ಪ್ರಚಲಿತ

ಸಿದ್ದರಾಮಯ್ಯ ಚುನಾವಣೆ ವೇಳೆ ಕಾರಿನ ಟೈರಿನಲ್ಲಿಯೂ ಕಂತೆ ಕಂತೆ ಹಣವನ್ನು ಸಾಗಿಸಿದ್ದರೇ?! ಜಿಪಂ ಸದಸ್ಯನಿಂದ ಸ್ಪೋಟಕ ಮಾಹಿತಿ ಬಹಿರಂಗ!!!

ಕೈಗೆ ಎಪ್ಪತ್ತು ಲಕ್ಷದ ವಾಚ್, ಕಣ್ಣಿಗೆ ಲಕ್ಷಾಂತರ ಬೆಲೆ ಬಾಳುವ ಇಟಾಲಿಯನ್ ಕೂಲಿಂಗ್ ಗ್ಲಾಸ್ ಹಾಕಿಕೊಂಡು ತಾನೊಬ್ಬ ಬಡವರ ಪರ, ಬಡವರ ಸೇವೆಗೆ 56
ಇಂಚಿನ ಎದೆ ಬೇಕಾಗಿಲ್ಲ, ಕೇವಲ ಮಾನವೀಯತೆಯಿರುವ ಹೃದಯ ಇದ್ದರೆ ಸಾಕು ಎಂದು ಬೋಂಗು ಬಿಡುವ ಸಮಾಜವಾದಿ ಸಿದ್ದರಾಮಯ್ಯನವರ ಅಸಲಿ
ಸಮಾಜವಾದ ಅಂದರೆ ಏನು ಎಂಬುವುದು ಕೊನೆಗೂ ಬಟಾಬಯಲಾಗಿದೆ. ಚುನಾವಣೆಯನ್ನು ಗೆಲ್ಲಲು, ಚುನಾವಣಾ ಆಯೋಗಕ್ಕೇ ಚಳ್ಳೆ ಹಣ್ಣು ತಿನ್ನಿಸಿದ
ಸಿದ್ದರಾಮಯ್ಯನವರ ಭ್ರಷ್ಟ ಮುಖವನ್ನು ಅವರ ನಿಷ್ಠಾವಂತ ಬೆಂಬಲಿಗನೊಬ್ಬ ಬಯಲಿಗೆಳೆದು ಅದಕ್ಕೆ ಸೂರ್ಯ ಚಂದ್ರನ ಆಣೆ ಮಾಡಿದ್ದಾರೆ…

ಸಿದ್ದರಾಮಯ್ಯನವರು ಉಪಚುನಾವಣೆಯನ್ನು ಗೆಲ್ಲಲು ಮತದಾರರಿಗೆ ಹಣನೀಡಿ ಅವರನ್ನು ಖರೀದಿಸಿದ ವಿಚಾರವನ್ನು ತುಮಕೂರು ಜಿಲ್ಲೆಯ ಹೊನವಳ್ಳಿ ಕ್ಷೇತ್ರದ ಜಿಲ್ಲಾ ಪಂಚಾಯತ್ ಕಾಂಗ್ರೆಸ್ ಸದಸ್ಯ ಜಿ.ನಾರಾಯಣ ಬಯಲಿಗೆಳೆದಿದ್ದಾರೆ. ಸಿಎಂ ಸಿದ್ದರಾಮಯ್ಯನವರು ಜೆಡಿಎಸ್ ಬಿಟ್ಟು ಕಾಂಗ್ರೆಸ್‍ಗೆ ಬಂದಾಗ ನಡೆದಂತಹ ಉಪಚುನಾಚಣೆಯಲ್ಲಿ ನಾನೇ ಸ್ವತಃ ದುಡ್ಡು ಹಂಚಿದ್ದೇನೆ. ನನ್ನಲ್ಲಿದ್ದ ಸ್ಯಾಂಟ್ರೋ ಕಾರಿನ ಟೈರ್ನಲ್ಲಿ 4 ಲಕ್ಷ ರೂ. ತೆಗೆದುಕೊಂಡು ಹೋಗಿ ಹಂಚಿದ್ದೇನೆ ಎಂದು ಸೋಮವಾರದಂದು ತಿಪಟೂರಿನಲ್ಲಿ ನಡೆದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಜಿ. ನಾರಾಯಣ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇದು ಸಿದ್ದರಾಮಯ್ಯನ ಖುರ್ಚಿಗೆ ಕಂಟಕವಾಗುವ ಎಲ್ಲಾ ಲಕ್ಷಣ ಕಾಣಿಸಿಕೊಂಡಿದೆ.

