ಅಂಕಣ

ಸೋನಿಯಾ ಗಾಂಧಿಯವರು ಗಿನ್ನಿಸ್ ವಿಶ್ವದಾಖಲೆಯನ್ನು ನಿರ್ಮಿಸಿದ್ದರ ಅರಿವು ನಿಮಗಿದೆಯಾ?? ಈ ಸಾಧನೆಯ ಕುರಿತಾಗಿ ಯಾಕೆ ಯಾರೂ ಬಾಯಿ ಬಿಡುತ್ತಿಲ್ಲ??

ಪ್ರಧಾನಿ ಮೋದಿವರ ಪದವಿಯ ಕುರಿತಾಗಿ ಪ್ರಶ್ನಿಸುವ ಕಾಲಘಟ್ಟದಲ್ಲಿ ವಿರೋಧಗಳಿಗೆ ಅದೊಂದು ಆಹಾರವೇ ಆಗಿತ್ತು. ಆದರೆ ವಿಶ್ವವಿದ್ಯಾಲಯವು ಮೋದಿವಯ ಪದವಿ ಪೂರೈಕೆಯು ವಾಸ್ತವ ಹಾಗೂ ಸತ್ಯವೆಂಬುದಾಗಿ ಹೇಳಿದಾಗ ಅವರು ಸಪ್ಪೆಯಾದುದಂತೂ ಸತ್ಯ. ಆದರೆ ಭಾರತವನ್ನು 10 ವರ್ಷಗಳ ಕಾಲ ಪರೋಕ್ಷವಾಗಿ ಆಳಿದ ವ್ಯಕ್ತಿಯು ಗಿನ್ನಿಸ್ ಸಾಧನೆಯನ್ನು ಮಾಡಿದ್ದಾರೆಂಬುದರ ಅರಿವು ನಿಮಗಿದೆಯಾ??

ಇದು ಬೇರಾರು ಅಲ್ಲ ಸ್ವಾಮೀ. ಸ್ವತಃ ಇಟಲಿಯ ಮಗಳು, ಭಾರತದ ಸೊಸೆ ಆಂಟೋನಿಯಾ ಅಲಿಯಾಸ್ ಸೋನಿಯಾ..ಅಷ್ಟಕ್ಕೂ ಇವಳ ಸಾಧನೆಯೇನು ಗೊತ್ತಾ?? ನಕಲಿ ಪದವಿಯನ್ನು ಹೊಂದಿದ್ದು. ಲಂಡನ್ನಿನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಪಿಎಚ್‍ಡಿ ಪದಿವಿ ಹೊಂದಿದ್ದೆಯೆಂಬುದಾಗಿ ಹೇಳಿಕೊಂಡು ಬರುತ್ತಿದ್ದ ಸೋನಿಯಾರವರ ಬಂಡವಾಳ ಈಗ ಬಯಲಾಗಿದೆ. ಆಕೆಗೆ ಸ್ಪಷ್ಟವಾಗಿ ಗೊತ್ತಿತ್ತು, ”ಭಾರತೀಯರು ಲಂಡನ್ನಿಗೆ ಆ ವಿಚಾರವನ್ನಿಟ್ಟುಕೊಂಡು ಹುಡುಕಿ ಬರುವುದಿಲ್ಲವೆಂದು” . ಆದರೆ ಡಾ. ಸುಬ್ರಹ್ಮಣ್ ಸ್ವಾಮಿಯವರು ಭಾರತೀಯರಿಗೆ ಬಹಳ ಸ್ಪಷ್ಟವಾಗಿ ಹೇಳುತ್ತಾರೆ,” ಆಕೆ ಓದಿದ್ದು ಕೇವಲ 5 ನೆಯ ತರಗತಿ”

ಆಶ್ಚರ್ಯ, ಕುತೂಹಲ ಹಾಗೂ ಅಪನಂಬಿಕೆಯ ಸ್ಥಿತಿಯಲ್ಲಿದ್ದೀರಾ??

ಕೆಲಸದ ಹುಡುಕಾಟಕ್ಕಾಗಿ ಸೋನಿಯಾರವರನ್ನು ತಮ್ಮ ತಾಯಿ ಲಂಡನ್ನಿಗೆ ಕಳುಹಿಸುತ್ತಾರೆ. ಆದರೆ ಅವರಿಗೆ ಇಂಗ್ಲಿಷ್ ಭಾಷೆ ಮಾತನಾಡಲು ಬರುತ್ತಿರಲಿಲ್ಲವಾದ್ದರಿಂದ ಇಂಗ್ಲೀಷ್ ಮಾತನಾಡುವ ತರಬೇತಿ ತರಗತಿಗೂ ಸೇರಿಕೊಳ್ಳುತ್ತಾರೆ. ಆದರೆ ಕೆಲವು ವಾರಗಳ ನಂತರ ಈ ತರಬೇತಿ ತರಗತಿಗಳು ಪಿಎಚ್‍ಡಿ ಪದವಿಯಾಗಿ ಮಾರ್ಪಾಟುಗೊಳ್ಳುತ್ತದೆ. ಕಾರಣ ಭಾರತದಲ್ಲಿ ಚುನಾವಣೆ!! ಈ ವಿಚಾರವನ್ನು ಬಯಲಿಗೆಳೆದವರು ಡಾ. ಸುಬ್ರಹ್ಮಣ್ಯನ್ ಸ್ವಾಮೀ.

