ಪ್ರಚಲಿತ

ವಿಶೇಷಸುದ್ದಿ! ಮತ್ತೆ ಕನ್ನಡ ಭಾಷೆಗಾದ ಅವಮಾನ! ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಅಧಿಕಾರಕ್ಕೋಸ್ಕರ ಕನ್ನಡವನ್ನೇ ಮರೆತರೇ?!

ಇತ್ತೀಚೆಗಷ್ಟೇ ಬೆಳಗಾವಿ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ವಿವಾದಕ್ಕೆ ಸಿಲುಕಿಸಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದರು !! ಆದರೆ ಲಕ್ಷ್ಮೀ ಹೆಬ್ಬಾಳ್ಕರ್‍ಗೆ ಮರಾಠಿ ಬಗೆಗಿನ ಮೋಹ ಎಷ್ಟರ ಮಟ್ಟಿಗೆ ಆವರಿಸಿದೆ ಎಂದರೆ ಅದನ್ನು ಮತ್ತೊಮ್ಮೆ ಸಾಧಿಸಿ ತೋರಿಸಿದ್ದಾರೆ!! ಅದು ಹೇಗಂತೀರಾ??

ಬೆಳಗಾವಿ ವಿಚಾರವಾಗಿ ವಿವಾದವನ್ನು ಸೃಷ್ಟಿಸಿದ್ದ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್, ಈ ಬಾರಿ ಒಂದು ಹೆಜ್ಜೆ ಮುಂದೆ ಹೋಗಿದ್ದು ಮಾಡಿದ್ದೇನು ಗೊತ್ತಾ??ಕಾಂಗ್ರೆಸ್ ಕಾರ್ಯಕ್ರಮದ ಸಾಧನಾ ಪುಸ್ತಕವನ್ನು ಮರಾಠಿಯಲ್ಲಿ ಮುದ್ರಣ ಮಾಡಿಸಿ ಮನೆ ಮನೆಗೆ ಹಂಚಿರುವ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ!!

ಹೌದು… ಬೆಳಗಾವಿ ವಿಚಾರದ ಬಗ್ಗೆ ಮಾತನಾಡಿದ್ದ ಲಕ್ಷ್ಮೀ ಹೆಬ್ಬಾಳ್ಕರ್, “ಒಂದು ವೇಳೆ ಸುಪ್ರೀಂ ಕೋರ್ಟ್, ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದ್ದು ಎಂದು ತೀರ್ಪು
ನೀಡಿದರೆ, ನಾನೇ ಮೊದಲು ಮಹಾರಾಷ್ಟ್ರ ಧ್ವಜ ಹಿಡಿದು ಜೈ ಮಹಾರಾಷ್ಟ್ರ ಎಂದು ಕೂಗುತ್ತೇನೆ!!! ಇಲ್ಲಿನ ಯಾವ ರಾಜಕಾರಣಿಗಳಿಗೂ ಈ ಬಗ್ಗೆ ಹೇಳುವ
ಧೈರ್ಯವಿಲ್ಲ. ಆದರೆ ನನಗೆ ಯಾರ ಭಯವೂ ಇಲ್ಲ” ಎಂದು ಹೇಳುವ ಮೂಲಕ ಕನ್ನಡಿಗರನ್ನು ಕೆಣಕುವ ಕೆಲಸ ಮಾಡಿದ್ದ ಇವರು ತಮ್ಮ ಮರಾಠಿ ಮೇಲಿರುವ
ಪ್ರೀತಿಯನ್ನು ತೋರಿಸಿದ್ದರು!!

ಈ ಬಗ್ಗೆ ಚರ್ಚೆಗೆ ಗ್ರಾಸವಾಗಿದ್ದ ಇವರು,ತಮ್ಮ ಈ ಹೇಳಿಕೆಯನ್ನು ಮಾಧ್ಯಮಗಳು ತಿರುಚುತ್ತೀವೆ ಎಂದು ಹೇಳಿದ್ದು, ಸುಪ್ರೀಂ ಕೋರ್ಟ್ ಆದೇಶ ನೀಡಿದರೆ ಆಗ ಅದನ್ನು ನಾವೆಲ್ಲರೂ ಒಪ್ಪಿಕೊಳ್ಳಬೇಕಾಗುತ್ತದೆ ಎಂದಷ್ಟೇ ಹೇಳಿದ್ದೇನೆ ಎಂದಿದ್ದರು!! ಆದರೆ, ತಮ್ಮ ವಿವಾದಕ್ಕೆ ಎಂಇಎಸ್ ಮೂಲಕ ತೇಪೆ ಹಚ್ಚುವ ಕಾರ್ಯ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಎಂಇಎಸ್ ನಂತಹ ಪಕ್ಷಗಳು ಬೆಳಗಾವಿ ವಿಚಾರದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿವೆ. ರಾಜಕೀಯ ಪಕ್ಷಗಳ ನಾಟಕಕ್ಕೆ ಮರುಳಾಗದಿರಿ ಎಂದು ನಾನು ಹೇಳಿದ್ದೆ. ಹೀಗಾಗಿ ಇದು ರಾಜ್ಯದ್ರೋಹದ ಹೇಳಿಕೆಯಲ್ಲ ಹಾಗಾಗಿ ನಾನು ಕರ್ನಾಟಕದ ರಾಜ್ಯದ ಮಗಳಾಗಿದ್ದೇನೆ ಎಂದೆಲ್ಲಾ ಹೇಳಿದವರು ಈಗ ಮಾಡಿದ್ದು ರಾಜ್ಯದ್ರೋಹದ ಕೆಲಸ ಅಲ್ವೇ??

