ಪ್ರಚಲಿತ

ವಿಶೇಷ ಸುದ್ದಿ!! ಕೊನೆಗೂ ಭಾರತಕ್ಕೆ ಜಗತ್ತಿನ ಅತ್ಯಂತ ವೇಗದ ಬುಲೆಟ್ ಟ್ರೈನ್ ಪರಿಚಯಿಸಿದ ಮೋದಿ! ಮೋದಿ – ಅಬೆ ಜಾದೂ ರೈಲಿನ ವಿಶೇಷಗಳೇನು ಗೊತ್ತೇ?!

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸಿನ ಕೂಸು ಯೋಜನೆಯಾದ ಬುಲೆಟ್ ರೈಲು ಯೋಜನೆಗೆ ಕೊನೆಗೂ ಚಾಲನೆ ಸಿಕ್ಕಿದೆ. ಪ್ರಧಾನಿ ಮೋದಿ ಹಾಗೂ
ಜಪಾನ್ ಪ್ರಧಾನಿ ಶಿಂಜೋ ಅಬೆ ಸಾಬರಮತಿ ರೈಲ್ವೆ ನಿಲ್ದಾಣದ ಬಳಿ ಮುಂಬಯಿ-ಅಹಮದಾಬಾದ್ ನಡುವಿನ ಭಾರತದ ಮೊದಲ ಬುಲೆಟ್ ರೈಲು ಯೋಜನೆಗೆ
ಅಡಿಗಲ್ಲು ಹಾಕಿದ್ದಾರೆ. ಭಾರತದಲ್ಲಿ ಅತ್ಯಾಧುನಿಕ ರೈಲು ಸೇವೆ ಆರಂಭಿಸಬೇಕೆನ್ನುವಾಗ ಎಷ್ಟು ಮಂದಿ ತಮಾಷೆ ಮಾಡಿದ್ದರೆಂದರೆ ಅದೊಂದು ಹಾಸ್ಯಾಸ್ಪದ ವಿಷಯವಾಗಿತ್ತು. ಬಡತದಲ್ಲಿ ಬಳಲುತ್ತಿರುವ ಭಾರತಕ್ಕೆ ಇಂಥಾ ಐಷಾರಾಮಿ ರೈಲು ಬೇಕಾ ಎಂದು ತಮಾಷೆ ಮಾಡುವವರಿದ್ದರು. ಆದರೆ ಬುಲೆಟ್ ಟ್ರೈನ್ ಈಗಾಗಲೇ ಭಾರತದಲ್ಲಿ ಯಶಸ್ವಿಯಾಗಿರುವುದರಿಂದ ಮೋದಿಯ ನಡೆ ಎಲ್ಲರ ಬಾಯಿಯನ್ನು ಮುಚ್ಚಿಸಿದ್ದಾರೆ. ಇಂದು ರಸ್ತೆ ಅಪಘಾತ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬುಲೆಟ್ ಟ್ರೈನ್ ಭಾರತಕ್ಕೆ ತೀರಾ ಅಗತ್ಯವಾದ ಸಾರಿಗೆ ವ್ಯವಸ್ಥೆ ಎಂದು ಬಣ್ಣಿತವಾಗಿದೆ.

ಅಹ್ಮದಾಬಾದ್‍ನ ಅಥ್ಲೆಟಿಕ್ ಮೈದಾನದಲ್ಲಿ ಏರ್ಪಡಿಸಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಉಭಯ ನಾಯಕರು ಸ್ವಿಚ್ ಪ್ರೆಸ್ ಮಾಡುವ ಮೂಲಕ
ಶಂಕುಸ್ಥಾಪನೆ ಮಾಡಿದರು. ಬಳಿಕ ಉಭಯ ನಾಯಕರಿಗೆ ಅಧಿಕಾರಿಗಳು ಬುಲೆಟ್ ರೈಲಿನ ಹಳಿ ಮಾರ್ಗದ ಮಾದರಿಯ ಮೂಲಕ ಯೋಜನೆಯ ಕುರಿತು ಮಾಹಿತಿ ನೀಡಿದರು. ಅಹ್ಮದಾಬಾದ್ ನಿಂದ ಮುಂಬೈ ನಡುವಿನ ಸುಮಾರ 509 ಕಿ.ಮೀ ದೂರವನ್ನು ಈ ಅತಿ ವೇಗದ ರೈಲು ಕೇವಲ 2.58 ಗಂಟೆಗಳಲ್ಲಿ ತಲುಪಲಿದೆ. ಗುಜರಾತ್ ನ ಅಹ್ಮದಾಬಾದ್‍ನಿಂದ ಮುಂಬೈಗೆ ಪ್ರಪ್ರಥಮ ಬುಲೆಟ್ ರೈಲು ಸಂಚಾರ ಮಾಡಲಿದ್ದು, ಈ ಯೋಜನೆ ಪೂರ್ಣಗೊಳ್ಳಲು 2022ರವರೆಗೂ ಕಾಲಮಿತಿ ವಿಧಿಸಲಾಗಿದೆ.

