ಅಂಕಣ

ಸುಭಾಷ್ ಚಂದ್ರ ಬೋಸರು ಬದುಕಿದ್ದಾರೆಂಬುದನ್ನು ಸಾಬೀತು ಪಡಿಸಬಹುದಾಗಿದ್ದ ಆ ಏಕೈಕ ವ್ಯಕ್ತಿ ನೆಹರೂ ಬಲದಿಂದ ಉನ್ನತ ಹುದ್ದೆಗೇರಿದ್ದರು ರಶ್ಯಾದ ಬಾಯಿ ಮುಚ್ಚಿಸಿ!!!

ಸುಭಾಷ್ ಚಂದ್ರ ಬೋಸ್… ಗೊತ್ತೇ ಇದಿಯಲ್ಲ. ಭಾರತ ಮಾತೆಗಾಗಿ, ಈ ಪುಣ್ಯಮಣ್ಣಿನ ದಾಸ್ಯ ಮುಕ್ತಿಗಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟದ ಕ್ಷಾತ್ರತೇಜ. ಬಯಸಿದ್ದರೆ ಪದವಿಗಳನ್ನು ಪಡೆದುಕೊಂಡು ಸರ್ಕಾರದ ಅತಿ ದೊಡ್ಡ ಅಧಿಕಾರಿಯಾಗಬಹುದಿತ್ತು. ಆದರೆ ಅವರ ಗುರಿ ಒಂದೇ ಆಗಿತ್ತು. ಅದು ಸ್ವತಂತ್ರ್ಯ ಭಾರತ.

ಈ ಪುಣ್ಯಾತ್ಮನಿಗೆ ಚಿಕ್ಕಂದಿನಿಂದಲೇ ಅದೇನೋ ದೇಶಪ್ರೇಮದ ಹುಚ್ಚು ಮೈಯೆಲ್ಲಾ ಆವರಿಸಿತ್ತು. ಆರಂಭದಲ್ಲಿ ತಾನೊಬ್ಬ ಸನ್ಯಾಸಿಯಾಗಬೇಕು ಎಂಬ
ಸಂಕಲ್ಪದೊಂದಿಗೆ ಜಗತ್ತು ಕಂಡ ಮಹಾಸಂತ ಸ್ವಾಮಿ ವಿವೇಕಾನಂದರ ಬಳಿ ತೆರಳಿದ್ದರು ಬೋಸ್. ಆದರೆ ಸ್ವಾಮೀಜಿಯವರಿಗೆ ಬೋಸರ ಮುಂದಿನ ಗುರಿ ಸ್ಪಷ್ಟವಾಗಿ ತಿಳಿಯಲು ಹೆಚ್ಚು ಸಮಯ ಬೇಕಾಗಿರಲಿಲ್ಲ. ಸಂತನಾಗಬೇಕೆಂದು ಬಂದ ಬೋಸರನ್ನು ಕುರಿತು ಸ್ವಾಮಿ ವಿವೇಕಾನಂದರು, “ನಿನ್ನಿಂದ ದೇಶ ಏನೋ ಬಯಸುತ್ತಿದೆ. ದೇಶದ ಸ್ವಾತಂತ್ರ್ಯಕ್ಕಾಗಾಗಿ ಸೇವೆ ಮಾಡು” ಎಂದಿದ್ದರಂತೆ. ಆದರೆ ಅವರೇನು ಹೇಳಿದರೆಂದೇ ಅರ್ಥವಾಗದ ಬೋಸರು ಬಂದ ದಾರಿಗೆ ಸುಂಕವಿಲ್ಲ ಎಂದು ತಿಳಿದು ಸಪ್ಪೆ ಮೊರೆ ಹಾಕಿ ವಾಪಾಸು ಬಂದಿದ್ದರು.

