ಅಂಕಣ

ಸಿದ್ದು ದರ್ಬಾರ್‍ನಲ್ಲಿ ಕಾಮುಕರ, ಭ್ರಷ್ಟರ, ಖದೀಮರ, ಜಿಹಾದಿಗಳ ಒಡ್ಡೋಲಗ! ಸಿದ್ದರಾಮಯ್ಯ ಆಡಳಿತದ ಕಂತೆಕಂತೆ ಅನ್ಯಾಯಗಳ ಪಟ್ಟಿ ಇಲ್ಲಿದೆ!

ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರು ಅಧಿಕಾರದ ಗದ್ದುಗೆಯನ್ನು ಹಿಡಿದ ನಂತರ ಕರ್ನಾಟಕ ಕಾಂಗ್ರೆಸ್ ಆಡಳಿತದಲ್ಲಿ ಏನೆಲ್ಲಾ ನಡೆಯಿತು, ಏನೆಲ್ಲಾ ಅವ್ಯವಹಾರಗಳು ನಡೆಯಿತು ಎನ್ನುವುದನ್ನು ಪಟ್ಟಿ ಮಾಡಿದರೇ ಅದು ಮುಗಿಯದ ಅಧ್ಯಾಯ ಎಂದೆನಿಸುತ್ತದೆ!!

ಹೌದು.. ಇನ್ನು ಸಿಎಂ ಸಿದ್ದರಾಮಯ್ಯ ಅವರ ದರ್ಬಾರ್ ನಲ್ಲಿ ಹಗರಣಗಳ ಮೇಲೆ ಹಗರಣಗಳು ನಡೆದಿದ್ದಲ್ಲದೇ, ಕೇವಲ ಚಾ, ಕಾಫಿ, ಬಿಸ್ಕೆಟ್‍ಗಾಗಿ ಕೋಟಿಯಾಂತ್ಯರ ಹಣವನ್ನು ವ್ಯಯಿಸಿರುವ ಇವರು, ಇನ್ನು ಇವರ ನೆಚ್ಚಿನ ಶಾಸಕರ ಬಂಡವಾಳವನ್ನು ಹೊರತೆಗೆದರೆ ಸಾಲು ಸಾಲು ಹಗರಣಗಳು, ವಿವಾದಗಳು ಕಾಣುತ್ತಲೇ ಹೋಗುತ್ತವೆ!! ಆದರೆ ಕೆಲವು ವಿಚಾರಗಳ ಬಗ್ಗೆ ಮಾತಾನಾಡುವುದಾದರೇ…. ಕರ್ನಾಟಕದಲ್ಲಿ ಕಾಂಗ್ರೆಸ್ಸಿಗರು ತಮ್ಮ ಅಧಿಕಾರದ ಗದ್ದುಗೆಯನ್ನು ಹಿಡಿದ ನಂತರ ಮಾಡಿರುವ ವಿಶೇಷ ಸಾಧನೆಗಳನ್ನು ನೋಡಿದಾಗ ಅಯ್ಯೋ.. ಇವರಿಗೆ ಓಟು ಹಾಕಿ ಗೆಲ್ಲಿಸಿದವರು ನಾವೇಯೇ?? ಎನ್ನುವ ಪಶ್ಚತ್ತಾಪದ ಕೂಗು ಬಂದರೂ ಬರಬಹುದೇನೋ?

