ಅಂಕಣ

ಸಂಪುಟ ಪುನಾರಚನೆ : ಫಡ್ನಾವಿಸ್ ರಕ್ಷಣಾ ಮಂತ್ರಿ? ಇನ್ನು ಕೆಲವು ಅಚ್ಚರಿಗಳು ಕಾದಿವೆ ಮೋದಿ ಫೈಲ್ ನಲ್ಲಿ

ನರೇಂದ್ರಮೋದಿ ತನ್ನ ಸರಕಾರದ ಆಡಳಿತದಲ್ಲಿ ಹಲವು ರೀತಿಯ ಹೊಸ ಕ್ರಮಗಳನ್ನು ಜಾರಿಗೆ ತಂದಿದ್ದಲ್ಲದೇ, ಈ ಭಾರಿ ತನ್ನ ಸಂಪುಟವನ್ನು ಪುನರ್‍ರಚನೆ ಮಾಡುವಲ್ಲಿ ಮುಂದಾಗಿದ್ದಾರೆ. 2019ರ ಲೋಕಸಭಾ ಚುನಾವಣೆಗಿಂತ ಮೊದಲು ಬಹುಶಃ ನರೇಂದ್ರ ಮೋದಿ ಸರಕಾರ ತಮ್ಮ ಸಚಿವಸಂಪುಟವನ್ನು ಪುನರ್‍ರಚನೆ ಮಾಡಲಿದ್ದಾರೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಸಾಕಷ್ಟು ಅನಿರೀಕ್ಷಿತವಾದ ಕೊಡುಗೆಗಳನ್ನು ದೇಶಕ್ಕಾಗಿ ನೀಡಿದ್ದು, ಯಾವುದೇ ರೀತಿಯ ಸುಳಿವವನ್ನು ನೀಡದೆ ತನ್ನ ಪ್ರಯತ್ನದಲ್ಲಿ ಯಶಸ್ಸನ್ನು ಕಂಡಿದ್ದು ನಾವು ನೋಡಿದ್ದೇವೆ.

