ಪ್ರಚಲಿತ

ಸ್ಫೋಟಕ ಮಾಹಿತಿ!!! ಉಪೇಂದ್ರರ ಹೊಸ ಪಕ್ಷದ ಹಿಂದಿರುವ ಆ ಗುಪ್ತ ರಾಜಕಾರಣಿ ಯಾರೆಂದು ಗೊತ್ತಾದರೆ ಅಚ್ಚರಿ ಪಡುವಿರಿ!!

ಇತ್ತ ಉಪೇಂದ್ರ ತನ್ನ ಹೊಸ ಪಕ್ಷ ಘೋಷಿಸಿ ಎರಡು ನಿಮಿಷ ಕೂಡಾ ಆಗಿರಲಿಲ್ಲ. ಅತ್ತ ಕಾಂಗ್ರೆಸ್ ಮುಖಂಡ ಪರಮೇಶ್ವರ ಉಪೇಂದ್ರನನ್ನು ದೂರಿದ್ದೇ ದೂರಿದ್ದು.
`ಉಪೇಂದ್ರನ ಪ್ಲಾನ್ ಸಕ್ಷಸ್ ಆಗೋಲ್ಲ… ಈ ರೀತಿ ಪಕ್ಷ ಮಾಡಿರೋರು ಸಾಕಷ್ಟು ಮಂದಿ ಕೈ ಸುಟ್ಟುಕೊಂಡಿದ್ದಾರೆ. ಉದಾಹರಣೆಗೆ ಚಿರಂಜೀವಿ ಪಕ್ಷ ಮಾಡಿಕೊಂಡು ಏನಾದರು…?’ ಪರಮೇಶ್ವರರ ಈ ರೀತಿ ಹೇಳಿಕೆಯ ಹಿಂದೆ ಕಾಂಗ್ರೆಸ್‍ನ ಒಂದು ಹಿಡೆನ್ ಅಜೆಂಡಾ ಇರುವುದು ಯಾರಿಗೂ ಅರ್ಥವಾಗಿರಲೇ ಇಲ್ಲ. ಮುಖ್ಯವಾಗಿ ಉಪೇಂದ್ರನ ಹೊಸ ಪಕ್ಷ ಕಾಂಗ್ರೆಸ್‍ನ ಕೂಸಾಗಿದ್ದರೂ ಈತನ ಪಕ್ಷಕ್ಕೂ ಕಾಂಗ್ರೆಸ್‍ಗೂ ಯಾವುದೇ ಸಂಬಂಧವಿಲ್ಲ ಎನ್ನುವುದನ್ನು ರೂಪಿಸುವ ಸಲುವಾಗಿ ಪರಮೇಶ್ವರ ಅವರು ಈ ರೀತಿ ಹೇಳಿಕೆ ನೀಡಿದ್ದಾರೆ ಎನ್ನುವುದನ್ನು ಅರ್ಥಮಾಡಿಕೊಳ್ಳಬಹುದು. ಈ ರೀತಿ ಹೇಳುವುದಕ್ಕೆ ಒಂದು ಕಾರಣವೂ ಇದೆ. ಎಲ್ಲಾ ವಿಷಯಗಳನ್ನು ಬಯಲಿಗೆಳೆಯುವುದೇ ನಮ್ಮ ಕೆಲಸ….