ಆದರೆ ದೇಶ ಮಾತ್ರ ಅವರ ಸೇವೆಗೆ ತುದಿಗಾಲಲ್ಲಿ ನಿಂತಿತ್ತು. ನಂತರ ನಡೆದದ್ದೇ ಇತಿಹಾಸ. ದೇಶಕ್ಕೆ ಸ್ವಾತಂತ್ರ್ಯ ನೀಡಬೇಕೆನ್ನುವ ದೃಢ ಸಂಕಲ್ಪವನ್ನು
ಇಟ್ಟುಕೊಂಡು ಯೂನಿಫಾರಂ ತೊಟ್ಟು, ಸೈನ್ಯವನ್ನು ಕಟ್ಟಿ, ಸ್ಪಷ್ಟ ಕ್ರಾಂತಿಕಾರಿ ಸಂದೇಶವನ್ನು ಬ್ರಿಟಿಷರಿಗೆ ನೀಡಲು ಸಿದ್ಧರಾಗಿದ್ದರು ಬೋಸ್. ಆವಾಗಲೇ ಬ್ರಿಟಿಷರ ಎದೆಯಲ್ಲಿ ನಡುಕ ಶುರುವಾಗಿದ್ದು. ಶಾಂತಿದೂತರನ್ನು ತಮಗೆ ಬೇಕಾದ ಹಾಗೆ ಇಟ್ಟುಕೊಳ್ಳುತ್ತಿದ್ದ ಬ್ರಿಟಿಷರಿಗೆ, ಬೋಸರ ನಿರ್ಧಾರಗಳು ತಲೆನೋವಾಗಿ ಪರಿಣಮಿಸಿತ್ತು. ಶಾಂತಿ ಸಮರ್ಥಕರನ್ನು ಶಾಂತಗೊಳಿಸುತ್ತಿದ್ದ ಬ್ರಿಟಿಷರಿಗೆ ಬೋಸರ ನಡೆ ಯಾಕೋ ಅಪಾಯಕಾರಿಯಾಗಿ ಪರಿಣಮಿಸಿತ್ತು.

ಬೋಸರು ತಮ್ಮ ಯೌವ್ವನದಲ್ಲಿಯೇ ಜಗತ್ತಿನ ಹಲವು ಕಡೆ ತಿರುಗಾಡಿ ಪ್ರಖ್ಯಾತರಾಗಿದ್ದವರು. ಭಾತರತದ ಬಗ್ಗೆ ಪ್ರಭುತ್ವ ಪೂರ್ಣ ವಿಚಾರಗಳನ್ನು ಮಂಡಿಸುತ್ತಿದ್ದರು. ಅವರ ಭಾಷಣ ಕೂಡಾ ಹಾಗೆನೇ ಇತ್ತು. ಕೇಳುಗರನ್ನು ಮಂತ್ರ ಮುಗ್ಧಗೊಳಿಸುತ್ತಿತ್ತು. ಜಗತ್ತಿನಲ್ಲಿಯೇ ಪ್ರಸಿದ್ಧಿಯನ್ನು ಪಡೆದಿದ್ದ “ಮ್ಯಾಂಚೆಸ್ಟರ್ ಗಾರ್ಡಿಯನ್”ನಂತಹ ಪತ್ರಿಕೆಗಳೂ ಕೂಡಾ ಬೋಸರ ನಾಯಕತ್ವವನ್ನು ಬಣ್ಣಿಸಿತ್ತು. ಭಾರತದ ಜನರ ಪಾಲಿಗಂತೂ ಅವರು ಆಗಲೇ ಹೀರೋ ಆಗಿ ಬಿಟ್ಟಿದ್ದರು.

ಹೌದು. ಆರಂಭದಲ್ಲಿ ಬೋಸರೂ ಕಾಂಗ್ರೆಸ್ಸಿಗರೇ. 1938ರಲ್ಲಿ ಸುಭಾಷ್ ಬಾಬು ಕಾಂಗ್ರೆಸ್ಸಿನ ಅಧ್ಯಕ್ಷರಾಗಿದ್ದರು. ಬಹುಷಃ ಈ ಅಧ್ಯಕ್ಷಗಿರಿ ಬೋಸರ ಕೈಸೇರಲು
ಕಾರಣ ನೆಹರೂರೆ. ಅಲ್ಲಿಯವರೆಗೆ ಬೆಚ್ಚನೆ ಮಲಗಿದ್ದ ಕಾಂಗ್ರೆಸ್ಸಿಗೆ ಜೀವ ಬಂದಿತ್ತು. ಆ ಮುಂಚೆ ಬಂದವರೆಲ್ಲ ಮಾಜಿ ಅಧ್ಯಕ್ಷ ಎಂಬ ಹೆಸರನ್ನು ಉಳಿಸಿಕೊಂಡಿದ್ದರಷ್ಟೆ. ಆದರೆ ಬೋಸರು ಅಧಿಕಾರ ಸ್ವೀಕರಿಸಿದ ನಂತರ ಎಲ್ಲವೂ ಬದಲಾಗತೊಡಗಿತು. ಯುವಕರನ್ನು ಕಾಂಗ್ರೆಸ್ಸಿನತ್ತ ಸೆಳೆಯಲು ಆರಂಭಿಸಿದರು. ಬರೇ ಅರ್ಜಿ ಸಲ್ಲಿಸುವುದರಿಂದ, ಕೈವೊಡ್ಡಿ ಬೇಡಿ ನಿಲ್ಲುವುದರಿಂದ ಸ್ವಾತಂತ್ರ್ಯ ಸಿಗುವುದಿಲ್ಲ. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಗೌರವಿಸುವಂತಾಗಬೇಕು ಎಂಬ ಹಠಕ್ಕೆ ಬಿದ್ದು ಕೆಲಸ ಮಾಡಿದ್ದರು ಬೋಸ್. ಕಾಂಗ್ರೆಸ್‍ಗೆ ಅಷ್ಟೊಂದು ಶಕ್ತಿ ಇದೆಯೆಂದು ಅನೇಕರಿಗೆ ಆವಾಗಲೇ ತಿಳಿದಿದ್ದು.

