ಪ್ರಚಲಿತ

ವಿಶೇಷ ಸುದ್ದಿ! ರಾಜ್ಯ ವಿಧಾನಸಭಾ ಚುನಾವಣೆಯ ಮೋದಿ-ಶಾ ತಂತ್ರಕ್ಕೆ ಕಾಂಗ್ರೆಸ್ ನ ಟ್ರಂಪ್ ಕಾರ್ಡ್ ಯಾರು ಗೊತ್ತೇ?

ಕಾಂಗ್ರೆಸನ್ನು ಮಕಾಡೆ ಮಲಗಿಸಿದ ಕೀರ್ತಿ ಹೊತ್ತ ಪಪ್ಪುನ ಎಡವಟ್ಟನ್ನು ನೋಡಿ ಸ್ವತಃ ಇಟಲಿಯಮ್ಮನಿಗೂ ಸಾಕಾಗಿರಬೇಕು. ದೇಶದಲ್ಲಿ ಸಾಲದೂ ಅಂತ
ಅಮೇರಿಕಾದಲ್ಲೂ ಮರ್ಯಾದೆ ಕಳೆದುಕೊಂಡ ಪಪ್ಪುನನ್ನು ನೋಡಿ ಅಕಟಕಟಾ ಎನ್ನುತ್ತಿರುವ ಇಟಲಿಯಮ್ಮ, ಪಪ್ಪುಗೆ ಕೊಡುವ ಪಟ್ಟವನ್ನು ತನ್ನ ಇನ್ನೊಂದು ವಂಶದ ಕುಡಿಗೆ ಕೊಡಲು ಮುಂದಾಗಿದ್ದಾಳಂತೆ. ಇಟಲಿಯಮ್ಮನ ಪಾದ ನೆಕ್ಕುತ್ತಾ ಪಟ್ಟಕ್ಕಾಗಿ ಕಾದು ಕುಳಿತ ಈಕೆಯ ಗುಲಾಮರ ಆಸೆಗೆ ಕೊನೆಗೂ ಇಟಲಿಯಮ್ಮ ತಣ್ಣೀರು ಎರಚಿದ್ದಾಳೆ. ಈ ಜನ್ಮದಲ್ಲಿ ಹೈಕಮಾಂಡ್ ಪಟ್ಟ ಸಿಗವುದಿಲ್ಲ ಎಂದು ಗೊತ್ತಿದ್ದರೂ ಈಕೆಯ ಗುಲಾಮರು ಮಾತ್ರ ಹುದ್ದೆ ಸಿಗಬಹುದೋ ಎಂಬ ಆಸೆಗಣ್ಣಿನಿಂದ ನೋಡ್ತನೇ ಬಂದಿದ್ದಾರೆ. ಕಾಂಗ್ರೆಸ್‍ನ ವಂಶಾವಳಿ ಆಡಳಿತದ ಕೈಗೊಂಬೆಗಳಾಗಿ ಕುಳಿತ ಈಕೆ ಗುಲಾಮರು, ಇನ್ನೂ ಇಟಲಿಯಮ್ಮನನ್ನು ಪೂಜೆ ಮಾಡುವುದನ್ನು ಬಿಟ್ಟಿಲ್ಲ.

ಅಯ್ಯೋ ಗುಲಾಮರೇ ನೀವು ಕಾದದ್ದೇ ಬಂತು… ನೀವು ಇಟಲಿಯಮ್ಮನ್ನ ಧೂಳು ನೆಕ್ಕುವುದನ್ನು ಯಾವಾ ಬಿಡ್ತೀರೋ ಗೊತ್ತಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರೂ
ನಿಮಗಿನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ. ಇನ್ನೂ ಜೀತದಾಳುಗಳಂತೆ ವರ್ತಿಸುವ ನೀವು ಯಾವಾಗ ಬಿಡುಗಡೆ ಹೊಂದುತ್ತೀರೋ ಗೊತ್ತಿಲ್ಲ. ನಿಮ್ಮ ಹಣೆಬರಹವನ್ನು ನೋಡಿ ನಮಗೆ ಅಯ್ಯೋ ಅನಿಸುತ್ತದೆ. ಯಾಕೆ ಗೊತ್ತಾ… ಈ ಜೀತದಾಳುಗಳಿಗೆ ಶಾಕ್ ಆಗುವಂಥ ಸುದ್ದಿಯೊಂದನ್ನು ಇಟಲಿಯಮ್ಮ ನೀಡಿದ್ದಾಳೆ. ಇಟಲಿಯಮ್ಮಳ ಮಾತು ಕೇಳಿ ಈ ಜೀತದಾಳುಗಳಿಗೆ ಖಂಡಿತಾ ಹೊಟ್ಟೆ ಉರಿಯಬಹುದು. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇನ್ನೂ ಜೀತದಾಳುಗಳಂತೆ ವರ್ತಿಸುವ ನಿಮಗೆ ನಾಚಿಕೆ ಇಲ್ಲವೇ….

