ಪ್ರಚಲಿತ

ಸಿದ್ಧರಾಮಯ್ಯನ ಸರಕಾರದಿಂದ ತೆರಿಗೆ ಅಧಿಕಾರಿಗಳ ಮನೆಯ ಮೇಲೆ ದಾಳಿ? ಚುನಾವಣೆಗೂ ಮುನ್ನ ಶುರುವಾಯ್ತು ಯುದ್ಧ!

ಸಿದ್ಧರಾಮಯ್ಯನ ಸರಕಾರದಲ್ಲಿ ಈಗ ಬಹುಷಃ ಆಡಳಿತ ವ್ಯವಸ್ಥೆಯನ್ನು ದುರುಪಯೋಗ ಪಡಿಸಿಕೊಳ್ಳಲು ಯಾವುದೂ ಬಾಕಿ ಉಳಿದಿಲ್ಲದರ ಪರಿಣಾಮ ಎಸಿಬಿಯನ್ನೂ ಕೊನೆಯದಾಗಿ ದುರುಪಯಗ ಮಾಡಿಕೊಳ್ಳಲು ಹೊರಟಂತಿದೆ ಸಿದ್ಧರಾಮಯ್ಯನ ಸರಕಾರ!

ತುಘಲಕ್ ಆಡಳಿತದ ಪ್ರತ್ಯಾಸ್ತ್ರ!

ಕಳೆದ ತಿಂಗಳಿನಲ್ಲಿ ಕಾಂಗ್ರೆಸ್ ಪಕ್ಷದ ಮಂತ್ರಿಗಳ ಮೇಲೆ ದಾಳಿ ನಡೆಸಿದ್ದ ತೆರಿಗೆ ಅಧಿಕಾರಿಗಳು ಚುನಾವಣೆಗಿನ್ನು ಬಾಕಿ ಇರುವ ಸ್ವಲ್ಪ ತಿಂಗಳ ಮುಂಚೆ ದಾಳಿ ನಡೆಸಿದ್ದರ ಪರಿಣಾಮ ಕರ್ನಾಟಕದ ಕಾಂಗ್ರೆಸ್ ಪಕ್ಷದ ಜಾತಕವೇ ಬೀದಿಗೆ ಬಂದಿತ್ತಷ್ಟೇ!

ಆದರೆ. . . .

ಸೇಡಿಗೆ ಸೇಡೆಂದು ಶಪಥ ತೊಟ್ಟ ಸಿದ್ಧರಾಮಯ್ಯ ಈಗ ತನ್ನ ಬಗಲಲ್ಲ ಕೂತ ಎಸಿಬಿ ಯನ್ನು ಬಳಸಿ ತೆರಿಗೆ ಅಧಿಕಾರಿಗಳ ಮನೆಯ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದಾರೆ! ಡಿಕೆಶಿ ಪ್ರಕರಣವಾದಾಗಿನಿಂದಲೂ ಬಿಜೆಪಿಯ ಮೇಲೆ, ತೆರಿಗೆ ಅಧಿಕಾರಿಗಳ ಮೇಲೆ, ಕೊನೆಗೆ ಮೋದಿಯ ಮೇಲೂ ವಿಷಕಾರಿದ್ದ ಸಿದ್ಧರಾಮಯ್ಯನ ಸರಕಾರ ಈಗ ಮೋದಿಯ ಬಂಟರಾದ ತೆರಿಗೆ ಅಧಿಕಾರಿಗಳ ಮೇಲೆ ದಾಳಿ ನಡೆಸಿತ್ತೇವೆ ಎಂದು ಬಹಿರಂಗವಾಗಿ ಪ್ರಚಾರ ಮಾಡಿದೆ!

ಎಸಿಬಿಯನ್ನುವುದು ರಾಜ್ಯ ಸರಕಾರದ ಅಧೀನದಲ್ಲಿ ಬರುವುದರಿಂದ ಕೇಂದ್ರ ಸರಕಾರಕ್ಕೆ ತಿರುಗೇಟೆನ್ನುವ ಲೆಕ್ಕದಲ್ಲಿ ಪ್ರತ್ಯಾಸ್ತ್ರ ತಯಾರಿಸಿರುವ ಸಿದ್ಧರಾಮಯ್ಯನ ಸರಕಾರ ಮತ್ತೆ ತನ್ನ ಮೇಲೆಯೇ ತಾ ಚಪ್ಪಡಿ ಕಲ್ಲು ಎಳೆದುಕೊಳ್ಳುತ್ತಾ ಕಾದು ನೋಡಬೇಕು!

ಗೃಹ ಸಚಿವರಾದ ರಾಮಲಿಂಗಾರೆಡ್ದಿ ತೀರಾ ಹಾಸ್ಯಾಸ್ಪವಾಗಿ ಹೇಳಿಕೆ ಕೊಟ್ಟಿದ್ದಾರೆ ಬಿಡಿ! ಎಸಿಬಿಯನ್ನು ಬಿಜೆಪಿಯೇ ದುರುಪಯೋಗ ಪಡಿಸಿಕೊಳ್ಳುತ್ತಿದೆ! ನಾವು ಯಾವುದೇ ರೀತಿಯ ಮಾತುಕಥೆಯನ್ನೂ ಎಸಿಬಿಯೊಂದಿಗೆ ನಡೆಸಿಲ್ಲವೆಂದಿರುವ ರಾಮಲಿಂಗಾರೆಡ್ಡಿಗೆ ಬಹುಷಃ ಯಾರ ಅಧೀನದಲ್ಲಿ ಎಸಿಬಿ ಇದೆ ಎಂಬ ಕಿಂಚಿತ್ ಅರಿವೂ ಇಲ್ಲ!