ಇಂಥದೊಂದು ಖತರ್ನಾಕ್ ಐಡಿಯಾ ಸಮಾಜವಾದಿ ಸಿದ್ದರಾಮಯ್ಯನವರ ಮಂಡೆಯಲ್ಲಿ ಹೊಳೆದಿರುವುದೇ ಅಚ್ಚರಿಯಾಗುತ್ತದೆ. ನಿಯಮಗಳ ಪ್ರಕಾರ ದುಡ್ಡು ಹಂಚಿ ಮತದಾರರನ್ನು ಖರೀದಿಸಿ ಮತದಾರರನ್ನು ಸೆಳೆಯುವುದೇ ಒಂದು ದೊಡ್ಡ ಅಕ್ರಮ. ಹೀಗೆ ಮಾಡಿ ಸಿಕ್ಕಿಬಿದ್ದರೆ ಅವರ ಚುನಾವಣಾ ಸ್ಪರ್ಧೆಯನ್ನೇ ಚುನಾವಣಾ ಆಯೋಗ ಅನೂರ್ಜಿತಗೊಳಿಸುತ್ತದೆ. ಇಂದು ಮುಖ್ಯಮಂತ್ರಿಯಾಗಿ ಅಧಿಕಾರದ ರುಚಿ ಅನುಭವಿಸುತ್ತಿರುವ ಸಿದ್ದರಾಮಯ್ಯನವರು ಗದ್ದುಗೆ ಅನುಭವಿಸಲು ಯಾವ ರೀತಿ ಅಕ್ರಮದಲ್ಲಿ ಪಾಲ್ಗೊಂಡಿರಬಹುದೆಂಬ ಸಂಶಯ ಕಾಡಲಾರಂಭಿಸಿದೆ.

