ಪ್ರಚಲಿತ

ಶುಭಸುದ್ದಿ! ಜಿಎಸ್ಟಿಯಲ್ಲಿ ಭಾರೀ ಬದಲಾವಣೆ ಮಾಡಿದ ಕೇಂದ್ರ ಸರಕಾರ! ಅಗ್ಗವಾಗಲಿದೆ ದಿನಬಳಕೆಯ ವಸ್ತುಗಳು!

ನರೇಂದ್ರ ಮೋದಿ ನೇತೃತ್ವದ ಸರಕಾರ ಭಾರತದ ಜನತೆಗೆ ಒಂದು ಗುಡ್ ನ್ಯೂಸ್ ನೀಡಿದೆ. ಅದೇನೆಂದರೆ ದಿನಬಳಕೆಯ ವಸ್ತುಗಳ ಮೇಲಿನ ಜಿಎಸ್‍ಟಿ ತೆರಿಗೆಯನ್ನು ಶೇ. 28ರಿಂದ ಶೇ. 18ಕ್ಕೆ ಇಳಿಕೆ ಮಾಡಿದ್ದು, ಇವುಗಳ ಬೆಲೆ ಮುಂದಿನ ದಿನಗಳಲ್ಲಿ ಅಗ್ಗವಾಗಲಿದೆ. ಗುವಾಹಟಿಯಲ್ಲಿ ಜಿಎಸ್‍ಟಿ ಕೌನ್ಸಿಲ್ ಸಭೆ ನಡೆಯುತ್ತಿದ್ದು 177 ವಸ್ತುಗಳ ಜಿಎಸ್‍ಟಿ ತೆರಿಗೆಯನ್ನು ಇಳಿಸಲು ತೀರ್ಮಾನಿಸಲಾಗಿದೆ. ಸರಕಾರದ ಈ ಮಹತ್ವದ ನಿರ್ಧಾರಕ್ಕೆ ಭಾರತೀಯರೆಲ್ಲರೂ ಸಂತಸ ವ್ಯಕ್ತಪಡಿಸಿದ್ದು, ಈ ವಸ್ತುಗಳ ಬೆಲೆಯಲ್ಲಿ ಭಾರೀ ಇಳಿಕೆ ಕಾಣಲಿದೆ.

ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ಜಿಎಸ್‍ಟಿ ಮಂಡಳಿಯ ಸಭೆ ನಡೆದಿದ್ದು, ಸರಿ ಸುಮಾರು 177ಕ್ಕೂ ಅಧಿಕ ವಸ್ತುಗಳ ಮೇಲಿನ ಜಿಎಸ್ಟಿ ತೆರಿಗೆ ಹೊರೆ ಇಳಿಕೆಯಾಗಿದೆ. 50 ಸಾಮಾಗ್ರಿಗಳಿಗೆ ಮಾತ್ರ ಶೇ 28ರಷ್ಟು ತೆರಿಗೆ ನಿಗದಿ ಮಾಡಲು ನಿರ್ಧರಿಸಲಾಗಿದೆ. ಸಣ್ಣ ತೆರಿಗೆದಾರರನ್ನು ಗಮನದಲ್ಲಿಟ್ಟುಕೊಂಡು 177ಕ್ಕೂ ಹೆಚ್ಚು ವಸ್ತುಗಳ ಮೇಲಿನ ಜಿಎಸ್‍ಟಿ ದರ ಶೇ.28ರಿಂದ 18ಕ್ಕೆ ಕಡಿತಗೊಳಿಸಲಾಗುವುದು ಎಂದು ಬಿಹಾರದ ಡಿಸಿಎಂ ಹಾಗೂ ಜಿಎಸ್‍ಟಿಎನ್ ಸಮಿತಿಯ ಮುಖ್ಯಸ್ಥ ಸುಶೀಲ್ ಕುಮಾರ್ ಮೋದಿ ತಿಳಿಸಿದರು.

