ಪ್ರಚಲಿತ

ಸಮೀಕ್ಷೆ : ಈಗ ಕರ್ನಾಟಕದಲ್ಲಿ ಚುನಾವಣೆ ನಡೆದರೆ ಯಾವ ಪಕ್ಷಕ್ಕೆ ಬಹುಮತ ಬರಲಿದೆ?!

ಕರ್ನಾಟಕದಲ್ಲಿ ಈ ಕೂಡಲೇ ಚುನಾವಣೆ ನಡೆದರೆ ಯಾವ ಪಕ್ಷ ಗೆಲ್ಲಬಹುದು..? ಬಹುಷಃ ಈ ಒಂದು ಪ್ರಶ್ನೆ ಸಹಜವಾಗಿ ಜನಸಾಮಾನ್ಯರಲ್ಲಿ ಕುತೂಹಲ ಮೂಡಿಸುತ್ತೆ. ಚುನಾವಣೆ ಅಂದ್ರೇನೆ ಹಾಗೇ ಅಲ್ವಾ. ಯಾವ ಪಕ್ಷ ಗೆಲ್ಲಬಹುದು, ಯಾವ ಪಕ್ಷ ಸೋಲಬಹುದು ಎಂಬ ಲೆಕ್ಕಾಚಾರದಲ್ಲೇ ಮಗ್ನರಾಗಿರುತ್ತಾರೆ. ಬುಕ್ಕಿಗಳಿಗಂತೂ ಚುನಾವಣಾ ವಿಷಯ ಹಾಟ್ ಫೇವರೆಟ್ ಆಗಿರುತ್ತೆ.

ಕರ್ನಾಟಕದ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದೆ. ಎಲ್ಲಾ ರಾಜಕೀಯ ಪಕ್ಷಗಳೂ ತಮ್ಮ ತಮ್ಮ ಪಕ್ಷಗಳನ್ನು ಚುನಾವಣೆಗೆ ಸಜ್ಜುಗೊಳಿಸುತ್ತಿದೆ. ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬೃಹತ್ ಪರಿವರ್ತನಾ ಯಾತ್ರೆಗೆ ಪ್ರತಿ ವಿಧಾನ ಸಭಾ ಕ್ಷೇತ್ರಗಳಿಗೂ ತನ್ನ ಪರಿವರ್ತನಾ ರಥದಲ್ಲಿ ತೆರಳಿ ಅಬ್ಬರಿಸುತ್ತಿದ್ದರೆ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರ ಸ್ವಾಮಿಯವರು ವಿಕಾಸ ಯಾತ್ರೆ ಎಂದು ಹಸಿರು ಬಿಳಿ ಬಣ್ಣದ ಬಸ್ ಏರಿ ಯಾತ್ರೆಯನ್ನು ಆರಂಭಿಸಿದ್ದಾರೆ. ಇತ್ತ ಕಾಂಗ್ರೆಸ್ ತಾನೂ ಏನೂ ಕಡಿಮೆ ಇಲ್ಲವೆಂದು “ಮನೆ ಮನೆಗೆ ಕಾಂಗ್ರೆಸ್” ಎಂಬ ಕಾರ್ಯಕ್ರಮ ಹಮ್ಮಿಕೊಂಡು ಪ್ರಚಾರವನ್ನು ಶುರುವಿಟ್ಟುಕೊಂಡಿದೆ.

