ಪರಪ್ಪನ ಅಗ್ರಹಾರದಲ್ಲಿರುವ ಕರ್ಮಕಾಂಡದ ಬಗ್ಗೆ ಅದೆಷ್ಟು ಹೇಳಿದರೂ ಸಾಲದು!! ಯಾಕೆಂದರೆ ಸೆರೆಮನೆಯೂ ಅರಮನೆಯಾದರೆ ಖೈದಿಗಳು ಮನೆಯಲ್ಲಿದ್ದರೇನು ಅಥವಾ ಪರಪ್ಪನ ಅಗ್ರಹಾರದಲ್ಲಿದ್ದರೇನು?? ಎಲ್ಲವೂ ಒಂದೇ ಎಂದೆನಿಸುತ್ತೇ ಅಲ್ವೇ?? ಆದರೆ ಈ ಅಕ್ರಮಗಳಿಗೆಲ್ಲ ತೆರೆ ಎಳೆಯಲು ಬಂದ ಅಧಿಕಾರಿ ಡಿ. ರೂಪಾ ಅವರು, ಭ್ರಷ್ಟಾಚಾರ ನಿಗ್ರಹ ದಳಕ್ಕೆ ನೀಡಿದ್ದ ದೂರಿನ ಕಥೆ ಏನಾಯಿತು ಎಂಬುದು ಕೂಡ ಇದೀಗ ರಹಸ್ಯವಾಗಿದೆ!! ಅಷ್ಟೇ ಅಲ್ಲದೇ, ಈ ಬಗ್ಗೆ ಡಿ. ರೂಪಾಗೆ ಮಾಹಿತಿ ನೀಡಿದ್ದರು ಎಂಬ ಅನುಮಾನದ ಮೇಲೆ ಮೂವತ್ತೆರಡು ಕೈದಿಗಳಿಗೆ ಮನಸೋ ಇಚ್ಛೆ ತಳಿಸಿರುವುದು ವಿಪರ್ಯಾಸ!!!
ಹೌದು… ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಪರಪ್ಪನ ಅಗ್ರಹಾರ ಪ್ರಕರಣ ಹಾಗೂ ಈ ಪ್ರಕರಣವನ್ನು ಬೆಳಕಿಗೆ ತಂದ ಡಿ.ರೂಪಾ ರಾಜ್ಯಾದ್ಯಂತ ಮನೆಮಾತಾಗಿದ್ದರು. ಇದೀಗ ಖಡಕ್ ಆಫೀಸರ್ ಡಿ.ರೂಪಾ ಅವರ ದಿಟ್ಟತನ ಹಾಗೂ ಧೈರ್ಯವನ್ನು ಎಲ್ಲರೂ ಮೆಚ್ಚಲೇಬೇಕು! ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಆಂತರಿಕ ಪರಿಸ್ಥಿತಿಯ ಕುರಿತು ಡಿಐಜಿ ರೂಪಾ ತಮ್ಮ ಮೇಲಾಧಿಕಾರಿಗೆ ಬರೆದ ಪತ್ರ ಚರ್ಚೆಗೆ ಗ್ರಾಸವಾಗಿತ್ತು. ಅಷ್ಟೇ ಅಲ್ಲದೇ ,ಆ ಪತ್ರದಲ್ಲಿ ತಮಿಳುನಾಡು ಸಿಎಂ ಜಯಲಲಿತಾ ಆಪ್ತೆ ಶಶಿಕಲಾ ಹಾಗೂ ನಕಲಿ ಛಾಪಾ ಕಾಗದ ಹಗರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕರೀಂ ಲಾಲ್ ತೆಲಗಿ ಹೆಸರೂ ಇರುವುದರಿಂದ ಸುದ್ದಿಗೆ ರಾಷ್ಟ್ರೀಯ ಆಯಾಮಯೂ ದೊರಕಿತ್ತೂ ಕೂಡ!!
