ಪ್ರಚಲಿತ

ಸಾಕ್ಷಿ ಇಲ್ಲಿದೆ! ಅನ್ನಭಾಗ್ಯದ ಅಕ್ಕಿಯಲ್ಲಿ ಕೇಂದ್ರ ಸರಕಾರದ ಪಾಲು 90%!!! ಆದರೂ ಸಿದ್ದರಾಮಯ್ಯ….

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಲ್ಕು ವರ್ಷಗಳಿಂದ ಅನ್ನಭಾಗ್ಯ ಯೋಜನೆ ಘೋಷಣೆ ಮಾಡಿ ಉಚಿತವಾಗಿ ಅಕ್ಕಿ ನೀಡುವ ಮೂಲಕ ಕರ್ನಾಟಕವನ್ನು ಹಸಿವು ಮುಕ್ತ ರಾಜ್ಯವನ್ನಾಗಿ ಮಾಡಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಆದರೆ ಈ ಯೋಜನೆಯ ಯಶಸ್ಸಿಗೆ ಅಕ್ಕಿಯನ್ನು ಪೆÇರೈಕೆ ಮಾಡುತ್ತಿರುವುದು ಮಾತ್ರ ಕೇಂದ್ರ ಸರ್ಕಾರ ಎನ್ನುವುದನ್ನು ಎಲ್ಲೂ ಹೇಳಿಲ್ಲ. ಆದರೆ ಈ ಬಗ್ಗೆ ಇದೀಗ ಪೂರ್ಣಪ್ರಮಾಣದ ಮಾಹಿತಿ ಲಭ್ಯವಾಗಿದ್ದು ಇದು ಕೇಂದ್ರ ಸರ್ಕಾರದ ಕೊಡುಗೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದಾಗಿದೆ!!

ಕಾಂಗ್ರೆಸ್ ಸರ್ಕಾರ ಹಸಿವು ಮುಕ್ತ ಕರ್ನಾಟಕ ಘೋಷಣೆಗೆ ಕೇಂದ್ರ ಸರ್ಕಾರ ಮೂರು ರೂಪಾಯಿ ರಿಯಾಯಿತಿ ದರದಲ್ಲಿ ನೀಡುತ್ತಿರುವ ಅಕ್ಕಿಯೇ ಕಾರಣವಾಗಿದ್ದು, ಪ್ರತಿ ಕೆ.ಜಿಗೆ 32 ರೂಪಾಯಿ ಅಕ್ಕಿ ಖರೀದಿ ಮಾಡಿ ರಾಜ್ಯಗಳಿಗೆ 3 ರೂಪಾಯಿ ದರದಲ್ಲಿ ನೀಡುತ್ತಿದೆ. ಅಷ್ಟೇ ಅಲ್ಲದೇ, ಈ ಯೋಜನೆಯ ಯಶಸ್ಸಿಗೆ ಅಕ್ಕಿಯನ್ನು ಪೆÇರೈಕೆ ಮಾಡುತ್ತಿರುವುದು ಕೇಂದ್ರ ಸರ್ಕಾರ ಎಂಬುವುದನ್ನು ಎಲ್ಲೂ ಹೇಳಿಕೊಳ್ಳದೇ ಇರುವುದು ಮಾತ್ರ ವಿಪರ್ಯಾಸ!!

ಸಿದ್ದರಾಮಯ್ಯ ಸರಕಾರ ಭಾಗ್ಯಗಳ ಮೇಲೆ ಭಾಗ್ಯಗಳನ್ನು ನೀಡುತ್ತಿದ್ದು, ಹಸಿವು ಮುಕ್ತ ಕರ್ನಾಟಕಕ್ಕಾಗಿ ಅನ್ನಭಾಗ್ಯವನ್ನು ರಾಜ್ಯ ಸರ್ಕಾರ ಹೊರತಂದಿರುವ ಬಗ್ಗೆ ಬೆಂಗಳೂರಿನ ರಮೇಶ್ ಎನ್ ಆರ್ ಎಂಬುವವರು ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಯಿಂದ ಆಘಾತಕಾರಿ ಅಂಶವೊಂದು ಹೊರಬಿದ್ದಿದೆ!! ಅನ್ನಭಾಗ್ಯದಲ್ಲಿ ರಾಜ್ಯ ಸರ್ಕಾರದ ಪಾಲು ಕೇವಲ 10% ದಷ್ಟು ಇದ್ದು, ಬಾಕಿ ಉಳಿದ ಕ್ರೆಡಿಟ್ ಕೇಂದ್ರ ಸರ್ಕಾರಕ್ಕೆ ಸಲ್ಲುತ್ತದೆ!!