ಆದರೆ ಮತದಾರನ ಮನದಲ್ಲಿ ಯಾವ ಪಕ್ಷವಿದೆ ಎಂಬ ವಿಚಾರ ಚುನಾವಣೆ ಆಗೋವರೆಗೂ ನಿಗೂಢ. ಅಭಿವೃದ್ಧಿಯ ಹೆಸರಿನಲ್ಲಿ ಮತ ಹಾಕುತ್ತಾನೋ, ಜಾತಿ
ಧರ್ಮದ ಹೆಸರಲ್ಲಿ ಮತ ಹಾಕುತ್ತಾನೋ ಅಥವಾ ಹಣ ಆಮಿಷಗಳ ಬಳೆಗೆ ಬಿದ್ದು ಮತ ಹಾಕುತ್ತಾನೋ ಗೊತ್ತಿಲ್ಲ. ಆದರೆ ತಾನು ಈಗಾಗಲೇ ಒಂದು ರಾಜಕೀಯ
ಪಕ್ಷವನ್ನು ಆಯ್ದುಕೊಂಡಿರುವುದಂತು ಸತ್ಯ. ಬಿಜೆಪಿಗರು ಇತಿಹಾಸದಲ್ಲಿ ಬಿಜೆಪಿ ಮಾಡಿದ ಸಾಧನೆ ಹಾಗೂ ಪ್ರಸ್ತುತ ಕೇಂದ್ರದಲ್ಲಿ ಮೋದಿ ಸರ್ಕಾರ ಮಾಡುತ್ತಿರುವ
ಅಭಿವೃದ್ಧಿಯ ಮಂತ್ರವನ್ನು ತೋರಿಸುತ್ತಾ ಓಟು ಕೇಳಿದರೆ, ಕಾಂಗ್ರೆಸ್ಸಿಗರು ಒಂದು ರುಪಾಯಿಗೆ ಅಕ್ಕಿ ಕೊಟ್ಟಿದ್ದೇವೆ ಎಂದು ವಿವರಿಸುತ್ತಾ ಮತ ಕೇಳುತ್ತಿದ್ದಾರೆ. ಇನ್ನು “ದಳ”ಪತಿಗಳು, ಈ ಎರಡೂ ರಾಷ್ಟ್ರೀಯ ಪಕ್ಷಗಳನ್ನು ಕರ್ನಾಟಕದಿಂದ ಓಡಿಸಿ ಎಂದು ಮತ ಕೇಳುತ್ತಿದ್ದಾರೆ.

ಇವೆಲ್ಲದರ ಮಧ್ಯೆ ಮತದಾರನ ಚಿತ್ತ ವಿಧಾನ ಸಭಾ ಚುನಾವಣೆಯತ್ತ ನೆಟ್ಟಿದೆ. ಯಾವ ಪಕ್ಷ ಎಷ್ಟೇ ಅಬ್ಬರಿಸಿದರೂ ಮತದಾರನ ಬತ್ತಳಿಕೆಯಲ್ಲಿ ಯಾವ ಪಕ್ಷಕ್ಕೆ
ಯಾವ ಬಾಣ ಎಂದು ಈಗಾಗಲೇ ನಿರ್ಧರಿಸಿಬಿಟ್ಟಿದ್ದಾನೆ. ಈ ಭಾವನೆಯನ್ನು ದೇಶದ ಪ್ರತಿಷ್ಟಿತ ಸುದ್ಧಿ ಸಂಸ್ಥೆಯೊಂದು ಸಮೀಕ್ಷೆ ನಡೆಸಿ ಜನತೆಯ ಮುಂದಿಟ್ಟಿದೆ. ಜನರ ಭಾವನೆಗಳನ್ನು ಅರ್ಥಮಾಡಿಕೊಂಡು, ಜನರ ಬಳಿಗೆ ತೆರಳಿ ಈ ಸಮೀಕ್ಷೆಯನ್ನು ನಡೆಸಿದ್ದು, ಕೆಲವು ರಾಜಕೀಯ ಪಕ್ಷಗಳಿಗೆ ಈ ಸಮೀಕ್ಷೆ ತಲೆನೋವಾಗಿದ್ದರೆ, ಮತ್ತೆ ಕೆಲವು ಪಕ್ಷ ವಿಜಯದ ನಗು ಬೀರುವತ್ತ ದಾಪುಗಾಲಿಡುತ್ತಿದೆ.

ರಾಜ್ಯದಲ್ಲಿ ಹಾರಾಡಲಿದೆ ಕೇಸರೀ ಪತಾಕೆ…!!!

