ಪ್ರಚಲಿತ

ಸಿದ್ಧರಾಮಯ್ಯನ ಅತಿದೊಡ್ಡ ಹಗರಣ ಬಯಲಿಗೆ! ಡಿನೋಟಿಫೈ ಮಾಡಿದ್ದು ಒಂದಲ್ಲ ಎರಡಲ್ಲ, ಬದಲಿಗೆ ಸಾವಿರಾರು ಎಕರೆಗಳು!!!

ಕರ್ನಾಟಕದ ಕಾಂಗ್ರೆಸಿಗರ ಒಂದೊಂದೇ ಭ್ರಷ್ಟಾಚಾರ ಪ್ರಕರಣಗಳು ಹೊರಬರುತ್ತಿದ್ದು, ಇದೀಗ ಮತ್ತೊಬ್ಬ ಶಾಸಕನ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತ ಕೆ.ಆರ್. ಪುರ ಶಾಸಕ ಬೈರತಿ ಬಸವರಾಜು ಅವರ ಶಿವರಾಮ ಕಾರಂತ ಬಡಾವಣೆ ಡಿನೋಟಿಫಿಕೇಶ್‍ಗೆ ಸಂಬಂಧಪಟ್ಟ ಕಡತಗಳೇ ನಾಪತ್ತೆಯಾಗಿದೆ. ಈ ಕಡತ ನಾಪತ್ತೆ ಹಿಂದೆ ಬೈರತಿ ಬಸವರಾಜು ಅವರ ಕೈವಾಡ ಇದೆ. ಸಾಕಷ್ಟು ಭಷ್ಟಾಚಾರಗಳಿಂದ ಸುದ್ದಿಯಲ್ಲಿರುವ ಕಾಂಗ್ರೆಸ್‍ನ ಕೈಗೆ ಮತ್ತೊಂದು ಭಾರೀ ದೊಡ್ಡ ಭ್ರಷ್ಟಾಚಾರ ಸೇರಿಕೊಂಡಿದೆ. ಕಾಂಗ್ರೆಸ್ ಸರ್ಕಾರವು ಡಿನೋಟಿಫಿಕೇಶನ್ ಮೂಲಕ ಸಾವಿರಾರು ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ. ಸರಿಸುಮಾರು ಬರೋಬ್ಬರಿ 1300 ಎಕರೆ ಭೂಮಿಯನ್ನು ಸ್ವಾಧೀನಪಡಿಸಿದೆ!!!

ಶಿವರಾಮ ಕಾರಂತ ಲೇಯೌಟ್ ಡಿನೋಟಿಫಿಕೇಶನ್ ಕುರಿತು ಯಡಿಪಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಕೇಸ್ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೈಕೋರ್ಟ್‍ನಲ್ಲಿ ಯಡಿಯೂರಪ್ಪ ಪರ ವಕೀಲ ಸಿ.ವಿ. ನಾಗೇಶ್ ಅವರು ವಾದವನ್ನು ಮಂಡಿಸಿದ್ದರು. ಬಡವಾಣೆಗೆ ಸಂಬಂಧಿಸಿ ಕಾಂಗ್ರೆಸ್ ಶಾಸಕ ಬೈರತಿ ಬಸವರಾಜ್ ಅವರ ಮನವಿ ಮೇರೆಗೆ ಮೂವತ್ತು ಎಕ್ರೆಯಷ್ಟು ಜಾಗವನ್ನು ಡಿನೋಟಿಫೈ ಮಾಡಲಾಗಿತ್ತು. ಇದನ್ನು ನ್ಯಾಯಾಲಯದಲ್ಲಿ ಪ್ರಸ್ತಾಪ ಮಾಡಲಾದ ದಿನವೇ ಕಡತ ನಾಪತ್ತೆಯಾಗಿದೆ.

