ಅಂಕಣ

ಸೋನಿಯಾ ಗಾಂಧಿಯ ಸ್ವಿಸ್ ಖಾತೆಗೆ 20,000 ಕೋಟಿ ರೂಗಳನ್ನು ಜಮಾ ಮಾಡಿದ್ದ ಫಾರಿನ್ ನ ಗೂಢಾಚಾರ ಸಂಸ್ಥೆಯೊಂದು ಗಾಂಧಿ ಕುಟುಂಬಕ್ಕೆ ನಿರಂತರವಾಗಿ ಹಣ ಪಾವತಿಸುತ್ತಿತ್ತೇ?!

ಯಾವುದೇ ದಾಖಲೆಗಳಾಗಲಿ ಅದು ಯಾವತ್ತು ಕೂಡ ಸುಳ್ಳು ಮಾಹಿತಿಯನ್ನು ನೀಡೋದಿಲ್ಲ!! ಹಾಗೆಯೇ ಗಾಂಧಿ ಎನ್ನುವ ಉಪನಾಮವನ್ನು ಹೊತ್ತಿರುವ
ಇಂದಿರಾಗಾಂಧಿ ಕುಟುಂಬಸ್ಥರ ಬಗೆಗೆ ಕೆಲ ದಾಖಲೆಗಳು ರಷ್ಯಾದಲ್ಲಿ ಸಿಕ್ಕಾಗ, ಅದರಲ್ಲಿರುವ ಸತ್ಯಾಂಶಗಳನ್ನು ಗಮನಿಸಿದಾಗ ಒಂದು ಕ್ಷಣ ದಂಗಾಗಬಹುದು!!

ಹೌದು… 1985ರಲ್ಲಿ ಕೆಜಿಬಿ ಮುಖ್ಯಸ್ಥ ವಿಕ್ಟರ್ ಚೆಬ್ರಿವ್ ಅವರು ಕೇಂದ್ರ ಸಮಿತಿಯಾದ ಸೋವಿಯತ್ ಒಕ್ಕೂಟದ ಕಮ್ಯೂನಿಸ್ಟ್ ಪಾರ್ಟಿ(ಸಿ.ಪಿ.ಎಸ್.ಯು)ಗೆ “ಗಾಂಧಿ ಕುಟುಂಬಸ್ಥರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರ ತಾಯಿ ಶ್ರೀಮತಿ ಪೌಲಾ ಮೈನೋ ಅವರಿಗೆ ಯು.ಎಸ್ ಡಾಲರ್ ಗಳನ್ನು ಪಾವತಿಸುವ ಅಧಿಕಾರವನ್ನು ನೀಡುತ್ತಿರಾ ಎಂದು ಕೇಳಿರುವ ಬಗ್ಗೆ, ಸೋವಿಯತ್ ಪತ್ರಕರ್ತರಾದ ಡಾ. ಯೆವ್ಜೆನಿಯಾ ಅಲ್ಬಾಟ್ಸ್, ತನ್ನ ಪುಸ್ತಕದಲ್ಲಿ ಈ ವಿಚಾರವನ್ನು ಉಲ್ಲೇಖಿಸಿದ್ದಾರೆ.

ಆದರೆ 1985ರ ಡಿಸೆಂಬರ್ 20ರಂದು ಈ ಬಗ್ಗೆ ನಿರ್ಣಯವನ್ನು ಕೈಗೊಳ್ಳಲಾಯಿತು.. ಇನ್ನು ಸ್ವತಃ ಸೋನಿಯಾ ಗಾಂಧಿಯವರೇ 1971ರ ನಂತರದ ಸಮಯದಿಂದ ಹಣ ಬಂದಿರುವುದರ ಬಗೆಗಿರುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ!!

