ಅಂಕಣ

ಸರ್, ಐ.ಎಸ್.ಐ.ಎಸ್ ನವರು ಮಾಡ್ತಿರೋದೇ ನಿಜವಾದ ಇಸ್ಲಾಂ, ಕರೀರಿ ಯಾವುದಾದರೂ ಮೌಲಾನಾಗಳನ್ನ!! ಸತ್ಯ ಸಂಗತಿಯನ್ನು ನಾ ಬಯಲು ಮಾಡ್ತೇನೆ : ಬಂಧಿತ ಇಸ್ಲಾಮಿಕ್ ಭಯೋತ್ಪಾದಕ.

ಭಯೋತ್ಪಾದಕ ಸಂಘಟನೆ ISIS ಸಂಪರ್ಕದಲ್ಲಿದ್ದ ಐದು ಜನ ಭಯೋತ್ಪಾದಕರನ್ನ ಕೇರಳದ ಕಣ್ಣೂರಿನಲ್ಲಿ ಮೊನ್ನೆ ಮೊನ್ನೆಯಷ್ಟೇ ಬುಧವಾರದಂದು ಬಂಧಿಸಲಾಗಿತ್ತು.

ಪೋಲಿಸರು ಹೇಳುವ ಪ್ರಕಾರ ಈ ಭಯೋತ್ಪಾದಕರು ಕೆಲ ವರ್ಷಗಳಿಂದ ಕೇರಳ ಬಿಟ್ಟು ಬೇರೆ ರಾಜ್ಯಗಳಲ್ಲಿ ತಲೆಮರೆಸಿಕೊಂಡು ಓಡಾಡುತ್ತಿದ್ದರಂತೆ.

ಈ ಐದು ಜನರಲ್ಲೊಬ್ಬನಾದ ಹಮಸಾ ಎಂಬ ಭಯೋತ್ಪಾದಕ ಇಂಗ್ಲೆಂಡಿನಲ್ಲಿ ನಡೆದ ಭಯೋತ್ಪಾದನಾ ಕೃತ್ಯದಲ್ಲಿ ಶಾಮೀಲಾಗಿದ್ದಾನೆ ಅನ್ನೋದು ಪೋಲೀಸರ ಆರೋಪವಾಗಿದೆ.

52 ವರ್ಷದ ಈ ಭಯೋತ್ಪಾದಕ ಮುಗ್ಧ ಯುವಕರನ್ನ ಐಸಿಸ್ ಸಂಘಟನೆಗೆ ಸೇರಿಸುವ ಕೆಲಸ ಮಾಡಿತ್ತಿದ್ದವನಾಗಿದ್ದ.

ಈತನ ವಿಚಾರಣೆ ನಡೆಸಿದಾಗ ಈತ ಬಾಯಿಬಿಟ್ಟ ಸ್ಫೋಟಕ ಸತ್ಯಗಳು ಪೋಲೀಸರನ್ನೇ ದಂಗುಬಡಿಸಿದ್ದವು.

ಪೋಲೀಸರ ವಿಚಾರಣೆ ವೇಳೆ ಬಾಯಿಬಿಟ್ಟ ಈ ಉಗ್ರ ಹೇಳ್ತಾನೆ “ಐಸಿಸ್ ಸಂಘಟನೆಯೇ ನಿಜವಾದ ಇಸ್ಲಾಂನ್ನ ಪಾಲನೆ ಮಾಡುತ್ತಿದೆ, ಕರೀರಿ ಯಾವುದಾದರೂ ಮೌಲಾನಾಗಳನ್ನ, ಸತ್ಯ ಸಂಗತಿಯನ್ನು ನಾ ಬಯಲು ಮಾಡ್ತೇನೆ”, ಇದನ್ನ ಕೇಳಿದ ಪೋಲಿಸರೂ ಬೆಚ್ಚಿಬಿದ್ದಿದ್ದರಂತೆ.

ಪೋಲೀಸರ ವಿಚಾರಣೆಯ ಪ್ರಕಾರ ಈ ಭಯೋತ್ಪಾದಕ ಹಮಸಾ ಖಾಡಿ 1998 ರಿಂದ ಭಾರತದಲ್ಲಿ ನಡೆಯುತ್ತಿರೋ ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆಂಬ ಶಂಕೆಯಿದೆ.

ಈತ ಬಹರೇನಿನ ಧಾರ್ಮಿಕ ಸಂಸ್ಥೆ ಅಲ್-ಅನ್ಸಾರ್ ಜೊತೆ ಗುತುತಿಸಿಕೊಂಡಿದ್ದು, ಐಸಿಸ್ ಸಂಘಟನೆಗೆ ಯುವಕರನ್ನ ಸೇರಿಸುವ ಟ್ರೇನಿಂಗ್ ಕ್ಯಾಂಪ್ ಕೂಡ ನಡೆಸುತ್ತಿದ್ದನಂತೆ.

