ಅಂಕಣ

ಸ್ಫೋಟಕ ಮಾಹಿತಿ ಬಹಿರಂಗ! ಇಸ್ರೋದ ವಿಜ್ಞಾನಿಗಳನ್ನು ನಾಶಪಡಿಸಲು ಕೇಂದ್ರೀಯ ಗೂಢಾಚಾರ ಆಯೋಗ ಪ್ರಯತ್ನಿಸಿದ್ದು ಹೇಗೆ ಗೊತ್ತೇ?!

ಸಿಐಎ ವಿಶ್ವದ ಅತಿ ದೊಡ್ಡ ಪತ್ತೆದಾರಿ ಸಂಸ್ಥೆಯಾಗಿದ್ದು ಇದು ಅತ್ಯಂತ ಪರಿಣಾಮಕಾರಿಯಾಗಿದೆ.!! ಯುಎಸ್‍ಎಯಲ್ಲಿ ಸಿಐಎ ಒಂದು ಸಮಾನಾಂತರ ಸರಕಾರವಾಗಿದ್ದು ವಿಭಿನ್ನ ರಾಷ್ಟ್ರಗಳು ಮತ್ತು ಅವರ ಪ್ರಭುತ್ವಗಳನ್ನು ನಿಯಂತ್ರಿಸಲು ಕೆಲವು ವಿಶೇಷ ಕಾರ್ಯಗಳನ್ನು ನಿಯೋಜಿಸಲಾಗಿದೆ. ಭಾರತದಲ್ಲಿ ಇಂತಹ ಅನೇಕ ಘಟನೆಗಳಲ್ಲಿ ಸಿಐಎ ಕೈವಾಡವಿದೆ ಎಂಬುವುದನ್ನು ಅನುಮಾನಿಸುವಂತೆ ಮಾಡಿದೆ. ಇಸ್ರೋ ಮತ್ತು ನಮ್ಮ ವಿಜ್ಞಾನಿಗಳನ್ನು ರಚನಾತ್ಮಕ ಶೈಲಿಯಲ್ಲಿ ನಾಶಮಾಡುವ ಸಿಐಎದ ಸಂಶಯಾಸ್ಪದ ಪ್ರಯತ್ನಗಳ ಬಗ್ಗೆ ಆಘಾತಕಾರಿ ಕಥೆಯನ್ನು ನಾವು ಇಂದು ಹೇಳುತ್ತೇವೆ.

ಇಸ್ರೋದ ಮಾಜಿ ವಿಜ್ಞಾನಿ ನಂಬಿ ನಾರಾಯಣ್ ತಮ್ಮ ಆತ್ಮ ಚರಿತ್ರೆಯಲ್ಲಿ 1994 ರಲ್ಲಾದ ಒಂದು ಪ್ರಕರಣದಲ್ಲಿ ಹೇಗೆ ತನ್ನನ್ನು ತಪ್ಪಾಗಿ ಸಿಲುಕಿಸಿ ಹಿಂಸೆ ನೀಡಿದ್ದರು ಎಂಬುದನ್ನು ಹೇಳಿದ್ದಾರೆ.! ಸ್ವದೇಶಿ ನಿರ್ಮಿತ ಕ್ರಯೋಜೆನಿಕ್ ಎಂಜಿನ್ ಸಿದ್ದವಾಗಬೇಕೆನ್ನುವಷ್ಟರಲ್ಲಿ 1994 ರಲ್ಲಿ ದೊಡ್ಡದೊಂದು ಆಘಾತವೇ ನಡೆದು ಹೋಯಿತು.!! ಕ್ರಯೋಜನಿಕ್ ತಂತ್ರಜ್ಞಾನ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದ ಹಿರಿಯ ವಿಜ್ಞಾನಿ ನಂಬಿ ನಾರಾಯಣನ್ ಆ ತಂತ್ರಜ್ಞಾನವನ್ನು ಶತ್ರು ದೇಶಗಳಿಗೆ ಮಾರಾಟ ಮಾಡಲು ಷಡ್ಯಂತ್ರ ರೂಪಿಸಿದ್ದಾರೆ ಎಂಬ ಬಲವಾದ ಆರೋಪ ಕೇಳಿ ಬಂದಿತ್ತು!