ಯಾವೆಲ್ಲಾ ವಸ್ತುಗಳ ಜಿಎಸ್‍ಟಿ ಇಳಿಕೆ ಗೊತ್ತೇ?

ಜನರು ಪ್ರತೀ ದಿನ ಬಳಸುವ ವಸ್ತುಗಳಾದ ಸೋಪು, ಶೇವಿಂಗ್ ಕ್ರೀಂ, ವಾಷಿಂಗ್ ಪೌಡರ್, ಆಪ್ಟರ್ ಶೇವ್, ಟೂತ್‍ಪೇಸ್ಟ್, ಶ್ಯಾಂಪೂ, ಚಾಕಲೇಟ್ ಗ್ರಾನೈಟ್
ಸೌಂದರ್ಯ ನೈರ್ಮಲ್ಯ ಸಾಧನಗಳು, ಸಲಕರಣೆಗಳು, ಸೂಟ್‍ಕೇಸ್, ವಾಲ್‍ಪೇಪರ್, ಪ್ಲೈವುಡ್, ಸ್ಟೇಶನರಿ ವಸ್ತುಗಳು, ಸಂಗೀತ ವಾದ್ಯಗಳು, ಸೇರಿದಂತೆ ಒಟ್ಟು 177 ವಸ್ತುಗಳ ಜಿಎಸ್‍ಟಿ ದರವನ್ನು ಶೇ.18ಕ್ಕೆ ಇಳಿಸಲಾಗಿದೆ ಎಂದು ಸುಶೀಲ್ ಮೋದಿ ತಿಳಿಸಿದ್ದಾರೆ.

ಜುಲೈ 1 ರಂದು ಜಿಎಸ್‍ಟಿ ಜಾರಿಗೆ ತಂದ ಬಳಿಕ ವಸ್ತುಗಳ ಬೆಲೆಯಲ್ಲಿ ಹಲವಾರು ಮಾರ್ಪಾಡುಗಳು ನಡೆದವು. ಇಂಥದೊಂದು ಕ್ರಮದ ಅಗತ್ಯ ಇತ್ತು. ದೇಶದಲ್ಲಿ
ಆರ್ಥಿಕತೆಗೆ ಚೇತರಿಕೆ ಆಗಬೇಕಾದರೆ ಸರಕುಗಳ ಖರೀದಿ ಚುರುಕುಗೊಳ್ಳಬೇಕಾದರೆ ತೆರಿಗೆ ದರಗಳು ಹೊರೆಯಾಗದಂತೆ ಇರಬೇಕಿತ್ತು. ದುಬಾರಿ ತೆರಿಗೆಗೆ ಹೆದರಿ ಗ್ರಾಹಕರು ಖರೀದಿಯನ್ನು ಕಡಿಮೆ ಮಾಡಿದರೆ ಅದರ ಪರಿಣಾಮ ತುಂಬ ಕೆಟ್ಟದಾಗಿರುತ್ತದೆ. ದೇಶ ಈಗ ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಅದಕ್ಕಾಗಿ ಜುಲೈ 1ರಿಂದ ಜಿಎಸ್‍ಟಿ ವಿಧಿಸಲಾಗಿತ್ತು. ಇದರಿಂದ ಹಲವಾರು ವಸ್ತುಗಳ ಬೆಲೆಯಲ್ಲಿ ಇಳಿಕೆ ಅಥವಾ ಏರಿಕೆ ಕಂಡಿತ್ತು. ಕೆಲವೊಂದು ದಿನಬಳಕೆಯ ವಸ್ತುಗಳ ಮೇಲೆ ಶೇ. 28 ತೆರಿಗೆ ವಿಧಿಸಿರುವುದು ವ್ಯಾಪಕ ಖಂಡನೆಗೆ ಗುರಿಯಾಗಿತ್ತು.

