ಇತಿಹಾಸ

ಶೃಂಗೇರಿ ಮಠದಲ್ಲಿ 1791ರ ಏಪ್ರಿಲ್ ರಂದು ನಡೆದ ನಿಜವಾದ ಘಟನೆಯಾದರು ಏನು?!

ಮಾರ್ಕ್ಸಿಸ್ಟ್ ಇತಿಹಾಸಕಾರರು ಟಿಪ್ಪು ಸುಲ್ತಾನ ಹಿಂದು ದೇವಾಲಯಗಳಿಗೆ ಮಾಡಿದ ದೌರ್ಜನ್ಯವನ್ನು ಮರೆಮಾಚಿ ಆತನನ್ನು ಹಿರೋ ಎಂದು ಬಿಂಬಿಸಿದ್ದಾರೆ. ಇವರಪ್ರಕಾರ ಮರಾಠರು ಶೃಂಗೇರಿ ಶಾರದಾಪೀಠವನ್ನು ಧ್ವಂಸಗೊಳಿಸಿ, ಅದನ್ನು ಲೂಟಿ ಮಾಡಿಕೊಂಡು ಹೋದರೆಂದು, ಅದಕ್ಕಾಗಿ ಶೃಂಗೇರಿ ಸ್ವಾಮಿಗಳ ಬಳಿ ಕ್ಷಮೆ ಕೇಳಿ, ಲೂಟಿ ಮಾಡಿಕೊಂಡ ಆಭರಣಗಳನ್ನು ಮತ್ತೆ ಮಾಡಿಸಿಕೊಟ್ಟು, ಮಠದ ಜೀರ್ಣೋದ್ಧಾರ ಕೆಲಸಗಳನ್ನು ಟಿಪ್ಪು ಸುಲ್ತಾನ್ ಮಾಡಿಸಿಕೊಟ್ಟಿದ್ದಾನೆ ಎಂದು ಹೇಳುತ್ತಾರೆ. ಆದರೆ ಇತಿಹಾಸಕಾರರಾದ ಉದಯ ಕುಲಕರ್ಣಿ ಅವರ “ಸೊಲ್ಟೈಸ್ ಎಟ್ ಪಾಣಿಪತ್” ಪುಸ್ತಕದಲ್ಲಿ ಭಾರತೀಯ ಇತಿಹಾಸದ ಮಹತ್ವವಾದ ಅಧ್ಯಾಯದ ಹಿಂದಿರುವ ಸತ್ಯವೇನು ಎಂಬುವುದರ ಬಗ್ಗೆ ವಿಶ್ವಾಸಾರ್ಹ ಪುರಾವೆಯ ಸಹಾಯದಿಂದ ವಿವರಿಸಿದ್ದಾರೆ!!

ಟಿಪ್ಪುವಿನ ಚಲನವಲನಗಳು ಉತ್ತಮವಾಗಿಲ್ಲ. ಆತ ಬಹಳ ಅಹಂಕಾರ ತುಂಬಿರುವ ವ್ಯಕ್ತಿಯಾಗಿದ್ದ. ಆ ಸಂದರ್ಭದಲ್ಲಿ ನೂರ್ ಮುಹಮ್ಮದ್, ಟಿಪ್ಪುವಿಗೆ ಸಂಬಂಧಿಸಿದ ಪತ್ರವೊಂದನ್ನು ಪಡೆದಿರುತ್ತಾರೆ. ಆ ಪತ್ರವನ್ನು 1784 ಸೆಪ್ಟಂಬರ್ 5ರಂದು ನಾನಾ ಫದ್ನೀಸ್‍ನಿಂದ ಮಹಾದ್ಜಿ ಸಿಂಧಿಯಾಗೆ ಬರೆದ ಪತ್ರ ಅದಾಗಿತ್ತು!! ಆ ಪತ್ರದಲ್ಲಿ ‘ಟಿಪ್ಪು 50,000 ಹಿಂದೂ ಮಹಿಳೆಯರನ್ನು ಮತ್ತು ಮಕ್ಕಳನ್ನು ಇಸ್ಲಾಂಗೆ ಪರಿವರ್ತನೆ ಮಾಡಿದ್ದು, ಇದು ಯಾವುದೇ ಪಡೀಷಾ ಅಥವಾ ವಝೀರ್ ನಿಂದ ಸಾಧ್ಯವಾಗದೇ ಇದ್ದದ್ದು ಇವನಿಂದ ಸಾಧ್ಯವಾಯಿತು. ಅಷ್ಟೇ ಅಲ್ಲದೇ, ಟಿಪ್ಪು ಇಡೀ ಹಳ್ಳಿಗಳನ್ನೇ ಇಸ್ಲಾಂಗೆ ಪರಿವರ್ತಿಸಿದ್ದಾನೆ’- ಎಂದು ಆ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು!!

