ಅಂಕಣ

ವಿಭಜನೆಯ ದುರಂತ ಕಥೆ ಹೇಳುತ್ತೆ ಈ ಅಮೃತ್‍ಸರ್ ಮ್ಯೂಸಿಯಮ್!!

ಭಾರತ-ಪಾಕಿಸ್ತಾನ ದೇಶ ವಿಭಜನೆ ಹಾಗೂ ಆ ಸಂದರ್ಭದಲ್ಲಿ ವಿಪ್ಲವ, ಹಿಂಸಾಚಾರ, ಸಾವು, ನೋವುಗಳ ಎರಡೂ ದೇಶಗಳ ನಡುವಿನ ಬಾಂಧವ್ಯಕ್ಕೆ ಕೊಳ್ಳಿ ಇಟ್ಟಿತ್ತು. ಆ ನೋವು, ದ್ವೇಷ, ಅಸಹನೆಯ ನಡುವೆ ಅದೆಷ್ಟೋ ಜನ ಸಾವು ನೋವುಗಳನ್ನು ಅನುಭವಿಸಿದ್ದಾರೆ. ಮುಂದಿನ ಪೀಳಿಗೆಗೆ ಭಾರತ ವಿಭಜನೆಯ ನೋವಿನ ಕಥೆಯನ್ನು ಹೇಳಲು ನಿರ್ಮಾಣವಾಗಿದೆ “ಮ್ಯೂಸಿಯಂ”!!

ಭಾರತದ ವಿಭಜನೆಯ ಸಾವು ನೋವುಗಳು, ಕ್ರೌರ್ಯ, ಅಳಿಯದ ಗಾಯಗಳು ಅಪಾರ ಪ್ರಮಾಣದ ನೋವಿಗೆ ಕಾರಣವಾಗಿದೆ. ದೇಶ ವಿಭಜನೆ ಸಾವು-ನೋವುಗಳಿಗೆ ಮಾತ್ರ ಕಾರಣವಾಗಿರಲಿಲ್ಲ. ಆಗ ನಡೆದ ದರೋಡೆ, ಅತ್ಯಾಚಾರದಂತಹ ಮನುಷ್ಯತ್ವದ ಮೇಲೆ ನಡೆದ ಹಲ್ಲೆಗಳು ಎಲ್ಲಾ ಕಾಲಕ್ಕೂ ಉಲ್ಲೇಖಿಸಬಹುದಾದ ಹಿಂಸೆಯ ಬಗೆಗಿನ ಉದಾಹರಣೆಯಾಗಿ ಉಳಿದುಕೊಂಡಿವೆ. ಮನುಷ್ಯ ಎಷ್ಟು ಕ್ರೂರಿಯಾಗಿರಬಹುದು ಎಂಬುವುದಕ್ಕೆ ಬೆರಳು ತೋರಬಹುದಾದ ಘಟನೆ ಈ ದೇಶ ವಿಭಜನೆಯಾಗಿದೆ.

ಶತಮಾನಗಳಿಂದ ಇಲ್ಲಿನ ಜನರು ಭಾತೃತ್ವ, ಸಹೋದರತ್ವ ಸಾಮರಸ್ಯದಿಂದ ಜೀವನ ನಡೆಸುತ್ತಿದ್ದರು…. ಅದ್ಯಾರಿಗೆ ದೇಶ ವಿಭಜನೆಯ ಹುಚ್ಚು ಹಿಡಿದಿತ್ತೋ ಗೊತ್ತಿಲ್ಲ!! ಯಾರದೋ ಕುಮ್ಮಕ್ಕಿನಿಂದ ದೇಶ ವಿಭಜನೆ ಮಾಡುವುದಕ್ಕೆ ತಯಾರಾಗುತ್ತಾರೆ. ದೇಶ ವಿಭಜನೆಯಾಗುವುದು ಎಂಬ ವಿಷಯ ಅದೆಷ್ಟೋ ಜನರ ಮನಸ್ಸನ್ನು ಘಾಸಿಗೊಳಿಸಿತ್ತು!!. ಕೆಲವೊಂದು ನಾಯಕರ ಕುಮ್ಮಕ್ಕಿನಿಂದ ದೇಶ ವಿಭಜನೆಗೊಂಡಿತ್ತು.!! ಘಟನೆ ಕಳೆದು 70 ವರ್ಷಗಳಾದರೂ ವಿಭಜನೆಯ ಕರಾಳ ನೆನಪುಗಳು ಮಾತ್ರ ಇನ್ನೂ ಮಾಸಿಲ್ಲ!!

