ಪ್ರಚಲಿತ

ಸಾಲ ಮನ್ನಾ ಯೋಜನೆ ಹೆಸರಲ್ಲಿ ದೋಖಾ! ರೈತರಿಗೆ ಸಿದ್ದರಾಮಯ್ಯ ಸರಕಾರದಿಂದ ಮಹಾ ಮೋಸ!

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾಡಿರುವ ರೈತರ ಸಾಲ ಮನ್ನಾದಿಂದ ರೈತರಿಗೆ ಅನುಕೂಲಕ್ಕಿಂತ ತೊಂದರೆಯೇ ಜಾಸ್ತಿಯಾಗಿದೆ. 50 ಸಾವಿರ ರೂಪಾಯಿ ಸಾಲ ಮನ್ನಾ ಘೋಷಣೆಯಾದ್ರೂ ಸಹಕಾರಿ ಬ್ಯಾಂಕ್‍ಗಳು ಮಾತ್ರ ಬಾಕಿ ಪ್ರಮಾಣಪತ್ರ ಕೊಡ್ತಿಲ್ಲ. ಇದರಿಂದ ರೈತರಿಗೆ ಹೊಸ ಸಾಲನೂ ಸಿಗ್ತಿಲ್ಲ. ಹಳೆ ಸಾಲಗಾರರನ್ನ ಹೊಸ ಪಟ್ಟಿಗೆ ಸೇರಿಸುತ್ತಿಲ್ಲ…ಹೀಗಾಗಿ ಸಿದ್ದರಾಮಯ್ಯ ಸರಕಾರ ಸಾಲ ಮನ್ನಾ ಮಾಡ್ತಿವಿ ಅಂತಾ ಹೊಸ ನಾಟಕ ಆರಂಭಿಸಿ ರೈತರನ್ನು ಪಾಪ ಎಡವಟ್ಟಿಗೆ ಸಿಕ್ಕಿಸಿ ಬಿಟ್ಟಿದ್ದಾರೆ!!.

ಸಾಲ ಸಿಗದೇ ರೈತರು ಹೆಚ್ಚು ಬಡ್ಡಿಗೆ ಖಾಸಗಿ ಸಾಲದ ಶೂಲದಲ್ಲಿ ಸಿಲುಕುತ್ತಿದ್ದಾರೆ. ಬಡ್ಡಿರಹಿತವಾಗಿ 3 ಲಕ್ಷದವರೆಗೆ ಸಾಲ ಕೊಡಬೇಕಾದ ಬ್ಯಾಂಕ್‍ಗಳು ಮೊದಲ ಬಾರಿ ಸಾಲ ಪಡೆಯುವವರಿಗೆ ಕೇವಲ 10 ಸಾವಿರ ರೂಪಾಯಿ ಮಾತ್ರ ನೀಡ್ತಿವೆ. ರಾಯಚೂರು, ಕೊಪ್ಪಳ ಜಿಲ್ಲೆ ಸೇರಿ 89 ಸಾವಿರದ 513 ಜನ ರೈತರ 272 ಕೋಟಿ ಸಾಲ ಮನ್ನಾ ಆಗಿದೆ. ಆದ್ರೆ ಈ ಎಲ್ಲಾ ರೈತರಿಗೆ ಈ ಬಾರಿ ಸಾಲವನ್ನೇ ನೀಡಿಲ್ಲ.

