯುತವಾದ ಹಾದಿ ನಿರ್ಮಿಸಬೇಕೆಂದು ಹೊರಟಿದ್ದು, ವಿಧಾನಸೌಧದಂತಹ ಅದ್ಭುತವನ್ನು ನಿರ್ಮಿಸಲು ಪ್ರೇರೇಪಿಸಿತ್ತು!

ರಶ್ಯಾ, ಅಮೇರಿಕಾ, ಯುರೋಪ್ ರಾಷ್ಟ್ರಗಳ ಸೌಧಗಳನ್ನು, ಅಧ್ಯಕ್ಷೀಯ ಭವನಗಳನ್ನು ಅಧ್ಯಯನ ಮಾಡಿದ ನಂತರ ವಿಧಾನ ಸೌಧದ ಕನಸು ಜೀವ ಪಡೆದುಕೊಳ್ಳತೊಡಗಿತು! ಅಂದಿನ ಭಾರತದ ಪ್ರಧಾನ ಮಂತ್ರಿಯಾಗಿದ್ದ ಜವಾಹರಲಾಲ್ ನೆಹರೂ, 1951 ಜುಲೈ 13 ರಂದು ಅಡಿಗಲ್ಲಿನ ಸಮಾರೋಪವನ್ನು ಮಾಡಿದರಷ್ಟೇ! ಕೊನೆಗೆ ನಡೆದದ್ದು ಕೆಂಗಲ್ ಹನುಮಂತಯ್ಯನವರ ಕನಸಿನ ಇತಿಹಾಸ!

ಬೆಂಗಳೂರಿನ ಸೆಂಟ್ರಲ್ ಜೈಲಿನ ಕೈದಿಗಳ ಬೆವರು ವಿಧಾನಸೌಧ!

ಅನೇಕರಿಗೆ ಇದು ಗೊತ್ತಿರಲಿಕ್ಕಿಲ್ಲ! ಅಂದು ಸುಮಾರು 5000 ಕ್ಕೂ ಹೆಚ್ಚು ಕೈದಿಗಳು ವಿಧಾನಸೌಧದ ಪ್ರತಿ ಇಟ್ಟಿಗೆಗಳ ಮೇಲೂ ತಮ್ಮ ಹೆಸರನ್ನು ಅಚ್ಚೊತ್ತಿ ಬಿಟ್ಟಿದ್ದಾರೆ! ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿದ್ದ ಕೈದಿಗಳಿಗೇ ತರಬೇತಿ ನೀಡಿ, ದುಡಿದಷ್ಟಕ್ಕೆ ಸಂಬಳವನ್ನೂ ನೀಡಿದ ಕೆಂಗಾಲ್ ಹನುಮಂತಯ್ಯ ರವರ ಆಲೋಚನೆಯ ವಿಧಾನವೇ ಅದ್ಭುತ ಬಿಡಿ! ಹನುಮಂತಯ್ಯನವರ ಆದೇಶದಂತೆ ಸುಮಾರು 5000 ಕ್ಕೂ ಹೆಚ್ಚು ಕೈದಿಗಳು ಸತತ ಆರು ವರ್ಷಗಳ ಕಾಲ ದುಡಿದು ವಿಧಾನಸೌಧವನ್ನು ನಿರ್ಮಿಸಿದ್ದಲ್ಲದೇ, ಕೊನೆಗೆ ಅವರನ್ನೆಲ್ಲ ಬಿಡುಗಡೆಗೊಳಿಸಲಾಗಿತ್ತು. ಆ ಐದಾರು ವರ್ಷಗಳಲ್ಲಿ, ಕೈದಿಯಾಗಿದ್ದರೂ ಸರಕಾರೀ ಕೆಲಸವನ್ನು ನಿಷ್ಟೆಯಿಂದ ಮಾಡಿದ ಅವರಿಗಿದ್ದಷ್ಟು ನಿಯತ್ತು ನಿಷ್ಠೆ ಇವತ್ತಿಲ್ಲವಾದರೂ, ಇರಲಿ! ವಿಧಾನಸೌಧ ಇವತ್ತಿಗೂ ತನ್ನ ಘನತೆಯನ್ನು ಉಳಿಸಿಕೊಂಡಿದೆಯಾ ಎಂಬ ಪ್ರಶ್ನೆಗೆ ಉತ್ತರವಿಲ್ಲವಷ್ಟೇ!

ಸರಕಾರೀ ಕೆಲಸ ದೇವರ ಕೆಲಸ!