ಹೌದು. ಹೀಗೊಂದು ಸಮೀಕ್ಷೆ ಈಗ ರಾಜ್ಯ ರಾಜಕಾರಣದಲ್ಲಿ ಸಂಚಲನವನ್ನೇ ಮೂಡಿಸಿದೆ. ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರ ಹಿಡಿಯುವ ಸಾಧ್ಯತೆ
ಇದೆ ಎಂದು ಕಾಪ್ಸ್ ಸಂಸ್ಥೆ ಸಮೀಕ್ಷೆ ನಡೆಸಿ ವರದಿ ನೀಡಿದೆ. ಕರ್ನಾಟಕದಲ್ಲಿ ಈ ಕೂಡಲೇ ಚುನಾವಣೆ ಎದುರಾದರೆ ಭಾರತೀಯ ಜನತಾ ಪಕ್ಷ ಭರ್ಜರಿಯಾಗಿ
ಜಯಭೇರಿ ಭಾರಿಸಲಿದೆ ಎಂದು ಕಾಪ್ಸ್ ಸಂಸ್ಥೆ ಸಮೀಕ್ಷೆಯೊಂದರಲ್ಲಿ ಬಹಿರಂಗ ಪಡಿಸಿದೆ.

ಕಳೆದ 2 ತಿಂಗಳ ಹಿಂದೆ ಸಿ ಫೋರ್, ಕರ್ನಾಟಕದ ವಿವಿಧ ಕ್ಷೇತ್ರಗಳಲ್ಲಿ ಚುನಾವಣಾ ಪೂರ್ವ ಸಮೀಕ್ಷೆಯಂತೆ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರದ ಹಿಡಿಯಬಹುದು
ಎಂದು ಅಂದಾಜು ವ್ಯಕ್ತಪಡಿಸಿತ್ತು. ಆದರೆ ಕಾಪ್ಸ್ ಸಂಸ್ಥೆ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯು ಬಿಜೆಪಿಗೆ ಬಹುಪರಾಕ್ ಅಂದಿದೆ. ಕರ್ನಾಟಕದ 224 ವಿಧಾನ ಸಭಾ ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆಸಿದ ಕಾಪ್ಸ್ ಸಂಸ್ಥೆ ಈ ವರದಿಯನ್ನು ಬಹಿರಂಗ ಪಡಿಸಿದೆ.

ಎಲ್ಲೆಲ್ಲಿ ಎಷ್ಟೆಷ್ಟು ಸೀಟುಗಳು ಬರಬಹುದು..???

ಕಾಪ್ಸ್ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆ ಕೇವಲ ರಾಜ್ಯದ ಒಟ್ಟು ಕ್ಷೇತ್ರಗಳು ಮಾತ್ರವಲ್ಲದೆ, ಯಾವ ಭಾಗದಲ್ಲಿ ಎಷ್ಟು ಕ್ಷೇತ್ರಗಳು ಬರಬಹುದೆಂಬ ಅಂಕಿ
ಅಂಶವನ್ನೂ ರಾಜ್ಯದ ಜನತೆಯ ಮುಂದಿಟ್ಟಿದೆ.
* ಕಾಪ್ಸ್ ನಡೆಸಿದ ಈ ಸಮೀಕ್ಷೆಯಲ್ಲಿ ಸದ್ಯದಲ್ಲೇ ಚುನಾವಣೆ ನಡೆದರೆ ಭಾರತೀಯ ಜನತಾ ಪಕ್ಷ ಒಟ್ಟು 113 ಕ್ಷೇತ್ರದಲ್ಲಿ ಕೇಸರಿ ಪಡೆ ಜಯಭೇರಿ ಭಾರಿಸಲಿದೆ ಎಂದು ಸಮೀಕ್ಷೆ ನುಡಿದಿದೆ.

* ಒಟ್ಟು 85 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲಿದ್ದು ರಾಜ್ಯದಲ್ಲಿ ಅಧಿಕಾರವನ್ನು ಕಳೆದುಕೊಳ್ಳಲಿದೆ ಎಂದು ಕಾಪ್ಸ್ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.

* ಇನ್ನು ಮತ್ತೊಮ್ಮೆ ಶತಾಯ ಗತಾಯ ಅಧಿಕಾರ ಹಿಡಿಯುವ ಯತ್ನದಲ್ಲಿರುವ ಜನತಾ ದಳ ಕೇವಲ 25 ಕ್ಷೇತ್ರದಲ್ಲಿ ತೃಪ್ತಿ ಪಡೆಯಲಿದೆ ಎಂದು ಸಮೀಕ್ಷೆಯಲ್ಲಿ
ಹೇಳಲಾಗಿದೆ.

