ಪ್ರಚಲಿತ

ಸೀರೆಯುಟ್ಟ ಭಾರತೀಯ ಮಹಿಳೆಯರು ‘ಇಂಡಿಯಾ ಟುಡೇ’ ಯ ಸೀರೆ – ವಿರೋಧಿ ವೀಡಿಯೋ ಗೆ ಗೂಸಾ ಕೊಟ್ಟಿದ್ದು ಹೇಗೆ ಗೊತ್ತೇ?

ಸ್ವೇಚ್ಛಾಚಾರಿಗಳು ಅಥವಾ ಜಾತ್ಯಾತೀತವಾದಿಗಳು ಎಂದು ಕರೆಸಿಕೊಳ್ಳಲು ಭಾರತದ ಪ್ರಾಚೀನ ಸಂಸ್ಕೃತಿಯನ್ನು ಅವಮಾನ ಮಾಡುವುದು ಇವತ್ತಿನ ಭಾರತದಲ್ಲಿ ಬಹಳಷ್ಟು ಪ್ರಚಲಿತ ಬಿಡಿ! ‘ರಾಜದೀಪ್ ದೇಸಾಯಿ’ ಎಂಬ ಪ್ರೆಸ್ಟಿಸ್ಟ್ಯೂಟ್ ಪೋಸ್ಟರ್ ಮಹಾಶಯನನ್ನಿಟ್ಟುಕೊಂಡು, ‘ಇಂಡಿಯಾ ಟುಡೇ’ ಭಾರತದ ಸಂಸ್ಕೃತಿಯನ್ನು ತುಳಿಯುವ ಪ್ರಯತ್ನ ನಡೆಸಿದೆ!

ಭಾರತದ ಹೆಣ್ಣುಮಕ್ಕಳು ಉಡುವ ಸೀರೆ ಜಗತ್ತಿನ ಅತೀ ಪುರಾತನವಾದ ಉಡುಗೆ ಎಂದರೆ ಹೆಮ್ಮೆ ಪಡಲೇಬೇಕು! ನಿರಂತರ 5000 ವರ್ಷಗಳಿಂದಲೂ ಚಾಲ್ತಿಯಲ್ಲಿರುವ ಸೀರೆಗೆ ಇವತ್ತಿನ ಯಾವುದೇ ರೀತಿಯ ಆಧುನಿಕ ಉಡುಪುಗಳೂ ಕೂಡ ಸೆಡ್ಡು ಹೊಡೆಯಲು ಸಾಧ್ಯವೇ ಇಲ್ಲವಾದರೂ ಸಹ, ಪಾಶ್ಚಾತ್ಯ ಉಡುಗೆ ಧರಿಸುತ್ತಲೇ ಪಾಶ್ಚಾತ್ಯರಾಗಿ ಹೋದ ಒಂದಷ್ಟು ಮಂದಿ ಭಾರತದ ಸಂಸ್ಕೃತಿಯನ್ನು ಅವಮಾನಿಸುವುದನ್ನು ನೋಡಿದರೆ ನಿಜಕ್ಕೂ ದುರಂತವೆನ್ನಿಸುತ್ತದೆ!

ಹೇಗೆ ಭಾರತದ ಸಂಸ್ಕೃತಿಯನ್ನು ಅವಮಾನಿಸಿತ್ತು ಇಂಡಿಯಾ ಟುಡೇ ಗೊತ್ತಾ?!

ವೀಡಿಯೋದಲ್ಲಿ ಬಿಂಬಿಸಿರುವ ಹಾಗೆ ಸೀರೆಯುಟ್ಟ ಮಹಿಳೆ ಹೇಗೆ ಆಫೀಸಿನ ಮೆಟ್ಟಿಲುಗಳನ್ನು ಹತ್ತಲು ಕಷ್ಟ ಪಡುತ್ತಾಳೆಂಬುದು ಮಾತ್ರವಲ್ಲ, ಬದಲಾಗಿ ಸಹೋದ್ಯೋಗಿಗಳಿಂದಲೂ ಸಹ ಹೇಗೆ ಆಕೆ ಟೀಕೆಗೊಳಗಾಗುತ್ತಾಳೆ ಎಂಬುದನ್ನು ತೋರಿಸಿದೆ.