ಥಾಮಸ್ ಡೇನಿಯಲ್- ಜೇಮ್ಸ್ ವಾಲೆ ಎನ್ನುವ ಪ್ರಸಿದ್ದ ಚಿತ್ರಕಾರರು ಶನಿವಾರ್ ವಾಡಾ ದರ್ಬಾರ್ ಎನ್ನುವ ಚಿತ್ರಕಲೆಯಲ್ಲಿ ಪುಣೆಯ ಇಂಗ್ಲೀಷ್ ರೆಸಿಡೆನ್‍ನ ಚಾಲ್ರ್ಸ್ ಡಬ್ಯು ಮಾಲೆಟ್ ಎನ್ನುವಾತ ಮರಾಠರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದರ ಕುರಿತು ತಮ್ಮ ಚಿತ್ರದಲ್ಲಿ ಚಿತ್ರಿಸಿದ್ದು, ಅದರಲ್ಲಿ ಪ್ರಮುಖವಾಗಿ ಮಾಲೆಟ್ ಬಗ್ಗೆ ರೂಪಿಸಲಾಗಿತ್ತು. ಅಲ್ಲದೇ, ಈ ಚಿತ್ರದಲ್ಲಿ ನಿಜಾಂ ಮತ್ತು ಮರಾಠರು ಇಂಗ್ಲೀಷರೊಂದಿಗೆ ಸೇರಿ ಟಿಪ್ಪು ಸುಲ್ತಾನನ ವಿರುದ್ದ ಹೋಗಿದ್ದಾರೆ ಎನ್ನುವುದನ್ನು ಇಲ್ಲಿ
ಚಿತ್ರಿಸಲಾಗಿದೆ!! ಆ ಸಂದರ್ಭದಲ್ಲಿ ಹೈದರ್ ಆಲಿ ಮರಾಠರ ಮಿತ್ರರಾಗಿದ್ದರು, ಆದರೆ 1790ರಲ್ಲಿ ಟಿಪ್ಪು , ತನ್ನ ತಂದೆಯ ಮಾಜಿ ಮಿತ್ರರಾಷ್ಟ್ರಗಳ ವಿರುದ್ದ ವಿರೋಧ ವ್ಯಕ್ತಪಡಿಸಲು ಇಂಗ್ಲೀಷರೊಂದಿಗೆ ಸೇರಿದ ಎನ್ನುವುದನ್ನು ಈ ಚಿತ್ರದಲ್ಲಿ ಸೂಚಿಸಲಾಗಿದೆ !!

ಟಿಪ್ಪು ವಿರುದ್ದ 1790-92ರ ಸಂದರ್ಭದಲ್ಲಿ ನಡೆದ ದಂಡಯಾತ್ರೆಯಲ್ಲಿ, ಮರಾಠರ ಮುಖ್ಯಸ್ಥರಾದ ರಘನಾಥ ರಾವ್ ‘ದಾದಾ’ ಕುರುಂದ್ವಡ್ಕಾರ್ ಶೃಂಗೇರಿಯ
ಶಂಕರಾಚಾರ್ಯ ಮಠವನ್ನು ದಾಳಿ ನಡೆಸಿ, ಲೂಟಿ ಮಾಡಿದ್ದಲ್ಲದೇ ಅಪವಿತ್ರಗೊಳಿಸಿದರು. ಈ ದಾಳಿಯ ಕಳಂಕ ಇಂದಿಗೂ ಮುಂದುವರೆದಿದ್ದು, ಮರಾಠರು ಹಾಗೂ ಪರಶುರಾಮ್ ಬಾಹು ಪಟ್ವರ್ಧನ್ ಜವಾಬ್ದಾರರಾಗಿದ್ದಾರೆ ಎಂದು ಹೇಳಲಾಗಿದೆ!! ಆದರೆ 1971ರ ಮರಾಠರ ಪತ್ರಗಳು ಹಲವಾರು ವ್ಯಾಖ್ಯಾನಕಾರರು ಅವರ ಭಾಷೆಯನ್ನು ತಿಳಿದಿಲ್ಲದೇ ಇರುವುದರಿಂದ ದುರ್ಬಲವಾದ ಮಾಹಿತಿಯಿಂದ ವಿಭಿನ್ನವಾದ ವಿಚಾರಗಳನ್ನು ನೀಡುತ್ತಿದೆ!!

1774ರ ಇಂಗ್ಲೀಷರ ವಿರುದ್ದದ ಒಂಭತ್ತು ವರ್ಷಗಳ ಯುದ್ದದ ಸಮಯದ ನಂತರ ಮರಾಠರು ಹೈದರ್ ಅಲಿ ಮತ್ತು ಟಿಪ್ಪುಯಿಂದ ಕೃಷ್ಣಾ ಮತ್ತು ತುಂಗಭದ್ರ ನದಿಗಳ ನಡುವಿನ ಭೂಪ್ರದೇಶವನ್ನು ಕಳೆದುಕೊಂಡರು!! ಟಿಪ್ಪು ಮರಾಠರ ಪ್ರಾಂತ್ಯಗಳನ್ನು ಆಕ್ರಮಣ ಮಾಡಿ 1784-85ರಲ್ಲಿ ಮರಾಠರೊಂದಿಗೆ ಮಾತುಕತೆ ನಡೆಸುವ ಸಂದರ್ಭದಲ್ಲಿ, ನಲಗುಂದ್ ದ ಮುಖ್ಯಸ್ಥ ವ್ಯಾಂಕತ್ ರಾವ್ ಭಾವೆ ಮತ್ತು ಆತನ ದಿವಾನ್ ಕಲೋಪಂತ್ ಪೇತೆ ಅವರನ್ನು ಜೈಲಿನಲ್ಲಿ ಸರಪಳಿಯಿಂದ
ಬಂಧಿಸಲಾಯಿತು. ಆದರೆ ಟಿಪ್ಪುವಿನ ಜೈಲಿನಲ್ಲಿ ಪೆತೆ ನಿಧನರಾದರು. ಅದೇ ವರ್ಷ ತನ್ನ ದಳ್ಳಾಲಿ ನೂರ್ ಮುಹಮ್ಮದ್ ಅವರಿಗೆ ಬರೆದ ಪತ್ರದಲ್ಲಿ, ಟಿಪ್ಪು ಕೇವಲ
ಒಂದು ದಿನದಲ್ಲಿ ಹಿಂದೂ ಮಹಿಳೆಯರನ್ನು ಸೇರಿಸಿ ಒಟ್ಟು 50,000 ಹಿಂದೂಗಳನ್ನು ಇಸ್ಲಾಂಗೆ ಪರಿವರ್ತಿಸಿದನು. ತದನಂತರ ದಾರವಾಢವನ್ನು ವಶಪಡಿಸಿಕೊಂಡನು. ಅಷ್ಟೇ ಅಲ್ಲದೇ, ಕೆಲ ಸುಂದರವಾದ ಯುವತಿಯರನ್ನು ಮುಸ್ಲಿಂ ಸೂಳೆಗೃಹಕ್ಕೆ (ಜನಾನ) ಕರೆದೊಯ್ಯಲಾಯಿತು ಎಂದು ಆ ಪತ್ರದಲ್ಲಿ ಬರೆಯಲಾಗಿತ್ತು!!

