ಅಂಕಣ

ಸುನಾಮಿಗಿಂತಲೂ ಘೋರವಾಗಿತ್ತು ಸಿದ್ಧರಾಮಯ್ಯನ ಈ ನಾಲ್ಕು ವರ್ಷದ ಆಡಳಿತ!!! ಇಲ್ಲಿದೆ ವಿಸ್ತ್ರತ ವರದಿ!

ಪಾಪ!! ಕಾಂಗ್ರೆಸ್ ಪಕ್ಷಕ್ಕೆ ಇಡೀ ಭಾರತದಲ್ಲಿ ಆಧಾರವಾಗಿರುವುದು ಅದೊಂದೇ ರಾಜ್ಯ!! ನೆನಪಿರಲಿ. ಇದೇ ಪರಿಸ್ಥಿತಿ ಒಂದು ಕಾಲದಲ್ಲಿ ಬಿಜೆಪಿಗೂ ಒದಗಿತ್ತು. ಆದರೆ ಸಂಘದ ಪ್ರೇರಣೆಯಿಂದ ಬಂದ ಅನೇಕ ಧೀರ ನಾಯಕರು ದೇಶವನ್ನು ಸಮರ್ಥವಾಗಿ ಮುನ್ನಡೆಸಲು ಶಕ್ತರಾದರು. ದೇಶವನ್ನು ವಿಶ್ವದ ಮುಂದೆ ಗುರು ಸ್ಥಾನವನ್ನು ಕಲ್ಪಿಸಬೇಕೆಂಬ ಉದ್ದೇಶದಿಂದ ಕಾರ್ಯಪ್ರವೃತ್ತರಾಗಿದ್ದಾರೆ. ಆದರೆ ಇವತ್ತಿನ ಕಾಂಗ್ರಸ್ ಗೆ ಪ್ರೇರಣೆ ಯಾರು?? ಭಾರತ ಕಂಡ ದಿ ಗ್ರೇಟ್ ಭ್ರಷ್ಟ ನೆಹರೂವೇ? ಅಥವಾ ಇಟಲಿ ಮಗಳು ಆಂಟೀನಿಯಾವೇ? ಅರಿಯದು. ಆದರೆ ಅವರು ಪಾಲಿಸಿಕೊಂಡು ಬರುತ್ತಿರುವ ನೀತಿ, ನಿಯಮ, ಕಾರ್ಯಗಳು ಮಾತ್ರ ಅಕ್ಷರಶಃ ತುಘಲಕ್‍ನ ಪ್ರೇರಣೆ. ದೇಶದಲ್ಲಿ ತಾವು ಮಾಡಿದ ಘನಂದಾರಿ ಕಾರ್ಯದಿಂದ ಇಡೀ ದೇಶದ ಸತ್ಪ್ರಜೆಗಳು ಕಾಂಗಿಗಳ ಪಕ್ಷ ನಮ್ಮ ಸೇವೆ ಮಾಡುವ ಅಗತ್ಯವಿಲ್ಲವೆಂಬ ತೀರ್ಪಿಟ್ಟರು. ಕರುನಾಡಿನಲ್ಲಿಯೂ ಹಾಗಾಗುತ್ತದೋ?? ಅರಿಯದು. ಆದರೆ ಇವತ್ತಿನ ಆಡಳಿತ ಮಾತ್ರ ಮೊಘಲ್ ಆಡಳಿತವೇ. ಗಾಬರಿಯಾಗಬೇಡಿ. ಕೆಲವು ಸಂಗತಿಗಳನ್ನು, ವಿಚಾರಗಳನ್ನು ಗಮನಿಸಿ.

