ಅಂಕಣಪ್ರಚಲಿತರಾಜ್ಯ

ಕಾಸ್ಟ್ಲಿ ಸಿಎಮ್!!! ಬರೀ ಕಾಫಿ, ಟೀ, ಬಿಸ್ಕತ್ ಗಳಿಗೆ ಬರೋಬ್ಬರಿ 60 ಲಕ್ಷ ಖರ್ಚು ಮಾಡಿದ ಸಿದ್ಧರಾಮಯ್ಯ!!!

ಅಯ್ಯೋ… ಏನು ಗ್ರಹಚಾರ ಬಂತಪ್ಪಾ??? ಕರ್ನಾಟಕವನ್ನು ಆಳುತ್ತಿರುವ ಸಿ.ಎಂ ಸಿದ್ದರಾಮಯ್ಯ ಅವರು ಯಾಕಿಷ್ಟು ಸುದ್ದಿಯಾಗ್ತಾರೆ ಅನ್ನೋದೇ ಗೊತ್ತಾಕ್ತೀಲ್ವೇ? ಆದರೆ ಈ ಬಾರಿ ಸುದ್ದಿಯಾಗಿರೋದು ದುಬಾರಿ ಕಾರಿನ ವಿಚಾರಕ್ಕೋ ಅಥವಾ ದುಬಾರಿ ವಾಚ್ ವಿಚಾರಕ್ಕಲ್ಲ. ಬದಲಾಗಿ ಸುದ್ದಿಯಾಗಿರೋದು ಕಾಫಿ, ಬಿಸ್ಕೆಟ್ ವಿಚಾರದಲ್ಲಿ!!!!

ಹೌದು…. ಇದೀಗಾ ಸಿ.ಎಂ ಸಿದ್ದರಾಮಯ್ಯ ಮತ್ತೆ ಸುದ್ದಿಯಲ್ಲಿದ್ದಾರೆ ಅದು ಕಾಫಿ, ಚಾಯ್, ಬಿಸ್ಕೆಟ್ ವಿಚಾರದಲ್ಲಿ. ಏನಿದು!!! ಕಾಫಿ, ಬಿಸ್ಕೆಟ್ ವಿಚಾರದಲ್ಲಿ ಸಿ.ಎಂ ಹೇಗೆ ಸುದ್ದಿಯಲ್ಲಿರುತ್ತಾರೆ ಅಂತೀರಾ? ಸಾಲಬಾಧೆ ತಾಳಲಾರದೆ ಅದೆಷ್ಟೋ ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಮ್ಮ ಕರ್ನಾಟಕದಲ್ಲಿ ನಡೆದಿದೆ. ಅದಕ್ಕಾಗಿ ಸಿಎಂ ಸಿದ್ದರಾಮಯ್ಯ ಪರಿಹಾರ ಧನ ಅಂತಾ, ಒಂದಿಷ್ಟು ಸಾವಿರ ರೂಪಾಯಿ ಹಣ ಕೊಟ್ರು. ಅಲ್ಲದೇ ಕೃಷಿ ಸಾಲಮನ್ನಾ ಮಾಡ್ತೀವಿ ಅಂತ ಅದಕ್ಕೂ ಒಂದಿಷ್ಟು ಸಾವಿರ ರೂಪಾಯಿ ಮನ್ನಾ ಏನೋ ಮಾಡಿದ್ರೂ. ಆದರೆ ಇದಕ್ಕಿಂತ ಜಾಸ್ತಿ ಹಣ ಮನ್ನಾ ಮಾಡಲು, ನಮ್ಮಲ್ಲಿ ಹಣ ಇಲ್ಲ ಅಂತನೂ ಹೇಳಿದ್ರು. ಆದರೆ ಇದೀಗಾ ಸಿಎಂ ಮನೆಯ ಕಾಫಿ ಬಿಸ್ಕೆಟ್ ವಿಚಾರಕ್ಕೆ ಖರ್ಚಾದ ಹಣ ಮಾತ್ರ ಲಕ್ಷಾಂತರ ರೂಪಾಯಿ !!!!

