ಪ್ರಚಲಿತ

ಶಿವನ ‘ಈ’ ದೇವಾಲಯವನ್ನ ನೋಡಿಯೇ ಸಂಸತ್ತಿನ ನಿರ್ಮಾಣವಾಗಿದೆ!!! ಯಾವುದೀ ಮಂದಿರ?

ಇಡೀ ಜಗತ್ತಿನಲ್ಲಿ ಬೇರೆ ಮತಗಳಿಗೆ ಹೋಲಿಸಿದರೆ ಅನ್ಯ ದೇಶದ ಜನರಿಗೆ ಹಿಂದೂ ಧರ್ಮವೆಂದರೆ ಅದೇನೋ ಗೌರವ, ಮರ್ಯಾದೆ ಕೊಂಚ ಜಾಸ್ತಿಯೇ.

ಇಡೀ ಜಗತ್ತಿನಲ್ಲಿ ಅಲ್ಲಲ್ಲಲ್ಲಿ ನಡೆದ ಉತ್ಖನನ(excavation), ರಿಸರ್ಚ್ ನೋಡಿದಾಗ ಎಲ್ಲ ದೇಶಗಳಲ್ಲೂ ಒಂದಿಲ್ಲೊಂದು ಹಿಂದೂ ಧರ್ಮದ ದೇವಾಲಯಗಳ ಕುರುಹುಗಳು ಸಿಕ್ಕೇ ಸಿಗುತ್ತವೆ. ಅವುಗಳು ಹತ್ತಾರು ಸಾವಿರ ವರ್ಷಗಳ ಹಿಂದೆಯೇ ನಮ್ಮ ಪೂರ್ವಜ ಹಿಂದುಗಳು ರಚನೆ ಮಾಡಿದ್ದರು ಹಾಗು ಇಡೀ ಜಗತ್ತಿನಲ್ಲಿ ಹಿಂದೂ ಧರ್ಮದ ಪ್ರಭಾವ ಇದ್ದದ್ದು ನಿಚ್ಚಳವಾಗಿ ಕಾಣಸಿಗುತ್ತದೆ.

ಅಂಥದ್ರಲ್ಲಿ ಹಿಂದುಗಳ ಮೂಲಸ್ಥಾನ ಹಿಂದುಸ್ಥಾನದಲ್ಲಿ ಅದೆಷ್ಟು ಮಂದಿರಗಳು, ಮಂದಿರಗಳ ಅವಶೇಷಗಳು ಸಿಗಲಿಕ್ಕಿಲ್ಲ ಹೇಳಿ.

ಹಿಂದೂ ಧರ್ಮ ಶೇಷ್ಟ್ರ ಧರ್ಮ ಅನೋದರಲ್ಲಿ ಎರಡು ಮಾತಿಲ್ಲ, ಇಲ್ಲಿ ಪ್ರತಿಯೊಂದು ವಿಷಯಕ್ಕೂ, ಘಟನೆಗೂ ತನ್ನದೇ ಆದ ಇತಿಹಾಸವಿದೆ, ವಿಜ್ಞಾನವಿದೆ ಹಾಗು ಆಧುನಿಕ ಜಗತ್ತಿಗೆ ಒಳಿತಾಗುವ ಅನೇಕ ಅಂಶಗಳು ಹಿಂದೂ ಧರ್ಮದಲ್ಲಿದೆ.

ಅದಕ್ಕೊಂದು ಸಣ್ಣ ಉದಾಹರಣೆಯೆಂದರೆ
1927 ರಲ್ಲಿ ಭಾರತದ ಪಾರ್ಲಿಮೆಂಟ್ ಹೌಸ್‌ ನ್ನ ಬ್ರಿಟಿಷರು ನಿರ್ಮಾಣ ಮಾಡಿದ್ದು. ಆದರೆ ಈ ಪಾರ್ಲಿಮೆಂಟ್‌ ಹೌಸ್‌ ನಿರ್ಮಾಣಕ್ಜೆ ಸ್ಫೂರ್ತಿ ಏನು ಗೊತ್ತೇ..??

ಕಟ್ಟಾ ಕ್ರಿಶ್ಚಿಯನ್ನರು ಯಾರೂ ಮೂರ್ತಿ ಪೂಜೆಯಾಗಲಿ, ದೇವಸ್ಥಾನವಾಗಲಿ ಅಥವ ದೇವರು ಅಂತಾಗಲಿ ಪೂಜಿಸಲ್ಲ. ಆದರೆ ಕ್ರಿಶ್ಚಿಯನ್ನರಾಗಿದ್ದ ಬ್ರಿಟಿಷರಿಗೆ ಪಾರ್ಲಿಮೆಂಟಿನ ನಿರ್ಮಾಣಕ್ಕೆ ಸ್ಪೂರ್ತಿಯಾಗಿ ನಿಂತಿದ್ದು “ಚೌಸತ್ ಯೋಗಿನಿ ದೇವಾಲಯ”

ಹೌದು ಈ ಚೌಸತ್ ಯೋಗಿನಿ ದೇವಾಲಯದ ಮಾದರಿಯನ್ನಿಟ್ಟುಕೊಂಡೇ ಬ್ರಿಟಿಷರು ಸಂಸತ್ತಿನ ನಿರ್ಮಾಣ ಮಾಡಿದ್ದರು.