ಪರಶುರಾಮ್ ಬಾವು ಹಾಗೂ ಮರಾಠರು 1786ರ ಸಂದರ್ಭದಲ್ಲಿ ಟಿಪ್ಪುವಿನ ವಿರುದ್ದ ಆಕ್ರಮಣ ಮಾಡಿದ್ದು, ಬಾದಾಮಿಕೋಟೆಯನ್ನು ವಶಪಡಿಸಿಕೊಂಡರು. ಆ
ಸಂದರ್ಭದಲ್ಲಿ ಟಿಪ್ಪುವಿನ ಆಕ್ರಮಣದಿಂದಾಗಿ ಪುಣೆಯಲ್ಲಿ ಗಣನೀಯ ಪ್ರಮಾಣದ ವಿಕೋಪವು ಸಂಭವಿಸಿತು. ಈ ಪರಿಸ್ಥಿತಿಯನ್ನು ಕಂಡು ದುಃಖಿತನಾಗಿದ್ದ
ನಾನಾಫದ್ನಿಸ್, ಪರಶುರಾಮ್ ಬಾವು ಹಾಗೂ ಮರಾಠರ ಸೈನ್ಯವನ್ನು ಸೇರಿಕೊಳ್ಳಲು ಹೋಲ್ಕರ್‍ನಲ್ಲಿ ಕೇಳಿಕೊಂಡರು. ತದನಂತರ ನಾನಾ ಮತ್ತು ಚಾಲ್ರ್ಸ್‍ಮಲೆಟ್ ಬಾದಾಮಿಯಲ್ಲಿ ಒಟ್ಟುಸೇರಿದ್ದು, ಕೆಲ ಸಮಯದ ನಂತರ ನಾನಾ ಪುಣೆಗೆ ಹಿಂದಿರುಗಿದ. ಈ ವೇಳೆ ತುಕೋಜಿ ಹೋಲ್ಕರ್ ಮತ್ತು ಪರಶುರಾಮ ಭಾವು ಅವರು 48 ಲಕ್ಷ ರೂಪಾಯಿಗಳನ್ನು ಒಪ್ಪಿದ ಟಿಪ್ಪುವಿನ ಜೊತೆ ಒಪ್ಪಂದ ಮಾಡಿಕೊಂಡಿದ್ದಲ್ಲದೇ, ಖೈದಿಗಳನ್ನೂ ಕೂಡ ಪರಸ್ಪರ ವಿನಿಮಯ ಮಾಡಿಕೊಳ್ಳಲಾಯಿತು.

ಆದರೆ, 1786ರಲ್ಲಿ ನಾನಾ ಇಂಗ್ಲೀಷರ ಬಳಿ ಸಹಾಯಕ್ಕಾಗಿ ಮನವಿ ಮಾಡಿದ್ದರೂ ಕೂಡ, ತದನಂತರದ 1790ರಲ್ಲಿ ಇಂಗ್ಲೀಷರು ಆತನ ಮನವಿಯನ್ನು
ಅಂಗೀಕರಿಸಲಿಲ್ಲ!! ತದನಂತರ ಟಿಪ್ಪು ವಿರುದ್ದ ಯುದ್ದ ಸಾರಲು ಇಂಗ್ಲಿಷರು ಮರಾಠರ ಸಹಾಯವನ್ನು ಪಡೆದುಕೊಳ್ಳಲು ಆಸಕ್ತಿ ವಹಿಸಿದರು. ಹಾಗಾಗಿ 1790ರ
ಹೊತ್ತಿಗೆ ಒಂದು ಸಂಯೋಜಿತ ತಂತ್ರವನ್ನು ನಿಯೋಜಿಸಿ ಆ ಸ್ಥಳದಲ್ಲಿ ಇರಿಸಲಾಯಿತು. ಆ ಸಂದರ್ಭದಲ್ಲಿ ಲಾರ್ಡ್ ಕಾರ್ನ್‍ವಾಲಿಸ್ ಟಿಪ್ಪುವಿನ ವಿರುದ್ದ ಹೋರಾಡಲು ತನ್ನ ಸೈನ್ಯವನ್ನು ತೆಗೆದುಕೊಂಡು ಚೆನ್ನೈ ತಲುಪಿದ. ಮರಾಠರು ಪುಣೆಯಲ್ಲಿ ಹರಿಪಂತ್ ಫಾಡ್ಕೆಯ ಒಂದು ಸೈನ್ಯವನ್ನು ತೊರೆದಾಗ, ಪಾಟ್ವರ್ಧನ್ ಸಹೋದರರಾದ; ಪರಶುರಾಮ್ ಭಾವು ಮತ್ತು ರಘನಾಥ್ ರಾವ್ ‘ದಾದಾ’ ನೇತೃತ್ವವನ್ನು ವಹಿಸಿದರು. ಪಾಟ್ವರ್ಧನ್ ಸಹೋದರರರು ಹೈದರ್ ಮತ್ತು ಟಿಪ್ಪುವಿನ ಅಹಂಕಾರವನ್ನು ಮುರಿದರಲ್ಲದೇ ಟಿಪ್ಪು ಆ ಸಂದರ್ಭದಲ್ಲಿ ತನ್ನ ಹಲವು ಕುಟುಂಬಗಳನ್ನು ಕಳೆದುಕೊಂಡನು!!