ಈ ಬೃಹತ್ ಯೋಜನೆ ಒಟ್ಟು 108 ಲಕ್ಷ ಕೋಟಿ ಹಣ ಖರ್ಚಾಗಲಿದ್ದು, ಜಪಾನ್ ಸರ್ಕಾರ ಈ ಯೋಜನೆಗಾಗಿ ಶೇ.81 ರಷ್ಟು ಅಂದರೆ ಸುಮಾರು 88 ಸಾವಿರ ಕೋಟಿ ಹಣ ಸಾಲ ನೀಡಲು ಸಿದ್ಧವಾಗಿದೆ. ಇಂತಹ ಸಾಲಗಳಿಗೆ ವಿಶ್ವಬ್ಯಾಂಕ್ ವಾರ್ಷಿಕ ಶೇ.5 ರಿಂದ 7ರವರೆಗೂ ಬಡ್ಡಿ ವಿಧಿಸುತ್ತದೆ. ಆದರೆ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು ಹಾಲಿ ಬುಲೆಟ್ ರೈಲು ಯೋಜನೆ ಭಾರತ-ಜಪಾನ್ ಸ್ನೇಹದ ದ್ಯೋತಕವಾಗಿರುವುದರಿಂದ ಶೇ.0.1ರಷ್ಟು ಬಡ್ಡಿದರಕ್ಕೆ ಸಾಲ ನೀಡಿದ್ದಾರೆ.

ವಿಶ್ವ ಬ್ಯಾಂಕ್ ಸಾಲದ ಗಡುವು 25-35 ವರ್ಷಗಳಾಗಿದೆ, ಜಪಾನ್ ಸರ್ಕಾರ ಭಾರತಕ್ಕೆ 15 ವರ್ಷಗಳ ಹೆಚ್ಚುವರಿ ಕಾಲ ಮಿತಿಯನ್ನೂ ನೀಡಿದೆ. ಅದರಂತೆ ಭಾರತ ಸರ್ಕಾರ 50 ವರ್ಷಗಳಲ್ಲಿ ಈ ಸಾಲವನ್ನು ಜಪಾನ್ ಸರ್ಕಾರಕ್ಕೆ ವಾಪಸ್ ಮಾಡಬೇಕಿದೆ. ಸುಮಾರು 500 ಕಿ.ಮೀ. ಮಾರ್ಗದ ಈ ರೈಲು ಯೋಜನೆ 2022ಕ್ಕೆ ಮುಕ್ತಾಯವಾಗುವ ನಿರೀಕ್ಷೆಯಿದೆ. ಮೊದಲ ಬುಲೆಟ್ ಟ್ರೇನ್‍ಗೆ ಸಂಬಂಧಿಸಿದಂತೆ ಗುಜರಾತ್‍ನ ವಡೋದರಾ ಬಳಿ 5 ಹೆಕ್ಟೇರ್ ಪ್ರದೇಶದಲ್ಲಿ ಬೃಹತ್ ತರಬೇತಿ ಕೇಂದ್ರ ತಲೆ ಎತ್ತಲಿದೆ. 600 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಕೇಂದ್ರದಲ್ಲಿ ಬುಲೆಟ್ ಟ್ರೇನ್‍ಗಳ ಪ್ರಾಯೋಗಿಕ ಪರೀಕ್ಷೆ ನಡೆಯಲಿದೆ.

