ಇದು ತೀರಾ ಅತಿಯಾಗಲಿಲ್ಲವಾ?!!!
ಒಬ್ಬ ಪತ್ರಕರ್ತೆಯಾದ ಮಾತ್ರಕ್ಕೆ ಮೂರು ಸುತ್ತು ತೋಪು ಸಿಡಿಸಿ ಅಂತ್ಯ ಸಂಸ್ಕಾರಕ್ಕೆ ಗೌರವಾರ್ಥವಾಗಿ ಅಂತೆಲ್ಲ ನಾಟಕೀಯ ಮಾಡುವ ಸಿದ್ಧರಾಮಯ್ಯರವರ
ಸರಕಾರಕ್ಕೆ ಇನ್ಯಾವ ಭಾಷೆಯಲ್ಲಿಯೂ ಪ್ರಶ್ನಿಸಲು ತ್ರಾಣವಿಲ್ಲ.
ತನ್ನ ನಾಡನ್ನು ಗೌರವಿಸಲಿಲ್ಲ! ತನ್ನ ಧರ್ಮವನ್ನೊಪ್ಪಲಿಲ್ಲ! ಹೋಗಲಿ! ದೇಶವನ್ನು ತುಂಡು ತುಂಡು ಮಾಡುತ್ತನೆಂದು ಹೊರಟ ಕನ್ಹಯ್ಯಾನನ್ನು ಸ್ವತಃ ಮಗನೆಂದ
ಗೌರಕ್ಕನಿಗೆ ಅದ್ಯಾವ ರೀತಿಯಲ್ಲಿ ಗೌರವ ಕೊಡಬೇಕೆನ್ನುತ್ತೀರಿ?!
ಇಡಿಯ ಬದುಕನ್ನೂ ಸಹ ಆಕೆ ವಿವಾದದಲ್ಲಿಯೇ ಕಳೆದಿದ್ದಳೆಂಬುದಾದರೂ ಸಹ, ಆಕೆಯ ಅಂತ್ಯಸಂಸ್ಕಾರವೂ ಸಹ ವಿವಾದದಲ್ಲಿಯೇ ಅಂತ್ಯ ಕಂಡಿದೆ! ‘ಸರಕಾರಿ
ಗೌರವ’ ವವನ್ನು ನೀಡುವ ಅಗತ್ಯವಿತ್ತೇ?! ಅಥವಾ ರಾಜಕೀಯ ಪಕ್ಷದಲ್ಲಿ ಆಕೆಗೆ ಯಾವುದಾದರೂ ಸ್ಥಾನವಿತ್ತೇ?! ಅಥವಾ ಸಿದ್ಧರಾಮಯ್ಯನ ‘ಮತ ಬ್ಯಾಂಕ್’ ಇದರಲ್ಲೂ ವ್ಯಕ್ತವಾಯಿತೇ?!
ಆಕೆಯ ನಕ್ಸಲ್ ಮನಃಸ್ಥಿತಿಗೆ ಕೊಟ್ಟ ಗೌರವವಿದಾಯಿತೇ?! ಸರಕಾರಿ ಗೌರವದ ಅರ್ಥವಾದರೂ ಏನು ಸ್ವಾಮಿ?!
ಸ್ವಾತಂತ್ರ್ಯಾನಂತರ ಸರಕಾರೀ ಅಂತ್ಯಸಂಸ್ಕಾರದ ಗೌರವವನ್ನು ಪಡೆದ ಮೊದಲ ವ್ಯಕ್ತಿ ಮಹಾತ್ಮಾ ಗಾಂಧಿ! ಆದರೆ, ಇವತ್ತು ನಕ್ಸಲ್ ರನ್ನು ಬೆಂಬಲಿಸಿದ ಮಹಿಳೆಗೆ ಸರಕಾರೀ ಅಂತ್ಯಸಂಸ್ಕಾರ ಯಾಕೆ?! ಇಷ್ಟು ರೀತಿಯ ಗೌರವವನ್ನು ಪಡೆಯುವುದಕ್ಕೆ ಆಕೆ ಯಾವ ರಾಜಕೀಯ ಪಕ್ಷದಲ್ಲಿದ್ದರು?! ಸಮಾಜಕ್ಕಾವ ಕೊಡುಗೆ ನೀಡಿದ್ದಾರೆ?! ಒಂದು ದಿನವಾದರೂ ಸಮಾಜ ಶಾಂತಿ ಹಾಗೂ ಸೌಹಾರ್ದದಿಂದಿರಲು ಅವಕಾಶ ಮಾಡಿಕೊಟ್ಟರೇ?! ಆಕೆಯ ಒಲವಿನ ನಕ್ಸಲ್ ರ ವೃತ್ತಿಯ ಬಗ್ಗೆ ಮತ್ತೆ ಮತ್ತೆ ಬಿಡಿಸಿ ಹೇಳುವ ಅವಶ್ಯಕತೆ ಇಲ್ಲವಷ್ಟೇ!
