ಪ್ರಚಲಿತ

ಸಿದ್ದರಾಮಯ್ಯನ ಸೂಟ್‍ಕೇಸ್ ರಾಜಕಾರಣಕ್ಕೆ ಸಿಕ್ಕಿದೆ ಪ್ರಬಲ ಸಾಕ್ಷಿ!!! ಆ ಕುಲಪತಿಗಳು ಕಾಂಗ್ರೆಸ್ ಸರಕಾರಕ್ಕೆ ಉಗಿದಿದ್ದು ಹೇಗೆ ಗೊತ್ತಾ?

ಹಲವಾರು ಹಗರಣಗಳನ್ನು ಮಾಡಿ ಕರ್ನಾಟಕದ ಜನತೆಗೆ ತಲೆನೋವಾಗಿರುವ ಸಿದ್ದರಾಮಯ್ಯನ ಕಾಂಗ್ರೆಸ್ ಸರಕಾರ ಯಾವಾಗ ತೊಲಗುತ್ತೋ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಸರಕಾರ ರಚಿಸಲು ಯಾವ ನೀಚ ಮಟ್ಟಕ್ಕೂ ಇಳಿಯಲು ಹೇಸದ ಕಾಂಗ್ರೆಸ್ ಸರಕಾರದ ವಿರುದ್ಧ ಇದೀಗ ವಿಶ್ವವಿದ್ಯಾಲಯದ ಕುಲಪತಿಗಳೂ ಕೆಂಡಕಾರುವಂತಾಗಿದೆ. ಸಿದ್ದರಾಮಯ್ಯ ಸರಕಾರ ಎಷ್ಟು ಲೂಟಿಯಲ್ಲಿ ತೊಡಗಿದೆ ಎಂಬುವುದಕ್ಕೆ ಕುಲಪತಿಯೋರ್ವರು ಮಾಡಿರುವ ಗಂಭೀರ ಆಪಾದನೆಯೇ ಸಾಕ್ಷಿ. ಒಬ್ಬರು ವಿಶ್ವವಿದ್ಯಾಲಯದ ಕುಲಪತಿಯಾಗಿರುವವರು ಸಿದ್ದರಾಮಯ್ಯನ ಸರಕಾರದ ವಿರುದ್ಧ ಈ ರೀತಿ ಗಂಭೀರ ಆಪಾದನೆ ಮಾಡುತ್ತಿದ್ದಾರೆಂದರೆ ಈ ಸರಕಾರ ಎಷ್ಟು ಕುಲಗೆಟ್ಟು ಹೋಗಿದೆ ಎಂದು ಅರ್ಥ ಮಾಡಿಕೊಳ್ಳಬಹುದು.

ಇವರ ಹೆಸರು ಡಾ. ಮಲ್ಲಿಕಾ ಘಂಟಿ. ಇವರು ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಉಪಕುಲಪತಿ. ಇವರು ನೀಡಿದ ಹೇಳಿಕೆ ಸಿದ್ದರಾಮಯ್ಯನ ಸರಕಾರದ ಬುಡ
ಅಲುಗಾಡಿಸುವುದಂತೂ ಸುಳ್ಳಲ್ಲ. ಹಣ ಕೊಟ್ಟರೆ ಏನೂ ನಡೆಯುತ್ತೆ ಎಂಬ ಅವರ ನೋವಿನ ಮಾತು ಸಿದ್ದರಾಮಯ್ಯ ಸರಕಾರ ಭ್ರಷ್ಟಾಚಾರಕ್ಕೆ ಕನ್ನಡಿ ಹಿಡಿದಂತಿದೆ.

ಅಂದಹಾಗೆ ಡಾ. ಮಲ್ಲಿಕಾ ಘಂಟಿ ಹೇಳಿದ ಮಾತೇನು ಗೊತ್ತಾ…? `ವಿಧಾನಸೌಧಕ್ಕೆ ಸೂಟ್‍ಕೇಸ್ ತುಂಬಾ ಹಣ ತುಂಬಿಕೊಂಡು ಹೋದ್ರೆ ಮಾತ್ರ ಕೆಲಸ ಆಗುತ್ತದೆ. ಸಿಎಂ ಸಿದ್ದರಾಮಯ್ಯನವರ ಭರವಸೆ ಒಂದೆ ದಿನಕ್ಕೆ ಮಾತ್ರ ಸೀಮಿತ…’ ಎಂದವರು ಗಂಭೀರ ಆರೋಪ ಮಾಡಿದ್ದು ಇದೀಗ ಅವರ ಮಾತು ಭಾರೀ ಚರ್ಚೆಗೆ ಗ್ರಾಸವಾಗಿದೆ.

