ಅಂಕಣಪ್ರಚಲಿತ

ಸಚಿವೆ ನಿರ್ಮಲಾ ಸೀತಾರಾಮನ್ ರವರ ಹೊಸ ಅಜೆಂಡಾ ಸಫಲವಾಗಲಿದೆಯೇ?! ಮಿಲಿಟರಿಯಲ್ಲಿ ಮಹಿಳೆಯರಿಗೂ ಸಮಾನ ಅವಕಾಶ!

ಭಾರತದ ನೂತನ ರಕ್ಷಣಾ ಮಂತ್ರಿ ಭಾರತದ ಮಿಲಿಟರಿ ವ್ಯವಸ್ಥೆಯನ್ನು ಬಲಪಡಿಸಲು ದಿಟ್ಟ ಹೆಜ್ಜೆಯೊಂದನ್ನು ಇಟ್ಟಿದ್ದಾರೆ. ನರೇಂದ್ರ ಮೋದಿಯ ಕನಸಾಗಿದ್ದ ಆ
ಯೋಜನೆಯನ್ನು ದೇಶದ ಮೊದಲ ಮಹಿಳಾ ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮ್ ಸಾಕಾರಗೊಳಿಸಲಿದ್ದಾರೆ. ಇದರಿಂದ ಭಾರತದ ಮಿಲಿಟರಿಗೆ ಇನ್ನಷ್ಟು ಬಲ ಬರುವುದರಲ್ಲಿ ಸಂಶಯವಿಲ್ಲ. ಹೌದು ನಿರ್ಮಲಾ ಸೀತಾರಾಮನ್ ಭಾರತದ ಮಿಲಿಟರಿಗೆ ಮಹಿಳೆಯರನ್ನು ಸೇರಿಸುವ ನೂತನ ಯೋಜನೆ ಜಾರಿಗೆ ಬರಲಿದ್ದು, ಈ ಯೋಜನೆಗೆ ಈಗಾಗಲೇ ಅಂಕಿತವನ್ನೂ ಅವರು ಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಮಹಿಳೆಯರೂ ಕೂಡಾ ಬಂದೂಕು ಹಿಡಿದು ಶತ್ರುಸಂಹಾರದಲ್ಲಿ ತೊಡಗಲಿದ್ದಾರೆ.ದೇಶದ ಮೊದಲ ಪೂರ್ಣಕಾಲಿಕ ಮಹಿಳಾ ರಕ್ಷಣಾ ಸಚಿವೆಯಾಗಿ ನಿರ್ಮಲಾ ಸೀತಾರಾಮನ್ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಅವರು ಅಧಿಕಾರ ವಹಿಸಿಕೊಂಡ ತಕ್ಷಣ ರಕ್ಷಣಾ ಕ್ಷೇತ್ರದಲ್ಲಿ ಮಹಿಳೆಯರಿಗೆ ಉನ್ನತ ಸ್ಥಾನಮಾನ ನೀಡುವ ಮಹತ್ವದ ನಿರ್ಧಾರಕ್ಕೆ ಸಹಿ ಹಾಕಿದ್ದಾರೆ. ಈ ಮೂಲಕ ಸೇನೆಯಲ್ಲೂ ಲಿಂಗ ಸಮಾನತೆ ತರುವ ಪ್ರಯತ್ನಕ್ಕೆ ನಾಂದಿ ಹಾಡಿದ್ದಾರೆ.