ಚೌಸತ್ ಯೋಗಿನಿ ದೇವಾಲಯವು ಮಧ್ಯಪ್ರದೇಶದ ಗ್ವಾಲಿಯರ್ ನಿಙದ 40 ಕಿಲೋಮೀಟರ್ (25 ಮೈಲು) ದೂರವಿರುವ ಮೊರೆನಾ ಜಿಲ್ಲೆಯ ಪಾಡೋಲಿ ಸಮೀಪದ ಮಿಟೊಲಿ ಹಳ್ಳಿಯಲ್ಲಿದೆ.

1323 ರ ಶಾಸನದ ಪ್ರಕಾರ ಈ ದೇವಸ್ಥಾನವನ್ನು ರಾಜ ‘ದೇವಪಾಲ’ ನಿರ್ಮಿಸಿದ್ದನು. ದೇವಸ್ಥಾನವು ಜ್ಯೋತಿಷ್ಯ ಹಾಗು ಸೂರ್ಯನ ಸಂಚಾರದ ಆಧಾರದ ಮೇಲೆ ಗಣಿತಶಾಸ್ತ್ರದಲ್ಲಿ ಶಿಕ್ಷಣ ಒದಗಿಸುವ ಸ್ಥಳವಾಗಿದೆ ಎಂದು ಹೇಳಲಾಗುತ್ತದೆ.

ಚೌಸತ್ ಯೋಗಿನಿ ದೇವಾಲಯ ರಚನೆಯ ಸ್ಫೂರ್ತಿಯಿಂದ ಭಾರತದ ಪಾರ್ಲಿಮೆಂಟ್‌ ಹೌಸ್‌ ಕಟ್ಟಡವನ್ನ ಬ್ರಿಟಿಷರು ನಿರ್ಮಿಸಿದ್ದಾರೆ.

ವೃತ್ತಾಕಾರವಾಗಿ ಗೋಡೆ ಹೊಂದಿರುವ ಈ ಕಟ್ಟಡವು 64 ಚೇಂಬರ್‌‌ ಗಳನ್ನ ಒಳಗೊಂಡಿದ್ದು, ಹೋಲಿಕೆಯಲ್ಲಿ ಭಾರತದ ಸಂಸತ್ತಿನ ಶೈಲಿಗೆ ಬಹಳ ಹತ್ತಿರವಾಗಿದೆ.

ಇನ್ನು ಚೌಸತ್ ಯೋಗಿನಿ ದೇವಾಲಯ ‘ಏಕಾಟ್ಟರ್ಸೋ’ ಮಹಾದೇವ ದೇವಾಲಯ ಎಂದೇ ಪ್ರಸಿದ್ಧಿಯಾದ ದೇವಾಲಯ.

ದೇಶದಲ್ಲಿರುವ ಒಟ್ಟು ಯೋಗಿನಿಗಳ ದೇವಾಲಯಗಳಲ್ಲಿ ಉತ್ತಮ ಸ್ಥಿತಿಯಲ್ಲಿರುವ ದೇವಾಲಯ ಇದಾಗಿದೆ.

ದೇವಾಲಯದ ಮಧ್ಯಭಾಗದಲ್ಲಿ ವೃತ್ತಕಾರದ ತೆರೆದ ಮಂಟಪವಿದೆ. ಇನ್ನು ಈ ದೇವಾಲಯದಲ್ಲಿ ಶಿವನನ್ನ ಆರಾಧ್ಯದೈವವಾಗಿ ಪೂಜಿಸಲಾಗುತ್ತದೆ.

ದೇವಾಲಯದ ವಿನ್ಯಾಸ ಭೂಕಂಪದ ಆಘಾತಗಳನ್ನು ತಡೆಗಟ್ಟುತ್ತಿದೆ, ಅದರ ಸುತ್ತಲಿನ ರಚನಾತ್ಮಕ ವೈಶಿಷ್ಟ್ಯಗಳಿಗೆ ಯಾವುದೇ ಹಾನಿಯಾಗದಂತೆ ಕಟ್ಟಿಸಲಾಗಿದೆ. ಇದಕ್ಕೆ ಕಾರಣ ಈ ಮಂದಿರವಿರುವುದು ಭೂಕಂಪನ ವಲಯ ಹೆಚ್ಚಾಗುವ ಪ್ರದೇಶದಲ್ಲೇ.