ಕಡತ ನಾಪತ್ತೆಯ ಹಿಂದೆ ಪ್ರಕರಣದ ಕುರಿತು ಕೋರ್ಟಲ್ಲಿ ಉಲ್ಲೇಖಗೊಂಡಿರುವುದಕ್ಕೂ ಬೈರತಿ ಅವರ ಕಡತವೇ ನಾಪತ್ತೆಯಾಗುರುವುದಕ್ಕೂ ಯಾವುದಾದರೂ
ಸಂಬಂಧ ಇದೆಯಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ

ಸಿ.ವಿ. ನಾಗೇಶ್ ಅವರು ಕೋರ್ಟಿಗೆ ಹೇಳಿದ ಪ್ರಕಾರ ಶಿವರಾಮ ಕಾರಂತ ಲೇಯೌಟಿಗೆ ಸಂಬಂಧಿಸಿದ 1300 ಎಕ್ರೆ ಜಮೀನು ಡಿನೋಟಿಫೈ ಆಗಿತ್ತು. ಅದರಲ್ಲಿ
ಬೈರತಿ ಅವರಗೆ ಸೇರಿದ ಮೂವತ್ತು ಎಕ್ರೆ ಅಂದ್ರೆ 38.5 ಗುಂಟೆ ಜಾಗ ಕೂಡಾ ಡಿನೋಟಿಫಿಕೇಶನ್ ಆಗಿತ್ತು. ಆದರೆ ಇದನ್ನು 5ಎ ಪ್ರಕಾರ ವಿಚಾರಣೆಯಿಂದಲೇ ಆ
ಜಾಗವನ್ನು ಕೈಬಿಡಲಾಗಿತ್ತು ಎಂಬ ಆರೋಪವನ್ನು ಅವರು ಮಾಡಿದ್ದಾರೆ. ಜೊತೆಗೆ ಸಂಬಂಧಪಟ್ಟ ಒಂದಷ್ಟು ದಾಖಲಾತಿಗಳ ಪ್ರಕಾರವೂ ಅಂದರೆ ಬಿಡಿಎ
ಅಧಿಕಾರಿಗಳು ಬೈರತಿ ಅವರಿಗೆ ಕೊಟ್ಟಿರುವ ಹಿಂಬರಹದಲ್ಲಿ ಸ್ಪಷ್ಟವಾಗಿ ಇದನ್ನು ನಮೂದು ಮಾಡಲಾಗಿತ್ತು. ಅದರಂತೆ ಯಾವ ಯಾವ ಜಾಗವನ್ನು
ಡಿನೋಟಿಫಿಕೇಶನ್‍ನ ಪ್ರಕ್ರಿಯೆಯಿಂದ ಕೈಬಿಡಜಾಗ ಕೈಬಿಡಬೇಕೆಂದು ಸೂಚಿಸಲಾಗಿತ್ತು. ಜೊತೆಗೆ ಆ ಜಾಗವನ್ನು ಯಾವ ಯಾವ ಸರ್ವೆ ನಂಬರ್‍ನಿಂದ ಯಾವ ಯಾವ ಜಾಗವನ್ನು ಕೈಬಿಡಬೇಕು ಎಂದು ಹಿಂಬರಹದಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿತ್ತು. ಈ ಮನವಿಯ ಮೇರೆಗೆ ಯಾವ ಸರ್ವೇ ನಂಬರ್‍ನಿಂದ ಯಾವ ಜಾಗವನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲಾಗಿದೆ ಎಂಬ ಬಗ್ಗೆಯೂ ಬೈರತಿ ಬಸವರಾಜು ಅವರಿಗೆ ಹಿಂಬರಹವನ್ನು ರವಾನೆ ಮಾಡಲಾಗಿತ್ತು. ಇದಾದ ಬಳಿಕ ಹೈಕೋರ್ಟ್‍ಲ್ಲಿ ವಾದವಿವಾದ ನಡದಿತ್ತು.