ವಿಧಾನಸೌಧದ ಪ್ರವೇಶ ದ್ವಾರದ ಮೇಲೆ ಬರೆದಿರುವ ‘ಸರಕಾರೀ ಕೆಲಸ ದೇವರ ಕೆಲಸ’ ಎಂಬ ಬರಹ ಸುಖಾಸುಮ್ಮನೇ ಬರೆಸಿದ್ದಲ್ಲ! ಆ ಬರಹಕ್ಕೆ ಕೆಂಗಾಲ್ ರವರಿಗೆ ಸ್ಫೂರ್ತಿ ನೀಡಿದ್ದು ಮತ್ತದೇ ಜೈಲಿನಲ್ಲಿದ್ದ ವಿಧಾನಸೌಧಕ್ಕೆ ಬೆವರು ಸುರಿಸಿದ್ದ ಓರ್ವ ನಿಸ್ವಾರ್ಥ ಮಹಿಳಾ ಕೈದಿ!

ದುಡಿಯುತ್ತಿದ್ದ ಕೈದಿಗಳಿಗೆ ತಿಂಗಳ ಸಂಬಳ ಕೊಡುವಾಗ ಒಬ್ಬ ಮಹಿಳೆಗೆ ನಾಲ್ಕೇ ದಿನ ಕೆಲಸ ಮಾಡಿದ್ದರೂ ಸಹ ತಿಂಗಳ ಪೂರ್ತಿ ಸಂಬಳ ನೀಡುತ್ತಾರೆ ಹನುಮಂತಯ್ಯ! ಆಕೆ ಹಣ ತೆಗೆದುಕೊಳ್ಳಲು ನಿರಾಕರಿಸಿದಾಗ ಹನುಮಂತಯ್ಯ ನಿರಾಕರಣೆಯ ಕಾರಣ ಕೇಳಿದಾಗ ಆಕೆ ಹೇಳುವ ಮಾತೇನು ಗೊತ್ತೇ?!

ನನಗೆ ಮೈ ಸರಿ ಇಲ್ಲವಾದ್ದರಿಂದ ನಾಲ್ಕೇ ದಿನ ಕೆಲಸ ಮಾಡಲು ಶಕ್ತವಾದದ್ದು. ಇಡೀ ತಿಂಗಳು ಕೆಲಸ ಮಾಡಿದರೂ ನಾನು ಸಂಬಳ ತೆಗೆದುಕೊಳ್ಳುವುದಿಲ್ಲ! ಯಾಕೆಂದರೆ, ಸರಕಾರೀ ಕೆಲಸವೆಂದರೆ ದೇವರ ಕೆಲಸ!”

ಈ ಮಾತು ಕೇಳುತ್ತಿದ್ದ ಹಾಗೆ ಹನುಮಂತಯ್ಯನವರಿಗೆ ಮಿಂಚಿನ ಸಂಚಾರ! ತೀರಾ ಸಾಮಾನ್ಯಳಾಗಿದ್ದ ಆಕೆ ಕೊಟ್ಟ ಸಂದೇಶವೊಂದು ಅದೆಷ್ಟು ಅರ್ಥಪೂರ್ಣ ಎಂದುದ್ಗರಿಸಿದ್ದರು ಹನುಮಂತಯ್ಯ! ಕೊನೆಗೂ ಪ್ರವೇಶದ್ವಾರದ ಮೇಲೆ ಆ ಬರಹವನ್ನು ಕೆತ್ತಿಸಿದರು! ಒಳಹೊಕ್ಕುವ ಪ್ರತಿ ರಾಜಕಾರಣಿಗಳಿಗೆ ಸಿಬ್ಬಂದಿಗಳಿಗೆ, ಸರಕಾರೀ ಕೆಲಸವನ್ನು ನಿಸ್ವಾರ್ಥತೆಯಿಂದ ಮಾಡು ಎನ್ನುವ ಆದರ್ಶವೊಂದು ನೀಡುತ್ತಲೇ ಅದಕ್ಕಿವತ್ತು 60 ವರುಷಗಳಾಗಿ ಹೋಗಿದೆ!

ತದನಂತರ, ಮೈಸೂರು ಸರಕಾರದ ಆಡಳಿತಾವಧಿಯಲ್ಲಿ ಅದನ್ನು ‘ಸತ್ಯಮೇವ ಜಯತೇ’ ಎಂದಾಗಿ ಬದಲಾಯಿಸಲು ಯತ್ನಿಸಿದ್ದರೂ ಸಾಧ್ಯವಾಗಿರಲಿಲ್ಲ!

