ಅಂಕಣ

ಶತ್ರುಗಳನ್ನ ಕ್ಷಮಿಸಿ ಬಿಟ್ಟುಬಿಡು ಅಂತ ನಮ್ಮ ಧರ್ಮ ಹೇಳಿದೆಯಾ?!

ಧಾರ್ಮಿಕ ಪ್ರವಚನಕಾರರು ಹೇಳುವ ಪ್ರವಚನದಲ್ಲಿ ಭಾರತ ಸಹಿಷ್ಣು ರಾಷ್ಟ್ರ, ಹಿಂದುಗಳು ಕ್ಷಮಾದಾನ ನೀಡುವಂತ ಸಹಿಷ್ಣುಗಳು ಅಂತೆಲ್ಲ ಹೇಳಿ ಏನೇ ಆಗಲಿ ಹಿಂದುಗಳು ಈ ದೇಶವನ್ನ ಕಳೆದುಕೊಳ್ಳೋಕೆ ಸಾಧ್ಯವೇ ಇಲ್ಲ ಅಂತ ಹಿಂದೂ ಸಮಾಜವನ್ನ ಭ್ರಮೆಯಲ್ಲಿ ಬದುಕುವಂತೆ ಮಾಡುತ್ತಿದ್ದಾರೆ ಅನಿಸುತ್ತಿದೆ.

“ನಮ್ಮ ಇತಿಹಾಸದ ಪುಟ ತಿರುವಿ ನೋಡಿದರೂ ನಮ್ಮ ರಾಜರುಗಳು ದಯಾಳುಗಳಾಗಿದ್ದರು, ಆದಕಾರಣವೇ ಯುದ್ಧದಲ್ಲಿ ಸೋತ ಶತ್ರುಗಳಿಗೆ ಕ್ಷಮಾದಾನ ನೀಡಿ ಕಳಿಸಿದ್ದರು, ನಮ್ಮ ಸಂಸ್ಕೃತಿ ಕ್ಷಮಾದಾನದ ಸಂಸ್ಕೃತಿಯದ್ದಾಗಿದೆ” ಅಂತೆಲ್ಲಾ ಹೇಳುತ್ತ ಹೋದರೆ ನಮ್ಮ ಪೀಳಿಗೆಗೆ ನಾವು ಎಂತಹ ಸಂದೇಶಾ ಕೊಟ್ಟು ಅವರನ್ನ ನಪುಂಸಕರಾಗಿ ಮಾಡಲೊರಟಿದ್ದೇವೆ ಅನ್ನೋ ಅರಿವಾದರೂ ಇದೆಯಾ ನಮಗೆ?

ಇಂತಹ ಮಾತುಗಳಿಂದಲೇನೇ ಅಲ್ವಾ ನಾವು ಭಾರತದ ಬಹುಭಾಗ ಭೂಪ್ರದೇಶಗಳನ್ನ ಮುಸಲ್ಮಾನರಿಗೆ ಬಿಟ್ಟುಕೊಟ್ಟು ಇಂದಿಗೂ ಆ ರಾಷ್ಟ್ರಗಳ ಜೊತೆಗೆ
ಸದಾ ಕಾದಾಟ ನಡೆಸುತ್ತ ಹೆಣಗಾಡುತ್ತಿರೋದು.

ಭಾರತ ಸೆಕ್ಯೂಲರ್ ರಾಷ್ಟ್ರ, ಭಾರತ ಶಾಂತಿಯನ್ನಷ್ಟೇ ಬಯಸುತ್ತೆ ಅಂತ ಮೇಲಿಂದ ಮೇಲೆ ಹೇಳಿ ಹೇಳಿ ನಮ್ಮ ಹಿಂದುಗಳನ್ನ ಮೂರ್ಖರಾಗಿ ಮಾಡುವ ಕೆಲಸವನ್ನ ಸೋ ಕಾಲ್ಡ್ ಸೆಕ್ಯೂಲರ್ ಗಳು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