ಕೇರಳದ ಪೊಲೀಸರು, ಇಸ್ರೋದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಿರಿಯ ವಿಜ್ಞಾನಿ ನಂಬಿ ನಾರಾಯಣನ್ ಇನ್ನೊಬ್ಬ ವಿಜ್ಞಾನಿ ಶಶಿ ಕುಮಾರ್ ಮತ್ತೆ ಇಬ್ಬರು ಸಿಬ್ಬಂದಿಗಳನ್ನು ಬಂಧಿಸಿದರು. 50 ದಿವಸಗಳ ಕಾಲ ನಂಬಿನಾರಾಯಣನ್‍ರವರನ್ನು ಜೈಲು ಶಿಕ್ಷೆಯನ್ನು ನೀಡಲಾಗಿದ್ದು, ವಿಪರೀತ ಹಿಂಸೆ ಕೂಡಾ ನೀಡಲಾಯಿತು. ಕ್ರಯೋಜನಿಕ್ ಯೋಜನೆ ಜಿಎಸ್‍ಎಲ್‍ವಿ, ಪಿಎಸ್‍ಎಲ್‍ವಿ ರಾಕೆಟ್ ಅಭಿವೃದ್ದಿ ಸೇರಿದಂತೆ ಇಸ್ರೋದ (ಭಾರತೀಯ ಬಾಹ್ಯಾಕಾಶ ಸಂಸ್ಥೆ) ಹತ್ತಾರು ಯೋಜನೆಗಳಿಗೆ ನೆನೆಗುದಿಗೆ ಬಿದ್ದವು. ಇಸ್ರೋ ವಿಜ್ಞಾನಿಗಳ ನೈತಿಕ ಸ್ಥೈರ್ಯವೇ ಉದುಗಿ ಹೋಯಿತು. ಬಂಧನಲ್ಲಿದ್ದ ನಂಬಿಯವರನ್ನು ಬಾಯಿ ಬಿಡಿಸಲು ಅವರಿಗೆ ಮಾನಸಿಕ ಹಾಗೂ ಶಾರೀರಿಕ ಹಿಂಸೆ ನೀಡಲಾಗಿತ್ತು.

“ಓರ್ಮಾಕಲುಡೆ ಭ್ರಾಮಾನಪಥಮ್” ಎಂಬ ಪುಸ್ತಕದಲ್ಲಿ ನಾರಾಯಣನ್ ಅವರ ವಿರುದ್ದದ ಪಿತೂರಿ, ಐಎಸ್‍ಆರ್‍ಎ ಭಾರತೀಯ ಏಜೆನ್ಸಿಗಳು ಮತ್ತು ಗುಪ್ತಚರ ಅಧಿಕಾರಿಗಳೊಂದಿಗೆ ಸಿಐಎ ಏಜೆಂಟ್‍ಗಳ ಸಾಮೂಹಿಕ ಪ್ರಯತ್ನಗಳನ್ನು ವರ್ಣಿಸಿದ್ದಾರೆ. ಸ್ಥಳೀಯ ಕ್ರಯೋಜೆನಿಕ್ ರಾಕೆಟ್ ಎಂಜಿನ್ ಅಭಿವೃದ್ದಿಯಲ್ಲಿ ಭಾರತದ ಶೀಘ್ರ ಸುಧಾರಣೆಗಳನ್ನು ಸ್ಥಗಿತಗೊಳಿಸಲು  ತಯಾರಿಸಲಾಗಿತ್ತು. ಅದರಂತೆ ಈ ಪತ್ತೆದಾರಿ ಪ್ರಕರಣವು ಯುಎಸ್-ಫ್ರೆಂಚ್ ಏಜೆನ್ಸಿಗಳ ನ್ಯಾಯಸಮ್ಮತವಾಗಿದ್ದ ಇಸ್ರೋವನ್ನು ಮತ್ತು ನನ್ನನ್ನು ಸ್ಮಶಾನದಲ್ಲಿ ಸಮಾಧಿ ಮಾಡುವ ಉದ್ದೇಶವಾಗಿತ್ತು ಎಂದು ಅವರು ಬಹಿರಂಗ ಪಡಿಸಿದ್ದರು. ಗೂಢಾಚಾರ ಪ್ರಕರಣವು ಸಿಐಎಯ ಕಥಾವಸ್ತುವಿಗೆ ಉದ್ದೇಶಪೂರ್ವಕವಾಗಿ ಅಥವಾ ತಿಳಿಯದೆ ರಾಜಕಾರಣಿಗಳು ಮತ್ತು ಪತ್ರಕರ್ತರು ಇವರ ತಾಳಕ್ಕೆ ಕುಣಿಯ ಬೇಕಾಯಿತು.