ಕೆಜಿಬಿ ಅಥವಾ ಕೋಮಿಟೆಟ್ ಗೊಸುಡಾಸ್ರ್ವೆನ್ನೋಯ್ ಬೆಜೊಪಾಸ್ನೋಸ್ಟಿ ಎನ್ನುವ ಸಂಸ್ಥೆಯು ಸೋವಿಯತ್ ಒಕ್ಕೂಟದ ಭದ್ರತೆಗಾಗಿರುವ ಸಮಿತಿಯಾಗಿತ್ತು.
ಇದೊಂದು ಗೂಢಚಾರ ಸಂಸ್ಥೆಯಾಗಿದ್ದು, ಭಯಹುಟ್ಟಿಸುವಂತಹ ನಿಖರ ಹಾಗೂ ಪರಿಣಾಮಕಾರಿ ಮಾಹಿತಿಯನ್ನು ಪಡೆದುಕೊಳ್ಳುವುದರಲ್ಲಿ ನಿಸ್ಸೀಮರಾಗಿದ್ದ
ಸಂಸ್ಥೆಯಾಗಿತ್ತು!!

ಆದರೆ, ರಾಜೀವ್ ಗಾಂಧಿ ಅವರ ಹೆಂಡತಿಯಾಗಿರುವ ಸೋನಿಯಾ ಗಾಂಧಿ ಅವರಿಗೆ ಕೆಜಿಪಿಯಂತಹ ಸಂಘಟನೆಯು ಬಹುದೊಡ್ಡ ಮೊತ್ತದ ಹಣವನ್ನು
ಪಾವತಿಸುತ್ತಿರುವುದಾದರೂ ಯಾಕೆ ಎಂಬುವುದು ಎಲ್ಲರಿಗೂ ಮೂಡುವಂತಹ ಸಹಜ ಪ್ರಶ್ನೆ!! ಆದರೆ ಇದು ಯಾವುದೇ ರೀತಿಯ ಹಗರಣವಲ್ಲ!! ಬದಲಾಗಿ ಈ
ಕೆಜಿಬಿಯು ಸೋವಿಯತ್ ಒಕ್ಕೂಟ ಮತ್ತು ಗಾಂಧಿ ಕುಟುಂಬದ ಗೂಢಚಾರ ಸಂಸ್ಥೆಯಾಗಿರುವುದಂತೂ ನಿಜ.!!!

ಹಾರ್ವರ್ಡ್ ರಷ್ಯನ್ ಸ್ಕಾಲರ್ ಆದ ಯ್ವೆಜಿನಿಯ ಆಲ್ಬಟ್ರ್ಸ್ ಎನ್ನುವಾಕೆ, ತನ್ನ “ದಿ ಸ್ಟೇಟ್ ವಿದಿನ್ ಎ ಸ್ಟೇಟ್: ದಿ ಕೆಜಿಬಿ ಆ್ಯಂಡ್ ಇಟ್ಸ್ ಹೋಲ್ಡ್ ಆನ್ ರಷ್ಯಾ” ಎನ್ನುವ ಪುಸ್ತಕದಲ್ಲಿ ಇನ್ನೊಂದು ಘಟನೆಯ ಬಗ್ಗೆ ಬೆಳಕು ಚೆಲ್ಲಿದ್ದಾರೆ. “1982ರ ವೇಳೆ ಸೋವಿಯತ್ ಒಕ್ಕೂಟವು ರಾಜೀವ್ ಗಾಂಧಿ ನಿಯಂತ್ರಿಸುತ್ತಿದ್ದ ಕಂಪೆನಿಯಾಗಿ ಹಣವನ್ನು ಚಲಾವಣೆ ಮಾಡಿತ್ತು. ಆದರೆ ರಾಜೀವ್ ಗಾಂಧಿ ಮರಣದ ನಂತರ ಈ ಅಪಾರವಾದ ಹಣವನ್ನು ಸೋನಿಯಾ ಗಾಂಧಿ ಕೈಬಿಟ್ಟಿದ್ದರು!! ಆದರೆ ಸೋವಿಯತ್ ಕುಸಿತಗೊಂಡ ನಂತರ ಸೋನಿಯಾ ಗಾಂಧಿ ಅಪಾರವಾದ ಹಣವನ್ನು ಪಡೆಯುತ್ತಿದ್ದರು ಎನ್ನುವುದು ಬೆಳಕಿಗೆ ಬಂದಿದೆ” ಎನ್ನುವ ವಿಚಾರದ ಬಗ್ಗೆ ತನ್ನ ಪುಸ್ತಕದಲ್ಲಿ ಹೇಳಿದ್ದಾರೆ. ಹಾಗಾಗಿ, ಕೆಜಿಬಿಗಳಿಂದ ಹಣ ಪಡೆಯುತ್ತಿದ್ದು ಸೋನಿಯಾ ಗಾಂಧಿ ಮಾತ್ರವಲ್ಲ, ಇವರೊಂದಿಗೆ ರಾಜೀವ್ ಗಾಂಧಿ ಮತ್ತು ಇಂದಿರಾ ಗಾಂಧಿ ಕೂಡ ಹಣ ಪಡೆಯುತ್ತಿದ್ದರು ಎನ್ನುವ ವಿಚಾರ ಇಲ್ಲಿ ಸ್ಪಷ್ಟವಾಗಿದೆ!!