ಆಕೆಯ ಪ್ರತಿ ಭಾಷಣವೂ ಸಹ ಒಂದು ಧರ್ಮವನ್ನು ತೆಗಳುವುದೇ ಆಗಿತ್ತೇ ವಿನಃ ಬೇರೇನೂ ಅಲ್ಲವಲ್ಲ?! ಜಗದ ಅಷ್ಟೂ ಮುಸಲ್ಮಾನ ಸಮಾಜದ ಜವಾಬ್ದಾರಿ ತನ್ನ ಮೇಲೇ ಇದೆ ಎಂಬ ಆಕೆಯ ಧೋರಣೆ, ನಕ್ಸಲ್ ರನ್ನು ಬೆಂಬಲಿಸುತ್ತಿದ್ದ ರೀತಿ, ದೇಶವನ್ನು ತುಂಡು ಮಾಡುತ್ತೇನೆಂದು ಹೊರಟರವರ ಓಲೈಕೆ! ಸಿದ್ಧರಾಮಯ್ಯರವರ ಸರಕಾರ ಯೋಚಿಸಲೇ ಬೇಕಿತ್ತು!!! ಆಕೆಗೆ, ಅದಾವ ಆಧಾರದಲ್ಲಿ ಸರಕಾರಿ ಗೌರವದ ಅಂತ್ಯಕ್ರಿಯೆಯನ್ನು ನಡೆಸಲು ಅನುವು ಮಾಡಿಕೊಟ್ಟರೋ ಆ ರಹೀಮನೇ ಬಲ್ಲ!!!
ಬಿಡಿ! ಇಲ್ಲಿಯ ತನಕ ಸರಕಾರೀ ಗೌರವವನ್ನು ಪಡೆಯಲು ಅರ್ಹರಾಗಿರುವರು ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನ ಮಂತ್ರಿ.. ಇಂತಹ ಹುದ್ದೆಗಳಲ್ಲಿರುವವಗೆ ಮಾತ್ರ! ಅದೂ ಬಿಟ್ಟರೆ, ದೇಶಕ್ಕೆ ಪ್ರಾಣ ತೆತ್ತ ಸೈನಿಕಾದಿಗಳಿಗೆ ಮಾತ್ರ! ಆದರೆ, ಈಕೆ ಯಾವ ಮಹಾನ್ ಕಾರ್ಯ ಮಾಡಿದ್ದಾರೆ ಸ್ವಾಮಿ?! ದೇಶವನ್ನೇ ವಿರೋಧಿಸಿದ ಇವರುಗಳಿಗೆ ಗೌರವದ ಅವಶ್ಯಕತೆ ಇದೆಯೇ?! ತದನಂತರದ ಚುನಾವಣೆಯಲ್ಲಿ,ಇದೇ ರೀತಿಯ ನಕ್ಸಲ್ ಪರ ಪಕ್ಷವೇನಾದರೂ ಗೆದ್ದರೆ ಸರ್ವರಿಗೂ ಸರಕಾರೀ ಗೌರವ ಸಿಗುತ್ತದೆಯೇ?!
ಹಾಸ್ಯಾಸ್ಪದವದೇ!!!ಆಕೆಯ ಅಂತ್ಯ ಸಂಸ್ಕಾರ ಬಿಗಿ ಪೋಲಿಸ್ ಬಂದೋ ಬಸ್ತ್ ನಲ್ಲಿ ನಡೆದಿದೆಯಷ್ಟೇ!!! ಅದೂ ಪೂರ್ವಾಪರ ಯೋಜನೆಗಳಿಲ್ಲದೇ, ಯಾವ ಪೋಲಿಸ್ ಆಯುಕ್ತರಿಗೂ ಮುನ್ಸೂಚನೆ ನೀಡದೇ ರಾಜ್ಯ ಸರಕಾರ ಈ ಕೆಳ ಮಟ್ಟದ ನಿರ್ಧಾರ ತೆಗೆದುಕೊಂಡಿರುವ ಅಗತ್ಯವಾದರೂ ಏನು?!