ತನ್ನ ಚಲನಚಿತ್ರ ಮಾಡುವ ಮುಂಚೆ ಜ್ಯೋತಿಷ್ಯರ ಬಳಿ ತೆರಳಿ ಭವಿಷ್ಯ ಕೇಳುತ್ತಿದ್ದ ರಿಮೇಕ್ ಕಲಾವಿದ ಉಪೇಂದ್ರ ತನ್ನ ರೀಲು ಡೈಲಾಗ್‍ಗಳಿಂದ ಒಂದಷ್ಟು
ಜನರನ್ನು `ಪಿಡ್ಡಿ’ ಮಾಡುವುದನ್ನು ಬಿಟ್ಟರೆ ಉಪೇಂದ್ರ ಅವರು ಸಮಾಜಕ್ಕೆ ಮಾಡಿದ್ದೇನು ಎಂದು ಎಲ್ಲರಿಗೂ ಗೊತ್ತಿರುವ ಸತ್ಯ. ಈಗ ಹುಟ್ಟುಹಾಕಿರುವ ಹೊಸ ಪಕ್ಷ
ಜನರನ್ನು ಮಾಸ್‍ಗಿಮಿಕ್ ಮಾಡಿಕೊಂಡು ಜನರನ್ನು ಭ್ರಮೆಯಲ್ಲಿ ಮುಳುಗಿಸಿ ಬಿಜೆಪಿಯನ್ನು ಮುಳುಗಿಸಲು ಕಾಂಗ್ರೆಸ್ ಜೊತೆ ಮಾಡಿಕೊಂಡ ರಹಸ್ಯ ಒಪ್ಪಂದ
ಎನ್ನುವುದು ಕೊನೆಗೂ ಸಾಬೀತಾಗುವ ಲಕ್ಷಣ ಗೋಚರಿಸುತ್ತಿದೆ.

ಉಪೇಂದ್ರ ತನ್ನ ಚಲನಚಿತ್ರಕ್ಕೆ ಮುಹೂರ್ತ ಇಡುವ ಮುನ್ನ ಜ್ಯೋತಿಷಿಯ ಬಳಿಗೆ ತೆರಳಿ ಭವಿಷ್ಯ ಕೇಳುತ್ತಿದ್ದರು. ತನ್ನ ಭವಿಷ್ಯವನ್ನೇ ಇನ್ನೊಬ್ಬ ವ್ಯಕ್ತಿಯ ಬಳಿ ಕೇಳುವ ಉಪೇಂದ್ರ ಇನ್ನು ದೇಶದ ಭವಿಷ್ಯವನ್ನು ಬದಲಾಯಿಸುವುದು ಅಷ್ಟರಲ್ಲೇ ಇದೆ. ಇವರು ಭವಿಷ್ಯ ಕೇಳುತ್ತಿರುವ ಬಗ್ಗೆ ನಮ್ಮಲ್ಲಿ ಸಾಕ್ಷಿಯೂ ಇದ್ದು, ಅದನ್ನು ಇನ್ನೊಮ್ಮೆ ಬಹಿರಂಗಪಡಿಸಲೂ ನಾವು ಸಿದ್ದರಿದ್ದೇವೆ.

ಇನ್ನು ಉಪೇಂದ್ರ ಹೊಸಪಕ್ಷ ಆರಂಭಿಸಲಿ ಬಿಡಲಿ. ಇದವರ ವೈಯಕ್ತಿಕ ವಿಚಾರ. ಆದರೆ ರಾಷ್ಟ್ರಸೇವೆಯಲ್ಲಿ ತೊಡಗಿರುವ ನರೇಂದ್ರ ಮೋದಿಯವರನ್ನು ಅವಹೇಳನ ಮಾಡುವ ಅಗತ್ಯವೇನಿತ್ತು? ಈ ಬಗ್ಗೆ ಶೋಭಾ ಕರಂದ್ಲಾಜೆ ಉಪ್ಪಿ ವಿರುದ್ಧ ಕಾನೂನು ಹೋರಾಟ ಮಾಡುವ ಎಚ್ಚರಿಕೆಯನ್ನೂ ನೀಡಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದ ಶೋಭಾ ಕರಂದ್ಲಾಜೆ ಅವರು, ಚಿತ್ರರಂಗದಲ್ಲಿ ಉಪೇಂದ್ರ ಅವರು ನಟರಾಗಿ ಯಶಸ್ವಿಯಾಗಿದ್ದಾರೆ. ಆದರೆ ರಾಜಕೀಯವಾಗಿ ಮೊದಲ ದಿನವೇ ಎಡವಿದ್ದಾರೆ. ಉಪೇಂದ್ರ ಅವರ `ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ’ ಉದಯದ ಬೆನ್ನಲ್ಲೇ ಉಪೇಂದ್ರ ಚಿತ್ರದ ಹಾಡು ಬಳಸಿ ಮೋದಿ ಬಗ್ಗೆ ಸಿದ್ದಪಡಿಸಿದ ವಿಡಿಯೋ ವೈರಲ್ ಆಗಿದ್ದು, ಇದನ್ನು ಬಿಜೆಪಿ ಒಪ್ಪಲ್ಲ, ಇದು ಸರಿಯಲ್ಲ. ಇದರ ಬಗ್ಗೆ ಕಾನೂನಾತ್ಮಕ ಹೋರಾಟ ಮಾಡುವುದಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ. ಒಟ್ಟಾರೆ ಪಕ್ಷ ಆರಂಭಿಸಿ ಒಂದೇ ದಿನದಲ್ಲಿ ತನ್ನ ನಿಲುವು ಏನೆಂಬುವುದನ್ನು ಸ್ಪಷ್ಟಪಡಿಸಿದ್ದಾರೆ.