ಯಾಕೆಂದರೆ, ತಮ್ಮ ಪಕ್ಷದ ನಾಯಕರುಗಳನ್ನು ಸಮರ್ಥಿಸಿಕೊಂಡು, ಏನೇ ನಡೆದರೂ ಕೂಡ ಅದೇ ಸರಿಯೆಂದು ಸಮರ್ಥಿಸಿ, ಸುಳ್ಳಿನ ಮೇಲೆ ಗೋಡೆಗಳನ್ನು ಹೆಣೆಯುತ್ತಾ, ತಪ್ಪುಗಳನ್ನು ಮರೆಮಾಚುತ್ತಾ ಸಾಗುತ್ತಿರುವ ಸಿದ್ದರಾಮಯ್ಯ ಅವರೇ, ಬಿಜೆಪಿ ಸರಕಾರದ ವಿರುದ್ಧ ತೊಡೆ ತಟ್ಟಿ ಬಳ್ಳಾರಿಗೆ ಪಾದಯಾತ್ರೆ ಮಾಡಿದಾಗ ಏನೋ ಕರ್ನಾಟಕಕ್ಕೊಂದು ಹೊಸ ಆಶಾಕಿರಣ, ಹೊಸ ನಾಯಕತ್ವ ಸಿಕ್ಕಿತು ಅಂತ ಖುಷಿ ಪಟ್ಟಿದ್ದವರೇ ಹೆಚ್ಚು.. ಆದರೆ ನೀವು ಮಾಡಿದ್ದರೂ ಏನು?? ಇನ್ನು, ನಿಮ್ಮ ಸರಕಾರ ಕಳೆದ ನಾಲ್ಕು ವರ್ಷಗಳಲ್ಲಿ ಅಧಿಕಾರದ ಗದ್ದುಗೆಯನ್ನು ಹಿಡಿದಿದ್ದರೂ ಕೂಡ ಜನತೆಗೋಸ್ಕರ ನೀವೇನು ಮಾಡಿದ್ದೀರಾ?

ಕರ್ನಾಟಕದಲ್ಲಿ ಕಾಂಗ್ರೆಸ್ಸಿಗರು ಮಾಡಿರುವ ಕೆಲವು ಘನಂದಾರಿ ಕೆಲಸಗಳ ಬಗ್ಗೆ ಅವರೇ ಸಮರ್ಥಿಸಿಗೊಂಡಿರುವ ಕೆಲ ವಿಚಾರಗಳಾವುವು ಗೊತ್ತೇ??!!

ಹೌದು… ಕರ್ನಾಟಕದಲ್ಲಿ ನಡೆದ ಹಗರಣಗಳನ್ನು ಕೆದಕುತ್ತಾ ಹೋದರೆ, ಅದರಲ್ಲಿರುವ ಸತ್ಯಾಂಶಗಳು ಕಂಡು ಬಂದರೂ ಕೂಡ ಸಿದ್ದರಾಮಯ್ಯ ಅವರು ತುಟಿಕ್ ಪಿಟಿಕ್ ಎನ್ನದೇ, ಅದನ್ನು ಸರಿ ಎಂದೇ ಸಮರ್ಥಿಸಿಕೊಂಡರು ಬಂದಿದ್ದಾರೆ. ಈ ಬಗ್ಗೆ ಹೇಳುವುದಾದರೇ: ಬಾಗಲಕೋಟೆ ಶಾಸಕ ಎಚ್.ವೈ.ಮೇಟಿಯವರ ವಿಚಾರವನ್ನು ಕೆದಕುವುದಾದರೆ, ಮಹಿಳೆ ಜತೆ ರಾಸಲೀಲೆ ನಡೆಸಿ ಸಿಕ್ಕಿ ಬಿದ್ದಿದ್ದು, ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು. ಆದರೆ ಅದಕ್ಕೆ ತಂದೆ- ಮಗಳ ಸಂಬಂಧವನ್ನು ಕಲ್ಪಿಸಿಕೊಡಲಾಗಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಇದಲ್ಲದೇ, ಸ್ವಾತಂತ್ರೋತ್ಸವದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕ ವಿಧಾನ ಪರಿಷತ್ ಮಹಿಳಾ ಸದಸ್ಯೆಯ ಕೈ ಸವರಿ ಅಸಭ್ಯವಾಗಿ ವರ್ತಿಸಿ ಸಿಕ್ಕಿ ಬಿದ್ದರೆ, ಅದಕ್ಕೆ ಅಣ್ಣ-ತಂಗಿ ಎನ್ನುವ ಸಂಬಂಧವನ್ನೂ ಕೂಡ ಕಲ್ಪಿಸಿಕೊಟ್ಟಿದ್ದಾದರೂ ಯಾಕೆ??!!!