ಹೌದು.. ಮಾಹಿತಿ ಹಕ್ಕು ನೀಡಿರುವ ಮಾಹಿತಿಯ ಪ್ರಕಾರ, ಎನ್.ಎಫ್.ಎಸ್.ಎ ಅಡಿ ಬಿಡುಗಡೆ ಮಾಡುತ್ತಿರುವ ಅಕ್ಕಿಯನ್ನು ಪ್ರತಿ ಕೆ.ಜಿ ರೂಪಾಯಿಗೆ 32.64ರ ದರದಲ್ಲಿ ಖರೀದಿಸಿ ಹಂಚಿಕೆ ನೀಡುತ್ತಿರುವುದಾಗಿ ತಿಳಿಸಲಾಗಿದೆ ಎಂದು ಪತ್ರದ ಪ್ರತಿಯಲ್ಲಿ ಲಗತ್ತಿಸಿದೆ!! ಪ್ರಸ್ತುತ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಪ್ರತಿ ಮಾಹೆ ಬಿಡುಗಡೆ ಮಾಡಲಾಗುತ್ತಿರುವ ಒಟ್ಟು 217403 ಮೆಟ್ರಿಕ್ ಟನ್ ಅಕ್ಕಿಯನ್ನು ಪ್ರತಿ ಕೆ.ಜಿಗೆ ರೂಪಾಯಿ 3.00ರ ದರವನ್ನು ಭಾರತ ಆಹಾರ ನಿಗಮಕ್ಕೆ ಪಾವತಿಸಿ ಎತ್ತುವಳಿ ಮಾಡಿ ಸಾರ್ವಜನಿಕ ವಿತರಣಾ ಪದ್ದತಿಯಡಿ ಹಂಚಿಕೆ ಮಾಡಲಾಗುತ್ತಿದೆ.

ಅನ್ನಭಾಗ್ಯ ಯೋಜನೆ ಪ್ರಾರಂಭವಾದ 2013ನೇ ಜುಲೈಯಿಂದ 2017ರ ಅಕ್ಟೋಬರ್ ವರೆಗೆ ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಿರುವ ಒಟ್ಟು ಅಕ್ಕಿ ಪ್ರಮಾಣವನ್ನು ನೀಡಲಾಗಿದೆ!! 2013-14ರಲ್ಲಿ ಅಕ್ಕಿಯ ಪ್ರಮಾಣ ಒಟ್ಟು 18,46,964 ಮೆಟ್ರಿಕ್ ಟನ್ ಗಳಷ್ಟಿದ್ದು, 2014-15ರಲ್ಲಿ 24,62,307 ಮೆಟ್ರಿಕ್ ಟನ್ ಇತ್ತು. ಇನ್ನು 2015-16ರಲ್ಲಿ ಅಕ್ಕಿಯ ಪ್ರಮಾಣ 20,32,403 ಮೆಟ್ರಿಕ್ ಟನ್ ಗಳಿದ್ದು 2016-17ರಲ್ಲಿ 21,17,015 ಮೆಟ್ರಿಕ್ ಟನ್ ಗಳಷ್ಟಿತ್ತು!! ಇನ್ನು ಪ್ರಸಕ್ತ 2017ರ ಒಕ್ಟೋಬರ್ ತಿಂಗಳವರೆಗೆ 15,21,821 ಮೆಟ್ರಿಕ್ ಟನ್ ಪ್ರಮಾಣದ ಅಕ್ಕಿಯನ್ನು ಕೇಂದ್ರ ಸರ್ಕಾರ ಒದಗಿಸಿರುತ್ತದೆ!! ಹಾಗಾದರೆ ಅನ್ನಭಾಗ್ಯದ ಅಕ್ಕಿಯ ಪೂರೈಕೆ ರಾಜ್ಯ ಸರ್ಕಾರದ್ದೇ ಅಥವಾ ಕೇಂದ್ರ ಸರ್ಕಾರದ್ದೇ??