ಜಿ.ನಾರಾಯಣ ಅವರು ಆಕ್ರೋಶಿತಭರಿತರಾಗಿ ಸ್ವಗತವೆಂಬಂತೆ ಸಮಾರಂಭದಲ್ಲಿ ಹೇಳಿಕೆ ನೀಡುತ್ತಾ ಸಿಎಂ ಸಿದ್ದರಾಮಯ್ಯನವರು ಜೆಡಿಎಸ್ ಬಿಟ್ಟು ಕಾಂಗ್ರೆಸ್‍ಗೆ ಬಂದಾಗ ನಡೆದಂತಹ ಉಪಚುನಾಚಣೆಯಲ್ಲಿ ನಾನೇ ಸ್ವತಃ ದುಡ್ಡು ಹಂಚಿದ್ದೇನೆ. ನನ್ನಲ್ಲಿದ್ದ ಸ್ಯಾಂಟ್ರೋ ಕಾರಿನ ಟೈರ್ನಲ್ಲಿ 4 ಲಕ್ಷ ರೂ. ತೆಗೆದುಕೊಂಡು ಹೋಗಿ ಹಂಚಿದ್ದೇನೆ ಎಂದಿದ್ದಾರೆ. ಜಿ. ನಾರಾಯಣ ಅವರಿಗೆ ಸಿದ್ದರಾಮಯ್ಯನವರು ಸಿಎಂ ಆಗಬೇಕೆಂಬ ಕನಸಂತೆ. ಈಗ ಅವರು ಪ್ರಧಾನಿಯಾಗಬೇಕೆಂಬ ಹಂಬಲವೂ ಅವರಲ್ಲಿದೆ. ಅದಕ್ಕಾಗಿ ಅವರು ಸ್ಯಾಂಟ್ರೋ ಕಾರಿನ ಟೈಯರ್‍ನಲ್ಲಿ ದುಡ್ಡಿಟ್ಟು ಮತದಾರರಿಗೆ ಹಂಚಿದ್ದಾರೆಂದು ಹೇಳಿಕೆ ನೀಡಿದ್ದಾರೆ. ಎಂಥಾ ಐಡಿಯಾ ನೋಡಿ. ಬೇರೆ ರೀತಿ ಹಣ ಸಾಗಾಟ ನಡೆಸಿದರೆ ಸಿಕ್ಕಿಬೀಳುತ್ತಾರೆಂಬ ಭಯದಿಂದ ಈ ರೀತಿ ಟೈರ್‍ನಲ್ಲಿ ದುಡ್ಡಿಡುವ ಖತರ್ನಾಕ್ ಐಡಿಯವನ್ನು ಮಾಡಿದ್ದಾರೆ. ಇದರ ಮೊತ್ತವೆಷ್ಟು ಗೊತ್ತೇ ಬರೋಬ್ಬರಿ ನಾಲ್ಕು ಲಕ್ಷ ರೂಪಾಯಿ. ವೇದಿಕೆಯಲ್ಲಿ ತಿಪಟೂರು ಕಾಂಗ್ರೆಸ್ ಶಾಸಕ ಷಡಕ್ಷರಿ ಇದ್ದರೂ ಜಿ.ನಾರಾಯಣ ಈ ಹೇಳಿಕೆ ನೀಡಿರುವುದು ಚರ್ಚೆಗೆ ಗ್ರಾಸವಾಗಿದ್ದು, ಮಹಾಭ್ರಷ್ಟಾಚಾರವೊಂದು ಬೆಳಕಿಗೆ ಬಂದಂತಾಗಿದೆ.

ಇಷ್ಟೆಲ್ಲಾ ಅಕ್ರಮಗಳನ್ನು ಮಾಡಿದ್ದರೂ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತೆ ಮತ್ತೆ ಯಾಕೆ ಅಧಿಕಾರಕ್ಕೆ ಬರುತ್ತಿದೆ ಎಂಬ ಪ್ರಶ್ನೆ ಹಲವರ ಮಂಡೆಯಲ್ಲಿ ಕೊರೆಯುತ್ತಾ ಇತ್ತು. ಆದರೆ ಜಿ. ನಾರಾಯಣ ಅವರ ಹೇಳಿಕೆಯಿಂದ ಇವರು ಚುನಾವಣೆ ಗೆಲ್ಲುವ ತಂತ್ರ ಬಯಲಾಗಿದೆ. ಇದೊಂದು ಜಸ್ಟ್ ಸ್ಯಾಂಪಲ್ ಅಷ್ಟೆ… ಇನ್ನೆಷ್ಟು ತಂತ್ರಗಳನ್ನು ಮಾಡಿದ್ದಾರೋ ಆ ನಾರಯಣನಿಗೇ ಗೊತ್ತು. ಚುನಾವಣಾ ಆಯೋಗದ ಕಣ್ಣು ತಪ್ಪಿಸಿ ಇಷ್ಟೊಂದು ಮೊತ್ತವನ್ನು ಮತದಾರರಿಗೆ ಹಂಚಿದ್ದರೂ ತನ್ನನ್ನು ಸಿದ್ದು ತನ್ನನ್ನು ಸಂಪೂರ್ಣವಾಗಿ ಮರೆತುಬಿಟ್ಟಿದ್ದಾರೆ ಎಂಬುವುದು ಜಿ.ನಾರಾಯಣನ ಆರೋಪ, ಆಕ್ರೋಶ. ಅದಕ್ಕಾಗಿಯೇ ನಾರಾಯಣ ಮುಂಬರುವ ದಿನಗಳಲ್ಲಿ ತಿಪಟೂರು ಕ್ಷೇತ್ರದಿಂದಲೇ ಸ್ಪರ್ಧಿಸಿ ವಿಧಾನಸೌಧ ಪ್ರವೇಶಿಸುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ. ಆದ್ದರಿಂದ ಅಕ್ರಮದಲ್ಲಿ ಶಾಮೀಲಾದ ಸಿದ್ದರಾಮಯ್ಯ, ಜಿ.ಪಂ ಸದಸ್ಯ ಕಾಂಗ್ರೆಸ್‍ನ ಜಿ.ನಾರಾಯಣ ಹಾಗೂ ಇದರೊಂದಿಗೆ ಶಾಮೀಲಾದ ಇನ್ನು ಹಲವು ಕಾಂಗ್ರೆಸ್ ಮುಖಂಡರ ತನಿಖೆಯನ್ನು ನಡೆಸಿ ಮುಂದಿನ ದಿನಗಳಲ್ಲಿ ಅವರು ಚುನಾವಣೆಗೆ ಸ್ಪರ್ಧಿಸದಂತೆ ನಿಷೇಧ ಹೇರಬೇಕಾಗಿದೆ.

