ಇತಿಹಾಸ

ಸಿಂಧ್ ಪ್ರಾಂತ್ಯದ ಕೊನೆಯ ರಾಜನಾದ ದಹೀರ್ ನ ಎರಡು ಹೆಣ್ಣು ಮಕ್ಕಳು ತಮ್ಮ ತಂದೆಯ ಸಾವಿನ ಸೇಡು ತೀರಿಸಿಕೊಂಡಿದ್ದು ಹೇಗೆ ಗೊತ್ತೇ?!

ಸಿಂಧೂ ನಾಗರೀಕತೆಯು ವಿಶ್ವದ ಅತ್ಯಂತ ಪ್ರಾಚೀನ ನಾಗರೀಕತೆಗಳಲ್ಲೊಂದಾಗಿದ್ದು ಮತ್ತು ಪ್ರಾಚೀನ ವೈಭವದ ಚಿಹ್ನಗಳಾದ ಆರಿ, ಕೋಟ್ ಡಿಜಿ ಮತ್ತು
ಮೊಹೆಂಜೋದಾರೋ ಅವಶೇಷಗಲ್ಲಿ ಇಂದಿಗೂ ಇವೆಲ್ಲವೂ ಕಂಡುಬರುತ್ತದೆ. ಇಂಡಸ್ ನದಿ ಮತ್ತು ಥಾರ್ ಮರುಭೂಮಿಯ ಪಕ್ಕದಲ್ಲಿರುವ ಈ ಭೂಮಿ ವಿಶ್ವದಲ್ಲೇ
ಅತ್ಯಂತ ಹಳೆಯ ಪ್ರದೇಶಗಳಲ್ಲಿ ಒಂದಾಗಿದೆ. ಅಷ್ಟೇ ಅಲ್ಲದೇ ವಿಶ್ವದ ಅತ್ಯಂತ ಶ್ರೇಷ್ಠ ಪೂರ್ವ-ಶಾಸ್ತ್ರೀಯ ನಾಗರಿಕತೆಗಳ ಬೀಡು ಎಂದೆನಿಸಿದೆ ಈ ಪ್ರದೇಶ.

ಸಿಂಧ್ ಪ್ರದೇಶವನ್ನು ಸಾಕಷ್ಟು ಮಂದಿ ಆಡಳಿತ ನಡೆಸಿದ್ದಲ್ಲದೇ, ವಿದೇಶಿಯರ ವಸಾಹತಿನಂತೆ ಸಂಕಷ್ಟವನ್ನು ಅನುಭವಿಸಿತು. ಆದರೆ ಇದು ಇತಿಹಾಸದಲ್ಲಿ ಮಾತ್ರ ಸ್ಪಷ್ಟವಾಗಿ ಕಂಡುಬಂದಿಲ್ಲ. ಆದರೆ ಇತ್ತೀಚೆಗಿನ ಇತಿಹಾಸದ ಪ್ರಕಾರ ರಾಯ್ ಸಹಸಿ ಮತ್ತು ಚುಚ್ ರಾಜವಂಶ ಇತ್ತು ಎಂದು ಹೇಳಲಾಗುತ್ತದೆ.

ಚುಚ್ ರಾಜವಂಶವನ್ನು ಬ್ರಾಹ್ಮಣ ರಾಜವಂಶವೆಂದು ಕರೆಯಲಾಗುತ್ತಿತ್ತು ಯಾಕಂದರೆ ಬ್ರಾಹ್ಮಣರೇ ಈ ಸಾಮ್ರಾಜ್ಯವನ್ನು ಆಡಳಿತ ನಡೆಸಿದ್ದು. ಈ ಚುಚ್ ರಾಜವಂಶದ ಕೊನೆಯ ದೊರೆಯೇ ರಾಜ ದಹಿರ್. ರಾಜ ದಹಿರ್ 663ಎ.ಡಿಯಲ್ಲಿ ಜನಿಸಿದ ಚುಚ್‍ನ ರಾಜ. ರಾಜಾ ದಹಿರ್‍ನ ಚಿಕ್ಕಪ್ಪ ಚಂದರ್ ಅವನ ಮರಣದ ನಂತರ ಚುಚ್ ವಂಶದ ಸಿಂಹಾಸನವನ್ನೇರಿದ. ಸಿಂಧ್ ರಾಜವಂಶವು ಆಧುನಿಕ ಯುಗದಲ್ಲಿ ಅಫ್ಘಾನಿಸ್ತಾನ್, ಬಲೂಚಿಸ್ತಾನ್, ಇರಾನ್, ಪಾಕಿಸ್ತಾನ್ ಮತ್ತು ಪಂಜಾಬ್ ಭಾಗಗಳನ್ನು ಆಳಿದ ಸಾಮ್ರಾಜ್ಯವಾಗಿತ್ತು.

