ಪ್ರಚಲಿತ

ಆಘಾತಕಾರಿ ಸುದ್ದಿ!!! ಸೋನಿಯಾ ಗಾಂಧಿಯ ಬಲಗೈ ಬಂಟ, ರಾಜ್ಯಸಭಾ ಸದಸ್ಯ, ಕಾಂಗ್ರೆಸ್ ನ ಉಚ್ಛ ನಾಯಕ ಅಹ್ಮದ್ ಪಟೇಲ್ ನ ಐಎಸ್ ಐಎಸ್ ಉಗ್ರ ಸಂಘಟನೆಯ ಜೊತೆಗಿನ ಸಂಪರ್ಕ ಬಯಲು!

ಈ ಕಾಂಗ್ರೆಸ್ ನಾಯಕನೊಬ್ಬ ಸೋನಿಯಾ ಗಾಂಧಿಯಷ್ಟೇ ಪ್ರಭಾವಿ! ಅದಕ್ಕೆ ಸಾಕ್ಷಿಯಾಗಿ, ಆಗಸ್ಟ್ ನಲ್ಲಿ ಗುಜರಾತ್ ನ ರಾಜ್ಯಸಭಾ ಚುನಾವಣೆಯಲ್ಲಿ ಮೂರನೇ ಸೀಟು ಗಿಟ್ಟಿಸಿಕೊಂಡಿದ‌್ದರು ಅಹ್ಮದ್ ಪಟೇಲ್! ಕೊನೇ ಘಳಿಗೆಯಲ್ಲಿ ಯಾವಾಗ ಅಹ್ಮದ್ ಪಟೇಲ್ ಸೋಲಬಹುದು ಎಂದೆನಿಸಿತೋ ತಕ್ಷಣವೇ ಕಾಂಗ್ರೆಸ್ ಅಧ್ಯಕ್ಷೆಯಾದ ಸೋನಿಯಾ ಗಾಂಧಿ ಕೊಳಕು ರಾಜಕೀಯದ ಕುತಂತ್ರಗಳನ್ನು ಮಾಡಿ ಅಹ್ಮದ್ ಪಟೇಲ್ ರವರ ಗೆಲುವನ್ನು ನಿಶ್ಚಿತವಾಗಿರಿಸಿದ್ದು ಅವರಿಬ್ಬರ ಆತ್ಮೀಯತೆಗೆ ಹಿಡಿದ ಕನ್ನಡಿಯಾಗಿತ್ತು! ಆದರೆ, ಮತ್ತದೇ ಅಹ್ಮದ್ ಪಟೇಲ್ ಈಗ ಬಹುದೊಡ್ಡ ತೊಂದರೆಗೆ ಸುಲುಕಿದ್ದಾರಷ್ಟೇ!

ಇದೇ ಅಹ್ಮದ್ ಪಟೇಲ್ ಗುಜರಾತ್ ವಿಧಾನಸಭಾ ಚುನಾವಣೆಗೂ ಮುನ್ನ ಬಾಂಬ್ ಸ್ಫೋಟಿಸಬೇಕೆಂದು ಐಎಸ್ ಐಎಸ್ ಉಗ್ರರ ಜೊತೆಗೂಡಿ ಯೋಜನೆ ಹೂಡಿದ್ದನೆಂದು ಸಾಬೀತಾಗಿರುವುದನ್ನು ನಂಬುತ್ತೀರಾ?! ಹೌದು! Anti – Terrorist Squad ರವರು ಉಬೇದ್ ಮಿರ್ಜಾ ಹಾಗೂ ಕಾಸಿಮ್ ಸ್ಟೀಮರ್ವಾಲಾ ಎಂಬ ಇಬ್ಬರು ಉಗ್ರರನ್ನು ಸೆರೆ ಹಿಡಿದಿದ್ದಾರೆ! ಆಘಾತಕಾರಿ ವಿಚಾರವೆಂದರೆ, ಅಹ್ಮದ್ ಪಟೇಲ್ ರ ಆಸ್ಪತ‌್ರೆ ಯಲ್ಲಿಯೇ ಕೆಲಸ ಮಾಡುತ್ತಿದ್ದನೆಂಬುದು!