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಾಡಳಿತಕ್ಕೆ ಬಂದಿದ್ದು ಭ್ರಷ್ಟಾಚಾರ ನಿರ್ಮೂಲನೆಯ ಹೆಸರಿನಲ್ಲಿ. ಲೋಕಾಯುಕ್ತ ಅನ್ನುವ ಸಂಸ್ಥೆಯ ಹೆಸರನ್ನು ನೀವು ನಾವೆಲ್ಲಾ ಕೇಳಿಯೇ ಕೇಳಿರುತ್ತೇವೆ. ಕರ್ನಾಟಕದ ಅನೇಕರನ್ನು ಯಾವುದೇ ಮುಲಾಜಿಲ್ಲದೇ ಜೈಲಿಗಟ್ಟಿದ್ದ ಸರ್ಕಾರೇತರ ಸಂಸ್ಥೆ. ಅದರದ್ದೇ ವಿಶೇಷ ಕಾರ್ಯಯೋಜನೆಗಳು. ವಿಪರ್ಯಾಸವೇನು ಗೊತ್ತಾ?? ಭ್ರಷ್ಟಾಚಾರ ನಿರ್ಮೂನೆಯ ಪಣತೊಟ್ಟು ಆಡಳಿತ ಮಾಡಲು ಕುರ್ಚಿಯಲ್ಲಿ ಕುಳಿತ ಸರಕಾರ ಮಾಡಿದ ಪ್ರಥಮ ಕಾರ್ಯವೇ ಲೋಕಾಯುಕ್ತ ಸಂಸ್ಥೆಯನ್ನು ವರ್ಜಿಸಿ, ಸರಕಾರವೇ ನಡೆಸಬಹುದಾದ ಎಸಿಬಿ ಯನ್ನು ರಚಿಸಿತ್ತು. ಸರಕಾರ ಪ್ರಾಯೋಜಿತ ಭ್ರಷ್ಟಾಚಾರ ನಿರ್ಮೂಲನೆ ಸಂಸ್ಥೆ ಆಡಳಿತ ಸರಕಾರದ ಭ್ರಷ್ಟರನ್ನು ಸರೆಹಿಡಿಯಲು ಸಾಧ್ಯವೇ?? ನೀವೇ ಹೇಳಿ. ಅಲ್ಲಿಗೆ ಆಡಳಿತ ಸರಕಾರ ಭ್ರಷ್ಟರನ್ನು ಸಂರಕ್ಷಿಸುವ ಮಹಾನ್ ಯೋಜನೆಯೊಂದನ್ನು ರೂಪಿಸಿತು.

ತಮ್ಮ ಪ್ರತೀ ಸಾರ್ವಜನಿಕ ಭಾಷಣದಲ್ಲಿಯೂ ಸಿದ್ಧರಾಮಯ್ಯನವರು ಪ್ರಾರಂಭ ಮಾಡುವುದೇ ಇತರರನ್ನು ದೂರಿಕೊಂಡೇ. ಇದುವರೆಗೆ ತಮ್ಮ ಯೋಜನೆಗಳ
ಕುರಿತಾಗಿ ಸಾರ್ವಜನಿಕರ ಮುಂದೆ ವಿವರಿಸಿವುದಾಗಲೀ, ಮಾತನಾಡುವುದಾಗಲೀ ಕಂಡಿಲ್ಲ, ಕೇಳಿಲ್ಲ, ಆದರೆ ಅವರ ಪಕ್ಷದವರು ನಡೆದುಕೊಳ್ಳುತ್ತಿರುವ ರೀತಿಯನ್ನು ಅದು ಯಾವ ರೀತಿಯಲ್ಲಿ ಸಮರ್ಥಿಸುತ್ತಿದ್ದಾರೆ ಇವರು. ಸಾವಿರಾರು ಜನ ಸೇರಿರುವ ಸಭೆಯಲ್ಲಿ, ಅದೂ ಸ್ವಾತಂತ್ರೋತ್ಸವದ ಪುಣ್ಯ ದಿವಸದಲ್ಲಿ ಕಾಂಗ್ರೆಸ್ ನಾಯಕರೋರ್ವರು ವಿಧಾನ ಪರಿಷತ್ ಮಹಿಳೆಯೊಡನೆ ಅಸಭ್ಯವಾಗಿ ವರ್ತಿಸಿ ಕೈ ಸವರಿದ್ದರು. ಅಣ್ಣ-ತಂಗಿ ಬಾಂಧವ್ಯದ ಪ್ರತೀಕವಷ್ಟೇ ಎಂಬ ಸಮರ್ಥನೆ ಬೇರೆ!