ಮೂರು ಸಲ ಗುಂಡು ಹಾರಿಸಿ ಆಕೆಗೆ ಸರಕಾರೀ ಗೌರವವನ್ನು ನೀಡಿದ್ದಾರೆ ಸಿದ್ಧರಾಮಯ್ಯ! ಆಕೆಯ ಆತ್ಮಕ್ಕೆ ಶಾಂತಿ ಸಿಗಲೆಂಬ ಹಾರೈಕೆಯಿಂದ ಎಂದು ಸಮರ್ಥನೆ ನೀಡುವ ಸಿದ್ಧರಾಮಯ್ಯರವರಿಗೆ ಅರ್ಥ ಆಗಬೇಕಿತ್ತು! ಯಾವ ಎಡಪಂಥೀಯರೂ ಸಹ ಆತ್ಮದ ಅಸ್ತಿತ್ವವನ್ನೇ ಒಪ್ಪುವುದಿಲ್ಲ! ಇನ್ನಾವ ಹಾರೈಕೆ?! ಇನ್ನಾವ ಶಾಂತಿ?! ಯಾವುದೇ ರೀತಿಯ ಅಂತ್ಯ ಸಂಸ್ಕಾರದ ವಿಧಿಯನ್ನೂ ಒಪ್ಪದಿರುವ ಎಡಪಂಥೀಯರಿಗೆ ಅಸಲಿಗೆ ಅಂತ್ಯ ಸಂಸ್ಕಾರದ ಹಂಗಾದರೂ ಇದೆಯೇ?! ಇಲ್ಲವಲ್ಲ?! ಈಗ ಸರಕಾರೀ ಗೌರವ! ಶಹಭಾಶ್ ಸಿದ್ಧರಾಮಯ್ಯ! ನಿಮ್ಮ ಮತಬ್ಯಾಂಕ್ ತುಂಬುತ್ತಿದೆ!
ಬಿಡಿ! ಈ ಹತ್ಯೆ ನಡೆದಿರುವುದು ಪೂರ್ವ ಯೋಜನೆಯಿಂದಲೇ, ಅದೂ ಪೂರ್ವ ಸಿದ್ಧತೆ ಮಾಡಿಕೊಂಡ ಕ್ರಿಮಿನಲ್ ಗಳಿಂದಲೇ, ಹೆಚ್ಚುವರಿ ಆಯುಕ್ತರಿಗೆ ತನಿಖೆ ನಡೆಸಲು ಹೇಳಿದ್ದೇನೆ ಎಂದ ಸಿದ್ಧರಾಮಯ್ಯರವರಿಗೆ ಸಿಬಿಐ ಗೆ ಕೊಡಲು ಯಾಕೆ ಮನಸ್ಸಾಗಲಿಲ್ಲವೋ?! ಗೌರಿಯವರ ತಮ್ಮ ಇಂದ್ರಜಿತ್ ಲೋಕೇಶ್ ರವರು ‘ಇದು ನಕ್ಸಲ್ ಹಾಗೂ ಮಾವೋವಾದಿಗಳದ್ದಷ್ಟೇ! ಆಕೆಗೆ ಬೆದರಿಕೆಗಳೂ ಅವರಿಂದಲೇ ಬರುತ್ತಿತ್ತು, ಸುಮ್ಮನೆ ಏನೇನೋ ಆರೋಪ ಮಾಡಬೇಡಿ’ ಎಂದ ಇಂದ್ರಜಿತ್ ಹೇಳಿಕೆಯಿಂದ ಎಡಪಂಥೀಯರಿಗೆಲ್ಲ ಬರ್ನಾಲ್ ಭಾಗ್ಯವಷ್ಟೇ!
ಸಮಾಧಾನವೆಂದರೆ ದೇಶವನ್ನ ತುಂಡು ಮಾಡುತ್ತೇನೆಂದವರ ತಾಯಿಯೆಂದು ಘೋಷಿಸಿಕೊಂಡ ಆಕೆಗೆ ‘ತಿರಂಗ ಧ್ವಜ’ವನ್ನೊಂದು ಶವಕ್ಕೆ ಹೊದೆಸಲಿಲ್ಲ! ದೇಶದ ಘನತೆ ಕೆಳಗಿಳಿಯುತ್ತಿತ್ತು!!!
– ತಪಸ್ವಿ