ಪ್ರಚಲಿತ

ವಿಶೇಷಸುದ್ದಿ! ಪ್ರಧಾನಿ ನರೇಂದ್ರ ಮೋದಿ ಸರಕಾರದ ‘ರೋರೋ’ ಯಾನ ಯೋಜನೆಯ ಬಗ್ಗೆ ಗೊತ್ತೇ?!

ದೇಶದ ಮೊಟ್ಟ ಮೊದಲ ಬುಲೆಟ್ ಟ್ರೈನ್ ಯೋಜನೆಗೆ ಚಾಲನೆ ನೀಡಿದ್ದಾಯ್ತು. ಜಗತ್ತಿನ ಅತೀ ಎತ್ತರದ ಸೇತುವೆಗೂ ಚಾಲನೆ ನೀಡಿದ್ದಾಯ್ತು ಇದೀಗ ದೇಶದ
ಬಹುಮಹತ್ವಾಕಾಂಕ್ಷೆಯ ಬಹು ನಿರೀಕ್ಷಿತ ರೋರೋ ಸಮುದ್ರಯಾನ ಸೇವೆಗೆ ಹಸಿರು ನಿಶಾನೆ ತೋರಿದ್ದಾರೆ ಮೋದಿ…ಭಾರತದಲ್ಲಿ ಮೊದಲ ಬಾರಿಗೆ ಇಂತಹ
ಯೋಜನೆಯನ್ನು ಆರಂಭಿಸಲಾಗಿದ್ದು, ಆಧುನಿಕ ತಂತ್ರಜ್ಞಾನದಿಂದ ಹಡಗನ್ನು ನಿರ್ಮಾಣ ಮಾಡಲಾಗಿದೆ!!! ಆದರೆ 2012ರಲ್ಲಿ ಯೋಜನೆಯ ಆರಂಭಕ್ಕೆ ಮೋದಿ ಜೀ ಶಂಕು ಸ್ಥಾಪನೆಯನ್ನು ಮಾಡಿದ್ದು, ಈ ಯೋಜನೆಯು ಮೋದಿಯವರ ಕನಸಿನ ಯೋಜನೆಯಾಗಿದೆ.!!

ಒಳನಾಡು ಜಲಸಾರಿಗೆ ಒತ್ತು ನೀಡುವ ಕೇಂದ್ರಸರಕಾರದ ಮಹತ್ವಾಕಾಂಕ್ಷಿ ಸಾಗರಮಾಲಾ ಯೋಜನೆಯ ಮೊದಲ ಭಾಗ ಎಂದೇ ವಿಶ್ಲೇಷಿಸಲಾಗಿರುವ ಸೌರಾಷ್ಟ್ರದ ಘೋಘಾ ಹಾಗೂ ದಕ್ಷಿಣ ಗುಜರಾತ್ ದಹೇಜ್ ನಡುವಿನ ದೇಶದ ಪ್ರಪ್ರಥಮ ರೋರೋ ಒಳನಾಡು ಸಮುದ್ರಯಾನಕ್ಕೆ ಚಾಲನೆ ನೀಡಿದ್ದಾರೆ.!! ಪ್ರಧಾನಿ ನರೇಂದ್ರ ಮೋದಿ ಅವರು ಈ ವಿನೂತನ ಸೇವೆಗೆ ಚಾಲನೆ ನೀಡಿದ್ದಾರೆ. ತಿಂಗಳಲ್ಲಿ 3ನೇ ಸಲ ಗುಜರಾತ್‍ಗೆ ಭೇಟಿ ನೀಡಿದ ಮೋದಿ 615 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸುತ್ತಿರುವ ರೋಲ್ ಆನ್-ರೋಲ್ ಆಫ್‍ನ ಮೊದಲ ಚರಣದ ನೌಕಾ ಸೇವೆಯನ್ನು ರಾಜ್ಯದ ಜನತೆಗೆ ಉಡುಗೊರೆಯಾಗಿ ನೀಡಿದರು. ಆಗ್ನೇಯ ಏಷ್ಯಾದಲ್ಲಿ ಚಾಲನೆ ಪಡೆದ ಈ ಮೊಟ್ಟ ಮೊದಲ ಆರ್‍ಒಆರ್‍ಒ ನೌಕಾ ಸೇವೆಯನ್ನು ರಾಜ್ಯದ ಜನತೆಗೆ ಉಡುಗೊರೆಯಾಗಿ ನೀಡಿದರು. ಆಗ್ನೇಯ ಏಷ್ಯಾದಲ್ಲಿ ಚಾಲನೆ ಪಡೆದ ಈ ಮೊಟ್ಟ ಮೊದಲ ಆರ್‍ಒಆರ್‍ಒ ನೌಕಾಸೇವೆ ಇಡೀ ಭಾರತಕ್ಕೆ ಮಾದರಿಯಾಗಿದೆ.!!