ಆದರೆ ಇದು ಸತ್ಯ ಸಂಗತಿ. ಕಳೆದ 4 ವರ್ಷಗಳಲ್ಲಿ ಸಿಎಂ ಸಿದ್ದರಾಮಯ್ಯ ತಮ್ಮ ಕಾವೇರಿ ಮನೆ ಹಾಗೂ ಗೃಹ ಕಚೇರಿ ಕೃಷ್ಣದಲ್ಲಿನ ಮನೆಗೆ ಕಾಫಿ, ಟೀ, ಬಿಸ್ಕೆಟ್
ಹಾಗೂ ನೀರಿಗೆ ಬರೋಬ್ಬರಿ ಲಕ್ಷಾಂತರ ರೂಪಾಯಿ ಹಣವನ್ನು ವ್ಯಯಿಸಿದ್ದಾರೆ!!!!! ಕೇವಲ ಕಾಫಿ ಟೀ, ಬಿಸ್ಕೆಟ್‍ಗೆ ಲಕ್ಷಾಂತರ ರೂಪಾಯಿಗಳು ಖರ್ಚಾಗಿದಿಯಾ ಅಂತ ಶಾಕ್ ಆಗ್ಬೇಡಿ!! ಯಾಕಂದರೆ ಇದೇನೂ ಮೊದಲ ಬಾರಿ ಅಲ್ಲ. ಕಳೆದ 2015-16ನೇ ಸಾಲಿನ ಮುಖ್ಯಮಂತ್ರಿಗಳ ನಿವಾಸ ಕಾವೇರಿಗೆ ಖರೀದಿಸಿದ
ಗೃಹೋಪಯೋಗಿ ವಸ್ತುಗಳು ಮತ್ತು ಖರ್ಚಿನ ವಿವರ ಎಷ್ಟು ಗೊತ್ತೇ?? ಗೊತ್ತಾದರೆ ಮೂಗಿನ ಮೇಲೆ ಬೆರಳು ಇಡೋದಂತೂ ಗ್ಯಾರೆಂಟಿ.

ಹೌದು!! ಸಿದ್ದರಾಮಯ್ಯ ಅವರ ಪ್ರಮುಖ ವಸ್ತ್ರ, ಟವಲ್, ದಿಂಬು ಕವರ್, ಹಾಗೂ ಮನೆಗೆ ಬೆಡ್‍ಶೀಟ್ ಖರೀದಿಸಲು, ಒಂದು ವರ್ಷದಲ್ಲಿ ಬರೋಬ್ಬರಿ 14.34 ಲಕ್ಷ ರೂಪಾಯಿ ಖರ್ಚಾಗಿದೆ!!!!

ಕಳೆದ ವರ್ಷ ಮಾಹಿತಿ ಹಕ್ಕು ಕಾರ್ಯಕರ್ತ ಮರಿಲಿಂಗೇಗೌಡ ಮಾಲಿ ಪಾಟೀಲ್ ಅವರು ಆರ್‍ಟಿಐ ಕಾಯ್ದೆಯಡಿ ಖರ್ಚಿನ ವಿವರಗಳ ಬಗ್ಗೆ ಮಾಹಿತಿಯನ್ನು
ಕಲೆಹಾಕಿದ್ದರಿಂದ ಈ ಒಂದು ವಿಷಯ ಬೆಳಕಿಗೆ ಬಂದಿತ್ತು. ಈ ಪ್ರಕಾರ, ಕೇವಲ ಆರು ತಿಂಗಳಲ್ಲಿ ಸಿಎಂ ಅವರ ಟವಲ್‍ಗಾಗಿ 4.78 ಲಕ್ಷ ರೂಪಾಯಿ ವೆಚ್ಚ
ಮಾಡಲಾಗಿತಂತೆ!!! ಸಿ.ಎಂ ಮಾತ್ರವಲ್ಲದೇ ಇವರ ನೆಚ್ಚಿನ ಸಚಿವರುಗಳಾಗಿದ್ದ ಲೋಕೋಪಯೋಗಿ ಸಚಿವ ಎಚ್.ಸಿ. ಮಹದೇವಪ್ಪ, ಗ್ರಾಮೀಣಾಭಿವೃದ್ಧಿ ಸಚಿವ
ಎಚ್.ಕೆ. ಪಾಟೀಲ್, ಗೃಹಸಚಿವ ಕೆ.ಜೆ.ಜಾರ್ಜ್, ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ, ಅರಣ್ಯ ಸಚಿವ ರಮಾನಾಥ ರೈ ಅವರ ಮನೆಗಳ ಶೌಚಾಲಯ ದುರಸ್ತಿ, ಬಣ್ಣ ಬಳಿಯಲು, ಟೈಲ್ಸ್, ಚಾವಣಿ ರಿಪೇರಿ ಅಂತ ಒಟ್ಟು 1.71 ಕೋಟಿ ರೂಪಾಯಿಗಳನ್ನು ವ್ಯಯಿಸಿದ್ದಾರೆ.

