ಪ್ರಚಲಿತ

ಸಿದ್ಧರಾಮಯ್ಯರನ್ನು ಕಂಡರೆ ಮೋದಿಗೆ ಭಯವಂತೆ! ತರತರನೇ ನಡುಗುತ್ತಾರಂತೆ! ಇರಬಹುದೇ?!

ದಿನೇ ದಿನೇ ಸಿದ್ಧರಾಮಯ್ಯರವರ ಮಾನಸಿಕ ಸ್ಥಿತಿ ಹದಗೆಡುತ್ತಿದೆ ಎಂಬುದನ್ನು ಸಾಬೀತು ಪಡಿಸುವ ಹಾಗೆ ದಿನಕ್ಕೊಂದು ತಗಾದೆ ತೆಗೆದಯುವ ಕರ್ನಾಟಕ
ಮುಖ್ಯಮಂತ್ರಿಗಳಿಗೆ ಏನಾಗಿದೆಯೋ ಗೊತ್ತಿಲ್ಲ! ಆದರೆ, ಮತ್ತೆ ಪ್ರಧಾನಿ ಮೋದಿಯವರ ಮೇಲೆ ವಿಷಕಾರಿದ್ದಾರೆ ಸಿದ್ಧರಾಮಯ್ಯ!

ಮೋದಿ ಕರ್ನಾಟಕಕ್ಕೆ ಬಂದಿದ್ದೇ ನನ್ನನ್ನು ಟಾರ್ಗೆಟ್ ಮಾಡಲು!

ಎಂತಹ ಹಾಸ್ಯಾಸ್ಪದ ಅಲ್ಲವೇ?! ಪ್ರಧಾನಿ ಮೋದಿ ಕರ್ನಾಟಕಕ್ಕೆ ಬಂದಾಗಲೆಲ್ಲ ನನ್ನನ್ನು ಟಾರ್ಗೆಟ್ ಮಾಡಿ ಮಾತನಾಡುತ್ತಾರೆ! ನನ್ನ ಕಂಡರೆ ಮೋದಿಗೆ ಭಯ ಎಂದಿರುವ ಸಿದ್ಧರಾಮಯ್ಯರಿಗೆ ಸಾಮಾನ್ಯ ಪ್ರಜ್ಞೆಯೂ ಇಲ್ಲ ಎಂಬುದನ್ನು ಸ್ವತಃ ಸಾಬೀತು ಪಡಿಸಿಕೊಂಡಿರುವ ಅವರ ಹೊಸ ತಗಾದೆಗೆ ಕರ್ನಾಟಕದ ಜನತೆ ಹೊಟ್ಟೆ ಹುಣ್ಣಾಗುವಂತೆ ನಗುತ್ತಿದೆ!

ಪ್ರಧಾನಿ ಮೋದಿ ಕರ್ನಾಟಕಕ್ಕೆ ಭೇಟಿ ಕೊಟ್ಟಿದ್ದನ್ನೇ ವಿವಾದಕ್ಕೊಂದು ಹೊಸ ವಿಷಯ ಸಿಕ್ಕಿತೆನ್ನುವ ಹಾಗೆ ನಡೆದುಕೊಂಡಿರುವ ಸಿದ್ಧರಾಮಯ್ಯ, “ಬಿಜೆಪಿಯವರಿಗೆ ನನ್ನ ಕಂಡರೆ ಭಯವಿದೆ! ನಾನು ದುರ್ಬಲನಾಗಿದ್ದರೆ ಪದೇ ಪದೇ ನನ್ನ ಮೇಲೆ ಯಾಕೆ ವಾಗ್ದಾಳಿ ನಡೆಸುತ್ತಿದ್ದರು?! ಈಗ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಯಾಕೆ ಎಲ್ಲರೂ ಸಹ ನನ್ನ ವಿರುದ್ಧ ತೊಡೆತಟ್ಟಿದ್ದಾರೆ?! ಅವರೆಲ್ಲರಿಗೂ ನನ್ನನ್ನು ಕಂಡರೆ ಭಯವಿದೆ! ಸಿದ್ಧರಾಮಯ್ಯನೆಂದರೆ ಜೆಡಿಎಸ್, ಬಿಜೆಪಿ.. . .ಇವರೆಲ್ಲರಿಗೂ ಸಹ ಭಯ ಆರಂಭವಾಗಿದೆ! ರಾಜ್ಯದ ಜನತೆ ಸಿದ್ದರಾಮಯ್ಯನ ಪರ ಇದ್ದಾರೆ ಎಂಬ ಭಯ ಶುರುವಾಗಿದೆ! ಅದಕ್ಕೇ ಚುನಾವಣೆಗೂ ಮುನ್ನ ಎಷ್ಟುಸಾಧ್ಯವೋ ಅಷ್ಟು ಆರೋಪವನ್ನು ಹೊರಿಸಿ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ” ಎಂದು ಹೇಳಿಕೆ ನೀಡಿದ್ದಾರೆ ಮುಖ್ಯಮಂತ್ರಿ ಸಿದ್ಧರಾಮಯ್ಯ!

ಅಲ್ಲದೇ, “ಬಿಜೆಪಿಯ 150 ಮಿಷನ್ ಕಾಂಗ್ರೆಸ್ ನ ವಿಷನ್ ಆಗಿತ್ತು. ಈಗವರ 150 ಮಿಷನ್ 50 ಕ್ಕೆ ಇಳಿದಿದೆ. ಅವರ ವ್ಯಾಪ್ತಿಯೂ ಸಹ ದುರ್ಬಲವಾಗಿದೆ.” ಎಂದಿದ್ದಾರೆ.