ಸಚಿವ ಸಂಪುಟವನ್ನು ಪುನರ್‍ರಚನೆ ಮಾಡಲು ಮುಂದಾಗಿರುವ ಮೋದಿ ಸರಕಾರ, ದೇಶದ ಅಭಿವೃದ್ದಿಯ ಹಿತ ದೃಷ್ಟಿಯಿಂದ ಸಾಕಷ್ಟು ಬದಲಾವಣೆಯನ್ನು ತರಲು ಮುಂದಾಗಿದ್ದಾರೆ.
ಅಲ್ಲದೇ ತಮ್ಮ ಆಡಳಿತಾತ್ಮಕ ಕೆಲಸದಲ್ಲಿ ತೀವ್ರ ಬದಲಾವಣೆಯನ್ನು ತರಲು ಸಜ್ಜಾಗಿರುವ ಸರಕಾರ ಈ ಮಹತ್ತವಾದ ಕೆಲಸಕ್ಕಾಗಿ ಕೈಹಾಕಿದೆ. ಈಗಾಗಲೇ ಜಾರಿಗೆ ತಂದಿರುವ ಕೆಲವೊಂದು ಆರ್ಥಿಕ ಸುಧಾರಣೆಗಳಲ್ಲಿ ಒಂದಾದ ಅಪನಗದೀಕರಣದ ವ್ಯವಸ್ಥೆ ಪರಿಣಾಮಕಾರಿಯಾಗಿ ಯಶಸ್ವಿಯನ್ನು ಪಡೆದಿದಲ್ಲದೇ ಏಕರೂಪದ ತೆರಿಗೆ ವ್ಯವಸ್ಥೆ (ಜಿಎಸ್‍ಟಿ) ದೇಶದಲ್ಲಿ ಹೊಸ ಕ್ರಾಂತಿಯನ್ನು ಹುಟ್ಟುಹಾಕಿದೆ. ಭ್ರಷ್ಟರಾಜಕಾರಣಿಗಳ, ಭ್ರಷ್ಟಉದ್ಯಮಿಗಳ ಮೋಸದ ಜಾಲಕ್ಕೆ ಏಕರೂಪದ ತೆರಿಗೆ ವ್ಯವಸ್ಥೆಯಿಂದ ಕಡಿವಾಣ ಬಿದ್ದಿದ್ದಲ್ಲದೇ ಭ್ರಷ್ಟಚಾರ ಮುಕ್ತ ಭಾರತವನ್ನಾಗಿ ಮಾಡಲು ಸೆಟೆದುನಿಂತಿದೆ ಮೋದಿ ಸರಕಾರ.
ಹೌದು… ತನ್ನ ಅದೆಷ್ಟೋ ಸುಧಾರಣೆಗಳಲ್ಲಿ ಉತ್ತಮ ಫಲಿತಾಂಶವನ್ನು ಪಡೆದಿರುವ ಮೋದಿ ತಮ್ಮ ಉತ್ತಮ ಹಾಗೂ ಚುರುಕಾದ ಕಾರ್ಯವೈಖರಿಯಿಂದ ಸಾಮಾನ್ಯ ಜನರಿಗೆ ಒಳಿತು ಮಾಡುವಲ್ಲಿ ಮುಂದಾದ ಶ್ರೇಷ್ಠ ರಾಜಕಾರಣಿ ಎಂದೆನಿಸಿದ್ದಾರೆ. ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಸತತವಾಗಿ ರೈಲು ಹಳಿತಪ್ಪುವಿಕೆಯ ವಿಚಾರವಾಗಿ ರೈಲ್ವೇ ಸಚಿವ ಸುರೇಶ್ ಪ್ರಭು ಅವರ ವಿರುದ್ಧ ಅತೀ ದೊಡ್ಡ ಚರ್ಚೆ ನಡೆದಿತ್ತು. ಈ ಕುರಿತು ಸುರೇಶ್ ಪ್ರಭು ಅವರನ್ನು ಸಚಿವ ಸಂಪುಟದಿಂದ ಕೈ ಬಿಡಬೇಕೆನ್ನುವ ಕೂಗು ಹಬ್ಬಿತ್ತಲ್ಲದೇ, ಈ ಬಗ್ಗೆ ತೀವ್ರ ಆ ಆಕ್ರೋಶ ಉಂಟು ಮಾಡಿತ್ತು. ಸುರೇಶ್ ಪ್ರಭು ಅವರ ಮಾಡಿರುವ ಅದೆಷ್ಟೋ ಉತ್ತಮ ಕಾರ್ಯವೈಖರಿಗಳ ಬಗ್ಗೆ ಸಾಕಷ್ಟು ಮಂದಿ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಲ್ಲದೇ ಇವರೇ ಸಚಿವರಾಗಿ ಮುಂದುವರೆಯಲಿ ಎನ್ನುವ ಬೆಂಬಲವನ್ನು ಸೂಚಿಸುತ್ತಿದ್ದಾರೆ.

