ಅಂಕಣದೇಶಪ್ರಚಲಿತ

ಸಾವಿಗೆ ಆಮಂತ್ರಣ ನೀಡುತ್ತೆ ಈ ಕವಿತೆ!! “ಗ್ಲೂಮಿ ಸಂಡೇ”- ಹಾಡು ಕೇಳಿ ವಿದೇಶೀಯರು ಮಾತ್ರ ಸಾಯ್ತಾರೆ! ಒಬ್ಬ ಭಾರತೀಯನೂ ಸತ್ತಿಲ್ಲ ಯಾಕೆ?

ಪ್ರಪಂಚದಲ್ಲಿ  ಏನೆಲ್ಲ ವಿಚಿತ್ರಗಳು ಸೃಷ್ಟಿಯಾಗುತ್ತೆ ಎಂಬುದನ್ನು ನಾ ಕಾಣೆ!.. ಕೇವಲ ಜೀವಿಗಳಿಂದಲೇ ಪ್ರಪಂಚ ವಿಚಿತ್ರಗಳನ್ನು ಸೃಷ್ಟಿಸುತ್ತವೆ ಎಂದರೆ ಅದು ನಮ್ಮ ಭ್ರಮೆ ಅಷ್ಟೇ. ಆದರೆ ವಿರ್ಪಯಾಸ ಏನೆಂದರೆ ಮನುಷ್ಯನಿಗೆ ಇಂಪನ್ನು, ಮುದವನ್ನು ನೀಡುವ ಸಂಗೀತ ಮನುಷ್ಯನ ಏಕಾಗ್ರತೆಯನ್ನು ಹೆಚ್ಚುತ್ತೆ ಎನ್ನುವುದನ್ನು ನಾವು ಕೇಳಿದ್ದೇವೆ. ಆದರೆ ಒಂದು ಕವಿತೆ ಮರಣಮೃದಂಗವನ್ನು ಬಾರಿಸುತ್ತೆ ಎಂದರೆ ನೀವು ನಂಬ್ತೀರಾ?. ಅದು ನಂಬಲು ಅಸಾಧ್ಯ ಬಿಡಿ.

ಸುಸೈಡ್ ಮಾಡಲು ಯಾವುದೇ ರೀತಿಯಾದ ದುಷ್ಪ್ರೇರಣೆ ಹುಡುಕೋದೇ ಬೇಡ, ಒಂದು ಸಂಗೀತದ ಸಾರವನ್ನು ಅರಿತರೇ ಸುಸೈಡ್ ಮಾಡಲಿಕ್ಕೆ ಪ್ರೇರಣೆ ನೀಡುತ್ತೆ. ಆದರೆ ನೀವು ನಂಬಲೇ ಬೇಕಾದಂತಹ ಸತ್ಯ ಕಥೆ ಇದು. ಅಷ್ಟಕ್ಕೂ ಈ ಸಾಂಗ್ ಯಾವುದು? ಅದನ್ನು ಬರೆದವರು ಯಾರು? ಈ ಹಾಡು ಕೇಳ್ತಾ ಕೇಳ್ತಾ ಜನ ಯಾಕ್ ಸಾಯ್ತಾರೆ ಅಂತಾ ಏನಾದರೂ ಗೊತ್ತಾ?. ಅದನ್ನು ಯಾರು ಊಹಿಸಲಾಗದ ಕಟು ಸತ್ಯ. ಈ ಕವಿತೆಯನ್ನು ಕವಿ ಯಾವ ಲಹರಿಯಲ್ಲಿ ಬರೆದನೋ ಗೊತ್ತಿಲ್ಲ. ಈ ಹಾಡನ್ನು ಕೇಳಿ ಅನೇಕ ಮಂದಿ ಸುಸೈಡ್ ಮಾಡಿದ ಅನೇಕ ಘಟನೆಗಳು ನಡೆದಿದ್ದಂತೂ ನಿಜ.

