ರಾಮ ಜನ್ಮಭೂಮಿ ಅಯೋಧ್ಯೆಗೆ ಈಗ ಹಬ್ಬದ ಕಳೆ ಬಂದಿದೆ!! ತ್ರೇತಾಯುಗದ ದೀಪಾವಳಿಯೇ ಅಯೋಧ್ಯೆಗೆ ಅವತರಿಸಿದೆಯಾ ಎಂಬ ಅನುಮಾನವೊಮ್ಮೆ
ಕಾಡಿದರೂ ಅಚ್ಚರಿಯಿಲ್ಲ!!!! ಯಾಕೆಂದರೆ ಸದ್ಯ ಉತ್ತರ ಪ್ರದೇಶವು ವಿವಾದಿತ ಕೇಂದ್ರವಾಗಿರುವುದು ಎಲ್ಲರಿಗೂ ತಿಳಿದ ವಿಚಾರ. ಹೀಗಿರಬೇಕಾದರೆ, ಇದರ ನಡುವೆ ಅಯೋಧ್ಯೆಯಲ್ಲಿ ಅಚ್ಚರಿಯ ಸಾಮರಸ್ಯದ ಬೆಳವಣಿಗೆಯೊಂದು ನಡೆದಿದೆ!! ಈ ಅಚ್ಚರಿಯ ಬೆಳವಣಿಗೆಯೂ ಬುದ್ದಿಜೀವಿಗಳಿಗೆ ಬರ್ನಲ್ ಭಾಗ್ಯ ನೀಡಿದಂತಾಗಿದೆ!!
ಹೌದು… ಲಂಕಾಧಿಪತಿ ರಾವಣನನ್ನು ಸೋಲಿಸಿ ಸೀತಾ ಮಾತೆಯನ್ನು ಅವನ ಸೆರೆಯಿಂದ ಬಿಡಿಸಿಕೊಂಡು, 14 ವರ್ಷದ ವನವಾಸವನ್ನು ಮುಗಿಸಿ ಅಯೋಧ್ಯೆಗೆ ರಾಮ ಹಿಂದಿರುಗಿದ ದಿನ ದೀಪಾವಳಿ ಎಂಬುದು ಪುರಾಣಗಳ ಉಲ್ಲೇಖ. ಹಾಗಾಗಿ ರಾಮ ಹಿಂತಿರುಗಿರುವ ಸಂದರ್ಭದಲ್ಲಿ ಇಡೀ ಸ್ವರ್ಗವೇ ಅಯೋಧ್ಯೆಗೆ ಇಳಿಯುತ್ತದೆ ಎನ್ನುವ ನಂಬಿಕೆಯೂ ಒಂದು ಕಾಲದಲ್ಲಿತ್ತು!! ಅದರಲ್ಲೂ ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾದ ಮೇಲೆ ಮೊದಲ ಬಾರಿಗೆ ನಡೆಯುತ್ತಿರುವ ದೀಪಾವಳಿಯಾದ್ದರಿಂದ ಈ ದೀಪಾವಳಿ ಮತ್ತಷ್ಟು ಅದ್ಧೂರಿಯಾಗಿದೆ. ಅಯೋಧ್ಯೆಯನ್ನು ಉತ್ತರ ಪ್ರದೇಶದ ಅತ್ಯಂತ ಪ್ರಮುಖ ಪ್ರವಾಸೀ ತಾಣವನ್ನಾಗಿ ಬದಲಿಸಬೇಕೆಂಬ ಆಸೆಯೂ ಯೋಗಿ ಆದಿತ್ಯನಾಥ್ ಅವರಿಗಿರುವುದರಿಂದ ಈ ಬಾರಿಯ ದೀಪಾವಳಿಗೆ ತ್ರೇತಾಯುಗದ ಸೊಬಗು ಅಯೋಧ್ಯೆಗೆ ಅವತರಿಸಿದೆ.