ಎಂಟು ವರ್ಷಗಳ ನಂತರ ಕನ್ನೌಜದ ಚಕ್ರವರ್ತಿ ರಾಮಾಲ್, ದಹಿರ್‍ನ ಸಾಮ್ರಾಜ್ಯವನ್ನು ಆಕ್ರಮಿಸಿದನು. ಅಷ್ಟೇಅಲ್ಲದೇ ಆರಂಭಿಕ ನಷ್ಟಗಳನ್ನು ಗಳಿಸಿದರೂ ಕೂಡ ರಾಮಲ್ ಆರೋರ್ ಪ್ರದೇಶವನ್ನು ತೆಗೆದುಕೊಂಡ ಮತ್ತು ಅರಬ್‍ನ ಅಲಾಫಿಯೊಂದಿಗೆ ಮೈತ್ರಿಯನ್ನು ಬೆಳೆಸಿಕೊಂಡನು.

ಹೀಗಾಗಿ ಅಲಾಫಿ ಮತ್ತು ಅವನ ಸೈನಿಕರು ಉಮಾಯ್ಯಾದ್ ಕಾಲಿಫೇಟ್‍ನಿಂದ ಗಡೀಪಾರದರು ಕೂಡ ಪುನರ್‍ನೇಮಕಗೊಂಡರು. ದಹಿರ್ ಸೈನ್ಯವನ್ನು ಹಿಮ್ಮೆಟ್ಟಿಸುವಂತೆ ಆಕ್ರಮಣಕಾರಿ ಪಡೆಗಳನ್ನು ಸಜ್ಜುಗೊಳಿಸಿದನು. ಆದರೆ ಅಲಾಫಿ, ಸೈನ್ಯದ ಸಲಹೆಗಾರನಾಗಿ ಸೇವೆ ಸಲ್ಲಿಸಿದರೂ ಕೂಡ ಯುದ್ದಭೂಮಿಯಲ್ಲಿ ಉನ್ನತ ಸ್ಥಾನವನ್ನು ಪಡೆಯಲು ನಿರಾಕರಿಸಿದನು. ಇರದ ಪರಿಣಾಮವಾಗಿ ಕೊನೆಗೆ ಕ್ಯಾಲಿಫಿಯಿಂದ ಕ್ಷಮೆಯನ್ನು ಯಾಚಿಸಿದರು.

ಆಧುನಿಕ ಶ್ರೀಲಂಕಾವನ್ನು ಕಳವು ಮಾಡಲಾಗಿದೆ!

ಸಿಂದ್‍ನ್ನು ವಶಪಡಿಸಿಕೊಂಡ ಅರಬ್ಬರು- ಬಸ್ರಾ ಗವರ್ನರ್‍ನ ದಂಡಯಾತ್ರೆಯನ್ನು ನಡೆಸಿದ್ದು ರಾಜಾದಹಿರ್‍ನ ವಿರುದ್ಧ ಡೆಬಲ್ ಕರಾವಳಿ ತೀರದಿಂದ ದಾಳಿ ನಡೆಸಿದ ದರೋಡೆಕೋರರಾಗಿದ್ದು, ಸೆರೆಂಡಿಬ್( ಆಧುನಿಕ ಶ್ರೀಲಂಕಾ)ವನ್ನು ರಾಜ ಕ್ಯಾಲಿಫನಿಗೆ ನೀಡಿದ ಉಡುಗೊರೆಯನ್ನು ಅರಬ್ಬರು ಕಳವು ಮಾಡಿದರು.

“ಈ ವಿಷಯವನ್ನು ಹಜ್ಜಾಜ್‍ನಿಂದ ಕೇಳಿದ ತಕ್ಷಣ, ವಿಫಲಕಾರಿಯಾದ ನಿರ್ಣಯದ ಬಗ್ಗೆ ರಾಜ ದಹಿರ್‍ಗೆ ಒಂದು ಪತ್ರವನ್ನು ಬರೆದರು. ಇದರ ಪರಿಣಾಮ ಸೈನದ
ದಂಡಯಾತ್ರೆಗೆ ಕಾರಣವಾಯಿತು” ಎಂದು ಚುಚ್‍ನಾಮಗೆ ವರದಿ ಮಾಡಿದರು.

