ಅಂಕಣಪ್ರಚಲಿತ

ವೈರಸ್ ಸೃಷ್ಟಿಸಿ, ಒಂದಷ್ಟು‌ ಜನರನ್ನು ಕೊಂದ ಚೀನಾದ ಕೊರೊನಾ ಎನ್ನುವ ಜೈವಿಕ‌ ಅಸ್ತ್ರ… ದುಡ್ಡು‌‌ ಮಾಡುವ‌ ಚೀನಾದ ನರಿಬುದ್ಧಿ ಬಹಿರಂಗ….!

ಚೀನಾದ ವುಹಾನ್ ನಗರದಲ್ಲಿ ಒಂದಷ್ಟು ಮಂದಿಯನ್ನು ಯಮಪುರಿಗೆ ಅಟ್ಟಿದ ಮಾರಕ ರೋಗದ ಮೂಲ‌ ಕೆದಕುತ್ತಾ ಹೋದಾಗ ಇದರ ಹಿಂದೆ ಇರುವುದು ಕೊರೊನಾ ಎನ್ನುವ ಮಾರಕ ವೈರಸ್ ಇರುವ ರಹಸ್ಯ ಪತ್ತೆಯಾಯಿತು.

ಚೀನಾದ ಪ್ರಯೋಗಾಲಯಗಳಲ್ಲಿ ಇಂಥದೊಂದು ಮಾರಕ ವೈರಸ್ ಅನ್ನು ಸೃಷ್ಟಿಸಿದ್ದ ಚೀನಾ ಎನ್ನುವ ರಾಕ್ಷಸ ರಾಷ್ಟ್ರ ಕೊನೆಗೆ ತನ್ನ ದೇಶವನ್ನೇ ಆಹುತಿ ಪಡೆದುಕೊಂಡಿದೆ ಎನ್ನುವ ಚರ್ಚೆಗಳು ವಿಶ್ವವ್ಯಾಪಿ ನಡೆಯುತ್ತಿದೆ.

ಮಾರಕ ವೈರಸ್ ಸೃಷ್ಟಿಸಿ ಅದನ್ನು ತನ್ನ ಶತ್ರು ರಾಷ್ಟ್ರ ಗಳಿಗೆ ಹಬ್ಬಿಸಿ ಕೊನೆಗೆ ಆ ದೇಶವನ್ನು ಮಕಾಡೆ ಮಲಗಿಸಿ ತಾನು ಮಾತ್ರ ವ್ಯವಹಾರ ಕೈಗೊಂಡು ದುಡ್ಡು‌ ಮಾಡಲು ಯತ್ನಿಸುತ್ತಿದೆ ಎಂಬ ಗುಮಾನಿ ಹಲವು ಮಂದಿಗೆ ಈ ಹಿಂದೆಯೇ ಮೂಡಿತ್ತು. ಇದಕ್ಕೆ ಪೂರಕ ಎಂಬಂತೆ ಸದ್ಯ ನಡೆದ ಘಟನೆ ಚೀನಾದ ಇನ್ನೊಂದು‌ ಮುಖವನ್ನು ಅನಾವರಣ ಮಾಡಿದೆ.‌

ಕಳೆದ ವರ್ಷ ಡಿಸೆಂಬರ್ ಅಂತ್ಯದ ವೇಳೆಗೆ ವುಹಾನ್‌ನಲ್ಲಿ ಕಾಣಿಸಿದ ಈ ರಹಸ್ಯ ಅಲ್ಲಿ ಸಾಕಷ್ಟು‌ ಮಂದಿಯನ್ನು ಆಹುತಿ ಪಡೆದುಕೊಂಡಿತ್ತು. ಈ ಬಗ್ಗೆ ಅಲ್ಲಿನ ಪ್ರಯೋಗಾಲಗಳು ಈ ವೈರಸ್ ಹೆಚ್ಚು ಸಾಂಕ್ರಾಮಿಕ ಹೊಸ ರೋಗಕಾರಕವೆಂದು ಗುರುತಿಸಿತ್ತು ಆದರೆ ಚೀನಾ ಸರಕಾರ ಇಂಥಾ ಪರೀಕ್ಷೆಗಳನ್ನು ನಿಲ್ಲಿಸಲು, ಪರೀಕ್ಷಾ ಮಾದರಿಗಳನ್ನು ನಾಶಮಾಡಲು ಮತ್ತು ಈ ಬಗೆಗಿನ ಸುದ್ದಿಗಳನ್ನು ನಿಗ್ರಹಿಸಲು ಆದೇಶಿಸಲಾಗಿತ್ತು ಎಂದು ಚೀನಾದ ಮಾಧ್ಯಮವೊಂದು ಬಹಿರಂಗಪಡಿಸಿದೆ.