ಆದರೆ ಮೋದಿ ಸರಕಾರದ ಸಂಪುಟ ಪುನರ್‍ರಚನೆಯ ಪ್ರಕಾರ ಸಾಕಷ್ಟು ಬದಲಾವಣೆಗಳು ಕಾಣಲಿವೆ. ಈ ಪ್ರಕಾರ ರೈಲು ಮತ್ತು ರಸ್ತೆಸಾರಿಗೆ ಸ್ಥಾನವನ್ನು ವಿಲೀನಗೊಳಿಸುವುದರೊಂದಿಗೆ ಈ ಎರಡು ಜವಬ್ದಾರಿಯನ್ನು ಒಂದೇ ಮಾಡಲು ಸಾರಿಗೆ ಸಚಿವ ಎನ್ನುವ ಹೊಸ ಸಚಿವ ಸ್ಥಾನವನ್ನು ರಚಿಸುವ ಮಹತ್ತರವಾದ ಯೋಜನೆಯನ್ನು ರೂಪಿಸುತ್ತಿದ್ದಾರೆ. ಈ ಬಗೆಗೆಗಿನ ಅತೀ ದೊಡ್ಡ ಜವಬ್ದಾರಿಯನ್ನು ರಸ್ತೆಸಾರಿಗೆಯಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿರುವ ನಿತಿನ್ ಗಡ್ಕರಿಯವರಿಗೆ ವಹಿಸಲಿದ್ದಾರೆ. ಸಾರಿಗೆ ವಿಚಾರದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ತನ್ನ ಜವಬ್ದಾರಿಯನ್ನು ನೇರವೇರಿಸಿದ ನಿತಿನ್ ಗಡ್ಕರಿ ಡೆಡ್‍ಲಾಕ್ಸ್ ಮತ್ತು ರೆಡ್‍ಟಾಪಿಸಂನ ವಿಷಯದಲ್ಲಿ ಯಶಸ್ವಿಯನ್ನು ಪಡೆದಿದ್ದೂ ಅಲ್ಲದೇ ರಸ್ತೆ ಮಾರ್ಪಾಡು ಮಾಡುವಲ್ಲಿ ಹಾಗೂ ಸಾರಿಗೆ ವಲಯವನ್ನು ಸಮರ್ಥಕವಾಗಿ ನಿಭಾಯಿಸಿರುವುದರಲ್ಲಿ ಹೆಸರುವಾಸಿಯಾಗಿದ್ದಾರೆ. ಹೀಗಾಗಿ, ಒಂದು ವೇಳೆ ರೈಲು ಮತ್ತು ರಸ್ತೆಸಾರಿಗೆ ವಿಭಾಗ ವಿಲೀನಗೊಂಡರೆ ನಿತಿನ್ ಗಡ್ಕರಿಗೆ ಉನ್ನತ ಸಚಿವರಾಗಿ ಆಯ್ಕೆಗೊಳ್ಳುವ ಸಾಧ್ಯತೆಗಳು ಹೆಚ್ಚಿವೆ.

ಇದೀಗಾ ಮೋದಿ ಸರಕಾರದ ಸಂಪುಟ ಪುನರ್‍ರಚನೆಯ ಸುದ್ದಿ ಕೇಳಿ ಬರುತ್ತಿದ್ದಂತೆಯೇ ದೊಡ್ಡ ಕುತೂಹಲಕಾರಿಯಾದ ಸಂಗತಿಯೊಂದು ಹೊರಬಿದ್ದಿದೆ. ಅದೇನೆಂದರೆ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೆಂದ್ರ ಫಡ್ನವೀಸ್ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲು ಮುಂದಾಗಿದ್ದಾರೆ. ಊಹಾಪೋಹಗಳ ಪ್ರಕಾರ ಅರುಣ್ ಜೇಟ್ಲಿಯವರು ನಿರ್ವಹಿಸುತ್ತಿರುವ ರಕ್ಷಣಾ ಸಚಿವಾಲಯಕ್ಕೆ ದೇವೆಂದ್ರ ಫಡ್ನವೀಸ್ ಆಯ್ಕೆಯಾಗಲಿದ್ದಾರಂತೆ. ದೇವೆಂದ್ರ ಫಡ್ನವೀಸ್ ಮಹಾರಾಷ್ಟ್ರದ ಜನತೆಗಾಗಿ ಮಾಡಿದ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮತ್ತು ರಾಜ್ಯದ, ರಾಜ್ಯದ ಜನತೆಯ ಸಮಸ್ಯೆಗಳನ್ನು ಸಮರ್ಥಕವಾಗಿ ನಿರ್ವಹಿಸಿರುವ ಅವರ ಸಾಧನೆಯನ್ನು ಮೆಚ್ಚಲೇಬೇಕು. ಹಾಗಾಗಿ ಈ ಭಾರಿ ಮರಾಠರ ನಾಡು ಹೊಸ ಸಿಎಂನ ನಿರೀಕ್ಷೆಯಲ್ಲಿ ಇರುವಂತೆ ಮೇಲ್ನೋಟಕ್ಕೆ ಕಾಣಿಸುತ್ತದೆ.