ಉಪೇಂದ್ರ ಅವರ ಹೊಸ ಪಕ್ಷ `ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷ’ದ ಅಸಲಿ ಬಂಡವಾಳವನ್ನು ಶಿವಪ್ರಸಾದ್ ಕುದ್ರಿಮಠ್ ಎನ್ನುವವರು ತನ್ನ `ಶಿವಗಮ್ಯ’ ಎಂಬ ಬ್ಲಾಗ್‍ನಲ್ಲಿ ಬಯಲಿಗೆಳೆದಿದ್ದಾರೆ. ಪಕ್ಷ ಕಾಂಗ್ರೆಸ್‍ನ ಕೂಸು ಎನ್ನುವುದಕ್ಕೆ ಅವರು ಕೊಡುವ ಕಾರಣಗಳನ್ನು ಖಂಡಿತಾ ಅಚ್ಚರಿಯಾಗುವುದು ಖಂಡಿತ. ಅವರ ಬರಹವನ್ನು ಇಲ್ಲಿ ಯಥಾವತ್ ಆಗಿ ಪ್ರಕಟಿಸಲಾಗಿದೆ.ಉಪೇಂದ್ರ ಅವರ ರಾಜಕೀಯ ನಡೆ ಹಿಂದಿರುವ ಕಾಣದ ‘ಕೈ’!!

ಸಿನೆಮಾಗಳಲ್ಲಿ ದೇಶದಲ್ಲಿರುವ ಭ್ರಷ್ಟಾಚಾರವನ್ನು ವಿರೋಧಿಸಿ ನಾಲ್ಕು ಡೈಲಾಗ್ ಹೊಡೆದು ಅಭಿಮಾನಿಗಳಿಂದ ಶಿಳ್ಳೆ ಹೊಡೆಸಿಕೊಳ್ಳುವ ನೂರಾರು ನಟರಿದ್ದಾರೆ. ಆದರೆ ಉಪೇಂದ್ರ ಅವರು ಎಲ್ಲರಂತಲ್ಲ. ಅವರಿಗೆ ಭಾರತದ ಮೇಲೆ, ಹಿಂದೂ ಧರ್ಮದ ಮೇಲೆ , ಗೋವಿನ ಮೇಲೆ ಅಪಾರ ಗೌರವ ಇರುವುದು ತಮ್ಮ ಸಿನಿಮಾಗಳಲ್ಲಿ ತೋರಿಸಿಕೊಂಡಿದ್ದಾರೆ. ದೇಶದ ಅಭಿವೃದ್ಧಿಗೆ, ಭ್ರಷ್ಟಾಚಾರ ನಿರ್ಮೂಲನೆಗೆ ಅವರ ಎಷ್ಟೋ ಯೋಚನೆಗಳನ್ನು ಕೊಡ ಸಿನಿಮಾದಲ್ಲಿ ತೋರಿಸಿದ್ದಾರೆ.