ಜಿಎಸ್‍ಟಿಯಿಂದ ಆಗಿರುವ ಎಲ್ಲ ಸಮಸ್ಯೆಗಳನ್ನೂ ಪರಿಹರಿಸಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿ ಕಂಪೆನಿ ಕಾರ್ಯದರ್ಶಿಗಳ ಸಂಸ್ಥೆಯ
ಸಮಾವೇಶದಲ್ಲಿ ಹೇಳಿದ್ದರು. ಅದರಂತೆ ಜನಸಾಮಾನ್ಯರ ಬಳಕೆಯ ಸಿದ್ಧ ಚಪಾತಿಗಳು, ಬ್ರ್ಯಾಂಡ್ ರಹಿತ ಕುರುಕಲು ತಿಂಡಿಗಳು ಮತ್ತು ಆಯುರ್ವೇದ ಔಷಧಗಳು, ಕೈಮಗ್ಗದ ಬಟ್ಟೆಗಳು ಇತ್ಯಾದಿ ತೆರಿಗೆ ದರವನ್ನು ತಗ್ಗಿಸಲಾಗಿತ್ತು. ಇದೀಗ ದಿನಬಳಕೆಯ ತೆರಿಗೆಯನ್ನೂ ಇಳಿಸಲಾಯಿತು.

ಹವಾನಿಯಂತ್ರಿತ ರೆಸ್ಟೊರೆಂಟ್‍ಗಳ ಮೇಲಿನ ದುಬಾರಿ ತೆರಿಗೆ. ಹೋಟೆಲ್ ಮತ್ತು ತಿನಿಸು ಮಳಿಗೆಗಳ ಮಾಲೀಕರು ಮತ್ತು ಗ್ರಾಹಕರಿಬ್ಬರೂ ತನ್ನನ್ನು ಶಪಿಸುತ್ತಿರುವುದು ಸರ್ಕಾರದ ಗಮನಕ್ಕೂ ಬಂದಿದೆ. ಅದಕ್ಕಾಗಿ ಇಂದು ನಾನ್‍ಏಸಿ ಮತ್ತು ಏಸಿ ರೆಸ್ಟೋರೆಂಟ್‍ಗಳ ದರವನ್ನೂ ಇಳಿಸಲು ನಿರ್ಧರಿಸಲಾಗಿದೆ.

ಜಿಎಸ್‍ಟಿ ಆರಂಭಗೊಂಡ ತಕ್ಷಣ `ಉತ್ತಮ, ಸರಳ ಅಲ್ಲ’ ಎಂಬ ಟೀಕೆ, ಟಿಪ್ಪಣಿಗಳನ್ನು ಮೋದಿ ಸರ್ಕಾರ ಕೇಳಬೇಕಾಯಿತು. ಒಂದು ತೆರಿಗೆ ವ್ಯವಸ್ಥೆಯಿಂದ ಇನ್ನೊಂದಕ್ಕೆ ವರ್ಗಾವಣೆ ಆಗುವಾಗ ಆರಂಭಿಕ ಸಮಸ್ಯೆಗಳು, ಗೊಂದಲಗಳು ಎದುರಾಗುವುದು ಸಹಜವೇ ಆಗಿದೆ. ಅದಕ್ಕಾಗಿ ಎರಡು ತಿಂಗಳು ಕಾದು ನೋಡಿ ಮತ್ತೆ ಜಿಎಸ್‍ಟಿ ಪರಿಷ್ಕರಿಸುವ ನಿರ್ಧಾರಕ್ಕೆ ಜಿಎಸ್‍ಕೌನ್ಸಿಲ್ ನಿರ್ಣಯಿಸಿದ್ದು ಅದು ಸಾಕಾರಗೊಂಡಿದೆ. ಆದ್ದರಿಂದ ತಪ್ಪುಗಳನ್ನು, ತೊಂದರೆಗಳನ್ನು ಸರಿಪಡಿಸಿ ಸರಕಾರ ತನ್ನ ಕರ್ತವ್ಯವನ್ನು ಮೆರದಿದೆ.

-ಚೇಕಿತಾನ

Related Articles

Close