1991ರ ನವೆಂಬರ್ 11ರ ಸ್ವಿಸ್ ನ್ಯೂಸ್- ಮ್ಯಾಗಜೀನ್ ಸ್ಕ್ವೀಜರ್ ಇಲ್ಯೂಸ್ಟ್ರೀಟ್ಟೆ ನಲ್ಲಿ ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಳನ್ನು ನೀಡಲಾಗಿದ್ದು, ಇದರಲ್ಲಿ, ಕೆಜಿಬಿ
ದಾಖಲೆಗಳನ್ನು ಉದಾಹರಿಸಿ, ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರ ಹೆಂಡತಿಯು, ತನ್ನ ಚಿಕ್ಕ ಮಗನ ಹೆಸರಿನಲ್ಲಿ ಸ್ವಿಸ್
ಖಾತೆಯಲ್ಲಿ 2.5 ಶತಕೋಟಿ ಸ್ವಿಸ್ ಫ್ರಾಂಕ್ ಗಳಷ್ಟು ಹಣವನ್ನು (ಪ್ರಸ್ತುತ ವಿನಿಮಯ ದರ ಸರಿಸುಮಾರು 2 ಬಿಲಿಯನ್ ಡಾಲರ್) ರಹಸ್ಯ ಖಾತೆಯ ಮೂಲಕ
ನಿಯಂತ್ರಿಸುತ್ತಿದ್ದಾರೆ ಎಂದು ವರದಿ ಮಾಡಿದೆ!!

ಸೋನಿಯಾ ಮತ್ತು ಇಂದಿರಾ ಗಾಂಧಿಯವರಿಗೆ ಹಣ ನೀಡುವ ಉದ್ದೇಶವಾದರೂ ಏನು??

ಸರಿ, ಪ್ರತಿಯೊಬ್ಬರಿಗೂ ತಿಳಿದಿರುವಂತೆ ಕೆಜಿಬಿ ಪ್ರತಿಫಲ ಲಾಭ ಪಡೆಯದೇ ಯಾವುದೇ ಕೆಲಸವನ್ನು ಕೈಗೊಳ್ಳುವುದಿಲ್ಲ. ಆದರೆ ಕೆಜಿಬಿ ಭಾರತೀಯ ಕುಟುಂಬದ,
ಒಂದು ಗಾಂಧಿ ಕುಟುಂಬಕ್ಕೆ ಅಗಾಧ ಪ್ರಮಾಣದ ಹಣವನ್ನೇಕೆ ನೀಡುತ್ತಿತ್ತು ಎನ್ನುವುದು ಎಲ್ಲರಲ್ಲಿರುವ ಒಂದು ಪ್ರಶ್ನೆ?!!

