ಪ್ರಚಲಿತ

ಅಂಬಾರಿ ಮೆರವಣಿಗೆಯಲ್ಲಿ ಸಾಗುವ ಚಾಮುಂಡೇಶ್ವರಿಗೆ ತಾನು ಕೊಟ್ಟ ಸೀರೆಯನ್ನೇ ಉಡಿಸಬೇಕು! ಇಲ್ಲವಾದರೆ ಹುಷಾರ್! : ಸಿ ಎಮ್ ಪತ್ನಿ

ಬಹುಷಃ ಈಕೆ ಚಾಮುಂಡೇಶ್ವರಿ ದೇವಿಗಿಂತಲೂ ದೊಡ್ಡವಳೇ… ಅಹಂಕಾರಕ್ಕೂ ಒಂದು ಮಿತಿ ಇರಬೇಕು. ಆದರೆ ಆ ದೇವರ ಮುಂದೆಯೇ ಅಹಂಕಾರ ತೋರಿಸಿದ್ರೆ….. ಅಬ್ಬಬ್ಬಾ… ತಾನು ಸಿಎಂ ಪತ್ನಿಯಾದರೇನು… ದೇವಿಗೆ ಭಕ್ತಿಯಿಂದ ಕಾಣಿಕೆಯನ್ನು ಸಮರ್ಪಿಸಬೇಕು… ಆದರೆ ಅಹಂಕಾರದಿಂದ ಕೊಟ್ಟರೆ ಆ ದೇವಿ ಸ್ವೀಕರಿಸಿಯಾಳೇ….

ಮೈಸೂರು ದಸರಾ ವಿಶ್ವವಿಖ್ಯಾತವಾಗಿದೆ. ರಾಕ್ಷಸರನ್ನು ಸಂಹಾರ ಮಾಡಿದ ಆ ದೇವಿಯ ಶಕ್ತಿ ಅಪಾರ. ದಸರಾದಂದು ಅಂಬಾರಿಯಲ್ಲಿರುವ ತಾಯಿ ಚಾಮುಂಡಿಯ ಉತ್ಸವ ಮೂರ್ತಿಗೆ ಪ್ರತಿ ವರ್ಷ ಚೆಂದದ ರೇಷ್ಮೆ ಸೀರೆಯನ್ನು ಉಡಿಸಲಾಗುತ್ತದೆ. ಆದರೆ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗುವ ಚಾಮುಂಡಿ ತಾಯಿಗೆ ಉಡಿಸುವ ಸೀರೆಯ ವಿಚಾರದಲ್ಲಿಯೇ ರಾಜಕೀಯ ಮಾಡುವುದೆಂದರೆ ಇದಕ್ಕಿಂತ ದೊಡ್ಡ ಮಟ್ಟದ ದೌರ್ಭಾಗ್ಯ ಬೇರಿಲ್ಲ. ಸಂಪ್ರದಾಯದ ಪ್ರಕಾರ ಕಳೆದ 15 ವರ್ಷಗಳಿಂದ ಬೆಂಗಳೂರಿನ ಬಳೇಪೇಟೆಯ ವ್ಯಕ್ತಿಯೊಬ್ಬರು ದೇವಿಗೆ ಸೀರೆಯನ್ನು ಹರಕೆ ರೂಪದಲ್ಲಿ ಅರ್ಪಿಸುತ್ತಾ ಬಂದಿದ್ದಾರೆ. ಅದೇ ರೀತಿ ಈ ವರ್ಷವೂ ಸೀರೆಯನ್ನು ಕೊಟ್ಟಿದ್ದಾರೆ.

ಆದರೆ ಈ ಬಾರಿ ಬಳೆಪೇಟೆಯ ವ್ಯಕ್ತಿ ನೀಡಿರುವ ಸೀರೆಯನ್ನು ತಾಯಿ ಚಾಮುಂಡಿಗೆ ಉಡಿಸುತ್ತಿಲ್ಲ. ಇದಕ್ಕೆ ಕಾರಣÉೀನು ಗೊತ್ತಾ? ಈ ಬಾರಿ ತಾಯಿ ಚಾಮುಂಡಿಯ ಉತ್ಸವ ಮೂರ್ತಿಗೆ ಉಡಿಸುತ್ತಿರುವ ಸೀರೆ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಕೊಟ್ಟಿರುವುದು. ತಾಯಿ ಚಾಮುಂಡಿಗೆ ತುಂಬಾ ವರ್ಷಗಳಿಂದ ಬೆಂಗಳೂರಿನ ಬಳೇಪೇಟೆಯ ತಾಯಿ ಚಾಮುಂಡಿ ಭಕ್ತರೊಬ್ಬರು ಸೀರೆಯನ್ನು ಹರಕೆ ರೂಪದಲ್ಲಿ ನೀಡುತ್ತಾ ಬಂದಿದ್ದಾರೆ. ಈ ಬಾರಿಯೂ ಸೀರೆಯನ್ನು ಹರಕೆ ರೂಪದಲ್ಲಿ ನೀಡಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಆದರೆ ಅರ್ಚಕರ ಈ ಮಾತನ್ನು ಒಪ್ಪದ ಸಿಎಂ ಪತ್ನಿ, ನಾವು ಕೊಡುವ ಸೀರೆಯನ್ನೇ ಈ ಬಾರಿ ಉತ್ಸವ ಮೂರ್ತಿಗೆ ಉಡಿಸಬೇಕು ಎಂದು ಪಟ್ಟು ಹಿಡಿದಿದ್ದರು..