ಜನಮನ ಸೆಳೆದ ಐವರು ಮುಸ್ಲಿಂ ಬಾಂಧವರು..!!!!
ಉತ್ತರ ಪ್ರದೇಶ ವಿವಾದಿತ ಕೇಂದ್ರ ಬಿಂದುವಾಗಿರುವುದರ ನಡುವೆ ಅಯೋಧ್ಯೆಯಲ್ಲಿ ಅಚ್ಚರಿಯ ಸಾಮರಸ್ಯದ ಬೆಳವಣಿಗೆಯೊಂದು ನಡೆದಿದೆ!! ಶ್ರೀ ರಾಮನ
ಜನ್ಮಭೂಮಿ ಅಯೋಧ್ಯೆಯಲ್ಲಿ ನಡೆದ ದೀಪಾವಳಿ ಆಚರಣೆಯ ಸಂದರ್ಭದಲ್ಲಿ ವಿಶೇಷ ಆಕರ್ಷಣೆಯಾಗಿ ಜನಮನ ಸೆಳೆದದ್ದು ಐವರು ಮುಸ್ಲಿಂ ಬಾಂಧವರು!! ಹೌದು… ರಾಜಸ್ತಾನದ ದೌಸಾ ಜಿಲ್ಲೆಯ ಬಂಡಕಿ ಗ್ರಾಮದ ಶಮ್‍ಶಾದ್ ಹಾಗೂ ಬೆಹ್ರುಪ್ರಿಯ ಸಮುದಾಯಕ್ಕೆ ಸೇರಿದ ಅವರ ನಾಲ್ಕು ಜನ ಸಹೋದರರು ಅಯೋಧ್ಯೆಯಲ್ಲಿ ನಡೆದ ‘ಶೋಭಾಯಾತ್ರೆ’ಯ ಪ್ರಮುಖ ಆಕರ್ಷಿಣೀಯ ಕೇಂದ್ರಬಿಂದುವಾಗಿದ್ದರು!! ಅಲ್ಲದೆ, ಸಾಕೇತ್ ಕಾಲೇಜಿನಿಂದ ರಾಮ್ ಕಥಾ ಪಾರ್ಕ್‍ವರೆಗೂ ನಡೆದ ಸುಮಾರು ಮೂರು ಕಿ.ಮೀ ಯಾತ್ರೆಯಲ್ಲಿ ತ್ರೇತಾಯುಗಕ್ಕೆ ಸಂಬಂಧಿಸಿದ ಪಾತ್ರಗಳ ವೇಷ ಧರಿಸಿಕೊಂಡು ಸೌಹಾರ್ದತೆ ಮೆರೆದರು.
ಶಮ್‍ಶಾದ್ ಎಂಬುವವರು ‘ವಾನರ ಸೇನೆ’ಯ ಸದಸ್ಯನಂತೆ ಮಿಂಚಿದರೆ, ಆತನ ಸಹೋದರರಾದ ಫರೀದ್, ಸಲೀಮ್, ಅಕ್ರಮ್, ಫಿರೋಜ್ ಅವರು, ಹನುಮಾನ್ ಹಾಗೂ ಕೃಷ್ಣನ ವೇಷ ಧರಿಸುವ ಮೂಲಕ ಬೆಳಕಿನ ಹಬ್ಬ ದೀಪಾವಳಿಗೆ ಮೆರಗನ್ನು ನೀಡಿ ಈಡೀ ಆಯೋಧ್ಯೆಯಲ್ಲಿ ಸಾಮರಸ್ಯದ ಬೆಳವಣಿಗೆಯೊಂದು ನಡೆದೇ ಹೋಗಿದೆ!!