ಪಾಟ್ವರ್ಧನ್ ಸಹೋದರರರು ಶ್ರೀರಂಗಪಟ್ಟಣವನ್ನು ವಶಪಡಿಸುವುದಕ್ಕೋಸ್ಕರ ಕಾರ್ನ್‍ವಾಲಿಸ್ ಜೊತೆ ಸೇರಲು ನಿರ್ಧರಿಸಿದ್ದಲ್ಲದೇ, ತಾನು ಹಿಂದಿನ ದಶಕದಲ್ಲಿ ಕಳೆದುಕೊಂಡ ಭೂಪ್ರದೇಶವನ್ನು ಮರಳಿ ಪಡೆಯುವಂತೆ ಮನಸ್ಸಿನಲ್ಲಿ ಯೋಚಿಸಿದರು. ಏಪ್ರಿಲ್ 6, 1791ರಂದು ಮುತ್ತಿಗೆ ಹಾಕಿ ಪರಶುರಾಮ ಭಾವು ಧಾರವಾಡ ಕೋಟೆಯನ್ನು ವಶಪಡಿಸಿಕೊಂಡು ತುಂಗಭದ್ರವನ್ನು ದಾಟಿ ಹರಿಹರದಲ್ಲಿ ರಘನಾಥ್ ರಾವ್ ನನ್ನು ಸೇರಿಕೊಂಡರು. ಆ ವೇಳೆ ರಘನಾಥ್ ರಾವ್ ಮಾಯಾಕೊಂಡ ಮತ್ತು ಚೆನ್ನಗಿರಿ ಕೋಟೆಯನ್ನು ವಶಪಡಿಸಿಕೊಂಡರು!!

ಈ ಸಮಯದಲ್ಲಿ ನೀಲಕಾಂತ್ ಅಪ್ಪ( ರಘನಾಥ್ ರಾವ್ ದಾದಾ ತಂದೆ) ಬಾಳಸಾಹೆಬ್ ಅರವರಿಗೆ ಮಿರಾಜ್‍ನಲ್ಲಿ ಪತ್ರ ಬರೆದಿದ್ದರು. ಆ ಪತ್ರದಲ್ಲಿ ಶೃಂಗೇರಿ ಮಠದ ಮೇಲೆ ಆದ ದಾಳಿಯ ಬಗ್ಗೆ ಹೇಳಲಾಗಿತ್ತು. ಈ ಪತ್ರವು ಹೇಳುವಂತೆ-