40 ಕೋಟಿಗೆ ಕ್ರಿಯಾ ಯೋಜನೆ ಸಿದ್ದಪಡಿಸಿದೆ. ಡಿಸೆಂಬರ್ ಬಳಿಕ ಸಾಲ ಕೊಡುವುದಾಗಿ ರಾಯಚೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿಯಮಿತ ಹೇಳಿದೆ ಎಂದು ತಿಳಿದುಬಂದಿದೆ. 50 ಸಾವಿರ ಸಾಲ ಮನ್ನಾ ಮಾಡಿದ್ದೇವೆ ಇದೀಗ ನಿವೇನು ಮಾಡುತ್ತೀರಿ ಎಂದು ಸ್ವತಃ ಸಿಎಂ ಸಿದ್ದರಾಮಯ್ಯನವರೇ ಕೇಂದ್ರ ಸರ್ಕಾರಕ್ಕೆ ಸವಾಲೆಸೆದಿದ್ದರು. ಸಹಕಾರಿ ಬ್ಯಾಂಕ್ ಗಳಲ್ಲಿ ರೈತರ ಸಾಲವನ್ನು ಮನ್ನಾ ಮಾಡಿದ್ದೇವೆ. ಅಂತೆಯೇ ನೀವೂ ಕೂಡ ರಾಷ್ಟ್ರೀಕೃತ ಬ್ಯಾಂಕ್ ಗಳ ಸಾಲ ಮನ್ನಾ ಮಾಡಿ ಅಂತಾ ಪ್ರಧಾನಿ ನರೇಂದ್ರ ಮೋದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲೆಸೆದಿದ್ದರು…ಪ್ರಧಾನಿ ನರೇಂದ್ರ ಮೋದಿ ಸರಕಾರ ರೈತರ ಸಾಲ ಮನ್ನಾ ಮಾಡದೆ ಇರಬಹುದು ಆದರೆ ರೈತರಿಗೆ ಬೇಕಾದಂತಹ ಸಕಲ ಸಲಕರಣೆಗಳನ್ನು ರೈತರಿಗೆ ಉಪಯೋಗ ಆಗುವಂತೆ ವ್ಯವಸ್ಥೆಯನ್ನು ಮಾಡಿದ್ದಾರೆ… ಒಂದಂತೂ ನಿಜ ಸಿದ್ದರಾಮಯ್ಯನವರೇ ನಿಮ್ಮ ಹಾಗೆ ಸಾಲ ಮನ್ನಾ ಮಾಡುತ್ತೇವೆ ಎಂದು ಬೊಗಳೆ ಬಿಡಲ್ಲ.. ಮೋದಿ ಸರಕಾರ ಯಾವತ್ತೂ ರೈತರಿಗೆ ಮೋಸ ಅಂತೂ ಮಾಡಲ್ಲ ಬಿಡಿ!.

ನೀವು ವಾಣಿಜ್ಯ ಬ್ಯಾಂಕ್ ಗಳಲ್ಲಿ ರೈತರ ಸಾಲ ಮನ್ನಾ ಮಾಡಿ ಅಂತಾ ಪ್ರಧಾನಿಯವರಿಗೆ ಟ್ವಿಟ್ಟರ್ ಮೂಲಕ ಸಿಎಂ ಪರೋಕ್ಷವಾಗಿಯೇ ಚಾಲೆಂಜ್ ಹಾಕಿದ್ದರು. ರಾಜ್ಯ ಸರಕಾರದಿಂದ ಸಹಕಾರಿ ಬ್ಯಾಂಕ್‍ಗಳಿಂದ ರೈತರು ಪಡೆದ ಅಲ್ಪವಾಧಿ 50 ಸಾವಿರ ಸಾಲವನ್ನು ಮನ್ನಾ ಮಾಡಲಾಗುವುದು. 2017ರ ಜೂನ್ 20ಕ್ಕೆ
ಕೊನೆಗೊಂಡಂತೆ 50 ಸಾವಿರ ರೂ. ಸಾಲವನ್ನು ಮನ್ನಾ ಮಾಡಲಾಗುವುದು. ಒಟ್ಟು 8165 ಕೋಟಿ ರೂ. ಅಲ್ಪವಾಧಿ ಸಾಲ ಮನ್ನಾವಾಗಲಿದ್ದು ಇದರಿಂದಾಗಿ 22 ಲಕ್ಷ ರೈತರಿಗೆ ಸಹಾಯವಾಗಲಿದೆ ಎಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಬೊಗಳೆ ಬಿಟ್ಟಿದ್ದು ಎಲ್ಲರಿಗೂ ಗೊತ್ತೇ ಇದೆ….

ರಾಜ್ಯ ಸರಕಾರ ರೈತರಿಗೆ ಅದೆಷ್ಟೂ ಅನ್ಯಾಯ ಮಾಡುತ್ತೋ ಗೊತ್ತಿಲ್ಲ!! ಭಾಗ್ಯಗಳ ಮೇಲೆ ಭಾಗ್ಯಗಳನ್ನು ನೀಡುತ್ತಿರುವ ಸರಕಾರ ರೈತರ ಸಾಲ ಮನ್ನಾ ಮಾಡುತ್ತೇನೆಂದು ಸುಳ್ಳು ಪೆÇಳ್ಳು ಭರವಸೆಯನ್ನು ನೀಡಿದ್ದಲ್ಲದೇ, ಸಾಲ ಮನ್ನಾ ವಿಚಾರದಲ್ಲಿ ರೈತರಿಗೆ ಅನ್ಯಾಯವನ್ನು ಮಾಡಿತ್ತು!! ಇನ್ನು ರೈತರ ಸಮಸ್ಯೆಯನ್ನೇ ಅಲಿಸದೇ, ಸಾಲ ಮನ್ನಾ ವಿಚಾರವಾಗಿ ರೈತರಿಗೆ ನೀಡಿದ ಭರವಸೆಯನ್ನು ಹುಸಿ ಮಾಡಿದ ಸಿದ್ದರಾಮಯ್ಯ ಸರ್ಕಾರ ಇದೀಗ ರೈತರ
ಕಣ್ಣಿಗೆ ಮಣ್ಣೆರೆಚಿ ಮಹಾಮೋಸ ಮಾಡಲು ಮುಂದಾಗಿದೆ!!