ಬುಲೆಟ್ ಟ್ರೈನ್‍ನಿಂದ ಆಗುವ ಲಾಭವೇನು ಗೊತ್ತಾ?

ಉಕ್ಕು, ಸಿಮೆಂಟ್ ಕಂಪೆನಿಯ ಬೆಳವಣಿಗೆ ಈ ರೈಲು ಯೋಜನೆಗೆ ಒಂದು ಅಂದಾಜಿನ ಪ್ರಕಾರ 20 ಲಕ್ಷ ಟನ್ ಸಿಮೆಂಟ್ ಮತ್ತು 15 ಲಕ್ಷ ಮೆಟ್ರಿಕ್ ಟನ್ ಉಕ್ಕು ಈ ಯೋಜನೆಗೆ ಬೇಕಾಗಿದೆ. ಭಾರೀ ಸಿಮೆಂಟ್ ಮತ್ತು ಉಕ್ಕು ಬೇಕಾಗಿದೆ. ಹೀಗಾಗಿ ಉಕ್ಕು ಮತ್ತು ಸಿಮೆಂಟ್ ಕ್ಷೇತ್ರದಲ್ಲಿ ದೊಡ್ಡಮಟ್ಟಕ್ಕೆ ಬೇಡಿಕೆ ಸೃಷ್ಟಿಯಾಗುತ್ತದೆ. ಇದಲ್ಲದೆ ಇವುಗಳನ್ನು ಸಾಗಣೆ ಮಾಡುವು ಸಾರಿಗೆ ಕ್ಷೇತ್ರದಲ್ಲೂ ವ್ಯವಹಾರ ಕುದುರುತ್ತದೆ. ಆದ್ದರಿಂದ ಉಕ್ಕು, ಸಿಮೆಂಟ್ ಕ್ಷೇತ್ರದಲ್ಲೂ ಬೃಹತ್ ಉದ್ಯೋಗ ಸೃಷ್ಟಿಯಾಗಲಿದೆ.

ಬೃಹತ್ ಉದ್ಯೋಗ ಸೃಷ್ಟಿ!!

ಈ ಬುಲೆಟ್ ರೈಲಿನ ಕಾಮಗಾರಿ ವೇಳೆ 20,000 ಜನರಿಗೆ ಉದ್ಯೋಗ ಸಿಗಲಿದೆ. ಒಮ್ಮೆ ರೈಲು ಸೇವೆ ಆರಂಭಗೊಂಡ ನಂತರ 4 ಸಾವಿರ ಜನರು ರೈಲಿನ
ನಿರ್ವಹಣೆ ಬೇಕಾಗಿದ್ದು ಅಷ್ಟೂ ಜನರಿಗೆ ಕೆಲಸ ಸಿಗಲಿದೆ. ಇದಲ್ಲದೆ 16,000 ಜನರಿಗೆ ಪರೋಕ್ಷ ಉದ್ಯೋಗ ಸಿಗಲಿದೆ. ಹೀಗೆ ಸಾವಿರಾರು ಮಂದಿ ಉದ್ಯೋಗ
ಗಳಿಸಲಿದ್ದಾರೆ.ಜೊತೆಗೆ ದೇಶದಲ್ಲಿ ಇನ್ನಷ್ಟು ಬುಲೆಟ್ ಟ್ರೈನ್‍ಗಳ ಪ್ರಸ್ತಾಪ ಇರುವುದರಿಂದ ಇನ್ನಷ್ಟು ಉದ್ಯೋಗಗಳು ಸೃಷ್ಟಿಯಾಗಲಿದೆ. ಯೋಜನೆಯ ಹೈಸ್ಪೀಡ್ ರೈಲಿನ ತರಬೇತಿ ಕೇಂದ್ರವನ್ನು ವಡೋದರಾದಲ್ಲಿ ಸ್ಥಾಪಿಸಲಾಗಿದ್ದು, ಇದು ಸುಸಜ್ಜಿತ ಕೇಂದ್ರವಾಗಿದೆ. ಜಪಾನ್ ನಲ್ಲಿರುವ ತರಬೇತಿ ಕೇಂದ್ರದಂತೆ ಇಲ್ಲೂ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ. 2020ರ ವೇಳೆಗೆ ಈ ಕೇಂದ್ರ ತನ್ನ ಕಾರ್ಯ ಆರಂಭಿಸಲಿದ್ದು, ಮುಂದಿನ ಮೂರು ವರ್ಷಗಳಲ್ಲಿ 4 ಸಾವಿರ ಸಿಬ್ಬಂದಿಗೆ ತರಬೇತಿ ನೀಡಲಿದೆ. ಇಲ್ಲಿ ತರಬೇತಿ ಪಡೆದವರು ನಂತರ ಈ ಯೋಜನೆಯ ಕಾರ್ಯಾಚರಣೆಯನ್ನು ನಿಭಾಯಿಸಲಿದ್ದಾರೆ. ಇದರ ಜತೆಗೆ ಭಾರತೀಯ ರೈಲ್ವೆಯ 300 ಯುವ ಅಧಿಕಾರಿಗಳಿಗೆ ಜಪಾನಿನಲ್ಲಿ ಹೈಸ್ಪೀಡ್ ರೈಲಿನ ತಂತ್ರಜ್ಞಾನದ ಬಗ್ಗೆ ತರಬೇತಿ ನೀಡಲಾಗಿದೆ.

