ಪ್ರಚಲಿತ

ಸೋಷಿಯಲ್ ಮೀಡಿಯಾದಲ್ಲಿ ವಿಕಾಸ್ ದುಬೆ ಯೋಗಿಜೀಯೊಂದಿಗೆ ಎಂಬ ಶೀರ್ಷಿಕೆಯಲ್ಲಿ ಹರಿದಾಡುತ್ತಿರುವ ಭಾವಚಿತ್ರದ ಅಸಲಿಯತ್ತು.

ಉತ್ತರ ಪ್ರದೇಶದ ಕಾನ್ಪುರದಲ್ಲಿ 8 ಪೊಲೀಸರ ಹತ್ಯೆ ನಡೆದು ಉತ್ತರ ಪ್ರದೇಶದ ರೌಡಿ ಶೀಟರ್ ವಿಕಾಸ್ ದುಬೆಯನ್ನು ಬಂಧಿಸಲು ಪೊಲೀಸರು ಪ್ರಯತ್ನ ನಡೆಸಲು ಪ್ರಾರಂಭಿಸಿದ ಕೆಲವೇ ಗಂಟೆಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ “ವಿಕಾಸ್ ದುಬೆ ಯೋಗಿಜೀಯೊಂದಿಗೆ ಎಂಬ ಶೀರ್ಷಿಕೆಯೊಂದಿಗೆ ಭಾವಚಿತ್ರವೊಂದು ಹರಿದಾಡಲು ಪ್ರಾರಂಭವಾಯಿತು. ಭಾವಚಿತ್ರದಲ್ಲಿ ಯಾವುದೇ ರೀತಿಯ ಮಾರ್ಪಾಡುಗಳನ್ನು ಮಾಡಿಲ್ಲವಾದರೂ ಭಾವಚಿತ್ರದ ಶೀರ್ಷಿಕೆ ಸತ್ಯಕ್ಕೆ ದೂರವಾದದ್ದಾಗಿದೆ.. ಏಕೆಂದರೆ ಭಾವಚಿತ್ರದಲ್ಲಿರುವ ವ್ಯಕ್ತಿಯ ಹೆಸರು ವಿಕಾಸ್ ದುಬೆ ಎಂದಾದರೂ ಅವರು ಉತ್ತರ ಪ್ರದೇಶದ ಭಾರತೀಯ ಜನತಾ ಪಕ್ಷದ ಸ್ಥಳೀಯ ನಾಯಕರಾಗಿದ್ದಾರೆ.

ಇಂಟರ್ನೆಟ್ ನಲ್ಲಿ ಹರಿದಾಡುತ್ತಿರುವ ಭಾವಚಿತ್ರದೊಂದಿಗೆ ” ಕಾನ್ಪುರದ ಕೊಲೆ ಪ್ರಕರಣದ ಪ್ರಮುಖ ಆರೋಪಿ ವಿಕಾಸ್ ದುಬೆಯೊಂದಿಗೆ ಯೋಗಿಜೀ ” ಎಂಬ ಶೀರ್ಷಿಕೆ ಹರಿದಾಡುತ್ತಿದೆ. ಈ ಭಾವಚಿತ್ರವನ್ನು ಮೇಲಿನ ಶೀರ್ಷಿಕೆಯೊಂದಿಗೆ ಹಲವಾರು ಜನರು ಫೇಸ್ಬುಕ್ ಹಾಗೂ ಟ್ವಿಟ್ಟರ್ ಸೇರಿದಂತೆ ಹಲವು ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಫೋಟೋ ಮತ್ತು ಶೀರ್ಷಿಕೆಯ ಅಸಲಿಯತ್ತು