ಸ್ವಾಮೀ. ನನ್ನದೊಂದು ಪ್ರಶ್ನೆ. ಭಾರತೀಯ ಸಂಸ್ಕøತಿಯ ಪ್ರತೀಕವೆಂದು ಬೊಬ್ಬಿಡುವವರು ಸಿಕ್ಕಸಿಕ್ಕಲ್ಲಿ ತಮ್ಮ ಸಹೋದರ-ಸಹೋದರಿಯರ ಬಾಂಧವ್ಯವನ್ನು
ಪ್ರದರ್ಶಿಸಬಹುದೇ?? ಸಾರ್ವಜನಿಕ ಸ್ಥಳದಲ್ಲಿ ಸರಕಾರೀ ಕಾರ್ಯಕ್ರಮದಲ್ಲಿ ನೀಲಿ ಚಿತ್ರವನ್ನು ವೀಕ್ಷಿಸುವುದು ಯಾವುದರ ಪ್ರತೀಕ?? ಯಾರು ಕಲಿಸಿದ ಸಂಸ್ಕøತಿ?? ಸ್ನೇಹಿತರು ಕಳಿಸಿದ್ದೆಂಬ ನೆಪ ಬೇರೆ.. ಮೇಟಿ ಓರ್ವ ಹೆಣ್ಣುಮಗಳ ಜತೆ ರಾಸಲೀಲೆ ಆಡಿದರೆ ಅದು ತಂದೆ-ಮಗಳ ಸಂಬಂಧ. ವ್ಹಾ!! ಇಂತಹ ಕೃತ್ಯವನ್ನು ಸಮರ್ಥಿಸುವಾಗ ಅದೇನೋ ಖುಷಿ ಇವರಿಗೆ. ಯಾವುದೇ ರೀತಿಯಾದ ಘನತೆ- ಪ್ರತಿಷ್ಠೆ ಮರಿಯಾದಿ ಇರುವ ಸಚಿವರು ಇಂತಹ ಕೃತ್ಯವನ್ನು ಮಾಡಿಯಾರೆ? ಇದು ಸಿದ್ಧರಾಮಯ್ಯನವರ ಸಂಪುಟದಲ್ಲಿ ನೆಲೆಯೂರಿವ ಜನಸೇವೆಯ ಹೆಸರಿನಲ್ಲಿ ಲೂಟಿ ಮಾಡುತ್ತಿರುವ ಸಚಿವರು. ಆದರೂ ನೈತಿಕತೆ ಇಲ್ಲದೇ ಅಂತಹವರನ್ನು ನಮ್ಮ ಹೆಮ್ಮೆಯ ಸಚಿವರೆಂಬುದಾಗಿ ಹೇಳಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್‍ನ ಪೂರ್ವಜರ ಹಾಗೂ ಹಿರಿಯರ ಆಶೀರ್ವಾದದ ಫಲವೇ ಇದು??

ಪರಿಸ್ಥಿತಿಗೆ ತಕ್ಕಂತೆ ಬಣ್ಣ ಬದಲಾಯಿಸುವುದು ಅದರ ಜೀವಾಳ. ಇತರೆ ಪಕ್ಷದ ನಾಯಕರು ಭ್ರಷ್ಟಾಚಾರದಲ್ಲಿ ಸಿಕ್ಕಿಬಿದ್ದು ಜೈಲಿಗೆ ಅಟ್ಟಿದಾಗ ಅದು ಪ್ರಜಾಪ್ರಭುತ್ವಕ್ಕೆ ಸಿಕ್ಕಿದ ಜಯ. ಆದರೆ ಅದೇ ಪಕ್ಷದ ಶ್ರೀಮಂತ ಸಚಿವರ ಮನೆಗೆ ಅಕ್ರಮ ಆಸ್ತಿ ಪತ್ತೆಯಾಗಿ ದಾಳಿ ನಡೆಸಿದ್ದು ದ್ವೇಷ ರಾಜಕಾರಣ. ಇದು ಪ್ರಜಾಪ್ರಭುತ್ವದ ಶಕ್ತಿಯೇ ಸಿದ್ದರಾಮಯ್ಯನವರೇ?? ಬಹುಶಃ ಉತ್ತರಿಸುವ ನೈತಿಕತೆಯೂ ಅವರಿಗಿಲ್ಲ. ಓರ್ವ ನಾಯಕ ಶೂ ಹಾಗೂ ಕೋಟನ್ನು ಧರಿಸಿ ಪ್ರಯಾಣಿಸಿದರೆ, ಆ ನಾಯಕ ಆಡಳಿತ ಮಾಡಿದರೆ ಅದು ಸೂಟು-ಬೂಟು ಸರಕಾರ. ಆದರೆ ಇವರು 70 ಲಕ್ಷದ ವಾಚನ್ನೂ ಕೂಡ ಧರಿಸಬಹುದು. ಅಕ್ರಮ ಆಸ್ತಿಯನ್ನೂ ಹೊಂದಬಹುದು. ಇದನ್ನು ದುಬಾರೀ ಸರಕಾರವೆಂದು ಬಣ್ಣಿಸಲೇ?? ದುಬಾರಿ, ದೇಶವನ್ನು ಲೂಟು ಮಾಡುವುದರಲ್ಲಿಯೂ!! ತಮ್ಮ ಪಕ್ಷದ ಉಪಾಧ್ಯಕ್ಷರಿಗೆ ಚುನಾವಣೆಯ ಸಂದರ್ಭದಲ್ಲಿ ಸಿಗುವುದು ಕೇವಲ ಹರಿದ ಬಟ್ಟೆ, ಆದರೆ ಇತರೆ ಸಮಯದಲ್ಲಿ ಅವರದ್ದೂ ಸೂಟು-ಬೂಟು ಜೀವನವೇ. ಇದನ್ನು ಊಸುರಬಳ್ಳಿ ಸರಕಾರವೆಂದು ಕರೆಯಲೇ?? ಅರ್ಥವಾಗುತ್ತಿಲ್ಲ.