ಈ ವಿಷಯಕ್ಕೆ ಸಂಬಂಧಿಸಿ IT ವಿಭಾಗದ ಐಜಿ, ಡಿಐಜಿಗೆ ಪತ್ರ ಬರೆದಿದ್ದು ಮತ್ತಿನ್ಯಾವ ಸಂಚಲನ ಕರ್ನಾಟಕದಲ್ಲಾಗಲಿದೆಯೋ ಮೋದಿಗೆ ಮಾತ್ರ ಗೊತ್ತಿದೆ ಬಿಡಿ!

ಮುಂಬರುವ ರಾಜ್ಯಸಭಾ ಚುನಾವಣೆಯಲ್ಲಿ ನೇರ ಹಣಾವಣಿಗಿಳಿದಿರುವ ಯಡಿಯೂರಪ್ಪ ಸಖತ್ ಆಗೇ ಸಿದ್ಧರಾಮಯ್ಯನ ಸರಕಾರದ ವಿರುದ್ಧ ಬ್ಯಾಟಿಂಗ್ ಶುರುವಿಟ್ಟಿದ್ದಾರೆ!

“ಎಸಿಬಿ ಸಿದ್ಧರಾಮಯ್ಯನ ಕಂಕುಳಲ್ಲಿ ಕೂತಿದೆ! ಸದಾಕಾಲವೂ ಸಿದ್ಧರಾಮಯ್ಯನಂತಹವರಿಗೆ ಸಹಾಯ ಮಾಡುವ ಎಸಿಬಿಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಸಿದ್ಧರಾಮಯ್ಯನ ಸರಕಾರಕ್ಕೆ ಜನರೇ ಪ್ರತಿಫಲ ತೋರಲಿದ್ದಾರೆ'” ಎಂದು ಹೇಳಿರುವ ಯಡಿಯೂರಪ್ಪನವರ ಮೇಲೂ ಸಿದ್ಧರಾಮಯ್ಯ ಕಿಡಿ ಕಾರಿದ್ದಾರೆ!

ಸಿದ್ಧರಾಮಯ್ಯನ ಬೇಕಾಬಿಟ್ಟಿ ಆಡಳಿತಕ್ಕೆ ಮಸಾಲೆ ಹಾಕುವಂತೆ ಎಚ್.ವಿಶ್ವನಾಥ್ ರವರು ವ್ಯಂಗ್ಯವಾಡಿದ್ದು ‘ಆ ಸಿದ್ಧರಾಮಯ್ಯನವರಿಗೆ ಏಕವಚನವೂ ಗೊತ್ತಿಲ್ಲ, ಬಹುವಚನವೂ ಗೊತ್ತಿಲ್ಲ! ಆದರೂ, ವ್ಯಾಕರಣ ಪಾಠ ಮಾಡಲಿಕ್ಕೆ ಬರುತ್ತಾರೆ! ಅವರಿಗೆ ಗೊತ್ತಿರೋದು ಒಂದೇ ಸಂಧಿ! ಅದು ನನಗೆ ಗೊತ್ತಿಲ್ಲಪ್ಪ!’ ಎಂದಿರುವ ಎಚ್.ವಿಶ್ವನಾಥ್ ರವರ ವ್ಯಂಗ್ಯ ಇನ್ನಷ್ಟು ಸಂಶಯಗಳಿಗೆ ಎಡೆ ಮಾಡಿದೆ!

ಎಸಿಬಿಯನ್ನು ಬಳಸಿ ಸಿದ್ಧರಾಮಯ್ಯ ತೆರಿಗೆ ಅಧಿಕಾರಿಗಳ ಮೇಲೆ ದಾಳಿ ನಡೆಸಿ ಮತ್ತೆ ತಪ್ಪು ಮಾಡುತ್ತಾರಾ ಎಂಬ ಪ್ರಶ್ನೆಯೊಂದು ಉದ್ಭವವಾಗಿದೆ. ಈಗಾಗಲೇ
ಕಾಂಗ್ರೆಸ್ ಪಕ್ಷದ ಪ್ರತಿ ಸಚಿವರ ಮೇಲೂ, ಮಂತ್ರಿಗಳ ಮೇಲೂ ತನಿಖೆ ನಡೆಸಿರುವ ತೆರಿಗೆ ಅಧಿಕಾರಿಗಳು ದಾಖಲೆಯನ್ನೂ ಸಿದ್ಧಪಡಿಸಿದ್ದಾರೆ ಎಂಬುದು ಮೂಲಗಳಿಂದ ತಿಳಿದು ಬಂದಿದೆಯಷ್ಟೇ!

ಸಿದ್ಧರಾಮಯ್ಯನವರ ಮೇಲೆ ತಿಂಗಳ ಹಿಂದಷ್ಟೇ ಅದೆಷ್ಟೋ ಭ್ರಷ್ಟಾಚಾರ ಕೇಸ್ ಗಳು ದಾಖಲಾಗಿದ್ದರೂ ಸಹ ಇನ್ನೂ ತಪ್ಪೊಪ್ಪಿಕೊಳ್ಳದೇ
ಹುಚ್ಚರ ಹಾಗೆ ನಿರ್ಧಾರ ತೆಗೆದುಕೊಳ್ಳುತ್ತಿರುವುದನ್ನು ನೋಡಿದರೆ ಕರ್ನಾಟಕ ಕಾಂಗ್ರೆಸ್ ಮುಕ್ತವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

– ಪೃಥು ಅಗ್ನಿಹೋತ್ರಿ

Tags

Related Articles

Close