ವುಹಾನ್ ನ ಆರೋಗ್ಯ ಅಧಿಕಾರಿಯೊಬ್ಬರು ಜನವರಿ 1 ರಂದು ವಿವರಿಸಿ, ವೈರಲ್‌ ನ್ಯೂಮೋನಿಯಾ ಮಾದರಿಯ ರೋಗದ ಬಗ್ಗೆ ವಿವರಿಸಿದ ಲ್ಯಾಬ್‌ಗಳನ್ನು ನಾಶಪಡಿಸುವಂತೆ ಒತ್ತಾಯಿಸಲಾಯಿತು. ಇದಾದ ಮೂರು ವಾರಗಳ ನಂತರವೂ ಮಾನವನಿಂದ ಮಾನವನಿಗೆ ಈ ರೋಗ ಹರಡುತ್ತದೆ ಎಂಬುವುದನ್ನೂ ಚೀನಾ ಒಪ್ಪಿಕೊಂಡಿರಲಿಲ್ಲ‌ ಎಂದಿದ್ದರು.

ಕೈಕ್ಸಿನ್ ಗ್ಲೋಬಲ್‌ ಪ್ರಕಾರ ಕೊರೊನಾದ ಭೀಕರತೆಯ ಬಗ್ಗೆ ಸರಕಾರ ಒಪ್ಪಿರಲಿಲ್ಲ. ಈ ಬಗ್ಗೆ ಬಹಿರಂಗಪಡಿಸಂತೆ ಏಕಾಏಕಿ ನಿರ್ಬಂಧ ವಿಧಿಸಿತು.‌ ಇದು‌ ಇನ್ನಷ್ಟು ವ್ಯಾಪಿಸಿ ಇಡೀ ಜಗತ್ತಿಗೆ ಪಸರುವಂಥಾಯ್ತು ಎಂದು ಸ್ಪಷ್ಟ ಪುರಾವೆಗಳೊಂದಿಗೆ ವಿವರಿಸಿದೆ.

ಚೀನಾದ ಅಂತರ್ಜಾಲಕ್ಕೆ ನಿರ್ಬಂಧ ವಿಧಿಸಿ ಇದರ ವರದಿಯನ್ನು ಬಹಿರಂಗಪಡಿಸದಂತೆಯೂ ಚೀನಾ ನೋಡಿಕೊಂಡಿತು.

ಕೊನೆಗೆ ಪರಿಸ್ಥಿತಿ ಕೈಮೀರಿದಾಗ ವುಹಾನ್ ನಗರವನ್ನೇ ಬಂದ್ ಮಾಡಿತು. ಆದರೆ ಆ ವೇಳೆಗಾಗಲೇ ಮೂರು ಸಾವಿರ ಮಂದಿ ಮೃತ್ಯು‌ ಕಡೆಗೆ ಪ್ರಯಾಣಿಸಿ ಆಗಿತ್ತು. ಅದಕ್ಕಾಗಿಯೇ ಅಮೆರಿಕ ಅಧ್ಯಕ್ಷ ಕೊರೊನಾವನ್ನು ಚೀನೀ ವೈರಸ್ ಎಂದು ಹೇಳಿರುವುದು.