ದಾದಾಸಾಹೇಬನ ಸೈನ್ಯದಲ್ಲಿದ್ದ ಲಮಾನ್ ಮತ್ತು ಪಿಂಡರೀಗಳು ಶೃಂಗೇರಿ ಮಠದಲ್ಲಿರುವ ಲಕ್ಷಗಟ್ಟಲೆ ಇರುವ ಸಂಪತ್ತುಗಳನ್ನು ಜೊತೆಗೆ ಆನೆಗಳನ್ನು ಲೂಟಿ ಮಾಡಿದರು. ನಾನು ದಾದಾನಿಗೆ ಸರಕುಗಳನ್ನು ವಶಪಡಿಸಿಕೊಳ್ಳಲು ಪತ್ರ ಬರೆದಿದ್ದೇನೆ’ ಎಂದು. ಆದರೆ ಈ ಪತ್ರವು ಏಪ್ರಿಲ್ ಮಧ್ಯಭಾಗದಲ್ಲಿ ಮತ್ತೊಂದು ಪತ್ರವನ್ನು ಅನುಸರಿಸಿತು; ‘ಲೂಟಿಕೋರರನ್ನು ಬಂಧಿಸಿ, ಮಠಕ್ಕೆ ಸೇರಿದ ಜಂಬುರಾ ಮತ್ತು ಆನೆಗಳನ್ನು ಹಿಂಪಡೆದುಕೊಳ್ಳಲಾಯಿತು. ಇದರೊಂದಿಗೆ ಪ್ರಮುಖ ಹತ್ತರಿಂದ ಇಪ್ಪತ್ತು ಅಪರಾಧಿಗಳನ್ನು ಬಂಧಿಸಲಾಯಿತು. ಹಾಗಾಗಿ ದಾದಾಸಾಹೇಬ್ ತನ್ನ ಸೈನಿಕರನ್ನು ಬಂಧಿಸಿದ್ದರ ವಿರುದ್ದ ಕ್ರಮ ಕೈಗೊಳ್ಳುವುದು. ಅದಕ್ಕಾಗಿ ಕೆಲ ಸೈನಿಕರನ್ನು ಮತ್ತು ಆನೆಯನ್ನು ಅವನಿಗೆ ಕಳುಹಿಸಿಕೊಡಲಾಯಿತು’ ಎಂದು ಈ ಪತ್ರದಲ್ಲಿ ಬರೆದಿದ್ದರು.. ಮೇ 14ರಂದು, ರಘುನಾಥ್ ರಾವ್ ಅವರ ಪುತ್ರ ಟ್ರಿಂಬಕ್ ರಾವ್ ತನ್ನ ಚಿಕ್ಕಪ್ಪನಿಗೆ ಬರೆದ ಪತ್ರದಲ್ಲಿ, ‘ ಸೇನೆಯು ತುಂಗಾ ನದಿಯನ್ನು ದಾಟುವ ಮೊದಲೇ ಲಮಾನ್ ಮತ್ತು ಪಿಂಡಾರಿಸ್ ಗಳು ಶಿಮೊಗ್ಗವನ್ನು ತಲುಪಿದ್ದರು. ಅವರು ಶೃಂಗೇರಿಯ ಸ್ವಾಮಿ ಮಠವನ್ನು ಲೂಟಿ ಮಾಡಿದರು. ಸ್ವಾಮಿಯ ದಂಡ(ಸಿಬ್ಬಂದಿ) ಹಾಗೂ ಕಮಂಡಲು(ಹಡಗು)ಗಳನ್ನು ವಶಪಡಿಸಿಕೊಂಡರಲ್ಲದೇ ಏನನ್ನೂ ಉಳಿಸದೇ, ಅಲ್ಲಿದ್ದ ಎಲ್ಲಾ ಸಂಪತ್ತನ್ನು ವಶಪಡಿಸಿಕೊಂಡರು. ಅಷ್ಟೇ ಅಲ್ಲದೇ, ಅಲ್ಲಿರುವ ಮಹಿಳೆಯರನ್ನು ಹಲ್ಲೆ ನಡೆಸಿ ಅತ್ಯಾಚಾರವನ್ನು ಮಾಡಲಾಯಿತು. ಈ ವೇಳೆ ಅನೇಕ ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡರು. ಸ್ವಾಮಿಗಳ ವಿಗ್ರಹ, ಲಿಂಗ ಇತ್ಯಾದಿಗಳನ್ನು ಲೂಟಿ ಮಾಡಲಾಗಿದೆ. ಈ ಸಂದರ್ಭದಲ್ಲಿ ಅಲ್ಲಿನ ಸ್ವಾಮಿಗಳು ಕಠಿಣವಾದ 5ದಿನಗಳ ಉಪವಾಸವನ್ನು ಕೈಗೊಂಡರು ತದನಂತರದ ಸಮಯದಲ್ಲಿ ಸ್ವಾಮಿಗಳು ಇಹಲೋಕ ತ್ಯಜಿಸಿದರು…

ಆದರೆ ಸ್ವಾಮಿಗಳು ಇಹಲೋಕ ತ್ಯಜಿಸಿದ್ದು ನಿಜವಲ್ಲ. ತದನಂತರದಲ್ಲಿ ಈ ಪತ್ರವು ರಾಜ್ಯದೆಡೆಗೆ ಹೋಗುತ್ತದೆ, ‘ಯಾವಾಗ ತಂದೆಯವರು ಈ ಲೂಟಿಯ ಬಗ್ಗೆ
ಅರಿತುಕೊಂಡರೋ ಆ ಸಂದರ್ಭದಲ್ಲಿ ಲಾಮಾನನ್ನು ಬಂಧಿಸಲು ಅಶ್ವಸೇನೆಯನ್ನು ಕಳುಹಿಸಿದರು. ಆನೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಆದರೆ ಕಳುವಾದ
ಯಾವುದೇ ವಸ್ತುಗಳು ಕೂಡ ಇವರಿಗೆ ಸಿಕ್ಕಿರಲಿಲ್ಲ’

ಈ ವಿಷಯವು ಪುಣೆಯಲ್ಲಿದ್ದ ನಾನಾ ಫಡ್ನೀಸ್‍ಗೆ ತಲುಪಿತು. ತದ ನಂತರ ಒಂದು ಪತ್ರವು ಅವರ ಗುಮಾಸ್ತರಿಂದ ಡಿಸೆಂಬರ್ 1791ರಲ್ಲಿ ರಘನಾಥ್ ರಾವ್‍ಗೆ
ತಲುಪಿತು. 1791ರ ಆ ಪತ್ರದಲ್ಲಿ….