ಅದರೊಂದಿಗೆ ಸಮುದ್ರಕ್ಕೆ ಸಂಬಂಧಿಸಿದ ಹಿತಾಸಕ್ತಿಗಳನ್ನು ರಕ್ಷಿಸುವ ಜೊತೆಗೆ ಮಖ್ರಾನ್, ಬಲೂಚಿಸ್ತಾನ್ ಮತ್ತು ಸಿಂಧ್‍ಪ್ರದೇಶಗಳನ್ನು ಗಳಿಸುವಲ್ಲಿ ನಹಾವಾಂಡ್, ಸಲಾಸಲ್ ಮತ್ತು ಖದಾಸಿಯಾಹ್ ಮತ್ತು ಬಂಡಾಯ ಮುಖ್ಯಸ್ಥರನ್ನು ಪಲಾಯನಗೊಳಿಸಲಾಯಿತು. ಅಷ್ಟೇ ಅಲ್ಲದೇ ವಿವಿಧ ಕದನಗಳಲ್ಲಿ ಷರ್ಷಿಯನ್ನರ ಜೊತೆಯಲ್ಲಿ ಸಿಂಧ್ ಸೈನ್ಯದ ಪಾಲ್ಗೊಳ್ಳುವಿಕೆಗೆ ಕಾರಣವಾಯಿತು.

ಯಾರಿಗೂ ಗೊತ್ತಿರದ ಇನ್ನೊಂದು ಕಥೆ!

ಸಿಂಧ್‍ನಲ್ಲಿ ಹಾಜ್ಜಾಜ್ ಆಶ್ರಯ ಪಡೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ರಾಜಾ ದಹಿರ್ ಕೆಲವು ಅರಬ್ಬರನ್ನು ಗಡಿಪಾರು ಮಾಡಲು ನಿರಾಕರಿಸಿದ. ಆದರೆ ಅಲ್-ಹಜ್ಜಾಜ್ ತನ್ನ ಸೋದರಳಿಯ ಮಹಮ್ಮದ್-ಬಿನ್-ಖಾಸಿಮ್‍ನ ಸೈನ್ಯವನ್ನು ದಹಿರ್‍ಗೆ ಪ್ರತೀಕಾರ ತೆಗೆದುಕೊಳ್ಳಲು ಕಳುಹಿಸಲಾಯಿತು.

ಮಹಮ್ಮದ್-ಬಿನ್-ಖಾಸಿಮ್ ನೇತೃತ್ವದಲ್ಲಿ ಹಜ್ಜಾಜ್ ಒಂದು ದೊಡ್ಡ ಆಂದೋಲನವನ್ನೇ ಪ್ರಾರಂಭಿಸಿದ. ಆದರೆ 711 ಸಿಇಯಲ್ಲಿ ಅಲ್-ಹಜ್ಜಾಜ್‍ನ ಆದೇಶದ ಮೆರೆಗೆ ಬಿನ್-ಖಾಸಿಮ್ ಡೆಬಲ್‍ನ್ನು ಆಕ್ರಮಣ ಮಾಡಿ ಅದನ್ನು ವಶಪಡಿಸಿಕೊಂಡನು. ತದನಂತರದಲ್ಲಿ ಬಿನ್ ಖಾಸಿಮ್ ಡೆಬಲ್‍ನಿಂದ ನೆರುಮ್‍ಗೆ ಸ್ಥಳಾದಂತರಗೊಂಡನಲ್ಲದೇ ಹಜ್ಜಾಜ್‍ನ ಮೊದಲ ಅಭಿಯಾನದ ನಂತರ ನಗರದ ಬೌದ್ಧ ಗವರ್ನರ್‍ಗಳನ್ನು ಕ್ಯಾಲಿಪೇಟ್ ಉಪನದಿಗಳ ರಾಜ್ಯವೆಂದು ಒಪ್ಪಿಸಿದ ನಂತರ ಬಿನ್-ಖಾಸಿಮ್‍ಗೆ ಶರಣಾದರು.