ಎಷ್ಟಾದರೂ ಸಿಎಂ ಪತ್ನಿ ಎಂಬ ಕಾರಣಕ್ಕೆ 15 ವರ್ಷಗಳಿಂದ ನಡೆಸಿಕೊಂಡು ಬಂದಿದ್ದ ಸಂಪ್ರದಾಯವನ್ನೇ ಮುರಿದು ಹಾಕಿ ಕೊನೆಗೆ ಸಿಎಂ ಪತ್ನಿಯ ಒತ್ತಡಕ್ಕೆ ಮಣಿದ ದೇವಸ್ಥಾನದ ಅರ್ಚಕರು ಮುಂಗಡವಾಗಿ ಹೆಸರು ನೋಂದಾಯಿಸಿರುವ ವ್ಯಕ್ತಿ ಕೊಟ್ಟ ಸೀರೆ ಬಿಟ್ಟು ಸಿಎಂ ಪತ್ನಿ ನೀಡಿದ ಸೀರೆಯನ್ನೇ ಉಡಿಸಿದ್ದಾರೆ ಎಂದು
ಮಾಧ್ಯಮಗಳಲ್ಲಿ ವರದಿಯಾಗಿದೆ.

ಈ ಸಿಎಂ ಸಿದ್ದರಾಮಯ್ಯನ ಪತ್ನಿ ಪಾರ್ವತಿಗೆ ಏನಾಗಿದೆ? ತಾನು ಕೊಡುವ ಸೀರೆಯನ್ನೇ ಚಾಮುಂಡಿಗೆ ಉಡಿಸಬೇಕೆಂದು ಎಂದು ದರ್ಪದ ಮಾತುಗಳನ್ನು ಆಡುವವರ ಸೊಕ್ಕನ್ನು ಸ್ವತಃ ಆ ಚಾಮುಂಡಿಯೇ ಮುರಿಯಬೇಕು. 15 ವರ್ಷಗಳ ಸಂಪ್ರದಾಯಕ್ಕೆ ತಿಲಾಂಜಿಲಿ ಇಟ್ಟು ಸಿಎಂ ಪತ್ನಿ ಎಂಬ ಕಾರಣಕ್ಕೆ ಆಕೆ ಅಹಂಕಾರದಿಂದ ಕೊಟ್ಟಿರುವ ಸೀರೆಯನ್ನು ಉಡಿಸಿದರೆ ಆ ದೇವಿಗೆ ಸಂತೃಪ್ತಿಯಾದರೂ ಯಾಕಾಗಬೇಕು? ಇದು ಚಾಮುಂಡಿ ಮಾತೆಗೆ ಮಾಡಿದ ಘೋರ ಅಪಚಾರವಲ್ಲದೆ ಸಮಸ್ತ ಹಿಂದೂಗಳಿಗೆ ಮಾಡಿದ ದೊಡ್ಡ ಅವಮಾನವಾಗಿದೆ. ದೇವರ ಬಗ್ಗೆ ಎಳ್ಳಷ್ಟೂ ಭಕ್ತಿ ಇಲ್ಲದ ಸಿಎಂ ಕುಟುಂಬ ತನ್ನ ಸ್ವಪ್ರತಿಷ್ಠೆಗಾಗಿ ದೇವಿಯನ್ನೇ ಬಳಕೆ ಮಾಡಿರುವುದು ಒಂದು ಘೋರ ಅಪರಾಧವಾಗಿದ್ದು, ಈ ಬಗ್ಗೆ ಕರ್ನಾಕಟದ ಸಮಸ್ತ ಜನತೆ ಪ್ರಶ್ನಿಸಬೇಕಾಗಿದೆ. ಅಲ್ಲದೆ ಚಾಮುಂಡಿ ದೇವಿಯ ಮುಂದೆ ಕ್ಷಮೆ ಯಾಚಿಸಬೇಕಾಗಿದೆ.

