ಪ್ರಚಲಿತ

ಶಸ್ತ್ರಾಸ್ತ್ರಗಳು ಚೈನಾದ ಬಳಿ ಹೆಚ್ಚಿರಬಹುದು, ಆದರೆ ಭಾರತೀಯ ಸೈನಿಕರ ಬಳಿ ರಾಷ್ಟ್ರೀಯತೆ ಹೆಚ್ಚಿದೆ.

ಹೌದು, ಚೈನಾ ಕಾಲು ಕೆರೆದು ಜಗಳಕ್ಕೆ ಕರೆದಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಇಂತಹ ಘಟನೆಗಳು ನಡೆದಿದೆ. ಆದರೆ ಆ ಸಂದರ್ಭದಲ್ಲಿ ಚೈನಾವನ್ನು ಪ್ರಶ್ನಿಸುವ ನಾಯಕತ್ವ ಅಥವಾ ಅವರಿಗೆ ತಿರುಗೇಟು ನೀಡುವ ಸ್ವಾತಂತ್ರ್ಯ ನಮ್ಮ ಸೈನಿಕರಿಗೆ ಇರಲಿಲ್ಲ. ಕಾರಣ ಮೇಲಿನವರ ಅಪ್ಪಣೆಗೆ ಕಾಯಬೇಕಿತ್ತು.

ಆದರೆ ಸದ್ಯದ ಸ್ಥಿತಿ ಬದಲಾಗಿದೆ, ನಾವು ಯಾರ ವಿಚಾರಕ್ಕೂ ಹೋಗುವುದಿಲ್ಲ, ಆದರೆ ನಮ್ಮ ವಿಚಾರಕ್ಕೆ ಬಂದರೆ ಬಂದವರನ್ನು ಬಿಡುವುದಿಲ್ಲ ಎಂದು ಅನೇಕ ಬಾರಿ ಸಾಬೀತಾಗಿದೆ. ಯಾಕೆಂದರೆ ಸೇನೆಯ ವಿಚಾರದಲ್ಲಿ ಮೋದಿಜೀ ಸರಕಾರ ಯಾವುದೇ ರಾಜಿ ಮಾಡಿಕೊಳ್ಳದೆ ನಿರ್ಧಾರ ಕೈಗೊಂಡಿದ್ದು, ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಈ ಕಾರಣದಿಂದಾಗಿಯೇ ಚೀನಾದ 60ಕ್ಕೂ ಹೆಚ್ಚು ಸೈನಿಕರನ್ನು ಭಾರತೀಯ ಸೇನೆ ಹೊಡೆದುರುಳಿಸಿದ್ದು.ಇದರಲ್ಲಿ ನಮ್ಮ ಸೈನಿಕರು ಕೂಡ ಹುತಾತ್ಮರಾಗಿದ್ದಾರೆ, ಆದರೆ ಗಡಿ ಬಿಟ್ಟು ಉಂದಿಂಚೂ ಹಿಂದೆ ಬರುವುದಿಲ್ಲ ಎಂದು ಭಾರತೀಯ ಸೇನೆ ಚೀನಾಗೆ ನೇರವಾಗಿ ಎಚ್ಚರಿಕೆ ನೀಡಿದೆ.

