ಅಂಕಣ

‘ಸೆಕ್ಸ್, ಕಾಂಡೋಮ್ ಮತ್ತು ಕಾಂಗ್ರೆಸ್’!!! ಮೋದಿ ಹಾಗೂ ಸ್ಮ್ರತಿ ಇರಾನಿ ಬಗ್ಗೆ ಕೀಳು ಸುದ್ದಿಯನ್ನು ಬಿತ್ತರಿಸಿದ ರಾಹುಲ್ ಗಾಂಧಿಯ ಸೋದರ ಸಂಬಂಧಿಯನ್ನು ಒಮ್ಮೆ ಭೇಟಿಯಾಗಿ!

ದ್ವೇಷ, ಮತ್ಸರ ಹಾಗೂ ಅಸಹನೆ! ಇದು ಪ್ರಸ್ತುತ ಕಾಂಗ್ರೆಸ್ ನ ಸ್ಥಿತಿ! ಒಬ್ಬ ನಾಯಕನನ್ನು ಕಾಂಗ್ರೆಸ್ ದ್ವೇಷಿಸುತ್ತಿರುವ ಕಾರಣವೇ ಆತ ದೇಶದ ಸೇವಕ
ಎಂಬುದಷ್ಟೇ! ದೇಶದ ಹಿತವನ್ನಷ್ಟೇ ಪಾಲಿಸುವ ಓರ್ವ ವ್ಯಕ್ತಿಯಾರಾಧಕ ಆಗಲು ಸಾಧ್ಯವೇ ಇಲ್ಲ ಬಿಡಿ! ಬರೀ ದೇಶವಷ್ಟೇ ಅವನ ಕಣಕಣದಲ್ಲಿ ಮಿಂದೇಳುತ್ತದೆ!
ದೇಶವನ್ನು ತುಂಡರಿಸುವ ಹುನ್ನಾರವೂ ಸಹ ಅವನೆದುರಿಗೆ ನಡೆಯುವುದೇ ಇಲ್ಲ ಎಂಬುದು ಅರಿವಾಗುತ್ತುದ್ದಂತೆ ಕಾಂಗ್ರೆಸ್ ಗೆ ಅಸಹನೆ ಶುರುವಾಗಿಬಿಟ್ಟಿತ್ತು! ಅತ್ತ ಹಗರಣ, ಇತ್ತ ಸತ್ತ ಹೆಣ ಎನ್ನುವ ಹಾಗೆ ಕಾಂಗ್ರೆಸ್ ಅಡ್ಡಡ್ಡವಾಗಿಯೇ ಸಿಕ್ಕು ಹಾಕಿಕೊಂಡುಬಿಟ್ಟಿತ್ತಷ್ಟೇ!

ಜಗತ್ ನಾಯಕ ಎಂಬ ಬಿರುದಿಗೆ ತಕ್ಕ ಹಾಗೆ ಗೌರವವನ್ನೂ ಪಡೆದ ಮೋದಿ ಅಕ್ಷರಶಃ ಮೋಡಿ ಮಾಡಿದ್ದರೆನ್ನಿ! ಯಾವುದೇ ಕಾಂಗ್ರೆಸ್ ನಾಯಕನಿಗೂ ಕೂಡ ಅವರನ್ನು ಮೀರಿಸಲೂ ಸಾಧ್ಯವಿಲ್ಲವೆನ್ನುವಾಗಲೇ ಮೋದಿಯ ಪ್ರಸಿದ್ಧಿಯನ್ನು ಕೆಳಗಿಳಿಸುವ ಕೀಳು ಪ್ರಯತ್ನಗಳು ಅದೆಷ್ಟೋ ನಡೆದಿದೆ ಬಿಡಿ!

ಮೋದಿಯ ಹೆಂಡತಿ,ಸಂಸಾರ, ಹಾಕಿದ ಬಟ್ಟೆ, ಕೋಟು, ವಿದೇಶ ಪ್ರವಾಸ, ಗೋಧ್ರಾ! ಇನ್ನೂ ಇನ್ನೇನಿದೆಯೋ! ಅರ್ಥವಿಲ್ಲದ ವಿಷಯವನ್ನೇ ಜಗಿಯತೊಡಗಿದೆ
ಕಾಂಗ್ರೆಸ್ ಅಷ್ಟೇ!

ರಾಹುಲ್ ಗಾಂಧಿಯ ಗೊಂಬೆ ‘ವಿಧ್ವಂಸಕಕಾರಿ ಮಾನವ’ನ ಬಗ್ಗೆ ಗೊತ್ತೇ?!

