ಅಂಕಣಪ್ರಚಲಿತ

ವಿಶೇಷಸುದ್ದಿ!!! ಕಾಂಗ್ರೆಸ್ ಟ್ಟಿಟ್ಟರ್ ನಲ್ಲಿ ಪ್ರಾರಂಭಿಸಿದ #BlockNarendraModi ಅಭಿಯಾನವೊಂದು ಅವರಿಗೇ ತಿರುಗುಬಾಣವಾಗಿದ್ದು ಹೇಗೆ ಗೊತ್ತಾ?!

ಈ ಕಾಂಗ್ರೆಸ್ ಅನ್ನುವುದೊಂದಿದೆಯಲ್ಲ, ಯಾವತ್ತಿಗೂ ಸಹ ಮೋದಿಯ ಅಲೆಯೊಂದನ್ನು ಸಹಿಸಿಕೊಳ್ಳುವುದೇ ಇಲ್ಲ! ಅವಕಾಶ ಸಿಕ್ಕಿದರೆ, ಮೋದಿಯ ಪ್ರಸಿದ್ಧತೆಗೆ ಧಕ್ಕೆ ಉಂಟು ಮಾಡುತ್ತೇನೆಂದು ಹೊರಡುವ ಕಾಂಜಿ ಕಾಂಗ್ರೆಸ್ ಗೆ ಬಹುಷಃ ಒಂದು ಇರುವೆಯಿಂದ ಆನೆಗೇನಾಗಲಾರದು ಎಂಬ ಅರಿವೂ ಇದ್ದಂತಿಲ್ಲ ಬಿಡಿ!

ಎರಡು-ಮೂರು ಹಿಂದೆಯಷ್ಟೇ ಗೌರಿ ಲಂಕೇಶ್ ಕಾಂಗ್ರೆಸ್ ಸರಕಾರದ ರಾಜ್ಯದಲ್ಲಿ ಹತ್ಯೆಗೀಡಾಗಿದ್ದರೂ ಸಹ, ಆರೋಪ ಬಂದಿದ್ದು ಮೋದಿಯ ಮೇಲೆ! ಯಾವೊಬ್ಬ
ತಿರುಬೋಕಿ ಎಡಪಂಥೀಯನೂ ಸಹ ಯೋಚನೆ ಮಾಡಲೇ ಇಲ್ಲ! ಸಿದ್ಧರಾಮಯ್ಯನ ರಾಜೀನಾಮೆಯನ್ನೂ ಕೇಳದಷ್ಟು ಮೂರ್ಖ ಶಿಖಾಮಣಿಗಳಂತೆ ಇನ್ನಾರದೋ ಮೇಲೆ ಆರೋಪ ಹೊರಿಸಿದರಲ್ಲ, ಅವರ ಬೂಟಾಟಿಕೆಯಷ್ಟೇ!

ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಯ್ತು “ಬ್ಲಾಕ್ ಮೋದಿ!!”

ಕರ್ನಾಟಕ ಪೋಲಿಸ್ ಇಲಾಖೆ ನಕ್ಸಲ್ ನಂಟು ಹೊಂದಿದ್ದ ಗೌರಿ ಲಂಕೇಶ್ ಹತ್ಯೆಯ ತನಿಖೆ ನಡೆಸುತ್ತಿದೆ! ತಮ್ಮ ಇಂದ್ರಜಿತ್ ಲಂಕೇಶ್ ಸಹ ಆಕೆಗೆ ನಕ್ಸಲ್
ಬೆದರಿಕೆಗಳಿತ್ತು ಎಂಬ ಸುದ್ದಿಯನ್ನೂ ಬಹಿರಂಗಪಡಿಸಿದ್ದಾನೆ! ಅಷ್ಟಾದರೂ ಸಹ, ಕಾಂಗ್ರೆಸ್ ಹಾಗೂ ಹಿಂಬಾಲಕರಿಗೆ ಮಾಡಲು ಕ್ಯಾಮೆಯಿಲ್ಲ ಎಂಬುವಂತೆ ಮೋದಿಯನ್ನು ತಮ್ಮ ಖಾತೆಗಳಲಿ ‘ಬ್ಲಾಕ್’ ಮಾಡುವಂತೆ ಒಂದು ಅಭಿಯಾನ ಶುರು ಹಚ್ಚಿದ್ದಾರೆ!