ಬೋಸರ ಮೊದಲ ಅಧ್ಯಕ್ಷೀಯ ಭಾಷಣದಲ್ಲೇ “ನಾವು ಸುಮ್ಮನಿದ್ದರೆ ಭಾರತ ವಿಭಜನೆಯಾದೀತು” ಎಂದು ಎಚ್ಚರಿಕೆ ನೀಡಿದ್ದರು. ಬಹುಷಃ ಆವರೆಗೆ ಭಾರತ ದೇಶ ವಿಭಜನೆ ಆಗಬಹುದು ಎನ್ನುವ ಕಲ್ಪನೆ ಯಾರಲ್ಲೂ ಇರಲಿಲ್ಲ. ಸೋಗಲಾಡಿ ನಾಯಕರಿಗೆ ಅಧಿಕಾರ ಅನುಭವಿಸಲು ಮಾತ್ರವೇ ಗೊತ್ತಿತ್ತು. ಯಾವೊಬ್ಬ ನಾಯಕನಿಗೂ ಚಿಂತನೆ ಅನ್ನೋದು ಇರಲಿಲ್ಲ. ಆದರೆ ಸುಭಾಷ್ ಬಾಬೂಗೆ ಭಾರತದ ಭವಿಷ್ಯದ ಬಗ್ಗೆ ಚೆನ್ನಾಗಿಯೇ ಅರಿವಿತ್ತು. ಈ ಕಾರಣಕ್ಕಾಗಿಯೇ ಅವರು ನಾಯಕ ಅನ್ನಿಸಿಕೊಂಡಿದ್ದು.

ಬೋಸರ ಕಲ್ಪನೆ ಸ್ಪಷ್ಟವಾಗಿತ್ತು. ಅದು ಭಾರತದ ಕಲ್ಪನೆಯಾಗಿತ್ತು. ಜನರು ಬೋಸರ ಕಲ್ಪನೆಗಳನ್ನು, ಅವರ ಚಿಂತನೆಗಳನ್ನು ಅರ್ಥಮಾಡಿಕೊಂಡಿದ್ದರು. ಮುಂದೆ ದೇಶಕ್ಕೆ ಸಮರ್ಥ ನಾಯಕನಾಗುವುದಾದರೆ ಅದು ಸುಭಾಷ್ ಚಂದ್ರ ಬೋಸ್ ಮಾತ್ರ ಎಂದು ಜನ ಭಾವಿಸತೊಡಗಿದ್ದರು. ಆದರೆ ಇದು ಸ್ವತಃ ಕಾಂಗ್ರೆಸ್ ನಾಯಕರಿಗೆ ಅಸಮಧಾನವಾಯ್ತು. ಬೋಸರು ಈ ರೀತಿ ಬೆಳೆದರೆ ಸ್ವತಂತ್ರ್ಯ ಭಾರತದ ಚುಕ್ಕಾಣಿಯನ್ನು ಅವರಿಗೇ ನೀಡಬೇಕಾದೀತು ಎಂಬ ಆತಂಕ ಬಹಳ ಮಂದಿ ಕಾಂಗ್ರೆಸ್ಸಿಗರನ್ನು ಕಾಡತೊಡಗಿತು. ಬೋಸರ ವಿರುದ್ಧ ಅಸಹಿಷ್ಣು ಮನೋಭಾವ ಕಾಂಗ್ರೆಸ್ಸಿಗರಿಗೆ ಒಳಗಿಂದೊಳಗೇ ಕಾಡಲಾರಂಭಿಸಿತು. ಪರಿಣಾಮ ಎರಡನೇ ಅವಧಿಗೆ ಬೋಸರು ಅಧ್ಯಕ್ಷರಾಗೋದು ಬೇಡವೆಂದು ಹಲವಾರು ಕಾಂಗ್ರೆಸ್ಸಿಗರು ಹಠ ಹಿಡಿದರು. ಇದಕ್ಕೆ ಮಹಾತ್ಮ ಎನ್ನಿಸಿಕೊಳ್ಳುವ ಗಾಂಧೀಜಿ ಕೂಡಾ ಸೊಪ್ಪು ಹಾಕಿದ್ದರು.