ಎಐಎಡಿಎಂಕೆ ಮತ್ತು ಜೆಡಿಯು ಪಕ್ಷಗಳು ಎನ್‍ಡಿಎದೊಂದಿಗೆ ಕೈಜೋಡಿಸಿರುವ ವಿಷಯ ಈಗಾಗಲೇ ಗೊತ್ತಿರುವಂತಹದ್ದು. ಹಾಗಾಗಿ ಜೆಡಿಯುಗೆ ಕ್ಯಾಬಿನೆಟ್ ಸ್ಥಾನವನ್ನು ಮತ್ತು ಎಐಎಡಿಎಂಕೆ ಎಮ್‍ಒಎಸ್ ಸ್ಥಾನವನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ. ತಮಿಳುನಾಡಿನ ಎಐಎಡಿಎಂಕೆ ಪಕ್ಷ ಎನ್‍ಡಿಎ ಸೇರಿರುವ ಹಿನ್ನಲೆಯಲ್ಲಿ ಮೋದಿ ಹಾಗೂ ಅಮಿತ್ ಶಾ ಇಬ್ಬರೂ ಸೇರಿ ದೊಡ್ಡ ಯೋಜನೆಯನ್ನು ಎಐಎಡಿಎಂಕೆಯೊಂದಿಗೆ ಮಾಡಲಿದ್ದಾರೆ. ಅಲದೇ ಈ ಎಲ್ಲಾ ಊಹಾಪೋಹಗಳು ಹೊರಬಿದ್ದಿರುವುದರ ಜೊತೆಗೆ ನೀರಾವರಿ ಸಚಿವೆ ಹಾಗೂ ಗಂಗಾ ರಿಜುವೆನ್ಶನ್‍ನ ಮುಖ್ಯಸ್ಥರಾಗಿ ಉಮಾ ಭಾರತಿ ಕಾರ್ಯನಿರ್ವಹಿಸುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಇದೀಗಾ ಪ್ರಧಾನಿ ಮೋದಿ ಗಂಗಾ ಶುದ್ದೀಕರಣದ ವಿಚಾರದ ಬಗ್ಗೆ ಇನ್ನೂ ಹೆಚ್ಚಿನ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವ ಪ್ರಬಲ ವ್ಯಕ್ತಿಯ ನಿರೀಕ್ಷೆಯಲ್ಲಿದ್ದಾರೆ.

ಮೋದಿ ಮತ್ತು ಶಾ ತಮ್ಮ ಸಚಿವ ಸಂಪುಟವನ್ನು ಪುನರ್‍ರಚನೆ ಮಾಡಲಿರುವ ವಿಚಾರ ನಿಜಾಂಶವಾದರೂ ಮಿಕ್ಕೆಲ್ಲ ವಿಚಾರಗಳು ಕೇವಲ ಊಹಾಪೋಹಗಳಷ್ಟೇ. ಯಾಕಂದರೆ ನಮ್ಮ ಮೋದಿ ಸರಕಾರ ಯಾವ ಟೈಮ್‍ನಲ್ಲಿ ಯಾವ ಯೋಜನೆಗಳನ್ನು ಹೊರತರ್ತಾರೆ ಎಂಬುದು ಹೊರತಂದ ನಂತರವಷ್ಟೇ ಗೊತ್ತಾಗೋದು.

– ಸರಿತಾ

Tags

Related Articles

Close