ಭಾರತದ ತಂತ್ರಜ್ಞಾನ ಅಭಿವೃದ್ಧಿ!!

ಉದ್ಯೋಗ ಸೃಷ್ಟಿ ಮಾತ್ರವಲ್ಲದೆ ಬುಲೆಟ್ ರೈಲಿನಿಂದ ಹಲವು ಕ್ಷೇತ್ರಗಳಲ್ಲಿರುವ ಅತ್ಯಾಧುನಿಕ ತಂತ್ರಜ್ಞಾನಗಳು ಭಾರತಕ್ಕೆ ಕಾಲಿಡಲಿವೆ. ಟ್ರಾಕ್ ಅಳವಡಿಕೆ, ಸಿಗ್ನಲ್ ಉಪಕರಣಗಳು, ವಿದ್ಯುತ್ ಸರಬರಾಜು, ಸಂವಹನ ತಂತ್ರಜ್ಞಾನಗಳ ಅಳವಡಿಕೆ, ವಿಶ್ವದರ್ಜೆಯ ತಂತ್ರಜ್ಞಾನಗಳ ಬಳಕೆ ಭಾರತದಲ್ಲೂ ಆರಂಭವಾಗಲಿದೆ. ಇದನ್ನು ಮುಂದೆ ಭಾರತೀಯ ರೈಲ್ವೇಯಲ್ಲೂ ಅಳವಡಿಸಿಕೊಳ್ಳಬಹುದಾಗಿದೆ.

ಈ ಯೋಜನೆಯ ಮತ್ತೊಂದು ಪ್ರಮುಖ ಅಂಶ, ಈ ಯೋಜನೆಗೆ ಅಗತ್ಯವಿರುವ ಎಲ್ಲಾ ಭಾಗಗಳ ನಿರ್ಮಾಣ ಭಾರತದಲ್ಲೇ ಆಗಲಿದೆ. ಎರಡು ದೇಶಗಳ ನಡುವಣ
ಒಪ್ಪಂದದಲ್ಲಿ `ಸ್ಥಳೀಯವಾಗಿ ನಿರ್ಮಾಣ’ ಹಾಗೂ `ತಂತ್ರಜ್ಞಾನ ವಿನಿಮಯ’ ಎಂಬ ಉದ್ದೇಶಗಳನ್ನು ಸೇರಿಸಲಾಗಿದ್ದು, ಈ ನಿಯಮಾವಳಿಯ ಪ್ರಕಾರ ಈ
ಯೋಜನೆಯನ್ನು ಜಾರಿಗೆ ತರಲು ಕಾರ್ಯಯೋಜನಾ ತಂಡ ರಚಿಸಲಾಗಿದೆ. ಇದರಲ್ಲಿ ಕೈಗಾರಿಕಾ ಯೋಜನೆ ಮತ್ತು ಉತ್ತೇಜನ ವಿಭಾಗ (ಡಿಐಪಿಪಿ) ಮತ್ತು ಜಪಾನ್ ವಿದೇಶ ವ್ಯಾಪಾರ ಸಂಸ್ಥೆ (ಜೆಇಟಿಆರ್ ಒ) ಅನ್ನು ನೇಮಿಸಲಾಗಿದೆ. ಈ ತಂಡದಲ್ಲಿ ಭಾರತೀಯ ಕೈಗಾರಿಕೆ, ಜಪಾನ್ ಕೈಗಾರಿಕೆ, ಡಿಐಪಿಪಿ ಮತ್ತು ಜೆಇಟಿಆರ್ ಒ ಎಂಬ ನಾಲ್ಕು ಉಪ ವಿಭಾಗಗಳು ಭಾರತದಲ್ಲಿ ನಿರ್ಮಾಣವಾಗಲಿರುವ ಉಪಕರಣಗಳ ಕ್ಷಮತೆಯನ್ನು ಪರೀಕ್ಷಿಸಲಿವೆ.