‘ಹಲವು ತಲೆಮಾರುಗಳಿಂದ ನಮ್ಮ ಕುಟುಂಬ ರಾಮ್ ಲೀಲಾದ ಭಾಗವಾಗಿದ್ದು, ಇದೇ ಮೊದಲ ಬಾರಿಗೆ ನಮ್ಮನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಹಾಗಾಗಿ ಅಧುನಿಕತೆಯಲ್ಲಿ ಕಳೆದು ಹೋಗುತ್ತಿರುವ ದೇಶದ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಲು ನಾವು ಸಿದ್ಧರಿದ್ದೇವೆ’ ಎಂದು ಈ ಸಂದರ್ಭದಲ್ಲಿ ಫರೀದ್
ಹೇಳಿಕೊಂಡಿದ್ದಾರೆ. ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಮುಸ್ಲಿಂ ಸಹೋದರರಿಗೆ ಅದ್ದೂರಿ ಸ್ವಾಗತ ನೀಡಲಾಗಿದ್ದು, ಈ ಸಂದರ್ಭದಲ್ಲಿ ಭಕ್ತರು ಅವರ ಪಾದ ಮುಟ್ಟಿ ಆಶೀರ್ವಾದ ಪಡೆದಿದ್ದು ಮಾತ್ರ ನಿಜಕ್ಕೂ ಅದ್ಭುತ… ಇದನ್ನೆಲ್ಲಾ ನೋಡಿದಾಗ ಮತ್ತೊಮ್ಮೆ ಹಿಂದಿನ ಅಯೋಧ್ಯೆ ಮರುಕಳಿಸಿದಂತೆ ಭಾಸವಾಗಿದ್ದಂತೂ ನಿಜ!!
ಅಯೋಧ್ಯೆಯ ಪ್ರತಿಬಿಂಬ!
ದೀಪಾಲಂಕೃತ ಅಯೋಧ್ಯೆ ಸರಯೂ ನದಿಯಲ್ಲಿ ಪ್ರತಿಬಿಂಬವಾಗಿ ಕಂಡು, ಆ ಮನಮೋಹಕ ಸೌಂದರ್ಯಕ್ಕೆ ಮತ್ತಷ್ಟು ಸೊಬಗು ನೀಡಿದ್ದವು… ಅಯೋಧ್ಯೆಯ ತುಂಬ ಹಚ್ಚಿದ್ದ ಹಣತೆಗಳು ಪುರಾಣ ಪ್ರಸಿದ್ಧ ರಾಮಜನ್ಮಭೂಮಿಯ ತುಂಬ ರಂಗಿನ ರಂಗವಲ್ಲಿ ಬಿಡಿಸಿದ್ದವು!!! ಲಕ್ಷಾಂತರ ಭಕ್ತರು ರಾಮನನ್ನು ಭಜಿಸುತ್ತ, ಪುರಾಣ ಪ್ರಸಿದ್ಧ ಸರಯೂ ನದಿಯ ತಟದ ಮೇಲೆ ಸಾಲುದೀಪಗಳನ್ನು ಹಚ್ಚಿ ದೀಪಾವಳಿ ಆಚರಿಸಿದರು. ಸಾಲು ದೀಪದ ಬೆಳಕಿನಲ್ಲಿ ಅಯೋಧ್ಯೆಗೆ, ತೇತ್ರಾಯುಗವೇ ಮತ್ತೆ ಇಳಿದು ಬಂದಂತನ್ನಿಸಿದೆ!!
10 ಬೆಳ್ಳಿಯ ಬಾಣಗಳನ್ನು ಉಡುಗೊರೆ ನೀಡಿದ ಶಿಯಾ ಸೆಂಟ್ರಲ್ ವಕ್ಫ್ ಬೋರ್ಡ್!!!