ಇದು ಕೇವಲ ಕಳೆದ ಬಾರಿಯ ಟವಲ್, ದಿಂಬು, ಕಂಬಳಿಯ ಬಗ್ಗೆ ಆದ್ರೆ ಈ ಕಾಫಿ, ಚಾಯ್, ಬಿಸ್ಕಟ್ ಬಗ್ಗೆ ಕೇಳಿದ್ರೆ ಬೆಚ್ಚಿ ಬೀಳ್ತೀರಾ? ಯಾಕೆಂದರೆ ಕಳೆದ 4
ವರ್ಷಗಳಲ್ಲಿ ಸಿಎಂ ಸಿದ್ದರಾಮಯ್ಯ ಕಾಫಿ, ಟೀ, ಬಿಸ್ಕೆಟ್‍ಗೆ 60 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ. ಇದು ಕೇವಲ ಅವರ ಗೃಹ ಬಳಕೆಯ ಖರ್ಚು ಮಾತ್ರ! ಈ ವಿಚಾರ ಈಗ ಮಾಹಿತಿ ಹಕ್ಕು ಕಾಯ್ದೆಯಡಿ ಬಯಲಾಗಿದೆ.

ಈ ಕಾಫಿ, ಟೀ, ಬಿಸ್ಕೆಟ್‍ಗೆ ಆದ ಖರ್ಚುಗಳು!!

2013 ರಿಂದ 2014ನೇ ಸಾಲಿನಲ್ಲಿ ಕೇವಲ ಬಿಸ್ಕೆಟ್‍ಗೆ ಮಾಡಿದ ಖರ್ಚು 3.65 ಲಕ್ಷ ರೂಪಾಯಿ!!! ಕಾಫಿ, ಟೀ, ಮಿನರಲ್ ವಾಟರ್‍ಗಾಗಿ ಬರೋಬ್ಬರಿ 10 ಲಕ್ಷ
ರೂ. ಖರ್ಚು ಮಾಡಲಾಗಿದೆ. ಒಟ್ಟಾರೆಯಾಗಿ 13.65 ಲಕ್ಷ ರೂ. ಕಾಫಿ, ಟೀ, ಬಿಸ್ಕೆಟ್‍ಗೆ ಖರ್ಚು ಮಾಡಲಾಗಿದೆ. ಇದೇ ರೀತಿ 2014-15ನೇ ಸಾಲಿನಲ್ಲಿ ಕಾಫಿ,
ಟೀ, ಬಿಸ್ಕೆಟ್‍ಗೆ ಆದರ ಖರ್ಚು ಎಷ್ಟು ಗೊತ್ತೇ??? ಬಿಸ್ಕೆಟ್‍ಗೆ 4.56 ಲಕ್ಷ, ಇನ್ನು ಕಾಫಿ, ಟೀ, ನೀರಿಗೆ ಅಂತಾ 6.5 ಲಕ್ಷ ರೂಪಾಯಿ. ಹಾಗೆಯೇ 2015-16ರಲ್ಲಿ
ಬಿಸ್ಕೆಟ್‍ಗೆ 4.56 ಲಕ್ಷ ರೂಪಾಯಿಗಳಷ್ಟು ಖರ್ಚಿ ಮಾಡಿದರೆ ಕಾಫಿ, ಟೀ, ನೀರಿಗೆ 6.7 ಲಕ್ಷ ರೂ. ಖರ್ಚಾಗಿದೆ!!!!