ನೆಹರೂ ಅಧ್ಯಕ್ಷರಾಗೋವರೆಗೆ ಅವಿರೋಧವಾಗಿ ಆಯ್ಕೆ ಪ್ರಕ್ರಿಯೆಯನ್ನು ಸ್ವತಃ ಗಾಂಧೀಜಿಯ ಮುತುವರ್ಜಿಯಲ್ಲಿಯೇ ಮಾಡಲಾಗಿತ್ತು. ಆದರೆ ಬೋಸರು ಎರಡನೇ ಬಾರಿ ಅಧ್ಯಕ್ಷರಾದಾಗ ಕೂಡಾ ಗಾಂಧಿ ಬೋಸರನ್ನು ವಿರೋಧಿಸಿದರು. ಗಾಂಧೀಜಿ ಮತ್ತು ಅವರ ತಂಡದ ಪರವಾಗಿ ಪಟ್ಟಾಭಿರಾಮಯ್ಯನವರು ಬೋಸರ ವಿರುದ್ಧ ಸ್ಪರ್ಧಿಸುತ್ತಾರೆ. ಆದರೆ ಗಾಂಧೀಜಿಯ ವಿರೋಧದ್ದ ಹೊರತಾಗಿಯೂ ಬೋಸರು ದಾಖಲೆಯ ಗೆಲುವನ್ನು ಪಡೆಯುತ್ತಾರೆ. ಮತ್ತೆ ಕಾಂಗ್ರೆಸ್ಸಿನ ಅಧ್ಯಕ್ಷರಾಗಿ ಆಯ್ಕೆಯಾಗುತ್ತರೆ. ಗಾಂಧೀಜಿಯನ್ನು ವಿರೋಧಿಸಿದ ಮಾತ್ರಕ್ಕೆ ಸ್ವತಃ ಗಾಂಧೀಜಿಯೇ ಸಿಡಿಮಿಡಿಗೊಳ್ಳುತ್ತಾರೆ. “ಇದು ಪಟ್ಟಾಭಿಯವರ ಸೋಲಲ್ಲ, ಬದಲಾಗಿ ನನ್ನ ಸೋಲು. ಕಾಂಗ್ರೆಸ್ಸಿನಲ್ಲಿ ಯಾರಿಗೆ ಹಿತವಾಗಲ್ವೋ ಅವರು ಕಾಂಗ್ರೆಸ್ ತೊರೆದು ಹೋಗಬಹುದು” ಎಂದು ಬೋಸರತ್ತ ಗುರಿಯಿಟ್ಟು ಬಾಣಹೂಡುತ್ತಾರೆ.