ಹೌದು…. ಈ ಹಾಡನ್ನು ಕೇಳಿದ ನಂತರ ಅದೇನೋ ಗೊತ್ತಿಲ್ಲ, ಜನರಿಗೆ ತಮ್ಮ ಜೀವನದಲ್ಲಿ ಜಿಗುಪ್ಸೆ ಹುಟ್ಟುತ್ತೆ. ಈ ಜಗತ್ತೇ ಶೂನ್ಯ ಎಂದು ಭಾಸವಾಗುತ್ತೆ. ಆದ್ರೆ ಮನಸಲ್ಲಿ ಖಿನ್ನತೆ ಆವರಿಸಿ ಈ ಲೈಫೇ ವೇಸ್ಟ್ ಎಂಬ ಭಾವನೆ ಬರುತ್ತದೆ ಅನ್ನೋದು ಒಂದು ಪ್ರಶ್ನಾರ್ಥಕ ಚಿಹ್ನೆಯಾಗಿಯೇ ಉಳಿದಿದೆ ಅಂದರೆ ನಂಬ್ತೀರಾ?. ಈ ಹಾಡನ್ನು ಕೇಳಿ ಯಾವ ದಿನದಂದು ಸುಸೈಡ್ ಮಾಡಕ್ಕೋಳ್ತಾರೆ ಗೊತ್ತಾ!!!. ಭಾನುವಾರದ ದಿನ ಮುಂಜಾನೆ ಚರ್ಚ್‍ನಲ್ಲಿ ಪೂಜೆ ಆಗುತ್ತಿರುವಂತೆ ಈ ಹಾಡನ್ನು ಕೇಳಿ ಜನ ಸುಸೈಡ್ ಮಾಡುತ್ತಾರಂತೆ. ಈ ಒಂದು ಸುದ್ದಿ ಎಂತವರನ್ನೂ ಕೂಡ ಒಂದುಕ್ಷಣ ಬೆಚ್ಚಿಬೀಳುವಂತೆ ಮಾಡುತ್ತೆ ಅಲ್ವ!!!.

ಭಾನುವಾರ ಆಗುತ್ತಿರುವಂತೆ ಹಾಡನ್ನು ಕೇಳಿ ಸಾಯೋ ಟ್ರೆಂಡ್ ಹಂಗೇರಿಯಾದಲ್ಲಿ ಸೃಷ್ಟಿಯಾಯಿತು. ಈ ಭಯಾನಕ ಕವಿತೆಯ ಹೆಸರೇ ಗ್ಲೂಮಿ ಸಂಡೇ !!! ಇದರ ಇನ್ನೊಂದು ಹೆಸರೇ ಹಂಗೇರಿಯನ್ ಸುಸೈಡ್ ಸಾಂಗ್. ಗ್ಲೂಮಿ ಸಂಡೇ ಅಂದ್ರೆ ಕತ್ತಲೆಯಾದ ಭಾನುವಾರ ಎಂದರ್ಥ. ಸಾವನ್ನೇ ಸೃಷ್ಟಿಸುವ ಈ ಭಯಾನಕವಾದ ಹಾಡು ಹಂಗೇರಿಯಾದಲ್ಲಿ ಹುಟ್ಟಿದ್ದು ನಿಜವಾದ್ರೂ ಕೂಡ ತಂದ ನಂತರದ ದಿನಗಳಲ್ಲಿ ಲಂಡನ್, ಬಲ್ಗೇರಿಯಾ, ಅಮೇರಿಕಾಕ್ಕೆ ಬಂದು ಕೊನೆಯದಾಗಿ ಲಗ್ಗೇ ಇಟ್ಟಿದ್ದೇ ನಮ್ಮ ಭರತಖಂಡಕ್ಕೆ.

