ಪ್ರಚಲಿತ

ಸಾಧುಗಳ‌ ಜಾಗದಲ್ಲಿ ಬೇರೆ ಮತದವರೇನಾದರೂ ಇದ್ದಿದ್ದರೆ? ಇದುವರೆಗೆ ಹತ್ಯೆಯಾದ ಸಾಧುಗಳೆಷ್ಟು? ಮಾಧ್ಯಮಗಳು ಭೀಕರ ಹತ್ಯೆಯನ್ನು ಹೇಗೆ ನಿರ್ಲಕ್ಷಿಸಿದೆ ನೋಡಿ..

  • ಏಪ್ರಿಲ್ 16 ರ ರಾತ್ರಿ 10 ರ ಸುಮಾರಿಗೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ವಾರಣಾಸಿಯ ಪೂಜ್ಯ ಜುನಾ ಅಖಾರಾದ ಇಬ್ಬರು ಸಾಧುಗಳು ಸೇರಿದಂತೆ ಮೂವರನ್ನು ಜನರ ಗುಂಪೊಂದು ಬರ್ಬರವಾಗಿ ಹತ್ಯೆಗೈದ ಘಟನೆ ಇಡೀ ಹಿಂದೂ ಸಮಾಜವನ್ನೇ ಕಣ್ಣೀರಲ್ಲಿ ಕೈತೊಳೆವಂತೆ ಮಾಡಿದೆ.

ಆದರೆ ದುರದೃಷ್ಟ ನೋಡಿ ಏಪ್ರಿಲ್ 19ರವರೆಗೆ ಈ ಘಟನೆಯ ಬಗ್ಗೆ ಸಾರ್ವಜನಿಕವಾಗಿ ಎಲ್ಲೂ ಮಾಹಿತಿ ಬಂದಿರಲಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಈ ಲಿಂಚಿಂಗ್ ವೀಡಿಯೊಗಳು ಹೊರಬಂದ ಬಳಿಕವೇ ಇಂಥದೊಂದು ಭೀಕರ ಘಟನೆ ಬೆಳಕಿಗೆ ಬಂದಿತು. ಇದರ ಹೊರತಾಗಿ ಯಾವುದೇ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿರಲೇ ಇಲ್ಲ.

ಕುಂಕುಮವನ್ನು ಧರಿಸಿದ ವಯಸ್ಸಾದ ವ್ಯಕ್ತಿಯೊಬ್ಬರು ಪೋಲೀಸ್ ಬೆಂಗಾವಲಿನಲ್ಲಿ ಕಟ್ಟಡದಿಂದ ಬರುತ್ತಿದ್ದರು‌. ಹೊರಗಡೆಯಿಂದ ಕಾಯುತ್ತಿದ್ದ ಕೋಲು ಹಿಡಿದ ದುಷ್ಕರ್ಮಿಗಳ ಗುಂಪು ಅವರ ಮೇಲೆ ರಕ್ತ ಸ್ರಾವ ಆಗುವಂತೆ ಬಡಿಯುತ್ತದೆ. ಈ ವೇಳೆ ಪೊಲೀಸರು ತಡೆಯುವುದಿಲ್ಲ. ರಕ್ಷಣೆಗಾಗಿ ಪೊಲೀಸರ ಕೈ ಹಿಡಿಯುವ ಆ ಸಾಧುವಿನ ದೃಶ್ಯ ನೋಡಿದಾಗ ಕರುಳು ಚುರ್ ಅನ್ನುತ್ತದೆ. ಇದು ವಿಡಿಯೋದಲ್ಲಿರುವ ದೃಶ್ಯವಾಗಿತ್ತು. ಪೊಲೀಸರ ಗಾಜುಗಳನ್ನೂ ಒಡೆದರೂ ಪೊಲೀಸರು ಮಾತಾಡಲಿಲ್ಲ. ಹೆಚ್ಚುವರಿ ಪೊಲೀಸರನ್ನು ಕರೆಸಿ ಸಾಧುಗಳ ರಕ್ಷಣೆ ಮಾಡಬಹುದಿತ್ತು. ಆದರೆ ಘಟನೆಯಲ್ಲಿ ಇಬ್ಬರು ಸಾಧುಗಳು ಸೇರಿ ಮೂವರ ಬರ್ಬರ ಹತ್ಯೆಯಾಯಿತು. ಶಿವಸೇನೆಯಂಥಾ ಕಟ್ಟರ್ ಹಿಂದುತ್ವದ ಪಕ್ಷ ಆಡಳಿತ ನಡೆಸುತ್ತಿದ್ದರೂ ಅಧಿಕಾರಕ್ಕಾಗಿ ಕಾಂಗ್ರೆಸ್, ಎನ್‌ಸಿಪಿ ಜೊತೆ ಕೈಜೋಡಿಸಿದ ಪರಿಣಾಮದಿಂದ ಉದ್ದವ್ ಠಾಕ್ರೆ ಭೀಷ್ಮನಂತೆ ವರ್ತಿಸಿದರು.