ಎಷ್ಟೋ ದಶಕಗಳಿಂದ ತನ್ನ ತಾಯ್ನೆನೆಲೆ ಎಂದು ಬದುಕುತ್ತಿದ್ದ ಜನರು ರಾತ್ರೋರಾತ್ರಿ ಮನೆಮಠ ಕಳೆದುಕೊಂಡು ಬೇರೊಂದು ದೇಶಕ್ಕೆ ಪಲಾಯನಗೊಳ್ಳವಾಗ
ಅದೆಷ್ಟೋ ಜೀವಗಳು ದು:ಖದಿಂದ ಭಾರವಾಗಿದ್ದವು. ಅದೆಷ್ಟೋ ಜನ ವಿಭಜನೆಯಾದ ಕೊರಗಿನಲ್ಲೇ ಬದುಕಿದ್ದರು. ಹಲವು ನಗರಗಳಲ್ಲಿ ಅಮಾನವೀಯತೆಯ
ರೌದ್ರನರ್ತನ ಸಾಗಿತ್ತು.!! ಎಲ್ಲೆಂದರಲ್ಲಿ ಶವಗಳ ರಾಶಿ…! ಇನ್ನೊಂದೆಡೆ ನೋವಿನಿಂದ ಚೀರಾಡುವ ಸದ್ದು! ಜೀವ ಉಳಿಸಿಕೊಂಡವರು ತಮ್ಮವರಿಗಾಗಿ ಹುಡುಕಾಡುತ್ತಿದ್ದ ದಾರುಣ ದೃಶ್ಯಗಳು, ಶವವಾಗಿ ಪತ್ತೆಯಾದಾಗ ಕಂಡುಬಂದ ಸಂಕಟದ ದೃಶ್ಯ, ಖಾಲಿ ಖಾಲಿಯಾದ ಊರುಗಳು ವಿಭಜನೆಯ ದುರಂತಕ್ಕೆ ಸಾಕ್ಷಿಯಾಗಿತ್ತು!!.

ನಮ್ಮ ದೇಶದಿಂದ ವಿಭಜನೆಗೊಂಡ ಪಾಕಿಸ್ತಾನ ಎಂಬ ಹೆಸರಿನಲ್ಲಿ ಸೃಷ್ಟಿಯಾದ ದೇಶ ತಾನೂ ನೆಮ್ಮದಿಯಿಂದ ಬದುಕಿಲ್ಲ ನಮ್ಮನ್ನೂ ಬದುಕಲು ಬಿಡಲಿಲ್ಲ. ವಿಭಜನೆಯ ಸಮಯದಲ್ಲಿ ಅಂದರೆ 1947 ರಿಂದ 1948 ರವರೆಗೆ 2ಲಕ್ಷಕ್ಕೂ ಅಧಿಕ ಜನರ ಮಾರಣ ಹೋಮವಾಗಿತ್ತು. ಅಂದರೆ ಆ ದಿನದ ಪರಿಸ್ಥಿತಿ ಯಾವ ರೀತಿ ಇರಬಹುದು ಊಹಿಸಲು ಕೂಡಾ ಅಸಾಧ್ಯ!!

ಪ್ರತ್ಯೇಕ ದೇಶವಾದರೆ ಏನು ಪ್ರಯೋಜನವಾಯಿತು?… ಅಸ್ತಿತ್ವಕ್ಕೆ ಬಂದ ಎರಡೂವರೆ ದಶಕಗಳ ಮುನ್ನವೇ ಪೂರ್ವಪಾಕಿಸ್ತಾನ ಬಾಂಗ್ಲಾ ದೇಶವಾಯಿತು. ಈಗ
ಬಲೂಚಿಸ್ತಾನ, ಸಿಂಧ್ ಸೇರಿದಂತೆ ಹಲವು ರಾಜ್ಯ-ಪ್ರಾಂತ್ಯಗಳಲ್ಲಿ ಪ್ರತ್ಯೇಕ ರಾಷ್ಟ್ರ ಕೇಳಿ ಬರುತ್ತಿದೆ. ಎಲ್ಲಾ ರಂಗದಲ್ಲೂ ವಿಫಲ ರಾಷ್ಟ್ರದಲ್ಲಿ ಗುರಿತಿಸಿಕೊಂಡಿರುವ
ಪಾಕ್ ಅವನತಿಯತ್ತ ಸಾಗುತ್ತಿದೆ.!!

ವಿಭಜನೆಯ ನೋವು, ಆ ಸಂದರ್ಭದ ಚಿತ್ರಣ, ಆಗಿನ ಎಲ್ಲಾ ಘಟಾನಾವಳಿಗಳು, ಪ್ರಮುಖ ವಿದ್ಯಮಾನಗಳು , ಅವುಗಳು ಬೀರಿದ ಪರಿಣಾಮಗಳನ್ನೆಲ್ಲಾ ಮನಗಂಡು ಮುಂದಿನ ಪೀಳಿಗೆಗೆ ತಿಳಿಸಿ ಕೊಡಲು , ಆ ಮೂಲಕ ಮನಸ್ಸು ಮತ್ತು ವಿಭಜನೆಯನ್ನು ತಡೆಯಿರಿ ಎಂಬೂವುದಕ್ಕೆ “ದಿ ಆಟ್ ಆಂಡ್ ಕಲ್ಚರಲ್ ಟ್ರಸ್ಟ್‍ನಿಂದ ಪಂಜಾಬ್‍ನ ರಾಜಾಧಾನಿ ಅಮೃತ್‍ಸರದಲ್ಲಿ ಕಳೆದ ವರ್ಷ “ಪಾರ್ಟಿಶಿಯನ್ ಮ್ಯೂಸಿಯಂ” ನ್ನು ನಿರ್ಮಾಣ ಮಾಡಿದೆ. ದೇಶ ವಿಭಜನೆಯಲ್ಲಿ ಆದ ಆಸ್ತಿಪಾಸ್ತಿ ಹಾನಿ ಜೀವ ಹಾನಿ ನೆನೆಪಿಸಿಕೊಂಡರ ಒಂದು ಸಲ ಮೈ ಜುಮ್ಮೆನ್ನತ್ತದೆ. ದೇಶ ವಿಭಜನೆ ಭಾತರದ ಪಾಲಿಗೆ ದೊಡ್ಡ ಪಾಠವಾಗಿದೆ.