ಭಕ್ತಿಯಿಂದ ಕೊಟ್ಟರೆ ಅದಕ್ಕೊಂದು ಅರ್ಥವಿದೆ. ಆದರೆ ಭಕ್ತಿಯನ್ನು ಮರೆಮಾಚಿ ದರ್ಪದಿಂದ ಸ್ವಪ್ರತಿಷ್ಠೆ ಮೆರೆದಾಡಿದವರಿಗೆ ಸ್ವತಃ ಆ ಚಾಮುಂಡೇಶ್ವರಿಯೇ ಬುದ್ಧಿ
ಕಲಿಸಬೇಕಾಗಿದೆ. ಯಾಕೆಂದರೆ ಆಕೆಯಿಂದ ದೊಡ್ಡವರು ಈ ಜಗತ್ತಲ್ಲಿ ಯಾರೂ ಇಲ್ಲ. ಆದರೆ ಅಧಿಕಾರದ ಮದದಿಂದ ಸಂಪ್ರದಾಯವನ್ನೇ ಮುರಿದು ತಾನು ಏನು
ಮಾಡಿದ್ರೂ ನಡೆಯುತ್ತದೆ ಎನ್ನುವುವದನ್ನು ಇದು ತೋರಿಸಿಕೊಟ್ಟಂತಾಗಿದೆ.

ಸಿದ್ದರಾಮಯ್ಯನ ಒಳಿತಿಗಾಗಿ ಪ್ರಾರ್ಥಿಸಿ ಅವರ ಪತ್ನಿ ದೇವಿಗೆ ಸೀರೆ ನೀಡಿದ್ದಂತೆ. ಒಳಿತಿಗಾಗಿ ಕಾಪಾಡಬೇಕೆಂದು ಸೀರೆಯನ್ನೇ ನೀಡಬೇಕಿಲ್ಲ. ಭಕ್ತಿಯಿಂದ
ಪ್ರಾರ್ಥಿಸಿದ್ದರೆ ಸಾಕಿತ್ತು. ಆದರೆ ಸಿದ್ದರಾಮಯ್ಯ ದೇವರನ್ನೇ ನಂಬುವುದಿಲ್ಲ. ಮೌಢ್ಯ ನಿಷೇಧ ಕಾಯಿದೆ ಜಾರಿಗೊಳಿಸಲು ತುದಿಗಾಲಲ್ಲಿ ನಿಂತಿರುವ ಸಿದ್ದರಾಮಯ್ಯ, ಆ ಮೂಲಕ ಹಿಂದೂಗಳ ಹಲವಾರು ಸಂಪ್ರದಾಯ, ಆಚರಣೆಗಳಿಗೆ ತಿಲಾಂಜಲಿ ಇಡಲು ಮುಂದಾಗಿದ್ದಾರೆ. ಯಾವುದು ಮೌಢ್ಯ, ಯಾವುದು ಆಚರಣೆ, ಯಾವುದು ಸಂಪ್ರದಾಯ ಎನ್ನುವ ಕನಿಷ್ಠ ಜ್ಞಾನವನ್ನೂ ಹೊಂದಿರದ ಸಿದ್ದರಾಮಯ್ಯ ಒಬ್ಬ ನಾಸ್ತಿಕ. ಹಿಂದೂಗಳನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ನೋಡಿಕೊಳ್ಳುವ ಅಲ್ಪಸಂಖ್ಯಾತರಿಗೆ ನೂರಾರು ಭಾಗ್ಯಗಳನ್ನು ಕರುಣಿಸಿದ ಸಿಎಂ ಸಿದ್ದರಾಮಯ್ಯ ಒಬ್ಬ ಅಲ್ಪಸಂಖ್ಯಾತರ ಮುಖ್ಯಮಂತ್ರಿ ಎನ್ನುವುದನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ.

ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ತಕ್ಷಣ ಗೋಹತ್ಯಾ ನಿಷೇಧ ಕಾಯಿದೆಯನ್ನು ವಾಪಸ್ ಪಡೆದುಕೊಂಡು ಗೋ ಕಳ್ಳತನಕ್ಕೆ, ಗೋ ಭಕ್ಷಣೆಗೆ ಅವಕಾಶ ನೀಡಿ ಪಾಪ ಮೈಗಂಟಿಸಿಕೊಂಡ ಅದೇ ಸಿದ್ದರಾಮಯ್ಯ ಇಂದು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ್ದಾರೆಂದರೆ ಇದಕ್ಕಿಂದ ದೊಡ್ಡ ವಿಪರ್ಯಾಸ ಬೇರಿಲ್ಲ.

-ಚೇಕಿತಾನ

source: Dassera Contro – OneIndia

Tags

Related Articles

Close