ರಾಜಸಭೆಯಲ್ಲಿ ದ್ರೌಪದಿಯ ಸೀರೆಯನ್ನು ಎಳೆದರೂ ಪಿತಾಮಹ ಧರ್ಮಭೀರು ಎಂದು ಕರೆಸಿಕೊಂಡಿದ್ದ ಗಂಗಾಪುತ್ರ ಭೀಷ್ಮ, ದ್ರೋಣಾದಿವರ್ಯರು ಮಾತೇ ಆಡಲಿಲ್ಲ. ಧರ್ಮದ ವಿರುದ್ಧ ಅನ್ಯಾಯ ನಡೆದಾಗ ಮೌನ ವಹಿಸಿದ ದಂಡಾ ಸ್ವರೂಪವಾಗಿ ಕುರುಕ್ಷೇತ್ರ ಯುದ್ಧದಲ್ಲಿ ಹತರಾದರು. ಅದೇ ರೀತಿ ಶಿವಸೇನೆ ವರ್ತಿಸಿತು.

ಈ ಹಿಂದೆಯೂ ಅನೇಕ ಲಿಂಚಿಂಗ್‌ನಂಥಾ ಘಟನೆಗಳು ನಡೆದಿದ್ದವು. ಆಗ ಅನೇಕ ಮಾಧ್ಯಮಗಳು ಈ ಬಗ್ಗೆ ತುದಿಗಾಲಲ್ಲಿ ನಿಂತು ವರದಿ ಮಾಡಿದ್ದವು. ಕಳ್ಳತನ, ದನಕಳ್ಳತನದಂಥಾ ನೈಜ ಘಟನೆಗಳ ಅಪರಾಧಿಗಳು ಲಿಂಚಿಂಗ್‌ಗೆ ಬಲಿಯಾದಾಗ ತಾವೇ ಆ ಘಟನೆಗಳನ್ನು ತಿರುಚಿ ವರದಿ ಮಾಡಿ ಹಿಂದೂ ಸಂಘಟನೆಗಳೇ ಹತ್ಯೆ ನಡೆಸಿವೆ ಎಂದು ವರದಿ ಮಾಡುತ್ತಿದ್ದವು. ಆದರೆ ಈ ಘಟನೆಯ ಬಗ್ಗೆ ವರದಿಯಾಗಲು ಘಟನೆ ನಡೆದು 3 ದಿನ ಕಳೆಯಬೇಕಾಯ್ತು.