ಒಳ್ಳೆಯದೆ ಅಲ್ಲವೇ?

ಆದರೆ ವಿಷಯ ಬೇರೆಯೇ ಇದೆ!!

ಉಪೇಂದ್ರ ಅವರು ಹೊಸ ಪಕ್ಷ ಸ್ಥಾಪನೆ ಮಾಡಿ ಚುನಾವಣೆಗೆ ಧುಮುಕಿದರೆ ನಡೆಯುವ ಸಾಧ್ಯತೆಗಳೆನೆಂದರೆ ರಾಜಕೀಯದ ಆಳ ಅರಿಯದ ಲಕ್ಷಾಂತರ ಯುವ
ಮತದಾರರನ್ನು ಸೆಳೆಯುವುದು. ಈ ಯುವ ಮತದಾರರು ಆತುರದಲ್ಲಿ ತಪ್ಪು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಜಾಸ್ತಿ ಇದೆ, ಕಾರಣ ಉಪೇಂದ್ರ ಅವರ ದೇಶಾಭಿಮಾನ, ಹಿಂದೂ ಧರ್ಮದ ಮೇಲಿನ ಅಭಿಮಾನ.

ಒಟ್ಟಿನಲ್ಲಿ ಉಪೇಂದ್ರ ರಾಜಕೀಯಕ್ಕೆ ಧುಮುಕಿದರೆ ನಷ್ಟ ಬಿಜೆಪಿಗೆ ಎಂಬುದು ಸ್ಪಷ್ಟ. ಇದಕ್ಕೆ ಕಾರಣವು ಇದೆ, ಉಪೇಂದ್ರ ವರ್ಷಗಳ ಹಿಂದೆಯೇ ತಮಗೆ ರಾಜಕೀಯಕ್ಕೆ ಬರಬೇಕು ಎಂಬ ಕನಸಿನ ಬಗ್ಗೆ ಹೇಳಿದ್ದರು, ಮೋದಿಯನ್ನು ಪ್ರತಿಬಾರಿಯೂ ಹೊಗಳಿದ್ದರು, ಬಿಜೆಪಿಯ ಕೆಲವರು ಪರ ಚುನಾವಣಾ ಪ್ರಚಾರ ಕೂಡ ಮಾಡಿದ್ದರು, ಯೋಗ ಗುರು ಬಾಬಾ ರಾಮದೇವ್ ಅವರ ಜೊತೆ ಮತ್ತು ಬಿಜೆಪಿಯ ದೊಡ್ಡ ದೊಡ್ಡ ನಾಯಕರಗಳ ಜೊತೆಯು ಕಾಣಿಸಿಕೊಂಡಿದ್ದರು.

ಇವೆಲ್ಲವನ್ನೂ ಗಮನಿಸುತ್ತಾ ಬಂದಿದ್ದ ಸಾವಿರಾರು ಯುವ ಮತದಾರರು ಉಪೇಂದ್ರ ಬಿಜೆಪಿ ಸೇರುವುದು ಖಚಿತ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ
ನಡೆಸುತ್ತಲೆ ಇದ್ದರು. ಸಾಮಾಜಿಕ ಜಾಲತಾಣದಲ್ಲಿ ಉಪೇಂದ್ರ ಅವರಿಗೆ ಸಿಗುತ್ತಿರುವ ಬಾರಿ ಬೆಂಬಲವನ್ನು ಕಾಂಗ್ರೆಸ್ಸಿನ ಚತುರ ನಾಯಕರು ಗಮನಿಸುತ್ತಾ ಬಂದಿದ್ದಾರೆ. ಹಿಂದಿನಿಂದಲೂ ಕಾಂಗ್ರೆಸ್ ಪಕ್ಷ ಡಿವೈಡ್ ಆಂಡ್ ರೂಲ್ ಮಾಡುವುದರಲ್ಲಿ ಚತುರರು.