ಯಾವ ಕೀಳು ಪ್ರಯತ್ನವೂ ಸಹ ಸಫಲವಾಗದೇ ಹೋದಾಗ ಕಾಂಗ್ರೆಸ್ ನ ಸೋನಿಯಾ ಕುಟುಂಬ ‘ವಿನಾಶಕಾರಿ ಅಸ್ತ್ರ’ ವನ್ನು ಹೊರತೆಗೆದಿದೆ! ಅದರ ಹೆಸರು
‘ತೆಹಸೀನ್ ಪೂಣಾವಲ’! ಎಲ್ಲೆಲ್ಲಿ ಸಾಧ್ಯವಿದೆಯೋ ಅಲ್ಲಲ್ಲಿ ಮೋದಿಯ ವಿರುದ್ಧ ವಾಗ್ದಾಳಿ ನಡೆಸುವ ಈತನ ಪ್ರತಿಭೆ ಕಾಂಗ್ರೆಸ್ ವಲಯದಲ್ಲಿ ಜನಪ್ರಿಯ! ಸೋನಿಯಾ ಗಾಂಧಿಯ ಅಳಿಯ, ರಾಬರ್ಟ್ ವಾದ್ರಾನ ಸೋದರ ಸಂಬಂಧಿ ಈತ! ನೋಡಲಿಕ್ಕೆ ಶಾಂತನಾಗಿ, ಘನತೆಯುಳ್ಳವನಾಗಿ ಕಂಡರೂ ಸಹ ಟ್ವೀಟಿಸುವುದು ಬಿಟ್ಟೃ ಬೇರೇನೂ ಮಾಡದ ಈತ ಮೆಲ್ಲ ಮೆಲ್ಲನೇ ‘ಹಿಂದೂ ವಿರೋಧಿ’ ಸಂದೇಶಗಳನ್ನು ಹರಿಬಿಡುತ್ತಾನೆ ಎಂಬುದು ಅಷ್ಟೇ ಸತ್ಯ!

ಆದರೆ, ಆತನ ಹದ್ದು ಮೀರಿದ ವರ್ತನೆಯೊಂದು ಮೋದಿ ಹಾಗೂ ಸ್ಮ್ರತಿ ಇರಾನಿಯ ಬಗೆಗೆ ಸಂಬಂಧ ಕಲ್ಪಿಸುವಂತೆ ಮಾಡಿತು! ತನ್ನ ಹೆಂಡತಿಯನ್ನೇ ಸೆಕ್ಸಿ ಎಂದು ಟ್ವೀಟಿಸುವ ಈತನ ಸಂಸ್ಕಾರವಿಲ್ಲದ ನಡತೆಗೆ ತಕ್ಕನಾಗಿರುವ ಹೆಂಡತಿಯೂ ಸಿಕ್ಕಿರುವುದು ಆತನ ಅದೃಷ್ಟ!

10,000 ಸಿಗರೇಟ್ಸ್ ಪ್ಯಾಕ್ ಗಳು, 4,000 ಬೀಡಿಗಳು, 50,000 ಮೂಳೆಯ ಅವಶೇಷಗಳು, 2,000 ಹೊದಿಕೆಗಳು ಹಾಗೂ 3,000 ಕಾಂಡೋಮ್
ಗಳು ಕಾಲೇಜಿನ ಆವರಣದಲ್ಲಿ ಸಿಕ್ಕಿಬಿದ್ದ ಕಾರಣಕ್ಕಾಗಿ ಯಾವಾಗ ಬಿಜೆಪಿಯ ಶಾಸಕರಾದ ಅಹುಜಾ ಗಂಭೀರ ಆರೋಪ ಮಾಡಿದರೋ ತೆಹಸೀನ್ ಪ್ರತ್ಯಕ್ಷನಾಗಿಬಿಟ್ಟಿದ್ದ! ಅದೂ ಅಲ್ಲದೇ ಆತನಿಗದು ಪರಿಹಾಸ್ಯವಾಗಿತ್ತು!!

ಆದರೆ, ಯಾವಾಗ ದೇಶಭಕ್ತರು ಕಾಲೇಜಿನ ಆವರಣದಲ್ಲಿ ತಿರಂಗ ಧ್ವಜ ಹಾರಿಸುತ್ತೇವೆಂದು ಬಿಟ್ಟರೋ, ತೆಹಸೀನ್ ಗೆ ಉರಿ ಹತ್ತಿದ್ದು ಸುಳ್ಳಲ್ಲ! ತೀರಾ ಅಶ್ಲೀಲವಾಗಿ ಪ್ರತಿಕ್ರಿಯಿಸಿದ್ದ ತೆಹಸೀನ್ ಧ್ವಜವನ್ನು ‘ನೆಟ್ಟಗೆ’ ನಿಲ್ಲಿಸುವುದಾ ಎಂಬುದರಲ್ಲಿ ‘ನೆಟ್ಟಗೆ’ ಎಂಬುದನ್ನೇ ಅಸಹ್ಯಿಸಿ ಮಾತನಾಡಿದ್ದ!

ಯಾವ ಮನುಷ್ಯ ಸೋನಿಯಾ ಗಾಂಧಿಯೇ ದೇವರೆಂದು ತಿಳಿದು ಸರ್ವ ಸಂಸ್ಕ್ರತಿಗಳೂ ತನ್ನಲ್ಲಿದೆ ಎಂದು ಕೊಚ್ಚಿದ ತೆಹಸೀನ್ ಗೆ ಇನ್ನೊಂದು ಹೆಣ್ಣನ್ನು ಹೇಗೆ
ಗೌರವಿಸಬೇಕೆಂಬ ಕಿಂಚಿತ್ ಸಂಸ್ಕಾರವೂ ಇಲ್ಲವಷ್ಟೇ! ಅದೂ ಕೂಡ ಆ ಹೆಣ್ಣುಮಗಳು ಪ್ರಸ್ತುತ ಸಚಿವ ಸಂಪುಟದ ಸಂಸ್ಕಾರಯುತವಾದ ಮಂತ್ರಿ!