ಇಂಧನ ದಕ್ಷ ಬುಲೆಟ್ ರೈಲಿನಂದ ಸಂಚಾರ ಸುಲಭ ಮತ್ತು ಸುಗಮವಾಗಲಿದ್ದು ನಗರದ ಹೊರಗೆಯೂ ಜನರು ಆರಾಮವಾಗಿ ಜೀವಿಸಬಹುದಾಗಿದೆ. ಹೀಗಾಗಿ ಪ್ರಮುಖ ನಗರಗಳ ಜತೆಗೆ ಬುಲೆಟ್ ರೈಲು ನಿಲ್ದಾಣಗಳ ಸುತ್ತ ಮುತ್ತಲೂ ನಗರಗಳು ಅಭಿವೃದ್ಧಿಯಾಗಲಿವೆ. ಇವು ನಗರಗಳ ಸಂಚಾರ ದಟ್ಟಣೆ, ಒತ್ತಡವನ್ನು ಕಡಿಮೆ ಮಾಡಲಿದೆ. ಇಷ್ಟಲ್ಲದೆ, ಇಂಧನ ಉಳಿತಾಯವಾಗುತ್ತದೆ. ಪರಿಸರ ಮಾಲಿನ್ಯವೂ ಕಡಿಮೆಯಾಗುತ್ತದೆ.

ಸಮಯದ ಉಳಿತಾಯ
ಬುಲೆಟ್ ರೈಲಿನಿಂದ ಸಮಯ ದೊಡ್ಡ ಮಟ್ಟಕ್ಕೆ ಉಳಿತಾಯವಾಗಲಿದೆ. ಮುಂಬೈ-ಅಹಮದಾಬಾದ್ ನಡುವಿನ ರೈಲಿನಿಂದ ಮುಂಬೈ ಮತ್ತು ಸಾಬರಮತಿ ನಡುವಿನ ಪ್ರಯಾಣದ ಅವಧಿ 2 ಗಂಟೆಗೆ ಇಳಿಕೆಯಾಗಲಿದೆ. ಸದ್ಯ ಇದೇ ದೂರವನ್ನು ಕ್ರಮಿಸಲು ಸಾಮಾನ್ಯ ರೈಲುಗಳು 8 ಗಂಟೆಗಳನ್ನು ತೆಗೆದುಕೊಳ್ಳುತ್ತಿವೆ. ಸದ್ಯ ಈ ಮಾರ್ಗದಲ್ಲಿ 40,000 ಜನರು ಪ್ರಯಾಣಿಸುತ್ತಿದ್ದು ಇನ್ನು ಮುಂದೆ ಪ್ರತಿದಿನ 1,56,000 ಜನರು ಪ್ರಯಾಣಿಸಲಿದ್ದಾರೆ.