ಇರಲಿ, ಉಪೇಂದ್ರ ಅವರಿಗೆ ಸಿನಿಮಾ ರಂಗದಲ್ಲಿ ‘ಮುನಿರತ್ನ ನಾಯ್ಡು’ ಸುಮಾರು 2 ದಶಕಗಳಿಂದ ಆತ್ಮೀಯ ಸ್ನೇಹಿತರು. ಈ ಮುನಿರತ್ನ ಬೆಂಗಳೂರಿನ
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರು.

ರಿಯಲ್ ಎಸ್ಟೇಟ್ ಉದ್ಯಮಿ, ಎ1 ಕಾಂಟಾಕ್ಟರ್ ಆಗಿದ್ದ ವ್ಯಕ್ತಿ ನೋಡ ನೋಡುತ್ತಿದ್ದಂತೆ ಬಿಬಿಎಂಪಿಯ ಕಾರ್ಪೊರೇಟರ್ ಆದರು, ಅನ್ಯ ಭಾಷೆಯ ಚಲನಚಿತ್ರ ನಿರ್ಮಾಣ ಕಾರ್ಯಕ್ಕೆ ಕಾಲಿಟ್ಟರು, ಚುನಾವಣೆಯಲ್ಲಿ ಗೆದ್ದು ಕನ್ನಡ ಸಿನೆಮಾ ನಿರ್ಮಾಪಕರ ಸಂಘದ ಅಧ್ಯಕ್ಷರು ಆದರೂ. ಸಂಪಾದನೆ ಹೆಚ್ಚಾದಂತೆ ಕಾಂಗ್ರೆಸ್ಸಿನ ದೊಡ್ಡ ದೊಡ್ಡ ನಾಯಕರುಗಳಿಗೆ ಹಾರ, ತುರಾಯಿ, ಕಪ್ಪ ಕಾಣಿಕೆ ನೀಡುತ್ತಲೆ ಹೆಮ್ಮರವಾಗಿ ಬೆಳೆದು ನಿಂತಿದ್ದಾರೆ.

ಇತ್ತ ಕೆಲವು ಉತ್ಸಾಹಿ ರಾಷ್ಟ್ರವಾದಿ, ಹಿಂದೂ ಧರ್ಮಾಭಿಮಾನಿ ಯುವಕರು ಉಪೇಂದ್ರ ಅವರ ಅಂದಾಭಿಮಾನಿಗಳಾಗಿದ್ದಾರೆ ಎಂದು ತಿಳಿದಿರುವ ಕಾಂಗ್ರೆಸ್ಸಿನ
ಕುತಂತ್ರಿ, ಸಮಯ ಸಾಧಕ ನಾಯಕರು ಮುನಿರತ್ನ ಅವರ ಮೂಲಕ ಉಪೇಂದ್ರ ಅವರ ಖ್ಯಾತಿ ಬಳಸಿಕೊಂಡು ಉತ್ಸಾಹಿ ಯುವಕರು ಮತ ವಿಭಜನೆ ಮಾಡಲು
ನಡೆಸಿರುವ ಕುತಂತ್ರವಿದು.

ಹಿಂದೂ ರಾಷ್ಟ್ರವಾದಿ ಯುವಕರು ಬಿಜೆಪಿಗೆ ದೊಡ್ಡ ಮತ ಬ್ಯಾಂಕ್, ಹಿಂದೆ ಇದೇ ರೀತಿಯಲ್ಲಿ ಬಿಜೆಪಿಯನ್ನು ಸೋಲಿಸಲೇಬೇಕೆಂದು ಕುತಂತ್ರದಿಂದ ಕೆಜೆಪಿ ಹೆಸರಿನಲ್ಲಿ ಹಲವು ಕಡೆ ಉತ್ಸಾಹಿ ಹಿಂದೂ ರಾಷ್ಟ್ರವಾದಿ ಯುವಕರ ಪರ ವಹಿಸಿ ಕೆಜೆಪಿಯಿಂದ ಟಿಕೆಟ್ ನೀಡುವಂತೆ ಕಾಂಗ್ರೆಸ್ಸಿನವರು ಒಳ ಒಪ್ಪಂದ ಮಾಡಿಕೊಂಡು ಹಿಂದೂಗಳ ಮತ ವಿಭಜನೆ ಮಾಡಿ ದೊಡ್ಡ ಸಾಧನೆ ಮಾಡಿ ಅಧಿಕಾರಕ್ಕೆ ಬಂದಿದ್ದು. ಅಷ್ಟೇ ಅಲ್ಲದೇ ಉಪೇಂದ್ರ ಅವರ ಪಕ್ಷದ ಹೆಸರು ‘ಕೆಪಿಜೆಪಿ’.