ಅವರು 800 ಮಹಿಳಾ ಮಿಲಿಟರಿ ಪೆÇಲೀಸರ ನೇಮಕ ಆದೇಶಕ್ಕೆ ಅಂಕಿತ ಹಾಕಿದ್ದಾರೆ. ಈ ಮೂಲಕ ಭಾರತೀಯ ಸೇನೆಯಲ್ಲಿ `ಬೇಟಿ ಬರಾಬರ್’ ಹೊಸ ಯೋಜನೆಗೆ ಚಾಲನೆ ನೀಡಿದ್ದಾರೆ. ಜತೆಗೆ ಪ್ರತೀ ವರ್ಷ 52 ಹೊಸ ಮಹಿಳಾ ಸೇನಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳುವ ನಿರ್ಧಾರಕ್ಕೆ ನಿರ್ಮಲಾ ಸೀತಾರಾಮನ್ ಬಂದಿದ್ದಾರೆ. ಸದ್ಯ ಮಹಿಳೆಯರು ಸೇನೆಯ ವೈದ್ಯಕೀಯ, ಕಾನೂನು, ಶಿಕ್ಷಣ ಮತ್ತು ಇಂಜಿನಿಯರಿಂಗ್ ವಿಂಗ್‍ನಲ್ಲಿ ಮಾತ್ರ ಕೆಲಸ ಮಾಡುತ್ತಿದ್ದಾರೆ. ಇನ್ನು ಮುಂದೆ ಮಹಿಳಾ ಯೋಧರು ಬಂದೂಕು ಹಿಡಿದು ಯುದ್ಧರಂಗದಲ್ಲಿ ಹೋರಾಟಕ್ಕೆ ಇಳಿಯುವ ದಿನ ದೂರವಿಲ್ಲ. ಕಳೆದ ಜೂನ್‍ನಲ್ಲಿ ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಸೇನೆಯಲ್ಲಿ ಮಹಿಳಾ ಯೋಧರ ಸಂಖ್ಯೆ ಹೆಚ್ಚಿಸಲು ಚಿಂತಿಸುತ್ತಿರುವುದಾಗಿ ತಿಳಿಸಿದ್ದರು. ಇದೀಗ ಅದು ಸಾಕಾರಗೊಂಡಂತಾಗಿದೆ.

ಭಾರತದ ಸೇನೆ ಜಗತ್ತಿನ ನಾಲ್ಕನೇ ಬಲಾಢ್ಯ ಮತ್ತು ದಕ್ಷ ಸೇನೆಗಳಲ್ಲಿ ಒಂದು. ನರೇಂದ್ರ ಮೋದಿ ಸರಕಾರ ಭಾರತದ ಸೈನ್ಯವನ್ನು ಸಾಕಷ್ಟು ಬಲಗೊಳಿಸಿದ್ದಾರೆ.
ಇದಕ್ಕೆ ಮುಖ್ಯ ಸಾಕ್ಷಿ ಇತ್ತೀಚೆಗೆ ದೋಕಲಂ ಗಡಿ ವಿಚಾರದಲ್ಲಿ ಭಾರತದ ಜೊತೆ ಕಾಲ್ಕೆರೆದು ಯುದ್ಧಕ್ಕೆ ಬಂದಿದ್ದ ಚೀನಾ ಸೇನೆ ಬಾಲಮುದುರಿಕೊಂಡು ವಾಪಸ್
ತೆರಳಿರುವುದೇ ಸಾಕ್ಷಿ. ಇಂದು ಚೀನಾ ಮತ್ತು ಪಾಕಿಸ್ತಾನದ ಎರಡೂ ದೇಶಗಳ ವಿರುದ್ಧ ಏಕಕಾಲದಲ್ಲಿ ಯುದ್ಧ ಮಾಡುವ ಸಾಮಥ್ರ್ಯವನ್ನು ಭಾರತ ಹೊಂದಿದೆ. ಭೂ, ನೌಕಾ, ಹಾಗೂ ವಾಯು ಕ್ಷೇತ್ರದಲ್ಲಿ ಭಾರತದ ಸೇನೆ ದಕ್ಷ ಹಾಗೂ ಅತ್ಯಂತ ಬಲಯುತವಾಗಿದೆ. ಈ ಸೇನೆಯಲ್ಲಿ ಮಹಿಳೆಯರನ್ನೂ ಸೇರಿಸಬೇಕು, ಜಗತ್ತಿಗೆ ನಾರಿ ಶಕ್ತಿ ಅನಾವರಣಗೊಳ್ಳಬೇಕೆಂಬುವುದು ಮೋದಿಯವರ ಕನಸಾಗಿತ್ತು. ಆ ಕನಸನ್ನು ನೂತನ ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮನ್ ಸಾಕಾರಗೊಳಿಸಿದ್ದಾರೆ.