ಬಂಧಿತರಾದ ಈ ಐದೂ ಜನ ಭಯೋತ್ಪಾದಕರು ಸಿರಿಯಾಗೆ ತೆರಳಿದ್ದರಂತೆ, ಅಲ್ಲಿ ಐಸಿಸ್ ಸಂಘಟನೆಯ ಟ್ರೇನಿಂಗ್ ತಗೊಂಡು ವಾಪಸ್ ಭಾರತಕ್ಕೆ ಬಂದು ಇಲ್ಲಿ ಭಯೋತ್ಪಾದನಾ ಕೃತ್ಯಗಳನ್ನೆಸಗೋಕೆ ಸಂಚು ನಡೆಸಿದ್ದರಂತೆ.

ಬಂಧಿತರಾದ ಮಿತಿಲಜ್, ಅಬ್ದುಲ್ ರಜಾಕ್, ಹಮಸಾ ಹಾಗು ಇನ್ನಿಬ್ಬರು ಭಯೋತ್ಪಾದಕರನ್ನ ಕೇರಳದ ಕಣ್ಣೂರಿನಿಂದ ಬಂಧಿಸಲಾಗಿದೆ.

ಈ ಭಯೋತ್ಪಾದಕರ ಫೋನ್ ಕಾಲ್ ಟ್ರೇಸ್ ಮಾಡಿ ಇವರನ್ನ ಬಂಧಿಸಿದ ಪೋಲಿಸರು ಇವರಿಂದ ಸ್ಫೋಟಕ ಮಾಹಿತಿಯನ್ನು ಬಾಯಿಬಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ಕೆಲ ತಿಂಗಳ ಹಿಂದೆ ರಾಷ್ಟ್ರೀಯ ತನಿಖಾ ದಳ(NIA) ದ ತನಿಖೆಯ ಪ್ರಕಾರ ಕೇರಳದಿಂದ 22 ಮುಸ್ಲಿಂ ಯುವಕರು ಐಸಿಸ್ ಸೇರಿದ್ದಾರೆಂಬ ಮಾಹಿತಿಯನ್ನ ನೀಡಿತ್ತು. ಈ 22 ಜನರಲ್ಲಿ 17 ಜನ ಕಾಸರಗೋಡು ಜಿಲ್ಲೆಯವರಾಗಿದ್ದು ಇನ್ನುಳಿದ 5 ಜನ ಕೇರಳದ ಪಾಲಕ್ಕಾಡ್ ಜಿಲ್ಲರಯವರಾಗಿದ್ದಾರಂತೆ.

ಇನ್ನೊಂದು ವಿಷಯವೆಂದರೆ ಈ 22 ಜನರಲ್ಲಿ ಮೂವರು ಮಹಿಳೆಯರು ಹಾಗು ಮೂರು ಚಿಕ್ಕಮಕ್ಕಳೂ ಇದಾರಂತೆ. ಐಸಿಸ್ ಸಂಘಟನೆಯ ಮೂಲಕ ಭಾರತದಲ್ಲಿ ಭಯೋತ್ಪಾದನಾ ಕೃತ್ಯವೆಸಗೋಕೆ ಈ ಭಯೋತ್ಪಾದಕರು ಮುಂದಾಗಿದ್ದರಂತೆ.

“ಭಯೋತ್ಪಾದನೆಗೆ ಧರ್ಮವಿಲ್ಲ, ಬಣ್ಣವಿಲ್ಲ” ಅಂತ ಬೊಬ್ಬೆಯಿಡೋ, ಮಾನವತಾಧಿಕಾರದ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡೋ ಸೆಕ್ಯೂಲರ್ ಮೀಡಿಯಾಗಳು ಮಾತ್ರ ಈ ಭಯೋತ್ಪಾದಕರು ಯಾವ ಧರ್ಮದವರಾಗಿದ್ದರು ಎಂಬ ವಿಷಯವನ್ನ ತಿಳಿಸುವ ಗೋಜಿಗೆ ಹೋಗುವುದೇ ಇಲ್ಲ, ಅವರ್ಯಾವ ಧರ್ಮದವರನ್ನೋದಂತೂ ಬಿಡಿ ಈ ಭಯೋತ್ಪಾದಕರ ಬಂಧನವಾಗಿದೆ ಅನ್ನೋ ಸುದ್ದಿಯನ್ನೂ ತಮ್ಮ ಬ್ರೇಕಿಂಗ್ ನ್ಯೂಸ್ ಗಳ ಮೂಲಕವೂ ತೋರಿಸೋಕೆ ಹೋಗಲ್ಲ.

ಅದೇ ಹಿಂದೂ ಧರ್ಮದ ಚಿಕ್ಕಪುಟ್ಟ ವಿಷಯವಿದ್ದರೂ ಬ್ರೇಕಿಂಗ್ ನ್ಯೂಸ್, ದೊಡ್ಡ ದೊಡ್ಡ ಡಿಬೇಟ್ ಮಾಡಿ ಹಿಂದೂ ಧರ್ಮವನ್ನ ತೇಜೋವಧೆ ಮಾಡೋಕೆ ಮಾತ್ರ ಈ ಸೆಕ್ಯೂಲರ್ ಮೀಡಿಯಾಗಳು ಮಾತ್ರ ಹಿಂದೆ ಬೀಳಲ್ಲ.