ಆದರೆ, ಈ ವೀಡಿಯೋ ಗೆ ಸರಿಯಾದ ಉತ್ತವರವನ್ನೇ ನೀಡಿದ್ದಾರೆ ದಿನವೂ ಸೀರೆಯನ್ನೇ ಉಡುವ ಮಹಿಳಾ ಉದ್ಯೋಗಿಗಳು! ಸೀರೆ ಉಡುವುದನ್ನೇ ಹೆಮ್ಮೆ ಎಂದು ಭಾವಿಸುವ ಭಾರತೀಯರು ಇಂಡಿಯಾ ಟುಡೇ ಯ ಅವಿವೇಕತನಕ್ಕೆ ಚಾಟಿಯೇಟು ಬೀಸಿರುವುದು ಹೀಗೆ!

ಇತ್ತೀಚೆಗೆ ಭಾರತದ ಸಂಸ್ಕೃತಿಯನ್ನು ಹಿಯಾಳಿಸುವದೇ ಇವತ್ತಿನ ಜಮಾನದ ಫ್ಯಾಶನ್ ಆಗಿದೆ! ಇಂತಹ ಹೇಸಿಗೆ ಬರಿಸುವ ವೀಡಿಯೋವನ್ನು ಮೊದಲು ತೆಗೆದು ಹಾಕಿ” ! ಹೌದು! ಭಾರತದ ಶ್ರೀಮಂತವಾದ ಸಂಸ್ಕೃತಿಯನ್ನು ಹಾಳುಗೆಡವುದು ಇವತ್ತಿನ ಸಿಕ್ಯುಲರ್ ಗಳ ದೊಡ್ಡ ಜವಾಬ್ದಾರಿಯಾಗಿದೆ!

https://twitter.com/GandharvaRani/status/924167644210610176

https://twitter.com/GandharvaRani/status/924171062543237120

ಭಾರತದ ಅತ್ಯಂತ ದೊಡ್ಡ ಹಬ್ಬವಾದ ದೀಪಾವಳಿಯಿಂದ ಪಟಾಕಿಗಳನ್ನು ನಿಷೇಧಿಸುವಲ್ಲಿ ಯಶಸ್ವಿಯಾಯಿತು! ಈಗ… ‘ಭಾರತದ ಸಂಸ್ಕೃತಿಯ ಭಾಗವಾದ ಸೀರೆ’ಯ ಮೇಲೆ ವಕೃದ್ರಷ್ಟಿ ಬೀರಿದೆಯಷ್ಟೇ! ಆದರೆ, ಅದೆಂದಿಗೂ ಸಾಧ್ಯವೇ ಇಲ್ಲ! ಯಾಕೆಂದರೆ ಸೀರೆಯೆನ್ನುವುದು ಪ್ರತಿಯೊಬ್ಬ ಭಾರತೀಯನ ಹಕ್ಕು ಹಾಗೂ ಹೆಮ್ಮೆ!

‘ಸಾಲುಮರದ ತಿಮ್ಮಕ್ಕ ‘ ಎಂಬ ಕರ್ನಾಟಕ ಕಂಡ ಅಪರೂಪದ ವ್ಯಕ್ತಿತ್ವವೂ ಕೂಡ ಸೀರೆಯನ್ನುಟ್ಟೇ ಲಕ್ಷ ಗಿಡಗಳನ್ನು ನೆಟ್ಟು ಬೆಳೆಸಿದ್ದಲ್ಲವೇ?! ಇವತ್ತಿಗೂ ಕೂಡ, ತಿಮ್ಮಕ್ಕ ಭಾರತದ ಸಂಸ್ಕೃತಿಯನ್ನು ಬಿಂಬಿಸುತ್ತಲೇ ಬಂದಿದ್ದಾರೆ!