ಬಡವರಿಗೆ ಅತಿಕಡಿಮೆ ಬೆಲೆಯಲ್ಲಿ ಅಕ್ಕಿ ವಿತರಿಸುವ ಅನ್ನಭಾಗ್ಯ ಯೋಜನೆಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ತಾವು ಅಧಿಕಾರ ವಹಿಸಿಕೊಂಡ ದಿನವೇ ಘೋಷಿಸಿದ್ದು, ರಾಜ್ಯ ಸರ್ಕಾರದ ಕೊಡುಗೆ ಎನ್ನುವಷ್ಟರ ಮಟ್ಟಿಗೆ ಪ್ರಚಾರವನ್ನು ಪಡೆದುಕೊಂಡಿದ್ದಾರೆ!! ಆದರೆ ಕೇವಲ 3 ರೂ. ನೀಡಿ ದೊಡ್ಡ ಪ್ರಚಾರ ಪಡೆದುಕೊಳ್ಳುತ್ತಿರುವ ರಾಜ್ಯ ಕಾಂಗ್ರೆಸ್ ನಾಯಕರಿಗೆ 29 ರೂ. ಗಳಿಂತ 3 ರೂ. ದೊಡ್ಡದೇ ಎಂಬ ಪ್ರಶ್ನೆಯನ್ನು ರಾಜ್ಯದ ಜನರು ಕೇಳಬೇಕು. ಇಂಥ ಹತ್ತಾರು ಯೋಜನೆಗಳು ಕೇಂದ್ರದ ಅನುದಾನದಲ್ಲಿ ನಡೆಯುತ್ತಿದ್ದು ಈ ಬಗ್ಗೆ ರಾಜ್ಯ ಸರ್ಕಾರ ಮಾತ್ರ ತುಟಿಕ್ ಪಿಟಿಕ್ ಎನ್ನುತ್ತಿಲ್ಲ!!

ಅಂತೂ ಅನ್ನಭಾಗ್ಯದ ವಿಚಾರವಾಗಿ ಮಾಹಿತಿ ಹಕ್ಕು ಅಧಿನಿಯಮದಡಿ ಈ ಬಗ್ಗೆ ಪೂರ್ಣ ಪ್ರಮಾಣದ ಮಾಹಿತಿ ಸಿಕ್ಕಿದ್ದು, ಶೇಕಡಾ 90ರಷ್ಟು ಅನ್ನಭಾಗ್ಯ ಯೋಜನೆಯ ಪಾಲನ್ನು ಕೇಂದ್ರ ಸರ್ಕಾರ ಪಡೆದುಕೊಂಡಿದೆ!! ಆದರೆ ರಾಜ್ಯ ಸರ್ಕಾರದ ಅನ್ನಭಾಗ್ಯದ ವಿಚಾರದಲ್ಲೂ ಗೋಲ್ ಮಾಲ್ ನಡೆಯುತ್ತಿರುವುದು ಮಾತ್ರ ವಿಪರ್ಯಾಸ!! ಆದರೆ ಸಿದ್ದರಾಮಯ್ಯ ಸರ್ಕಾರ ಅನ್ನಭಾಗ್ಯ ಕೇಂದ್ರಸರ್ಕಾರದ ಕೊಡುಗೆ ಎಂದು ಯಾವತ್ತು ಹೇಳದಿದ್ದು, ಇದು ರಾಜ್ಯ ಸರ್ಕಾರದ ಕೊಡುಗೆ ಎಂದು ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವುದು ಮಾತ್ರ ಹಾಸ್ಯಾಸ್ಪದವಾಗಿದೆ!!
– ಅಲೋಖಾ

Tags

Related Articles

Close