ಇವಿಷ್ಟೇ ಅಲ್ಲದೇ, ಸರಕಾರಿ ಕಾರ್ಯಕ್ರಮವೊಂದರಲ್ಲಿ ನಿಮ್ಮದೇ ಪಕ್ಷದ ಸಚಿವರಾದ ತನ್ವೀರ್ ಸೇಠ್, ತನ್ನ ಮೊಬೈಲ್ ನಲ್ಲಿ ನೀಲಿ ಚಿತ್ರ ವೀಕ್ಷಿಸುತ್ತಿದ್ದರೆ, ಅದನ್ನು ತನ್ನ ಸ್ನೇಹಿತರು ಕಳುಹಿಸಿದ ಚಿತ್ರವೆಂದು ತಾನು ನೋಡಿದ್ದು ಎಂದು ಸಮರ್ಥನೆಯನ್ನೂ ನೀಡಿದರು. ಇನ್ನು ಸಚಿವ ಡಿ.ಕೆ.ಶಿ. ಮನೆಗೆ ಐ.ಟಿ. ದಾಳಿ ನಡೆದು ಅಪಾರ ಅಕ್ರಮ ಆಸ್ತಿ ಪತ್ತೆಯಾದರೂ ಕೂಡ ಅದು ದ್ವೇಷದ ರಾಜಕೀಯ ಎಂದು ಎಲ್ಲೆಡೆ ಇಲ್ಲಸಲ್ಲದ ಆರೋಪವನ್ನು ಮಾಡಿರೋದು ಎಷ್ಟರ ಮಟ್ಟಿಗೆ ಸಮಂಜಸ ನೀವೇ ಹೇಳಿ!!

ಇನ್ನು ಸಿದ್ದರಾಮಯ್ಯನವರು 70 ಲಕ್ಷದ ಹೂಬ್ಲೊಟ್ ವಾಚ್ ಹಾಕಿಕೊಂಡು ಮೆರೆಯತ್ತಿದ್ದರೆ ಅದು ಕೂಡ ತನ್ನ ಸ್ನೇಹಿತ ಕೊಟ್ಟಿರುವ ಉಡುಗೊರೆ ಎಂದು ಹೇಳಲಾಯಿತು. ತದನಂತರದಲ್ಲಿ ಕಲ್ಲಡ್ಕದ ಬಡ ಮಕ್ಕಳ ಅನ್ನ ಕಸಿದು ದ್ವೇಷ ಸಾಧಿಸುತ್ತಿರುವ ಸಚಿವ ರಮಾನಾಥ ರೈ ಯವರ ಅವಿವೇಕಿ ಕ್ರಮಕ್ಕೆ ಕಾನೂನು ಬದ್ದ ನಿಲುವವನ್ನು ಹೊಂದಿದೆ ಎನ್ನುವ ಚಿತ್ರಣವನ್ನು ಕೂಡ ನೀಡಲಾಯಿತು!!! ಈ ರೀತಿ ಮಾಡಿದ್ದು ಸರಿಯೇ??

ದಕ್ಷ ಅಧಿಕಾರಿಗಳಿಗೆ ನಿಮ್ಮ ಸರಕಾರದಲ್ಲಿ ಸಿಕ್ಕಿದ್ದು ಮರಣಭಾಗ್ಯವೇ??

ಇದಷ್ಟೇ ಅಲ್ಲದೇ, ಕರ್ನಾಟಕದ ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಅದೆಷ್ಟೋ ದಕ್ಷ ಅಧಿಕಾರಿಗಳಿಗೆ ಮರಣ ಭಾಗ್ಯಗಗಳೇ ಸಂಭವಿಸಿತು!! ಹಾಗಾದರೆ ದಕ್ಷ ಅಧಿಕಾರಿಗಳಿಗೆ ನಿಮ್ಮ ಸರಕಾರದಲ್ಲಿ ಬದುಕಲು ಅವಕಾಶವೇ ಇಲ್ಲವೇ?? ಯಾಕೆಂದರೆ ಈ ನಾಲ್ಕು ವರ್ಷಗಳ ಅವಧಿಯಲ್ಲಿ ದಕ್ಷ ಅಧಿಕಾರಿಗಳ ಸಾವುಗಳು ಸಂಭವಿಸಿದ್ದಲ್ಲದೇ ಅಧಿಕಾರಿಗಳ ವ್ಯವಸ್ಥೆಯ ವಿರುದ್ದ ಪ್ರತಿಭಟನೆ ಮಾಡಿ, ಅದು ವಿಪಕ್ಷದ ಪಿತೂರಿ ಎಂದು ದೂರಲು ಆರಂಭಿಸಿದರು. ಇನ್ನೂ ಕಾರಾಗೃಹದಲ್ಲಿ ಲಂಚಾವತಾರದಲ್ಲಿ ಸಿಕ್ಕಿಬಿದ್ದರೆ ಅದರ ನಿಸ್ಪಕ್ಷ ವಿಚಾರಣೆಗಾಗಿ ಐಪಿಎಸ್ ರೂಪಾ ಅವರನ್ನೇ ವರ್ಗಾವಣೆ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ.