ಲಮಾನ್ ಮತ್ತು ಲೂಟಿಕೋರರು ಶೃಂಗೇರಿ ಮಠವನ್ನು ಲೂಟಿ ಮಾಡಿದರು; ಈ ಸುದ್ದಿಯು ನ್ಯಾಯಾಲಯಕ್ಕೆ ತಲುಪಿದೆ. ಆ ಎಲ್ಲಾ ಮಾಹಿತಿಗಳನ್ನು ಕೇಳಬೇಕು. ನೀವು ಬರೆದಿರುವ ವಿಚಾರದ ಪ್ರಕಾರ ‘ಲೂಟಿಕೋರರು ಎಲ್ಲಾ ನಾಲ್ಕು ದಿಕ್ಕುಗಳಿಂದ ಬಂದಿದ್ದಾರೆ. ನೀವು ಆ ಬಗ್ಗೆ ಕ್ರಮ ಕೈಗೊಂಡಿದ್ದೀರಿ ಮತ್ತು ಇತರ ಅಪರಾಧಿಗಳ ವಿರುದ್ದವೂ ಕ್ರಮ ಕೈಗೊಳ್ಳಬೇಕು’ ಎಂದು. ಇದಕ್ಕೆ ನಾನಾ; ‘ ಸ್ವಾಮಿಗಳ ಮಠವನ್ನು ಲೂಟಿ ಮಾಡಿದ್ದಕ್ಕಾಗಿ ಉಪವಾಸ ಕೈಗೊಂಡಿದ್ದಾರೆ. ಇದು ಸಾಮ್ರಾಜ್ಯಕ್ಕೆ ಒಳ್ಳೆಯ ಬೆಳವಣೆಗೆ ಅಲ್ಲ. ಆದರೆ ಸ್ವಾಮಿಯವರು ತೋರಿಸಿರುವ ಅಸಮಾಧಾನವು ಒಳ್ಳೆಯದಲ್ಲ…… ಸ್ವಾಮಿಯನ್ನು ಸರಿದೂಗಿಸಲು ಕಠಿಣವಾದ ಕ್ರಮ ತೆಗೆದುಕೊಳ್ಳಬೇಕು ಮತ್ತು ಅವರನ್ನು ಸಮಧಾನಪಡಿಸಬೇಕಾಗಿದೆ’ ಎಂದು ಪ್ರತ್ಯುತ್ತರವನ್ನು ಕಳುಹಿಸಿದ್ದಾರೆ….

ಟಿಪ್ಪು ಕಂಚಿಯಲ್ಲಿದ್ದ ವೇಳೆ ಕೆಲವು ಅಪ್ರಾಮಾಣಿಕತೆಯ ಮಾತುಕತೆಗಳು ನಡೆಯುತ್ತಿದ್ದವು. ಆ ಸಂದರ್ಭದಲ್ಲಿ ಕಾರ್ನ್‍ವಾಲಿಸ್ ಚೆನ್ನೈನಲ್ಲಿದ್ದ ಹಾಗಾಗಿ ಯುದ್ದದ
ಸಿದ್ದತೆಗಳು ಎರಡೂ ಕಡೆಗಳಿಂದಲೂ ನಡೆದಿದ್ದವು. ಹೈದರ್ ಅಲಿ ತನ್ನ ಆಳ್ವಿಕೆಯ ಆರಂಭದಲ್ಲಿ ಕಂಚಿ ದೇವಸ್ಥಾನದ ಗೋಪುರದ ಕೆಲಸ ಮಾಡಿಸಿದ್ದನು ಇದನ್ನು ಟಿಪ್ಪು ಪೂರ್ಣಗೊಳಿಸಿದ. ನಂತರದಲ್ಲಿ ರಥೋತ್ಸವ ನಡೆಸಲು ಅನುಮತಿ ನೀಡಿದ್ದಲ್ಲದೇ, ಕಂಚಿಯ ವಾರ್ಷಿಕ ಉತ್ಸವದಲ್ಲಿ ಸಿಡಿಮದ್ದು ಸಿಡಿಸುವಲ್ಲಿ ಟಿಪ್ಪು ಹಾಜರಾಗಿದ್ದನು.

ಶ್ರೀರಂಗಪಟ್ಟಣದಲ್ಲಿ ಹಿಂದೂ ದೇವರನ್ನು ಸಂರಕ್ಷಿಸಲು ಬ್ರಾಹ್ಮಣರು ಕಠಿಣವಾದ ಪೂಜೆ ಪುನಸ್ಕಾರಗಳನ್ನು ನಡೆಸುವಂತೆ ಆದೇಶಿಸುತ್ತಾನೆ. ಈ ಬಗ್ಗೆ ಹರಿಪಾಂತ್
ಫಾಡ್ಕೆ ಪತ್ರವೊಂದನ್ನು ಬರೆಯುತ್ತಾರೆ-

