ಪ್ರಚಲಿತ

ಸುಷ್ಮಾ ಸ್ವರಾಜ್ ರಿಗೆ ಒಬ್ಬ ಪಾಕಿಸ್ಥಾನಿ, “ಅಲ್ಲಾಹ್ ನನ್ನು ಬಿಟ್ಟರೆ ನೀವೆ ನಮಗಿರುವ ಭರವಸೆ” ಎಂದು ಹೇಳಿದ್ದಕ್ಕೆ, ಸುಷ್ಮಾ ಸ್ವರಾಜ್ ಕೊಟ್ಟ ಪ್ರತ್ಯುತ್ತರ ಪ್ರತಿಯೊಬ್ಬರ ಹೃದಯವನ್ನೂ ಗೆಲ್ಲುತ್ತಿರುವುದು ಹೇಗೆ ಗೊತ್ತೇ?!

ಸುಷ್ಮಾ ಸ್ವರಾಜ್ ಎಂಬ ಹಿಂದವೀ ಸಾಮ್ರಾಜ್ಞೆ!!

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ! ಅದೂ ಕೂಡ, ಸಚಿವೆಯಾದ ಮೇಲೆ ಮಾತ್ರವಲ್ಲ, ಬದಲಾಗಿ
ನಿರ್ವಹಿಸುತ್ತಿರುವ ಕಾರ್ಯ ವೈಖರಿಗೆ ವಿದೇಶಗಳೇ ಬೆರಗಾಗಿ ಹೋಗಿದೆ! ವಿದೇಶಗಳಲ್ಲಿ ಬಂಧಿತರಾದ ಭಾರತೀಯ ಪ್ರಜೆಗಳನ್ನು ರಕ್ಷಿಸುವಲ್ಲಿಂದ ಹಿಡಿದು, ಪಾಸ್ ಪೋರ್ಟ್ ಸಮಸ್ಯೆ, ಎಂದೆಲ್ಲ ನಿರ್ವಹಿಸುವ ಸುಷ್ಮಾ ಸ್ವರಾಜ್ ಎಂಬ ಹಿಂದವೀ ಸಾಮ್ರಾಜ್ಞೆ, ಭಾರತದ ವಿದೇಶಾಂಗ ವ್ಯವಹಾರಗಳಲ್ಲಿ ತನ್ನದೇ ಆದ ಕೊಡುಗೆ ನೀಡುತ್ತಿದ್ದಾರೆ! ಕೇವಲ ಭಾರತೀಯರ ಹೃದಯಗಳನ್ನು ಗೆದ್ದಿದ್ದು ಮಾತ್ರವಲ್ಲ, ಸುಷ್ಮಾರ ಕಾರ್ಯ ವೈಖರಿ ಪಾಕಿಸ್ಥಾನದವರ ಹೃದಯವನ್ನೂ ಗೆದ್ದಿದೆಯಷ್ಟೇ! ಗಡಿ ಭಾಗದಲ್ಲಿ ಮುಂಚೆ ಇಂದಲೂ ಇದ್ದ ವಿವಾದಗಳನ್ನು ಬಗೆಹರಿಸುವಲ್ಲಿಯೂ ಮುಖ್ಯ ಪಾತ್ರವನ್ನು ನಿರ್ವಹಿಸುತ್ತಿರುವ ಸುಷ್ಮಾ ಸ್ವರಾಜ್ ಕಲ್ಲನ್ನೂ ಸಹ ಕರಗುವಂತೆ ಮಾಡಿದ್ದಾನೆ!

ಇತ್ತೀಚೆಗಷ್ಟೇ, ವೈದ್ಯಕೀಯ ವೀಸಾವನ್ನು ಪಾಕಿಸ್ಥಾನದ ಹುಡುಗನಿಗೆ ನೀಡುವಂತೆ ಪಾಕಿಸ್ಥಾನದಲ್ಲಿರುವ ಭಾರತೀಯ ರಾಯಭಾರಿ ಕಛೇರಿಗೆ ವಿನಂತಿಸಿ,
ಪಾಕಿಸ್ಥಾನಿಯ ವೈದ್ಯಕೀಯ ತಪಾಸಣೆಗೆ ಅನುಕೂಲವಾಗುವಂತೆ ಮಾಡಿದ್ದಲ್ಲದೇ, ಚಿಕಿತ್ಸೆಗೆ ಭಾರತಕ್ಕೆ ಕರೆತರಲು ಸುಷ್ಮಾ ಸ್ವರಾಜ್ ಖುದ್ದು ಕೋರಿದ್ದರಲ್ಲದೇ, ಬೇರೆ ಬೇರೆ ನಾಲ್ಕು ಪಾಕಿಸ್ಥಾನಿಗಳಿಗೆ ತುರ್ತು ಚಿಕಿತ್ಸೆಯ ಅಗತ್ಯವಿದ್ದಾಗ ವೀಸಾವನ್ನು ನೀಡಿದ್ದಾರೆ!