ಇಸ್ರೋ ವಿಜ್ಞಾನಿಗಳ ಸಂಬಂಧ ಬೆಳೆಸಿ ಕ್ರಯೋಜೆನಿಕ್ ರಾಕೆಟ್ ಮಾಹಿತಿ ಪಡೆಯುತ್ತಿದ್ದಾರೆ ಎಂದು ಮರಿಯಂ ರಷಿದಾ ಮತ್ತು ಫೌಜಿಯಾ ಹಸನ್ ಎಂಬ ಮಾಲ್ಡೀವ್ಸ್‍ನ ಇಬ್ಬರು ಮಹಿಳೆಯರನ್ನು ಸಹ ಬಂಧಿಸಲಾಯಿತು. ಬೇಹುಗಾರಿಕಾ ದಳದ ತನಿಖೆಯಲ್ಲಿ ಲೋಪಗಳಿವೆ ಎಂದು ಸಿಬಿಐ ಹೇಳಿತ್ತು. 1998ರಲ್ಲಿ ಸುಪ್ರಿಂಕೋಟ್ ಪ್ರಕರಣವನ್ನೇ ವಜಾ ಗೊಳಿಸಿತ್ತು. ನಾರಾಯಣನ್ ಅವರ ವೃತ್ತಿ ಜೀವನಕ್ಕೆ ಕಲ್ಲು ಹಾಕಿದ್ದಕ್ಕಾಗಿ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಕೇರಳ ಸರಕಾರಕ್ಕೆ ಛೀಮಾರಿ ಹಾಕಿ ಪರಿಹಾರ ನೀಡುವಂತೆ ಆದೇಶಿಸಿತ್ತು. ಕೇರಳ ಹೈಕೋರ್ಟ್ ಅವರಿಗೆ ರೂ 10 ಲಕ್ಷ ಪರಿಹಾರ ನೀಡುವಂತೆ ಸರಕಾರಕ್ಕೆ ಸೂಚಿಸಿತ್ತು. ಐಬಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆಯೂ ಹೇಳಿತ್ತು.

ಈ ವರ್ಷದ ಜೂನ್‍ನಲ್ಲಿ ಮಾಜಿ ಮುಖ್ಯಮಂತ್ರಿ ಮತ್ತು ಸಿಪಿಎಂ ಹಿರಿಯ ವಿ.ಎಸ್ ಅಚ್ಯುತಾನಂದನ್ ಅವರು ಸಿಬಿ ಮ್ಯಾಥ್ಯೂಸ್ ಬರೆದ ಪುಸ್ತಕವನ್ನು ಬಿಡುಗಡೆ
ಮಾಡಿದ್ದಾರೆ. ಇವರು ಇಸ್ರೋದ ಗೂಢಾಚಾರ ಪ್ರಕರಣದ ತನಿಖೆಯ ನೇತೃತ್ವ ವಹಿಸಿದ್ದರು. ನಾರಾಯಣ್ ಅವರ ಭಾಗದಲ್ಲಿ ಮ್ಯಾಥ್ಯೂಸ್ ಅವರೊಂದಿಗಿನ ಸಭೆಯ ಕುರಿತು ಅವರು ಮಾತನಾಡುತ್ತಾರೆ. ಮ್ಯಾಥ್ಯೂಸ್ ನನಗೆ ಹೇಳಿದ ಪ್ರಕಾರ ಡಿಜಿಪಿ ಮುಧುಸೂದನನ್ ಅವರು ಈ ಪ್ರಕರಣವನ್ನು ತಿಳಿಯದೆ ತಳ್ಳಿಹಾಕಿದ್ದಾರೆಂದು ಹೇಳಿದ್ದಾರೆ. ಅವರು ಉದ್ದೇಶಪೂರ್ವಕವಾಗಿ ನನಗೆ ತೊಂದರೆ ಮಾಡಲು ಪ್ರಯತ್ನಿಸಿಲ್ಲ. ಇದರ ಹಿಂದೆ ಬೇರೆ ಯಾರದ್ದೋ ಕೈವಾಡವಿದೆ ಎನ್ನುವ ಸಂಶಯವಿದ್ದು ಈ ಹಗರಣದ ಮರು ತನಿಖೆ ಮಾಡಬೇಕು ಎಂದು ನಂಬಿ ನಾರಾಯಣನ್ ಹೇಳಿದ್ದರು.