ಸುಳ್ಳುಸುದ್ದಿ ಹಾಗೂ ಮಿಥ್ಯಾರೋಪದಲ್ಲಿ ಆತನದು ಎತ್ತಿದ ಕೈ!!!

ಈತ ಸಿದ್ಧಾಂತಗಳ ಭಿನ್ನಾಭಿಪ್ರಾಯದ ಮೇಲೆ ಮಹಿಳೆಯರನ್ನೇ ಗುರಿಯಾಗಿಸುವುದು ಈತನ ಸದ್ಯದ ಉದ್ಯೋಗ! ಆತನಿಗೆ ‘ಉತ್ತರನ ಪೌರುಷ’ದ ಇತಿಹಾಸವೂ ಇದೆಯೆನ್ನಿ! ಭಾರತದಲ್ಲಿ ‘ಅಸಹಿಷ್ಣುತೆ’ ಎಂಬ ಪದ ಸೇರಿದ ಮೇಲೆ ತದನಂತರ ಸೇರುತ್ತಿರುವುದು ‘ಕಾನೂನು ಬಾಹಿರವಾಗಿ ಗಲ್ಲಿಗೇರಿಸಿ’ ಎಂಬುದು!! ಈತ ಇದೇ ವಿಷಯದ ಬಗ್ಗೆ ತನ್ನ ಕೆಲಸಗಾರ ಕೂಡ ‘ಗಲ್ಲಿಗೇರಿದ್ದಾನೆ’ ಎಂದು ಬೊಬ್ಬೆ ಹಾಕಿದ್ದಾಗ ನೇರವಾಗಿ ಪೋಲಿಸ್ ಇವನನ್ನು ಸಂಪರ್ಕಿಸಿತ್ತು! ಆಗಲೂ, ಸಹ ತಾನು ಬಹಳ ಒತ್ತಡದಲ್ಲಿದ್ದೇನೆ ಎಂದೆಲ್ಲ ಜಾರಿಕೊಂಡ ಈತನಿಗೆ ಟ್ವಿಟ್ಟರ್ ನಲ್ಲಿ ಸುಳ್ಳು ಸುದ್ದಿ ಹಬ್ಬಿಸುವ ಕೆಲಸವೊಂದು ಕಾಯುತ್ತಾ ಕುಳಿತಿತ್ತು!

ಕಾಂಗ್ರೆಸ್ ಯಾವಾಗಲೂ ‘ಭಾರತಕ್ಕೆ ಮಹಿಳಾ ಪ್ರಧಾನಿ’ ಕೊಟ್ಟೆವೆಂದು ಇಂದಿರಾ ಗಾಂಧಿಯನ್ನೇ ತಂದು ಶಹಬ್ಬಾಸ್ ಗಿರಿ ತನಗೆ ತಾನೇ ಕೊಟ್ಟುಕೊಂಡಿತಷ್ಟೇ!
ನೆಹರೂವಿನಿಂದ ಇವತ್ತಿನ ರಾಹುಲ್ ಗಾಂಧಿಯ ತನಕವೂ ಕಾದ ‘ಕಾಮ’ದಿಂದ ಅದ್ಹೇಗೆ ಅವರನ್ನು ಜೀವಂತವಾಗಿರಿಸಿತೋ ಆ ತೆಹಸೀನನ್ನೇ ಕೇಳಬೇಕಷ್ಟೇ! ಇಷ್ಟೆಲ್ಲಾ ಮಹಿಳಾ ಸಬಲೀಕರಣ ಎಂದೆಲ್ಲ ಮಾತನಾಡುವ ಕಾಂಗ್ರೆಸ್ ನವರಿಗೆ (ಇಂದಿರಾಗಾಂಧಿಯಂತವರನ್ನು ಹೊರತುಪಡಿಸಿ) ಭಾರತೀಯ ಹೆಣ್ಣುಮಕ್ಕಳ ಬಗ್ಗೆ ಯಾವುದೇ ಗೌರವವೂ ಇದ್ದಂತಿಲ್ಲ!

ಬಿಡಿ! ಇಂದಿರಾಗಾಂಧಿಯ ಕುಟುಂಬ ನಮಗೆ ಗೌರವ ಕೊಟ್ಟರೆ ನಮ್ಮ ಘನತೆಗೇ ಚ್ಯುತಿ ಎಂದು ಭಾರತೀಯ ಮಹಿಳೆಯರು ಸ್ವಾಭಿಮಾನ ವ್ಯಕ್ತಪಡಿಸಿರುವುದೊಂದೇ ಸಮಾಧಾನ!

– ತಪಸ್ವಿ

Tags

Related Articles

Close