ಶಾಜಿಬ್ ಇಕ್ಬಾಲ್ ಎಂಬ ಪಾಕಿಸ್ಥಾನಿಯೊಬ್ಬರು ಈ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ,”ನೀವು ಅಲ್ಲಾಹ್ ನನ್ನು ಬಿಟ್ಟರೆ ನಮಗಿರುವ ಕೊನೆಯ ಭರವಸೆ! ದಯವಿಟ್ಟು, ಇಸ್ಲಾಮಾಬಾದ್ ನಲ್ಲಿರುವ ಭಾರತೀಯ ಎಂಬಸಿಗೆ ನಮಗೆ ವೈದ್ಯಕೀಯ ವೀಸಾ ನೀಡುವಂತೆ ವಿನಂತಿಸಿ” ಎಂದು ಟ್ವೀಟ್ ಮಾಡಿದ್ದರು!

ಅದಕ್ಕೆ, ಸುಷ್ಮಾ ಸ್ವರಾಜ್ ಖುದ್ದು ಪ್ರತ್ಯುತ್ತರ ನೀಡಿದ್ದರು! “ನಿಮ್ಮ ಭರವಸೆಯನ್ನು ನಾವೆಂದೂ ಸುಳ್ಳಾಗಿಸಲಾರೆವು! ತಕ್ಷಣವೇ ನಿಮಗೆ ವೀಸಾವನ್ನು ಕೊಡುವೆವು” ಎಂದ ಸುಷ್ಮಾ ಸ್ವರಾಜ್ ಅಂತರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು ಚರ್ಚೆಗೊಳಗಾಗಿದ್ದಾರೆ!

ಅಲ್ಲದೇ, 14 ವರ್ಷದ ಪಾಕಿಸ್ಥಾನಿ ಬಾಲಕಿಗೆ “Open heart surgery” ಯನ್ನು ಭಾರತದಲ್ಲಿ ನಡೆಸಲು ಅನುಕೂಲ ಮಾಡಿಕೊಟ್ಟಿರುವ ಸುಷ್ಮಾ ಸ್ವರಾಜ್, ಬಾಲಕಿಯ ಅಣ್ಣನ ಟ್ವೀಟ್ ಗೆ ತಕ್ಷಣವೇ ಪ್ರತ್ಯುತ್ತರಿಸಿ ಕ್ರಮ ತೆಗೆದುಕೊಂಡಿದ್ದಲ್ಲದೇ, “ಭಾರತ ಮಾನವೀಯತೆಯನ್ನೂ ರಾಜಕಾರಣವನ್ನಾಗಿಸುತ್ತಿದೆ” ಎಂದು ಆರೋಪಿಸಿದ್ದ ಪಾಕಿಸ್ಥಾನಿ ಅಧಿಕಾರಿಗಳಿಗೆ ಮಾತಿನಲ್ಲಿಯೇ ತಪರಾಕಿ ಬಾರಿಸಿದ್ದಾರೆ!

ಹುಮಾ ಉಸ್ಮಾನ್ ಎಂಬ ಹದಿನಾಲ್ಕು ವರ್ಷದ ಬಾಲಕಿಗೆ ‘ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಹೇಳಿದ್ದ ಸುಷ್ಮಾ ಸ್ವರಾಜ್ ವಿದೇಶಾಂಗ ವ್ಯವಹಾರದಲ್ಲಿ ಕ್ರಾಂತಿಯನ್ನು ಮಾಡುತ್ತಿರುವುದು ಸುಳ್ಳಲ್ಲ!

ಹುಮಾ ಉಸ್ಮಾನ್, ತಾರಿಕ್ ಹುಸೇನ್, ಮುಬಾರಕ್ ಅಲಿ ಮತ್ತು ಸಾಕಿನಾ ಯುನಿಸ್ ಎಂಬ ನಾಲ್ವರಿಗೆ ತಕ್ಷಣವೇ ವೀಸಾ ಬಿಡುಗಡೆ ಮಾಡಲಾಗಿದೆ! ಪ್ರತಿಯೊಬ್ಬ ಪಾಕಿಸ್ಥಾನಿಯವರ ಮನೆಯವರು ವೈಯುಕ್ತಿಕವಾಗಿ ಸುಷ್ಮಾ ಸ್ವರಾಜ್ ಗೆ ಧನ್ಯವಾದ ಸಲ್ಲಿಸಿದ್ದು, “ಹೊಸ ಬದುಕನ್ನು ನೀಡಿದ್ದಕ್ಕಾಗಿ ಚಿರ ಋಣಿಯಾಗಿರುತ್ತೇವೆ” ಎಂದು ಟ್ವೀಟ್ ಮಾಡಿದ್ದಾರೆ! ತಾರಿಕ್ ಹುಸೇನ್ ರ ಅಣ್ಣನಾದ ಶಹ್ನಾವಾಜ್ ಕಷ್ಮಿ ಇಡೀ ಭಾರತಕ್ಕೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ!