ಸುರಕ್ಷಿತ ಪ್ರಯಾಣ

ಜಪಾನಿನ ಶಿಂಕಾನ್ಸೆನ್ ಕಂಪೆನಿ ಇದರ ವಿನ್ಯಾಸ ಮಾಡಲಿದೆ. ಈ ಕಂಪನಿ ಕಳೆದ 50 ವರ್ಷಗಳಲ್ಲಿ ಒಂದೇ ಒಂದು ಅಪಘಾತಕ್ಕೆ ಗುರಿಯಾಗದ ದಾಖಲೆಯನ್ನು
ಹೊಂದಿಲ್ಲ. ಸದ್ಯದ ಯೋಜನೆಯಲ್ಲೂ ಪ್ರಾಕೃತಿಕ ವೈಫಲ್ಯವನ್ನು ಮೆಟ್ಟಿ ನಿಲ್ಲುವ ವಿನ್ಯಾಸವನ್ನು ಮಾಡಲಾಗುತ್ತದೆ. ಯಾವುದೇ ಲೆವೆಲ್ ಕ್ರಾಸಿಂಗ್ ಗಳಿರುವುದಿಲ್ಲ.
ಭೂಕಂಪ ಉಂಟಾದಾಗ ಮೊದಲೇ ಸೂಚನೆ ನೀಡುವ ವ್ಯವಸ್ಥೆಯೂ ಇದರಲ್ಲಿದೆ. ಈ ಸಂದರ್ಭದಲ್ಲಿ ರೈಲು ತನ್ನಿಂತಾನೆ ನಿಲ್ಲುತ್ತದೆ. ಆದ್ದರಿಂದ ಇದು ಸುರಕ್ಷಿತ
ಪ್ರಯಾಣ ಆಗಲಿದೆ.

ಇನ್ನಿತರ ಲಾಭಗಳು:

ಸಾರಿಗೆ ವ್ಯವಸ್ಥೆ ಎಂದರೆ ಅದೊಂದು ಸಾಮೂಹಿಕ ಒಕ್ಕೂಟ ವ್ಯವಸ್ಥೆಯಾಗುತ್ತದೆ. ಸಾರಿಗೆ ಬೆಳವಣಿಗೆಯಾಗುತ್ತಿದ್ದಂತೆ ಇನ್ನಿತರ ಕ್ಷೇತ್ರದಲ್ಲೂ ಭಾರತ
ಬೆಳವಣಿಗೆಯಾಗುತ್ತದೆ. ದೂರದೃಷ್ಟಿಯಿಂದ ನೋಡಿದರೆ ಭಾರತದ ಅಭಿವೃದ್ದಿ, ಇನ್ನಿತರ ಉದ್ಯೋಗ ಸೃಷ್ಟಿ, ಉದ್ಯಮ ಕ್ಷೇತ್ರ, ಮುಖ್ಯವಾಗಿ ಭಾರತೀಯರಿಗೆ ಇದರಿಂದ ಸಾಕಷ್ಟು ಲಾಭ ಸಿಗಲಿದೆ.

ಅಬೆ ಭೇಟಿಯಿಂದ ಇನ್ನಷ್ಟು ಲಾಭಗಳಿವೆ!

ಅಬೆ ಭಾರತ ಭೇಟಿಯಿಂದ ಇನ್ನು ಅನೇಕ ಲಾಭ ಸಿಗಲಿದೆ. ಇಂದು ಗಾಂಧಿನಗರದಲ್ಲಿ ನಡೆಯಲಿರುವ 12ನೇ ಭಾರತ-ಜಪಾನ್ ದ್ವಿಪಕ್ಷೀಯ ಶೃಂಗಸಭೆಯಲ್ಲಿ ಮೋದಿ ಮತ್ತು ಅಬೆ ಪಾಲ್ಗೊಳ್ಳಲಿದ್ದಾರೆ. ಆ ಬಳಿಕ ಭಾರತ-ಜಪಾನ್ ವ್ಯಾಪಾರೋದ್ಯಮಿಗಳ ಸಭೆ ನಡೆಯಲಿದೆ. ಶೃಂಗಸಭೆ ನೇಪಥ್ಯದಲ್ಲಿ ಉಭಯ ದೇಶಗಳ ವ್ಯಾಪಾರ ಸಹಕಾರಕ್ಕೆ ಸಂಬಂದಿಸಿದಂತೆ 15 ಒಪ್ಪಂದಗಳಿಗೆ ಸಹಿ ಬೀಳಲಿದೆ. ಭಾರತಕ್ಕೆ ಕಡಿಮೆ ಬಡ್ಡಿ ದರದಲ್ಲಿ ಸಾಲ, ಭಾರತದಲ್ಲಿ ಜಪಾನ್ ಹೂಡಿಕೆ ಹೆಚ್ಚಳ ಸೇರಿದಂತೆ ಹಲವು ಒಪ್ಪಂದಗಳು ಇದರಲ್ಲಿ ಸೇರಿವೆ. ಈಗಾಗಲೇ 15 ಜಪಾನ್ ಕಂಪನಿಗಳು ಭಾರತದಲ್ಲಿ ಹೂಡಿಕೆಗೆ ಆಸಕ್ತಿ ತೋರಿವೆ ಎಂದು ಗುಜರಾತ್ ಮುಖ್ಯ ಕಾರ್ಯದರ್ಶಿ ಜೆ ಎನ್ ಸಿಂಗ್ ಹೇಳಿದ್ದಾರೆ.