ಇನ್ನು, ಲಿಂಗಾಯಿತ ವೀರಶೈವ ಪ್ರತ್ಯೇಕ ಧರ್ಮದ ವಿಚಾರವಾಗಿ ಅದೆಷ್ಟೋ ಆಟಗಳನ್ನು ಆಡಿ, ಮುಸಲ್ಮಾನ ಓಲೈಕೆಗೆ ಟಿಪ್ಪು ಜಯಂತಿಯನ್ನು ಆಚರಿಸಲು ಸೂಚನೆ ನೀಡಿರುವುದರ ಜೊತೆಗೆ ಟಿಪ್ಪು ಒಬ್ಬ ದೇಶಪ್ರೇಮಿ ಎನ್ನುವ ಪಟ್ಟವನ್ನೂ ಕೊಟ್ಟುಬಿಟ್ಟಿರಿ… ಇವೆಲ್ಲಾ ಕೂಡ ನಿಮ್ಮ ರಾಜಕೀಯ ಚದುರಂಗದಾಟದ ದಾಳಗಳನ್ನಾಗಿ ಉಪಯೋಗಿಸಿ ಎಲ್ಲವನ್ನೂ ತಮ್ಮ ಸ್ವಾರ್ಥಕ್ಕಾಗಿಯೇ ಬಳಸಿದಿರಿ!!

ನಿಮ್ಮ ಸಹೋದ್ಯೋಗಿ ಆಂಜನೇಯ ಅವರ ಮನೆಯಲ್ಲಿಯೇ ಲಂಚ ಸ್ವೀಕಾರ ಮಾಡುವಾಗ ಏನೂ ಕೂಡ ಅನಿಸಲೇ ಇಲ್ಲ!! ಆದರೆ ರಾಜ್ಯದ ಅಧಿಕಾರಿಗಳಾದ ಡಿ.ಕೆ ರವಿ, ಕಲ್ಲಪ್ಪ ಹಂಡಿಭಾಗ್, ಗಣಪತಿ ಆತ್ಮಹತ್ಯೆ ಆದಾಗ ಈ ವ್ಯವಸ್ಥೆ ಇನ್ನಾದರೂ ಸರಿ ಆಗಬೇಕು ಅನ್ನುವ ಕನಿಷ್ಠ ವಿಷಯವಾದರೂ ನಿಮಗೆ ಹೊಳೆಯಲಿಲ್ಲ ಎಂದಾದರೆ, ನಿಮ್ಮ ಆಡಳಿತಾವಧಿಯಲ್ಲಿ ಪ್ರಾಮಾಣಿಕರಿಗೆ ಬದುಕಲು ಅವಕಾಶಗಳೇ ಇಲ್ಲವೇ??