ಕರ್ನಾಟಕದಲ್ಲಿ ಏನಾಗುತ್ತಿದೆಯೆಂದು ಪ್ರಶ್ನಿಸಿದ್ದರಲ್ಲಾ?? ಇಲ್ಲಿದೆ ನೋಡಿ ಉತ್ತರ !!

ಮುಗ್ಧ ಬಡ ಮಕ್ಕಳಿಗೆ ಸಿಗಬಹುದಾದ ಅನ್ನವನ್ನು ತಡೆಹಿಡಿದ ಸರಕಾರ, ಅದು ಕಾನೂನುಬದ್ಧ ನಿಲುವಾಗಿ ಕರ್ನಾಟಕ ಸರಕಾರ ಪರಿಣಮಿಸಿತು. ಕಾರಾಗೃಹದಲ್ಲಿ ಅವ್ಯವಹಾರ ನಡೆಸುತ್ತಿದ್ದವರ, ಲಂಚ ಕೊಡುತ್ತಿದ್ದವರ ಬಂಡವಾಳವನ್ನು ದಕ್ಷ ಅಧಿಕಾರಿಯಾದ ಡಿಐಜೆ ರೂಪಾರವರು ಬಯಲಿಗೆಳೆಯದಾಗ ಕುರುನಾಡ ಸರಕಾರ ಅವರಿಗೆ ದಯಪಾಲಿಸಿದ್ದು ವರ್ಗಾವಣೆಯ ಭಾಗ್ಯ ಮಾತ್ರ.!!

ಸತ್ಯ ಹೇಳಲಾ… ಸಿದ್ದರಾಮಯ್ಯನವರು ಬಿಜೆಪಿಯವರ ವಿರುದ್ಧ ತೊಡೆ ತಟ್ಟಿ ಬಳ್ಳಾರಿಯಲ್ಲಿ ಪಾದಯಾತ್ರೆ ಮಾಡಿದ ಸಂದರ್ಭದಲ್ಲಿ ಕರ್ನಾಟಕದ ಜನರು ಕಂಡ ಕನಸು ಅಷ್ಟಿಷ್ಟಲ್ಲ.. ಆದರೆ ಇವರು ಕಳೆದ 4 ವರ್ಷಗಳಲ್ಲಿ ಮಾಡಿದ ಸಾಧನೆಯೇನು ಗೊತ್ತೇ?? ಭಯೋತ್ಪಾದನೆಗೆ ಪರೋಕ್ಷವಾಗಿ ಅಲ್ಲದೇ ನೇರವಾಗಿ ಬೆಂಬಲಿಸುವ ಪಿಎಫ್‍ಐ ಮುಂತಾದ ಪರಿವಾರದ ಸಂಘಟನೆಗೆ ಸೇರಿದ ಕಾರ್ಯಕರ್ತರ ಮೇಲಿದ್ದ ಕೇಸನ್ನು ಹಿಂದಕ್ಕೆ ತೆಗೆದುಕೊಳ್ಳಳಾಯಿತು. ಅಂದರೆ ಭಯೋತ್ಪಾದನೆಗೆ ಪರೋಕ್ಷವಾಗಿ ಬೆಂಬಲಿಸುವ ಸರಕಾರ ಕಳೆದ 4 ವರ್ಷಗಳಲ್ಲಿ ಕರ್ನಾಟಕ ಕಂಡಿದೆ. ಈ ರಾಜ್ಯದಲ್ಲಿ 19 ಅಮಾಯಕ ಹಿಂದೂಗಳ ಹತ್ಯೆಗಳೇ ನಡೆದು ಹೋಗಿವೆ. ಆದರೆ ಇದುವರೆಗೂ ಅವರಿಗೆ ನ್ಯಾಯ ಸಿಗಲಿಲ್ಲ. ಮುಗ್ಧ ಅಮಾಯಕ ಜೀವಕ್ಕೆ ಹೇಗೂ ಬೆಲೆ ನೀಡಲಿಲ್ಲ, ಆದರೆ ದನಗಳಲ್ಲರು ಸತ್ತಾಗ ಘೋಷಿಸಿದ್ದು ಲಕ್ಷಾಂತರ ರುಪಾಯಿಗಳ ಪರಿಹಾರ!!