ವಿಶೇಷ ವಿಮಾನ ಖರೀದಿ ಒಪ್ಪಂದದ ಸಾಕಾರ!!

ಭಾರತ -ಜಪಾನ್ ರಕ್ಷಣಾ ಒಪ್ಪಂದದ ಭಾಗವಾಗಿ, `ಫೆÇೀರ್ಸ್ ಯು.ಎಸ್-2′ ಎಂಬ ವಿಶೇಷ ವಿಮಾನ ಖರೀದಿ ಒಪ್ಪಂದವೂ ಗುರುವಾರ ಅಂತಿಮಗೊಳ್ಳುವ
ಸಾಧ್ಯತೆಯಿದೆ. ‘ಫೆÇೀರ್ಸ್ ಯು.ಎಸ್.-2 ವಿಮಾನವು ನೌಕಾಪಡೆಯು ಸ್ವಯಂರಕ್ಷಣೆ ವಿಮಾನವಾಗಿದ್ದು, ಇದು ನೀರು ಹಾಗೂ ಭೂಮಿ ಎರಡೂ ಕಡೆಯಿಂದ ಟೇಕಾಫ್ ಆಗುವ ಮತ್ತು ಲ್ಯಾಂಡ್ ಆಗುವ ಸಾಮರ್ಥ್ಯ ಹೊಂದಿದೆ. ಜಪಾನ್‍ನ ಶಿನ್ ಮಯ್ವಾ ಇಂಡಸ್ಟ್ರೀಸ್ ಸಂಸ್ಥೆ ತಯಾರಿಸುವ ಇಂತಹ 12 ವಿಮಾನಗಳನ್ನು 1.3 ಶತಕೋಟಿ ಡಾಲರ್ ವೆಚ್ಚದಲ್ಲಿ ಭಾರತ ಖರೀದಿಸಲಿದೆ. ಇನ್ನು 18 ಇಂತಹ ವಿಮಾನಗಳನ್ನು ಜಪಾನ್ ಸಹಯೋಗದಲ್ಲಿ ಮೇಕ್ ಇನ್ ಇಂಡಿಯಾ ಅಭಿಯಾನದಡಿ ದೇಶೀಯವಾಗಿ ತಯಾರಿಸಲಾಗುವುದು.