ಇನ್ನೂ 2016-17 ಸಾಲಿನಲ್ಲಿ ಬಿಸ್ಕೆಟ್‍ಗೆ 4.5 ಲಕ್ಷ ರೂಪಾಯಿ ಖರ್ಚಾದರೇ ಕಾಫಿ, ಟೀ, ನೀರು 7 ಲಕ್ಷ ರೂ. ವೆಚ್ಚ ಮಾಡಿದ್ದಾರೆ. 2017-18 ನೇ ಸಾಲಿನಲ್ಲಿ
ಬಿಸ್ಕೆಟ್‍ಗೆ 4.5 ಲಕ್ಷ ರೂಪಾಯಿ, ಕಾಫಿ, ಟೀ, ನೀರು 7.2 ಲಕ್ಷ ರೂಪಾಯಿ ಖರ್ಚಾಗಿದೆ. ಒಟ್ಟಾರೆ ಬಿಸ್ಕೆಟ್‍ಗೆ 22 ಲಕ್ಷ ರೂ. ಖರ್ಚಾಗಿದ್ದು ಕಾಫಿ, ಟೀ, ನೀರಿಗೆ 38
ಲಕ್ಷ ರೂಪಾಯಿಗಳಷ್ಟು ಹಣ ವ್ಯಯಿಸಲಾಗಿದೆ!!!

ಇಷ್ಟೇ ಅಲ್ಲದೇ, ನಾಲ್ಕು ವರ್ಷಗಳಲ್ಲಿ ಬಿಸ್ಕೆಟ್ ಖರೀದಿಗೆ ಪ್ರತೀ ವರ್ಷ ನೀಡಿರೋದು 4.5 ಲಕ್ಷ ರೂಪಾಯಿ. ಆದರೆ ಯಾವ ವರ್ಷವೂ ಒಂದು ರೂಪಾಯಿ ಹೆಚ್ಚು
ಕಡಿಮೆ ಆಗಿಲ್ಲ. ಅದೇ ರೀತಿ ನೀರಿಗೂ ಕೂಡ 1.75 ಲಕ್ಷ ರೂಪಾಯಿ ಅಂತಾ ಪ್ರತಿ ವರ್ಷವೂ ಬಿಲ್ ಮಾಡಲಾಗಿದೆ. ಇಷ್ಟೂ ಲೆಕ್ಕವೂ ಕೇವಲ ಸಿಎಂ ನಿವಾಸಕ್ಕೆ
ಮಾತ್ರ ಸೀತವಾಗಿದೆ, ಆದರೆ ಸಿಎಂ ನಿವಾಸಕ್ಕೆ ಬರೋ ಗಣ್ಯರು, ಅತೀ ಗಣ್ಯರಿಗೆ ಖರ್ಚು ಮಾಡಿರೋ ಲೆಕ್ಕ ಅದು ಬೇರೆನೇ ಇದೆ. ಆದರೆ ಕೇವಲ ಸಿದ್ದರಾಮಯು
ಅವರ ಕಾಫಿ, ಟೀ, ಬಿಸ್ಕೆಟ್‍ಗೆ ಆದ ಖರ್ಚು 60 ಲಕ್ಷ ರೂಪಾಯಿಗಳು ಆದರೆ ಇನ್ನೂ ಬಾಕಿ ಉಳಿದ ಗೃಹಬಳಕೆಯ ವಸ್ತುಗಳ ಖರ್ಚು ಎಷ್ಟಿರಬಹುದು ಎಂದು ಊಹಿಸಲು ಕಷ್ಟವಾಗುತ್ತೆ?

ಹೌದು!! ನೀವು ನಂಬ್ತಿರೋ ಬೀಡ್ತೀರೋ, ಆದರೆ ಕಾಫಿ, ಟೀ, ಬಿಸ್ಕೆಟ್ ಅಂತ ನಮ್ಮ ಸಿದ್ದರಾಮಯ್ಯ 60 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದರೆ. ಪಾಪ…! ನಿದ್ದೆ ಬರುತ್ತೆ ಅಂತಾ ಕಾಫಿ ಟೀ ಕುಡಿದಿರಬಹುದು. ಆದರೆ ಈ ಮಟ್ಟಿಗೆ ಕಾಫಿ, ಟೀ ಕುಡಿದ್ರೂ ಅವರ ನಿದ್ದೆ ಮಾತ್ರ ಇನ್ನೂ ಬಿಟ್ಟಿಲ್ಲ ಎನ್ನುವುದು ಒಂದು ದೊಡ್ಡ ವಿಪರ್ಯಾಸ!!!!

– ಅಲೋಖಾ

Tags

Related Articles

Close