ಅರ್ಥಶಾಸ್ತ್ರ ಇಲಾಖೆಯಿಂದ ಕೇಂಬ್ರಿಡ್ಜ್ ವಿಶ್ವವಿದ್ಯಾಲಯಕ್ಕೆ ಉಪನ್ಯಾಸ ನಿಮಿತ್ತ ತೆರಳಿದ್ದರು ಸ್ವಾಮೀ. ಊಟದ ಸಮಯದಲ್ಲಿ ಆ ವಿದ್ಯಾಲಯದ ಆಡಳಿತ
ಮಂಡಳಿಯಲ್ಲಿ ಸ್ವಾಮಿಯವರು ಪ್ರಶ್ನೆ ಕೇಳುತ್ತಾರೆ , ” ವಿದ್ಯಾರ್ಥಿ ಜೀವನದಲ್ಲಿ ಸೋನಿಯಾರವರು ಹೇಗಿದ್ದರು?” ಅವರು ಕೊಟ್ಟ ಉತ್ತರಬಹಳ
ಚಕಿತವಾಗಿಸುವಂತಹದ್ದು. ಆಕೆ ಆ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸವನ್ನೇ ಮಾಡಿಲ್ಲ ಅನ್ನುವ ಉತ್ತರವನ್ನು ಕೊಡುತ್ತಾರೆ ಅವರು!!

ಭಾರತವನ್ನು ತಮ್ಮ ಸುಳ್ಳಿನ ಕಂತೆಗಳ ಮೂಲಕ ನಂಬಿಸಿ ಪರೋಕ್ಷವಾಗಿ ಆಡಳಿತ ಮಾಡುತ್ತಿದ್ದವರ ಬಂಡವಾಳವನ್ನು ಇವತ್ತು ಸ್ವಾಮೀಯವರು ಬಯಲಿಗೆಳೆದಿದ್ದಾರೆ. ಇಂಗ್ಲೀಷ್ ತರಬೇತಿಯನ್ನು ಪಿಎಚ್‍ಡಿ ಪದವಿಯನ್ನಾಗಿ ಬದಲಾವಣೆಯಾದುದು ಬಹುಶಃ ಟೈಪಿಂಗ್ ದೋಷವಿರಬೇಕೆಂದರು ಸೋನಿಯಾ. ಇದು ಗಿನ್ನೀಸ್ ವಿಶ್ವ ದಾಖಲೆಯಲ್ಲಿ ಸೇರಬೇಕಾಗಿತ್ತು ಎಂದರು ಸ್ವಾಮೀ!! ಯಾವ ಸಾಧನೆಗೆ ಗೊತ್ತೇ?? ಅತ್ಯಂತ ಉದ್ದದ ಟೈಪಿಂಗ್ ದೋಷ ದ ಸಾಧನೆಗೆ!!

ಒಂದು ಪೂರ್ಣವಿರಾಮ, ಅಧವಿರಾಮ ತಪ್ಪಾದರೆ ಅದನ್ನು ಟೈಪಿಂಗ್ ದೋಷವೆಂಬುದಾಗಿ ಪರಿಗಣಿಸಬಹುದು, ಆದರೆ ಇಲ್ಲಿ ಒಂದು ವಾಕ್ಯವೇ ತಪ್ಪಾಗಿದೆ,
ಮಿಥ್ಯವಾಘಿವೆ, ಆದರೂ ಇದು ಸೋನಿಯಾರವರ ಪ್ರಕಾರ ಟೈಪಿಂಗ್ ದೋಷ!! ಭಾರತದಲ್ಲಿ ನಡೆಯುವ ಚುನಾವಣೆಗೋಸ್ಕರವಾಗಿಯೇ ಇಂತಹದ್ದೊಂದು ಸುಳ್ಳಿನ ಕಂತೆಯನ್ನು ಭಾರತೀಯರ ಮುಂದೆ ತೆರೆದಿಟ್ಟಿದ್ದರು ಆಂಟೋನಿಯಾ. “ನಂತರ ಈ ವಿಚಾರದ ಕುರಿತಾಗಿ ನಾನು ದೂರು ಸಲ್ಲಿಸಿದಾಗ ಘನ ನ್ಯಾಯಾಲಯವು, “ಇದು ಹಳೆಯ ವಿಚಾರವಾದ್ದರಿಂದ ಬಿಟ್ಟುಬಿಡಿ” ಎಂದಿತು ” ಎಂಬುದಾಗಿ ಸ್ವಾಮೀ ವಿವರಿಸಿದರು.

ಈ ಸಾಧನೆಯನ್ನು ಸಾಧಿಸಿದ್ದಕ್ಕಾಗಿ, ಸೃಷ್ಟಿಸಿದ್ದಕ್ಕಾಗಿ ಸನ್ಮಾನಿಸಿ ಗೌರವಿಸುವ ಬದಲು ಸೋನಿಯಾರನ್ನು ಕಾರಾಗೃಹಕ್ಕೆ ತಳ್ಳಬೇಕು. ಕಂಬಿಗಳ ಎಣಿಕೆಯನ್ನೇ
ಮಾಡಬೇಕು. ನಿರ್ಭೀತಿಯಿಂದ ತನ್ನ ಪದವಿಯನ್ನು ನಕಲಿ ಮಾಡುತ್ತಾರೆಂದಾದರೆ ಭಾರತವನ್ನು ಇನ್ನಾವ ರೀತಿಯಾಗಿ ಲೂಟಿ ಮಾಡಿರಬೇಡ ಈ ಕುತಂತ್ರಿಗಳ
ಕುಟುಂಬ!! ಇವಳ ನೇತೃತ್ವದಲ್ಲಿ ಅದೆಷ್ಟು ಹಗರಣಗಳಾಗಿರಬೇಡ!!

– ವಸಿಷ್ಠ

Tags

Related Articles

Close