ವಾಸಿಲ್ ಮಿತ್ರೋಖ್ನ್ ಬರೆದ “ದಿ ಮಿಟ್ರೊಖಿನ್ ಆರ್ಕೈವ್ II” ಎನ್ನುವ ಮತ್ತೊಂದು ಪುಸ್ತಕದಲ್ಲಿ, ಕೆಜಿಬಿ ಮತ್ತು ಗಾಂಧಿ ಕುಟುಂಬದ ನಡುವಿನ ಹಲವಾರು
ವಿಚಾರಗಳನ್ನು ಬಹಿರಂಗಪಡಿಸಿದ್ದು, ಇದು ಗಾಂಧಿ ಕುಟುಂಬದ ಬಗ್ಗೆ ಇನ್ನಷ್ಟು ವಿಚಾರಗಳನ್ನು ತಿಳಿಸಿಕೊಡುವಂತೆ ಮಾಡಿದೆ. ಇದರಲ್ಲಿ ಮೂರನೇಯ ವಿಶ್ವ ಯುದ್ದದ, ಶೀತಲ ಸಮರದ ಅವಧಿಯಲ್ಲಿ ಕೆಜಿಬಿಯ ಗರಿಷ್ಠ ಕಾರ್ಯಾಚರಣೆಯ ಮೂಲ ಪ್ರಯತ್ನ ಭಾರತದಲ್ಲಿತ್ತು. ಆದರೆ 1970ರ ದಶಕದಲ್ಲಿ ಭಾರತದಲ್ಲಿರುವ ಕೆಜಿಬಿ ಏಜೆಂಟ್‍ಗಳಿಗಿಂತಲೂ ಬಹು ಸಂಖ್ಯೆ ಏಜೆಂಟ್‍ಗಳು ಸೋವಿಯತ್ ಒಕ್ಕೂಟದ ಹೊರಭಾಗದಲ್ಲಿತ್ತು ಎನ್ನುವುದರ ಬಗ್ಗೆ ಈ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ!! ಇದರ ಪ್ರಕಾರ,

* ಕೆಜಿಪಿಯಿಂದ ಇಂದಿರಾಗಾಂಧಿಯವರ ಗೌಪ್ಯ ಹೆಸರಾದ ವನೊ ಎನ್ನುವ ಹೆಸರಿಗೆ, ಕಾಂಗ್ರೆಸ್‍ನ ಬೊಕ್ಕಸಕ್ಕೆ ಮೀಸಲಾದ ಹಣವನ್ನು ಸೂಟ್ಕೇಸ್ ಗಳಲ್ಲಿ
ಕಳುಹಿಸಲಾಗಿದೆ. ಇದಷ್ಟೇ ಅಲ್ಲದೇ, ಪೊಲಿಟ್‍ಬ್ಯುರೋದಿಂದ ಕಾಂಗ್ರೆಸ್ ಗೆ 2 ಮಿಲಿಯನ್ ನಷ್ಟು ಮೊತ್ತವನ್ನು ಗೌಪ್ಯ ಉಡುಗೊರೆಯಾಗಿ ಭಾರತ ಕೆಜಿಬಿ
ಮುಖ್ಯಸ್ಥನಾಗಿದ್ದ ಲಿಯೊನಿಡ್ ಶೆಬರ್ಶಿನ್ ನಿಂದ ವಿತರಿಸಲ್ಪಟ್ಟಿತ್ತು. ಅಷ್ಟೇ ಅಲ್ಲದೇ, ಶ್ರೀಮತಿ ಇಂದಿರಾ ಗಾಂಧಿಯನ್ನು ಬೆಂಬಲಿಸುವ ವೃತ್ತಪತ್ರಿಕೆಗೆ ಇದೇ ಸಂದರ್ಭದಲ್ಲಿ ಮತ್ತೊಂದು ಬಿಲಿಯನ್ ರೂಪಾಯಿಗಳನ್ನು ನೀಡಲಾಗಿದೆ

* 1978ರಲ್ಲಿ ಭಾರತಕ್ಕೆ 30ಕ್ಕೂ ಹೆಚ್ಚು ಕೆಜಿಬಿ ಏಜೆಂಟ್‍ಗಳನ್ನು ಕಳುಹಿಸಲಾಗಿದ್ದು, ಇದರಲ್ಲಿ 10 ಮಂದಿ ಭಾರತೀಯ ಗುಪ್ತಚರ ಅಧಿಕಾರಿಗಳಾಗಿ
ಸೇರಿಕೊಂಡರು!!!