ಆದರೆ ಶತ್ರುಗಳನ್ನ ಜೀವಸಹಿತ ಬಿಡಬಾರದು ವಾಸ್ತವವಾಗಿ ವೇದಗಳು ಹೇಳುತ್ತವೆ. ಬದಲಾಗಿ ದುಷ್ಟರನ್ನ ಶಿಕ್ಷಿಸಿ ಅವರನ್ನ ಅಧಿಕಾರದಿಂದ ಒದ್ದು ಇಳಿಸಿದರೆ ಮಾತ್ರ ನಮ್ಮ ದೇಶದ ಪರಂಪರೆ, ಸಂಸ್ಕೃತಿ, ದೇಶ ಉಳಿಯಲು ಸಾಧ್ಯ ಅಂತಲೂ ವೇದಗಳು ಹೇಳುತ್ತವೆ

ಶ್ರೀರಾಮಚಂದ್ರನೂ ರಾವಣನನ್ನ ಕೊಲ್ಲುವ ಇರಾದೆ ಹೊಂದಿರಲಿಲ್ಲ, ಆದರೆ ಯಾವಾಗ ರಾವಣನ ತಮ್ಮ ವಿಭೀಷಣ “ಲಂಕೆಯ ಸಾಮ್ರಾಜ್ಯವನ್ನ ಆಯೋಧ್ಯೆಯವರೆಗೆ ವಿಸ್ತರಿಸೋದಕ್ಕೆ ರಾವಣ ಸಂಚು ಮಾಡಿದ್ದಾನೆ” ಅಂತ ಹೇಳಿದ ಕೂಡಲೇ ರಾಮ ರಾವಣನನ್ನು ಕೊಂದು ತನ್ನ ರಾಜ್ಯ ಹಾಗು ಲಂಕೆಯನ್ನ ರಾಕ್ಷಸ ರಾವಣನಿಂದ ಕಾಪಾಡಿದ್ದು.

ಪ್ರಥ್ವಿರಾಜ್ ಚೌಹಾಣನೂ ಕೂಡ ಮೊಹಮ್ಮದ್ ಘೋರಿಯನ್ನ 16 ಬಾರಿ ಸೋಲಿಸಿ ಆತನಿಗೆ ಕ್ಷಮಿಸಿ ಕಳಿಸಿದ್ದನಂತೆ, ಆದರೆ ಕ್ಷಮೆಗೆ ಅರ್ಹನಲ್ಲದ ಘೋರಿ ಏನು ಮಾಡಿದ್ದ? 17 ನೆ ಬಾರಿಗೆ ಪ್ರಥ್ವಿರಾಜನ ಮೇಲೆ ದಂಡೆತ್ತಿ ಬಂದ ಘೋರಿ ಪ್ರಥ್ವಿರಾಜನನ್ನ ಮೋಸದಿಂದ ಸೋಲಿಸಿ ಆತನ ಕಣ್ಣುಗಳನ್ನೇ ಕೀಳಿಸಿ ಚಿತ್ರಹಿಂಸೆ ಕೊಟ್ಟು ಸಾಯೋ ಹಾಗೆ ಮಾಡಿದ್ದ.

ಆದರೆ ಪ್ರಥ್ವಿರಾಜ್ ಚೌಹಾಣ್ ಏನು ಮಾಡಬೇಕಾಗಿತ್ತು? ಘೋರಿಯನ್ನ ಒಂದೆರಡು ಬಾರಿ ಯುದ್ಧಕ್ಕೆ ಬಂದಾಗಲೇ ಆತನ ಶಿರಚ್ಛೇದನ ಮಾಡಿ ಬೀದಿ ಬೀದಿಯಲ್ಲಿ ಮೆರವಣಿಗೆ ಮಾಡಿದ್ದಿದ್ದರೆ ಭಾರತದಲ್ಲಿ ಮುಸ್ಲಿಂ ಆಕ್ರಮಣಕಾರರು ದಾಳಿ ನಡೆಸೋಕೂ ಹಿಂಜರಿಯುತ್ತಿದ್ದರೇನೋ!!