ಆದರೆ ಇದೀಗ, ಕಾಂಗ್ರೆಸ್ ಪಕ್ಷದಿಂದ ಕನ್ನಡ ಭಾಷೆಯಲ್ಲಿ ಮುದ್ರಿಸಿ ನೀಡಿದ್ದ ಸಾಧನಾ ಪುಸ್ತಕವನ್ನು ಹೆಬ್ಬಾಳ್ಕರ್ ಮರಾಠಿಯಲ್ಲಿ ಮುದ್ರಿಸಿದ್ದಾರೆ!! ಅಲ್ಲದೇ, ಬೆಳಗಾವಿ ಗ್ರಾಮೀಣ ಮತ ಕ್ಷೇತ್ರದಲ್ಲಿ ಈ ಪುಸ್ತಕಗಳನ್ನ ಹಂಚಲಾಗಿದ್ದು, ಮರಾಠಿ ಮತಗಳಿಗಾಗಿ ಈ ರೀತಿ ಮಾಡಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ!! ಅಷ್ಟೇ ಅಲ್ಲದೇ, ಈ ಹಿಂದೆ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿಸಿದ್ರೆ ಜೈ ಎನ್ನುವೆ ಎಂದಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಈ ಬಾರಿ ಅಧಿಕಾರಕ್ಕಾಗಿ ಕನ್ನಡವನ್ನೇ ಮರೆತಿದ್ದು ಮಾತ್ರ ವಿಪರ್ಯಾಸ!!

ಆದರೆ ಈ ಹಿಂದೆ ಕಾಂಗ್ರೆಸ್ ಪಕ್ಷ ಹಿಂದಿ ಭಾಷೆಯ ಮೇಲೆ ಅದೆಷ್ಟೋ ಹೋರಾಟ ಮಾಡಿತು ಎಂದರೆ ಕನ್ನಡ ಭಾಷೆಯ ಮೇಲೆ ಪ್ರೀತಿ ಉಕ್ಕಿ ಹರಿಯುತ್ತಿದೆ ಎನ್ನುವಷ್ಟರ ಮಟ್ಟಿಗೆ ಫೋಸ್ ನೀಡಿದ್ದ ಇವರು, ಇದೀಗ ತಮ್ಮ ಪಕ್ಷದಲ್ಲಿಯೇ ಕನ್ನಡ ಭಾಷೆಯನ್ನು ಧಿಕ್ಕರಿಸಿ ಬೇರೊಂದು ಭಾಷೆಯ ಮೇಲೆ ಒಲವು ತೋರಿಸುತ್ತಿದ್ದಾರೆ ಎಂದರೆ ಇವರಿಗೆಲ್ಲಾ ಏನು ಹೇಳಬೇಕು??

ನಕಲಿ ಕನ್ನಡ ಪ್ರೇಮವನ್ನು ಹೊತ್ತಿರುವ ಸಿದ್ದರಾಮಯ್ಯ ಸರಕಾರ ರಾಜ್ಯದೊಳಗಡೆ ಅಪಾರವಾದ ದ್ವೇಷವನ್ನು ಹುಟ್ಟಿಸುತ್ತಿದೆ ಎಂದನಿಸುತ್ತಿದೆ!! ಈ ಬಗ್ಗೆ ಯಾವುದೇ ರೀತಿಯ ಹೇಳಿಕೆ ನೀಡದೆ ಸುಮ್ಮನೆ ಕೂತಿರುವ ಕಾಂಗ್ರೆಸ್ ಮುಖಂಡರು, ಕರ್ನಾಟದಲ್ಲಿ ಹಿಂದಿ ವಿಚಾರವಾಗಿ ನಾನಾ ಹೇಳಿಕೆಯನ್ನು ನೀಡಿದವರು ಇಂದು ನಿಮ್ಮದೇ ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಎನಿಸಿಕೊಂಡವರು ಬೇರೊಂದು ಭಾಷೆಯ ಮೇಲೆ ತೋರಿಸುವ ವ್ಯಾಮೋಹಕ್ಕೆ ಏನಂತೀರಾ??

ನಿಮ್ಮ ನಕಲಿ ಭಾಷಾ ಪ್ರೇಮವನ್ನು ರಾಜ್ಯದ ಜನತೆಯೆದರು ತೋರಿಸಿ, ಇಂದು ನಿಮ್ಮದೇ ಪಕ್ಷದವರು ಬೇರೊಂದು ಭಾಷೆಯ ಮೇಲೆ ಪ್ರೀತಿ ಮೆರೆದು, ನಾನು
ಕರ್ನಾಟಕದ ಮಗಳು ಎಂದು ಹೇಳುತ್ತಿದ್ದಾರೆ ಅಂದರೆ ಏನೆನ್ನಬೇಕು?? ಸಾಕು.. ನಿಮ್ಮ ನಾಟಕ!! ಜನರು ಭಾಷೆ ಭಾಷೆಯ ನಡುವೆ ಕಚ್ಚಾಟ ಆರಂಭಿಸುವ
ಉದ್ದೇಶವನ್ನೇನಾದರೂ ಸೃಷ್ಟಿಸಿದ್ದೀರೋ ಹೇಗೆ?? ಅಂತೂ ಇಂತೂ ನಮ್ಮ ಲಕ್ಷ್ಮೀ ಹೆಬ್ಬಾಳ್ಕರ್ ಈ ಬಾರಿ ತಮ್ಮ ಅಧಿಕಾರಕ್ಕಾಗಿ ಕನ್ನಡವನ್ನೇ ಮರೆತಿರುವುದು ಮಾತ್ರ ವಿಪರ್ಯಾಸ!!

ಮೂಲ: Vijayavani – Source

– ಅಲೋಖಾ

Tags

Related Articles

Close