ಕೇವಲ ಸಾಲ ಮನ್ನಾ ಅಲ್ಲದೆ ಸೋಲಾರ್‍ನಲ್ಲೂ ರೈತರ ಕಣ್ಣಿಗೆ ಮಣ್ಣೆರಚಿದೆ.!!ಹೌದು… ರೈತರೇ ದೇಶದ ಬೆನ್ನೆಲು ಎನ್ನುವ ಮಾತನ್ನು ಕೇಳಿದ್ದೇವೆ. ಆದರೆ ರೈತರ ಬೆನ್ನಿಗೆ ನಿಲ್ಲಬೇಕಾದ ಸರ್ಕಾರವೇ ರೈತರ ಬೆನ್ನು ಮುರಿದು ಅವರಿಗೆ ನೋವನ್ನು ನೀಡುತ್ತಿದೆ ಎಂದರೆ ಏನು ಹೇಳಬೇಕು ಹೇಳಿ!! ಸಾಲಮನ್ನಾ ವಿಚಾರವಾಗಿ ಮೋಸ ಮಾಡಿರುವ ರಾಜ್ಯ ಸರ್ಕಾರ ಸೋಲಾರ್ ಮೂಲಕ ವಿದ್ಯುತ್ ಉತ್ಪಾದನೆ ಮಾಡಿ, ನಾವು ನಿಮಗೆ ಪ್ರತಿ ಯೂನಿಟ್ ಗೆ 9.56 ಪೈಸೆ ಹಣ ನೀಡ್ತೀವಿ ಅಂದಿದ್ದ ರಾಜ್ಯ ಸರ್ಕಾರ ಇದೀಗ ರೈತರ ಕಣ್ಣಿಗೆ ಮಣ್ಣೆರಚಿದೆ!!

ಸತತ ಬರಗಾಲ ದಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರಲ್ಲದೇ, ಕೃಷಿ ಸಾಲ ಮನ್ನಾ ಮಾಡುವಂತೆ ರೈತರು ಕಣ್ಣೀರಿಟ್ಟು ಬೇಡಿಕೊಂಡರೂ ರಾಜ್ಯ ಸರ್ಕಾರ
ಅಂತಿಮವಾಗಿ ಸಾಲಮನ್ನಾ ಮಾಡುವ ಅರ್ಧಮನಸ್ಸಿನಿಂದ ರೈತರ 50,000 ಹಣವನ್ನು ಮನ್ನಾ ಮಾಡಿತ್ತು!! ಈ ಹಿಂದೆ ರಾಜ್ಯದ 145 ತಾಲ್ಲೂಕುಗಳು ಬರ
ಪೀಡಿತವಾಗಿದ್ದು, 3500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಲ್ಲದೇ ಆ ಸಂದರ್ಭದಲ್ಲಿ ತುರ್ತು ಪರಿಹಾರ ಕಾರ್ಯ ಕೈಗೊಳ್ಳಬೇಕಾದ ರಾಜ್ಯ ಸರ್ಕಾರ ನಿದ್ರೆಗೆ ಜಾರಿತ್ತು!! ಆದರೆ ಇದೀಗ, ಸೋಲಾರ್ ವಿಚಾರವಾಗಿ ಮೋಸ ಮಾಡಿರುವ ರಾಜ್ಯ ಸರ್ಕಾರ ರೈತರಿಗೆ ಮೋಸವನ್ನು ಮಾಡುತ್ತಿರುವುದು ಮಾತ್ರ ಅಕ್ಷರಶಃ ನಿಜ!!