* ಈ ಮೂಲಕ 2008ರಲ್ಲಿ ನಡೆದಿದ್ದ ವಿಧಾನ ಸಭಾ ಚುನಾವಣೆಯ ಫಲಿತಾಂಶ ಮತ್ತೊಮ್ಮೆ ಪುನರಾವರ್ತನೆಯಾಗುವ ಸಂಭವವಿದೆ.

* 2008ರಲ್ಲಿ ಬಿಜೆಪಿಗೆ 33%ರಷ್ಟು ಮತಗಳಿಕೆಯ ಮೂಲಕ 110 ಸ್ಥಾನಗಳನ್ನೂ, ಕಾಂಗ್ರೆಸ್ 35% ಮತಗಳಿಕೆಯ ಮೂಲಕ 80 ಸ್ಥಾನಗಳನ್ನೂ ಹಾಗೂ 19.44% ಮತಗಳ ಮೂಲಕ 28 ಸ್ಥಾನಗಳನ್ನು ಜೆಡಿಎಸ್ ಪಡೆದಿತ್ತು. ಇತರ 6 ಸ್ಥಾನಗಳನ್ನು ಇತರೆ ಪಕ್ಷಗಳು ಪಡೆದಿದ್ದವು.

* ಈ ಬಾರಿ ಹಳೆ ಮೈಸೂರು ಭಾಗದ 37 ಸ್ಥಾನಗಳ ಪೈಕಿ ಕಾಂಗ್ರೆಸ್ ಪಾಲಿಗೆ 21 ಹಾಗೂ ಬಿಜೆಪಿಗೆ 14 ಮತ್ತು ದಳಕ್ಕೆ 2 ಸ್ಥಾನ ಒಲಿಯುವ ಸಾಧ್ಯತೆ ಇದೆ.

* ಇನ್ನು ಕರಾವಳಿ ಭಾಗದಲ್ಲಿ, ಅಂದರೆ ದಕ್ಷಿಣ ಕನ್ನಡ, ಉಡುಪಿ ಭಾಗದಲ್ಲಿ ಭಾರತೀಯ ಜನತಾ ಪಕ್ಷ ಕ್ಲೀನ್ ಸ್ವೀಪ್ ಮಾಡಲಿದೆ.

* ಮುಂಬೈ ಕರ್ನಾಟಕದಲ್ಲಿಯೂ ಬಿಜೆಪಿ ನಗಾರಿ ಭಾರಿಸಲಿದೆ.

* ಇನ್ನು ಮಧ್ಯ ಕರ್ನಾಟಕದಲ್ಲಿ ಈ ಎರಡು ರಾಷ್ಟ್ರೀಯ ಪಕ್ಷಗಳು ಸಮಬಲ ಸಾಧಿಸಲಿವೆ ಎಂದು ಸಮೀಕ್ಷೆ ಹೇಳಿದೆ.

* ಹೈದರಬಾದ್ ಕರ್ನಾಟಕದಲ್ಲಿ ಬಿಜೆಪಿಯು 25 ಸ್ಥಾನಗಳನ್ನು ಗೆಲ್ಲಲಿದೆ.

* ಮುಂಬೈ ಕರ್ನಾಟಕದಲ್ಲಿ 56 ಸ್ಥಾನಗಳ ಪೈಕಿ 36 ಸ್ಥಾನ ಬಿಜೆಪಿ ಪಾಲಾಗಲಿದೆ.

ಹೀಗೆ ಭಾರತೀಯ ಜನತಾ ಪಕ್ಷ ಎಲ್ಲಿ ಎಷ್ಟು ಸ್ಥಾನಗಳನ್ನು ಪಡೆಯಬಹುದು ಎಂದು ಸಮೀಕ್ಷೆ ನುಡಿದಿದೆ.