ಸಿದ್ದು ಖುರ್ಚಿ ಗಡಗಡ…!!!

ಒಂದು ರಾಜ್ಯದ ಘನವೆತ್ತ ಮುಖ್ಯಮಂತ್ರಿ ಸ್ಥಾನದಲ್ಲಿರುವ ಸಿದ್ದರಾಮಯ್ಯನವರು ತನ್ನ ಪದವಿಗೆ ಮಾಡಿದ ದ್ರೋಹವಾಗಿದ್ದು, ಇಂಥದೊಂದು ಅಕ್ರಮವೆಸಗಿದ
ಸಿದ್ದರಾಮಯ್ಯನವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಬೇಕಾಗಿದೆ. ಈ ಪ್ರಕರಣವನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿ ಸ್ಪರ್ಧಿಸದಂತೆ ನೋಡಿಕೊಳ್ಳಬೇಕಾಗಿದೆ. ಅಲ್ಲದೆ ಇದೊಂದು ಅತ್ಯಂತ ಗಂಭೀರ ಪ್ರಕರಣವಾಗಿರುವುದರಿಂದ ತಕ್ಷಣ ಹುದ್ದೆಗೆ ರಾಜೀನಾಮೆ ನೀಡಿ ಮುಖ್ಯಮಂತ್ರಿ ಸ್ಥಾನದಿಂದ ಮುಕ್ತರಾಗಬೇಕಾಗಿದೆ. ಈ ಪ್ರಕರಣ ಚರ್ಚೆಗೆ ಗ್ರಾಸವೊದಗಿಸಿದ್ದು, ಹಣ ಹಂಚಿರುವುದನ್ನು ಸ್ವತಃ ಹಣ ಹಂಚಿಕೊಂಡ ನಾರಾಯಣ ಅವರೇ ಒಪ್ಪಿಕೊಂಡಿರುವುದರಿಂದ ಅವರ ಹೇಳಿಕೆಯನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಬೇಕಾಗಿದೆ.

ಚುನಾವಣಾ ಸಂದರ್ಭದಲ್ಲಿ ಮತದಾರರನ್ನು ಸೆಳೆಯಲು ಮಾಡುವ ಅಕ್ರಮಗಳನ್ನು ತಪ್ಪಿಸಲು ಚುನಾವಣಾ ಆಯೋಗ ಅಭ್ಯರ್ಥಿಗಳ ಮೇಲೆ ಹದ್ದಿನ ಕಣ್ಣಿಟ್ಟಿರುತ್ತದೆ. ಅಲ್ಲದೆ ನಾನಾ ಕ್ರಮಗಳನ್ನು ಕೈಗೊಳ್ಳುತ್ತದೆ. ಅಕ್ರಮದಲ್ಲಿ ಸಿಕ್ಕಿಬಿದ್ದವರನ್ನು ಚುನಾವಣೆಯಿಂದ ಸ್ಪರ್ಧಿಸದಂತೆ ಮಾಡಲಾಗುತ್ತದೆ. ಇದು ದೇಶದ ಪ್ರಜಾಪ್ರಭುತ್ವ ಆಶಯಕ್ಕೆ ಮಾಡಿದ ದೊಡ್ಡ ದ್ರೋಹವಾಗಿದೆ. ಆದ್ದರಿಂದ ಸಿದ್ದರಾಮಯ್ಯನವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ಜೊತೆಗೆ ಮುಂದೆಂದಿಗೂ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದಾಗಿದೆ.

ಈ ಪ್ರಕರಣವನ್ನು ಮುಂದಿಟ್ಟುಕೊಂಡು ಬಿಜೆಪಿ, ಜೆಡಿಎಸ್ ಮುಖ್ಯವಾಗಿ ದೇಶದ ಪ್ರಜ್ಞಾವಂತ ನಾಗರಿಕರು ಬೀದಿಗಿಳಿದು ಹೋರಾಟ ನಡೆಸುವ ಕಾಲ ಪಕ್ವವಾಗಿದೆ.
ಇಲ್ಲವಾದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಅಕ್ರಮಗಳಿಗೆ ಮುನ್ನುಡಿ ಬರೆದಂತಾಗುತ್ತದೆ. ಚುನಾವಣೆ ಗೆಲ್ಲಲು ಕಾಂಗ್ರೆಸ್‍ನವರು ಅಕ್ರಮದಲ್ಲಿ ಪಾಲ್ಗೊಂಡಿರುವುದು
ಸಾಬೀತಾಗಿದ್ದು, ಸಂವಿಧಾನದ ಆಶಯಗಳಿಗೆ ಧಕ್ಕೆ ಉಂಟಾಗಿದೆ. ದೇಶದಲ್ಲಿ ಕಾಂಗ್ರೆಸ್ ಗೆಲ್ಲುವುದಿಲ್ಲ ಎಂದು ಗೊತ್ತಾದಾಗ ಅದಕ್ಕಾಗಿ ಹಣ ಹಂಚಲೂ ಸಿದ್ಧವಿರುವ ಅದರ ಅಭ್ಯರ್ಥಿಗಳು ಅದಕ್ಕಾಗಿ ನಾನಾ ರೀತಿಯ ವಾಮಮಾರ್ಗಗಳನ್ನು ಅನುಸರಿಸುತ್ತಿರುವುದು ಕೊನೆಗೂ ಸಾಬೀತಾಗಿದೆ. ಆದ್ದರಿಂದ ಈ ಅಕ್ರಮದಲ್ಲಿ ಯಾರೆಲ್ಲಾ ಪಾಲ್ಗೊಂಡಿದ್ದಾರೋ ಅವರನ್ನೆಲ್ಲಾ ಮುಂದೆ ಎಂದಿಗೂ ಸ್ಪರ್ಧಿಸಲು ಚುನಾವಣಾ ಆಯೋಗ ಅವಕಾಶ ನೀಡಬಾರದು. ಜೊತೆಗೆ ಅವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

source:http://publictv.in/i-had-carried-bundles-of-notes-in-the-tyre-of-car-during-siddaramaiahs-election-says-zilla-panchayath-member/

-ಚೇಕಿತಾನ

Tags

Related Articles

Close