ಸ್ವಾತಂತ್ರ್ಯಕ್ಕೋಸ್ಕರ ಮಡಿದ ಝಾನ್ಸಿ ರಾಣೀ ಲಕ್ಷ್ಮೀ ಬಾಯಿಯನ್ನು ಮರೆಯಲು ಸಾಧ್ಯವಿದೆಯೇ?! ಬ್ರಿಟಿಷರನ್ನು ಹಿಮ್ಮೆಟ್ಟಿಸಿದ ಅದೆಷ್ಟೋ ಮಹಿಳಾ ಸ್ವಾತಂತ್ರ್ಯ
ಹೋರಾಟಗಾರರು ಸೀರೆಯನ್ನುಟ್ಟಿದ್ದರಲ್ಲವೇ?! ರಾಣಿ ಅಬ್ಬಕ್ಕ, ಕಿತ್ತೂರು ರಾಣಿ ಚೆನ್ನಮ್ಮ, ಪ್ರತಿಯೊಬ್ಬರೂ ಕೂಡ ಸೀರೆಯನ್ನೇ ಉಟ್ಟು ಯುದ್ಧ ರಂಗಕ್ಕಿಳಿದಿದ್ದಲ್ಲವೇ?!

ಇದ್ಯಾವುದೂ ಬೇಡ! ಕನಿಷ್ಟ ಪಕ್ಷ, ನಮ್ಮ ಇಸ್ರೋದಲ್ಲಿರುವ ಎಷ್ಟು ಮಹಿಳಾವಿಜ್ಞಾನಿಗಳು ಸೀರೆಯನ್ನುಟ್ಟೇ ದೇಶಕ್ಕೆ ಕೊಡುಗೆಯನ್ನು ನೀಡುತ್ತಿಲ್ಲ?! ಅದರ ಬಗ್ಗೆ ಯಾಕೆ ಇಂಡಿಯಾ ಟುಡೇ ಎಂಬ ಪತ್ರಿಕೆ ಮಾತನಾಡುತ್ತಿಲ್ಲ?! ಸಹಸ್ರಾರು ವರ್ಷಗಳ ಇತಿಹಾಸವಿರುವ ಸೀರೆಯನ್ನುಟ್ಟೇ ಭಾರತೀಯ ಮಹಿಳೆಯರು ದೇಶಕ್ಕೆ ಕೊಡುಗೆಯನ್ನು ನೀಡುತ್ತಿರುವುದಲ್ಲವೇ?!

ಪ್ರಸ್ತುತ ಮೂವರು ಸಂಪುಟ ಸಚಿವರಾದ ನಿರ್ಮಲಾ ಸೀತಾರಾಮನ್, ಸುಷ್ಮಾ ಸ್ವರಾಜ್ ಹಾಗೂ ಸ್ಮೃತಿ ಇರಾನಿ! ಇವರೆಲ್ಲರೂ ಸೀರೆಯನ್ನುಟ್ಟೇ ಆಡಳಿತ ನಡೆಸುತ್ತಿರುವುದಲ್ಲವೇ?! ಅವರ್ಯಾರಿಗೂ ಸಹ ಸೀರೆಯೊಂದು ಹೊರೆ ಎನ್ನಿಸದಿರುವಾಗ ಇಂಡಿಯಾ ಟುಡೇಗೆ ಎನ್ನಿಸಿದೆಯೆಂದರೆ ವ್ಹಾ!

1936 ರಲ್ಲಿ, ಪೈಲಟ್ ಸರಳಾ ತಕ್ರಾಲ್ ಜಿಪ್ಸಿ ಮೋಥ್ ಏರ್ ಕ್ರಾಫ್ಟ್ ನನ್ನು ಸೀರೆಯುಟ್ಟೇ ಚಲಾಯಿಸಿದ್ದಲ್ಲವೇ?!

ಅವೆಲ್ಲವನ್ನೂ ಗಣನೆಗೆ ತೆಗೆದುಕೊಳ್ಳದ ಇಂಡಿಯ ಟುಡೇ ಮಾತ್ರ ಇನ್ನೂ ಸಹ ತನ್ನ ಹಳೇ ಚಾಳಿಯನ್ನೇ ಮುಂದುವರೆಸಿರುವುದು ಎಂತಹ ದುರಂತ ಎಂಬುದನ್ನು ಸಮಾಜವೇ ಅರಿಕೆ ಮಾಡಿಕೊಟ್ಟಿದೆ!

ಇನ್ನಾದರೂ ಇಂತಹ ಅವಿವೇಕಿ ಸೆಕ್ಯುಲರ್ ಮಾಧ್ಯಮಗಳಿಗೆ ಬುದ್ಧಿ ಬರುವುದೋ ಇಲ್ಲವೋ !

– ಪೃಥು ಅಗ್ನಿಹೋತ್ರಿ

Tags

Related Articles

Close