ಸ್ವಾತಂತ್ರ್ಯ ಸಿಕ್ಕಿದ ಬಳಿಕ ನೆಹರೂ ಪ್ರಧಾನಿಯಾದ. ಆ ಬಳಿಕ ಆಕೆಯ ಮಗಳು ಪ್ರಧಾನಿಯಾದ. ಬಳಿಕ ಈಕೆಯ ಮೊಮ್ಮಗ…. ಮೊಮ್ಮಗನ ನಂತರ ಈತನ ಮರಿ ಮೊಮ್ಮಗ….ಮರಿಮೊಮ್ಮಗನಿಗೆ ಇನ್ನೂ ಮದುವೆಯಾಗಿಲ್ಲ.. ಅವನಿಗೊಂದು ಮಗು ಹುಟ್ಟಿದರೆ ಆತನೇ. ಇನ್ನು ಮುಂದೆ ಈ ವಂಶದ ಕುಡಿಗಳು ದೇಶದ ಆಡಳಿತ ಚುಕ್ಕಾಣಿ ಹಿಡಿಯುವುದಿಲ್ಲ ಬಿಡಿ… ಯಾಕೆಂದ್ರೆ ಜನರು ಎಂದೋ ಇವರನ್ನು ತಿರಸ್ಕರಿಸಿ ಬಿಟ್ಟಿದ್ದಾರೆ. ಆದರೆ ಆ ವಂಶ ಪ್ರತಿನಿಧಿಸುವ ಪಕ್ಷದ ಅಧ್ಯಕ್ಷ ಆಗುವ ಭಾಗ್ಯ ಮಾತ್ರ ಅದೇ ವಂಶದ ಕುಡಿಗೆ ಸಿಗುವುದು. ತನ್ನ ಕಪಿಮುಷ್ಠಿಯಲ್ಲಿ ಬೇರೆ ಯಾರನ್ನೂ ಉದ್ಧಾರವಾಗಲು ಬಿಡದ ಈ ವಂಶದ ದಾಸ್ಯದಿಂದ ಸ್ವಾಭಿಮಾನ ಇದ್ದವರು ಎಂದೋ ಪಕ್ಷ ಬಿಡುತ್ತಿದ್ದರು. ಆದರೆ ಇನ್ನೂ ಪಕ್ಷ ತೊರೆಯದೆ ಇನ್ನೂ ಆ ವಂಶದ ಕುಡಿಗಳ ಬೂಟುಕಾಲು ನೆಕ್ಕುವ ಇವರಿಗೆ ಏನು ಹೇಳಬೇಕೆಂದೇ ಗೊತ್ತಾಗ್ತಾ ಇಲ್ಲ.

ಇಟಲಿಯಮ್ಮನ ಪ್ಲಾನ್ ಅಂದ್ರೆ ಪ್ಲಾನ್… ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವುದರಿಂದ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಜೋಡಿಯ
ರಾಜನೀತಿಯನ್ನು ಉಲ್ಟಾ ಪಲ್ಟಾ ಮಾಡಲು ಪ್ರಿಯಾಂಕ ಗಾಂಧಿ ಅಸ್ತ್ರ ಬಳಕೆಗೆ ಚಿಂತನೆ ನಡೆಸಿದ್ದಾಳಂತೆ. ತನ್ನ ಮಗನನ್ನು ಅಸ್ತ್ರ ಮಾಡಿಕೊಂಡಿದ್ದು ಸಾಕು ಎಂದು ಈಗ ತನ್ನ ಮಗಳನ್ನು ಅಸ್ತ್ರ ಮಾಡಿಕೊಂಡು ವಿಧಾನ ಸಭೆ ಚುನಾವಣೆಯನ್ನು ಗೆಲ್ಬೇಕೆಂಬುದು ದೂರಾಲೋಚನೆ….