ಮಹಾರಾಣಾ ಪ್ರತಾಪ್ ಸಿಂಗ್ ಅಕ್ಬರನನ್ನ ಆರು ಬಾರಿ ಯುದ್ಧದಲ್ಲಿ ಮುಖಾಮುಖಿಯಾಗಿ ಸೋಲಿಸಿಯೂ ಆತನ್ನ ಜೀವಸಹಿತ ಬಿಟ್ಟು ಕಳಿಸಿದ್ದು,

ಹೀಗೆ ಮೊಘಲರನ್ನೂ ಯುದ್ಧದಲ್ಲಿ ಪರಾಜಿತಗೊಳಿಸಿದ್ದ ಮರಾಠ ಸೈನಿಕರೂ ಅವರ ರಾಜ್ಯವನ್ನ ಅವರಿಗೇ ಬಿಟ್ಟು ಕೊಟ್ಟಿದ್ದರ ಪರಿಣಾಮವಾಗಿ ರಕ್ತಬೀಜಾಸುರರಂತೆ ಮತ್ತೆ ಹುಟ್ಟಿ ಹಿಂದೂಗಳ ದಮನಕ್ಕೆ ಮೊಗಲರು ಟೊಂಕಕಟ್ಟಿ ನಿಂತದ್ದು.

ಮೊಗಲರ ರಾಜ್ಯವನ್ನ ವಶಪಡಿಸಿಕೊಂಡು ಅವರನ್ನ ಅವರ ಜನ್ನತ್ ಗೆ ನಮ್ಮ ರಾಜರುಗಳೇನಾದರೂ ಕಳಿಸಿದ್ದಿದ್ದರೆ ಇಂದು ಭಾರತ ಇಸ್ಲಾಮಿ ಆಕ್ರಮಕಾರರ ದಾಳಿಗಳಿಗೆ ತುತ್ತಾಗುತ್ತಲೇ ಇರಲಿಲ್ಲ.

ಕ್ಷಮಾದಾನದ ಮೂಲಕ ಶತ್ರುಗಳನ್ನ ಬಿಟ್ಟು ಕಳಿಸಿದ್ದಕ್ಕೆ ಶತ್ರುಗಳಿಗೆ ಹೋದ ಸಂದೇಶವಾದರೂ ಏನಾಗಿತ್ತು?

ಈ ಹಿಂದುಗಳು ಮೂರ್ಖರು, ಕೈಲಾಗದ ಹೇಡಿಗಳು, ಕ್ಷಮಾದಾನ ನೀಡುವ ಮೂರ್ಖರು, ಇವರ ಮೇಲೆ ಯಾವಾಗ ಬೇಕಾದರೂ ದಾಳಿ ನಡೆಸಿ ಸುರಕ್ಷಿತವಾಗಿ ವಾಪಸ್ ಬರಬಹುದು, ಒಂದು ವೇಳೆ ನಾವು ಯುದ್ಧಗೆದ್ದರೆ ಅವರ ರಾಜ್ಯವನ್ನ ಸುಲಭವಾಗಿ ಇಸ್ಲಾಮೀಕರಣ ಮಾಡಿ ಅಲ್ಲಿನ ಸಂಪತ್ತನ್ನ ದೋಚಿ, ಹಿಂದೂ ಹೆಣ್ಣುಮಕ್ಕಳನ್ನ ನಮ್ಮ ಜನಾನಾದಲ್ಲಿ ತಂದಿಟ್ಟುಕೊಳ್ಳಬಹುದು, ಅವರ ಮಂದಿರಗಳನ್ನ ನಾಶಮಾಡಿ ಅಲ್ಲಿ ಇಸ್ಲಾಮಿಕ್ ಷರಿಯಾ ಕಾನೂನು ಜಾರಿಗೊಳಿಸಿಬಿಡಬಹುದು” ಅನ್ನೋದನ್ನ ಚೆನ್ನಾಗಿ ಅರಿತ ದಾಳಿಕೋರರು ಭಾರತದ ಜೊತೆ ಮಾಡಿದ್ದೂ ಅದನ್ನೇ!!