ಹೌದು, ಚಿಕ್ಕಬಳ್ಳಾಪುರ ಜಿಲ್ಲೆ ತಮ್ಮನಾಯಕನಹಳ್ಳಿ ಗ್ರಾಮದ ರೈತರು, ಸರ್ಕಾರದ ಮಾತು ನಂಬಿ ವಿದ್ಯುತ್ ಉತ್ಪಾದನೆಗೆ ಮುಂದಾಗಿ ಈಗ ಕೋಟ್ಯಂತರ ರೂಪಾಯಿ ಸಾಲಗಾರರಾಗಿದ್ದಾರೆ. ರಾಜ್ಯದಲ್ಲಿ ವಿದ್ಯುತ್ ಕೊರತೆ ಇದೆ ಅಂತಾ “ಸೋಲಾರ್ ರೂಫ್ ಟಾಪ್” ಯೋಜನೆಯಡಿ ರೈತರಿಗೆ ಸೋಲಾರ್ ವ್ಯವಸ್ಥೇ ಮೂಲಕ ವಿದ್ಯುತ್ ಉತ್ಪಾದನೆ ಮಾಡಿ ಅಂತಾ ಇಂಧನ ಇಲಾಖೆ ರೈತರ ಬಳಿ ಒಪ್ಪಂದ ಮಾಡಿಕೊಂಡಿತ್ತು.

ಸರ್ಕಾರದ ಮಾತನ್ನು ನಂಬಿ ಗ್ರಾಮದ ನಾರಾಯಣಸ್ವಾಮಿ ಕೂಡ ತಮ್ಮ ಕೋಳಿ ಫಾರಂನ ಶೆಡ್ ಗಳ ಮೇಲೆ 6 ಕೋಟಿ ರೂಪಾಯಿ ಸಾಲ ಮಾಡಿ ಸೋಲಾರ್
ಸಿಸ್ಟೆಮ್ ಅಳವಡಿಸಿಕೊಂಡಿದ್ದರು. ಆದರೆ, ಈಗ ರಾಜ್ಯ ಸರ್ಕಾರ ತನ್ನ ಮಾತು ಬದಲಾಯಿಸಿದ್ದು, ಒಂದು ಯೂನಿಟ್ ಗೆ ಕೇವಲ 5.36 ರೂಪಾಯಿ ಕೋಡ್ತೀವಿ ಅಂತಾ ಹೊಸರಾಗ ತೆಗೆದಿದೆ. ಅಲ್ಲದೇ ರೈತರಿಗೆ ನೀಡಬೇಕಾಗಿದ್ದ 36 ಲಕ್ಷ ಹಣವನ್ನೂ ತಡೆಹಿಡಿದಿದ್ದು ಈ ಭಾಗದ ರೈತರಿಗೆ ದಿಕ್ಕೇ ತೋಚದಂತಾಗಿದೆ!!

ಹಗರಣಗಳ ಮೇಲೆ ಹಗರಣಗಳನ್ನು ಮಾಡುತ್ತಿರುವ ರಾಜ್ಯ ಸರ್ಕಾರ ಹಣ ಮಾಡುದರಲ್ಲಿಯೇ ಬ್ಯುಸಿಯಾಗಿರಬೇಕಾದರೆ ರೈತರ ಸಂಕಷ್ಟ ಎಲ್ಲಿ ಗೊತ್ತಾಗಬೇಕು ನೀವೇ ಹೇಳಿ!! ಕಳೆದ 4 ವರ್ಷಗಳಲ್ಲಿ ಸಿದ್ದರಾಮಯ್ಯ ಅವರು ಸಿಎಂ ಕಾವೇರಿ ಮನೆ ಹಾಗೂ ಗೃಹ ಕಚೇರಿ ಕೃಷ್ಣದಲ್ಲಿನ ಮನೆಗೆ ಕಾಫಿ, ಟೀ, ಬಿಸ್ಕೆಟ್ ಹಾಗೂ ನೀರಿಗೆ ಬರೋಬ್ಬರಿ 60 ಲಕ್ಷ ರೂಪಾಯಿ ಹಣವನ್ನು ವ್ಯಯಿಸಿದ್ದು, ಇನ್ನು 2015-16ನೇ ಸಾಲಿನಲ್ಲಿ ವಸ್ತ್ರ, ಟವಲ್, ದಿಂಬು ಕವರ್, ಹಾಗೂ ಮನೆಗೆ ಬೆಡ್ಶೀಟ್ ಖರೀದಿಸಲು, ಒಂದು ವರ್ಷದಲ್ಲಿ ಬರೋಬ್ಬರಿ 14.34 ಲಕ್ಷ ರೂಪಾಯಿ ಖರ್ಚು ಮಾಡಿರುವ ಇವರು, ರೈತರ ಸಾಲಮನ್ನಾ ಮಾಡಲು ಹಿಂದೆ-ಮುಂದೆ ನೋಡುತ್ತಿರುವುದು ಮಾತ್ರ ವಿಪರ್ಯಾಸ!!