ಪ್ರತಿಯೊಂದು ಯೋಜನೆಗಳೂ ಕೂಡ ಜಾತಿಯನ್ನು ಆಧರಿಸಿಯೇ ಆಗಿವೆ. ಶಾಧಿಭಾಗ್ಯ, ಮೊಟ್ಟೆಭಾಗ್ಯ, ಅನ್ನಭಾಗ್ಯ, ಇತ್ಯಾದಿ. ಇತರೆ ಸಮಾಜದ ಬಂಧುಗಳು
ನಗಣ್ಯವಾದರು. ಅವರ ಕೂಗುಗಳನ್ನು ಆಲಿಸುವವರು ಯಾರೂ ಇಲ್ಲವಾದರು. ಒಂದೇ ಧರ್ಮದಲ್ಲಿದ್ದವರಲ್ಲಿ ಬಿರುಕು ಮೂಡಿಸಿ ಒಬ್ಬರು ಇನ್ನೊಬ್ಬರನ್ನು ದ್ವೇಷಿಸುವಂತೆ ಮಾಡಿತು ತುಘಲಕ್ ಸರಕಾರ. ವಾಸ್ತವದ ಸಂಗತಿಯೇನು ಗೊತ್ತೇ?? ಬ್ರಿಟಿಷ್ ಸರಕಾರ ಮಾಡಿದ್ದೂ ಇದೇ ರೀತಿಯಾದ ಕುತಂತ್ರದ ಯೋಜನೆ. ಈಗ ಕರ್ನಾಟಕ ಸರಕಾರ ಮಾಡುತ್ತಿದೆ. ಅವರ ಬದ್ಧತೆಯ ಕುರಿತಾಗಿ ಈಗ ಪ್ರಶ್ನಿಸಬೇಕಾಗಿದೆ.

ರಾಜ್ಯದ ದಕ್ಷ ಅಧಿಕಾರಿಗಳಾದ ಡಿಕೆ ರವಿ, ಡಿವೈಎಸ್‍ಪಿ ಗಣಪತಿ ಮುಂತಾದ ಅಧಿಕಾರಿಗಳ ಸಾವಿನ ಕುರಿತಾಗಿ ತನಿಖೆ ಆರಂಭವಾಗುವ ಮುಂಚೆಯೇ ಅದು
ಆತ್ಮಹತ್ಯೆಯೆಂಬ ತೀರ್ಪನ್ನು ಕೊಟ್ಟರು. ರಾಷ್ಟ್ರಕ್ಕಾಗಿ, ಸಮಾಜಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು ಸುಖಾಸುಮ್ಮನೆ ಆತ್ಮಹತ್ಯೆ ಮಾಡಿಯಾರು ಅನ್ನುವ ಚಿಂತನೆಯಾದರೂ ಬರಲು ಸಾಧ್ಯವೇ?? ಅಷ್ಟು ಕನಿಷ್ಠ ಪ್ರಜ್ಞೆಯೂ ಇಲ್ಲ ಸರಕಾರ ಕಳೆದ 4 ವರ್ಷಗಳಿಂದ ಕರ್ನಾಟಕದಲ್ಲಿ ಆಳುತ್ತಿದೆ.