ವಿಪರ್ಯಾಸ ಏನೆಂದರೆ ಭಾರತದಲ್ಲಿ ಈ ಹಾಡು ಫೇಮಸ್ ಆದ್ರೂ ಕೂಡ ಭಾರತದಲ್ಲಿ ಈ ಹಾಡನ್ನು ಕೇಳಿ ಸತ್ತ ಉದಾಹರಣೆಗಳೇ ಇಲ್ಲ. ಯಾಕೆಂದರೆ ಈ ಹಾಡಿನ ಒಳಾರ್ಥ ಹಂಗೇರಿಯನ್ ಭಾಷೆಯಲ್ಲಿದೆ. ಆದ್ರೆ ಲಂಡನ್, ಬಲ್ಗೇರಿಯಾ ಹಾಗೂ ಹಂಗೇರಿಯಾದಲ್ಲಿ ಹಲವು ಮಂದಿ ಗ್ಲೂಮಿ ಸಂಡೇ ಹಾಡನ್ನು ಕೇಳ್ತಾ ಕೇಳ್ತಾ ಸಾಯೋದನ್ನು ನೋಡಿ ಸರಕಾರಕ್ಕೂ ದಿಗಿಲು ಹುಟ್ಟಿತು. ಅಂದ ಹಾಗೆ ಈ ಹಾಡನ್ನು ಬರೆದಿರುವುದು ಒಬ್ಬ ಹಂಗೇರಿಯನ್ ಕವಿ. ವಿಚಿತ್ರ ಮನಸ್ಥಿತಿಯ ಈ ಕವಿ ವಿವಾದಾತ್ಮಕ ಸಾಹಿತಿ ಎಂದೇ ಹೆಸರು ಪಡೆದಿರುವಾತ. ಈತನ ಹೆಸರು ಸೆರೆಸ್ ಆದರೆ ಈತನನ್ನು ನೀ ರೂದಿ-ಸ್ಪಿಝರ್ ಹೆಸರಿನಿಂದಲೂ ಕರೆಯಲಾಗುತ್ತೆ.

ಅಷ್ಟಕ್ಕೂ ಸೆರೆಸ್ ಅಥವಾ ನೀ-ರೂದಿ ಸ್ಪಿಝರ್ ವಾಸಸ್ಥಳದ ಬಗ್ಗೆ ಇನ್ನೂ ಗೊಂದಲವಿದೆ. ಕೆಲವರ ಪ್ರಕಾರ ಈತ ಪ್ಯಾರಿಸ್‍ನಲ್ಲಿ ಎಂದರೆ ಇನ್ನೂ ಕೆಲವರ ಪ್ರಕಾರ ಬುಡಾಪೆಸ್ಟ್ನಲ್ಲಿ ಇದ್ದ ಎನ್ನುತ್ತಾರೆ. ಈತ ಗ್ಲೂಮಿ ಸಂಡೇ ಎನ್ನುವ ಕವಿತೆಯನ್ನು ಬರೆಯಲು ಒಂದು ಕಾರಣವೂ ಇದೆ!!! ಅದೇನೆಂದರೆ ಸೆರೆಸ್‍ಗೆ ಒಂದು ಹುಡುಗಿಯ ಮೇಲೆ ಪ್ರೇಮಾಂಕುರ ಹುಟ್ಟುತ್ತೆ. ಆಕೆಯನ್ನು ಎಷ್ಟೊಂದು ಹಚ್ಚಿಕೊಂಡ ಎಂದರೆ ಆಕೆಯನ್ನು ಬಿಡಲು ಸಾಧ್ಯವೇ ಇಲ್ಲದಷ್ಟು ಪ್ರೀತಿ ಮಾಡುತ್ತಿದ್ದ. ಆದರೆ ಒಂದು ದಿನ ಆಕೆ ಮೋಸದಿಂದ ಈತನಿಗೆ ಕೈಕೊಟ್ಟು ಹೋದಳು. ಇದೇ ವೇದನೆಯಿಂದ ಬಳಲಿದ ಸೆರೆಸ್ ಆಕೆಗೊಂದು ಕವಿತೆ ಬರೆದ. ಅದುವೇ ಗ್ಲೂಮಿ ಸಂಡೇ…