ಆರೋಪಿಸುವ ಮುನ್ನ ಮತ್ತೊಮ್ಮೆ ಮಗದೊಮ್ಮೆ ಕಣ್ಣಾಡಿಸಿ!

ಪಾಕಿಸ್ಥಾನಿ ಅಧಿಕಾರಿಗಳು ಭಾರತದಲ್ಲಿ ಮಾನವೀಯತೆಯೂ ಒಂದು ರಾಜಕಾರಣವೇ ಎಂದು ಆರೋಪಿಸಿದ್ದವರು ಬಹುಷಃ ಮತ್ತೊಮ್ಮೆ
ಸುಷ್ಮಾ ಸ್ವರಾಜ್ ರವರ ನಡೆಯನ್ನು ಪರಾಂಬರಿಸಿ, ಕೊನೆಗೆ ತೀರ್ಪು ಕೊಡುವುದು ಒಳ್ಳೆಯದೇ! ಬರೀ ಇದೊಂದೇ ಅಲ್ಲ, ಪಾಕಿಸ್ಥಾನಿಗಳ ಚಿಕಿತ್ಸೆಗೆ ವೀಸಾವನ್ನು ನೀಡುವುದು, ಸಹಾಯ ಮಾಡುವುದು ಕೇವಲ ‘ಭಾರತದ ಸಂಸ್ಕಾರದ ಜೊತೆಗೆ ಮುಂಚೆ ಇಂದಲೂ ಇರುವ ಸಂಬಂಧವನ್ನು ಇನ್ನಷ್ಟು ಹಾಳುಗೆಡದಂತೆ ಮಾಡುವುದಷ್ಟೇ ಉದ್ದೇಶ ಹೊರತು ಬೇರಿನ್ನೇನಲ್ಲ!” ಎಂಬುದು ಸಾಬೀತು ಪಡಿಸಿದ್ದಾರೆ ಸುಷ್ಮಾ ಸ್ವರಾಜ್!

ಎಲ್ಲದಕ್ಕಿಂತ ಹೆಚ್ಚಾಗಿ, ಭಾರತದ ಪ್ರತೀ ನಡೆಯೂ ರಾಜಕೀಯವಾಗಿ ಇರುತ್ತದೆ ಎಂಬುವ ಮಾತಿಗೆ ಈ ನಡೆ ನಿಜಕ್ಕೂ ಭಿನ್ನವೇ ಸರಿ! ಬಿಡಿ! ‘ಮುಂಚೆ ಇಂದಲೂ ಕೂಡ ಎಲ್ಲಾ ಕ್ಷೇತ್ರಗಳಲ್ಲಿ ನೆರೆಯ ರಾಷ್ಟ್ರಗಳಿಂದ ಹೆಚ್ಚಾಗಿಯೇ ಮುಂದಿದ್ದ ಭಾರತ ಯಾವತ್ತಿಗೂ ಕೂಡ, ತನ್ನ ಸಿದ್ಧಾಂತಗಳನ್ನು ಕಾಪಾಡಿಕೊಂಡೇ ಬಂದಿದೆ”!

ಸರ್ಬಜಿತ್ ಸಿಂಗ್ ರವರಿಗೆ ಸುಖ ಸುಮ್ಮನೆ ಗಡಿದಾಟಿ ಉಲ್ಲಂಘಿಸಿದ್ದಾರೆಂಬುದೆಲ್ಲ ನೆಪ ಕೊಟ್ಟು ಹಿಂಸೆ ನೀಡಿದ ಪಾಕಿಸ್ಥಾನದ ನಡೆಗೆ ಉಳಿದ ಪ್ರಜೆಗಳಿಗೆ ಶಿಕ್ಷೆ ಕೊಡಲಿಲ್ಲ ಭಾರತ! ಬದಲಾಗಿ, ಅವಶ್ಯವಿರುವ ಪಾಕಿಸ್ಥಾನಿಗಳಿಗೆ ಸಹಾಯ ನೀಡಿ “ಮಾನವೀಯತೆ’ ಮೆರೆದ ಭಾರತ ಮತ್ತೆ ತನ್ನ ಪ್ರಾಚೀನ ವೈಭವವನ್ನು ಪಡೆದುಕೊಳ್ಳುತ್ತಿದೆ!