ಕಾಸಿಮ್ ಮೇಲೆ ಎಫ್ ಐ ಆರ್ ದಾಖಲಿಸಿರುವ ಪೋಲಿಸ್, “ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದ ತಕ್ಷಣವೇ ಜಮೈಕಾಗೆ ಹೋಗಲು ತಯಾರಿ ನಡೆಸಿದ್ದಲ್ಲದೇ, ಜಮೈಕಾದಲ್ಲಿಯೇ ವಾಸ್ತವ್ಯವಾಗಿರುವ ಜಿಹಾದಿ ಗುರುವಾದ ಅಬ್ದುಲ್ – ಅಲ್ -ಫೈಸಲ್ ನ ಅಡಿಯಲ್ಲಿ ಉಗ್ರ ಸಂಘಟನೆಗೆ ಸೇರಲು ತಯಾರಿ ನಡೆಸಿದ್ದ’ ಎಂದು ವರದಿಯಲ್ಲಿ ದಾಖಲಿಸಿದ್ದಾರೆ!

ಅಲ್ಲದೇ, ಕಾಸಿಮ್ ಜಿಹಾದಿ ಗುರುವಾದ ಅಬ್ದುಲ್ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದದ್ದಲ್ಲದೇ, ಜಮೈಕಾಗೆ ಹೋಗಲು ಎಕೋ ಕಾರ್ಡಿಯೋಗ್ರಾಮ್ ಟೆಕ್ನಿಷಿಯನ್ ಆಗಿ ಕೆಲಸ ನಿರ್ವಹಿಸುತ್ತಿದ್ದೇನೆಂಬ ಮಾಹಿತಿ ನೀಡಿ ವೀಸಾ ತೆಗೆದುಕೊಂಡಿದ್ದ’ ನೆಂದು ಹೇಳಿದ್ದಾರೆ!

ಬಂಧನವಾಗುವುದಕ್ಕಿಂತ ಕೇವಲ ಎರಡು ದಿನಗಳ ಮುಂಚೆ ರಾಜೀನಾಮೆ ನೀಡಿದ್ದ ಈ ಉಗ್ರನ ನಡೆ ಅನುಮಾನಾಸ್ಪದವಲ್ಲವೇ?!

” ಕಾಸಿಮ್ ಈ ಅಹ್ಮದ್ ಪಟೇಲ್ ಭರುಚ್ ನಲ್ಲಿ ನಡೆಸುತ್ತಿರುವ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದನೆಂದು ಈಗ ಬೆಳಕಿಗೆ ಬಂದಿದೆ! ಅಹ್ಮದ್ ಪಟೇಲ್ ಈ ಮುಂಚೆ ಆಸ್ಪತ್ರೆಯ ಟ್ರಸ್ಟೀ ಆಗಿದ್ದಿದ್ದು 2014 ರಲ್ಲಿ ಹುದ್ದೆಗೆ ರಾಜೀನಾಮೆ ನೀಡಿದ್ದನಷ್ಟೇ! ಆದರೂ, ಕೂಡ ಆಸ್ಪತ್ರೆಯ ಕಾರ್ಯವಾಹಿಗಳಲ್ಲಿ ಹಿಡಿತ ಸಾಧಿಸಿದ್ದ ಅಹ್ಮದ್ ಪಟೇಲ್ , 2016 ರಲ್ಲಿ ಆಸ್ಪತ್ರೆಯ ಕೆಲ ಕಟ್ಟಡಗಳನ್ನು ಉದ್ಘಾಟಿಸಲು ಪ್ರಣಬ್ ಮುಖರ್ಜೀಯನ್ನು ಸ್ವತಃ ಆಹ್ವಾನಿಸಿದ್ದನೆಂಬುದು ಆತನ ಆಸ್ಪತ್ರೆಯ ಮೇಲಿದ್ದ ಹಿಡಿತವೊಂದು ಇದರಿಂದ ಸಾಬೀತಾಗುವುದಿಲ್ಲವೇ?!’ ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ!

