ಪ್ರಚಲಿತ

ಸಾವರ್ಕರ್ ವಾಜಪೇಯಿಯವರಿಂದ ಹಿಡಿದು ಪ್ರಧಾನಿ ಮೋದಿಯವರಿಗೆ ಇಂದು ರಮ್ಯಾ ಮಾಡಿದ ಘೋರ ಅವಮಾನವೇನು ಗೊತ್ತೇ?!

ಎಐಸಿಸಿ ವಿಭಾಗದ ಮುಖ್ಯಸ್ಥೆಯಾದ ಬಳಿಕ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನಾ ಒಂದಿಲ್ಲೊಂದು ವಿವಾದಗಳಿಂದ ಸುದ್ದಿಯಾಗುತ್ತಲೇ ಇದ್ದಾರೆ! ರಾಜಕೀಯದ ಬಗ್ಗೆ ಅಥವಾ ಭಾರತದ ಇತಿಹಾಸದ ಬಗ್ಗೆ ಯಾವ ಜ್ಞಾನವೂ ಇರದ ಅವಿವೇಕಿಗಳಿಗೆ ಇವತ್ತಿನ ಯುಗದ ಬಹುದೊಡ್ಡ ಅಸ್ತ್ರವಾದ ಸಾಮಾಜಿಕ ಜಾಲತಾಣಗಳ ನಿರ್ವಹಣೆಯ ಜವಾಬ್ದಾರಿ ಕೊಟ್ಟಿರುವುದು ಎಂತಹ ಹಾಸ್ಯಾಸ್ಪದ!

ದೇಶ ಕಂಡ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಅವಹೇಳನ!

ಕಾಂಗ್ರೆಸ್ ನ ಮಾಜಿ ಸಂಸದೆಯಾಗಿದ್ದ ರಮ್ಯಾ ಉದ್ದೇಶಪೂರ್ವಕವಾಗಿಯೇ ಅವಹೇಳನ ಮಾಡುತ್ತಿದ್ದಾರೋ ಅಥವಾ ರಾಜಕೀಯ ಜ್ಞಾನವೇ ಇಲ್ಲದಂತೆ ವರ್ತಿಸುತ್ತಿದ್ದಾರೋ, ಒಟ್ಟಿನಲ್ಲಿ ವಿವಾದಕ್ಕೆ ಕಾರಣವಾಗುವುದನ್ನೇ ಹಠಕ್ಕೆ ಬಿದ್ದ ಹಾಗೆ ಟ್ವೀಟ್ ಮಾಡುತ್ತಿರುವ ರಮ್ಯಾ ಈ ಬಾರಿ ಪ್ರಧಾನಿ ನರೇಂದ್ರ ಮೋದಿ ,.ಮಾಜಿ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ಮತ್ತು ಆರ್ ಎಸ್ ಎಸ್ ವಿರುದ್ಧ ಅವಹೇಳನಕಾರಿ ಟ್ವೀಟ್ ಮಾಡಿ ವಿವಾದಕ್ಕೀಡಾಗಿದ್ದಾರೆ!

ಸ್ವಾತಂತ್ರ್ಯ ಹೋರಾಟ ಹಾಗೂ ಸಂಘದಿಂದ ಆರಂಭವಾಗಿರುವ ವೀಡಿಯೋ ಕೊನೆಗೆ ಪ್ರಧಾನಿ ಮೋದಿಯವರನ್ನೂ ಅವಹೇಳನ ಮಾಡಿದೆ!

ಟ್ವೀಟ್ ಮಾಡಿರುವ ವೀಡಿಯೋದಲ್ಲಿ ಏನಿದೆ ಗೊತ್ತಾ?!