ನೋಡಿ ಹೆಸರು ಕೂಡ ಬಿಜೆಪಿಗೆ ಸಾಮ್ಯತೆ ಇದೆ, ಎಂಥಾ ಕುತಂತ್ರವಿದು ಎಂದು. ಹಲವು ವರ್ಷಗಳಿಂದ ಮೋದಿಯವರ ಆಡಳಿತ ವೈಖರಿಯನ್ನು ಹೊಗಳುತ್ತಾ ಬಂದಿದ್ದ ಉಪೇಂದ್ರ ಪಕ್ಷ ಸ್ಥಾಪನೆಯ ದಿನವೇ ಮೋದಿಯನ್ನು ಅವಹೇಳನ ಮಾಡಿದ್ದಾರೆ.

ಎಂತಹ ಢೋ0ಗಿತನ ಅಲ್ಲವೇ?

ಉಪೇಂದ್ರ ಅವರು ಚುನಾವಣೆಯಲ್ಲಿ ಸ್ಪರ್ಧಿಸಿದರೆ ತಾವು ನಿಲ್ಲುವ ಕ್ಷೇತ್ರದಲ್ಲಿ ಗೆಲ್ಲುವ ಸಾಧ್ಯತೆ ಇದೆ ಆದರೆ ಇನ್ನೂ 224 ಕ್ಷೇತ್ರದಲ್ಲಿ ಯುವ ಹಿಂದೂಗಳ ಮತ ವಿಭಜನೆ ಆಗುತ್ತದೆ ಅಷ್ಟೇ, ಯುವ ಮತದಾರರ ಮತ ವಿಭಜನೆ ಆದರೆ ಲಾಭ ಅಗುವುದು ಹಿಂದೂ ವಿರೋಧಿ ಕಾಂಗ್ರೆಸ್ ಪಕ್ಷಕ್ಕೆ.

ಇನ್ನಾದರೂ ಎಚ್ಚೆತ್ತುಕೊಂಡು ಯುವಕರು ಆತುರದಲ್ಲಿ ಕಾಣದ ಕೈಗಳು ಕುತಂತ್ರದಿಂದ ತೋಡಿರುವ ಗುಂಡಿಯಲ್ಲಿ ಬಿದ್ದು ಹೋಗ್ಬೇಡಿ.

ಈ ರೀತಿ ಶಿವಪ್ರಸಾದ್ ಕುದ್ರಿಮಠ್ ಅವರು ತನ್ನ ಬ್ಲಾಗ್‍ನಲ್ಲಿ ಉಪೇಂದ್ರ ಅವರ ಬಂಡವಾಳವನ್ನು ಬಯಲಿಗೆಳೆದಿದ್ದಾರೆ. ಪ್ರಜಾಕೀಯದ ಹೆಸರಲ್ಲಿ ರಾಜಕೀಯ
ಮಾಡುವುದು ಹೇಗೆ ಎಂದು ಚೆನ್ನಾಗಿ ಅರ್ಥೈಸಿಕೊಂಡಿರುವ ಉಪೇಂದ್ರ ಅವರು ಜನರ ಕಿವಿಗೆ ಹೂ ಇಡುವ ಕೆಲಸವನ್ನು ಮಾಡುತ್ತಿದ್ದಾರೆ.

-ಶಿವಪ್ರಸಾದ್ ಕುದ್ರಿಮಠ್

Tags

Related Articles

Close