ಹಿಂದುಗಳಲ್ಲಿ ಪೌರುಷತ್ವಕ್ಕೇನೂ ಕಮ್ಮಿಯಿರಲಿಲ್ಲ ಆದರೆ “ಶತ್ರುಗಳನ್ನ ಸೋಲಿಸಿದೆವಲ್ಲ ಅಷ್ಟೇ ಸಾಕು, ಈಗ ಅವರ ಸೊಕ್ಕಡಗಿತು” ಅನ್ನೋ ಮನೋ ಭಾವನೆಯಿಂದಾಗಿಯೇ ನಾವು ಇತಿಹಾಸದುದ್ದಕ್ಕೂ ಘೋರ ಸೋಲುಗಳನ್ನ ಅನುಭವಿಸಿ ಸೋತೆವು.

ಇವೆಲ್ಲಾ ನಾವು ಇತಿಹಾಸದಿಂದ ಕಲಿತ ಪಾಠವಾದರೆ ಇತ್ತ ಭಾರತ ವಿಭಜನೆಯಾದ ನಂತರ ಪಾಕಿಸ್ತಾನ 4 ಬಾರಿ ಯುದ್ಧ ಮಾಡಿ ಸೋತು ಸುಣ್ಣವಾಯಿತು.

ಪಾಕಿಸ್ತಾನವನ್ನ ಸೋಲಿಸಿ, ಅದರ ಭೂಭಾಗ ವಶಪಡಿಸಿಕೊಂಡು, ಅವರ 98,000 ಸೈನಿಕರನ್ನ ಯುದ್ಧ ಕೈದಿಗಳಾಗಿ ಬಂಧಿಸಿ ನಂತರವೂ ಯಾವ ಷರತ್ತುಗಳು ಇಲ್ಲದೆ ಪಾಕಿಸ್ತಾನವನ್ನ ಬಿಟ್ಟಿದ್ದಕ್ಕೆ ತಾನೆ ಇಂದಿಗೂ ಭಾರತವನ್ನ ಇಸ್ಲಾಮಿ ರಾಷ್ಟ್ರ ಮಾಡೇ ತೀರುತ್ತೇವೆ ಅಂತ ಭಿಕಾರಿ ಪಾಕಿಸ್ತಾನ ಬೊಬ್ಬಿರಿಯೋದು.

ಹೀಗೆ ಮಾಡೋ ಬದಲು 1971 ರ ಪಾಕಿಸ್ತಾನದ ಜೊತೆ ನಡೆದ ಯುದ್ಧದಲ್ಲಿ ಶರಣಾಗತರಾಗಿದ್ದ 98,000 ಪಾಕಿಸ್ತಾನಿ ಸೈನಿಕರನ್ನ ಆ ರಾಷ್ಟ್ರ ಮಾಡುವ ರೀತಿಯಲ್ಲೇ ಕತ್ತು ಸೀಳಿ ಕೊಲ್ಲದಿದ್ದಕ್ಕೆ ತಾನೇ ಅದೇ ಸೈನಿಕರು ಬಾಂಗ್ಲಾದೇಶದಲ್ಲಿ ಲಕ್ಷಾಂತರ ಜನರನ್ನ ಕೊಂದು ನಂತರ ಪಾಕಿಸ್ತಾನದಲ್ಲಿರೋ ಬಲೂಚಿಸ್ತಾನದಲ್ಲಿ ಈಗಲೂ ಅತ್ಯಾಚಾರ ಎಸಗುತ್ತಿರೋದು.