ಆದರೆ ಶಿವರಾಮ ಲೇಯೌಟಿಗೆ ಸಂಬಂಧಿಸಿ ಬೈರತಿ ಅವರಿಗೆ ಸೇರಿದ 38.5 ಗುಂಟೆ ಜಾಗದ ಕಡತ ಡಿನೋಟಿಫಿಕೇಶನ್ ಪ್ರಕ್ರಿಯೆಯಿಂದ ನಾಪತ್ತೆಯಾಗಿದೆ
ಎನ್ನಲಾಗಿದೆ. ಅಲ್ಲಿ ಭೂಸ್ವಾದೀನ ಕಚೇರಿ ಇದ್ದು ಬಾಬು ಅವರು ಮುಖ್ಯಸ್ಥರಾಗಿದ್ದು ಇವರ ಸುಪರ್ದಿಯಿಂದಲೇ ಕಡತ ನಾಡಪತ್ತೆಯಾಗಿದೆ ಎನ್ನಲಾಗಿದೆ. ಒಟ್ಟು ಎಷ್ಟು ಜಾಗ ಈ ಪ್ರಕ್ರಿಯೆಯಿಂದ ನಾಪತ್ತೆಯಾಗಿದೆ, ಯಾವ ಸರ್ವೆ ನಂಬರ್‍ನ ಕಡತ ನಾಪತ್ತೆಯಾಗಿದೆ ಎಂಬ ಬಗ್ಗೆ ತನಿಖೆ ನಡೆಯಬೇಕಾಗಿದೆ ಎಂಬ ಒತ್ತಾಯ ಕೇಳಿಬಂದಿದೆ.

ಈ ಬಗ್ಗೆ ಕೋರ್ಟಿನಲ್ಲಿ ವಾದವಿವಾದ ನಡೆದಿದ್ದು, ಕಡತದ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಲಾಗಿತ್ತು. ಆದರೆ ತನಿಖೆ ನಡೆಸಲು ಕಡತವನ್ನು ಕೋರ್ಟಿಗೆ
ಹಾಜರುಪಡಿಸಲು ಸೂಚಿಸಲಾಗಿತ್ತು. ಈ ಬಗ್ಗೆ ಮಾಹಿತಿ ಅರಿತ ಬೈರತಿ ಬಸವರಾಜು ಅವರು ಬಿಡಿಎ ಕಚೇರಿಗೆ ತೆರಳಿದ್ದಾರೆನ್ನುವ ಮಾಹಿತಿಯನ್ನು
ವಾರ್ತಾವಾಹಿನಿಯೊಂದು ವರದಿ ಮಾಡಿದೆ. ಬಿಡಿಎ ಕಚೇರಿಯಲ್ಲಿ ಎರಡು ಗೇಟ್‍ಗಳಿದ್ದು, ಅದರ ಹಿಂದಿನ ಗೇಟ್‍ನಲ್ಲಿ ತೆರಳಿದ್ದಾರೆ. ಇವರು ಭೇಟಿ ನೀಡಿದ ಬಳಿಕವೇ ಕಡತ ನಾಪತ್ತೆಯಾಗಿದ್ದು ಯಾಕೆ ಎಂಬ ಪ್ರಶ್ನೆ ಕೇಳಿಬಂದಿದೆ. ಬೈರತಿ ಬಸವರಾಜು ಅವರಿಗೆ ಸೇರಿದ ಜಾಗದ ಕಡತವೇ ನಾಪತ್ತೆಯಾಗಿರುವ ಶಂಕೆ ದಟ್ಟವಾಗಿದೆ.

ಅಧಿಕಾರಿಗಳ ಕಣ್ಣ ಮುಂದೆಯೇ ಈ ರೀತಿ ಕಡತ ನಾಪತ್ತೆಯಾಗಿರುವುದು ಸಾಕಷ್ಟು ಸಂಶಯಕ್ಕೆ ಕಾರಣವಾಗಿದೆ. ಅಲ್ಲದೆ ಕೋರ್ಟಲ್ಲಿ ಈ ವಿಚಾರ ಪ್ರಸ್ತಾಪ ಆದ
ಬಳಿಕವೇ ನಾಪತ್ತೆಯಾಗಿರುವ ಬಗ್ಗೆ ಸಾಕಷ್ಟು ಸಂಶಯ ವ್ಯಕ್ತವಾಗಿದ್ದು, ಅಕ್ರಮ ಎಸಗಿದವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಒತ್ತಾಯ ಕೇಳಿಬಂದಿದೆ.
ಬೈರತಿ ಬಸವರಾಜು ಅವರ ಚಿತಾವಣೆಯಿಂದ ಈ ಕಡತ ನಾಪತ್ತೆಯಾಗಲು ಕಾರಣವಾಗಿದ್ದು, ಇದರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಲಾಗಿದೆ.
ಪ್ರಕರಣದ ಬಗ್ಗೆ ಬಿಡಿಎಯ ಉನ್ನತ ಮೂಲಗಳಿಂದ ಮಾಹಿತಿ ಲಭಿಸಿದೆ ಎಂದು ದೃಶ್ಯವಾಹಿನಿ ವರದಿ ಮಾಡಿದೆ. ಇದೆಲ್ಲಾ ಬೈರತಿ ಬಸವರಾಜು ಅವರಿಗೆ ಸೇರಿದ
ಜಾಗವಾಗಿದ್ದು, ಇವರ ವಿರುದ್ಧ ಉನ್ನತ ತನಿಖೆ ನಡೆಯಬೇಕೆಂಬ ಆಗ್ರಹ ಕೇಳಿಬಂದಿದೆ.