ಚೀನಾ ಈ ವೈರಸ್ ಅನ್ನು ಸೃಷ್ಟಿಸಿ ಅದನ್ನು ವ್ಯವಹಾರ ಆಗಿಸಲು ಯತ್ನಿಸಿದೆ ಎಂದು ಅನೇಕ ರಾಷ್ಟ್ರಗಳ ನಂಬಿಕೆಯಾಗಿದೆ.‌ ಇದಕ್ಕೆ ಪೂರಕವಾಗಿ ಈ ಒಂದು ನಿದರ್ಶನ ಕನ್ನಡಿ ಹಿಡಿದಿದೆ.

ಕೊರೊನಾದಿಂದ ಸ್ಪೇನ್ ತತ್ತರಿಸಿದೆ. ಇದುವರೆಗೆ 50 ‌ಸಾವಿರ ಮಂದಿಗೆ ಕೊರೊನಾ ಸೋಂಕು ತಗುಲಿದ್ದು 3600 ಮಂದಿ ಮೃತಪಟ್ಟಿದ್ದಾರೆ. ಈಗ ವೈದ್ಯಕೀಯ ಪರಿಕರಗಳ ಕೊರತೆ ಕಾಣಿಸಿ ತನ್ನ ದೇಶದ ರೋಗಿಗಳಿಗೆ ಔಷಧ, ಪರಿಕರಗಳನ್ನು ಪೂರೈಸಲಾಗದೆ ಚೀನಾದ ಮುಂದೆ ಕೈಯೊಡ್ಡುವಂತೆ‌ ಮಾಡಿದೆ. ಇನ್ನೊಂದು ರಾಷ್ಟ್ರವನ್ನು‌ ದುರ್ಬಲಗೊಳಿಸಿ ಅದನ್ನು ಅಂಗಲಾಚುವಂತೆ ಮಾಡಿ ಕೊನೆಗೆ ಆ‌ ಮೂಲಕ ಬಿಸ್‌ನೆಸ್ ಮಾಡುವ ಚೀನಾದ ನರಿಬುದ್ದಿಯೂ ಪ್ರದರ್ಶನ ಆಗಿದೆ.‌

ಸ್ಪೇನ್ ಇದೀಗ ಚೀನಾದ ಜೊತೆ ಸುಮಾರು 432 ಮಿಲಿಯನ್ ಯುರೋಗಳಷ್ಟು ಒಪ್ಪಂದ ಮಾಡಿಕೊಂಡಿದೆ.

ಈ ಒಪ್ಪಂದದ ಪ್ರಕಾರ 550 ಮಿಲಿಯನ್ ಮಾಸ್ಕ್, 5. 5 ಮಿಲಿಯನ್ ಕ್ಷಿಪ್ರ ಪರೀಕ್ಷಾ ಕಿಟ್, 950 ವೆಂಟಿಲೇಟರ್ ಮತ್ತು 11 ಮಿಲಿಯನ್ ಜೋಡಿ ಗ್ಲೌಸ್ ಗಳನ್ನು ಚೀನಾ‌ ಸ್ಪೇನ್‌ಗೆ ರವಾನಿಸಬೇಕು.

ಚೀನಾಕ್ಕಿಂತಲೂ‌ ಹೆಚ್ಚು‌ ಮೃತ್ಯುಗಳನ್ನು‌ ಕಂಡಿರುವ ಸ್ಪೇನ್ ಚೀನಾದೊಂದಿಗೆ ಒಪ್ಪಂದ ಮಾಡದೆ ವಿಧಿ ಇರಲಿಲ್ಲ.

ವೈದ್ಯಕೀಯ‌ ಪರಿಕರಗಳ‌ ಉತ್ಪಾದನೆಯಲ್ಲಿ ಸಕ್ರಿಯವಾಗಿರುವ ಚೀನಾದ ಅಧ್ಯಕ್ಷ‌ ಕ್ಸಿ ಜಿನ್‌ಪಿಂಗ್‌ನ ಇನ್ನೊಂದು ಮುಖದ ಅನಾವರಣವಾಗಿದೆ.