ವಿಧಾನಸೌಧಕ್ಕೆ ಸೂಟ್‍ಕೇಸ್ ತುಂಬಾ ಹಣ ತುಂಬಿಕೊಂಡು ಹೋದ್ರೆ ಮಾತ್ರ ಕೆಲಸವಾಗುತ್ತದೆ. ಹೀಗಾಗೇ ವಿಶ್ವ ವಿದ್ಯಾಲಯಗಳ ಅಭಿವೃದ್ಧಿಯಾಗುತ್ತಿಲ್ಲ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳೇ ಸ್ವಂತ ಸರ್ಕಾರದ ವಿರುದ್ಧ ಹೇಳಿಕೆಯನ್ನು ನೀಡಿರುವುದರಿಂದ ಅವರ ಮಾತು ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಇಂದು ವಿಶ್ವವಿದ್ಯಾಲಯಗಳಿಗೆ ದುರ್ಗತಿ ಬರಲು ಕಾರಣವೇನೆಂದು ಡಾ. ಮಲ್ಲಿಕಾ ಘಂಟಿ ಅವರ ಮಾತು ಸಾಕ್ಷ್ಯ ಒದಗಿಸಿದೆ.

ಹಂಪಿ ಕನ್ನಡ ವಿಶ್ವ ವಿದ್ಯಾಲಯಕ್ಕೀಗ ಬೆಳ್ಳಿಹಬ್ಬದ ಸಂಭ್ರಮ. ಬೆಳ್ಳಿಹಬ್ಬದ ಅಂಗವಾಗಿ ಆಯೋಜಿಸಿದ್ದ ನುಡಿಹಬ್ಬವನ್ನು ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ಮಾಡಿದ್ದರು. ಈ ವೇಳೆ ಹಂಪಿ ಕನ್ನಡ ವಿವಿಯಲ್ಲಿನ ಸಿಬ್ಬಂದಿ ಅಧ್ಯಾಪಕರ ಕೊರತೆ ನೀಗಿಸುವ ಭರವಸೆಯನ್ನು ಸಿಎಂ ಸಾಹೇಬ್ರು ನೀಡಿದ್ರು. ಆದರೆ ಎರಡನೇ ದಿನದ ವಿಚಾರ ಸಂಕಿರಣ ಸಮಾರಂಭದಲ್ಲಿ ಹಂಪಿ ಕನ್ನಡ ವಿವಿಯ ಕುಲಪತಿ ಡಾಕ್ಟರ್ ಮಲ್ಲಿಕಾ ಘಂಟಿ, ಸಿಎಂ ಸಿದ್ದರಾಮಯ್ಯ ಭರವಸೆಯ ಭಾಷಣದ ವಿರುದ್ಧವಾಗಿ ಮಾತನಾಡಿ ನೋವು ತೋಡಿಕೊಂಡಿದ್ದಾರೆ.

ಅವರ ಮುಂದಿನ ಮಾತುಗಳು ಹೀಗಿವೆ…

ವಿವಿಯ ಹಿಂದಿನ ಕುಲಪತಿಗಳಾಗಿದ್ದ ಚಂದ್ರಶೇಖರ ಕಂಬಾರರು ಅಂದು ವಿಧಾನಸೌಧಕ್ಕೆ ಭೇಟಿ ನೀಡಿದ್ರೆ, ಸ್ವತಃ ದೇವೇಗೌಡರಂತಹ ರಾಜಕಾರಣಿಗಳು ಮುಂದೆ
ನಿಂತುಕೊಂಡು ಎಲ್ಲಾ ಕೆಲಸಗಳು ಮಾಡಿಕೊಡುತ್ತಿದ್ದರು. ಅಲ್ಲದೆ ಸೂಟ್‍ಕೇಸ್ ತುಂಬಾ ಹಣ ಕೊಟ್ಟು ಹಂಪಿ ವಿಶ್ವವಿದ್ಯಾಲಯದ ಅಭಿವೃದ್ಧಿ ಮಾಡಿ ಎಂದು ಹೇಳುತ್ತಿದ್ದರು. ಆದರೆ ಇಂದು ವಿವಿಯ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳಲು ವಿಧಾನಸೌಧಕ್ಕೆ ಸೂಟ್‍ಕೇಸ್ ತುಂಬಾ ಹಣ ತುಂಬಿಕೊಂಡು ಹೋಗಿ ಕೆಲಸ ಮಾಡಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಡಾ. ಮಲ್ಲಿಕಾ ಘಂಟಿ ಬೇಸರ ವ್ಯಕ್ತಪಡಿಸಿದ್ದಾರೆ. ಅಧ್ಯಾಪಕರು, ಸಿಬ್ಬಂದಿ ನೇಮಕಾತಿ ವಿಚಾರದಲ್ಲಿ ಬೀದಿಗೀಳಿದು ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದಿದೆ ಎಂದು ಹೇಳಿದ್ದಾರೆ.