ರಾಹುಲ್ ಗಾಂಧಿ ಒಳ್ಳೆ ಜೋಕ್ ಆದ್ರೂ ಮಾಡ್ತಾನೆ. ಆದ್ರೆ ರಾಜಕೀಯದ ಗಂಧಗಾಳಿ ಗೊತ್ತಿಲ್ಲದ ಪ್ರಿಯಾಂಕಳಿಂದ ಮಕಾಡೆ ಮಲಗಿರುವ ಕಾಂಗ್ರೆಸನ್ನು ಎಬ್ಬಿಸಲು
ಸಾಧ್ಯವೇ? ಕಾಂಗ್ರೆಸ್‍ನ ವಂಶಾವಳಿ ರಾಜಕೀಯ ನೋಡಿದಾಗ ನಗು ಬರುತ್ತಿದೆ.

ಕಾಂಗ್ರೆಸ್‍ನ ವಂಶಾವಳಿ ರಾಜಕೀಯದ ಹಿಂದೆ ಆ ಪಕ್ಷದಲ್ಲಿ ವಯಸ್ಸು, ಅನುಭವ, ಮುತ್ಸದ್ಧಿತನ ಯಾವುದಕ್ಕೂ ಬೆಲೆ ಇಲ್ಲ. ಇಲ್ಲವಾದರೆ ಕಾಂಗ್ರೆಸ್‍ನ ಎಐಸಿಸಿ
ಹುದ್ದೆಯನ್ನು ಯಾರಾದ್ರೂ ಕಾಂಗ್ರೆಸ್‍ನ ಅನುಭವಸ್ಥ ಹಿರಿತಲೆಗೆ ಕೊಡುತ್ತಿದ್ದರು. ಆದರೆ ಹಿರಿತಲೆಗಳು ಕಾದದ್ದೇ ಬಂತು. ಹೇ ಹಿರಿತಲೆಗಳೇ ಇಟಲಿಯಮ್ಮ ನಿಮ್ಮ
ಜನ್ಮದಲ್ಲಿ ನಿಮಗೆ ಯಾವುದೇ ಉನ್ನತ ಹುದ್ದೆ ಕೊಡುವುದಿಲ್ಲ. ಹ್ಹಹ್ಹ…..

ಪ್ರಿಯಾಂಕಾ ಗಾಂಧಿಯನ್ನು ಪ್ರಚಾರಕ್ಕೆ ಬಳಸ್ತಾರಂತೆ… ನೋಡೋಕೆ ಥೇಟ್ ಇಂದಿರಾಳಂತೆ ಕಾಣುವ ಈ ಪ್ರಿಯಾಂಕನನ್ನು ಕರ್ನಾಟಕದ ಮುಂದಿನ ವಿಧಾನ ಸಭಾ ಚುನಾವಣಾ ಪ್ರಚಾರಕ್ಕೆ ಬಳಸಿದ್ರೆ ಹೇಗೆ… ಇಂಥದೊಂದು ಗ್ರೇಟ್ ಐಡಿಯಾ ರಾಜ್ಯ ಉಸ್ತುವಾರಿ ವೇಣುಗೋಪಾಲನ ಮಂಡೆಯಲ್ಲಿ ಸುಳಿದಿದೆಯಂತೆ. ಈ ಐಡಿಯಾವನ್ನು ವೇಣುಗೋಪಾಲ ಸ್ವತಃ ಇಟಲಿಯಮ್ಮನಿಗೂ ತಿಳಿಸಿದ್ದಾರಂತೆ. ಪ್ರಿಯಂಕಾನನ್ನು ಬಳಸಿದ್ರೆ ಪಕ್ಷಕ್ಕೆ ಯಾವ ಲಾಭವಾಗ್ತದೆ ಎನ್ನುವುದು ಆ ವೇಣುಗೋಪಾಲನಿಗೇ ಗೊತ್ತು….