ನೆಹರೂ ಪ್ರೇರಿತ ಕಾಂಗ್ರೆಸ್ಸಿಗರ ಮನಸ್ಥಿತಿ ಬದಲಾಗಲೇ ಇಲ್ಲ. ಸುಭಾಷರ ಜನಪ್ರಿಯತೆಯನ್ನು ಸಹಿಸಿಕೊಳ್ಳಲು ಈ ತಂಡಕ್ಕೆ ಆಗುತ್ತಿರಲಿಲ್ಲ. ಅಷ್ಟರವರೆಗೆ
ಅಂತರಂಗದಲ್ಲೇ ಕುದಿಯುತ್ತಿದ್ದ ಬೆಂಕಿ ಆ ವೇಳೆಗೆ ಸ್ಪೋಟಗೊಂಡಿತ್ತು. ಸುಭಾಷರ ವ್ಯಕ್ತಿತ್ವ, ಶಾಂತಿಯಿಂದ ಸ್ವಾತಂತ್ರ್ಯ ಪಡೆಯೋಕ್ಕಾಗಲ್ಲ ಅನ್ನುವ ಅವರ ಸೂತ್ರ, ಕ್ರಾಂತಿಕಾರಿಗಳಿಗೆ ಅವರು ನೀಡುತ್ತಿದ್ದ ಬೆಂಬಲ, ಇವೆಲ್ಲಾ ಶಾಂತಿಧೂತರಿಗೆ ಹಿಡಿಸುತ್ತಿರಲಿಲ್ಲ. ನಂತರ ಕಾಂಗ್ರೆಸ್ಸಿನ ಕಾರ್ಯಕಾರಣಿ ಸಮಿತಿಯಲ್ಲಿ ನಡೆದ
ರಾಜಕೀಯವನ್ನು ಗಮನಿಸಿ ಬೇಸರದಿಂದ ದಿಟ್ಟ ನಿರ್ಧಾರ ಮಾಡಿ ಕೆಳಗಿಳಿಯುತ್ತಾರೆ. ಈ ಮೂಲಕ ತನ್ನ ಸ್ವಾಭಿಮಾನವನ್ನು ಅಡವಿಟ್ಟು ಯಾರ ಕೈಕಾಲೂ ಹಿಡಿಯಲ್ಲ ಎಂಬ ಸ್ಪಷ್ಟ ಸಂದೇಶವನ್ನು ಕಾಂಗ್ರೆಸ್ಸ್ ನಾಯಕರಿಗೆ ರವಾನಿಸುತ್ತಾರೆ.

ಬೋಸರು ಎಷ್ಟು ಪಕ್ಕಕ್ಕೆ ಸರಿಯುತ್ತಾರೋ ಅಷ್ಟು ನೆಹರೂಗೆ ಲಾಭವಾಗುತ್ತಿತ್ತು. ಯಾಕೆಂದರೆ, ಬೋಸ್ ಹಾಗೂ ಪಟೇಲ್ ಹೊರತಾಗಿ ನೆಹರೂರ ನಿರ್ಧಾರಗಳನ್ನು ಖಂಡಿಸುವ ಧೈರ್ಯ ಅಲ್ಲಿ ಯಾರಿಗೂ ಇರಲಿಲ್ಲ. ಬೋಸರು ಪಟ್ಟದಿಂದ ಕೆಳಗಿಳಿಯುವಾಗ ಎಲ್ಲರಿಗಿಂತ ಒಳಗೊಳಗೆ ಸಂತಸ ಪಟ್ಟವರಲ್ಲಿ ನೆಹರೂರೆ ಜಾಸ್ತಿ…

ಸುಭಾಷ್ ಎನ್ನುವುದು ಬೆಂಕಿ. ಅದರೊಳಗೆ ಹೊತ್ತಿಕೊಂಡಿದ್ದಿದ್ದು ಸ್ವಾತಂತ್ರ್ಯ ಅನ್ನುವ ಜ್ವಾಲೆ. ಆ ಹಠವನ್ನು ಬೋಸರು ಬಿಟ್ಟೇ ಇಲ್ಲ. ಪದವಿ, ಅಧಿಕಾರ ಇದ್ಯಾವುದೂ ಇಲ್ಲದೆ ಕ್ರಾಂತಿ ಮಾರ್ಗವನ್ನು ತುಳಿಯುತ್ತಾರೆ ಬೋಸರು. ಕಾಂಗ್ರೆಸ್ಸಿನಿಂದ ಹೊರಬಂದ ಬೋಸರು, “ಫಾರ್ವರ್ಡ್ ಬ್ಲಾಕ್” ಎಂಬ ಸಂಘಟನೆಯನ್ನು ಸ್ಥಾಪಿಸುತ್ತಾರೆ. ಆ ಮೂಲಕವೇ ತಮ್ಮ ಹೋರಾಟವನ್ನು ಮುಂದುವರೆಸಿಕೊಂಡು ಹೋಗುತ್ತಾರೆ. ಬ್ರಿಟಿಷರು ಅವರನ್ನು ಪದೇ ಪದೇ ಬಂಧಿಸುತ್ತಾರೆ. ಆದರೂ ಜಗ್ಗಲಿಲ್ಲ ಬೋಸರು.

