ಕಾಂಗ್ರೆಸ್ ಪಕ್ಷಕ್ಕೆ ರಾಷ್ಟ್ರೀಯ ಹಿತಾಸಕ್ತಿಗಿಂತ ರಾಜಕೀಯ ಕಾರ್ಯಸೂಚಿಯೇ ಮುಖ್ಯವಾಗಿದೆ. ಒಂದುಕಡೆಯಲ್ಲಿ ನ್ಯಾಷನಲ್ ಯುನಿಟಿಯೊಂದಿಗೆ ಕಾಂಗ್ರೆಸ್ ಸರಕಾರ ರಾಜಿ ಮಾಡಲು ಸಿದ್ಧವಾಗುತ್ತಿದೆ. ಎಲ್ಲಾ ರಾಜಕೀಯ ಪಕ್ಷಗಳಿಗೂ ಸಹ ಅದರದೇ ಆದ ನಿರ್ಧಾರದ ಸ್ವಾತಂತ್ರ್ಯವಿದೆ. ಆದರೆ, ಯಾವುದೇ ಪಕ್ಷಕ್ಕೆ ರಾಷ್ಟ್ರೀಯ ಒಗ್ಗಟ್ಟಿನ್ನಾಗಲಿ, ಶಾಂತಿ ವ್ಯವಸ್ಥೆಯನ್ನಾಗಲಿ ದುರುಪಯೋಗ ಮಾಡಿಕೊಳ್ಳುವ ಯಾವ ಅಧಿಕಾರವೂ ಇಲ್ಲ. ಆದರೆ, ಕಾಂಗ್ರೆಸ್ ಮಾತ್ರ ಇವೆಲ್ಲವಕ್ಕೂ ರಾಜಿ ಮಾಡಿಕೊಂಡಿತ್ತಾದರೂ ಸಂವಿಧಾನದ ದುರ್ಬಳಕೆ ಮಾಡಿಕೊಂಡದ್ದು ಅದರ ಅಲಿಖಿತ ಸಿದ್ಧಾಂತ!
ಅಂದಹಾಗೆ ಸೋನಿಯಾ ಗಾಂಧಿ ಈ ಮನುಷ್ಯನನ್ನು ಕಾಂಗ್ರೆಸ್ ಚಿಂತಕರನ್ನಾಗಿ ನೇಮಕ ಮಾಡಿದರಲ್ಲವೇ,, ಅವರು ಯಾರೆಂಬುವುದನ್ನು ಹಾಗೂ ಅವರು ವಿವಾದಾತ್ಮಕವಾಗಿ ಹೇಗೆ ಸುದ್ಧಿಯಲ್ಲಿದ್ದಾರೆ ಎಂಬುವುದನ್ನು ನೀವು ತಿಳಿದುಕೊಂಡರೆ ಒಂದು ಸಲ ದಂಗಾಗುವುದ0ತು ಗ್ಯಾರಂಟಿ!!.
ಕಾಂಗ್ರೆಸ್ ಪಕ್ಷ ಮುಂದೆ ಯಾವ ರೀತಿ ಮುಂದುವರಿಯುತ್ತೆ ಅನ್ನುವುದನ್ನು ನಾವು ಕಾದು ನೋಡಬೇಕಾಗಿದೆ. ಇತ್ತೀಚೆಗೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಅಂಬಿಕಾ ಸೋನಿಯವರೊಂದಿಗೆ ಸೇರಿ ತಾರೀಖ್ ಹಮೀದ್ ಕಾರ್ಹಾರನ್ನು ತಮ್ಮ ಪಕ್ಷಕ್ಕೆ ಸ್ವಾಗತ ಮಾಡಿದ್ದಾರೆ. ಕೇವಲ ಪಕ್ಷಕ್ಕೆ ಸೇರ್ಪಡೆ ಮಾಡದೆ ಕಾಂಗ್ರೆಸ್ ಪಕ್ಷ ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡುವ ವದಂತಿಗಳು ಕೂಡಾ ಈಗ ಎಲ್ಲೆಡೆ ಹಬ್ಬಿದೆ.
ತಾರೀಖ್ ಹಮೀದ್ ಕಾರ್ಹಾ ಯಾರು?