ಖರ್ಗೆಯ ತಿರುಕನ ಕನಸು: ಕಾಂಗ್ರೆಸ್‍ನ ಹಿರಿಯ ಮುಖಂಡರಾಗಿರುವ ಮಲ್ಲಿಕಾರ್ಜುನ ಖರ್ಗೆ ತನಗೆ ಎಐಸಿಸಿ ಪಟ್ಟ ಸಿಗಬೇಕೆಂದು ಹಲವು ವರ್ಷಗಳಿಂದ ಲಾಬಿ
ನಡೆಸ್ತಾನೇ ಬಂದಿದ್ದಾರೆ. ಆದ್ರೆ ಇವರಿಗೆ ಪಟ್ಟ ಕಟ್ಟಲು ಇಟಲಿಯಮ್ಮನಿಗೆ ಮನಸ್ಸಿಲ್ಲ. ಹಾಗೆಂದು ಖರ್ಗೆಗೆ ಬಾಯ್ಬಿಟ್ಟು ಕೇಳಲು ಮನಸ್ಸಿಲ್ಲ. ಅದಕ್ಕಾಗಿ ತನ್ನ
ಹಿಂಬಾಲಕರ ಮೂಲಕ ಸೋನಿಯಾಳ ಗಮನಕ್ಕೆ ತರುತ್ತಲೇ ಇದ್ದಾರೆ. ಆದರೆ ಸೋನಿಯಾ ಇದಕ್ಕೆ ಸೊಪ್ಪು ಹಾಕುವ ಲಕ್ಷಣ ಕಂಡುಬರುತ್ತಿಲ್ಲ. ಒಂದು ಟ್ರೈ ಮಾಡಿ
ಬಿಡೋಣ ಅಂತ ಖರ್ಗೆ ವೀರಪ್ಪಮೊಯ್ಲಿಯ ಸಂಬಂಧಿಕ ಕೆಪಿಸಿಸಿ ಸದಸ್ಯ ಸಂಜೀವ ಮೊಯ್ಲಿ ಹಾಲಿ ಎಐಸಿಸಿ ಅಧ್ಯಕ್ಷೆ ಸೋನಿಯಾಳಿಗೆ ಪತ್ರ ಬರೆಸಿದ್ದಾರಂತೆ. ರಾಷ್ಟ್ರ ಮಟ್ಟದಲ್ಲಿ ಪಕ್ಷದ ನಾಯಕತ್ವ ಬದಲಿಸುವುದಿದ್ದರೆ ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕರಾದ ಖರ್ಗೆ ಅವರಿಗೆ ಈ ಹೊಣೆಗಾರಿಕೆ ನೀಡಬೇಕು. ಇದರಿಂದ ಪಕ್ಷದ ಸಂಘಟನೆಗೂ ಸಹಕಾರಿಯಾಗಲಿದೆ ಎಂದು ಪತ್ರದಲ್ಲಿ ಬರೆಯಲಾಗಿದೆಯಂತೆ…

ಮತ್ತೊಂದು ಮೂಲದ ಪ್ರಕಾರ, ಸೋನಿಯಾಳ ಹುದ್ದೆಯನ್ನು ರಾಹುಲ್‍ಗೆ ನೀಡಿ, ರಾಹುಲನ ಹುದ್ದೆಯನ್ನು ಖರ್ಗೆಗೆ ನೀಡಲಾಗುವುದು ಎಂಬ ಗುಸುಗುಸು ಸುದ್ದಿಯೂ ಕೇಳಿಬರುತ್ತಿದೆ. ಒಂದು ವೇಳೆ ಈ ಹುದ್ದೆ ಖರ್ಗೆಗೆ ಕೊಟ್ರೆ ಅದು ನೆಪಮಾತ್ರ. ಯಾಕೆಂದ್ರೆ ಯಾವುದೇ ಅಧಿಕಾರ ಚಲಾಯಿಸುವ ಹಕ್ಕು ಖರ್ಗೆಗೆ ಇರುವುದಿಲ್ಲ. ಉದಾಹರಣೆಗೆ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ರೂ ಆ ಹುದ್ದೆಯನ್ನು ಸೋನಿಯಾ ನಿಭಾಯಿಸುತ್ತಿದ್ದಳೋ ಅದೇ ರೀತಿ ಇದೂ ಕೂಡಾ…

-ಚೇಕಿತಾನ

source:

Related Articles

Close