1857ರಲ್ಲಿ ಪ್ರಾರಂಭವಾದ ಭಾರತದ ಸ್ವಾತಂತ್ರ ಹೋರಾಟವನ್ನು ನಾವು ಪ್ರಥಮ ಸ್ವಾತಂತ್ರ ಸಂಗ್ರಾಮವೆಂದು ಕರೆದರೆ, ಬ್ರಿಟಿಷರು ಇದನ್ನು ಸಿಪಾಯಿ ದಂಗೆ ಎಂದು ಕರೆದರು. ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಿಳೆಯರೂ ಬ್ರಿಟಿಷರ ಜೊತೆ ಕಾದಾಡಿದರು. ಈ ರೀತಿಯಾಗಿ ಸ್ವಾತಂತ್ರ ಸಂಗ್ರಾಮದಲ್ಲಿ ಧುಮುಕಿದ ಪ್ರಥಮ ಮಹಿಳೆಯೆಂದರೆ ಝಾನ್ಸಿರಾಣಿ ಲಕ್ಷ್ಮೀ ಬಾಯಿ. 1857ರ ಸಂಗ್ರಾಮದಲ್ಲಿ ಯಾವ ನಾಯಕರಿಗೂ ಕಡಿಮೆಯಿಲ್ಲದೇ ಬ್ರಿಟಿಷರ ವಿರುದ್ಧ ಹೋರಾಡಿದಳು. ಬ್ರಿಟಿಷರನ್ನು ಪಣತೊಟ್ಟು ಎದುರಿಸಿದ ಕಾರಣ ಇವಳ ಹೋರಾಟದ ಕಿಚ್ಚನ್ನು ನೋಡಿ ಅನೇಕ ಮಹಿಳೆಯರು ಆ ಸಂಗ್ರಾಮದಲ್ಲಿ ಭಾಗವಹಿಸಿದರು.

ಆಮೇಲೆ ಕಿತ್ತೂರು ರಾಣಿ ಚೆನ್ನಮ್ಮ, ವೀರರಾಣಿ ಅಬ್ಬಕ್ಕ ಮುಂತಾದವರು ಬ್ರಿಟಿಷರ ಜೊತೆ ವೀರಾವೇಶದಿಂದ ಕಾದಾಡಿ ಪ್ರಾಣವನ್ನೇ ಅರ್ಪಿಸಿದ್ದಾರೆ. ಭಾರತದ
ಇತಿಹಾಸವನ್ನು ಗಮನಿಸಿದಾಗ ಮಹಿಳೆಯರಿಗೂ ಶಶಸ್ತ್ರ ತರಬೇತಿಯನ್ನು ನೀಡುತ್ತಿರುವುದು ಕಂಡುಕೊಳ್ಳಬಹುದು. ಮಹಾಭಾರತ, ರಾಮಾಯಣ ಕಾಲದಲ್ಲೂ
ಮಹಿಳೆಯರು ಶಶಸ್ತ್ರ ತರಬೇತಿ ಪಡೆಯುತ್ತಿದ್ದರು. ಪಾಂಡವರ ಪತ್ನಿ ದ್ರೌಪದಿ ಶತ್ರುಗಳ ಜೊತೆ ಬಿಲ್ವಿದ್ಯೆಯಲ್ಲಿ ಹೋರಾಡಬಲ್ಲ ಸಾಮಥ್ರ್ಯ ಹೊಂದಿದ್ದಳು. ಹೀಗೆ
ಐತಿಹಾಸವಾಗಿ ನೋಡಿದರೆ ಭಾರತ ಮಹಿಳಾ ಪಡೆಗಳನ್ನು ಹೊಂದಿರುವ ದೇಶವಾಗಿತ್ತು.

ಭಾರತದಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಸುಭಾಷ್ ಚಂದ್ರ ಬೋಸ್ ಅವರು ತನ್ನ ಇಂಡಿಯನ್ ನ್ಯಾಷನಲ್ ಆರ್ಮಿಯಲ್ಲಿ ಮಹಿಳೆಯರನ್ನು ನಿಯೋಜಿಸಿದ್ದರು. ಝಾನ್ಸಿ ರಾಣಿ ರೆಜಿಮೆಂಟ್’, ನೇತಾಜಿ­ಯವರ ಇಂಡಿಯನ್ ನ್ಯಾಷನಲ್ ಆರ್ಮಿಯ ಮಹಿಳಾ ಘಟಕವಾಗಿತ್ತು. ಇದರ ಸದಸ್ಯೆ­ಯಾಗಿದ್ದ ಪೆÇ್ರತಿಮಾ ಪಾಲ್ 1944ರಲ್ಲಿ ಇಂಡಿಯನ್ ನ್ಯಾಷನಲ್ ಆರ್ಮಿ ಹೆಡ್ ಕ್ವಾರ್ಟರ್ಸ್‍ನ ಬ್ರಾಡ್‍ಕಾಸ್ಟಿಂಗ್ ಸ್ಟೇಷನ್‍ನಿಂದ ಮಾಡಿದ ಭಾಷಣ ಹೀಗಿತ್ತು: `ನಾನು ಝಾನ್ಸಿ ರಾಣಿ ರೆಜಿಮೆಂಟಿನ ಸಾಧಾರಣ ಸೈನಿಕಳು. ಆದರೆ ಬರೀ ನೆಪಮಾತ್ರದ ಬೊಂಬೆ ಸೈನಿಕಳಲ್ಲ. ನಿಜವಾದ ಅರ್ಥದಲ್ಲಿ ಸೈನಿಕಳು. ಭಾರತದ ಶತ್ರುವನ್ನು ಕೊಲ್ಲಲು ಆಧುನಿಕ ಶಸ್ತ್ರಾಸ್ತ್ರಗಳಿಂದ ಸಜ್ಜುಗೊಂಡ ಮಿಲಿಟರಿ ಬೂಟು ಹಾಗೂ ಸಮವಸ್ತ್ರ ಧರಿಸಿದ ಸೈನಿಕಳು ಎಂದು ಗುಡುಗಿದ್ದಳು. ಇವರ ಮಹಿಳಾ ಸೈನಿಕರು ಪುರುಷರಷ್ಟೇ ಸರಿಸಮಾನರಾಗಿ ಯದ್ಧ ಮಾಡಿ ಬ್ರಿಟಿಷರನ್ನು ಬೆದರಿಸಿದ್ದರು.

ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಕಿತ್ತೂರು ಚೆನ್ನಮ್ಮರಂತಹ ಮಹಿಳಾ ಸೇನಾನಿಗಳ ಪರಂಪರೆಯನ್ನು ಹೊಂದಿರುವ ಭಾರತದ ಮಿಲಿಟರಿಗೆ ಮಹಿಳೆಯರನ್ನು
ಸೇರಿಸಬೇಕೆನ್ನುವ ಕೂಗು ಹೊಸತಲ್ಲ. ಆದರೆ ಹಿಂದಿನ ಕಾಂಗ್ರೆಸ್ ಸರಕಾರ ಮನಸ್ಸು ಮಾಡಿರಲಿಲ್ಲ. ಮಹಿಳಾ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲು ಆರಂಭ ಮಾಡಿದ್ದು ಇತ್ತೀಚಿಗೆ, ಎಂದರೆ ತೊಂಬತ್ತರ ದಶಕದಲ್ಲಿ ಎಂಬುದು ವಿಪರ್ಯಾಸದ ಸಂಗತಿ. ಅದರಲ್ಲೂ ಈ ಮಹಿಳಾ ಅಧಿಕಾರಿಗಳು ಅಲ್ಪಾವಧಿಗೆ
ನೇಮಕಗೊಂಡವರಾಗಿ ಕೇವಲ 14 ವರ್ಷಗಳವರೆಗೆ ಮಾತ್ರ ಸೇವೆ ಸಲ್ಲಿಸುವ ಅವಕಾಶ ಇದೆ. ನಿವೃತ್ತಿಯಾಗುವ ತನಕ ಕಾಯಂ ಸೇವೆ ಸಲ್ಲಿಸುವ ಅವಕಾಶ
ಮಹಿಳೆಯರಿಗೆ ಇಲ್ಲ. ಇಂತಹ ತಾರತಮ್ಯದ ವಿರುದ್ಧ ಮೂರು ದಶಕಗಳ ಹೋರಾಟದ ನಂತರ, 2009ರಲ್ಲಿ ಭಾರತೀಯ ಸಶಸ್ತ್ರ ಸೇನಾಪಡೆಗಳ ಶಿಕ್ಷಣ,
ಕಾನೂನುಗಳಂತಹ ವಿಭಾಗಗಳಲ್ಲಿ ಕಾಯಂ ನೇಮಕಾತಿಗೆ ಅವಕಾಶಗಳನ್ನು ಮಹಿಳೆಯರು ಪಡೆದುಕೊಂಡಿದ್ದಾರೆ. ಈಗ ಭೂಸೇನೆ, ನೌಕಾಪಡೆ ಹಾಗೂ ವಾಯುಪಡೆಯ ಇನ್ನೂ ಹಲವು ವಿಭಾಗಗಳಲ್ಲಿ ಮಹಿಳಾ ಅಧಿಕಾರಿಗಳ ಕಾಯಂ ನೇಮಕಾತಿಗೆ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿರುವುದು ಹೊಸ ಬೆಳವಣಿಗೆ.