ಅಷ್ಟೇ ಅಲ್ಲದೇ, ಒಟ್ಟು ನಾಲ್ಕು ಪುಟಗಳ ಪತ್ರದ ಜತೆಗೆ 6 ಪುಟಗಳ ಜೈಲಿನ ವೈದ್ಯಾಧಿಕಾರಿಗಳ ಪತ್ರವನ್ನೂ ಮೇಲಾಧಿಕಾರಿಗೆ ಸಲ್ಲಿಸಿದ್ದಾರೆ ಡಿಐಜಿ ರೂಪಾ. ವಿಶೇಷ ಅಂದರೆ ಪತ್ರದಲ್ಲಿ ತಮ್ಮ ಮೇಲಾಧಿಕಾರಿ ಡಿಜಿಪಿ ಸತ್ಯನಾರಾಯಣ್ ರಾವ್ ಅವರ ಮೇಲಿನ ಆರೋಪಗಳನ್ನೂ ಮಹಿಳಾ ಅಧಿಕಾರಿ ಪ್ರಸ್ತಾಪಿಸಿದ್ದಾರೆ. ಪತ್ರವು, ಶಶಿಕಲಾ ಹಾಗೂ ತೆಲಗಿ ಆಚೆಗೂ ಜೈಲಿನ ಒಳಗಿರುವ ಆಸ್ಪತ್ರೆಯ ಸಿಬ್ಬಂದಿಗಳ ಪರಿಸ್ಥಿತಿಯ ಕುರಿತು ವಿಶೇಷವಾಗಿ ಬೆಳಕು ಚೆಲ್ಲಿತ್ತು!! ಆದರೆ, ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಇರುವ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿನ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಕಾರಣಕ್ಕೆ ಬಂಧಿಖಾನೆ ಡಿಐಜಿ ಡಿ. ರೂಪಾ ಅವರಿಗೆ ರಾಜ್ಯ ಸರ್ಕಾರದಿಂದ ಸಿಕ್ಕಿದ್ದು ಮಾತ್ರ ನೊಟೀಸ್!!
ಈ ಬಗ್ಗೆ ಪರಪ್ಪನ ಅಗ್ರಹಾರ ಜೈಲು ಅವ್ಯವಹಾರದ ತನಿಖೆ ನೇತೃತ್ವ ವಹಿಸಿದ್ದ ವಿನಯ್ ಕುಮಾರ್ ಅವರು ಸರಕಾರಕ್ಕೆ ವರದಿಯನ್ನು ಕೊಟ್ಟಾಗಿದೆಯಾ? ಅಥವಾ ಆ ವರದಿಯು ರೂಪಾ ಮೌದ್ಗಿಲ್ ಪರವಾಗಿದೆ ಎಂಬ ಕಾರಣಕ್ಕೆ ಅದನ್ನು ಸರಕಾರವು ಬಹಿರಂಗ ಮಾಡುತ್ತಿಲ್ಲವಾ ಎಂಬ ಪ್ರಶ್ನೆಗಳು ಇದೀಗಾ ಎದುರಾಗಿದೆ!! ಏಕೆಂದರೆ, ತನಿಖೆಗಾಗಿ ನೇಮಿಸಿದ್ದ ತಂಡ ಹಾಗೂ ಅದರ ಕಚೇರಿ ಸ್ಥಳವು ಸದ್ಯಕ್ಕೆ ಕಾರ್ಯ ನಿರ್ವಹಿಸುತ್ತಿಲ್ಲ ಎಂಬುದು ಮೂಲಗಳಿಂದ ಬಂದಿರುವ ಮಾಹಿತಿಯಾಗಿದೆ!! ಆದರೆ, ಈ ಬಗ್ಗೆ ಪ್ರಶ್ನೆ ಮಾಡುವುದಕ್ಕೆ ವಿನಯ್ ಕುಮಾರ್ ಅವರು ಕೂಡ ಮಾಧ್ಯಮಗಳಿಗೆ ಸಂಪರ್ಕಕ್ಕೆ ಸಿಗುತ್ತಿಲ್ಲ ಎನ್ನುವುದು ಅನುಮಾನಕ್ಕೆ ಎಡೆಮಾಡಿಕೊಡುತ್ತಿದೆ!!
ಆದರೆ, ಡಿ.ರೂಪಾ ಅವರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ನೀಡಿದ್ದ ದೂರಿನ ಕಥೆ ಏನಾಯಿತು ಎಂಬುದು ಕೂಡ ರಹಸ್ಯವಾಗಿದೆ. ಕಾನೂನು ತಜ್ಞರು ಹೇಳುವ ಪ್ರಕಾರ, ಎಸಿಬಿಯು ಈ ವೇಳೆಗಾಗಲೇ ತನಿಖೆ ಪೂರ್ಣ ಮಾಡಿ, ವರದಿ ನೀಡಬೇಕಿತ್ತು. ಈ ಬಗ್ಗೆ ಲಲಿತಾ ಕುಮಾರಿ ವರ್ಸಸ್ ಉತ್ತರ ಪ್ರದೇಶದ ಸರಕಾರದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‍ನಿಂದ ಕಾಲಾವಧಿ ವಿಚಾರದ ಸ್ಪಷ್ಟ ಸೂಚನೆ ಇದೆ. ಹಾಗಾದರೆ ರೂಪಾ ಅವರು ಎಸಿಬಿಗೆ ನೀಡಿದ ದೂರಿನ ತನಿಖೆ ಎಲ್ಲಿವರೆಗೆ ಬಂತು, ರಾಜ್ಯ ಮಾನವ ಹಕ್ಕು ಆಯೋಗ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿದ್ದ ದೂರಿನ ವರದಿಯಲ್ಲಿ ಏನಿದೆ ಇನ್ನಷ್ಟು ಅಸಕ್ತಿಕರ ಸಂಗತಿಗಳು ಏನು ಗೊತ್ತೇ??