ಭಾರತ ಯಾವತ್ತೂ ಕೂಡ ಶಾಂತಿ ಬಯಸಿದ ರಾಷ್ಟ್ರವೇ ಹೊರತು, ತಾನಾಗಿ ಯಾವ ದೇಶದ ಮೇಲೂ ದಾಳಿ ಮಾಡಲು ಪ್ರಯತ್ನಿಸಲಿಲ್ಲ. ಆದರೆ ರಾಜಿ ಮಾತುಕತೆ ನಡೆಸಿದ ಮೇಲೂ ಕೂಡ ಚೈನಾ ತನ್ನ ನರಿ ಬುದ್ದಿ ತೋರಿಸಿದ್ದು, ಇದನ್ನು ಪ್ರಶ್ನಿಸಲು ಹೋದ ಭಾರತೀಯ ಸೇನೆಯ ಅಧಿಕಾರಿಯ ಮೇಲೆ ಹಲ್ಲೆ ಮಾಡಿ ಹತ್ಯೆ ಮಾಡಲಾಯಿತು. ಆದರೆ ಇದಕ್ಕೆ ಪ್ರತ್ಯುತ್ತರವಾಗಿ ಭಾರತೀಯ ಸೇನೆ ನಡೆಸಿದ ಹೊಡಿಬಡಿ ಆಟದಲ್ಲಿ ಚೈನಾದ 60ಕ್ಕೂ ಹೆಚ್ಚು ಸೈನಿಕರು ನಾಯಿಯಂತೆ ಸತ್ತು ಬಿದ್ದರು. ಸತ್ತ ಹೆಣ ಕೂಡ ಭಾರತಕ್ಕೆ ಬಂತೇ ಹೊರತು ನೇರವಾಗಿ ಚೈನಾಗೆ ಹೋಗಲಿಲ್ಲ. ‌ಕಾರಣ, ಜಗಳ ನಡೆದ ಜಾಗ ಎತ್ತರದ ಪರ್ವತ ಪ್ರದೇಶವಾಗಿದ್ದು ಎರಡೂ ಕಡೆಯ ಸೈನಿಕರು ಕೆಳಗೆ ಬಿದ್ದಿದ್ದಾರೆ. ಕೆಳಗೆ ನದಿ ಇದ್ದು, 0° ಹವಾಮಾನ ಇರುವ ನದಿಯಾಗಿದೆ. ಯಾವುದೇ ಜೀವ ಇರುವ ವಸ್ತು ಬಿದ್ದರು ಕ್ಷಣ ಮಾತ್ರದಲ್ಲಿ ಮಂಜುಗಡ್ಡೆಯಂತಾಗಿ ಹೋಗುತ್ತಾರೆ, ಅಷ್ಟೊಂದು ಶೀತ ಪ್ರದೇಶ ಇದಾಗಿದೆ. ಈ ಕಾರಣದಿಂದ ಮೇಲಿಂದ ಬಿದ್ದವರು ಜೀವಂತವಾಗಿ ಸಿಗಲಿಲ್ಲ. ಭಾರತೀಯ ಸೈನಿಕರು ನಾಪತ್ತೆಯಾದ ವಿಚಾರ ತಿಳಿದ ಕೂಡಲೇ ಸೇನೆಯ ವತಿಯಿಂದ ರಕ್ಷಣಾ ಕಾರ್ಯ ನಡೆದಿದ್ದು, ಶವಗಳು ಪತ್ತೆಯಾಗಿವೆ. ಆದರೆ ಚೀನಾದ ಸೈನಿಕರ ಹೆಣಗಳು ನದಿ ನೀರಿನಲ್ಲಿ ತೇಲಿ ಬಂದ ನಂತರವೇ ಅದನ್ನು ಮೇಲಕ್ಕೆತ್ತಲಾಗಿತ್ತು. ನಂತರದಲ್ಲಿ ಭಾರತೀಯ ವಾಯು ಸೇನೆಯ ಅನುಮತಿ ಪಡೆದು ಚೀನಾ ತನ್ನ ಸತ್ತ ಸೈನಿಕರ ಹೆಣವನ್ನು ಪಡೆದುಕೊಂಡಿತ್ತು.

ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಇಲ್ಲಿ ಯಾವುದೇ ಗುಂಡಿನ ದಾಳಿ ನಡೆಯಲಿಲ್ಲ. ಯಾಕೆಂದರೆ ಈ ಸ್ಥಳದಲ್ಲಿ ಯಾವುದೇ ಗುಂಡುಗಳನ್ನು ಉಪಯೋಗಿಸುವಂತಿಲ್ಲ. ಆದ್ದರಿಂದಲೇ ಚೀನಾದ ಸೈನಿಕರು ಕಬ್ಬಿಣದ ರಾಡ್‌ಗಳಿಂದ ಕಲ್ಲುಗಳಿಂದ ಭಾರತೀಯ ಸೇನೆಯ ಮೇಲೆ ದಾಳಿ ನಡೆಸಿತ್ತು.

ಸತ್ತವರ ಸಂಖ್ಯೆಯಲ್ಲಿ ಚೀನಾದ ಸೈನಿಕರೇ ಹೆಚ್ಚಾಗಿತ್ತು. ಆದರೆ ಭಾರತದ 20 ಸೈನಿಕರು ಕೂಡ ಪ್ರಾಣ ಕಳೆದುಕೊಂಡರು. ಇಷ್ಟಾಗಿದ್ದೇ ತಡ, ಭಾರತದಲ್ಲಿನ ಕಲಬೆರಕೆ ಭಾರತೀಯರು ಮೋದಿ ಸರಕಾರವನ್ನು ಪ್ರಶ್ನಿಸಲು ಪ್ರಾರಂಭಿಸಿದರು. ಯಾಕೆಂದರೆ ಅವರಿಗೆ ಇಂತಹ ಸಂದರ್ಭಗಳಲ್ಲಿ ತಮ್ಮ ತೀಟೆ ತೀರಿಸಿಕೊಳ್ಳಲು ಒಳ್ಳೆಯ ಅವಕಾಶ ಸಿಗುತ್ತದೆ. ಇದೇ ಕಾರಣಕ್ಕೆ ಊಟಕ್ಕಿಲ್ಲದ ಉಪ್ಪಿನಕಾಯಿ ನಾಯಕ ರಾಹುಲ್ ಗಾಂಧಿ ಕೂಡ ಮೋದಿ ಸರಕಾರವನ್ನು ಪ್ರಶ್ನಿಸಿದನು.

ಭಾರತೀಯ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸುವ ಬದಲು ಮೋದಿ ಸರಕಾರವನ್ನು ಪ್ರಶ್ನಿಸಿದನು. ಚೀನಾವನ್ನು ಪ್ರಶ್ನಿಸುವ ಬದಲು ಭಾರತ ಸರಕಾರವನ್ನೇ ಪ್ರಶ್ನಿಸುವ ಇಂತಹ ನಾಲಾಯಕ್‌ಗಳು ಚೀನಾದ ರಾಯಭಾರಿಗಳು ಎಂದರೂ ತಪ್ಪಾಗಲಾರದು.

ದೇಶದ ರಕ್ಷಣೆಯ ವಿಚಾರದಲ್ಲಿ ಸೇನೆ ಎಷ್ಟು ಬಲಿಷ್ಠವಾಗಿದೆಯೋ ಅಷ್ಟೇ ಸೇನೆಯ ರಕ್ಷಣೆಯ ವಿಚಾರದಲ್ಲಿ ಮೋದಿಜೀ ಸರಕಾರ ಕೂಡ ಸ್ಪಷ್ಟವಾಗಿದೆ. ‌ಆದರೆ ತೀಟೆ ತೀರಿಸಿಕೊಳ್ಳುವ ರಾಜಕಾರಣಿಗಳು ಮೋದಿ ಸರಕಾರವನ್ನು ಟೀಕೆ ಮಾಡಲೆಂದೇ ದಂಧೆ ನಡೆಸುವ ರಾಜಕಾರಣಿಗಳು. ಕಾಂಗ್ರೆಸ್ ಅಥವಾ ಯಾರೇ ಆಗಲಿ ಮೋದಿಜೀ ಸರಕಾರವನ್ನು ಟೀಕೆ ಮಾಡಲಿ, ಆದರೆ ಮೋದಿಜೀಯನ್ನು ಟೀಕಿಸುವ ಭರದಲ್ಲಿ ಭಾರತೀಯ ಸೇನೆಯನ್ನು ಅವಮಾನಿಸಬೇಡಿ.

ಪ್ರತಿಯೊಬ್ಬ ಭಾರತೀಯನೂ ಒಂದು ಪ್ರತಿಜ್ಞೆ ಮಾಡೋಣ, ಚೀನಾದ ಯಾವುದೇ ವಸ್ತುಗಳನ್ನು ಉಪಯೋಗಿಸದೇ ಇರುವುದು ನಮ್ಮ ಕರ್ತವ್ಯ. ಚೀನಾವನ್ನು ಭಾರತ ಯಾವ ರೀತಿ ಸೋಲಿಸಲಿದೆ ಎಂಬುದನ್ನು ನಾವು ಭಾರತೀಯರು ಪ್ರದರ್ಶಿಸೋಣ.

ಮೇರ ಭಾರತ್ ಮಹಾನ್
ಜೈ ಹಿಂದ್

Tags

Related Articles

FOR DAILY ALERTS
Close