ಅಂಕಣಪ್ರಚಲಿತರಾಜ್ಯ

ಸಿದ್ದರಾಮಯ್ಯ ಸರಕಾರದಿಂದ ಮತ್ತೊಂದು ಭ್ರಷ್ಟಾಚಾರ!! ಅತಿಥಿಗೃಹವಿದ್ದರೂ ಗಣ್ಯರಿಗೆ ತಂಗಲು ಸ್ಟಾರ್ ಹೋಟೆಲ್ ಭಾಗ್ಯ!!

ಜನರು ಪೈಸೆ ಪೈಸೆ ಲೆಕ್ಕದಲ್ಲಿ ಸರಕಾರಕ್ಕೆ ತೆರಿಗೆ ಕಟ್ತಾರೆ, ಆದ್ರೆ ಕರ್ನಾಟಕದ ಸಿದ್ದರಾಮಯ್ಯನ ಸರಕಾರ ಆ ಹಣದಿಂದ ಮಾಡುವುದೇನು? ಒಂದು ಕಡೆ ರಾಜ್ಯದಲ್ಲಿ ಜನರು ಬರದಿಂದ ತತ್ತರಿಸುತ್ತಿದ್ದರೆ, ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ಮಾತ್ರ ಅದರ ಕ್ಯಾರೇ ಇಲ್ಲ. ಜನರ ತೆರಿಗೆಯನ್ನು ದುರುಪಯೋಗಪಡಿಸಿ ಆ ಹಣದಿಂದ ಭರ್ಜರಿ ಮಜಾ ಉಡಾಯಿಸಿದೆ. ಇದಕ್ಕೊಂದು ಹೊಸ ಸೇರ್ಪಡೆ ಸ್ಟಾರ್‍ಹೋಟೆಲ್ ಭಾಗ್ಯ.

ರಾಜ್ಯಕ್ಕೆ ಬರುವ ಗಣ್ಯರಿಗೆ ತಂಗಲೆಂದು ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಅದ್ಧೂರಿ ಅತಿಥಿ ಗ್ರಹವಿದೆ. ಆದರೆ ಇದರ ಉಪಯೋಗ ಮಾತ್ರ ಶೂನ್ಯ. ರಾಜ್ಯಕ್ಕೆ ಬರುವ ಗಣ್ಯರಿಗೆ ಅತಿಥಿಗೃಹದಲ್ಲಿ ಸತ್ಕರಿಸುವ ಬದಲು ಸ್ಟಾರ್ ಹೋಟೆಲ್‍ಗಳಲ್ಲಿ ಸತ್ಕಾರ ಮಾಡಲಾಗುತ್ತದೆ. ಇದರಿಂದ ಸರಕಾರಕ್ಕೆ ಆದ ನಷ್ಟವೆಷ್ಟು ಗೊತ್ತಾ? ಬರೋಬ್ಬರಿ ಒಂದೂವರೆ ಕೋಟಿ ರೂಪಾಯಿ…

ಬೆಂಗಳೂರಿನ ಶೇಷಾದಿಪುರಂನಲ್ಲಿ ಕೋಟ್ಯಂತರ ರೂ ವೆಚ್ಛದಲ್ಲಿ ಅತಿಥಿಗೃಹವೊಂದನ್ನು ನಿರ್ಮಿಸಲಾಗಿದೆ. ಕುಮಾರ ಕೃಪ ಅತಿಥಿ ಗೃಹ ಎಂದು ಅದರ ಹೆಸರು. ಉತ್ತಮ ಸೌಕರ್ಯ ಹೊಂದಿರುವ ಈ ಗೆಸ್ಟ್‍ಹೌಸ್‍ನ ಉಪಯೋಗ ಮಾತ್ರ ಶೂನ್ಯ. ಯಾಕೆಂದರೆ ಅಧಿಕಾರಿಗಳು ಮಾತ್ರ ಇಲ್ಲಿಗೆ ಬರುವ ಗಣ್ಯ ಅಥಿತಿಗಳನ್ನು ಇಲ್ಲಿ ಸತ್ಕರಿಸುವ ಬದಲು ಸ್ಟಾರ್ ಹೋಟೆಲ್‍ಗಳಲ್ಲಿ ವ್ಯವಸ್ಥೆ ಮಾಡ್ತಾರೆ. ಸ್ಟಾರ್ ಹೋಟೆಲ್‍ಗಳಲ್ಲಿ ತಂಗುವವರಿಗೇನು, ಎಲ್ಲವೂ ಪುಕ್ಕಟೆ ಸಿಗುವಾಗ ತಿಂದುಂಡು, ಕುಡಿದು ಸಖತ್ ಎಂಜಾಯ್ ಮಾಡ್ತಾರೆ. ಇದೇ ರೀತಿ ಕಳೆದ ನಾಲ್ಕು ವರ್ಷಗಳಿಂದ ನಡೆಯುತ್ತಾ ಬರುತ್ತಿದ್ದು, ಸರಕಾರಿ ಖಜಾನೆಗೆ ಆದ ನಷ್ಟ ಮಾತ್ರ ಬರೋಬ್ಬರಿ ಒಂದೂವರೆ ಕೋಟಿ ರೂಪಾಯಿ.