“ಹೆಗಡೇವಾರ್ ಆರ್ ಎಸ್ ಎಸ್ ನನ್ನು ಸೃಷ್ಟಿಸಿದರು!
ಹೆಗಡೇವಾರ್ ಸಾವರ್ಕರ್ ರವರನ್ನು ಸೇರಿಸಿದರು!
ಸಾವರ್ಕರ್ ಮುಖ್ಯಸ್ಥರಾದರು!
ಸಾವರ್ಕರ್ ಹಿಂದುತ್ವವನ್ನು ಸೇರಿಸಿದರು!
ಸಾವರ್ಕರ್ ಸಮಾನತೆಯನ್ನು ತೆಗೆದರು!
ಸಾವರ್ಕರ್ ಸತ್ಯಾಗ್ರಹವನ್ನು ತೆಗೆದರು!
ಸಾವರ್ಕರ್ ತಿರಂಗವನ್ನು ತೆಗೆದರು!
ಸಾವರ್ಕರ್ ಭಾರತದ ಸ್ವಾತಂತ್ರ್ಯ ಚಳುವಳಿಯನ್ನು ತೆಗೆದರು!
ಸಾವರ್ಕರ್
ಗಾಂಧೀಜಿಯನ್ನು ತೆಗೆದರು!
ಸಾವರ್ಕರ್ ದೇಶಭಕ್ತಿಯನ್ನು ತೆಗೆದರು!
ಸಾವರ್ಕರ್ ದೇಶದ್ರೋಹಿಯನ್ನು ಸೇರಿಸಿದರು!
ಸಾವರ್ಕರ್ ‘ಹಿಂದೂ ರಾಷ್ಟ್ರದ ತತ್ವ’ವನ್ನು
ಸೇರಿಸಿದರು!
ಸಂಘ ಬಿಜೆಪಿಯನ್ನು ಸೇರಿಸಿತು!
ಬಿಜೆಪಿ ಅಡ್ವಾಣಿಯನ್ನು ಸೇರಿಸಿತು!
ಅಡ್ವಾಣಿ ಈಗ ಅಧ್ಯಕ್ಷ!
ಅಡ್ವಾಣಿ ರಥಯಾತ್ರೆಯನ್ನು ಸೇರಿಸಿದರು!
ಅಡ್ವಾಣಿ
ಗಲಭೆಯನ್ನು ಸೇರಿಸಿದರು!
ಅಡ್ವಾಣಿ ಬಾಂಬ್ ಸ್ಫೋಟಗಳನ್ನು ಸೇರಿಸಿದರು!
ಅಡ್ವಾಣಿ ಬಾಬ್ರಿ ಮಸೀದಿಯನ್ನು ತೆಗೆದರು!
ಅಡ್ವಾಣಿ ಜಾತ್ಯಾತೀತತೆಯನ್ನು ತೆಗೆದರು!
ಸಂಘ ವಾಜಪೇಯಿಯನ್ನು ಸೇರಿಸಿತು!
ವಾಜಪೇಯಿ ಈಗ ಅಧ್ಯಕ್ಷ!
ವಾಜಪೇಯಿ ಭಾರತ ಹೊಳೆಯುತ್ತಿದೆ ಎಂಬುವುದನ್ನು ಸೇರಿಸಿದರು!
ಬಿಜೆಪಿ ವಾಜಪೇಯಿಯನ್ನು
ತೆಗೆಯಿತು!
ಸಂಘ ಮೋದಿಯನ್ನು ಸೇರಿಸಿತು!
ಮೋದಿ ಈಗ ಅಧ್ಯಕ್ಷ!
ಮೋದಿ ಅಮಿತ್ ಷಾ ನನ್ನು ಸೇರಿಸಿದರು!