ಮೋದಿಯವರಿಗೆ ಟ್ವಿಟ್ಟರ್ ನಲ್ಲಿ 33.3 ಮಿಲಿಯನ್ ಹಿಂಬಾಲಕರಿದ್ದಾರೆ! ಅದೇ ರೀತಿ ಕೆಲವೊಬ್ಬರನ್ನು ಮೋದಿಯವರೂ ಸಹ ಫಾಲೋ ಮಾಡಿದ್ದಾರೆ! ಅದರಲ್ಲಿ ಒಬ್ಬ ನಿಷೇಧಾತ್ಮಕ ಹೇಳಿಕೆ ನೀಡಿದ್ದೂ ಅಲ್ಲದೆ, ಗೌರಿ ಲಂಕೇಶ್ ಹತ್ಯೆಗೆ ಮೋದಿಯವರೇ ಕಾರಣ ಎಂದು ಟ್ವೀಟ್ ಮಾಡಿ, ಮೋದಿಯನ್ನು ಬ್ಲಾಕ್ ಮಾಡಿದ್ದಾಗಿ ಹೇಳಿದ್ದೇ ಹೇಳಿದ್ದು, ಉಳಿದ ಕುರಿಗಳೂ ಅವನ ಹಿಂದೆ ಹೋಗಿ ಕುರಿಯಾಗಿರುವುದು ವಿಷಾದಕರವೇ ಬಿಡಿ!

ಅವರು ಹೇಳಿದ್ದು #BlockNarendraModi, ಆದರೆ ಉಳಿದವರು ಮಾಡಿದ್ದು #BlockRahulGandhi!!!!!

ಅಲ್ಲಿರುವ ಯಾರಿಗೂ ಸಹ ಮೋದಿಗೂ, ಗೌರಿ ಹತ್ಯೆಗೂ ಇರುವ ಸಂಬಂಧವೇ ಅರ್ಥವಾಗದೇ, ಅಭಿಯಾನ ಶುರು ಮಾಡಿದ ಕಾಂಗ್ರೆಸ್ ಮೇಲೆ ತಿರುಗು ಬಿದ್ದ
ಹಿನ್ನೆಲೆಯಲ್ಲಿ ಪಾಪ! ರಾಹುಲ್ ಗಾಂಧಿ ‘ಪಪ್ಪು’ ಎಂದೇ ಮತ್ತೊಮ್ಮೆ ಸಾಬೀತಾಗಿದ್ದಾನೆ!

ಕೊನೆ ಕೊನೆಗೆ ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗಿದ್ದು ಬ್ಲಾಕ್ ರಾಹುಲ್ ಗಾಂಧಿ! ಸುಮ್ಮನೇ ಬ್ಲಾಕ್ ಮಾಡುವ ಅಂದರೆ ಮನಸು ಕೇಳದ ಕಾರಣ ರಾಹುಲ್ ಗಾಂಧಿಯ
ಸ್ಥಿಮಿತವಿಲ್ಲದ ಬುದ್ಧಿಗೂ ಸಹ ಸರಿಯಾಗಿಯೇ ಪೆಟ್ಟು ಕೊಟ್ಟಿದ್ದಾರೆ!

ಈಗ ಹೇಳಿ! ಯಾರವ ಯಾರವ?! ಬ್ಲಾಕ್ ಆದವ??!

– ತಪಸ್ವಿ

Tags

Related Articles

Close