ಇಷ್ಟಾದರೂ, ವಿದೇಶಾಂಗ ಸಚಿವಾಲಯ ಪಾಕಿಸ್ಥಾನದ ಪ್ರಜೆಗಳಿಗೆ ಹೊಸ ಭರವಸೆಯನ್ನು ನೀಡಿದ್ದರೂ, ಅಗತ್ಯ ಬಿದ್ದಾಗ ವೀಸಾವನ್ನು ನೀಡಿದ್ದರೂ ಸಹ, ಪಾಕಿಸ್ಥಾನ ಸರಕಾರ ಇವತ್ತಿಗೂ ಭಾರತಕ್ಕೆ ಅವಮಾನ ಎಸಗುವ ಯಾವ ಅವಕಾಶವನ್ನೂ ಬಿಟ್ಟುಕೊಡುವುದೇ ಇಲ್ಲ ಬಿಡಿ! ಯಾವಾಗ, POK ಯ ಪ್ರಜೆಯೊಬ್ಬ ದೆಹಲಿಯ ಆಸ್ಪತ್ರೆಗೆ ವೈದ್ಯಕೀಯ ಸಹಾಯಕ್ಕಾಗಿ ಕೋರಿದ್ದಾಗ, ಭಾರತೀಯ ವೀಸಾವನ್ನು ತೆಗೆದುಕೊಂಡು ನಂತರ ಚಿಕಿತ್ಸೆಗೆ ತೆರಳುವಂತೆ ಮಾಡಿದ್ದನ್ನು ಪ್ರಶ್ನಿಸಿ, “ಕಾಶ್ಮೀರು ಜನರಿಗೆ ಪಾಕಿಸ್ಥಾನದ ಸರಕಾರ ಯಾವ ರೆಕಮೆಂಡೇಶನ್ನುಗಳನ್ನೂ ಕೊಡುವ ಅಗತ್ಯವೇ ಇಲ್ಲ. ಯಾಕೆಂದರೆ, ಕಾಶ್ಮೀರ ಭಾರತದ್ದೇ ಅವಿಭಾಜ್ಯ ಅಂಗ! ಆದ್ದರಿಂದ, ಕಾಶ್ಮೀರಿಗಳೂ ಕೂಡ ಭಾರತೀಯರೇ ಆದ್ದರಿಂದ ಅವರು ಭಾರತದಲ್ಲಿ ತಿರುಗಾಡಲು ಯಾವ ವೀಸಾದ ಅಗತ್ಯವೂ ಇಲ್ಲ” ಎಂಬುದಾಗಿ ತಿರುಗೇಟು ನೀಡಿದ್ದ ಸುಷ್ಮಾ ಸ್ವರಾಜ್, ಪಾಕಿಸ್ಥಾನಕ್ಕೆ ಸದ್ದಿಲ್ಲದೇ ಎಚ್ಚರಿಕೆ ನೀಡಿದ್ದರು ಕೂಡ!

ಇದೆಲ್ಲ ಬಿಂಬಿಸುವುದು ಹೇಗೆ ಭಾರತದ ವಿದೇಶಾಂಗ ಸಚಿವಾಲಯ ನಿಜಕ್ಕೂ ತನ್ನ ಭಾರತೀಯ ಸಿದ್ಧಾಂತಗಳ ಜೊತೆಯಲ್ಲೇ ಕೆಲಸ ಮಾಡುತ್ತಿದೆ ಎಂಬುದನ್ನು ಮಾತ್ರ! ಅಲ್ಲದೇ, ಮಹಿಳಾ ಸಬಲೀಕರಣಕ್ಕೆ ಅತ್ಯಂತ ತಾಜಾ ಉದಾಹರಣೆಯಾದ ಸುಷ್ಮಾ ಸ್ವರಾಜ್ ತನ್ನ ಸ್ಥಾನಕ್ಕೆ ಯಾವ ರೀತಿ ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಿದ್ದಾರೆಂಬುದಕ್ಕೆ ಇಂತಹ ನಿದರ್ಶನಗಳು ಸಾಕ್ಷಿ!

ಇನ್ನಾದರೂ,. . ಪಾಕಿಸ್ಥಾನದ ಸರಕಾರ ಬುದ್ಧಿ ಕಲಿತು ತೆಪ್ಪಗಿರುತ್ತದೆಯೋ ನೋಡಬೇಕು!

– ಪೃಥು ಅಗ್ನಿಹೋತ್ರಿ

Tags

Related Articles

Close