ರಂಗಸ್ವಾಮಿ ಮತ್ತು ಶಿವಾಲಯ ದೇವಸ್ಥಾನಗಳಲ್ಲಿ ಬ್ರಾಹ್ಮಣರು ಟಿಪ್ಪುವಿನ ಆದೇಶದಂತೆ ಕಠಿಣವಾದ ಪೂಜೆಗಳನ್ನು ಮಾಡುತ್ತಾರೆ. ಒಬ್ಬರು ನೀರಿನಲ್ಲಿ ಕುಳಿತುಕೊಂಡು, ಇನ್ನು 40 ಮಂದಿ ಬ್ರಾಹ್ಮಣರು ಮತ್ತೊಂದು ರೀತಿಯ ಕಠಿಣ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲಿಗೆ ಶೃಂಗೇರಿ ಸ್ವಾಮಿಯನ್ನು ಕೂಡ ಕರೆಸಿದ್ದರು, ಆ ವೇಳೆ ಸ್ವಾಮಿಗಳು ಉಪವಾಸವನ್ನು ಕೈಗೊಂಡಿದ್ದರು. ಟಿಪ್ಪು ಸ್ವಾಮಿಗಳನ್ನು ಸಮಾಧಾನಮಾಡುತ್ತಿದ್ದು, ಹಾನಿಗೊಳಗಾದ ಹಾಗೂ ಜಗದ್ಗುರು ಶಂಕರಾಚಾರ್ಯರು ಸ್ಥಾಪಿಸಿದ ಶೃಂಗೇರಿಯ ಶಾರದಾ ಪೀಠದ ಶಾರದೆಯ ವಿಗ್ರಹ ಮತ್ತು ದೇಗುಲ ಇವುಗಳ ದುರಸ್ತಿಗೆ ಅಪಾರವಾದ ನೆರವನ್ನು ನೀಡಿ ಶಾರದಾಂಬೆಯ ವಿಗ್ರಹದ ಪುನರ್ ಪ್ರತಿಷ್ಠಾಪನೆಗೆ ಟಿಪ್ಪುನೆರವಾದನು. ಜೊತೆಗೆ ಶ್ರೀರಂಗಪಟ್ಟಣದಿಂದ ಎರಡು ನೂತನ ಪಲ್ಲಕ್ಕಿಗಳನ್ನು ಕಳುಹಿಸಿ, ಅವುಗಳಲ್ಲಿ ಒಂದನ್ನು ತಾಯಿ ಶಾರದಾಂಬೆಗೆ, ಮತ್ತೊಂದನ್ನು ಜಗದ್ಗುರುಗಳು ಬಳಸಿಕೊಳ್ಳಬೇಕೆಂದು ವಿನಂತಿಸಿಕೊಂಡಿದ್ದನು. ಶೃಂಗೇರಿಯ ಸುತ್ತ ಮುತ್ತ ಇದ್ದ ಬ್ರಾಹ್ಮಣರ ಅಗ್ರಹಾರಗಳ ಅಭಿವೃದ್ಧಿಗೆ ಒತ್ತು ನೀಡುವುದರ ಜೊತೆಗೆ 40 ಸಾವಿರ ರೂಪಾಯಿಗಳನ್ನು ನೀಡಿದನು. ಅದರೊಂದಿಗೆ ಶೃಂಗೇರಿ ಮಠದಲ್ಲಿ ಪ್ರತಿನಿತ್ಯ ಒಂದು ಸಾವಿರ ಬ್ರಾಹ್ಮಣರಿಗೆ ಅನ್ನ ದಾಸೋಹ ನಡೆಸುವಂತೆ ವಾರ್ಷಿಕ ಅನುದಾನವನ್ನು ಘೋಷಿಸಿದನು.

ಇನ್ನೊಂದು ಪತ್ರದಲ್ಲಿ, ಟಿಪ್ಪುವಿನ ವಕೀಲ ‘ಅಪಾಜಿ ರಾಮ್ ಒಪ್ಪಂದಕ್ಕೆ ಮನವಿ ಮಾಡಿಕೊಂಡಿದ್ದರು’

1792 ಫೆಬ್ರವರಿಯಲ್ಲಿ ಮಿತ್ರರಾಷ್ಟ್ರಗಳು ಅಂತಿಮವಾಗಿ ಶ್ರೀರಂಗಪಟ್ಟಣವನ್ನು ಸುತ್ತುವರಿದರು. ಕಾರ್ನ್‍ವಾಲಿಸ್ ಟಿಪ್ಪುವಿನ ಶಕ್ತಿಯನ್ನು ಕುಗ್ಗಿಸಲು
ಉತ್ಸುಹಕನಾಗಿದ್ದನು. ಆದರೆ ನಿಜಾಮ ಮತ್ತು ಮರಾಠರ ಕಮಾಂಡರ್ ಹರಿಪಂತ್ ಅವರನ್ನು ನಿಗ್ರಹಿಸಲು ಬಯಸಿದನು. ಆದರೆ ಟಿಪ್ಪು ತೀವ್ರವಾಗಿ ಹೋರಾಡಿದ. ಆ ಸಂದರ್ಭದಲ್ಲಿ ಬಿಡ್ನೂರ್ ತುಂಗಭದ್ರದ ಉತ್ತರ ಪ್ರದೇಶವನ್ನೆಲ್ಲ ವಶಪಡಿಸಿಕೊಂಡ ನಂತರ ಪರಶುರಾಮ ಭಾವು ಶ್ರೀರಂಗಪಟ್ಟಣವನ್ನು ತಲುಪಿದನು. ಟಿಪ್ಪು ತನ್ನ ಮಕ್ಕಳನ್ನು ಕಾರ್ನ್‍ವಾಲಿಸ್‍ಗೆ ಒತ್ತೆಯಾಳುವಾಗಿ ಕಳುಹಿಸಿದನು!!