ಮಹಮ್ಮದ್-ಬಿನ್-ಖಾಸಿಮ್ ವಿವಿಧ ಬುಡಕಟ್ಟುಗಳ ಬೆಂಬಲದ ಮೂಲಕ ದಹಿರ್‍ನನ್ನು ಸೋಲಿಸಿ ಪೂರ್ವ ಪ್ರದೇಶಗಳನ್ನು ವಶಪಡಿಸಿಕೊಂಡನು. ಜಟ್ಸ್, ಮೆಡ್ಸ್,
ಭುಟ್ಟೊಸ್ ಮತ್ತು ಬೌದ್ದ ಆಡಳಿತಗಾರರಾದ ನರುನ್, ಬಜ್ರಾ, ಕಾಕಾ ಕೊಲಾಕ್ ಮತ್ತು ಸ್ವಿಸ್ಸ್ತಾನ್, ಬಿನ್-ಖಾಸಿಮ್‍ನ ಅಶ್ವಸೈನ್ಯದ ಪ್ರಧಾನ ಪದಾಧಿಕಾರಿಗಳಾಗಿ ನೇಮಿಸಿದನು.

ಅಷ್ಟೇ ಅಲ್ಲದೇ, ತನ್ನ ಪಡೆಗಳನ್ನು ಪೂರ್ವದ ದಡಗಳಿಗೆ ಸ್ಥಳಾಂತರಿಸಲಾಯಿತು. ಆ ಸಂದರ್ಭದಲ್ಲಿ ದಹಿರ್ ಖಾಸಿಮ್‍ನನ್ನು ಸಿಂಧೂ ನದಿಯನ್ನು ದಾಟಲು ತಡೆದರೂ ಅದು ಪ್ರಯೋಜನವಾಗಲಿಲ್ಲ. ಯಾಕೆಂದರೆ ಖಾಸಿಮ್ ದಹಿರ್‍ನ ಪುತ್ರ ಜೈಸಿಹ್ ನೇತೃತ್ವದಲ್ಲಿ ತನ್ನೆಲ್ಲಾ ಪಡೆಗಳನ್ನು ದಾಟಿಸಲು ಸಹಾಯ ಮಾಡಿದ್ದಲ್ಲದೇ, ಎಲ್ಲರನ್ನೂ ಸೋಲಿಸಿದನು.

712ರಲ್ಲಿ ಖಾಸಿಮ್, ಅರೋರ್‍ನ ಆಧುನಿಕ ನವಾಬ್‍ಶಾ ಸಮೀಪದಲ್ಲಿ ದಹಿರ್‍ನ ವಿರುದ್ದ ಹೋರಾಡಿ ಅವನನ್ನು ಕೊಂದನು. ಸಿಂಧೂನದಿಯ ತೀರದ ಅರೋರಿನನ ಯುದ್ದದಲ್ಲಿ ದಹಿರ್‍ನನ್ನು ಕೊಂದು ಅವನ ತಲೆಯನ್ನು ಕಡಿದು ಹಜ್ಜಾಜ್-ಬಿನ್-ಯೂಸುಪ್‍ಗೆ ಕಳುಹಿಸಿಕೊಟ್ಟ!

“ಅಗಾಧವಾದ ತೊಂದರೆಯಿಂದ ನಾವು ಸಿಂಧ್‍ನ್ನು ವಶಪಡಿಸಿಕೊಂಡೆವು.

ಮಹಮ್ಮದ್-ಬಿನ್-ಖಾಸಿಮ್‍ನ ಮಾಂತ್ರಿಕ ತಂತ್ರ ದಹಿರ್‍ಗೆ ದ್ರೋಹ ಮಾಡಿತು.

ಆನಂದಿಸಿತು, ಕೆಟ್ಟ ದುಷ್ಕರ್ಮಿಗಳ ಅಪಮಾನ!

ಅವರ ಸಂಪತ್ತನ್ನೇ ದೂರ ತರಲಾಯಿತು.

ಅವರೆಲ್ಲ ಈಗ ಏಕಾಂಗಿ ಮತ್ತು ಸ್ಥಿರತೆಯಿಲ್ಲದ ಮೊಟ್ಟೆಯಂತಿದ್ದಾರೆ ಅವರ ಮಹಿಳೆಯರು, ನ್ಯಾಯಯುತ ಮತ್ತು ಪರಿಮಳಯುಕ್ತವಾದ ಕಸ್ತೂರಿ-ಜಿಂಕೆಗಳಂತೆ ಇದ್ದರೂ ಇದೀಗ ಮೊಲಗಳಂತೆ ನಿದ್ದೆಯಲ್ಲಿದ್ದಾರೆ!”