ಈ ಮುಂಚೆ ಸಿದ್ದು ನುಡಿದಿದ್ದ ತಮ್ಮ ಭಾಷಣದಲ್ಲಿ, ಇಲ್ಲಿ ಹಲವಾರು ಪೆÇೀಸ್ಟ್‍ಗಳು ಖಾಲಿ ಇದೆ. ಈ ಬಗ್ಗೆ ಪ್ರಸ್ತಾವನೆ ಕಳುಹಿಸಿಕೊಡಿ. 180 ಪೆÇೀಸ್ಟ್‍ಗಳು ಖಾಲಿ ಇವೆ ಎಂಬ ಮಾಹಿತಿ ನೀಡಿದ್ದಾರೆ. ಮೊದಲನೇ ಹಂತದಲ್ಲಿ ಅಗತ್ಯ ಎಷ್ಟಿದೆ ಅಷ್ಟು ಮಂಜೂರು ಮಾಡಿಕೊಡೋಣ ಎಂದು ಭರವಸೆ ನೀಡಿದ್ದರು. ಆದರೆ ಭರವಸೆ ಇನ್ನೂ ಈಡೇರದ ಕಾರಣ ಕುಲಪತಿ ಡಾ. ಮಲ್ಲಿಕಾ ಘಂಟಿ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದಲ್ಲಿ ತುಘಲಕ್ ದರ್ಬಾರ್ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ಹಲವಾರು ಭ್ರಷ್ಟಾಚಾರ ಬಯಲಾಗಿದೆ. ಪೊಲೀಸ್ ಅಧಿಕಾರಿಗಳು ನಿಗೂಢವಾಗಿ ಮೃತಪಟ್ಟರೆ ಕೆಲವರು ನೀತಿಗೆಟ್ಟ ಸರಕಾರದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿರಾರು ರೈತರು ಆತ್ಮಹತ್ಯೆ ಮಾಡಿದ್ದಾರೆ. ಅಲ್ಪಸಂಖ್ಯಾತರಿಗೆ ಹಲವು ಭಾಗ್ಯಗಳನ್ನು ಕರುಣಿಸಿದರೆ ನೂರಾರು ಹಿಂದೂಗಳನ್ನು ಕೊಲ್ಲಲಾಗುತ್ತಿದೆ. ವೀರಶೈವ-ಲಿಂಗಾಯಿತರನ್ನು ಪರಸ್ಪರ ಕಚ್ಚಾಡಿಸಿ ಚಂದ ನೋಡಿ ಮತ್ತೊಮ್ಮೆ ಸರಕಾರ ರಚಿಸುವ ಬಗ್ಗೆ ಸಿದ್ದರಾಮಯ್ಯ ಹಗಲುಕನಸು ಕಾಣುತ್ತಿದ್ದಾನೆ. ಮಕ್ಕಳ ಊಟವನ್ನೇ ಕಸಿಯುವ, ಸಿದ್ದಗಂಗಾ ಶ್ರೀಗಳನ್ನೇ ಇದುರು ಹಾಕಿಕೊಂಡು ರಾಜಕೀಯ ಬೇಳೆ ಬೇಯಿಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಔರಂಗಜೇಬನ ಸರಕಾರವನ್ನು ನೆನಪಿಸುವಂತಿದೆ. ಎಲ್ಲರಿಂದಲೂ ಉಗಿಸಿಕೊಳ್ಳುತ್ತಿರುವ ಕಾಂಗ್ರೆಸ್ ಸರಕಾರ ಇದೀಗ ಕುಲಪತಿಗಳಿಂದಲೂ ಉಗಿಸಿಕೊಂಡು ಮುಖಭಂಗಕ್ಕೀಡಾಗಿದೆ.

source:Read Original Source Here!

-Aloka

Tags

Related Articles

Close