ಮೋದಿ ಗಲಭೆಯನ್ನು ಸೇರಿಸಿದರು!
ಮೋದಿ ಲಿಂಚಿಂಗ್
ನನ್ನು ಸೇರಿಸಿದರು! (ಇಲ್ಲಿ ಆಕೆ ಉಲ್ಲೇಖಿಸಿರುವುದು ಕಾನೂನು ಬಾಹಿರವಾಗಿ ಗಲ್ಲಿಗೇರಿಸುವುದು ಎಂದು)
ಮೋದಿ ಕಾರ್ಯಸೂಚಿಯನ್ನು ಸೇರಿಸಿದರು!
ಮೋದಿ ಟ್ರೋಲ್
ಗಳನ್ನು ಸೇರಿಸಿದರು!
ಮೋದಿ ಪೇಯ್ಡ್ ಮೀಡಿಯಾ ಗಳನ್ನು ಸೇರಿಸಿದರು!
ಮೋದಿ ದಲಿತರ ಮೇಲಿನ ದಾಳಿಯನ್ನು ಸೇರಿಸಿದರು!
ಮೋದಿ ಸುಳ್ಳು ವಚನಗಳನ್ನು
ಸೇರಿಸಿದರು!
ಮೋದಿ ಭ್ರಷ್ಟಾಚಾರವನ್ನು ಸೇರಿಸಿದರು!
ಮೋದಿ ವಿಚಾರವಾದಿಗಳ ಹತ್ಯೆಯನ್ನು ಸೇರಿಸಿದರು!
ಮೋದಿ ಬೇರ್ಪಡಿಸುವಿಕೆಯನ್ನು ಸೇರಿಸಿದರು!
ಮೋದಿ
ಕೋಮುವಾದವನ್ನು ಸೇರಿಸಿದರು!
ಮೋದಿ ಯೋಗಿ ಆದಿತ್ಯನಾಥ್ ರನ್ನು ಸೇರಿಸಿದರು!
ಮೋದಿ ಸುಳ್ಳುಗಳನ್ನು ಸೇರಿಸಿದರು!
ಮೋದಿ ಭಯವನ್ನು ಸೇರಿಸಿದರು!
ಮೋದಿ
ದ್ವೇಷವನ್ನು ಸೇರಿಸಿದರು!
ಮೋದಿ ಅಭಿವೃದ್ಧಿಯನ್ನು ತೆಗೆದರು!
ಮೋದಿ ವಿಚಾರವಾದವನ್ನು ತೆಗೆದರು!
ಮೋದಿ ಚರ್ಚಾಮನೋಭಾವವನ್ನು ತೆಗೆದರು!
ಮೋದಿ
ಬಹುತ್ವವನ್ನು ತೆಗೆದರು!
ಮೋದಿ ತರ್ಕವನ್ನು ತೆಗೆದರು!
ಮೋದಿ ವೈಯುಕ್ತಿಕತೆಯನ್ನು ತೆಗೆದರು!
ಮೋದಿ ಸಂವಿಧಾನವನ್ನು ತೆಗೆದರು!
ಮೋದಿ ಪ್ರಜಾಪ್ರಭುತ್ವವನ್ನು
ತೆಗೆದರು!
ಮೋದಿ ಭಾರತದ ರೂಪುರೇಷೆಗಳನ್ನು ತೆಗೆದರು!
2019 : ಮೋದಿ ಅಧ್ಯಕ್ಷಸ್ಥಾನದಿಂದ ತೆಗೆಯಲ್ಪಟ್ಟರು!
ಭಾರತ ಮತ್ತೆ ಭಾರತವಾಯಿತು! ”