ರೋಲ್-ಆನ್-ರೋಲ್ ಆಫ್ (ಆರ್‍ಒಆರ್‍ಒ) ನೌಕಾ ಸೇವೆಯಲ್ಲಿ ಜನರ ಜತೆಗೆ ಸರಕು ಹೊತ್ತ ಲಾರಿಗಳು ಮತ್ತಿತ್ತರ ಸರಕು ಹೊತ್ತ ಲಾರಿಗಳು ಮತ್ತಿತ್ತರ
ವಾಹನಗಳನ್ನು ಬಾರ್ಜ್ ಮಾದರಿಯಲ್ಲಿ ಫೆರಿಯಲ್ಲಿ(ನೌಕೆ) ಸಾಗಿಸಲಾಗುತ್ತದೆ. ಸದ್ಯ ಚಾಳನೆ ಪಡೆದಿರುವ ಮೊದಲ ಹಂತದ ಯೋಜನೆಯಲ್ಲಿ 250 ಜನರನ್ನಷ್ಟೇ
ಸಾಗಿಸಲು ಅವಕಾಶವಿದೆ. ಇದಕ್ಕಾಗಿ ಘೋಘಾ ಮತ್ತು ದಹೇಜ್ ಬಳಿ ವಿಶ್ವ ಗುಣಮಟ್ಟದ ಟರ್ಮಿನಲ್‍ಗಳನ್ನು ನಿರ್ಮಿಸಲಾಗಿದೆ. ಇನ್ನೆರಡು ತಿಂಗಳಲ್ಲಿ
ಆರಂಭವಾಗಲಿರುವ 2ನೇ ಹಂತದಲ್ಲಿ ಕಾರುಗಳು ಮತ್ತು ಮೂರನೇ ಹಂತದಲ್ಲಿ ಸರಕು ಸಾಗಣಿ ವಾಹನಗಳು ಸೇರಿ ಒಟ್ಟು 10 ವಾಹನಗಳ ಸಾಗಣಿ ಸೌಲಭ್ಯವೂ
ಆರಂಭವಾಗಲಿದೆ.

ಸಿಂಧು ನದಿ ನಾಗರಿಕತೆಯ ಸಂದರ್ಭದಲ್ಲಿ ಗುಜರಾತ್‍ನ ಅಹಮದಾಬಾದ್ ಜಿಲ್ಲೆಯ ಢೋಲ್ಕಾ ತಾಲೂಕಿನ ಸಾರಾಗ್‍ವಾಲಾ ಗ್ರಾಮದ ಬಳಿ ಇರುವ ಲೋತಲ್ ಎಂಬ ಗ್ರಾಮದಲ್ಲಿ ಸಮುದ್ರ ಮಾರ್ಗದಲ್ಲಿನ ವಾಣಿಜ್ಯ ವಹಿವಾಟು ನಡೆಯುತ್ತಿತ್ತು. ಇದಕ್ಕಾಗಿ ಅಲ್ಲಿ ಹಡಗುಗಟ್ಟೆ ನಿರ್ಮಿಸಿ ಸರಕು ಇಳಿಸಲು ಮತ್ತು ತುಂಬುವ ವ್ಯವಸ್ಥೆ ರೂಪಿಸಲಾಗುತ್ತಿತ್ತು. 1950ರ ದಶಕದಲ್ಲಿ ಭಾರತೀಯ ಪುರಾತತ್ವ ಇಲಾಖೆ ನಡೆಸಿದ್ದ ಉತ್ಖನನದಲ್ಲಿ ಹಡಗುಗಟ್ಟೆ ಮತ್ತಿತ್ತರ ನಿರ್ವಣಗಳ ಪಳೆಯುಳಿಕೆಗಳು ಲಭಿಸಿದ್ದವು. ಇದನ್ನು ನೆನಪು ಮಾಡಿಕೊಂಡ ಪ್ರಧಾನಿ ಮೋದಿ ಲೋತಲ್‍ನ ಗತವೈಭವವನ್ನು ನೆನಪಿಸುವಂತೆ ಸೌರಾಷ್ಟ್ರ ಮತ್ತು ದಕ್ಷಿಣ ಗುಜರಾತ್ ನಡುವೆ ಆರ್‍ಒಆರ್‍ಒ ಔಕಾ ಸೇವೆಯನ್ನು ಆರಂಭಿಸಲಾಗಿದೆ.