ರಾಷ್ಟ್ರೀಯ ಇಂಗ್ಲಿಷ್ ಮಾಧ್ಯಮಗಳು ಈ ಭಯಾನಕ ಅಪರಾಧದ ವರದಿ ಆರಂಭದಲ್ಲಿ ಪ್ರಕಟಿಸಿರಲಿಲ್ಲ‌‌. ಪ್ರಮುಖ ಪತ್ರಿಕೆಗಳಾದ ದಿ ಟೈಮ್ಸ್ ಆಫ್ ಇಂಡಿಯಾ, ಹಿಂದೂಸ್ತಾನ್ ಟೈಮ್ಸ್, ದಿ ಹಿಂದೂ ಮತ್ತು ದಿ ಇಂಡಿಯನ್ ಎಕ್ಸ್‌ಪ್ರೆಸ್ ತಮ್ಮ ಮುಂಬೈ ಮುದ್ರಣ ಆವೃತ್ತಿಗಳಲ್ಲಿ ಏಪ್ರಿಲ್ 18 ರಂದು ಇದರ ವರದಿಗಳನ್ನು ನೀಡಿವೆ.

ಚಿಕಾನೆ ಮಹಾರಾಜ್ ಕಲ್ಪವಿಕ್ಷಗಿರಿ (70) ಮತ್ತು ಸುಶೀಲ್ ಗಿರಿ ಮಹಾರಾಜ್ (35) ಪೂಜ್ಯ, ವಾರಣಾಸಿ ಮೂಲದ ಶ್ರೀ ಪಂಚ ದಾಶ್ನಮ್ ಜುನಾ ಅಖರಾ ಅಥವಾ ‘ಜುನಾ ಅಖಾರಾ’ ಗೆ ಸೇರಿದವರಾಗಿದ್ದಾರೆ. ಮತ್ತೊಬ್ಬ ನಿಲೇಶ್ ತೆಲ್ಗನೆ (35) ಎಂದು ಗುರುತಿಸಲ್ಪಟ್ಟಿದ್ದಾರೆ. ಪುರೋಹಿತರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಈ ಸಾಧುಗಳು ಮಹಾರಾಷ್ಟ್ರದಿಂದ ಗುಜರಾತ್‌ಗೆ ಪ್ರಯಾಣಿಸುತ್ತಿದ್ದು ನಿಲೇಶ್ ವಾಹನದ ಚಾಲಕ.

ಹಲವು ಮಾಧ್ಯಮಗಳು ಬಲಿಪಶುಗಳನ್ನು ಪುರೋಹಿತರು ಎಂದು ಉಲ್ಲೇಖಿಸಿದೆ. ಕೆಲವು ಧಾರ್ಮಿಕ ಮುಖಂಡರು ಎಂದು ಉಲ್ಲೇಖಿಸಿದೆ. ಕೆಲವು ಮಾಧ್ಯನಗಳು ಕೊಲೆಯಾದವರು ಕಳ್ಳರು ಎಂದರು. ಇನ್ನು ಕೆಲವು ಜನರ ತಪ್ಪು ಗ್ರಹಿಸಿ ಕೊಂದರು ಎಂದಿವೆ.‌

ಆದರೆ ಇದೇ ಸ್ಥಾನದಲ್ಲಿ ಇಸ್ಲಾಂ ಅಥವಾ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವರಾಗಿದ್ದರೆ, ಅವರ ಗುರುತನ್ನು ತಮ್ಮ ಮುಖ್ಯಾಂಶಗಳಲ್ಲಿ ಪ್ರಮುಖವಾಗಿ ಪ್ರದರ್ಶಿಸಬಹುದಿತ್ತು. ಆದರೆ ಇಲ್ಲಿ ನಡೆದಿದ್ದು ಬೇರೆ.

ತನ್ನ ಸುದ್ದಿಗಳಲ್ಲಿ ಸಾಧು ಎಂಬ ಹೆಸರನ್ನು ಎಚ್ಚರಿಕೆ ವಹಿಸಿ ಕೈ ಬಿಡುವುದರ ಹಿಂದೆ ಏನೆಲ್ಲಾ ಹಿಡನ್ ಅಜೆಂಡಾ ಇರಬಹುದು ಎಂದೆಲ್ಲಾ ಯೋಚಿಸಿದಾಗ ಕೆಲವು ವಿಷಯಗಳು ಗೊತ್ತಾಗುತ್ತದೆ.