ಬೋಸರು ಇದಕ್ಕಿದ್ದಂತೆ ದೇಶದಿಂದ ಕಣ್ಮರೆಯಾಗುತ್ತಾರೆ. ಬೋಸ್ ಅಭಿಮಾನಗಳಿಗೆ ಬೋಸರ ಬಗ್ಗೆ ಚಿಂತೆ ಆರಂಭವಾಗುತ್ತದೆ. ಬ್ರಿಟಿಷರಿಗೆ ಒಳಗೊಳಗೆ
ಸಂತೋಷವಾಗುತ್ತದೆ. ತಮ್ಮ ಬೇಳೆ ಬೇಯಿಸಿಕೊಳ್ಳುವಲ್ಲಿ ಕಂಟಕವಾಗಿದ್ದ ಬೋಸ್ ನಾಪತ್ತೆಯಾಗಿದ್ದರಿಂದ ಇನ್ನು ಈ ಶಾಂತಿಧೂತರನ್ನು ಸುಲಭವಾಗಿ
ಮಟ್ಟಹಾಕಬಹುದು ಎಂಬ ಲೆಕ್ಕಾಚಾರಗಳನ್ನು ಹಾಕಿದ್ದರು.

ಆದರೆ ಬೋಸ್ ಅನ್ನುವ ಸ್ವಾತಂತ್ರ್ಯ ದಾಹವುಳ್ಳ ಹುಲಿ, ಬ್ರಿಟಿಷರಿಗೆ ಹೆದರಿ ಓಡಿ ಹೋಗುವ ಹೇಡಿಯಾಗಿರಲಿಲ್ಲ. ಸ್ವಾತಂತ್ರ್ಯ ವೀರ ಸಾವರ್ಕರ್
ಮಾರ್ಗದರ್ಶನದಂತೆ ದೇಶ ಬಿಟ್ಟು ಜರ್ಮನಿಗೆ ತೆರಳಿ “ಐಎನ್‍ಎ” ಎಂಬ ಸೈನ್ಯವನ್ನು ಕಟ್ಟುತ್ತಾರೆ. ಆ ಸೈನ್ಯದಲ್ಲಿ ಸುಮಾರು 50 ಸಾವಿರ ಸೈನಿಕರು ಬೋಸರ
ನೇತೃತ್ವದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕುತ್ತಾರೆ. ಜರ್ಮನಿ, ಜಪಾನ್‍ನಲ್ಲಿ ಅವರನ್ನು ಭಾರತಕ್ಕಿಂತಲೂ ಹೆಚ್ಚಿನ ಗೌರವವನ್ನು ನೀಡಿ ಪೂಜಿಸುತ್ತಾರೆ.
ಸುಭಾಷರಿಗೆ “ನೇತಾಜಿ” ಎಂಬ ಬಿರುದನ್ನೂ ನೀಡುತ್ತಾರೆ.

ಜರ್ಮನಿ ಸರ್ಕಾರದ ಸಹಾಯದಿಂದ “ಅಝಾದ್ ಹಿಂದ್ ರೇಡಿಯೋ” ಸ್ಥಾಪನೆ ಮಾಡಿ ಅಲ್ಲಿಂದ ಬೋಸರು ಭಾಷಣ ಮಾಡುತ್ತಾರೆ. “ನಾನು ಸುಭಾಷ್. ನಾನು ಇನ್ನೂ ಬದುಕಿದ್ದೇನೆ”. ಈ ಮಾತನ್ನು ಕೇಳಿ ಭಾರತೀಯರಿಗೆ ಹಾಲು ಕುಡಿದಷ್ಟು ಸಂತೋಷವಾಗಿದ್ದರೆ, ಬ್ರಿಟಿಷರ ಎದೆಯಲ್ಲಿ ಸಿಡಿಲು ಬಡಿದಂತಹ ಅನುಭವವಾಗಿತ್ತು. ಆದರೆ ಬೋಸರನ್ನು ಎದುರಿಸುವುದು ಸುಲಭದ ಮಾತಾಗಿರಲಿಲ್ಲ.

“ಭಾರತದ ಕಿಚ್ಚಿನ ಯುವಕರೇ, ನೀವು ನನಗೆ ರಕ್ತವನ್ನು ಕೊಡಿ. ನಾನು ನಿಮಗೆ ಸ್ವಾತಂತ್ರ್ಯವನ್ನು ತಂದು ಕೊಡುತ್ತೇನೆ” ಎಂದು ಆರ್ಭಟಿಸಿದ್ದರು. ಇದು
ಭಾರತದಲ್ಲಿರುವ ಕ್ರಾಂತಿಕಾರಿಗಳ ಹೋರಾಟಕ್ಕೆ ಮತ್ತಷ್ಟು ಉತ್ಸಾಹವನ್ನು ತಂದುಕೊಟ್ಟಿತ್ತು. ಯುವಕರ ದಂಡೇ ಸ್ವಾತಂತ್ರ್ಯಕ್ಕಾಗಿ ಕ್ರಾಂತಿ ಮಾರ್ಗವನ್ನು ಹಿಡಿದು ಬಿಟ್ಟಿತ್ತು. ಸುಭಾಷರು ತಮ್ಮ ಸೈನ್ಯವನ್ನು ಭಾರತಕ್ಕೆ ತಂದು ಬ್ರಿಟಿಷರನ್ನು ಓಡಿಸಲು ಶಸ್ತ್ರ ಸನ್ನದ್ದರಾಗಿ ನಿಂತಿದ್ದರು.