ಹಲವು ಭಾಗ್ಯಗಳನ್ನು ಕರುಣಿಸುವ ಸಿದ್ದರಾಮಯ್ಯನ ಸರಕಾರ ಇನ್ನೊಂದು ಭಾಗ್ಯವಾದ ಸ್ಟಾರ್ ಹೋಟೆಲ್ ಭಾಗ್ಯ ಹತ್ತರಲ್ಲಿ ಹನ್ನೊಂದು ಎಂದು ಮುಚ್ಚಿಹೋಗಿರುತ್ತಿತ್ತು. ಆದರೆ ಸಾಮಾಜಿಕ ಹೋರಾಟಗಾರ ಮರಿಲಿಂಗೇಗೌಡ ಮಾಲಿ ಪಾಟೀಲ್ ಅವರು ಆರ್‍ಟಿಐ ಕಾಯಿದೆಯಡಿ ಮಾಹಿತಿ ಪಡೆದು ಸರಕಾರದ ಸ್ಟಾರ್ ಹೋಟೆಲ್ ಭಾಗ್ಯವನ್ನು ಬಯಲಿಗೆಳೆದಿದ್ದಾರೆ.

ಇನ್ನು ಕುಮಾರ ಕೃಪ ಅತಿಥಿ ಗೃಹವೂ ಯಾವ ಸ್ಟಾರ್ ಹೋಟೆಲ್‍ಗಿಂತಲೂ ಕಮ್ಮಿ ಇಲ್ಲ. ಯಾಕೆಂದರೆ ಈ ಅತಿಥಿ ಗೃಹದಲ್ಲಿ ಲಕ್ಸುರಿ 12 ವಿವಿಐಪಿ ರೂಂಗಳಿದೆ. 26 ಸಾಮಾನ್ಯ ರೂಂಗಳಿದೆ. ಇಷ್ಟೆಲ್ಲಾ ಸೌಕರ್ಯ ಇದ್ರೂ ತಾಜ್‍ವೆಸ್ಟ್  ಎಂಡ್, ದಿ ಕ್ಯಾಪಿಟಲ್, ಐಟಿಸಿ ಗಾರ್ಡೇನೀಯಾ, ಲಲಿತ ಮಹಲ್, ವಿಂಡ್ಸರ್ ಮ್ಯಾನರ್ ಸ್ಟಾರ್ ಹೋಟೆಲ್‍ಗಳಲ್ಲೇ ರೂಂ ಬುಕ್ ಮಾಡಿ ಲಕ್ಷಾಂತರ ರೂ. ಬಿಲ್ ಪಾವತಿಸಲಾಗಿದೆ. ಜೊತೆಗೆ ಅತಿಥಿಗೃಹದ ನಿರ್ವಹಣೆಗೂ ಸರಕಾರ ಕೋಟ್ಯಂತರ ಹಣವನ್ನು ಸರಕಾರ ವ್ಯಯಿಸುತ್ತದೆ. ಈ ರೀತಿ ಸರಕಾರದ ಹಣವನ್ನು ಕೊಳ್ಳೆಹೊಡೆಯುವುದನ್ನು ಮರಿಲಿಂಗೇ ಗೌಡ ಮಾಲೀ ಪಾಟೀಲ್ ಆರ್‍ಟಿಐ ಕಾಯಿದೆಯಡಿ ಮಾಹಿತಿ ಪಡೆದಿದ್ದಾರೆ.

ಗಣ್ಯರಿಗೆ ತಂಗಲು ವ್ಯವಸ್ಥೆ ಮಾಡುವ ಹೋಟೆಲ್‍ಗಳೆಲ್ಲಾ ಸಾಮಾನ್ಯ ಹೋಟೆಲ್‍ಗಳಲ್ಲ, ಸ್ವತಃ ಸ್ವರ್ಗವೇ ನಾಚುವಷ್ಟು ಇಲ್ಲಿ ವ್ಯವಸ್ಥೆ ಇರುತ್ತದೆ. ಸಾಕಷ್ಟು ದುಬಾರಿ ಖರ್ಚು ಮಾಡಿಕೊಂಡು ಬಡಜನರ ಹಣವನ್ನು ಲೂಟಿ ಮಾಡುವ ಇಂಥಾ ಸರಕಾರದ ಬದ್ಧತೆಯನ್ನು ಜನರು ಪ್ರಶ್ನಿಸಬೇಕಾಗಿದೆ. ಬಡವರು ಒಂದು ಹೊತ್ತಿನ ಊಟಕ್ಕಾಗಿ ಕಷ್ಟ ಪಡುತ್ತಿದ್ದರೆ, ಸರಕಾರ ಮಾತ್ರ ಬಡವರು ಕಟ್ಟುವ ಹಣದಿಂದ ತಿಂದುಂಡು ತೇಗಿ ಮೋಜು ಮಸ್ತಿಯಲ್ಲಿ ತೊಡಗಿದೆ. ಆದ್ದರಿಂದ ರಾಜ್ಯದ ಜನರ ರಕ್ತಹೀರುವ ಕಾಂಗ್ರೆಸ್ ಸರಕಾರಕ್ಕೆ ಜನರು ಮುಂದಿನ ಚುನಾವಣೆಯಲ್ಲಿ ಸರಿಯಾದ ಪಾಠ ಕಲಿಸಲೇಬೇಕು.

ಚೇಕಿತಾನ

Tags

Related Articles

Close