ಅಂಕಣದೇಶಪ್ರಚಲಿತ

ಸಂಜಯ್ ಗಾಂಧಿಯ ಹತ್ಯೆಗೆ ಮೂರು ಬಾರಿ ಪ್ರಯತ್ನ ನಡೆದಿತ್ತೇ? ವಿಕಿಲೀಕ್ಸ್ ನೀಡಿತ್ತು ಸ್ಫೋಟಕ ಮಾಹಿತಿ!

ಭಾರತದ ರಾಜಕೀಯ ಇತಿಹಾಸದಲ್ಲಿ ಸಂಜಯ್ ಗಾಂಧಿಯ ಸಾವೆನ್ನುವುದಿದೆಯಲ್ಲ, ಅದು ಗಾಂಧಿಯ ಕುಟುಂಬದ ಒಂದು ಮೈಲಿಗಲ್ಲು. ಸಂಜಯ್ ಗಾಂಧಿ ಬದುಕಿದ್ದಿದ್ದರೆ ಬಹುಷಃ ರಾಜೀವ್ ಗಾಂಧಿ ರಾಜಕೀಯಕ್ಕಿಳಿಯುವ ಯಾವುದೇ ಅವಕಾಶವೂ ಇರುತ್ತಿರಲಿಲ್ಲ.

ವಿಕಿಲೀಕ್ಸ್ ಎಂಬುದೊಂದು ಜಗತ್ತಿನ ಅದೆಷ್ಟೋ ಹುದುಗಿಟ್ಟ ಗೌಪ್ಯ ವಿಷಯಗಳನ್ನೂ ಬಯಲಿಗೆಳೆಯುವುದರಲ್ಲಿ ನಿಸ್ಸೀಮ! ಅಂತಹದ್ದೊಂದು ವಿಕಿಲೀಕ್ಸ್ ಸಂಜಯ್ ಗಾಂಧಿಯ ಬದುಕಿನ ನಿಗೂಢತೆಯನ್ನು ಒಂದೊಂದಾಗಿ ಬಿಚ್ಚಿಟ್ಟಿತು!

ವಿಕಿಲೀಕ್ಸ್ ನ 2013 ರ ದಾಖಲೆಗಳ ಪ್ರಕಾರ ‘ಭಾರತದ ತುರ್ತು ಪರಿಸ್ಥಿತಿಯ ಸಮಯದಲ್ಲಿ ಸಂಜಯ್ ಗಾಂಧಿಯನ್ನು ಹತ್ಯೆ ಮಾಡಲು ಮೂರು ಸಲ ಪ್ರಯತ್ನಿಸಲಾಗಿತ್ತು. ಒಂದು ಸಲವಂತೂ ಹೈ ಪವರ್ ರೈಫಲ್ ನನ್ನು ಸಂಜಯ ಗಾಂಧಿ ಉತ್ತರ ಪ್ರದೇಶಕ್ಕೆ ಹೋದಾಗ ಬಳಸಲಾಗಿತ್ತು ಎಂದು ಹೇಳಿತು.

1976 ಸೆಪ್ಟೆಂಬರಿನಲ್ಲಿ, ಯುಎಸ್ ಎಂಬಸಿ ಅಂದಿನ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಗೆ ಸಂಜಯ್ ಗಾಂಧಿಯ ಹತ್ಯೆಗೆ ಮೂರು ಸಲ ಯೋಜನೆ ರೂಪಿಸಲಾಗಿತ್ತೆಂದು ವರದಿ ಮಾಡಿತ್ತು, ಅಲ್ಲದೆಯೇ ತುರ್ತು ಪರಿಸ್ಥಿತಿಯ ಸಮಯದಲ್ಲಿಯೇ ಸಂಜಯ್ ಗಾಂಧಿ ಮೂರು ಬಾರಿ ಸಾವಿನ ದವಡೆಯಿಂದ ತಪ್ಪಿಸಿಕೊಂಡಿದ್ದರು.

ತದನಂತರ, ಆಗಸ್ಟ್ 30 ರ ದಿನ ಸಂಜಯ್ ಗಾಂಧಿಯ ದೇಹದೊಳ ಮೂರು ಗುಂಡುಗಳು ಹೊಕ್ಕರೂ ಅದೃಷ್ಟದಿಂದ ಯಾವುದೇ ದೊಡ್ಡ ಊನವಾಗದೇ ಬದುಕುಳಿದರೆಂದು ಹೇಳಿತಾದರೂ, ಸಂಜಯ್ ಗಾಂಧಿಯ ಗಾಯದ ಬಗೆಗೆ ಅಥವಾ ದಾಳಿಯ ಬಗೆಗಾಗಲೀ ಭಾರತೀಯ ಗುಪ್ತಚರ ಇಲಾಖೆ ಹೇಳಲಿಲ್ಲ.