ಮುಸ್ಲಿಂ ಮೌಲ್ವಿ ಅಥವಾ ಕ್ರಿಶ್ಚಿಯನ್ ಪಾದ್ರಿಯ ಮೇಲೆ ಸಣ್ಣದೊಂದು ದಾಳಿ ನಡೆದರೂ ಮಾಧ್ಯಮಗಳು ಅದನ್ನು ದೊಡ್ಡದಾಗಿ ಬಿಂಬಿಸಿ ಹಿಂದೂ ಸಂಘಟನೆ, ಬಿಜೆಪಿಯ ತಲೆಗೆ ಕಟ್ಟುತ್ತದೆ.

ಎರಡು ವರ್ಷಗಳ ಹಿಂದೆ ಉತ್ತರ ಪ್ರದೇಶ ಮತ್ತು ಸುತ್ತಮುತ್ತಲಿನ ರಾಜ್ಯಗಳಲ್ಲಿ ಸಾಧುಗಳ ಕೊಲೆಗಳ ಪ್ರಮಾಣವನ್ನು ಇಂಗ್ಲಿಷ್ ಮಾಧ್ಯಮಗಳು ಹೇಗೆ ನಿರ್ಲಕ್ಷಿಸಿವೆ ಎಂಬುದನ್ನು ನೆನಪಿಸಿಕೊಳ್ಳೋಣ.

2018 ರಲ್ಲಿ ಯುಪಿ ಮತ್ತು ಹರಿಯಾಣದಲ್ಲಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ ಹೆಚ್ಚಿನ ಸಂಖ್ಯೆಯ ಸಾಧುಗಳನ್ನು ಕೊಲ್ಲಲಾಯಿತು. ಯುಪಿ ಮತ್ತು ಹರಿಯಾಣದಲ್ಲಿ ದುಷ್ಕರ್ಮಿಗಳ ಗುಂಪು ಸಾಧುಗಳನ್ನು ಗುರಿಯಾಗಿಸಿ ಹೊಡೆದಿದ್ದಾರೆ.

ತಮ್ಮ ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಕ್ಕಾಗಿ ಮೂವರು ಸಾಧುಗಳನ್ನು ಯುಪಿಯ ಅವುರೈಯಾ ಜಿಲ್ಲೆಯಲ್ಲಿ ಗೋಹಂತಕರು‌ ಸಾಧುಗಳು ನಿದ್ರೆಯಲ್ಲಿದ್ದಾಗಲೇ ಕೊಲ್ಲಲ್ಪಟ್ಟರು. ಅವರ ಗಂಟಲು ಮತ್ತು ನಾಲಿಗೆಯನ್ನು ಸೀಳಲಾಗಿತ್ತು.
ಹರಿಯಾಣದಲ್ಲಿ ಅದೇ ವಾರದಲ್ಲಿ, ನಾಲ್ಕು ಸಾಧುಗಳನ್ನು ಕರ್ನಾಲ್ ಆಶ್ರಮದಲ್ಲಿ ಕ್ರೂರವಾಗಿ ಕೊಲ್ಲಲಾಯಿತು.
ಯುಪಿಯ ಮಂಗ್ಲೌರಾದಲ್ಲಿ ಸಾಧುಗಳು ಗಂಟಲು ಸೀಳಿಕೊಂಡು ಶವವಾಗಿ ಪತ್ತೆಯಾಗಿದ್ದಾರೆ.
ದೇವಾಲಯದ ಆವರಣದಲ್ಲಿಯೇ ಅಲಿಗರ್ ಜಿಲ್ಲೆಯಲ್ಲಿ ರಾತ್ರಿ ದೇವಾಲಯದಲ್ಲಿ ಮಲಗಿದ್ದ ಮಹಂತ್ ಮತ್ತು ಇನ್ನೊಬ್ಬ ಅರ್ಚಕನನ್ನು ಥಳಿಸಲಾಯಿತು.
60 ವರ್ಷದ ರಾಮೇಶ್ವರ ದಯಾಳ ಅವರ ಶವ ಗಂಟಲು ಸೀಳಿದ ಸ್ಥಿತಿಯಲ್ಲಿ, ಯುಪಿ ಯ ಪಿಲಿಭಿತ್ ಜಿಲ್ಲೆಯ ಹೊಲಗಳಲ್ಲಿ ಎಸೆದ ಸ್ಥಿತಿದಲ್ಲಿ ಪತ್ತೆಲಾಯಿತು. ಈ ಪ್ರಕರಣದಲ್ಲಿ ಪೊಲೀಸರು ಅಬ್ದುಲ್ ಸಯೀದ್ ಮತ್ತು ಬಾಬು ಖಾನ್ ಅವರನ್ನು ಬಂಧಿಸಿದರು. ದರೋಡೆ ಉದ್ದೇಶದಿಂದ ಇವರು ಹತ್ಯೆ ನಡೆಸಿದ್ದರು.