ಇದನ್ನು ಸಹಿಸಬಹುದೇ?!

ಈ ಹಿಂದೆಯೂ ಸಾವರ್ಕರ್ ಅವರಿಗೆ ‘ವೀರ್’ ಯಾಕೆ ಎಂಬುದನ್ನು ಪ್ರಶ್ನಿಸಿದ್ದ ರಮ್ಯಾರವರ ಹುಟ್ಟಿನ ವೀರತ್ವವನ್ನೇ ಸಮಾಜ ಪ್ರಶ್ನೆ ಮಾಡಿತ್ತು! ಆದರೂ, ಕ್ಷಮೆ ಕೋರದ ರಮ್ಯಾ ಮತ್ತೆ ಈಗ ದೇಶಕ್ಕೋಸ್ಕರ ಇಡೀ ಬದುಕನ್ನೇ ಮುಡಿಪಾಗಿಟ್ಟಿದ್ದ ಸಂಘದ ಹೆಗಡೇವಾರ್, ಸಾವರ್ಕರ್, ವಾಜಪೇಯಿಯವರ ಬಗ್ಗೆ
ಅವಹೇಳನಕಾರಿಯಾಗಿ ಮಾತನಾಡಿದ್ದಲ್ಲದೇ, ಇವತ್ತಿನ ಪ್ರಸ್ತುತ ಪ್ರಧಾನಿಯ ಬಗ್ಗೆ ಅವಹೇಳನಕಾರಿಯಾಗಿ ನಿಂದಿಸಿರುವುದನ್ನು ಸಹಿಸಲು ಹೇಗೆ ಸಾಧ್ಯ?!

ಇದು ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅವಮಾನವಲ್ಲವೇ?! ಇಂತಹವರನ್ನು ತನ್ನವರೆಂದು.ಇಟ್ಟುಕೊಂಡು ಸ್ಥಾನ ಕೊಡುವ ಕಾಂಗ್ರೆಸ್ ನಿಜಕ್ಕೂ ದೇಶದ ಅಭಿವೃದ್ಧಿಗೆ ದುಡಿಯುತ್ತದೆಯೇ?!

ಈ ಹಿಂದೆ ಕಾಂಗ್ರೆಸ್ ಹಗರಣಗಳನ್ನು ಇದೇ ರೀತಿ ವೀಡಿಯೋ ಮಾಡಿ ಬಿಟ್ಟಿದ್ದನ್ನೇ ಯಥಾವತ್ತಾಗಿ ನಕಲು ಹೊಡೆದಿರುವ ರಮ್ಯಾಗೆ ಸ್ವಂತಿಕೆ ಎನ್ನುವುದೂ ಇಲ್ಲ,
ನೈತಿಕತೆಯೂ ಇಲ್ಲ ಬಿಡಿ! ಕೊಟ್ಟಷ್ಟು ದುಡ್ಡಿಗೆ ನಟನೆ ಮಾಡಿ ಅಭ್ಯಾಸವಾಗಿರುವಾಕೆಯಲ್ಲಿ ನೈತಿಕತೆಯನ್ನು ಅಥವಾ ಸ್ವಂತಿಕೆಯನ್ನು ಹುಡುಕುವುದೂ ಅಪರಾಧವೇ ಸರಿ!

ಛೇ! ಇಂತಹ ಅವಹೇಳನಕಾರಿಯಾದ ಟ್ಚೀಟ್ ಗಳನ್ನು ಮಾಡುತ್ತಲೇ ದೇಶಕ್ಕೋಸ್ಕರ ಮಡಿದವರನ್ನೂ ಅವಮಾನಿಸುವ ಈ ಮಾಜಿ ಸಂಸದೆಗೆ ಇತಿಹಾಸದ ಬಗ್ಗೆಯಾಗಲೀ, ರಾಜಕೀಯದ ಬಗ್ಗೆಯಾಗಲೀ ಅರಿವಿದೆಯಾ?! ಸೋನಿಯಾ ಗಾಂಧಿ ಉತ್ತರಿಸುತ್ತಾರಾ?! ಅಥವಾ ಇಡೀ ಕಾಂಗ್ರೆಸ್ ಭೇಷ್ ಎಂದು ಬೆನ್ನು ತಟ್ಟುತ್ತದೆಯಾ?!

ಸಾಮಾಜಿಕ ಜಾಲತಾಣದಲ್ಲಿ ಈ ರೀತಿಯಾದ ಅವಮಾನ ಮಾಡಿ ಯುವಸಮೂಹವನ್ನು ದಿಕ್ಕುತಪ್ಪಿಸುತ್ತಿದೆ ಕಾಂಗ್ರೆಸ್ ಎಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕೇ?!

– ತಪಸ್ವಿ

Tags

Related Articles

Close