ತಾರೀಖ್ ಹಮೀದ್ ಕಾರ್ಹಾ ಅವರು ಶ್ರೀ ನಗರ ಕ್ಷೇತ್ರದಿಂದ ಸಂಸತ್ತಿನ ಸದಸ್ಯರಾಗಿದ್ದರು ಮತ್ತು ಅವರು ಮೊದಲು ಪೀಪಲ್ಸ್ ಡೆಮೊಕ್ರೆಟಿಕ್ ಪಕ್ಷದ ಸದಸ್ಯರಾಗಿದ್ದರು. ತಾರೀಖ್ ಹಮೀದ್ ಕಾರ್ಹಾ ಅವರು ಮೊದಲೇ ತಮ್ಮ ಹಲವಾರು ವಿವಾದಾತ್ಮಕ ಹೇಳಿಕೆಯಿಂದ ತುಂಬಾ ಟೀಕೆಗೆ ಒಳಗಾಗಿದ್ದರು.
ತಾರೀಖ್ ಹಮೀದ್ ಕಾರ್ಹಾ ರವರು ಇಸ್ಲಾಮಿಕ್ ಕೌನ್ಸಿಲರಾಗಿ, ಇಸ್ಲಾಮಿಕ್ ಜಿಹಾದ್‍ಗೆ ಬಹಿರಂಗವಾಗಿ ಕೆಲಸ ನಿರ್ವಹಿಸುತ್ತಿದ್ದರು. ಪಿಡಿಪಿಯು ಈ ವಿಷಕಾರಿ ನಾಯಕನ್ನು ಹೊಂದಿತ್ತು ಅನ್ನೋದೇ ಆಶ್ಚರ್ಯಕರ!!.. ಇದರ ಬಗ್ಗೆ ಮಾಧ್ಯಮವು ಈಗಾಗಲೇ ಪ್ರಸಾರ ಮಾಡಿದೆ..ಆದರೆ ಈಗ ಈ ವಿಷಕಾರಿ ನಾಯಕ ಕಾಂಗ್ರೆಸ್‍ಗೆ ಹೊಸ ಪ್ರವೇಶವನ್ನು ಕೊಟ್ಟಿದ್ದಾರೆ. ಅವರ ಈ ಹೊಸ ಪ್ರವೇಶವು ಎಲ್ಲರಿಗೂ ಆಶ್ಚರ್ಯವಾಗಿದೆ.!
2014 ರಲ್ಲಿ, ಜಮ್ಮು ಕಾಶ್ಮೀರ ರಾಜ್ಯದಿಂದ 6 ಸದಸ್ಯರನ್ನು ಆಯ್ಕೆ ಮಾಡಲಾಗಿತ್ತು. ಭಾರತಿಯ ಜನತಾ ಪಾರ್ಟಿಯ ಮೂರು ಜನ ಸಂಸತ್ತು ಸದಸ್ಯರು ಮತ್ತು
ಮೂರು ಜನ ಪೀಪಲ್ಸ್ ಆಫ್ ಡೆಮೊಕ್ರೆಟಿಕ್ ಪಕ್ಷದವರಾಗಿದ್ದರು. ಪಿಡಿಪಿಯಿಂದ ಕಾಂಗ್ರೆಸ್‍ಗೆ ಪಕ್ಷಾಂತರವಾದ ಈತ ಮುಂದೆ ರಾಜಕೀಯವಾಗಿ ಹೇಗೆ
ಮುಂದುವರಿಯಬಹುದೆಂದು ನಾವು ಈಗಾಗಲೇ ಅರ್ಥೈಸಬಹುದು. ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ತನ್ನ ಬೇಳೆ ಬೇಯಿಸಿಕೊಳ್ಳುವುದಕ್ಕೆ ಆಡಳಿತದಲ್ಲಿ ಅದೆಷ್ಟು ಕೀಳು ಮಟ್ಟಕ್ಕೆ ಇಳಿದಿದೆ ಎನ್ನುವುದು ಬಹಿರಂಗ ಸತ್ಯ!. ಯಾಕೆಂದರೆ ರಾಷ್ಟ್ರೀಯ ಪಕ್ಷ ಎಂದರೆ ಎಲ್ಲರ ಅಭಿಪ್ರಾಯವನ್ನು ಕೇಳಿ ಒಂದು ಒಳ್ಳೆಯ ನಿರ್ಧಾರವನ್ನು ಪಡೆದು ಕೊಳ್ಳ ಬೇಕಾಗುತ್ತದೆ. ಆದರೆ ಕಾಂಗ್ರೆಸ್ ಮಾತ್ರ ಒಂದು “ಫ್ರಿಂಜ್ ಪಾರ್ಟಿ”(ಅತ್ಯಂತ ಕೀಳು) ಅಂತಾ ಕರೆಸಿಕೊಳ್ಳವ ಕೀಳು ಮಟ್ಟಕ್ಕೆ ಬಂದಿಳಿದಿದೆ. ತಾರೀಖ್ ಹಮೀದ್ ಕಾರ್ಹಾನಂತಹ ಪಿಡಿಪಿಯ ವಿಷಕಾರಿ ಸದಸ್ಯನ್ನು ಆಯ್ಕೆ ಮಾಡುವ ಮೊದಲು ಯೋಚನೆ ಮಾಡಿ ಆಯ್ಕೆ ಮಾಡುವಂತಹ ಸಾಮಥ್ಯ ಹೊಂದಿರಬೇಕು. ಮುಂದೆ ಹೇಗೆ ಇವರು ಆಡಳಿತವನ್ನು ಮಾಡುತ್ತಾರೆ ಅನೋದೆ ನಮಗೆಲ್ಲಾ ಆಶ್ಚರ್ಯಕರ!!. ಇವರ ಮುಂದೆ ನಮ್ಮಂಥ ಬಡಪಾಯಿಗಳ ಕಥೆ ಅಧೋಗತಿ!.
ಪಿಡಿಪಿಯನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ತಾರೀಕ್ ಹಮೀದ್ ಕಾರ್ಹಾಗೆ ಪಕ್ಷ ಆದರದ ಸ್ವಾಗತ ಕೋರಿದೆ. ತಾರೀಕ್ ಹಮೀದ್ ಕಾರ್ಹಾ
ಪಿಡಿಪಿಯನ್ನು ತೊರೆದ ಪರಿಣಾಮ ಅವರು ಯಾವ ರೀತಿ ಪಿಡಿಪಿಗೆ ಗೌರವ ಕೊಡುತ್ತಿದ್ದರು ಎಂಬುವುದು ನಮಗೆಲ್ಲಾ ಅರ್ಥವಾಗುತ್ತದೆ. ಪಿಡಿಪಿ (ಪೀಪಲ್ಸ್ ಡೆಮೊಕ್ರೆಟಿಕ್ ಪಾರ್ಟಿ)ಯು ಈಗ ಬಿಜೆಪಿಯೊಂದಿದೆ ಕೈಜೋಡಿಸಬೇಕು. ಪಿಡಿಪಿಯಿಂದ ತಾರೀಕ್ ಹಮೀದ್ ಕಾರ್ಹಾರ ಪಕ್ಷಾಂತರವನ್ನು ಪಿಡಿಪಿಯು ಸಕಾರಾತ್ಮಕವಾಗಿ ತೆಗೆದುಕೊಂಡು ಮುಂದೆ ರಾಷ್ಟ್ರೀಯ ಪಕ್ಷಕ್ಕೆ ಇದೊಂದು ಮಾದರಿಯಾಗಬೇಕು ಹಾಗೂ ಕಾಂಗ್ರೆಸ್‍ನಂತಹ ರಾಷ್ಟ್ರೀಯ ಪಕ್ಷವನ್ನು ಫ್ರಿಂಜ್ ನಿಲುವಿನಿಂದ ಹೊರಬರುವಂತೆ ಮಾದರಿಯಾಗಬೇಕು. ಸೋನಿಯಾಗೆ ಒಳ್ಳೆಯ ಬುದ್ಧಿ ಕಲಿಸಬೇಕು. ಇಂತವನ್ನೆಲ್ಲಾ ಪಕ್ಷಕ್ಕೆ ಸೇರಿಸಿಕೊಂಡರೆ ಪಕ್ಷ ಉದ್ಧಾರವಾಗುತ್ತಾ ಅಥವಾ ಕೆಳಗೆ ಬೀಳುತ್ತಾ ಅಂತಾ ನಾವು ಅವರ ತಮಾಷೆಯನ್ನು ನೋಡುತ್ತಾ ಇರಬೇಕು ಅಷ್ಟೆ!!!
-ಶೃಜನ್ಯಾ