ಅರ್ಚಕ ಶಂಶರ್ ಸಿಂಗ್ ಅವರು ಯುಪಿ ಬಾಬಾಬಂಕಿಯಲ್ಲಿ ಗಂಟಲು ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಯುಪಿ ಸುಲ್ತಾನಪುರ ಜಿಲ್ಲೆಯ ಪಾಯಗಿಪುರದ ಪೆಹೆಲ್ವಾನ್ ಬಾಬಾ ದೇವಸ್ಥಾನದಲ್ಲಿ ಅರ್ಚಕ ಶ್ಯಾಮ್ಲಾಲ್ ಉಪಾಧ್ಯಾಯ ಅವರ ಶವ ಪತ್ತೆಯಾಗಿದೆ. ನಂತರ ಕೊಲೆಗಾಗಿ ಪೊಲೀಸರು ಸೋನು ಯಾದವ್ ಎಂಬಾತನನ್ನು ಬಂಧಿಸಿದ್ದಾರೆ.
ಹರಿಯಾಣದ ಫತೇಬಾದ್‌ನ ಚೋಟುನಾಥ ದೇವಸ್ಥಾನವನ್ನು ಭಕ್ತರು ಪ್ರವೇಶಿಸಿ ಬೂದಿಯ ರಾಶಿಯನ್ನು ಕಂಡುಹಿಡಿದರು. ಈ ಬೂದಿಯು ಧೋಲಿಯಾಳದ್ದು ಎಂದು ಬೆಳಕಿಗೆ ಬಂದಿತು.
ಯುಪಿಯ ಮಥುರಾ ಜಿಲ್ಲೆಯ ಶಿವ ದೇವಸ್ಥಾನವೊಂದರಲ್ಲಿ, 70 ವರ್ಷದ ಶ್ಯಾಮ್ ಗಿರಿ ಇರಿತದ ಗಾಯಗಳೊಂದಿಗೆ ಶವವಾಗಿ ಪತ್ತೆಯಾಗಿದ್ದಾರೆ.
ಅದೇ ತಿಂಗಳಲ್ಲಿ, ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ಮುನ್ನಾ ಲಾಲ್ ಎಂಬ 65 ವರ್ಷದ ಸಾಧು ಕೊಲೆಯಾಗಿರುವುದು ಕಂಡುಬಂದಿದೆ.
ಈ ಮೇಲಿನ ಪಟ್ಟಿಯನ್ನು ವಿಶ್ವಾಸಾರ್ಹ ಹಿಂದಿ ಮಾಧ್ಯಮ ವರದಿಗಳಿಂದ ಸಂಗ್ರಹಿಸಲ್ಪಟ್ಟಿದೆ. ಆದರೆ ಇಂಗ್ಲೀಷ್ ಪತ್ರಿಕೆಗಳು ಇದರ ವರದಿ ಪ್ರಕಟಿಸಲೇ ಇಲ್ಲ.