ಸೆರೆಸ್, ಗ್ಲೂಮಿ ಸಂಡೇ ಎನ್ನುವ ಕವಿತೆಯನ್ನು ಬರೆದು ಸುಮ್ಮನೆ ಕೂರಲಿಲ್ಲ!! ಬದಲಾಗಿ ಅದಕ್ಕೆ ಸೂಕ್ತ ಸಂಗೀತ ಸಂಯೋಜನೆಯನ್ನೂ ಕೂಡ ಮಾಡತೊಡಗಿದ!!! ಆ ಗೀತೆ ಯಾವ ರೀತಿಯಲ್ಲಿ ಹೊರ ಬರುತ್ತೆ ಎಂದರೆ ಬಾಯಲ್ಲಿ ಸಿಗರೇಟ್ ಸೇದುತ್ತಾ, ನೀಲಿ ಹೊಗೆಗಳನ್ನು ಚಕ್ರದಂತೆ ಬಿಡುವ ಮೆಲೋಡಿ ಶೈಲಿಯಲ್ಲಿ!. ಈ ಹಾಡಿಗೆ ಸಾಹಿತ್ಯ ನೀಡಿ ಸಹಾಯ ಮಾಡಿದ್ದೇ ಆತನ ಗೆಳೆಯ ಲಾಸ್ಲೋ ಜೇವರ್.ಆದರೆ ಕೆಲವರ ಪ್ರಕಾರ ಜೇವರ್ನ ಪ್ರೇಯಸಿ ಕೈಕೊಟ್ಟಿದ್ದಳು! ಇದರ ಸ್ಫೂರ್ತಿ ಪಡೆದು ಸೆರೆಸ್ ಕವಿತ ಬರೆದ ಎನ್ನಲಾಗುತ್ತಿದೆ. ಕೆಲವರ ಪ್ರಕಾರ ಸೆರೆಸ್ ಕವಿತೆಯನ್ನು ಬರೆದಿದ್ದೂ ಮಾತ್ರವಲ್ಲದೇ, ಆತನೇ ಈ ಹಾಡಿಗೆ ಸಾಹಿತ್ಯವನ್ನೂ ನೀಡಿದ್ದ. ಆದರೆ ಜೇವರ್ ಆ ಹಾಡನ್ನು ಎದೆಯೊಡೆದು ಸಾಯುವಂತೆ ಅದರ ಸಾಹಿತ್ಯ ಬದಲಾಯಿಸಿದ ಎನ್ನಲಾಗುತ್ತಿದೆ.

ಹೌದು… ಕವಿ ಸೆರೆಸ್ ತನ್ನ ಗೆಳತಿಗೆ ಡೆತ್ ನೋಟ್ ಆಗಿ ಬರೆದ ಹಾಡು ಇದಾಗಿದ್ದು, ಈ ಹಾಡನ್ನು ಕೇಳಿ ಇದುವರೆಗೆ ಲಕ್ಷಕ್ಕೂ ಅಧಿಕ ಮಂದಿ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಅಲ್ಲದೇ ಸಾವಿರಾರು ಜನ ಆತ್ಮಹತ್ಯೆಯ ಯತ್ನವನ್ನೂ ಮಾಡಿದ್ದಾರೆ ಕೂಡ!!. ತನ್ನ ಪ್ರೇಯಸಿಗಾಗಿ ಬರೆದ ಈ ಹಾಡನ್ನು ಕೇಳಿದವರು ಮಾತ್ರ ಸಾಯಲಿಲ್ಲ, ಈ ಕವಿತೆಯನ್ನು ಬರೆದ ಕವಿ ಸೆರೆಸ್ ಮಹಡಿಯಿಂದ ಹಾರಿ ತಮ್ಮ ಪ್ರಾಣವನ್ನು ಕಳೆದುಕೊಂಡರೆ, ಈ ಕವಿತೆಗೆ ಲಿರಿಕ್ಸ್ ನೀಡಿದ ಆತನ ಗೆಳೆಯ ನೇಣಿಗೆ ಶರಣಾದ.