ಹೌದು.. ವಿವಾದಿತ ಕೇಂದ್ರವಾಗಿದ್ದ ಈ ಪ್ರದೇಶ ಮತ್ತೆ ಸಾಮರಸ್ಯವನ್ನು ಸೃಷ್ಟಿಸಲು ತುದಿಗಾಲಿನಲ್ಲಿ ನಿಂತಿದ್ದು, ಎಲ್ಲರನ್ನು ಅಚ್ಚರಿ ಪಡುವಂತಾಗಿದೆ… ಸರಯೂ ನದಿ ತೀರದಲ್ಲಿ ಉತ್ತರಪ್ರದೇಶ ಸರಕಾರ ನಿರ್ಮಿಸಲು ಉದ್ದೇಶಿಸಿರುವ 100 ಮೀಟರ್ ಎತ್ತರದ ಶ್ರೀರಾಮನ ದೇವರ ವಿಗ್ರಹ ಸ್ಥಾಪಿಸಲು ಸರಕಾರ ತೆಗೆದುಕೊಂಡಿರುವ ನಿರ್ಧಾರವನ್ನು ಸ್ವಾಗತಿಸಿರುವ ಶಿಯಾ ಮಂಡಳಿ, ವಿಗ್ರಹಕ್ಕೆ ಗೌರವದ್ಯೋತಕವಾಗಿ 10 ಬೆಳ್ಳಿಯ ಬಾಣಗಳನ್ನು ಉಡುಗೊರೆ ನೀಡುವುದಾಗಿ ಶಿಯಾ ಸೆಂಟ್ರಲ್ ವಕ್ಫ್ ಬೋರ್ಡ್ ಈಗಾಗಲೇ ಘೋಷಿಸಿದೆ!! ಅಷ್ಟೇ ಅಲ್ಲದೇ, ನಾವು ರಾಮನ ವಿಗ್ರಹಕ್ಕೆ ಬೆಳ್ಳಿಯ ಬಾಣಗಳನ್ನು ನೀಡುತ್ತಿದ್ದೇವೆ. ಇದು ಶಿಯಾ ಸಮುದಾಯಕ್ಕೆ ಶ್ರೀರಾಮನ ಬಗ್ಗೆ ಇರುವ ಗೌರವದ ದ್ಯೋತಕ ಎಂದಿದೆ.
ಈ ಕುರಿತು ಸಿಎಂ ಯೋಗಿ ಆದಿತ್ಯನಾಥ ಅವರಿಗೆ ಪತ್ರ ಬರೆದಿರುವ ವಕ್ಫ್ ಮಂಡಳಿ ಅಧ್ಯಕ್ಷ ವಸೀಂ ರಿಜ್ವಿ, ಶ್ರೀರಾಮನ ವಿಗ್ರಹ ಸ್ಥಾಪಿಸುವುದರಿಂದ ಉತ್ತರಪ್ರದೇಶವು ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಡುತ್ತದೆ. ಈ ಭಾಗದ ನವಾಬರು ಯಾವಾಗಲೂ ಅಯೋಧ್ಯೆಯ ದೇವಸ್ಥಾನಗಳನ್ನು ಗೌರವಿಸುತ್ತಿದ್ದರು ಎಂದು ಹೇಳಿದ್ದಾರೆ!!
ಅಂತೂ ಉತ್ತರಪ್ರದೇಶವು ವಿವಾದಿತ ಪ್ರದೇಶವಾಗಿ ಕಂಡು ಬಂದಿರುವುದರ ನಡುವೆ ಅದ್ಭುತವಾದ ಬದಲಾವಣೆ ಬುದ್ದಿಜೀವಿಗಳು ಎನಿಸಿಕೊಂಡವರು ಇದನ್ನೆಲ್ಲ ಹೇಗೆ ಸಹಿಸಿಕೊಳ್ಳುತ್ತಾರೋ ಗೊತ್ತಿಲ್ಲ!! ಆದರೆ ಶ್ರೀ ರಾಮ ಜನ್ಮಭೂಮಿಯಾಗಿದ್ದ ಅಯೋಧ್ಯೆಯಲ್ಲಿ ಸಾಲು ಸಾಲು ದೀಪಗಳ ಬೆಳಕಿನಲ್ಲಿ ತೇತ್ರಾಯುಗವೇ ಮತ್ತೆ
ಮರುಕಳಿಸಿದ ಅನುಭವವನ್ನು ನೀಡಿದ್ದಂತೂ ನಿಜ!!!
– ಅಲೋಖಾ