ಚರ್ಚ್ ಕಟ್ಟಡಗಳಿಗೆ ಹಾನಿಯಾದ ಘಟನೆಗಳನ್ನು ಬಳಸಿಕೊಂಡು ‘ಕ್ರಿಶ್ಚಿಯನ್ನರ ಮೇಲೆ ಆಕ್ರಮಣ’ ಎಂದು ವರ್ಣರಂಜಿತ ವರದಿಗಳನ್ನು ಪ್ರಕಟಿಸುವ ಮಾಧ್ಯಮಗಳಿಗೆ ಹಿಂದೂ ಸಾಧುಗಳು ಹತ್ಯೆಯಾದ ಘಟನೆಗಳು ಗೊತ್ತಾಗುವುದೇ ಇಲ್ಲ.

ಮೊನ್ನೆ ನಡೆದ ಸಾಧುಗಳ ಹತ್ಯೆಯನ್ನು ರಾಜ್ಯ ಸರ್ಕಾರ‌ ಹಾಗೂ ಪೊಲೀಸರು ಕೂಡ ನಿರ್ಲಕ್ಷಿಸಿದರು.

ಕಳೆದ ಸೆಪ್ಟೆಂಬರ್ನಲ್ಲಿ, ಹರಿಯಾಣ ಪೊಲೀಸರು ಆರು ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂತರರಾಜ್ಯ ಗ್ಯಾಂಗ್ ಅನ್ನು ಬಂಧಿಸಿದರು. ಇವರು ದೇವಾಲಯಗಳನ್ನು ಗುರಿಯಾಗಿಸಿ ದರೋಡೆ ನಡೆಸಿದ್ದರು. ಆಗ ಹಿಂದಿ ಪತ್ರಿಕೆಗಳು ಕುತೂಹಲದಿಂದ ಗ ಪತ್ರಿಕಾಗೋಷ್ಠಿಯಲ್ಲಿ ಗ್ಯಾಂಗ್ ಸದಸ್ಯರ ಗುರುತನ್ನು ಬಹಿರಂಗಪಡಿಸಲು ಹೇಳಿದಾಗ ಪೊಲೀಸರು‌ ಮಾಹಿತಿ ನೀಡಲು ನಿರಾಕರಿಸಿದರು.

ಕುಂಕುಮ, ರುದ್ರಾಕ್ಷಿ, ಕಾವಿ ವಸ್ತ್ರ ಮುಂತಾದ ವಸ್ತ್ರಗಳನ್ನು ಧರಿಸುವ ಕಾವಿಧಾರಿಗಳೇ ಮೂಲಭೂತವಾದಿಗಳ ಹತ್ಯೆಗೆ ಗುರಿಯಾಗುತ್ತಿದ್ದಾರೆ. ಸಾಧುಗಳು ಯಾವುದೇ ಮಠ ಕಟ್ಟಿರುವುದಿಲ್ಲ. ತನ್ನಷ್ಟಕ್ಕೆ ತಾವಿದ್ದು ಭಿಕ್ಷೆ ಬೇಡಿ‌ ಬದುಕುತ್ತಾರೆ. ಇವರ ಹತ್ಯೆಯಾದಾಗ ಮಾಧ್ಯಮಗಳು ಕೊಡುವ ಬಿರುದು ಕಳ್ಳರು, ದರೋಡೆಕೋರರು, ಮಕ್ಕಳ ಕಳ್ಳರು ಇತ್ಯಾದಿ…

Girish
Source: https://swarajyamag.com/politics/english-medias-disdain-for-saffron-shows-in-its-coverage-of-mob-lynching-of-sadhus-in-palghar

Tags

Related Articles

FOR DAILY ALERTS
Close