ಗ್ಲೂಮೀ ಸಂಡೇ… 1930ರಲ್ಲಿ ಪ್ರಸಿದ್ಧಿ ಪಡೆಯುತ್ತಿರುವ ಸಮಯವಾಗಿತ್ತು. ಆ ಸಮಯದಲ್ಲಿ ಸೋಮೋರು ವಸರ್ನಪ್ ಎಂಬ ಶೀರ್ಷಿಕೆಯೊಂದು ಹೊರಬಿದ್ದಿತು. ಅದಾದ ಎರಡು ವರ್ಷಗಳ ಬಳಿಕ ಅದರ ಹಾಡಿನ ಧ್ವನಿಮುದ್ರಣವನ್ನು ಕೇಳಿ ಹಂಗೇರಿಯ ಪಾಲ್ಕಲ್ಮಾರ್ ಎಂಬಾತ ಆತ್ಮಹತ್ಯೆ ಮಾಡಿಕೊಂಡ. ಇದಾದ ಬಳಿಕ ಆತ್ಮಹತ್ಯೆಯನ್ನು ಮಾಡಿಕೊಳ್ಳುವ ಹಾಗೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹೆಚ್ಚಾಗ ತೊಡಗಿತು.. ಒಟ್ಟು 46 ವರ್ಷದ ಅವಧಿಯಲ್ಲಿ ಈ ಹಾಡು ಕೇಳಿ ಸತ್ತವರ ಸಂಖ್ಯೆಯೇ ಬರೋಬ್ಬರಿ ಒಂದು ಲಕ್ಷ ಮಂದಿ!!! ಇದರಿಂದ ಬೆಚ್ಚಿ ಬಿದ್ದ ಹಂಗೇರಿಯಾ ಸರಕಾರ ಈ ಹಾಡನ್ನೇ ನಿಷೇಧಿಸಿತು!.

ಈ ಹಾಡು ಕೇವಲ ಹಂಗೇರಿಯಾದಲ್ಲಿ ಮಾತ್ರ ಸದ್ದು ಮಾಡಿದ್ದಲ್ಲದೇ ಅಮೇರಿಕಾ ಹಾಗೂ ಇಂಗ್ಲೆಂಡಿನಲ್ಲೂ ಸದ್ದು ಮಾಡಿತು! ಅಮೇರಿಕಾದ ಟಿನ್ ಪಾನ್ ಟ್ಯೂನ್ಸ್ಮಿತ್ ಸಾಮ್ ಎಂ. ಲೂಯಿಸ್ ಮತ್ತು ಬ್ರಿಟಿಷ್ ಲಿರಿಕ್ಸಿಟ್ ಡೆಸ್ಮಾಂಡ್ ಕಾರ್ಟರ್ ಈ ಪದ್ಯವನ್ನು ಆಂಗ್ಲ ಭಾಷೆಗೆ ಅನುವಾದಿಸಿದರು. 1936ರಲ್ಲಿ ಹಾಲ್ ಕೆಂಪ್ ಎಂಬಾತನ ಆರ್ಕೆಸ್ಟ್ರಾ ತಂಡ ಈ ಹಾಡನ್ನು ಹಾಡಲಾರಂಭಿಸಿತು.