ನಂಬಿನಾರಾಯಣನ್ ಹಾಗು ಇತರ ವಿಜ್ಞಾನಿಗಳನ್ನು 1998ರಲ್ಲಿ ಸಿಬಿಐ ದುರ್ಬಳಕೆ ಮಾಡಿಕೊಂಡಿದ್ದು ಈ ಹಗರಣದಲ್ಲಿ ಇವರನ್ನು ಸುಖಾ ಸುಮ್ಮನೆ
ಸಿಲುಕಿಹಾಕಲಾಗುತ್ತದೆ.!! ಬೆಂಗಳೂರಿನ ಉದ್ಯಮಿ ಎಸ್.ಕೆ ಶರ್ಮಾ ಮತ್ತು ಚಂದ್ರಶೇಖರ್ ಅವರು ಒಪ್ಪಂದದ ಅಂಶಗಳನ್ನು ನೋಡಿಕೊಳ್ಳುತ್ತಿದ್ದರು. ಮತ್ತು
ಮಾಡ್ಡೀವ್ಸ್‍ನ ಇಬ್ಬರು ಮಹಿಳೆಯರನ್ನು ಕೂಡಾ ಇದರಿಂದ ಖುಲಾಸೆಗೊಳಿಸಲಾಯಿತು. ಮೂರು ತಿಂಗಳಿಗೊಮ್ಮೆ ವಿಜ್ಞಾನಿಗೆ 10 ಲಕ್ಷ ರೂಪಾಯಿ ಮಧ್ಯಂತರ
ಪರಿಹಾರವಾಗಿ ಪಾವತಿಸಲು ನಂಬಿ ನಾರಾಯಣನ್ ರಾಜ್ಯಸರಕಾರಕ್ಕೆ ನಿರ್ದೇಶನ ಕೂಡಾ ನೀಡಿದ್ದರು. ಎನ್‍ಎಚ್‍ಆರ್‍ಸಿ 2001ರಲ್ಲಿ ಆದೇಶ ಕೂಡಾ ನೀಡಿತ್ತು.
1999ರಲ್ಲಿ ರಾಜ್ಯ ಸರಕಾರಕ್ಕೆ 1 ಕೋಟಿ ಪರಿಹಾರಕ್ಕೆ ಒತ್ತಾಯಿಸಿದ್ದರು. ಇನ್ನೂ ತಿರುವನಂತಪುರದ ಉಪವಿಭಾಗೀಯ ನ್ಯಾಯಾಲಯದಲ್ಲಿ ಈ ವಿಷಯ ಬಾಕಿ ಇದೆ. ಆದಾಗ್ಯೂ ವಿಚಾರಣಾ ನ್ಯಾಯಾಲವು ಎನ್‍ಎಚ್‍ಆರ್‍ಸಿ ನಿರ್ದೇಶನವನ್ನು ವಿಜ್ಞಾನಿಗಳ ಮಾನವ ಹಕ್ಕುಗಳನ್ನು ಉಲ್ಲಂಘಿಸಿದ ಪೊಲೀಸ್ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಮಾಡಿದೆ.

ಈ ಪ್ರಕರಣದಲ್ಲಿ ನಮ್ಮ ವಿಜ್ಞಾನಿಗಳನ್ನು ಸುಖಾ ಸುಮ್ಮನೆ ಸಿಲುಕಿಸಿರುವುದಕ್ಕಾಗಿ ರಾಜ್ಯ ಸರಕಾರ 1 ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ಸಿಚ್‍ಆರ್‍ಸಿಗೆ ಆದೇಶವನ್ನು ನೀಡಿತ್ತು. ಈ ಕೇಸು ತಿರುವನಂತಪುರ ಉಪ ವಿಭಾಗೀಯ ನ್ಯಾಯಾಲಯದಲ್ಲಿ ಇನ್ನೂ ಬಾಕಿ ಉಳಿದಿದೆ.!! ವಿಜ್ಞಾನಿಗಳ ಮಾನವಹಕ್ಕುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರ್ಟ್ ಹೇಳಿದೆ. ಇಸ್ರೋದ ಹೆಗ್ಗುರುತು ಬಿಡುಗಡೆ ರಾಷ್ಟ್ರೀಯವಾಗಿ ಪ್ರಸಾರವಾಗುತ್ತಿದ್ದಂತೆ ತಿರುವನಂತಪುರದಲ್ಲಿನ ನಂಬಿನಾರಾಯಣನ್ ಮನೆಯಲ್ಲಿಯೇ ಕುಳಿತು ತಮ್ಮ ಸಾಧನೆಯ ಬಗ್ಗೆ ಹೆಮ್ಮೆಪಡುತ್ತೇನೆ ಎಂದು ಹೇಳಿದ್ದಾರೆ. ಆದರೆ ನಾನು 18 ವರ್ಷಗಳಿಂದ ಅನುಭವಿಸಿದ ಸಂಕಟ ಮತ್ತು ಅವಮಾನಕ್ಕೆ ನನ್ನ ರಕ್ತ ಈಗಲೂ ಕುದಿಯುತ್ತಿದೆ ಎಂದು ಹೇಳಿದ್ದಾರೆ. ಭಾರತ ಕ್ರಯೊಜೆನಿಕ್ ತಂತ್ರಜ್ಞಾನದಲ್ಲಿ ಸ್ವಾವಲಂಬನೆ ಸಾಧಿಸಬಾರದು ಎಂಬ ಕಾರಣಕ್ಕಾಗಿ ಸಿಐಎ ರೀತಿ ಮಾಡಿತೇ ಎಂಬುವುದು ಅರ್ಥವಾಗುತ್ತಿಲ್ಲ.

-ಸುಜಯ

Tags

Related Articles

Close