ಕ್ರಿಯೆಗೆ ಪ್ರತಿಕ್ರಿಯೆ ಅಂತ ಭಾರತವೇನಾದರೂ ಒಂದು ಹೆಜ್ಜೆ ಮುಂದಿಟ್ಟಿದ್ದರೆ ಪಾಕಿಸ್ತಾನ ಪಾಕಿಸ್ತಾನವಾಗಿ ಉಳಿಯದೆ ಯಾವತ್ತೋ ಛಿದ್ರ ಛಿದ್ರವಾಗಿರುತ್ತಿತ್ತು.

ಈ ತರಹದ ಮೂರ್ಖತೆಯ ಪರಾಕಾಷ್ಠೆಯನ್ನೇ ಕಥೆಗಳ ಮೂಲಕ ಹಿಂದುಗಳ ತಲೆ ತುಂಬಿದ್ದಕ್ಕೇ ಇಂದು ನಾವು ಶಾಂತಿಯ ಮಂತ್ರ ಪಠಿಸುತ್ತ ಶಂಡರಾಗಿ ನಮ್ಮ ಮೇಲೆ ವೈಚಾರಿಕ, ಮಾನಸಿಕ, ಬೌದ್ಧಿಕ ದಾಳಿ ನಡೆದರೂ ಭಾರತಕ್ಕೇನೂ ಆಗಲ್ಲ, ಹಿಂದುಗಳು ಬಹುಸಂಖ್ಯಾತರು ಅನ್ನೋ ಭ್ರಮೆಯಲ್ಲಿ ಬದುಕುತ್ತಿದ್ದೇವೆ.

ಎಲ್ಲಿಯವರೆಗೆ ಈ ಮೂರ್ಖತನದ ಪರಮಾವಧಿಯಿಂದ ನಾವು ಹೊರಬರಲ್ವೋ ಅಲ್ಲಿಯವರೆಗೆ ನಾವು ಅದಿನ್ನೆಷ್ಟು ಭೂಭಾಗ ಕಳೆದುಕೊಳ್ಳುತ್ತವೋ ಏನೋ.

ಇಲ್ಲಿ ಚಾಣಕ್ಯ ಹೇಳುವ ಮಾತೊಂದು ನೆನಪಿಗೆ ಬರ್ತಿದೆ, ಚಾಣಕ್ಯ ಹೇಳ್ತಾನೆ “ಶತ್ರು ಹಾಗು ಹಾವನ್ನು ಯಾವತ್ತಿದ್ದರೂ ಅರೆ ಜೀವದಲ್ಲಿ ಬದುಕಲು ಬಿಡಬಾರದು, ಅಂತಹ ಮೂರ್ಖತನ ಯಾವತ್ತಿದ್ದರೂ ನಮ್ಮ ಜೀವಕ್ಕೇ ಕಂಟಕ” ಎಂದು.

ಧರ್ಮೋ ರಕ್ಷತಿ ರಕ್ಷಿತಃ, ಎಲ್ಲಿಯವರೆಗೆ ಹಿಂದುಗಳು ತಮ್ಮ ಧರ್ಮದ ಪರ ನಿಲ್ಲುವುದಿಲ್ಲವೋ ಅಲ್ಲಿಯವರೆಗೆ ಯಾವ ಮೋದಿ ಬಂದರೂ ಸರಿ ಯೋಗಿ ಬಂದರೂ ಸರಿ ನಮ್ಮ ಮೇಲಿನ ಆಕ್ರಮಣ, ಅಟ್ಟಹಾಸ ನಿಲ್ಲಲು ಸಾಧ್ಯವಿಲ್ಲ.

ದೀಪಾವಳಿಯಂದು ಮನೇಲಿ ದೀಪ ಬೆಳಗಿಸಿದರು ಎಂಬ ಕಾರಣಕ್ಕೆ ಅಲ್ಲಿನ ಪಂಡಿತರ ಮನೆಯ ಮೇಲೆ ಕಾಶ್ಮೀರದಲ್ಲಿ ನೆನ್ನೆ ಕಲ್ಲುತೂರಾಟ ಮಾಡಿ ಮನೆಯನ್ನು ಜಖಂಗೊಳಿಸಿದ್ದಾರೆ ಅಲ್ಲಿನ ಮುಸಲ್ಮಾನರು.