ಇದಾದ ಬಳಿಕ ಡಾರ್ಕ್ನೆಸ್ ಎನ್ನುವ ವಿಶಿಷ್ಟ ಶೈಲಿಯಲ್ಲಿ ಹಾಡು ಪ್ರಸಿದ್ಧಿಯನ್ನು ಪಡೆಯಿತು. 1941ರಲ್ಲಿ ಬಿಲ್ಲಿ ಹಾಲಿಡೇ ಎನ್ನುವಾತ ಆ ಕವಿತೆಯ ನಿರ್ಣಾಯಕ ಆವೃತ್ತಿಯನ್ನು ಕೂಡ ಪ್ರಕಟಿಸಿದ. ಈ ಹಾಡನ್ನು ಕೇಳಿ ಜನ ಯಾಕೆ ಮುಗಿಬಿದ್ದು ಸಾಯ್ತಾಇದ್ದಾರೆ ಎಂದು ಅಧ್ಯಯನ ಮಾಡಲು ಶುರು ಮಾಡಿದ. ಇದರ ಆಧಾರದ ಮೇಲೆ ಅಮೇರಿಕಾ ಸರಕಾರ ಈ ಹಾಡನ್ನು ಬ್ಯಾನ್ ಮಾಡಿತು. ಬ್ಯಾನ್ ಆದ ಬ್ಲೂಮಿ ಸಂಡೇ ಹಾಡು 1984ರಲ್ಲಿ ಮತ್ತೆ ಪ್ರಸಿದ್ಧಿಯನ್ನು ಪಡೆಯಿತು. ಇದಾದ ಬಳಿಕ ಒಂದು ವಿಚಿತ್ರ ಘಟನೆ ನಡೆಯಿತು ಅದೇನಂತೀರಾ?

ಸಿನಿಮಾ ನಿರ್ದೇಶಕ ಓಝಿ ಆಸ್ಬರ್ನ್ ಎನ್ನುವಾತ ಸೂಸೈಡ್ ಸೊಲ್ಯುಷನ್ ಎನ್ನುವ ಶೀರ್ಷಿಕೆಯಡಿಯಲ್ಲಿ ಈ ಹಾಡನ್ನು ಪ್ರಕಟಿಸಿದ! ಈತನ ಹುಚ್ಚಾಟ ನಡೆಸಿದ ಪರಿಣಾಮ, ಆತನನ್ನು ನ್ಯಾಯಾಲಯಕ್ಕೂ ಎಳೆದುಕೊಂಡು ಹೋಯ್ತು. ಹೌದು… ಈ ಹಾಡನ್ನು ಕೇಳಿ ಹದಿಹರೆಯದ ಹುಡುಗನೊಬ್ಬ ತನಗೆ ತಾನೇ ಗುಂಡು ಹೊಡೆದು ಆತ್ಮಹತ್ಯೆ ಮಾಡಿಕೊಂಡ. ಇದರಿಂದ ಬೆಚ್ಚಿದ ಬಾಲಕನ ಪೋಷಕರು ಓಝಿ ವಿರುದ್ಧ ನ್ಯಾಯಾಲಯದಲ್ಲಿ ದೂರು ನೀಡಿದರು. ಇದರಿಂದ ಆತ ಕೋರ್ಟ್ ಮೆಟ್ಟಿಲೇರುವಂತಾಯ ಪರಿಸ್ಥಿತಿಯೂ ಆತನಿಗೇ ಒದಗಿ ಬಂತು.!!!

ಬ್ಲೂಮಿ ಸಂಡೇ ಎನ್ನುವ ಕವಿತೆಯನ್ನು ಬರೆದ ಕವಿ ಸೆರೆಸ್ ಸೈನಿಕನಾಗಿದ್ದ. ಆ ಬಳಿಕ ಸರ್ಕಸ್ ಕಂಪೆನಿಯೊಂದರಲ್ಲಿ ಕೆಲಸ ಮಾಡತೊಡಗಿದ್ದ ಈತ, ತಂದ ನಂತರದಲ್ಲಿ ಇದನ್ನೆಲ್ಲಾ ಬಿಟ್ಟು ಕವಿತೆ ಬರೆಯಲಾರಂಭಿಸಲು ಶುರು ಮಾಡಿದ. ಅವನ ಪರಿ ಕಲ್ಪನೆಯಲ್ಲಿ ಮೂಡಿಬಂದ ಕವಿತೆ ಬ್ಲೂಮಿ ಸಂಡೇ ಭರ್ಜರಿ ಯಶಸ್ಸನ್ನು ನೀಡಿತು. ಮೊದಲೇ ತಿಳಿಸಿದಂತೆ ಆತ ಈ ಕವಿತೆ ಬರೆದಿದ್ದು ಕೈಕೊಟ್ಟ ಯುವತಿಗಾಗಿ! ಈ ಕವಿತೆ ಪ್ರಸಿದ್ಧಿ ಆಗುತ್ತಿರುವುದನ್ನು ಆಕೆಯೂ ನೋಡಿದ್ದಳು. ಒಂದು ಭಾನುವಾರ ಕಾಗದಲ್ಲಿ ಗ್ಲೂಮಿ ಸಂಡೇ ಎಂದಷ್ಟೇ ಬರೆದು ಸೂಸೈಡ್ ಮಾಡಿಕೊಂಡಳು ಎನ್ನಲಾಗುತ್ತಿದೆ.!!!