ಭಾರತ‌ ಕೂಡ 130 ಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರ. ಕೊರೊನಾ ವ್ಯಾಪಿಸಿದರೆ ಇಲ್ಲಿಯೂ ವೈದ್ಯಕೀಯ‌ ಪರಿಕರಗಳ‌ ಕೊರತೆ ಕಾಣಿಸಬಹುದು. ಆಗ ಭಾರತವೂ ಚೀನಾದ ಕೈಯೊಡ್ಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಬಹುದು.‌ ಇದು ಭಾರತದ ಅರ್ಥ ವ್ಯವಸ್ಥೆಯನ್ನೇ ಬುಡಮೇಲುಗೊಳಿಸುತ್ತದೆ. ಅದಕ್ಕಾಗಿಯೇ‌ ಮೋದಿ ಈ ದೇಶದ ಲಾಕ್‌ಡೌನ್ ಗೆ ಘೋಷಿಸಿರುವುದು. ನಾವು ಕೂಡ ಚೀನಾದ ನರಿಬುದ್ಧಿಗೆ ಬಲಿಯಾಗದೆ ಮನೆಯಲ್ಲೇ ಇರುವುದು ಅನಿವಾರ್ಯ.

ಚೀನಾಕ್ಕೆ ಪಾಠ ಕಲಿಸುವ ಕಾಲ ಬಂದಿದೆ….

ಕೊರೋನಾ ವೈರಸ್ ಹರಡಿದ್ದಕ್ಕೆ ಅಮೆರಿಕ ಚೀನಾವನ್ನು ಹೊಣೆ ಮಾಡಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದೆ. ಈ ನಡುವೆ ಅಮೆರಿಕದ ವಕೀಲ ಲ್ಯಾರಿ ಕ್ಲೇಮನ್, ಅವರ ಫ್ರೀಡಂ ವಾಚ್ ಹಾಗೂ ಬಝ್ ಫೋಟೋಸ್ ಸಂಸ್ಥೆ ಟೆಕ್ಸಾಸ್ ನ ನ್ಯಾಯಾಲಯದಲ್ಲಿ ಚೀನಾ ವಿರುದ್ಧ 20 ಲಕ್ಷಕೋಟಿ ಡಾಲರ್ ಮೊತ್ತದ ಹಣ ಪರಿಹಾರವಾಗಿ ನೀಡಬೇಕೆಂದು ಆಗ್ರಹಿಸಿ ಕೇಸ್ ದಾಖಲಿಸಿದ್ದಾರೆ.

ಚೀನಾ ಕೊರೋನಾ ವೈರಸ್ ನ್ನು ಜೈವಿಕ ಅಸ್ತ್ರವನ್ನಾಗಿ ಬಳಕೆ ಮಾಡಿ, ಉದ್ದೇಶಪೂರ್ವಕವಾಗಿ ಸೃಷ್ಟಿಸಿ 334,000 ಜನರಿಗೆ ಸೋಂಕು ಉಂಟುಮಾಡಿದೆ ಎಂದು ಲ್ಯಾರಿ ಕ್ಲೇಮೆನ್ ಆರೋಪಿಸಿದ್ದು, ಚೀನಾ ವಿರುದ್ಧ ಉಗ್ರವಾದಕ್ಕೆ ನೆರವು, ಅಮೆರಿಕದ ಜನರ ಹತ್ಯೆ ಹಾಗೂ ನಷ್ಟವನ್ನುಂಟುಮಾಡುವ ಸಂಚುಗಳ ಆರೋಪವನ್ನು ಹೊರಿಸಲಾಗಿದೆ.

ಇಷ್ಟು ಸಾಕಾಗುವುದಿಲ್ಲ… ಚೀನಾದ ವಿರುದ್ಧ‌ ಇನ್ನಷ್ಟು ಪ್ರಮಾಣದ ದಂಡ ಪ್ರಯೋಗ ಅನಿವಾರ್ಯತೆ ಇದೆ.

-ಗಿರೀಶ್

Tags

Related Articles

FOR DAILY ALERTS
Close