ಮಹಿಳೆಯರ ಬಗ್ಗೆ ನಿಮಗೆಷ್ಟು ಗೌರವ ಇದೆ ಎನ್ನುವುದನ್ನು ನಾ ಕಾಣೆ!! ಯಾಕೆಂದರೆ ಮೈಸೂರಲ್ಲಿ ಐ.ಎ.ಎಸ್ ಅಧಿಕಾರಿ ಶಿಖಾ ಮೇಲೆ ನಿಮ್ಮ ಆಪ್ತ ಕೈ ಮಾಡಿದಾಗ ಕನಿಷ್ಠ ಪಕ್ಷ ಅದನ್ನು ಖಂಡಿಸುವ ಮಾತಾದ್ರೂ ನಿಮ್ಮ ಬಾಯಿಂದ ಬರ್ಲಿಲ್ಲ. ಅನುಪಮಾಗೆ ನಿಮ್ಮಿಂದ ನ್ಯಾಯ ಕೊಡ್ಲಿಕ್ಕೆ ಆಗ್ಲಿಲ್ಲಾ. ಇನ್ನು ರಶ್ಮಿಗೆ ಚಪ್ಪಲಿ ಎಸೆದಾಗ ತುಟಿಕ್ ಪಿಟಿಕ್ ಎನ್ನದೇ ಮೌನವನ್ನೇ ಕಾಪಾಡಿದರಲ್ಲ… ಮಾನ್ಯ ಮುಖ್ಯಮಂತ್ರಿಗಳೇ… ಯಾಕೆ?? ಎಲ್ಲರೂ ನಿಮ್ಮಂತೆಯೇ ಮನುಷ್ಯರಲ್ಲವೇ!!

ನೀವು ಕಳೆದ ನಾಲ್ಕುವರೆ ವರ್ಷದಲ್ಲಿ ನಿಮ್ಮ ರಾಜ್ಯದ ಜನತೆಗೆ ಮಾಡಿದ್ದಾದರೂ ಏನು?

ಅಧಿಕಾರಕ್ಕೆ ಬಂದ ಕೂಡಲೇ ಪಿ.ಎಫ್.ಐ, ಕೆ.ಎಫ್.ಡಿ ಸಂಘಟನೆಗಳ ಕಾರ್ಯಕರ್ತರ ಮೇಲಿನ ಕೇಸ್‍ಗಳನ್ನು ಹಿಂದಕ್ಕೆ ಪಡೆದ ನೀವು, ಈ ಕಾರ್ಯಕರ್ತರನ್ನು ದೇಶ ಕಾಯುವ ಸೈನಿಕರೆಂದು ಭಾವಿಸಿದಿರೋ ನಾ ಕಾಣೆ!! ಆದರೆ ಪಿ.ಎಫ್.ಐ, ಕೆ.ಎಫ್.ಡಿ ಉಗ್ರ ಸಂಘಟನೆಗಳ ಮೇಲೆ ಒಲವನ್ನು ತೋರುತ್ತಿರುವ ನಿಮಗೆ ರಾಜ್ಯದಲ್ಲಿ 19 ಹಿಂದೂ ನಾಯಕರ ಕೊಲೆಯಾಯಿತಲ್ಲ, ಆ ಸಂದರ್ಭದಲ್ಲಿ ಕಿಂಚಿತ್ತೂ ಕೂಡ ಮಾನವೀಯತೆಯನ್ನೇ ತೋರಲೇ ಇಲ್ಲ ಯಾಕೆ? ಇವರೇನು ಪಿ.ಎಫ್.ಐ, ಕೆ.ಎಫ್.ಡಿ ಉಗ್ರಗಳಲ್ಲ ಎಂಬುವುದಕ್ಕಾಗಿಯೇ??