ಈ ಕವಿತೆಯನ್ನು ಕೇಳಿದವರು ತುಂಬಾ ಖಿನ್ನತೆಗೊಳಗಾಗುತ್ತಾರೆ!! ಅಲ್ಲದೇ, ಅದರ ಹಿನ್ನೆಲೆ ಸಂಗೀತವೂ ಅಷ್ಟೇ ಖಿನ್ನತೆಗೆ ದೂಡುತ್ತೆ ಕೂಡ! ಮೂಲಗಳ ಪ್ರಕಾರ ತಾನು ಬರೆದ ಕವನದಿಂದ ಇಷ್ಟೆಲ್ಲಾ ಅವಾಂತರ ಆಗುತ್ತೆ ಅಂತ ಆತನಿಗೆ ಗೊತ್ತೇ ಇರಲಿಲ್ಲ!! ಸೆರೆಸ್ 1968ರಲ್ಲಿ ತನ್ನ ಬುಡಾಪೆಸ್ಟ್ ನಿವಾಸದ ಕಿಟಕಿಯಿಂದ ಜಂಪ್ ಹೊಡೆದು ಆತ್ಮಹತ್ಯೆ ಮಾಡಿಕೊಂಡ. ಈ ಕವಿತೆ ಆತನಿಗೆ ಸಾಕಷ್ಟು ಹೆಸರು, ದುಡ್ಡು ಕೊಟ್ಟಿತು ನಿಜ! ಆದರೆ ಆತನ ಕಣ್ಣಮುಂದೆಯೇ ಸಾವಿರಾರು ಮಂದಿ ಸೂಸೈಡ್ ಮಾಡಿ ಕೊಳ್ಳುತ್ತಿರುವುದರಿಂದ ಕಂಡು ಖಿನ್ನತೆಗೊಳಗಾದ. ಕೊನೆಗೆ ಖಿನ್ನತೆಗೊಳಗಾಗಿ ಈತನಿಗೇ ಮರಣಮೃದಂಗ ಬಾರಿಸಿತು!! “ಒಬ್ಬ ವ್ಯಕ್ತಿ ಯಶಸ್ವಿಯಾಗುತ್ತಾನೆ ನಿಜ. ಆದರೆ ಈ ತರಹದ ಯಶಸ್ವಿ ತನಗೆ ಬೇಕಾಗಿರಲಿಲ್ಲ. ಇಂಥಹ ಮಾರಕ ಖ್ಯಾತಿ ನನ್ನನ್ನು ನೋಯಿಸುತ್ತದೆ, ಮಾತ್ರವಲ್ಲದೇ ನನ್ನ ನಿರಾಶೆಯನ್ನು ಹಾಡಿನ ಮೂಲಕ ಅನಾವರಣಗೊಳಿಸಿದೆ. ಆದರೆ ಇದರಿಂದ ಜನರು ತಮ್ಮದೇ ಜೀವಕ್ಕೆ ಹಾನಿ ಮಾಡಿಕೊಂಡರು. ಇದರಿಂದ ನನಗೆ ತುಂಬಾ ನೋವಾಗುತ್ತದೆ.” ಎಂದು ಸೆರೆಸ್ ಒಂದು ಕಡೆ ನೊಂದು ಬರೆಯುತ್ತಾನೆ.