ಮೈಸೂರಿನಲ್ಲಿ ಐಎಎಸ್ ಅಧಿಕಾರಿ ಶಿಖಾ ಅವರ ಮೇಲೆ ಸಿದ್ದರಾಮಯ್ಯನವರು ಕೈ ಮಾಡಿದಾಗ ಯಾವ ಕ್ರಮವೂ ಅವರ ವಿರುದ್ಧ ಕೈಗೊಂಡಲ್ಲ. ಕನಿಷ್ಠ
ಎಚ್ಚರಿಕೆಯನ್ನೂ..!! ಅನುಪಮಾರವರಿಗೂ ನ್ಯಾಯ ಕೊಡಿಸಲಾಗಲಿಲ್ಲ, ರಶ್ಮಿಗೆ ಚಪ್ಪಲಿ ಎಸೆದಾಗಲೂ ಮೌನವೇ ಇವರ ನಡೆಯಾಗಿತ್ತು..

ನಮ್ಮ ಹೆಮ್ಮೆಯ ಕರುನಾಡಿನಲ್ಲಿ ಏನಾಗುತ್ತಿದೆಯೆಂದು ಇನ್ನೂ ವಿವರಿಸಲೇ ಲದ್ಧಿಜೀವಿಗಳೇ?? ಇದುವರೆಗೂ ಕರ್ನಾಟಕ ರಾಜ್ಯ ಇಂತಹ ಮುಖ್ಯಮಂತ್ರಿಯನ್ನು
ಪಡೆದಿರಲಿಲ್ಲವೆಂಬುದೂ ಸ್ಪಷ್ಟ ಹಾಗೂ ಸತ್ಯ. ಇನ್ನು ಮುಂದೆಯೂ ಪಡೆಯದಿರಲಿ ಎಂಬುದೇ ನಮ್ಮ ಆಶಯ. ಅದೆಷ್ಟು ರಾಜಕೀಯ ಚದುರಂಗದಾಟಗಳು, ಮತಕ್ಕಾಗಿ ನಾಟಕಗಳು, ಅವಾಂತರಗಳು, ಭಯೋತ್ಪಾದನೆಯ ಚಟುವಟಿಕೆಗಳಿಗೆ ಬೆಂಬಲ.. ಇನ್ನೂ ಏನೇನೋ.. ಈ ಎಲ್ಲಾ ನಡೆಗಳು ಕೇವಲ ಇಂದಿರಾ ಕ್ಯಾಂಟೀನ್ ಮಾಡುವ ಮೂಲಕ ಶಮನವಾಗಿಸಬಹುದೆಂದು ತಿಳಿದರೆ ನಿಮ್ಮಷ್ಟು ಮೂಢರು ಇನ್ನೊಬ್ಬರಿಲಿಕ್ಕಿಲ್ಲ.

ಸತ್ಯ. ಬಹುಶಃ ಕರ್ನಾಟಕದಲ್ಲಿ ಆಡಳಿತಗಾರರನ್ನು ನಂಬಿ ಪ್ರಜೆಗಳು ಬದುಕುತ್ತಿರುತ್ತಾರೆ. ಆದರೆ ಆ ಎಲ್ಲಾ ನಂಬಿಕೆಗಳಿಗೆ ದ್ರೋಹವನ್ನು ಬಗೆದು, ತಾನು ಹುಟ್ಟಿದ
ಧರ್ಮವನ್ನೇ ತೆಗಳಿ, ಅಂತಿಮವಾಗಿ ತಮ್ಮ ಆತ್ಮಸಾಕ್ಷಿಗೇ ಅನ್ಯಾಯಗೈದು ಬದುಕುವ ವ್ಯಕ್ತಿಗಳ ಚಿತ್ರಣ ಹೇಗಿರುತ್ತೆ ಗೊತ್ತೇನು?? ದೀಪ ಆರುವಾಗ ಹೆಚ್ಚಾಗಿ ಉರಿದು ಆರುತ್ತಂತೆ..ವಿನಾಶಕಾಲೇ ವಿಪರೀತ ಬುದ್ಧಿ ಎನ್ನುವ ಮಾತೊಂದಿದೆಯಲ್ಲ.

– ಗುರುದೇವ ಮೂರ್ತಿ

Tags

Related Articles

Close