ಇನ್ನು ಟಿಪ್ಪು ಸುಲ್ತಾನ್ ಎಂಬ ಮತಾಂಧನ ಹುಟ್ಟುಹಬ್ಬವನ್ನು ಮಾಡಿದಿರಲ್ಲ ಅವರೇನು ನಿಮ್ಮ ವಂಶಸ್ಥರೇ? ಅಥವಾ ಭಾರತ ರತ್ನ ಪುರಸ್ಕೃತನೇ? ಎನ್ನುವುದು ಮಾತ್ರ ಗೊತ್ತಾಗುತ್ತಿಲ್ಲ. ಯಾಕೆಂದರೆ, “ಟಿಪ್ಪುಸುಲ್ತಾನ ಒಬ್ಬ ಮತಾಂಧ, ಸಾವಿರಾರು ಹಿಂದೂ ದೇವಾಲಯ, ಚರ್ಚ್‍ಗಳನ್ನು ಧ್ವಂಸ ಮಾಡಿ ಲಕ್ಷಾಂತರ ಹಿಂದೂ ಕ್ರೈಸ್ತರನ್ನು ಕೊಲೆ ಮಾಡಿದ ಕ್ರೂರಿಯಾಗಿದ್ದ ಈತ, ಕನ್ನಡ ಭಾಷೆಯ ಬದಲಾಗಿ ಪರ್ಶಿಯನ್ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಮಾಡಿದ” ಎಂದು ಎಡಪಂಥೀಯರೇ ಬರೆದಿರುವ ಬಹುತೇಕ ಕೃತಿಗಳಲ್ಲಿ ಉಲ್ಲೇಖಿತವಾಗಿದೆ!! ಆದರೂ ನಿಮಗೆ ಟಿಪ್ಪು ಒಬ್ಬ ದೇಶಪ್ರೇಮಿ ಎಂದನಿಸಿತು. ಅದು ಬಿಡಿ ರಾಜ್ಯದಲ್ಲಿ ಜಾತಿ ಜಾತಿ ಮದ್ಯೆ ಒಡಕು ತಂದು ಒಬ್ಬರ ಮುಖ ಒಬ್ಬರು ನೋಡದ ಹಾಗೆ ಮಾಡಿ ಬಿಟ್ಟಿರಲ್ಲ ಇದೆಷ್ಟು ಸರಿ??

ಇನ್ನೊಂದು ವಿಚಾರದಲ್ಲಿ ಲೋಕಾಯುಕ್ತವನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸಿ ನಿಮ್ಮ ಸುಪರ್ದಿಯಲ್ಲಿ ಎಸಿಬಿ ರಚಿಸಿ ಜನರ ವಿಶ್ವಾಸಕ್ಕೆ ಮಣ್ಣಾಹಾಕಿದರಲ್ಲ ನಿಮ್ಮ ಸ್ವಾರ್ಥ ಸಾಧನೆಗೆ ಏನು ಹೇಳಬೇಕು ನೀವೇ ಹೇಳಿ!! ಇದಷ್ಟೇ ಅಲ್ಲದೇ, ಒಂದು ಸಾವಿರಕ್ಕಿಂತ ಹೆಚ್ಚು ರೈತರ ಆತ್ಮಹತ್ಯೆ ಆಯಿತಲ್ಲಾ ಅವರ ಬಗ್ಗೆ ನಿಮಗಿರುವ ಕಾಳಜಿ ಎಂದರೆ, ಕೇವಲಾ 50,000 ರೂಪಾಯಿಗಳ ಸಾಲಮನ್ನಾವೇ?? ದೇಶದ ಬೆನ್ನೆಲುಬು ಎಂದು ಕರೆಯುವ ರೈತರಿಗೂ ಸಾಲಮನ್ನಾದ ಭರವಸೆಯನ್ನು ನೀಡುತ್ತಾ ರೈತರಿಗೆ ಸಾವಿನ ಭಾಗ್ಯವನ್ನು ನೀಡಿದಿರಲ್ಲ ಇದು ಸರಿಯೇ??

ಇದಕ್ಕೆಲ್ಲಾ ಉತ್ತರ ನಿಮ್ಮಲ್ಲೇ ಇದೆ. ಯಾಕೆಂದರೆ ಇದೆಲ್ಲ ನಡೆದಿದ್ದು ನಿಮ್ಮ ಅಧಿಕಾರವಾಧಿಯಲ್ಲಿ ಎನ್ನುವುದನ್ನು ಮರೆಯದಿರಿ!! ನೀವು ಮಾಡಿದ ಹಗರಣಗಳು, ಅವಾಂತರಗಳು, ರಾಜಕೀಯ ದೊಂಬರಾಟಗಳನ್ನು ಜನ ಯಾವತ್ತು ಮರೆಯುವುದಿಲ್ಲ. ಇದರ ದೋಷ ಇಂದಿರಾ ಕ್ಯಾಂಟಿನ್‍ನಲ್ಲಿ ಊಟ ಕೊಟ್ಟರೂ ಹೋಗುವುದಿಲ್ಲ ಎನ್ನುವುದು ಅಕ್ಷರಶಃ ನಿಜ..

– ಅಲೋಖಾ

 

Tags

Related Articles

Close