ಆವಾಗ ನೆಹರೂ ಜೈಲಿನಲ್ಲಿದ್ದರು. ಸುಭಾಷರ ಈ ಕಹಳೆಯನ್ನು ಕೇಳಿ ನೆಹರೂ ಹೊಟ್ಟೆ ಕಿಚ್ಚು ನೂರ್ಮಡಿಯಾಯ್ತು. ಶಸ್ತ್ರ ಎತ್ತಿಕೊಳ್ಳಲು ತಾಕತ್ತಿಲ್ಲದ ನೆಹರೂಗೆ
ಶಾಂತಿಯಿಂದಲೇ ಸ್ವಾತಂತ್ರ್ಯ ತರಬೇಕೆಂಬ ಜಾತ್ಯಾತೀತತೆಯ ಮುಖವಾಡವನ್ನು ಬಹಳ ಸುಂದರವಾಗಿಯೇ ಧರಿಸಿದ್ದರು. ಜೈಲಿನಿಂದಲೇ ನೆಹರೂ ಸುಭಾಷರ ವಿರುದ್ಧ ಆರ್ಭಟಿಸುತ್ತಾರೆ. “ಸುಭಾಷ್ ಸೈನ್ಯ ಭಾರತಕ್ಕೆ ಬಂದರೆ, ತನ್ನೆಲ್ಲಾ ಸಾಮಥ್ರ್ಯವನ್ನು ಬಳಸಿಕೊಂಡು ಆ ಸೈನ್ಯವನ್ನು ಕತ್ತಿಯಿಂದ ಎದುರಿಸುತ್ತೇನೆ” ಎಂದು ಬಾಲಿಶ ಹೇಳಿಕೆಯನ್ನು ನೀಡುತ್ತಾರೆ.

ಆದರೂ ಬೋಸರ ಸೈನ್ಯ ಬ್ರಿಟಿಷ್ ಸಂತಾನವನ್ನು ನುಚ್ಚು ನೂರು ಮಾಡುತ್ತೆ. ಭಾರತದಲ್ಲಿದ್ದ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿದ್ದ ಮಕ್ಕಾಲು ಭಾಗದಷ್ಟು ಬ್ರಿಟಿಷರು
ಆವಾಗಲೇ ನಿರ್ಣಾಮವಾಗಿದ್ದರು. ಈ ಕಾರಣದಿಂದಾಗಿಯೇ ಭಾರತಕ್ಕೆ ಸ್ವಾತಂತ್ರ್ಯ ಒಲಿದು ಬಂತು. ಆದರೆ ಇದು “ನಮ್ಮ ಶಾಂತಿಯಿಂದ ಸಿಕ್ಕ ಸ್ವಾತಂತ್ರ್ಯ” ಎಂದು ಗಂಟಲು ಹರಿಯುವಂತೆ ಬೊಬ್ಬೆ ಬಿಟ್ಟರು.

ಆಸೆ ಪಟ್ಟಂತೆಯೇ ನೆಹರೂರೆ ಪ್ರಧಾನಿಯಾಗುತ್ತಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಬೋಸರ ಇತಿಹಾಸ ಹಾಗೂ ಅವರ ಸೈನ್ಯ ಮಾಡಿದ ಸಾಧನೆಗಳನ್ನು ಎಲ್ಲೂ
ಉಲ್ಲೇಖವಾಗದಂತೆ ನೋಡಿಕೊಳ್ಳುತ್ತಾರೆ. ಅವರ ಪ್ರೇರಣೆಯಿಂದಲೇ ಭಾರತೀಯ ಸೈನ್ಯ ಆರಂಭವಾಗುತ್ತದೆಯಾದರೂ, ಸೈನ್ಯದ ಯಾವುದೇ ಡೇರೆಗಳಲ್ಲಿ ಬೋಸರ ಭಾವಚಿತ್ರ ಅಳವಡಿಸದಂತೆ ಸೂಚಿಸುತ್ತಾರೆ. ಬೋಸರ ಹೆಸರು ಇತಿಹಾಸದಲ್ಲಿ ಉಳಿಯದಂತೆ ತನ್ನ ಶತ ಪ್ರಯತ್ನವನ್ನೇ ಮಾಡುತ್ತಾರೆ.