ರಣರಂಗದ ಮುಂಚೂಣಿಯ ಕಾದಾಟದ ಕ್ಷೇತ್ರಗಳಲ್ಲೂ ಇನ್ನು ಮಹಿಳೆಯರು ಅವಕಾಶಗಳನ್ನು ಪಡೆದುಕೊಳ್ಳಲಿದ್ದಾರೆ ಎಂಬುವುದು ಒಂದು ಹೊಸ ಬೆಳವಣಿಗೆ. ಪುರುಷ ಸೈನಿಕರ ಜೊತೆ ಮಹಿಳಾ ಸೈನಿಕರ ಹೊಂದಾಣಿಕೆ ಸಮಸ್ಯೆ ಆಗುತ್ತದೆ ಎಂಬ ಆರೋಪವಿದೆ. ಶತ್ರುಗಳ ಜೊತೆ ಮುಖಾಮುಖಿ ಹೋರಾಟ ನಡೆಸುವಾಗ, ಅಥವಾ ಶತ್ರುಗಳ ಕೈಗೆ ಮಹಿಳಾ ಸೈನಿಕರು ಸಿಕ್ಕಿಬಿದ್ದರೆ ಸಮಸ್ಯೆಯಾಗಬಹುದು ಎಂಬ ಆರೋಪವಿದೆ. ಆದರೆ ಇಂದು ಶಶಸ್ತ್ರ ಯುದ್ದಗಳಾಗಿರುವುದರಿಂದ ಈ ಸಮಸ್ಯೆ ಬರುವುದು ಕಡಿಮೆ ಎಂಬುವುದು ಸರಕಾರದ ವಾದವಾಗಿದೆ. `ಪುರುಷ ಮತ್ತು ಮಹಿಳಾ ಅಧಿಕಾರಿಗಳು ಒಂದೇ ಬಗೆಯ ಕೆಲಸ ಮಾಡುತ್ತಾರೆ. ಹೀಗಿದ್ದಾಗ ಮಹಿಳಾ ಅಧಿಕಾರಿಗಳಿಗೇಕೆ ಕಾಯಂ ನೇಮಕಾತಿಯ ಅವಕಾಶ ಇಲ್ಲ? ಎಂದು ಕೋರ್ಟ್ ಕೂಡಾ ಪ್ರಶ್ನಿಸಿತ್ತು. ಆದರೆ ಇದೀಗ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಎಂಬಂತೆ ಮಹಿಳೆಯರನ್ನೂ ಮೂರೂ ಪಡೆಗಳಲ್ಲಿ ನಿಯೋಜಿಸಲು ಸರಕಾರ ನಿರ್ಧರಿಸಿದೆ.

ಮಹಿಳೆಯರಿಗೆ ಪುರುಷರಷ್ಟೇ ಸಮಾನ ಅವಕಾಶ ಸಿಕ್ಕರೆ ಮಾತ್ರ ಅವರು ಪುರುಷರಿಗೆ ಸರಿಸಮಾನರಾಗಿ ನಿಲ್ಲಬಲ್ಲರು. ಇಂದು ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆ ಸಬಲೆ ಎಂಬುವುದನ್ನು ತೋರಿಸಿದ್ದಾಳೆ. ಇದೀಗ ಮಿಲಿಟರಿಯಲ್ಲೂ ಪುರುಷನಂತೆಯೇ ಬಂದೂಕು ಹಿಡಿದು ಶತ್ರುಗಳೊಂದಿಗೆ ಹೋರಾಟ ನಡೆಸಲಿದ್ದಾಳೆ. ಇದರಿಂದ ಭಾರತದ ಸೇನೆ ಇನ್ನಷ್ಟು ಬಲಗೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ.

ಚೇಕಿತಾನ

Tags

Related Articles

Close