ಕೆಲವೊಂದು ರಾಜಕೀಯ ಬೆಳವಣೆಗೆ, ರಾಜಕೀಯ ನಾಯಕರ ಮೇಲಿನ ಕೇಸುಗಳು, ಚುನಾವಣಾ ತಯಾರಿ, ನಾಗರೀಕರ ಸಮಸ್ಯೆಗಳ ಬಗ್ಗೆ
ಜನಾಭಿಪ್ರಾಯದೊಂದಿಗೆ ಈ ಸಮೀಕ್ಷೆ ನಡೆದಿದ್ದು, ಅಕ್ಟೋಬರ್ ತನಕ ನಡೆಸಿದ ಸಮೀಕ್ಷೆಯನ್ನು ನವೆಂಬರ್ 6ಕ್ಕೆ ಬಹಿರಂಗಪಡಿಸಿದೆ.

ಒಟ್ಟಾರೆಯಾಗಿ ಈ ಬಾರಿ ಮತದಾರ ಕಮಲದ ಕೈ ಹಿಡಿಯಲಿದ್ದು ಕಾಂಗ್ರೆಸ್ ಸರ್ಕಾರಕ್ಕೆ ಪಾಠ ಕಲಿಸಲಿದ್ದಾನೆ. ಕಾಂಗ್ರೆಸ್ ಸರ್ಕಾರದ ಹಲವಾರು ವಿಫಲ
ಯೋಜನೆಗಳು, ಅಹಿಂದಾದ ಹೆಸರಲ್ಲಿ ಮಾಡಿದ ಅನ್ಯಾಯ, ಜಾತಿ ಜಾತಿಗಳ ಮಧ್ಯೆ ಕಾಂಗ್ರೆಸ್ ಸೃಷ್ಟಿಸಿದ್ದ ತಿಕ್ಕಾಟ, ಹಿಂದೂಗಳ ಧಮನ ನೀತಿಯನ್ನು ವಿರೋಧಿಸಿ ಜನತೆ ಕಾಂಗ್ರೆಸ್ಸನ್ನು ಸೋಲಿಸಲು ಪಣ ತೊಟ್ಟು ನಿಂತಿದ್ದಾರೆ.

ಕೇಂದ್ರದಲ್ಲಿ ಭಾರತೀಯ ಜನತಾ ಪಕ್ಷ ಮಾಡುತ್ತಿರುವ ಜನಪರ ಹಾಗೂ ದಿಟ್ಟ ನಿರ್ಧಾರಗಳು, ಮೋದಿ ಸರ್ಕಾರದ ಮೇಲೆ ಜನತೆ ಇಟ್ಟಿರುವ ನಂಬಿಕೆ ಹಾಗೂ
ಯಡಿಯೂರಪ್ಪನವರ ಹಿಂದಿನ ಸರ್ಕಾರದಲ್ಲಿ ಮಾಡಿದ್ದ ಸಾಧನೆ ಇವೆಲ್ಲಾ ಬಿಜೆಪಿ ಅಧಿಕಾರ ಹಿಡಿಯಲು ಲಾಭವಾಗುತ್ತೆ ಎಂದು ಹೇಳಲಾಗುತ್ತಿದೆ.

ಟಿಪ್ಪು ಜಯಂತಿಯಂತಹ ಜನವಿರೋಧಿ ಹಾಗೂ ಹಿಟ್ಲರ್ ರೀತಿಯಲ್ಲಿ ಅಧಿಕಾರ ನಡೆಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮಖಾಡೆ ಮಲಗಲಿದ್ದು, ರಾಜ್ಯದಲ್ಲಿ ಮತ್ತೊಮ್ಮೆ ಕಮಲ ಅರಳುವ ಸಾಧ್ಯತೆ ಇದೆ ಎಂದು ಕಾಪ್ಸ್ (ಕ್ರಿಯೇಟಿವ್ ಸೆಂಟರ್ ಫಾರ್ ಪೊಲಿಟಿಕಲ್ ಆಂಡ್ ಸೋಷಿಯಲ್ ಸ್ಟಡೀಸ್) ಸಂಸ್ಥೆ ವಿಸ್ಕøತ ವರದಿಯನ್ನು ಜನತೆಯ ಮುಂದಿಟ್ಟಿದೆ.

-ಸುನಿಲ್

Tags

Related Articles

Close