* 1975ರಲ್ಲಿ, ಶ್ರೀಮತಿ ಇಂದಿರಾಗಾಂಧಿಯವರ ಬೆಂಬಲಿಗರನ್ನು ಬಲಪಡಿಸಲು ಮತ್ತು ರಾಜಕೀಯ ವಿರೋಧಿಗಳನ್ನು ದುರ್ಬಲಗೊಳಿಸಲು ಒಟ್ಟು 10.6 ಮಿಲಿಯನ್ ಗಳಷ್ಟು ಹಣವನ್ನು ಖರ್ಚುಮಾಡಲಾಯಿತು.

* ರಕ್ಷಣಾ ಸಚಿವರಾದ ಕೃಷ್ಣ ಮೆನನ್ ಅವರು ಕೇವಲ ಸೋವಿಯತ್ ಮಿಗ್ಸ್ ಗಳನ್ನು ಪಡೆದುಕೊಳ್ಳಲು ಮುತುವರ್ಜಿವಹಿಸಿದರೇ ಹೊರತು ಬ್ರಿಟಿಷ್ ಲೈಟ್ನಿಂಗ್ಸ್ ಗಳನ್ನು ಅಲ್ಲ. ಹಾಗಾಗಿ 1962 ಮತ್ತು 1967ರಲ್ಲಿ ಚುನಾವಣಾ ಪ್ರಚಾರಕ್ಕಾಗಿ ಕೆಜಿಬಿಗಳಿಂದ ಹಣವನ್ನು ಪಡೆದುಕೊಂಡಿತು ಎಂದು ಹೇಳಲಾಗಿದೆ.

ಇನ್ನು ಈ ಬಗ್ಗೆ ಮಾಹಿತಿಯನ್ನು ನೀಡಿರುವ ಮಿಟ್ರೊಖಿನ್ ಆರ್ಕೈವ್ ಅನ್ನು 1999ರಲ್ಲಿ ಪ್ರಕಟಿಸಲಾಯಿತು. ಆದರೆ ಈ ಪುಸ್ತಕವು ಹಲವಾರು ದೇಶಗಳಲ್ಲಿ
ಅಸಮತೋಲನವನ್ನು ಸೃಷ್ಟಿ ಮಾಡಿ, ಕೆಲ ನಿಗೂಢ ವಿಚಾರಗಳನ್ನು ಹೊರಗೆಳೆದಿದೆ!! ಈ ಪುಸ್ತಕದಲ್ಲಿ ಸಂಗ್ರಹಿಸಲಾದ ಮಾಹಿತಿಯನ್ನು, ಮಾಜಿ ಕೆಜಿಬಿ ಡಿಫೆಕ್ಟರ್
ಹಾಗೂ ಅವರ ಸಹಲೇಖಕರಿಂದ ಸಂಗ್ರಹಿಸಿ ಬರೆಯಲಾಗಿದೆ!!

ಗಾಂಧಿ ಎನ್ನುವ ಉಪನಾಮವನ್ನು ಇಟ್ಟುಕೊಂಡಿರುವವರು ತನ್ನ ಬೊಕ್ಕಸವನ್ನು ತುಂಬಿಸುವಲ್ಲಿ, ತನ್ನ ಅಧಿಕಾರವನ್ನು ಭದ್ರಪಡಿಸುವಲ್ಲಿ ನಿರತರಾದರೇ ಹೊರತು
ಭಾರತ ದೇಶವನ್ನು ಶ್ರೀಮಂತ ರಾಷ್ಟ್ರವನ್ನಾಗಿ ಮಾಡುವ ಮನಸ್ಸೇ ಇವರಿಗಿರಲಿಲ್ಲ ಎಂದು ಕಾಣುತ್ತೆ!!

ಮೂಲ:http://indiatoday.intoday.in/story/mitrokhin-archive-kgb-operations-in-india–during-cold-war/1/192955.html

http://bengalunderattack.blogspot.in/2009/04/kgb-paid-money-to-sonia-rahul-rajiv.html

– ಅಲೋಖಾ

 

Tags

Related Articles

Close