ಶೃಂಗೇರಿಯ ಯುದ್ದವು ಮರಾಠರ ಯೋಜನೆಯಾಗಿರಲಿಲ್ಲ. ಆದರೆ ಈ ಯುದ್ದವನ್ನು ಪರಭಕ್ಷಕ ಪಡೆಗಳು ಮತ್ತು ಲಾಮಾನ್ನರು( ಧಾನ್ಯಗಳನ್ನು ವ್ಯವಹರಿಸುತ್ತಿದ್ದ ಒಂದು ಜಾತಿ)ನಡೆಸಿದ್ದು, ಆದರೆ ಮರಾಠರು ಯಾರು ಕೂಡ ಈ ಯುದ್ದದಲ್ಲಿ ಪಾಲ್ಗೊಳಲಿಲ್ಲ. ಈ ಬಗ್ಗೆ ಬಹು ದೊಡ್ಡ ಸಂಖ್ಯೆಯ ಪತ್ರಗಳನ್ನು ಸಂಗ್ರಹಿಸಿರುವ ಇತಿಹಾಸಕಾರರಾದ ವಿವಿ ಖರೆ ಯವರು ಹೇಳುವ ಪ್ರಕಾರ, ಮರಾಠರು ಹಿಂದೂಗಳಾಗಿರುವುದರಿಂದ ಶೃಂಗೇರಿ ಮಠವು ಇವರಿಂದ ಸುರಕ್ಷಿತವಾಗಿದ್ದು, ಅಲ್ಲಿರುವ
ಬ್ರಾಹ್ಮಣವರ್ಗದವರಿಗಾಗಲಿ, ಅಲ್ಲಿದ್ದ ಹಿಂದೂಗಳಿಗಾಗಲಿ ಯಾರಿಗೂ ಕೂಡ ಯಾವುದೇ ರೀತಿಯ ಹಾನಿ ಸಂಭವಿಸಿರಲಿಲ್ಲ!!!

ನಿಯಮಿತ ಸೇನಾಪಡೆಗಳು ಮಠವನ್ನು ದಾಳಿ ಮಾಡಲಿಲ್ಲ. ಮರಾಠರು ಈ ಬಗ್ಗೆ ದುಃಖಿತರಾಗಿದ್ದು, ಸುಮಾರು ಒಂದು ವರ್ಷದ ನಂತರ ಸ್ವಾಮಿಗೆ ಪರಿಹಾರ ಮತ್ತು ಶಮನಗೊಳಿಸಲು ಪ್ರಯತ್ನಗಳು ನಡೆಯುತ್ತಿದ್ದವು. ಆದರೆ 1791ರಲ್ಲಿ ಒಂದು ಸುತ್ತಿನ ದಾಳಿಯ ನಂತರ ಟಿಪ್ಪು ದೇವಸ್ಥಾನಗಳಿಗೆ ಮತ್ತು ಬ್ರಾಹ್ಮಣರಿಗೆ ಸಮೀಪವಾಗಲು ಆರಂಭಿಸಿದ. ಆದರೆ ಮರಾಠರ ಪತ್ರಬರಹಗಾರರು ಟಿಪ್ಪುವಿನ ಕೃತ್ಯಗಳ ಬಗ್ಗೆ ಯಾವುದೇ ರೀತಿಯ ಮಾಹಿತಿಯನ್ನು ಹೇಳಿಯೇ ಇಲ್ಲ!!

ಆದರೆ, ಇತಿಹಾಸದ ವ್ಯಾಖ್ಯಾನದ ಬಗ್ಗೆ ಯಾವುದೇ ಸಮಯದಲ್ಲಿ ಮನಬಂದಂತೆ ಹೇಳುವುದು ಅಪಾಯಕಾರಿ ಪ್ರತಿಪಾದನೆಯಾಗಿದೆ. ಪ್ರಸ್ತುತ ದಿನಗಳಲ್ಲಿ ನಡೆಯುವ ಘಟನೆಗಳು ವಿಭಿನ್ನವಾದ ವಿಚಾರಗಳನ್ನು ಪ್ರತಿಪಾದಿಸುತ್ತವೆ. ಹೀಗಿರಬೇಕಾದರೆ, ಇನ್ನು ಇತಿಹಾಸವನ್ನು ತಿರುಚುವುದು ಕಷ್ಟವೇ?? ಆದರೆ ಶೃಂಗೇರಿ ಮಠದಲ್ಲಿ ನಡೆದ ದಾಳಿಯೂ ಯಾವುದೇ ಕಾರಣಕ್ಕೂ ಕೂಡ ಅದು ಮರಾಠರ ಗುರಿ, ನೀತಿ ಅಥವಾ ಯೋಜನೆಯಾಗಿರಲಿಲ್ಲ. ಆದರೆ ಅದೇ ವರ್ಷದಲ್ಲಿ ಅಂದರೆ 1791ರಲ್ಲಿ ಟಿಪ್ಪು ಸುಲ್ತಾನ ಕಂಚಿಯ ದೇವಸ್ಥಾನದ ಬಗ್ಗೆ ವಿಶೇಷವಾದ ಧರ್ಮನಿಷ್ಠೆಯನ್ನು ಮೆರೆದು ತನ್ನ ರಾಜಕೀಯ ಭವಿಷ್ಯವನ್ನು ಭದ್ರಪಡಿಸಿಕೊಂಡಿದ್ದು ಮಾತ್ರ ವಿಪರ್ಯಾಸ!!

ಮೂಲ:https://swarajyamag.com/culture/what-exactly-happened-at-sringeri-math-in-april-1791

-ಅಲೋಖಾ

Tags

Related Articles

Close