‘ಭಾರತೀಯ ಗುಪ್ತಚರ ಇಲಾಖೆಯ ವರದಿಯ ಪ್ರಕಾರ, ಇದು ಮೂರನೇ ಬಾರಿಯ ದಾಳಿಯಾಗಿತ್ತು.’ ಆದರೆ, ಹೊರಗಿನ ಕಾಣದ ಕೈ ಇಷ್ಟೆಲ್ಲ ಮಾಡಿಸುತ್ತಿದೆ ಎಂದು ಆರೋಪಿಸಲಾಯ್ತೇ ವಿನಃ ಸ್ಚತಃ ಇಂದಿರಾ ಗಾಂಧಿಯೂ ಇದರ ಬಗ್ಗೆ ಏನನ್ನೂ ಹೇಳಲಿಲ್ಲ. ಅಲ್ಲದೇ, ಯಾವುದೇ ವಿಚಾರಣೆಗಳಿಗೂ ಅವಕಾಶ ಮಾಡಿಕೊಡಲಿಲ್ಲ!

ಯುಎಸ್ ಗುಪ್ತಚರ ಇಲಾಖೆಯು ಉತ್ತರ ಪ್ರದೇಶದ ಸರಕಾರಕ್ಕೆ ಕೊಟ್ಟ ಟೆಲಿಗ್ರಾಫಿಕ್ ವರದಿಯ ಪ್ರಕಾರ, “ಸಂಜಯ್ ಗಾಂಧಿಯ ಮೇಲೆ ನಡೆದಂತಹ ದಾಳಿಯ ಮಾಹಿತಿಗಳು ಸದ್ಯಕ್ಕೆ ರಕ್ಷಿಸಲಾಗಿದ್ದರೂ, ಹೊರಗಿನವರ ಕೈವಾಡ ಎಂದು ಆರೋಪಿಸಿದೆ.'” ಎಂದಿತು. ಸ್ವತ: ಇಂದಿರಾ ಗಾಂಧಿಯದೇ ಸರಕಾರವಾಗಿದ್ದರೂ, ಯಾವುದೇ ವಿಚಾರಣೆಗಳಿಗೆ ಅವಕಾಶವನ್ನು ಕೊಡದೆ ಆರೋಪಗಳನ್ನು ಬದಿಗಿರಿಸಿ ಸುಮ್ಮನಾಯಿತು!

1977 ರಲ್ಲಿ, ಯಾವಾಗ ಭಾರತೀಯ ಜನತಾ ಪಾರ್ಟಿ ಕಾಂಗ್ರೆಸ್ ನನ್ನು ಸೋಲಿಸಿತೋ, ಹಾಗೆಯೇ ವರದಿಯೊಂದನ್ನೂ ನೀಡಿತು. ‘ಸಂಜಯ್ ಗಾಂಧಿಯ ಹತ್ಯೆಯ ಸಂಚುಗಳ ಬಗ್ಗೆ ಯಾವುದೇ ರೀತಿಯ ಸಾಕ್ಷ್ಯಾಧಾರಗಳಿಲ್ಲ.’ ಎಂದು ವರದಿಯಲ್ಲಿ ಧೃಢೀಕರಿಸಿತು. ಆದರೆ, ಯಾವಾಗ ಮತ್ತೆ 1980 ರಲ್ಲಿ ಕಾಂಗ್ರೆಸ್ ಬಿಜೆಪಿಯ ಒಳ ಜಗಳದ ಉಪಯೋಗ ಪಡೆದು ಗೆದ್ದಿತೋ, ಆಗಲೇ ನಿಗೂಢವಾಗಿ ಜೂನ್ 23, 1980 ರಲ್ಲಿ ವಿಮಾನಾಪಘಾತದಲ್ಲಿ ಸಂಜಯ್ ಗಾಂಧಿ ಸಾವನ್ನಪ್ಪಿದರು.

ತದನಂತರವೂ ನಡೆದ ತನಿಖಾ ವರದಿಯಲ್ಲಿ ಅಪಘಾತವೆಂದೇ ನಮೂದಿಸಿತೇ ಹೊರತು ಬೇರಾವ ಸಂಬಂಧಪಟ್ಟ ವಿಚಾರಗಳೂ ಬಹಿರಂಗಗೊಳ್ಳಲಿಲ್ಲ. ಆದರೆ, ಸಂಜಯ್ ಗಾಂಧಿಯ ಸಾವು ಒಂದಷ್ಟು ನಿಗೂಢಗಳನ್ನು ಸೃಷ್ಟಿಸಿತಾದರೂ, ಅದು ಕೊಲೆಯೆಂದಾದರೂ, ಯಾವುದೇ ರೀತಿಯ ಸಾಕ್ಷಿಗಳು ಸಿಗಲೇ ಇಲ್ಲ.

ಕೆಲವು ಸಾಕ್ಷಿಗಳು ಸಂಜಯ್ ಗಾಂಧಿಯ ಹತ್ಯೆಗೆ ಕಾಯುತ್ತ ಕುಳಿತಿದ್ದವಾದರೂ ಸಂಚು ಪ್ರಾರಂಭವಾಗಿದ್ದು 1980 ರಲ್ಲಲ್ಲ, ಬದಲಾಗಿ ಅದೆಷ್ಟೋ ವರ್ಷಗಳಿಂದ ಎಂಬುದನ್ನು ಸಾಬೀತು ಪಡಿಸಿತ್ತು.

– ಪೃಥ

Tags

Related Articles

Close