ಸುಭಾಷರು ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಪ್ರಚಾರ ಆಗುತ್ತದೆ. ಆದರೆ ಇದನ್ನು ದೇಶದ ಜನ ನಂಬಲು ಸಿದ್ಧರಿರಲಿಲ್ಲ. ಅದೇ ವೇಳೆಗ ರಷ್ಯಾದಿಂದ ಒಂದು ಸುದ್ಧಿ ಬರುತ್ತೆ. ಬೋಸರು ಇನ್ನೂ ಬದುಕಿರುವ ಬಗ್ಗೆ ತನ್ನಲ್ಲಿ ಪುರಾವೆ ಇದೆ ಎಂದು ರಷ್ಯಾ ಹೇಳಿತ್ತು. ಈ ಮಾತು ಕೇಳಿದೊಡನೆಯೇ ನೆಹರೂ ಬೆಚ್ಚಿ ಬಿದ್ದಿದ್ದರು. ರಷ್ಯಾಕ್ಕೆ ತರಾತುರಿಯಲ್ಲಿ ದೂರವಾಣಿ ಕರೆ ಹಾಗೂ ಪತ್ರ ವ್ಯವಹಾರವನ್ನು ಶುರುವಿಡುತ್ತಾರೆ. ಆಮೇಲೆ ರಷ್ಯಾ ಬೋಸರ ಬಗ್ಗೆ ಮಾತೇ ಆಡಲಿಲ್ಲ. ಬೋಸರು ಸತ್ತಿಲ್ಲ ಎಂದು ಸಾಬೀತು ಪಡಿಸಬಹುದಾಗಿದ್ದ ಏಕೈಕ ವ್ಯಕ್ತಿ ಅಬೀಬುಲ್ ರೆಹಮಾನ್ ಎಂಬಾತ ಸರ್ಕಾರದ ಉನ್ನತ ಹುದ್ದೆಗೆ ಏರುತ್ತಾನೆ.

ಹೀಗೆ ಬೋಸರು ಭಾರತವನ್ನು ಆಳುವ ಎಲ್ಲಾ ಅರ್ಹತೆಯನ್ನು ಹೊಂದಿದ್ದರು. ಇದನ್ನು ಮನಗಂಡೇ ನೆಹರೂ ಬೋಸರನ್ನು ದೂರವಿಟ್ಟಿದ್ದರು. ಅವರ ಯಾವುದೇ
ದಾಖಲೆಗಳೂ ಉಳಿಯದಂತೆ ಮಾಡಿದ್ದರು. ಆದರೆ ಸತ್ಯ ಏನೆಂಬುವುದನ್ನು ಜನರಿಗೆ ಅರ್ಥ ಮಾಡಿಕೊಳ್ಳಲು ಹೆಚ್ಚು ಸಮಯ ಬೇಕಾಗಿರಲಿಲ್ಲ. ಹೀಗಾಗಿಯೇ ಬೋಸರು ಇಂದಿಗೂ ಜನರ ಪಾಲಿಗೆ ನೇತಾಜಿಯಾಗಿಯೇ ಉಳಿದುಕೊಂಡಿರುವುದು.

ಇಡೀ ದೇಶದಲ್ಲಿ ಬೋಸರ ಸಾವಿನ ಲಾಭ ಆಗುತ್ತಿದದುದು ಒಬ್ಬರಿಗೆ ಮಾತ್ರ. ಅದು ಗಾಂಧೀಜಿಗೂ ಅಲ್ಲ, ಪಟೇಲರಿಗೂ ಅಲ್ಲ, ಕಾಂಗ್ರೆಸ್ಸಿನ ಇನ್ನುಳಿದ ನಾಯಕರಿಗೂ ಅಲ್ಲ. ಹಾಗಾದರೆ ಅವರ ಸಾವಿನ ವಿಷಯ ಲಾಭ ಆಗಿದ್ದು ಯಾರಿಗೆ..? ಮತ್ತೆ ಹೇಳಬೇಕಾ..?

-ಸುನಿಲ್ ಪಣಪಿಲ

Tags

Related Articles

Close