1996 ರಲ್ಲಿ, ಯುನೈಟೆಡ್ ಸ್ಟೇಟ್ಸ್ ನ ಸ್ಟೇಟ್ ಗವರ್ನರ್ ಜಾರ್ಜ್ ವೋಯ್ನೋವಿಚ್ ಕರ್ನಾಟಕಕ್ಕೆ ಬಂದಾಗ, ವಿಧಾನಸೌಧದ ಬರೆಹವನ್ನು ನೋಡಿ ಸ್ಪೂರ್ಥಿಗೊಂಡ ಅವರು ತಮ್ಮ ಓಹಿಯೋದ ಸ್ಟೇಟ್ ಹೌಸ್ ನ ಮೇಲೆಯೂ, “Governement’s work is God’s work’ ಎಂದು ಕೆತ್ತಿಸಿದ್ದರೆಂದರೆ ಸಾಮಾನ್ಯ ಪ್ರಜೆಯ ನಿಸ್ವಾರ್ಥತೆಗೆ ಅದೆಷ್ಟು ಬೆಲೆಯಿರಬಹುದು?!

ಆದರೆ. . . .

ಈ ಒಂದು ಪ್ರಶ್ನೆಯನ್ನು ನಾನು ಕೇಳಲೇಬೇಕಿದೆ!

ಇವತ್ತು ಆ ಬರಹಕ್ಕೆ ತಕ್ಕುದಾಗಿ ರಾಜಕಾರಣಿಗಳು ನಡೆದುಕೊಳ್ಳುತ್ತಿದ್ದಾರಾ?! ಸರಕಾರೀ ಕೆಲಸ ದೇವರ ಕೆಲಸ ಎಂಬುದನ್ನೇ ವಚನವಿತ್ತ ರಾಜಕಾರಣಿಗಳು ನಿಜಕ್ಕೂ ಬದ್ಧವಾಗಿದ್ದಾರಾ?!

ಐದು ವರ್ಷ ಪೂರೈಸುತ್ತಿರುವ ಸಿದ್ಧರಾಮಯ್ಯನವರ ಸರಕಾರ ವಜ್ರ ಮಹೋತ್ಸವಕ್ಕೆ ಕೋಟಿಗಟ್ಟಲೇ ಖರ್ಚು ಮಾಡುತ್ತಿದೆ ಸರಿ! ಆದರೆ, ಇದೇ
ಸಿದ್ಧರಾಮಯ್ಯನವರ ಸರಕಾರ ದೇವರ ಅಸ್ತಿತ್ವವನ್ನು ನಂಬಿತೇ?! ಇದೇ ಮುಖ್ಯ ಮಂತ್ರಿಗಳು ಮೊನ್ನೆ ಮೊನ್ನೆಯಷ್ಟೇ ಮಾಂಸಾಹಾರ ಸೇವಿಸಿ ಧರ್ಮಸ್ಥಳವನ್ನು
ಅಪವಿತ್ರಗೊಳಿಸಿದರು! ಸತ್ಯನಾರಾಯಣ ಪೂಜೆಯಲ್ಲಿಯೂ ಚಪ್ಪಲಿ ಹಾಕಿಯೇ ದೇವತೆಗಳಿಗೆ ಹೂವನ್ನರ್ಪಿಸಿದರು! ಅಯ್ಯೋ! ನಿಜಕ್ಕೂ ವಿಧಾನ ಸೌಧ ತನ್ನ
ಘನತೆಯನ್ನು ಹೇಗೆಲ್ಲ ಕಳೆದುಕೊಂಡಿತು ಈ ಐದು ವರುಷಗಳಲ್ಲಿ!?

ಸರಕಾರೀ ಕೆಲಸ ದೇವರ ಕೆಲಸವೆಂದು ದಕ್ಷದಿಂದಿದ್ದ ಪೋಲಿಸ್ ಅಧಿಕಾರಿಗಳು ಪ್ರಾಣಕೊಡುವಂತಾಯಿತು! ವರ್ಗಾವಣೆಯನ್ನು ಅನುಭವಿಸುವಂತಾಯಿತು! ಒತ್ತಡ, ಬೆದರಿಕೆಗಳನ್ನೂ ಧಾರಾಳವಾಗಿಯೇ ನೀಡಲಾಯಿತಲ್ಲವಾ?! ಆ ಮಹಿಳೆಯೊಬ್ಬಳ ನಿಸ್ವಾರ್ಥತೆಗೆ ಬೆಲೆ ಕೊಟ್ಟರಾ?!

ಉತ್ತರ ಬೇಕಿದೆ! ಈ ವಜ್ರಮಹೋತ್ಸವದ ಸಂದರ್ಭದಲ್ಲಾದರೂ ಸಾವಿರ ರಂಗು ಹೊತ್ತ ಸೌಧದೊಳಗಿನಿಂದ ಉತ್ತರವೊಂದನ್ನು ಕೇಳಬೇಕಿದೆ!

– ತಪಸ್ವಿ

Tags

Related Articles

Close