ಕಾಂಗ್ರೆಸ್ ಆಡಳಿತ ಸಹಿಸಿಕೊಳ್ಳಲು ಕರ್ನಾಟಕ ಸಿದ್ಧವಿಲ್ಲ” ಎಂಬ ಮೋದಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ” ಕಾಂಗ್ರೆಸ್ ನನ್ನು ಸಹಿಸಿಕೊಂಡಿದ್ದಕ್ಕೇ ತಾನೆ ನಂಜನಗೂಡಿನಲ್ಲಿ ಜನ ಕಾಂಗ್ರೆಸ್ ನನ್ನು ಗೆಲ್ಲಿಸಿದ್ದು?! ಜನತೆ ಮತ್ತೆ ಕಾಂಗ್ರೆಸ್ ಸರಕಾರ ಬರಲೆಂದೇ ಆಶಿಸುತ್ತಿದ್ದಾರೆ. ಬಿಜೆಪಿಯವರಷ್ಟು ಹೊಲಸು ರಾಜಕೀಯ ಮಾಡುವವರು ಈ ದೇಶದಲ್ಲಿಯೇ ಇಲ್ಲ. ಬಿಜೆಪಿ ರಾಜಕಾರಣಿಗಳು ಕೊಳಕು ರಾಜಕೀಯ ಮಾಡುವಷ್ಟು ಬೇರೆ ಯಾರೂ ಮಾಡುವುದಿಲ್ಲ.

ಇಷ್ಟೆಲ್ಲ ಮಾತನಾಡಿರುವ ಸಿದ್ಧರಾಮಯ್ಯರವನ್ನು ನೋಡಿದರೆ, ಬಹುಷಃ ಪ್ರಧಾನಿ ಮೋದಿಯೂ ಇವರ ನೋಡಿ ಹೆದರುವಷ್ಟು ಶಕ್ತಿವಂತರೆಂದುಕೊಂಡರೋ ಅಥವಾ ‘ಹುಲಿ’ ಎಂದುಕೊಂಡ ‘ಇಲಿ’ ಪಕ್ಕದಲ್ಲಿದ್ದನ್ನೇ ತಪ್ಪು ತಿಳಿದುಕೊಂಡರೋ! ಅಂತೂ ಇಂತೂ ಹೀಗಾಗಿದೆ ಪರಿಸ್ಥಿತಿ!

ಸಿದ್ಧರಾಮಯ್ಯರವರಿಗೆ ಬಹುಷಃ ಕನಿಷ್ಟ ಜ್ಞಾನವೂ ಇಲ್ಲ ವೆಂಬುದು ಪದೇ ಪದೇ ಸಾಬೀತಾಗುತ್ತಿದೆ! ಬಿಜೆಪಿಯವರು ತನ್ನನ್ನು ನೋಡಿ ಹೆದರಿಕೊಂಡಿದ್ದಾರೆ ಎಂದಿರುವ ಸಿದ್ಧರಾಮಯ್ಯರವರಿಗೆ ಭಯಕ್ಕೂ ತಿರಸ್ಕಾರಕ್ಕೂ ವ್ಯತ್ಯಾಸವೇ ಗೊತ್ತಿಲ್ಲವೆಂದು ಕಾಣುತ್ತದೆ! ಬಿಜೆಪಿಯವರು ಹೆದರಿಕೆ ಇರುವುದರಿಂದಲೇ ಆರೋಪ ಮಾಡುತ್ತಾರೆನ್ನುವ ಸಿದ್ಧರಾಮಯ್ಯ ನವರು ತಾವು ಬೇಕಾಬಿಟ್ಟಿ ಮಾತನಾಡಿದ್ದನ್ನು ಹೇಳುವುದೇ ಇಲ್ಲವಷ್ಟೇ!

ನಾನು ಮೋದಿಯ ಭಾಷಣಕ್ಕೆ ಹೋಗುವುದಿಲ್ಲ” ಎಂದು ಬೊಬ್ಬಿರಿದ ಸಿದ್ಧರಾಮಯ್ಯನವರಿಗೆ ಹಾಗಾದರೆ ತಮ್ಮಿಂದ ಮೋದಿ ಹೆದರಿ ಭಾಷಣ ಮಾಡದೇ ಇರುತ್ತಾರೆಂಬ ಕಾರಣಕ್ಕೋ ಅಥವಾ ಮೋದಿಯೆದುರಿಗೆ ನಿಲ್ಲುವಷ್ಟು ಧೈರ್ಯವಿಲ್ಲ ವೆನ್ನುವ ಕಾರಣಕ್ಕೋ,! ಒಟ್ಟಾರೆಯಾಗಿ ಹೇಳಿಕೆ ಕೊಟ್ಟು ಅಹಂಕಾರ ಮೆರೆದಿದ್ದ ಸಿದ್ಧರಾಮಯ್ಯನವರು ತಾನೊಬ್ಬ ಕರ್ನಾಟಕದ ಮುಖ್ಯಮಂತ್ರಿ ಎನ್ನುವುದನ್ನೂ ಮರೆತು ದೇಶದ ಪ್ರಧಾನಿಯ ಬಗ್ಗೆ ಅತಿರೇಕವೆನ್ನುವಷ್ಟು ನಾಲಿಗೆ ಹರಿಬಿಡುತ್ತಾರೆಂದರೆ ಎಂತಹ ಬೇಜವಾಬ್ದಾರಿತನವಿರಬೇಕು?!

ನೀವೇ ಯೋಚಿಸಿ!

– ತಪಸ್ವಿ

Tags

Related Articles

Close