ಸಿದ್ದರಾಮಯ್ಯ ಅವರ ಆಪ್ತನಾಗಿರುವ ಬೈರತಿ ಬಸವರಾಜು ವಿರುದ್ಧ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಏನು ಕ್ರಮ
ಕೈಗೊಳ್ಳಿದ್ದಾರೆ ಎಂಬ ಪ್ರಶ್ನೆ ಮೂಡಿದೆ. ಗಣಪತಿ ನಿಗೂಢ ಸಾವಿನ ಪ್ರಕರಣದ ಕುರಿತು ಸಿಬಿಐ ತನಿಖೆ ಕೈಗೊಳ್ಳಲಿದ್ದರೂ ಸಚಿವ ಕೆ.ಜೆ. ಜಾರ್ಜ್‍ನಿಂದ ಸಿದ್ದರಾಮಯ್ಯ ರಾಜೀನಾಮೆ ಪಡೆದಿಲ್ಲ. ಆದ್ದರಿಂದ ಇಲ್ಲೂ ಕೂಡಾ ಬೈರತಿ ಅವರ ರಾಜೀನಾಮೆ ಪಡೆಯುವ ಲಕ್ಷಣ ಕಾಣುತ್ತಿಲ್ಲ. ಸಿದ್ದು ಎಂದಿನ ಶೈಲಿಯಲ್ಲಿ ತಮ್ಮ ಪಕ್ಷದ ಶಾಸಕರನ್ನು ರಕ್ಷಿಸುವ ಕೆಲಸ ಮಾಡಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗಿದೆ.

ಎಸಿಬಿನ್ನು ತನ್ನ ಸ್ವಂತಕ್ಕೆ ಬಳಸುವ ಕಾಂಗ್ರೆಸ್ ಸರಕಾರ ತಮ್ಮ ವಿರೋಧಿಗಳ ಮೇಲೆಲ್ಲಾ ಪ್ರಕರಣದ ಅಸ್ತ್ರವನ್ನು ಪ್ರಯೋಗಿಸಿದೆ. ಇದೇ ರೀತಿ ಎಕ್ರೆಗಟ್ಟಲೆ ಜಾಗವನ್ನು ಸರಕಾರ ಅಕ್ರಮವಾಗಿ ಡಿನೋಟಿಫಿಕೇಶನ್ ಮಾಡಿದೆ. ಸರಕಾರಿ ಜಾಗವನ್ನು ತನ್ನ ಹೆಸರಿಗೆ ಮಾಡಿಕೊಂಡು ಅದರಲ್ಲಿ ವಾಣಿಜ್ಯ ಸಂಕೀರ್ಣಗಳನ್ನು ಕಟ್ಟುವ ಕೆಲಸವನ್ನು ಕಾಂಗ್ರೆಸ್ ಶಾಸಕರು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ. ಯಡಿಯೂರಪ್ಪ ಅವರನ್ನು ಪ್ರಕರಣದಲ್ಲಿ ಸಿಲುಕಿಸಲು ಹೋದ ಸಿದ್ದರಾಮಯ್ಯ ಸರಕಾರ ಇದೀಗ ವಿಚಾರಣೆಯ ಕೊನೆಗೆ ತಾನೇ ಅದರಲ್ಲಿ ಸಿಲುಕುವ ಹಂತಕ್ಕೆ ಬಂದು ತಲುಪಿದೆ.

Source : Tv9

Disclaimer : This article is written with the information given by Tv9 and the postcard is not responsible for any false informations.

-ಚೇಕಿತಾನ

Tags

Related Articles

Close