ಬಂಧನವಾಗುವುದಕ್ಕಿಂತ ಎರಡು ದಿನಗಳ ಮುಂಚೆ ಉಗ್ರನೇ ರಾಜೀನಾಮೆಯನ್ನು ಕೊಟ್ಟಿದ್ದೋ ಅಥವಾ ಕೊಡುವಂತೆ ಮಾಡಿದ್ದೋ?! ಅವರಿಬ್ಬರ ಮಧ್ಯೆ ಇದ್ದ
ಸಂಪರ್ಕವೇನು?! ಇದು ನಿಮಗೆ ಗೊತ್ತಿತ್ತಾ?! ಗೊತ್ತಿರಲಿಲ್ಲವೋ?! ನೀವು ದೇಶಕ್ಕೆ ಹೇಳಲೇಬೇಕು! ಕಾಂಗ್ರೆಸ್ ನ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಇಬ್ಬರೂ ಕೂಡ ಇದಕ್ಕೆ ಉತ್ತರವನ್ನು ಕೊಡಲೇಬೇಕು! ಇದು ದೇಶದ ಭದ್ರತಾ ವ್ಯವಸ್ಥೆಯನ್ನೇ ದಿಕ್ಕುಗೆಡಿಸುವ ಹಂತದಲ್ಲಿದೆ! ಅಹ್ಮದ್ ಪಟೇಲ್ ತಮ್ಮ ರಾಜ್ಯಸಭಾದ ಹುದ್ದೆಗೆ ರಾಜೀನಾಮೆ ನೀಡಿ ಸತ್ಯವೇನೆಂದು ತಿಳಿಸಲಿ” ಎಂದು ಚಾಟಿ ಬೀಸಿದ್ದಾರೆ ಮುಖ್ಯಮಂತ್ರಿ ರೂಪಾನಿ!

ಆದರೆ, ಮತ್ತದೇ ಮತಿಗೆಟ್ಟ ಸೆಕ್ಯುಲರ್ ಮಾಧ್ಯಮಗಳು ಅಹ್ಮದ್ ಪಟೇಲ್ ಗೆ ಏನೂ ಗೊತ್ತಿಲ್ಲವೆಂದು ಬಿಂಬಿಸುತ್ತಿರಯವುದರ ಅರ್ಥವೇನು?! ಅಹ್ಮದ್ ಪಟೇಲ್ ಗೆ ತನ್ನದೇ ಆಸ್ಪತ್ರೆಯಲ್ಲಿದ್ದ ಉಗ್ರನ ಭಾರತೀಯರ ಹತ್ಯೆಗೆ ಸಂಚು ಹೂಡುತ್ತಿದ್ದದ್ದು ಗೊತ್ತಿರಲೇ ಇಲ್ಲ ಎಂದೇ?!

ಕೆಲವು ದಿನಗಳ ಹಿಂದಷ್ಟೇ, ಪ್ರಧಾನಿ ಮೋದಿ ಟ್ವಿಟ್ಟರ್ ನಲ್ಲಿ ಫಾಲ್ಲೋ ಮಾಡಿದ್ದ ಒಬ್ಬ ವ್ಯಕ್ತಿ ಕಾಂಗ್ರೆಸ್ ಬಗೆಗೆ ಅಶ್ಲೀಲವಾದ ಟ್ವೀಟ್ ಗಳನ್ನು ಮಾಡುತ್ತಿದ್ದನ್ನೇ ದೊಡ್ಡ ಸುದ್ದಿ ಮಾಡಿದ್ದ ಕಾಂಗ್ರೆಸ್ ನ ನಿಜಮುಖ ಬಯಲಾಗುತ್ತಲೇ ಹೋಗುತ್ತಿದೆ! ಈಗ, ಸ್ವತಃ ಕಾಂಗ್ರೆಸ್ ನ ಪ್ರಭಾವೀ ವ್ಯಕ್ತಿಯೇ ಐಎಸ್ ಐಎಸ್ ಸಂಪರ್ಕದಲ್ಲಿ ಇರುವುದು ಬಯಲಾಗಿದೆ! ಅಂದರೆ, ಕಾಂಗ್ರೆಸ್ ಉಗ್ರ ಚಟುವಟಿಕೆಗಳಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದೆಯೇ?!

ಈಗೇನು ಹೇಳುತ್ತಾರೆ ಈ ಸೆಕ್ಯುಲರ್ ಮಾಧ್ಯಮಗಳು?!

– ಪೃಥು ಅಗ್ನಿಹೋತ್ರಿ

Tags

Related Articles

Close