ಎಐಡಿಎಂಕೆ ನಾಯಕಿಯಾಗಿದ್ದ ವಿ.ಕೆ.ಶಶಿಕಲಾಗೆ ರಾಜಾತಿಥ್ಯ ನೀಡುತ್ತಿದ್ದದ್ದು ಸೇರಿದಂತೆ ಪರಪ್ಪನ ಅಗ್ರಹಾರದಲ್ಲಿ ನಡೆಯುತ್ತಿದ್ದ ಅವ್ಯವಹಾರದ ಬಗ್ಗೆ ರೂಪಾ ಮೌದ್ಗಿಲ್ ಅವರಿಗೆ ಮಾಹಿತಿ ನೀಡಿದ್ದರು ಎಂಬ ಗುಮಾನಿ ಮೇಲೆ ಕೃಷ್ಣಕುಮಾರ್ ಆಣತಿಯಂತೆ, ಮೂವತ್ತೆರಡು ಮಂದಿಯನ್ನು ಮನಸೋ ಇಚ್ಛೆ ಬಡಿದು ಬಳ್ಳಾರಿ, ಬೆಳಗಾವಿ, ಮೈಸೂರು ಹೀಗೆ ನಾನಾ ಜೈಲುಗಳಿಗೆ ಸ್ಥಳಾಂತರ ಮಾಡಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು!!! ಇದಕ್ಕೆ ಪುಷ್ಟಿ ನೀಡುವಂಥ ಅಂಶಗಳೆಂದರೆ, ಈ ವಿಚಾರದಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದ ರಾಜ್ಯ ಮಾನವ ಹಕ್ಕುಗಳ ಆಯೋಗವು ವಿಚಾರಣೆ ಪೂರ್ಣಗೊಳಿಸಿ, ವರದಿ ಸಿದ್ಧಪಡಿಸಿರುವ ಮಾಹಿತಿ ಸಿಕ್ಕಿದೆ. ಆ ಪ್ರಕಾರ, ಕೈದಿಗಳ ಮೇಲೆ ಹಲ್ಲೆ ನಡೆಸಿರುವುದನ್ನು ದೃಢಪಡಿಸಿದ್ದು, ರೂಪಾ ಅವರ ಆರೋಪಗಳಿಗೆ ಪುಷ್ಟಿ ನೀಡುವಂಥ ಅಂಶಗಳನ್ನು ಉಲ್ಲೇಖಿಸಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಅಷ್ಟೇ ಅಲ್ಲದೇ, ಕೇಂದ್ರ ಕಾರಾಗೃಹದ ಅವ್ಯವಹಾರದ ಬಗ್ಗೆ ಮಾಹಿತಿ ನೀಡಿದ್ದರು ಎಂಬ ಗುಮಾನಿ ಮೇಲೆ ಮೂವತ್ತೆರಡು ಕೈದಿಗಳ ಮೇಲೆ ಹಲ್ಲೆ ನಡೆದು, ಬಳ್ಳಾರಿ, ಬೆಳಗಾವಿ ಹಾಗೂ ಧಾರವಾಡ ಜೈಲುಗಳಿಗೆ ಸ್ಥಳಾಂತರ ಮಾಡಲಾಗಿತ್ತು ಎಂಬ ಆರೋಪವಿದ್ದದ್ದನ್ನು ಮಾನವ ಹಕ್ಕು ಆಯೋಗ ಖಾತ್ರಿ ಪಡಿಸುವ ವರದಿ ನೀಡಿದೆ ಎಂಬ ಬಗ್ಗೆ ಮಾಧ್ಯಮಗಳಿಂದ ಗೊತ್ತಾಯಿತು ಎಂದು ಡಿ.ರೂಪಾ ಹೇಳಿದ್ದಾರೆ. ಅಷ್ಟೇ ಅಲ್ಲದೇ, ಈ ಬಗ್ಗೆ ಇನ್ನಷ್ಟು ತನಿಖೆ ನಡೆದು ಆ ಕೈದಿಗಳಿಗೆ ನ್ಯಾಯ ಸಿಗಬೇಕು. ಈ ಪ್ರಕರಣದಲ್ಲಿ ರಾಜ್ಯ ಮಾನವ ಹಕ್ಕು ಆಯೋಗಕ್ಕೆ ನಾನು ಅಭಿನಂದನೆ ಹೇಳ್ತೀನಿ ಎಂದಿದ್ದಾರೆ ಡಿ.ರೂಪಾ!!
ಮೂಲ :dailyhunt – original link
– ಅಲೋಖಾ