ಇವರಿಗೆಲ್ಲಾ ಐಸಿಸ್/ಇಸ್ಲಾಮಿ ಭಯೋತ್ಪಾದಕರಿಂದ ದೇಶಕ್ಕೆ ಕಂಟಕವಿದೆ ಎಂದು ಯಾವತ್ತೂ ಅನಿಸೋಲ್ಲ, ಇವರಿಗೆ ದೀಪಾವಳಿಯ ಪಟಾಕಿಯಿಂದ, ಹೋಳಿ ಹಬ್ಬದ ಬಣ್ಣದಿಂದ, ಜಲ್ಲಿಕಟ್ಟು, ಕಂಬಳದಂತಹ ಕ್ರೀಡೆಗಳಿಂದ ದೇಶಕ್ಕೆ ಕಂಟಕವಿದೆ, ಹಿಂದುಗಳಿಂದ ಹಾಗು ಹಿಂದುಗಳ ಪಾರಂಪರಿಕ ಆಚರಣೆಗಳಿಂದ ದೇಶ ಆಪತ್ತಿನಲ್ಲಿದೆ ಅಂತ ಕಂಡು ಬರುತ್ತೆ ಹೊರತು ಐಸಿಸ್ ಭಯೋತ್ಪಾದಕರ ಭಾರತವನ್ನ ಸರ್ವನಾಶ ಮಾಡಿ ಇಸ್ಲಾಮೀಕರಣಗೊಳಿಸುವುದರಿಂದ ಈ ದೇಶ ಸರ್ವನಾಶವಾಗುತ್ತೆ ಅಂತ ಯಾವತ್ತೂ ಅನಿಸಲ್ಲ.

ಮಸೀದಿಗಳಿಗೆ ಹೋಗುವುದು ಮುಸ್ಲಿಂ ಹೆಣ್ಣುಮಕ್ಕಳ ನಿಷೇಧವಿರೋದರ ಬಗ್ಗೆ ನಮ್ಮ ಮಹಿಳಾ ಸಂಘಟನೆಗಳು ಮಾತನಾಡಲ್ಲ, ಆದರೆ ಅಯ್ಯಪ್ಪನ ಸನ್ನಿಧಿಗೆ ಮಹಿಳೆಯರಿಗೆ ಯಾಕೆ ಪ್ರವೇಶವಿಲ್ಲ ಎಂಬ ಹೋರಾಟ ಹಾರಾಟ ಮಾತ್ರ ಚೆನ್ನಾಗಿ ಮಾಡ್ತಾರೆ.

ತ್ರಿವಳಿ ತಲಾಕ್ ಬಗ್ಗೆ ಧ್ವನಿಯೆತ್ತೋಕೆ ಆಗಲ್ಲ, ಗೋಹಂತಕರಿಂದ ದಾಳಿಗೊಳಗಾದ ಟೆಕ್ಕಿ ನಂದಿನಿಯವರ ಬಗ್ಗೆ ಇಲ್ಲೀವರೆಗೂ ಯಾವ ಮಹಿಳಾ ಸಂಘಟನೆಗಳೂ ಅವರ ಪರ ಬಂದು ಮಾತಮಾಡಿದ್ದು ಕೇಳಲಿಲ್ಲ.

ಭಾರತದಲ್ಲಿ ಸೆಕ್ಯೂಲರಿಸಂ ಅನ್ನೋದು ಕೇವಲ ಹಿಂದುಗಳಿಗೆ ಮಾತ್ರ ಸೀಮಿತವಾಗಿದೆ ಹೊರತು ಮುಸಲ್ಮಾನರಿಗೆ ಸೆಕ್ಯೂಲರಿಸಮ್ಮಾಗಲಿ ಅಥವ ದೇಶದ ಕಾನೂನಾಗಲಿ ಅನ್ವಯಿಸಲ್ಲ ಅನ್ನೋದು ನಮ್ಮ ದೇಶದ ಸೆಕ್ಯೂಲರ್ ಗಳ ವಾದ ಅನಿಸುತ್ತೆ.

ಅದೇನೇ ಆಗಲಿ ಭಯೋತ್ಪಾದಕರ ಹಡೆಮುರಿ ಕಟ್ಟಿ ಇಸ್ಲಾಮಿ ಭಯೋತ್ಪಾದಕರ ಕರಾಳ ಮುಖವಾಡವನ್ನು ಬಯಲು ಮಾಡುತ್ತ ದೇಶದ ಭದ್ರತೆಯನ್ನ ಕಾಪಾಡುತ್ತಿರುವ ರಾಷ್ಟ್ರೀಯ ತನಿಖಾ ದಳ ಹಾಗು ಪೋಲೀಸರ ಕಾರ್ಯ ನಿಜಕ್ಕೂ ಶ್ಲಾಘನೀಯ!!

– Vinod Hindu Nationalist

Tags

Related Articles

Close