ಪತ್ರಿಕೆಯೊಂದರ ಸ್ಥಳೀಯ ವರದಿಗಾರರೊಬ್ಬರು ಈ ವಿಚಾರದ ಸತ್ಯಾಸತ್ಯತೆಯ ಪರಿಶೀಲನೆ ನಡೆಸಿದಾಗ ಫೋಟೋ ದಲ್ಲಿರುವ ವ್ಯಕ್ತಿಯು ಕೊಲೆ ಆರೋಪಿ ವಿಕಾಸ್ ದುಬೆ ಅಲ್ಲ ಬದಲಾಗಿ ಸ್ಥಳೀಯ ಬಿಜೆಪಿ ನಾಯಕ ವಿಕಾಸ್ ದುಬೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಈ ವ್ಯಕ್ತಿಯು ಕಾನ್ಪುರ್ ಮತ್ತು ಬುಂದೇಲ್ ಖಂಡದ ಬಿಜೆಪಿ ಯುವಕರು ಮೋರ್ಚಾದ ಸ್ಥಳೀಯ ಘಟಕದ ಅಧಿಕಾರಿಯಾಗಿದ್ದಾರೆ ಎಂಬುದು ವಿಚಾರದ ಅಸಲಿಯತ್ತಾಗಿದೆ, ಮಾತ್ರವಲ್ಲದೆ ಈ ವ್ಯಕ್ತಿಯು ಹರಡಲ್ಪಟ್ಟ ಭಾವಚಿತ್ರವನ್ನು ಫೇಸ್ ಬುಕ್ ನಲ್ಲಿ ವದಂತಿಗಳ ಕುರಿತಾಗಿ ಎಚ್ಚರದಿಂದಿರಿ, ಈ ಪೋಸ್ಟ್ ಅನ್ನು ಎಷ್ಟು ಸಾಧ್ಯವೋ ಅಷ್ಟು ಶೇರ್ ಮಾಡುವ ಮೂಲಕ ಜನರಿಗೆ ಸತ್ಯವನ್ನು ತಲುಪಿಸಿ ಎಂದು ಸ್ಪಷ್ಟೀಕರಣವನ್ನೂ ನೀಡಿದ್ದಾರೆ. ಮಾತ್ರವಲ್ಲದೆ ತನ್ನನ್ನು ಅಪರಾಧಿ ವಿಕಾಸ್ ದುಬೆ ಎಂದು ತಪ್ಪಾಗಿ ಗುರುತಿಸಲಾಗುತ್ತಿದ್ದು, ಇದಕ್ಕೆ ಕಾರಣಕರ್ತರಾದ ವ್ಯಕ್ತಿಗಳ ಮೇಲೆ ಕ್ರಮ ಕೈಗೊಳ್ಳುವುದಾಗಿ ಹೇಳುತ್ತಿರುವ ವಿಡಿಯೋವನ್ನು ಕೂಡಾ ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಭಾವಚಿತ್ರವನ್ನು ಬಿಜೆಪಿ ನಾಯಕ ವಿಕಾಸ್ ದುಬೆ 2019 ರ ನವೆಂಬರ್ ತಿಂಗಳಲ್ಲಿ ತಮ್ಮ ಫೇಸ್ಬುಕ್ ನಲ್ಲಿ ಹಂಚಿಕೊಂಡಿದ್ದರು.

ತಾನು ಕಳ್ಳ ಪರರ ನಂಬ ಎಂಬಂತೆ ವಿರೋಧಿಗಳು ಉತ್ತರ ಪ್ರದೇಶದಲ್ಲಿ ಯೋಗಿಜೀ ನಡೆಸುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಮತ್ತು ಹೆಚ್ಚುತ್ತಿರುವ ಯೋಗಿಜೀಯ ಜನಪ್ರಿಯತೆಯನ್ನು ಕುಂದಿಸಲು ಸತತವಾಗಿ ಪ್ರಯತ್ನಿಸುತ್ತಿದ್ದಾರೆ.. ತಮ್ಮ ಯಾವುದೇ ಕಾರ್ಯತಂತ್ರಗಳು ಫಲಿಸದ ಕಾರಣ ಹತಾಶೆಯ ಕೊನೆಯ ಹಂತವಾಗಿ ನಕಲಿ ಭಾವಚಿತ್ರಗಳು ಮತ್ತು ಸುಳ್ಳು ಸುದ್ದಿಗಳನ್ನು ಹರಡುವ ವಿಫಲ ಯತ್ನವನ್ನು ನಡೆಸುತ್ತಿದ್ದಾರೆ ಎಂಬುದು ಈ ಪ್ರಕರಣದಿಂದ ಸ್ಪಷ್ಟವಾಗುತ್ತದೆ.

Tags

Related Articles

FOR DAILY ALERTS
Close