ರೋಲ್ ಆಫ್ ರೋಲ್ ಆಫ್ ಸಾಗರ ಸೇವೆಯಾಗಿದ್ದು ಇದು 615 ಕೋಟಿ ಮೊತ್ತದ ಯೋಜನೆಯಾಗಿದೆ. ಘೋಘಾದಿಂದ ದಹೇಜ್ ನಡುವೆ ಪ್ರಯಾಣ ಅವಧಿ 360 ರಿಂದ 30 ಕಿ.ಮೀಗೆ ಇಳಿಕೆಯಾಗಿದೆ. ಘೋಘದಲ್ಲಿ ಆರ್‍ಒಆರ್‍ಒ ನೌಕಾ ಸೇವೆಯ ಮೊದಲು ಹಂತಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ ಫೆರಿಯಲ್ಲಿ ದಹೇಜ್‍ಗೆ ತೆರಳಿದರು. ಅಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಪಿ ಫಾರ್ ಪಿ(ಅಭ್ಯುದಯಕ್ಕಾಗಿ ಬಂದರು) ಎಂಬ ಹೊಸ ಮಂತ್ರ ಪಠಿಸಿದರು. ದೇಶದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ರಾಷ್ಟ್ರದ ಎಲ್ಲ ಬಂದರುಗಳನ್ನು ಅತ್ಯಾಧುನಿಕ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದರು.

7,500 ಕಿ.ಮೀ ಸಮುದ್ರ ಮಾರ್ಗ ಮತ್ತು 14 ಸಾವಿರ ನದಿ ಮಾರ್ಗ ಸೇರಿ ಒಟ್ಟು 21 ಸಾವಿರ ಒಳನಾಡು ಜಲಸಾರಿಗೆ ಮಾರ್ಗ ಲಭ್ಯವಿದೆ. ಆದರೆ ಈ ಮಾರ್ಗವನ್ನು ಅಭಿವೃದ್ಧಿಪಡಿಸಲು ಹಿಂದಿನ ಸರಕಾರಗಳು ನಿರ್ಲಕ್ಷ್ಯ ತೋರಿದ್ದವು. ಹಾಗಾಗಿ ಕೇವಲ 6 ಮಾರ್ಗಗಳು ಕಾರ್ಯಾಚರಿಸುತ್ತಿದ್ದವು. ಆದರೆ ಈಗ ಮೋದಿ ಸರಕಾರ ಇಂತಹ 100 ಮಾರ್ಗಗಳನ್ನು ಗುರುತಿಸಿ ಇಂತಹ ಯೋಜನೆಗಳನ್ನು ಮಾಡುವಲ್ಲಿ ಶ್ರಮವಹಿಸುತ್ತಿದೆ. ಅವುಗಳನ್ನು ಅಭಿವೃದ್ದಿಪಡಿಸಲು ಆದ್ಯತೆ ನೀಡಿದೆ. ರಸ್ತೆ ಮಾರ್ಗದಲ್ಲಿ ಪ್ರತೀ ಟನ್ ಸರಕು ಸಾಗಾಣೆಗೆ ಒಂದೂವರೆ ರೂಪಾಯಿ ಮತ್ತು ರೈಲುಗಳಲ್ಲಿ ಒಂದು ರೂ, ವೆಚ್ಚವಾಗುತ್ತದೆ. ಆದರೆ ಒಳನಾಡು ಜಲಸಾರಿಗೆ ಮಾರ್ಗಗಳಲ್ಲಿ ಕೇವಲ 20 ಪೈಸೆ ವೆಚ್ಚದಲ್ಲಿ ಸರಕುಗಳನ್ನು ಸಾಗಿಸಬಹುದಾಗಿದೆ ಎಂದು ವಿವರಿಸಿದರು.