ಇನ್ನು ಸಿದ್ದರಾಮಯ್ಯ ಸರಕಾರದಲ್ಲಿ ಭಾಗ್ಯಗಳ ಮೇಲೆ ಭಾಗ್ಯಗಳು ಕೊಡುತ್ತಿದ್ದರು ಕೂಡ, ಸಾಲಮನ್ನಾ ಯೋಜನೆಗೆ ಹಣ ಹೊಂದಿಸಲು ರಾಜ್ಯ ಸರಕಾರ ಮಾಡುತ್ತಿರುವ ಕಸರತ್ತು ನೋಡಿದರೆ ಆರ್ಥಿಕ ಸ್ಥಿತಿ ದಿನದಿಂದ ದಿನಕ್ಕೆ ಪಾತಾಳಕ್ಕೆ ಕುಸಿಯುತ್ತಿದೆಯೇ ಎಂಬ ಸಂದೇಹ ವ್ಯಕ್ತವಾಗುತ್ತಿದೆ!! ಆದರೆ ರಾಜ್ಯ ಸರಕಾರದ ಬೊಕ್ಕಸದಲ್ಲಿ ಹಣ ಇಲ್ಲ ಎಂದು ಹೇಳುತ್ತಿರುವ ಸಿದ್ದರಾಮಯ್ಯ ಸರಕಾರ, ತನ್ನ ಕಾರಿನ ಮೇಲೆ ಕಾಗೆ ಕುಳಿತುಕೊಂಡಿತು ಎನ್ನುವ ಕಾರಣಕ್ಕಾಗಿ ಕಾರನ್ನೇ ಬದಲಾಯಿಸದ ಇವರು ಲಕ್ಷಾಂತರ ರೂಪಾಯಿಯ ವಾಚ್ ವಿಚಾರದಲ್ಲೂ ಸುದ್ದಿಯಾಗಿರುವುದು ಗೊತ್ತೇ ಇದೆ!!

ಇದಷ್ಟೇ ಅಲ್ಲದೇ, ಸಿದ್ದರಾಮಯ್ಯ ಸರಕಾರ ಮಾಡಿರುವ ಎಡವಟ್ಟುಗಳು, ಹಗರಣಗಳ ಬಗ್ಗೆ ಎಷ್ಟು ಹೇಳಿದರು ಸಾಲದರೂ.. ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರ
ಮಾಡಿದ ಹಗರಣಗಳು, ಅದೆಷ್ಟೋ ಅವ್ಯವಹಾರಗಳು, ಕೊಲೆ ಸುಲಿಗೆಗಳಗೆ ಲೆಕ್ಕವೇ ಇಲ್ಲದಂತಾಗಿದೆ!! ಇನ್ನು ಸರ್ಕಾರ ಸೋಲಾರ್ ಮೂಲಕ ವಿದ್ಯುತ್ ಉತ್ಪಾದನೆ ಮಾಡಿ, ನಾವು ನಿಮಗೆ ಪ್ರತಿ ಯೂನಿಟ್ ಗೆ 9.56 ಪೈಸೆ ಹಣ ನೀಡ್ತೀವಿ ಅಂದಿದ್ದ ರಾಜ್ಯ ಸರ್ಕಾರ ರೈತರಿಗೆ ಮೋಸ ಮಾಡಿದೆ!! ಅಷ್ಟೇ ಅಲ್ಲದೇ, ಲಕ್ಷಾಂತರ ರೂಪಾಯಿ ಖರ್ಚು ಮಾಡಿದ ರೈತರಿಗೆ ದಿಕ್ಕೇ ತೋಚದಂತಾಗಿದ್ದು, ರಾಜ್ಯ ಸರ್ಕಾರ ರೈತರ ಬಾಳಿನಲ್ಲಿ ಚೆಲ್ಲಾಟವಾಡುತ್ತಿರುವುದಂತೂ ಅಕ್ಷರಶಃ ನಿಜ!!! ಪ್ರತೀ ಬಾರಿಯೂ ರೈತರಿಗೆ ಅದು ಮಾಡ್ತೀವಿ ಇದು ಮಾಡ್ತೀವಿ ಅಂತ ಬೊಗಳೆ ಬಿಡೋ ರಾಜ್ಯ ಸರಕಾರ!!

ಕೃಪೆ: ಪಬ್ಲಿಕ್ ಟಿವಿ

-ಪವಿತ್ರ

Tags

Related Articles

Close