ರಕ್ತಕಣ್ಣೀರು ತರಿಸುವ ಆ ವಿಭಜನೆಯ ಘಟನೆಯನ್ನು ಇಂದಿಗೂ ಭಾರತೀಯರು ಮರೆತಿಲ್ಲ. ಅದಕ್ಕಾಗಿ, ಅಸಂಖ್ಯ ಜನರು ಪ್ರತಿವರ್ಷ ಆಗಸ್ಟ್ 14 ರಂದು ಅಖಂಡ
ಭಾರತ ದಿನವನ್ನು ಆಚರಿಸಿ ಅಖಂಡ ಭಾರತಕ್ಕಾಗಿ ಸಂಕಲ್ಪಿಸುತ್ತಿದ್ದಾರೆ. ವಿಭಜನೆಯ ನೋವನ್ನು ಹಲವು ಪ್ರದೇಶಗಳನ್ನು ಅನುಭವಿಸುತ್ತಿದ್ದು ಹೌದಾದರೂ ಇದರ ಹೆಚ್ಚು ತೀವ್ರತೆಯನ್ನು ಅನುಭವಿಸಿದ್ದು ಭಾರತದ ಪಂಜಾಬ್ ರಾಜ್ಯ. ಇಲ್ಲಿನ ಹಲವು ನಗರಗಳು ತತ್ತರಿಸಿ ಹೋಗಿದ್ದವು. ಹೌದು ಈಗ್ಯಾಕೆ ವಿಭಜನೆಯ ಮಾತು ಪ್ರಶ್ನೆ ಮೂಡುವುದು ಸಹಜ.

ಸ್ವಾತಂತ್ರ್ಯಾಪ್ತಿಯ ಏಳು ದಶಕಗಳ ನಂತರ ವಿಭಜನೆಯ ಇತಿಹಾಸವನ್ನು ತಿಳಿಸಿಕೊಡುವ ಉದ್ಧೇಶದಿಂದ ಈ ಸಂಗ್ರಹಾಲಯ ನಿರ್ಮಾಣವಾಗಿದ್ದು, ಹಲವು
ಮಹತ್ವಪೂರ್ಣ ಸಂದೇಶವನ್ನು ನೀಡುತ್ತದೆ. ಈ ಮೂಲಕ ವಿಭಜನೆಯ ಸಮಯದಲ್ಲಿ ನಡೆದ ನೋವಿನ ಕಥೆ ಇಂದಿನ ಪೀಳಿಗೆಗೆ ಅರ್ಥವಾಗಲು ಸಾಧ್ಯ.

ಒಂದು ತಪ್ಪು ನಿರ್ಧಾರ ಇಡೀ ರಾಷ್ಟ್ರವನ್ನು ಹೇಗೆ ನಲುಗಿಸುತ್ತದೆ ಹಲವು ಪೀಳಿಗೆಗಳನ್ನು ಹೇಗೆ ಪ್ರಭಾವಿಸುತ್ತದೆ ಎಂಬೂವುದಕ್ಕೆ ದೇಶ ವಿಭಜನೆಯೇ ಸಾಕ್ಷಿ.
ಮಾನವೀಯತೆ, ರಾಷ್ಟ್ರೀಯತೆ ರಾಷ್ಟ್ರಧರ್ಮದ ಭಾವಗಳು ಅಲುಗಾಡಿದ ಸೃಷ್ಟಿಯಾಗುವುದು ವಿಪ್ಲವವವೇ. ಏಳು ದಶಕಗಳ ನಂತರ ಮತ್ತೆ ಅಖಂಡ ಭಾರತದ ಕನಸು ಚಿಗುರೊಡೆಯುತ್ತಿದೆ, ಇದಕ್ಕೆ ಪೂರಕ ಎಂಬಂತೆ ಪಾಕಿಸ್ತಾನ ಪ್ರಪಾತದತ್ತ ಜಾರುತ್ತಿದೆ. ಮುಂದಿನ ದಿನಗಳು ಭಾರತದ್ದೇ ಎಂಬ ಆಶಾವಾದ ಹುಟ್ಟುತ್ತಿದೆ.

-ಶೃಜನ್ಯಾ

Tags

Related Articles

Close