ಪೋರಾಬಂದರ್, ಘೋಘಾ, ದಹೇಜ್, ಹಾಜಿರಾ-ಪಿಪಾವಾವ್, ಪಿಪಾವಾವ್-ಪೋರಾಬಂದರ್, ಪೋರಾಬಂದ್ರರ-ಓಕಾ ಮತ್ತು ಓಕಾ-ಮುಂದ್ರಾ ಅಲ್ಲದೆ, ದಕ್ಷಿಣ
ಭಾರತದ ನಾನಾ ಸ್ಥಳಿಗಳಿಗೆ ಆರ್‍ಒಆರ್‍ಒ ನೌಕಾ ಸೇವೆ ವಿಸ್ತರಿಸುವ ಚಿಂತನೆ ಇದೆ. ಈ ಯೋಜನೆಯನ್ನು ಗುಜರಾತ್ ಸಮುದ್ರ ನಿಗಮ ಅನುಷ್ಟಾನಗೊಳಿಸಲಾಗಿದೆ. ಸಾಗರ ಮಾಲಾ ಯೋಜನೆಯಡಿ ಹಳೆಯ ಬಂದರುಗಳನ್ನು ಪರಿಪೂರ್ಣವಾಗಿ ಅಭಿವೃದ್ಧಪಡಿಸಲಾಗುತ್ತಿದೆ. ಸಾಗರಮಾಲ ಯೋಜನೆ ಸಂಪೂರ್ಣವಾಗಿ ಅನುಷ್ಠಾನಗೊಂಡ ಬಳಿಕ 1 ಲಕ್ಷಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಸೃಷ್ಠಿಯಾಗುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಘೋಘಾ ಮತ್ತು ದಹೇಜ್ ನಡುವೆ ಇರುವ 360 ಕಿ.ಮಿ ಉದ್ದದ ರಸ್ತೆ ಮಾರ್ಗದ ಪ್ರಯಾಣ ಅವಧಿ ಕನಿಷ್ಠ 7-8 ಗಂಟೆ. ಆದರೆ ಖಾಂಬತ್‍ನ ಕೊಲ್ಲಿ ಪ್ರದೇಶದ ನೌಕಾ ಸೇವೆಯಿಂದ ಈ ಎರಡು ನಗರಗಳ ನಡುವಿನ ಅಂತರ ಕೇವಲ 31 ಕಿ.ಮೀ ಆಗಲಿದೆ. ಒಂದು ಗಂಟೆಗೂ ಕಡಿಮೆ ಅವಧಿಯಲ್ಲಿ ಈ ಊರುಗಳನ್ನು ತಲುಪಬಹುದಾಗಿದೆ. ಹೀಗಾಗಿ 6 ಗಂಟೆಯಷ್ಟು ಪ್ರಯಾಣದ ಅವಧಿ ಹಾಗೂ ಅಪಾರ ಪ್ರಮಾಣದ ಇಂಧನ ಉಳಿತಾಯವಾಗುತ್ತದೆ.

ಪ್ರಧಾನಿ ಮೋದಿಯವರು ಈಗ ಹೊಸದಾಗಿ ಆರಂಭಿಸಿರುವ ಯೋಜನೆ ಖಂಡಿತಾ ಇಡೀ ದೇಶಕ್ಕೆ ಹಿತವಾಗಲಿದೆ. ಪ್ರಧಾನಿ ಮೋದಿಯಂತಹ ನಾಯಕರುಗಳನ್ನು
ಮುಂದೆಯೂ ಆಯ್ಕೆ ಮಾಡಿದರೆ ದೇಶ ಸುಭೀಕ್ಷೆಯಾಗುವಲ್ಲಿ ಬೇರೊಂದು ಮಾತಿಲ್ಲ.

Source :http://vijayavani.net/invaluable-gift-to-india-says-prime-minister-narendra-modi-on-roro-ferry-service-in-gujarat/

-ಶೃಜನ್ಯಾ

Tags

Related Articles

Close