ರಾಜಪರಿವಾರದ ಸಾಹಿತ್ಯಕಾರ, ತನ್ನ ಸಾಹಿತ್ಯದಲ್ಲಿ ದಹಿರ್‍ನ ತಲೆಯಿಂದ ರಕ್ತಸ್ರಾವವಾಗುತ್ತಿದ್ದು ಕಂಡು ಈರೀತಿ ಬರೆದು ಹಜ್ಜಾಜ್‍ನ ನ್ಯಾಯಾಲಕ್ಕೆ ತಲುಪಿಸಿದ!!!

ರಾಜ ದಹಿರ್‍ನ ಹೆಂಡತಿ ಮತ್ತು ಮನೆಯಲ್ಲಿದ್ದ ಇತರ ಮಹಿಳೆಯರನ್ನು ಜೀವಂತವಾಗಿ ಸೆರೆಹಿಡಿಯದಕ್ಕಿಂತ ಜಹುರ್‍ನನ್ನು ಜೀವಂತವಾಗಿ ಸೆರೆ ಹಿಡಿದರು,
ದುರದೃಷ್ಟವಶಾತ್ ಆಕ್ರಮಣಕಾರರು ದಹಿರ್‍ನ ಇಬ್ಬರು ಹೆಣ್ಣುಮಕ್ಕಳಾದ ಸುರಯ್ ದೇವಿ ಮತ್ತು ಪ್ರೆಮಲ ದೇವಿಯನ್ನು ಬಂಧಿಸಿದರು.

ಆಕ್ರಮಣದ ಸಮಯದಲ್ಲಿ ಕೆಚ್ಚೆದೆಯ ಬಾಲಕಿಯರನ್ನು ಸೆರೆಯಲ್ಲಿರಿಸಿದ್ದು ಖಾಸಿಮ್‍ನ ಮರಣದ ಲಕ್ಷಣ ಎಂದು ಚಾಚ್ ನಾಮ ಎತ್ತಿ ತೋರಿಸುತಿತ್ತು. ತದ ನಂತರ
ಡಮಾಸ್ಕಸ್‍ನಲ್ಲಿದ್ದ ಖಲೀಫಾಗೆ ಉಡುಗೊರೆಯಾಗಿ ಖಾಸಿಮ್‍ನನ್ನೇ ಕಳುಹಿಸುವುದಾಗಿ ಉಲ್ಲೆಖಿಸಿದ್ದರು. ಇದರಿಂದ ಬಿನ್ ಖಾಸಿಮ್‍ಗೆ ನಂಬಿಸುವಂತೆ ಮಾಡಿ, ಈ ಸಹೋದರಿಯರು ಖಲೀಫಾನನ್ನು ಮೋಸಗೊಳಿಸಿದರು.. ಈ ದಂಡಯಾತ್ರೆಯ ಪರಿಣಾಮ, ಹೆದರಿದ ಖಾಸಿಮ್ ಎತ್ತಿನ ಹೊಟ್ಟೆಯೊಳಗೆ ಬಚ್ಚಿಟ್ಟು ಸಿರಿಯಾಗೆ ಪಲಾಯನ ಗೈಯಲೆತ್ನಿಸಿದ್ದ. ಆದರೆ ಈ ಸಂದರ್ಭದಲ್ಲಿ ಉಸಿರುಕಟ್ಟುವಿಕೆಯಿಂದಾಗಿ ಆತ ಮರಣ ಹೊಂದಿದನು. ಖಲೀಫಾನ ವಂಚನೆಗೆ ಇವನನ್ನು ಗೋಡೆಯಲ್ಲಿ ಜೀವಂತವಾಗಿ ಸಮಾಧಿ ಮಾಡಿ ಎಂದು ಈ ಹೆಣ್ಣುಮಕ್ಕಳು ಆದೇಶಿಸಿದ್ದರು.

ತನ್ನ ತಂದೆಯನ್ನು ಸಾಯಿಸಿದ ದ್ರೋಹಿಗಳನ್ನು ಸಾಯಿಸಿ, ತಮ್ಮ ಪ್ರತಿಕಾರವನ್ನು ತೀರಿಸಿಕೊಂಡರು. ರಾಜಾ ದಹಿರ್ ಮತ್ತು ಆತನ ಕೆಚ್ಚೆದೆಯ ಹೆಣ್ಣುಮಕ್ಕಳ
ಹೆಜ್ಜೆಗುರುತಿನೊಂದಿಗೆ ಚುಚರಾಜವಂಶವು ಕೊನೆಗೊಂಡಿತು.

– ಅಲೋಖಾ

Tags

Related Articles

Close