ಅತ್ಯುತ್ತಮ ವೇಗ ಹಾಗೂ ಸೇವೆ: ಮುಂಬೈನಿಂದ ಅಹ್ಮದಾಬಾದ್ ವೆರೆಗೂ ನಿರ್ಮಾಣವಾಗಲಿರುವ ಆ ಹೈಸ್ಪೀಡ್ ರೈಲಿನಲ್ಲಿ ಎರಡು ರೀತಿಯ ಸೇವೆಗಳಿವೆ.
ಮೊದಲನೆಯದ್ದು ರಾಪಿಡ್ ಟ್ರೈನ್- ಇದರಲ್ಲಿ ಮುಂಬೈನಿಂದ ಅಹ್ಮದಾಬಾದ್ ವರೆಗಿನ ಪ್ರಯಾಣದಲ್ಲಿ ಕೇವಲ 2 ನಿಲ್ದಾಣಗಳಲ್ಲಿ ರೈಲನ್ನು ನಿಲ್ಲಿಸಲಾಗುತ್ತದೆ. ಮತ್ತೊಂದು ಸೇವೆಯಲ್ಲಿ ಒಟ್ಟು 10 ನಿಲ್ದಾಣಗಳನ್ನು ಹೊಂದಲಿದೆ. ರಾಪಿಡ್ ಟ್ರೈನ್ ನಲ್ಲಿ ಮುಂಬೈನಿಂದ ಅಹ್ಮದಾಬಾದಿಗೆ ಕೇವಲ 2 ಗಂಟೆ 7 ನಿಮಿಷದಲ್ಲಿ ತಲುಪಿದರೆ, ಮತ್ತೊಂದು ಸೇವೆಯಲ್ಲಿ 2 ಗಂಟೆ 58 ನಿಮಿಷದಲ್ಲಿ ತಲುಪಬಹುದು. ಪ್ರಮುಖ ಸಮಯದಲ್ಲಿ ಪ್ರತಿ ಗಂಟೆಗೆ 3 ಬಾರಿ ಹಾಗೂ ಇತರೆ ಸಮಯದಲ್ಲಿ ಪ್ರತಿ ಗಂಟೆಗೆ ಎರಡು ರೈಲುಗಳಂತೆ ಒಟ್ಟು ಪ್ರತಿನಿತ್ಯ 35 ಬಾರಿ ರೈಲುಗಳು ಸಂಚಾರ ಮಾಡಲಿವೆ. 2023ರ ವೇಳೆಗೆ ಈ ಬುಲೆಟ್ ರೈಲಿನಲ್ಲಿ ಸಂಚಾರ ಮಾಡುವವರ ಪ್ರಮಾಣ 36 ಸಾವಿರ ದಾಟಲಿದೆ ಎಂದು ಅಂದಾಜಿಸಲಾಗಿದೆ.

ಸುರಂಗ ಮಾರ್ಗಗಳಿವು!!
ಇನ್ನು ಬೃಹತ್ ಯೋಜನೆಯ ರೈಲ್ವೇ ಕಾರಿಡಾರ್ ಮುಂಬೈ ನಿಂದ ಅಹಮದಾಬಾದ್ ವರೆಗೆ ಒಟ್ಟು 509 ಕಿ,ಮೀ ಉದ್ಧವಿದ್ದು, ಈ ಪೈಕಿ ಸಮುದ್ರದೊಳಗೆ
ನಿರ್ವಿಸಲಾಗುವ 7 ಕಿ.ಮೀ ಸುರಂಗ ಮಾರ್ಗವನ್ನು ಒಳಗೊಂಡಿದೆ. ಇದಲ್ಲದೆ 21 ಕಿ.ಮೀ ಸುರಂಗ ಮಾರ್ಗವನ್ನು ಈ ಯೋಜನೆ ಒಳಗೊಂಡಿದೆ. ಇನ್ನುಳಿದಂತೆ 156 ಕಿ.ಮೀ. ಮಹಾರಾಷ್ಟ್ರದಲ್ಲಿ, 351 ಕಿ.ಮೀ. ಗುಜರಾತ್ ನಲ್ಲಿ, 2 ಕಿ.ಮೀ. ಡಿ-ಎನ್ ಹವೇಲಿ (ಕೇಂದ್ರಾಡಳಿತ ಪ್ರದೇಶ), 21 ಕಿ.ಮೀ-ಬಿಕೆಸಿ -ಥಾಣೆ (ಸುರಂಗ ಮಾರ್ಗ) ಮತ್ತು 7 ಕಿ.ಮೀ. ಥಾಣೆ ಕ್ರೀಕ್- ವಿರಾರ್ (ಆಳಸಮುದ್ರ ಸುರಂಗ) ಮೂಲಕ ಈ ಯೋಜನೆ ಹಳಿಗಳು ಹಾದುಹೋಗಲಿವೆ.

ನರೇಂದ್ರ ಮೋದಿ ದೇಶ ಸುತ್ತಿ ಸಾರ್ವಜನಿಕರ ತೆರಿಗೆ ಹಣವನ್ನು ಹಾಳು ಮಾಡುತ್ತಿದ್ದಾನೆ ಎನ್ನುವವರಿಗೆ ಮೋದಿ ತನ್ನ ಕಾರ್ಯದ ಮೂಲಕ ಉತ್ತರ ಕೊಟ್ಟಿದ್ದಾರೆ. ಷಹಬ್ಬಾಸ್ ಮೋದಿ!!!

-Chekitan

Tags

Related Articles

Close