ಸಂಸತ್ ಭವನದ ಭೂಕಂಪನದ ಪರಿಣಾಮದಿಂದ ಸುರಕ್ಷತೆಯ ಸಮಸ್ಯೆಯು ಚೌಸತ್ ಯೋಗಿನಿ ದೇವಾಲಯದಂತೆಯೇ ವೃತ್ತಾಕಾರದ ರಚನೆಯಾಗಿದ್ದು, ಭಾರತೀಯ ಸಂಸತ್ತಿನಲ್ಲಿ ಚರ್ಚಿಸಿದಾಗ ಈ ಸತ್ಯವನ್ನು ಉಲ್ಲೇಖಿಸಲಾಗಿದೆ.

ಭಾರತದ ಪುರಾತತ್ತ್ವ ಇಲಾಖೆ ಈ ದೇವಾಲಯವನ್ನ ಪುರಾತನ ಐತಿಹಾಸಿಕ ಸ್ಮಾರಕವೆಂದು ಘೋಷಿಸಲಾಗಿದೆ.

ಇದು ವೈಜ್ಞಾನಿಕತೆಗೆ ಹಿಡಿದ ಕೈಗನ್ನಡಿಯಾದ ಒಂದು ಹಿಂದೂ ದೇವಾಲಯವಾದರೆ ಇಂತಹ ಅದೆಷ್ಟೋ ಲಕ್ಷಾಂತರ ದೇವಾಲಯಗಳು ಭಾರತದಲ್ಲಿವೆ.

ಮಂದಿರ ನಿರ್ಮಾಣ ಆಗಿನ ಕಾಲದಲ್ಲಿ ಆಗಮ ಶಾಸ್ತ್ರದ ಪ್ರಕಾರ ಕಟ್ಟಲಾಗುತ್ತಿತ್ತು. ಮಂದಿರ ನಿರ್ಮಾಣವಾಗುವ ಜಾಗವನ್ನ ಎಲ್ಲಿ ಬೇಕಾದರಲ್ಲಿ ಮಾಡುವುದಲ್ಲ, ಎಲ್ಲಿ ಧನಾತ್ಮಕ ಶಕ್ತಿ ವಿಪುಲವಾಗಿರುತ್ತೋ ಅಂತಹ ಸ್ಥಳವನ್ನೇ ಗುರುತಿಸಿ ಅಲ್ಲಿ ಆಗಮ ಶಾಸ್ತ್ರದ ಪ್ರಕಾರ ಮಂದಿರಗಳ ರಚನೆಯನ್ನು ಮಾಡಲಾಗುತ್ತಿತ್ತು.

ಧನಾತ್ಮಕ ಶಕ್ತಿ ಯಥೇಚ್ಛವಾಗಿರುವ ಜಾಗದಲ್ಲಿ ಮಂದಿರ ನಿರ್ಮಾಣವಾದರೆ ಮಂದಿರಕ್ಕೆ ಬರುವ ಭಕ್ತರಿಗೆ ಧನಾತ್ಮಕ ಶಕ್ತಿ ಸಿಕ್ಕು ಅವರಿಗರ ಶಾಂತಿ ನೆಮ್ಮದಿ ಒದಗುತ್ತದೆ ಅನ್ನೋದು ನಮ್ಮ ಪೂರ್ವಜರ ವೈಜ್ಞಾನಿಕ ಮನೋಭಾವನೆಯಾಗಿತ್ತು.

ಆದರೆ ಇಂದು ನಿರ್ಮಾಣವಾಗುತ್ತಿರುವ ಅಸಂಖ್ಯ ದೇವಾಲಯಗಳು ಆಗಮಶಾಸ್ತ್ರದ ಪ್ರಕಾರವಿರದೆ ತಮಗೆ ಬೇಕಾದ ರೀತಿಯಲ್ಲಿ ನಿರ್ಮಾಣವಾಗುತ್ತಿವೆ, ಹಳೆಯ ವಿನ್ಯಾಸದ ಮಂದಿರಗಳಿಗೆ ಹೋಲಿಕೆ ಮಾಡಿದರೆ ಈಗ ನಿರ್ಮಿಸಿರುವ ದೇವಾಲಯಗಳಿಂದ ಧನಾತ್ಮಕ ಶಕ್ತಿ ಕಡಿಮೆ ಪ್ರಮಾಣದಲ್ಲೇ ಸಿಗುತ್ತೆ ಅನ್ನೋದಂತೂ ಸತ್ಯ.

ಅದೇನೇ ಇರಲಿ ಹಿಂದುಗಳು ಕೈಗೊಳ್ಳುವ ಪ್ರತಿಯೊಂದು ಕೆಲಸದಲ್ಲೂ, ಆಚರಣೆ, ಪೂಜಾ ಪದ್ಧತಿ, ದೇವರು ಸಂಸ್ಕೃತಿ ಎಲ್ಲವೂ ವೈಜ್ಞಾನಿಕವಾಗೇ ಇದ್ದು ಇವುಗಳ ಬಗ್ಗೆ ನಮ್ಮ ಪೀಳಿಗೆ ತಿಳಿದುಕೊಳ್ಳಬೇಕಿರುವುದು ಸಾಕಷ್ಟಿದೆ

– Vinod Hindu Nationalist

Related Articles

Close