ಆದರೆ ಈ ಹಾಡು ಇಂದಿಗೂ ರಿಯಾಲಿಟಿ ಶೋಗಳಲ್ಲಿ ಹಾಡಲಾಗುತ್ತದೆ. ಈ ಹಾಡನ್ನು ಹಾಡ್ತಾ ಹಾಡ್ತಾ, ಕೇಳ್ತಾ ಕೇಳ್ತಾ ಇಡೀ ಸಭೆಯೇ ಕಣ್ಣೀರು ಹಾಕುತ್ತೆ. ಆತ್ಮಹತ್ಯೆಗೆ ದುಷ್ಪ್ರೇರಣೆಯನ್ನೂ ನೀಡುವ ಹಾಡನ್ನು ಜನ ಇಂದಿಗೂ ಕೇಳ್ತಾರೆ, ಆದರೆ ಅದು ಆತ್ಮಹತ್ಯೆಗೆ ಪ್ರೇರಣೆ ನೀಡುತ್ತೆ ಎಂದರೂ ಕೂಡ ಜನ ಈ ಹಾಡನ್ನು ಬಿಡಲು ತಯಾರಾಗುತ್ತಾ ಇಲ್ಲ ಅನ್ನೋದೆ ಒಂದು ದೊಡ್ಡ ಕುತೂಹಲ!!!

ಗ್ಲೂಮೀ ಸಂಡೇ ಕವಿತೆಯ ಕನ್ನಡಾನುವಾದ :

“ನಾನಿಲ್ಲಿ ಕುಳಿತು ನನಗೆ ನಾನೇ ಒಂದು ಪತ್ರ ಬರೆಯುತ್ತಿದ್ದೇನೆ” ಎಂಬ ಒಕ್ಕಣೆಯೊಂದಿಗೆ ಈ ಹಾಡು ಆರಂಭವಾಗುತ್ತೆ. ಆ ಬಳಿಕ…

“ಓ ಕತ್ತಲೆಯಾದ ಭಾನುವಾರವೇ,

ನಾನಿಂದು ಎಲ್ಲವನ್ನೂ ಮುಗಿಸುತ್ತಿದ್ದೇನೆ!

ನನ್ನ ಹೃದಯದ ಜೊತೆ ಎಲ್ಲವನ್ನೂ ಮುಗಿಸುತ್ತೇನೆ!

ಕೆಲವೇ ಹೊತ್ತಲ್ಲಿ ಕ್ಯಾಂಡಲ್ ಬೆಳಗುತ್ತೆ!

ಜೊತೆಗೆ ಪ್ರಾರ್ಥನೆಯೂ ಕೇಳಿಸುತ್ತೆ!

ಯಾರೂ ಅಳಬೇಡಿ, ಅಳಲೂ ಬಿಡಬೇಡಿ!

ನನಗೆ ಇಲ್ಲಿಂದ ಹೊರಡಲು ಖುಷಿಯಾಗುತ್ತೆ!

ಅವರಿಗೆ ಹೇಳಿ, ನಾಳೆ ನಿಮಗೆ ಕಾಣಿಸುವುದು ನನ್ನ ಹೆಣ!!

ಜೀವನ ನನ್ನನ್ನು ಮುಸುಕಾಗಿಸಿತು!

ಅವರಿಗೆ ಹೇಳಿ ಇದು ನನ್ನ ಕೊನೆಯ ಉಸಿರು !

ನಿಮ್ಮ ಹಾರೈಕೆ ನನ್ನ ಮೇಲಿರಲಿ….

ನಾನಿಲ್ಲಿ ಖುಷಿಯಾಗಿ ಸಾಯುತ್ತಾ ಇದ್ದೇನೆ!

ಓ ಸುಂದರ ಭಾನುವಾರವೇ..

ಇದು ನನ್ನ ಕೊನೆಯ ಭಾನುವಾರ……!”

– ಸರಿತಾ

Tags

Related Articles

Close