ಅಕ್ರಮ ಕಸಾಯಿಖಾನೆ ನಡೆಸುತ್ತಿರುವ ಮುಸಲ್ಮಾನರ ವಿರುದ್ಧ ಕಂಪ್ಲೇಂಟ್ ಕೊಟ್ಟಿದ್ದಕ್ಕಾಗಿ ಬೆಂಗಳೂರಿನ ಸೀನಿಯರ್ ಸಾಫ್ಟವೇರ್ ಇಂಜಿನಿಯರ್ ನಂದಿನಿ ಎಂಬುವವರ ಮೇಲೆ ಮುಸಲ್ಮಾನರು ಮಾರಣಾಂತಿಕ ಹಲ್ಲೆ ನಡೆಸಿ ಆಕೆಯ ಕಾರನ್ನು ಜಖಂಗೊಳಿಸಿದ್ದಾರೆ.

ಅಕ್ರಮ ಗೋಸಾಗಾಟ ಪ್ರಶ್ನಿಸಿದ್ದಕ್ಕೆ ಪಶ್ಚಿಮ ಬಂಗಾಳದಲ್ಲಿ ಬಿ.ಎಸ್.ಎಫ್ ಸೈನಿಕನನ್ನ ಅಲ್ಲಿನ ಮುಸಲ್ಮಾನರು ಕೊಂದು ಹಾಕಿದ್ದಾರೆ.

ನಿಮ್ಮ ಹಬ್ಬದ ದಿನವೇ ನಮ್ಮ ಹಬ್ಬವೂ ಇರುವ ಕಾರಣ ಹಿಂದೂ ಹಬ್ಬವನ್ನ ಒಂದೆರಡು ದಿನ ಬಿಟ್ಟು ಆಚರಿಸಿ ಅಂತ ಮೌಲ್ವಿಯೊಬ್ಬ ಟಿವಿ ಡಿಬೇಟ್ನಲ್ಲಿ ಹೇಳ್ತಾನೆ.

15 ನಿಮಿಷ ಪೋಲಿಸರು ಸುಮ್ಮನಿರಲಿ ಆಗ ನೋಡಿ 25 ಕೋಟಿ ಮುಸಲ್ಮಾನರು 100 ಕೋಟಿ ಹಿಂದುಗಳನ್ನ ಹೊಸಕಿ ಹಾಕ್ತೇವೆ ಅಂತ ಅಕ್ಬರುದ್ದಿನ್ ಓವೈಸಿ ಹೇಳ್ತಾನೆ.

ರಾಮ ಒಬ್ಬ ಷಂಡ ಅನ್ನೋ ಹೇಳಿಕೆಯನ್ನು ಭಗವಾನ್ ಎಂಬ ಸ್ವಯಂ ಷಂಡ ಹೇಳ್ತಾನೆ.

ಇಷ್ಟಾದರೂ ನಾವಿನ್ನೂ ಮಲಗೇ ಇದ್ದೇವೆ. ಈಗಲಾದರೂ ಎಚ್ಚೆತ್ತುಕೊಂಡು ಧರ್ಮ, ದೇಶದ ರಕ್ಷಣೆಗಾಗಿ ನಿಲ್ಲಿ, ಇಲ್ಲವಾದರೆ ಈ ದೇಶದಲ್ಲಿ ಹಿಂದುಗಳು ಅನ್ನೋ ಧರ್ಮದವರು ಇದ್ದರು ಅನ್ನೋದನ್ನೂ ಇತಿಹಾಸದ ಪುಟಗಳಲ್ಲಿ ಉಳಿಯಲ್ಲ!!

– Vinod Hindu Nationalist

Tags

Related Articles

Close